
ಶನಿವಾರದ ರಾಶಿಫಲ, ಇಲ್ಲಿವೆ ನಿಮ್ಮ ಗ್ರಹ ಬಲ
Team Udayavani, Jan 1, 2022, 7:42 AM IST

ಮೇಷ:
ಆರೋಗ್ಯ ಗಮನಿಸಿ. ಮಾಡುವಂತಹ ವ್ಯವಹಾರದಲ್ಲಿ ಪಾರದರ್ಶಕತೆಗೆ ಹೆಚ್ಚಿನ ಆದ್ಯತೆ ನೀಡುವುದರಿಂದ ನಿರೀಕ್ಷಿತ ಸಫಲತೆ. ಧನಾರ್ಜನೆ ಉತ್ತಮವಾಗಿದ್ದರೂ ಒಂದು ವಿಧದ ಅತೃಪ್ತಿ ತೋರೀತು. ದಾಂಪತ್ಯದಲ್ಲಿ ಅನುರಾಗ ವೃದ್ಧಿ.
ವೃಷಭ:
ಪಾಲುದಾರಿಕಾ ವ್ಯವಹಾರಗಳಲ್ಲಿ ಅನಿರೀಕ್ಷಿತ ಅಭಿವೃದ್ಧಿ. ಮಾಡುವಂತಹ ಉದ್ಯೋಗದಲ್ಲಿ ಗೌರವ ಮನ್ನಣೆ ಪ್ರಾಪ್ತಿ. ಅವಿವಾಹಿತರಿಗೆ ಉತ್ತಮ ಸಂಬಂಧ ಒದಗಿ ಬರುವ ಸಮಯ. ಆರೋಗ್ಯದಲ್ಲಿ ಅಭಿವೃದ್ಧಿ.
ಮಿಥುನ:
ನಿರೀಕ್ಷಿತ ಸ್ಥಾನ ಸುಖಕ್ಕಾಗಿ ಹೆಚ್ಚಿದ ಶ್ರಮ. ಉದ್ಯೋಗ ವ್ಯವಹಾರಗಳಲ್ಲಿ ಅಧಿಕ ಜವಾಬ್ದಾರಿ. ಸಹೋದ್ಯೋಗಿಗಳಿಂದ ಸಹಕಾರ. ವಿದ್ಯಾರ್ಥಿ ಗಳಿಗೆ ಅಧ್ಯಯನಶೀಲರಿಗೆ ಗೌರವ ಪುರಸ್ಕಾರದ ಅವಕಾಶ. ಹಿರಿಯರ ಆರೋಗ್ಯ ಸುದೃಢ.
ಕಟಕ:
ಆರೋಗ್ಯದಲ್ಲಿ ಸುಧಾರಣೆ. ಸಣ್ಣ ಪ್ರಯಾಣ ಸಂಭವ. ಉದ್ಯೋಗ ವ್ಯವಹಾರ ಗಳಲ್ಲಿ ಹೊಂದಾಣಿಕೆ ಅಗತ್ಯ. ಭೂಮಿ ಆಸ್ತಿ ಇತ್ಯಾದಿ ವಿಚಾರಗಳಲ್ಲಿ ತಾಳ್ಮೆಯ ನಿರ್ಣಯ ಫಲಿಸೀತು. ಗೊಂದಲಕ್ಕೆ ಅವಕಾಶ ನೀಡದಿರಿ.
ಸಿಂಹ:
ಆರೋಗ್ಯ ವಿಚಾರದಲ್ಲಿ ಉದಾಸೀನತೆ ತೋರದಿರಿ. ಸಾಂಸಾರಿಕ ಜವಾಬ್ದಾರಿ ಹೆಚ್ಚಾ ದೀತು. ದೀರ್ಘ ಸಂಚಾರಗಳಲ್ಲಿ ವಿಳಂಬ
ಎದುರಾ ದೀತು. ದೇವತಾ ಪ್ರಾರ್ಥನೆಯಿಂದ ವಿಘ್ನ ಪರಿಹಾರ. ಧನಾರ್ಜನೆಗೆ ಸರಿಸಮವಾದ ಖರ್ಚು.
ಕನ್ಯಾ:
ಅಧಿಕ ದೈಹಿಕ ಶ್ರಮದಿಂದ ನಿರೀಕ್ಷಿತ ಸ್ಥಾನ ಪ್ರಾಪ್ತಿ. ಉತ್ತಮ ಗೌರವದ ಧನ ಸಂಪಾದನೆ. ಪರರ ಸಹಾಯ ನಿರೀಕ್ಷೆ ಮಾಡದೆ ಸ್ವಂತ ನಿರ್ಣಯ ತೆಗೆದುಕೊಳ್ಳಿ. ಭೂಮಿ ವಾಹನ ಆಸ್ತಿ ಇತ್ಯಾದಿ ವಿಚಾರಗಳಲ್ಲಿ ಮುನ್ನಡೆ. ದಾಂಪತ್ಯ ಸುಖ ತೃಪ್ತಿ ದಾಯಕ.
ತುಲಾ:
ನಾನಾ ರೀತಿಯ ಚಟುವಟಿಕೆಗಳಿಂದ ಕೂಡಿದ ದಿನ. ಉದ್ಯೋಗ ವ್ಯವಹಾರಗಳಲ್ಲಿ ಗೌರವಾದಿ ಪ್ರಾಪ್ತಿ. ನೂತನ ಮಿತ್ರರ ಸಮಾಗಮ. ದಾಂಪತ್ಯದಲ್ಲಿ ಸಣ್ಣ ವಿಷಯಗಳ ಚರ್ಚೆ. ಗುರುಹಿರಿಯರ ಆರೋಗ್ಯದ ಬಗ್ಗೆ ನಿಗಾ ವಹಿಸಿ.
ವೃಶ್ಚಿಕ:
ಆರೋಗ್ಯದ ಬಗ್ಗೆ ಉದಾಸೀನ ಸಲ್ಲದು. ದೈಹಿಕ ಶ್ರಮ ಅಧಿಕವಾದ್ದರಿಂದ ದೇಹಾಯಾಸ ತೋರೀತು. ದೀರ್ಘ ಪ್ರಯಾಣ ಸಂಭವ. ಮನೆಯಲ್ಲಿ ಸಂತಸದ ವಾತಾವರಣ. ವಿದ್ಯಾರ್ಥಿಗಳಿಗೆ ಅಧಿಕ ಶ್ರಮದಿಂದ ನಿರೀಕ್ಷಿತ ಸ್ಥಾನ ಪ್ರಾಪ್ತಿ.
ಧನು:
ನಿರೀಕ್ಷೆಗೂ ಮೀರಿದ ಧನಾರ್ಜನೆ. ಉತ್ತಮ ವಾಕ್‌ಚತುರತೆಯಿಂದ ಕಾರ್ಯ ಸಾಧನೆ. ಗುರುಹಿರಿಯರ ಆರೋಗ್ಯ ವೃದ್ಧಿ. ಹೆಚ್ಚಿನ ಬದಲಾವಣೆಗೆ ಅವಕಾಶ. ಉದ್ಯೋಗ ವ್ಯವಹಾರಗಳಲ್ಲಿ ಸಹೋದ್ಯೋಗಿಗಳ ಸಹಕಾರದಿಂದ ಪ್ರಗತಿ.
ಮಕರ:
ದೇಶ ವಿದೇಶದ ವ್ಯವಹಾರಗಳಲ್ಲಿ ಪ್ರಗತಿ. ದೀರ್ಘ ಸಂಚಾರ ಸಂಭವ. ಗೌರವಾದಿ ಪ್ರಾಪ್ತಿ. ಕೌಟುಂಬಿಕ ಸುಖ ವೃದ್ಧಿ. ಗೃಹೋಪಕರಣ ವಸ್ತು ಗಳಿಗೆ ಖರ್ಚು. ಆರೋಗ್ಯ ಪ್ರಗತಿ. ಗೃಹದಲ್ಲಿ ಸಂತಸದ ವಾತಾವರಣ.
ಕುಂಭ:
ಉತ್ತಮ ದೈಹಿಕ ಆರೋಗ್ಯ. ಧನಾರ್ಜನೆಗೆ ಸರಿಸಮವಾದ ಖರ್ಚು. ಆಸ್ತಿ ವಿಚಾರಗಳಲ್ಲಿ ಮುನ್ನಡೆ. ವಿದ್ಯಾರ್ಥಿಗಳಿಗೆ ಹೆಚ್ಚಿದ ಜವಾಬ್ದಾರಿ. ಗುರುಹಿರಿಯರ ಉತ್ತಮ ಪ್ರೋತ್ಸಾಹ ಸಹಕಾರದ ಲಾಭ. ದೂರದ ಉದ್ಯೋಗದಲ್ಲಿ ಮುನ್ನಡೆ.
ಮೀನ:
ಮನೆಯಲ್ಲಿ ಸಂತಸದ ವಾತಾವರಣ. ದೇವತಾ ಕಾರ್ಯಗಳಲ್ಲಿ ಆಸಕ್ತಿ. ದೂರದ ಮಿತ್ರರ ಭೇಟಿ. ಬಹಳ ಸಮಯದಿಂದ ವಿಳಂಬಿತ ಕಾರ್ಯಗಳಲ್ಲಿ ಪ್ರಗತಿ. ದಾಂಪತ್ಯ ಸುಖ ವೃದ್ಧಿ. ಪರರಿಗೆ ಸಹಾಯ ಹಸ್ತ ಚಾಚುವಾಗ ಪೂರ್ವಾಪರ ವಿಚಾರ ಮಾಡಿ ನಿರ್ಣಯಿಸಿ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Daily Horoscope: ಅನಿವಾರ್ಯವಾದ ಅನಿರೀಕ್ಷಿತ ವೆಚ್ಚಗಳು, ರಾಜಕಾರಣಿಗಳಿಗೆ ನೆಮ್ಮದಿ ಭಂಗ

Daily Horoscope: ಹಿತಶತ್ರುಗಳಿಂದ ವಂಚನೆ ಸಂಭವ, ಹಲವು ರಂಗಗಳಿಂದ ಕೆಲಸದ ಒತ್ತಡ

Daily Horoscope: ಪತ್ರಕರ್ತರಿಗೆ ರಾಜಕಾರಣಿಗಳ ಒತ್ತಡ, ಮಂಗಲ ಕಾರ್ಯದ ಸಿದ್ಧತೆ

Daily Horoscope: ಸ್ವಂತ ಉದ್ಯಮಿಗಳಿಗೆ ತಾತ್ಕಾಲಿಕ ಹಿನ್ನಡೆ, ಸಾಹಿತ್ಯ ಸಾಧಕರಿಗೆ ಗೌರವ

Daily Horoscope: ಉದ್ಯೋಗಸ್ಥರಿಗೆ ಪದೋನ್ನತಿ ಅಥವಾ ವೇತನ ಏರಿಕೆ ಸಂಭವ
MUST WATCH
ಹೊಸ ಸೇರ್ಪಡೆ

Sagara ಒಂದು ಹೆಬ್ಬಾವಿನ ಕಥೆ; ಬಾಯಿಗೆ ಸಿಕ್ಕಿದ್ದು ಹೊಟ್ಟೆಗಿಲ್ಲ!

Panaji ಮತ್ತೆ ಗೋವಾದಲ್ಲಿ ಮಳೆಯ ಆರ್ಭಟ; ಹಲವೆಡೆ ರಸ್ತೆಗಳು ಜಲಾವೃತ

Asian Games: ಸ್ಟೀಪಲ್ ಚೇಸ್ ನಲ್ಲಿ ದಾಖಲೆಯೊಂದಿಗೆ ಬಂಗಾರ ಗೆದ್ದ ಅವಿನಾಶ್ ಸಬ್ಲೆ

Burhanpur; ನೇಣಿಗೆ ಶರಣಾದ ಬಿಜೆಪಿ ಬೆಂಬಲಿತ ಪಂಚಾಯತ್ ಅಧ್ಯಕ್ಷೆ

CWC2023 ಟೀಂ ಇಂಡಿಯಾದ ಮಧ್ಯಮ ಕ್ರಮಾಂಕ ಹೆಸರಿಸಿದ ಸೆಹವಾಗ್; ಸ್ಟಾರ್ ಬ್ಯಾಟರ್ ಗಿಲ್ಲ ಚಾನ್ಸ್