
Daily Horoscope; ಹಣಕಾಸಿನ ವಿಚಾರದಲ್ಲಿ ಒತ್ತಡ ಎದುರಾದೀತು. ಸಾಲ ಮಾಡುವಾಗ ಎಚ್ಚರ ವಹಿಸಿ
Team Udayavani, Jun 2, 2023, 6:55 AM IST

ಮೇಷ: ಭೂಮ್ಯಾದಿ ವ್ಯವಹಾರಗಳಲ್ಲಿ ಪ್ರಗತಿ. ಮಾತೃಸಮಾನರಿಂದ ಪ್ರೋತ್ಸಾಹ. ಜವಾಬ್ದಾರಿಯುತ ಕಾರ್ಯಪ್ರವೃತ್ತಿಯಿಂದ ಕುಟುಂಬದಲ್ಲಿ ಮನ್ನಣೆ. ನಿರೀಕ್ಷಿಸಿದಷ್ಟು ಧನ ಸಂಪತ್ತು ಲಭಿಸದಿದ್ದರೂ ಮನಃತೃಪ್ತಿಗೆ ಕೊರತೆಯಾಗದು.
ವೃಷಭ: ಉದ್ಯೋಗ ವ್ಯವಹಾರಗಳಲ್ಲಿ ನಿಷ್ಠೆ, ಪ್ರಾಮಾಣಿಕತೆಯಿಂದ ಕೀರ್ತಿ ಸಂಪಾದನೆ. ಉತ್ತಮ ವಾಕ್ ಚತುರತೆಯಿಂದ ಕೂಡಿದ ಕಾರ್ಯವೈಖರಿ. ಅಧಿಕ ಧನ ಸಂಚಯನ. ಬಂಧುಗಳಿಂದ, ಕುಟುಂಬ ವರ್ಗ ದಿಂದ ಪ್ರೋತ್ಸಾಹ. ಮಕ್ಕಳಿಂದ ಸಂತೋಷ ವೃದ್ಧಿ.
ಮಿಥುನ: ಚುರುಕುತನ, ಪಟುತ್ವ , ವಿದ್ಯೆ ವಿನಯ ಸಂಪನ್ನತೆಯಿಂದ ದಿನಚರಿ ಆರಂಭ. ಸಮಾಜದಲ್ಲಿ ಸ್ಥಾನಮಾನ, ಗೌರವಾದಿ ವೃದ್ಧಿ. ಕೀರ್ತಿ ಪ್ರಾಪ್ತಿ. ಸ್ಥಿರ ಧನಸಂಪತ್ತು ವೃದ್ಧಿ. ಸಾಂಸಾರಿಕ ಸುಖ ತೃಪ್ತಿದಾಯಕ.
ಕರ್ಕ: ಮಾತಿನಲ್ಲಿ ತಾಳ್ಮೆ ಇರಲಿ. ಅನಗತ್ಯ ಚರ್ಚೆಗೆ ಅವಕಾಶ ನೀಡದಿರಿ. ಮಿತ್ರರಿಂದ ನಿರೀಕ್ಷಿತ ಸಹಾಯ ಲಭ್ಯ. ಗುರುಹಿರಿಯರಲ್ಲಿ ಸಮಾಧಾನದಿಂದ ವರ್ತಿಸಿ ಅವರ ಮಾರ್ಗದರ್ಶನ ಸದುಪಯೋಗಿಸಿಕೊಳ್ಳುವುದರಿಂದ ಶ್ರೇಯಸ್ಸು ಲಭ್ಯ.
ಸಿಂಹ: ಆರೋಗ್ಯ ಗಮನಿಸಿ. ಸ್ಥಿರ ಬುದ್ಧಿಯಿಂದ ಕಾರ್ಯಪ್ರವೃತ್ತಿ. ಹಣಕಾಸಿನ ವಿಚಾರದಲ್ಲಿ ಒತ್ತಡ ಎದುರಾದೀತು. ಸಾಲ ಮಾಡುವಾಗ ಎಚ್ಚರ ವಹಿಸಿ. ಅಧಿಕ ಪರಿಶ್ರಮದಿಂದ ಕೆಲಸ ಕಾರ್ಯಗಳಲ್ಲಿ ಸಫಲತೆ ಕಂಡೀತು.
ಕನ್ಯಾ: ದೂರ ಪ್ರಯಾಣ, ಬಂಧುಮಿತ್ರರ ಮಿಲನ, ಸಂತೋಷ ವೃದ್ಧಿ. ಸಾಂಸಾರಿಕ ಸುಖ ವೃದ್ಧಿ. ಗೃಹದಲ್ಲಿ ಮನೋರಂಜನೆಯ ವಾತಾವರಣ. ಮಕ್ಕಳಿಂದ ಸುಖ ಸಂತೋಷ ವಾರ್ತೆ. ಆರ್ಥಿಕ ಸುದೃಢತೆ ಇತ್ಯಾದಿ ಶುಭ ಫಲ.
ತುಲಾ: ವಿವಾಹ ವಿಚಾರಗಳಲ್ಲಿ ಪ್ರಗತಿ. ದಂಪತಿಗಳಲ್ಲಿ ಅನುರಾಗ ವೃದ್ಧಿ. ಗುರುಹಿರಿಯರ ಉತ್ತಮ ಪ್ರೀತಿ, ಬಾಂಧವ್ಯ, ಸಹಕಾರ ಲಭ್ಯ. ನಿರಾಯಾಸ ಧನಾರ್ಜನೆ. ಉತ್ತಮ ವಾಕ್ ಚತುರತೆಯಿಂದ ಕೂಡಿದ ಕಾರ್ಯವೈಖರಿ.
ವೃಶ್ಚಿಕ: ರಾಜಕೀಯ ಚಟುವಟಿಕೆಗಳಲ್ಲಿ ಯಶಸ್ಸು. ಸರಕಾರಿ ಉದ್ಯೋಗದಲ್ಲಿ ಪ್ರಗತಿ. ಉತ್ತಮ ಧನ ಸಂಪಾದನೆ. ಆಸ್ತಿ ಸಂಚಯನದಲ್ಲಿ ಯಶಸ್ಸು. ಗೃಹ ಉಪಯೋಗಿ ವಸ್ತುಗಳಿಗಾಗಿ ಧನವ್ಯಯ. ಮನೆಯಲ್ಲಿ ಸಂತಸದ ವಾತಾವರಣ.
ಧನು: ಸಹೋದರ ಸಮಾನರಿಂದಲೂ ಸಹೋದ್ಯೋಗಿಗಳಿಂದಲೂ ಉತ್ತಮ ಸುವಾರ್ತೆ, ಸಹಕಾರದ ಲಾಭ. ಹಣಕಾಸಿನ ವಿಚಾರದಲ್ಲಿ ಜಾಗ್ರತೆಯ ನಡೆಯಿಂದ ಬಹು ಲಾಭ. ಅಧ್ಯಯನಶೀಲರಿಗೆ ಉತ್ತಮ ವಾತಾವರಣ ಲಭ್ಯ.
ಮಕರ: ಹೆಚ್ಚಿದ ಪರಿಶ್ರಮ ಜವಾಬ್ದಾರಿ. ಸ್ಥಾನ ಗೌರವಕ್ಕಾಗಿ ದೇಹಾಯಾಸ ಮನಃಕ್ಲೇಶ ಸಂಭವ. ಅನಗತ್ಯ ವಿಚಾರಗಳಿಗೆ ಆದ್ಯತೆ ನೀಡದಿರಿ. ಪತಿ-ಪತ್ನಿಯರಿಂದ ಪರಸ್ಪರ ಸಹಾಯ ಸಹಕಾರ ಲಭ್ಯ. ದೇವತಾ
ಪ್ರಾರ್ಥನೆಯಿಂದ ಅನುಕೂಲ ಪರಿಸ್ಥಿತಿ.
ಕುಂಭ: ಉತ್ತಮ ವಾಕ್ ಚತುರತೆಯಿಂದ ಕೂಡಿದ ಕಾರ್ಯವೈಖರಿ. ನಿರಂತರ ಧನಾರ್ಜನೆ. ಬಂಧುಮಿತ್ರರ ಸಹಕಾರ. ಉದ್ಯೋಗ ವ್ಯವಹಾರಗಳಲ್ಲಿ ಪ್ರಗತಿದಾಯಕ ಬದಲಾವಣೆ. ಪಾಲುದಾರಿಕಾ ವ್ಯವಹಾರಗಳಲ್ಲಿ ಅಭಿವೃದ್ಧಿ.
ಮೀನ: ಆರೋಗ್ಯ ಸುದೃಢ. ಅನೇಕ ಹೂಡಿಕೆಗಳಲ್ಲಿ ಧನ ವಿನಿಯೋಗ. ದೂರದ ವ್ಯವಹಾರಗಳಲ್ಲಿ ಅಭಿವೃದ್ಧಿ. ದಾಂಪತ್ಯ ತೃಪ್ತಿಕರ.ಉದ್ಯೋಗ ವ್ಯವಹಾರಗಳಲ್ಲಿ ಚುರುಕುತನದ ನಡೆಯಿಂದ ಶೀಘ್ರ ಅಭಿವೃದ್ಧಿ. ಮನೆಯಲ್ಲಿ ಸಂಭ್ರಮದ ವಾತಾವರಣ.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Daily Horoscope: ಸಜ್ಜನರ ಸೋಗುಹಾಕಿದ ವಂಚಕರ ಬಗ್ಗೆ ಎಚ್ಚರ, ಉದ್ಯೋಗಸ್ಥರಿಗೆ ಕೈತುಂಬಾ ಕೆಲಸ

Daily Horoscope: ಉದ್ಯೋಗ ಕ್ಷೇತ್ರದಲ್ಲಿ ಮೇಲಧಿಕಾರಿಗಳ ಮೆಚ್ಚುಗೆ

Daily Horoscope: ಉದ್ಯೋಗಸ್ಥರಿಗೆ ನಾಳೆಯ ಪರಿಸ್ಥಿತಿಯ ಕುರಿತು ಅನವಶ್ಯ ಚಿಂತೆ

Daily Horoscope: ಸರಕಾರಿ ಅಧಿಕಾರಿಗಳಿಗೆ ಪದೋನ್ನತಿ ಹಾಗೂ ವರ್ಗಾವಣೆ ಸಂಭವ

Daily Horoscope: ನಿಶ್ಚಿಂತೆಯ ದಿನ, ಬಯಸಿದ್ದೆಲ್ಲವೂ ತಾನಾಗಿ ಕೈಗೆ ಬರುತ್ತದೆ
MUST WATCH
ಹೊಸ ಸೇರ್ಪಡೆ

Protest: ಕಾವೇರಿ ಕಿಚ್ಚು… ರಾಮನಗರದಲ್ಲಿ ತಮಿಳುನಾಡು ಸರ್ಕಾರದ ವಿರುದ್ಧ ಆಕ್ರೋಶ

MP Election: ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ… ಮೂವರು ಕೆಂದ್ರ ಸಚಿವರು ಕಣಕ್ಕೆ

Hosapete: ಬಸ್ ಪಲ್ಟಿ; 10ಕ್ಕೂ ಹೆಚ್ಚು ಜನರಿಗೆ ಗಾಯ, ಚಾಲಕನ ಸ್ಥಿತಿ ಗಂಭೀರ

UV Fusion: ನಂಬಿಕೆಗಿಂತ ದೊಡ್ಡದು ಬೇರೇನಿಲ್ಲ

Daily Horoscope: ಸಜ್ಜನರ ಸೋಗುಹಾಕಿದ ವಂಚಕರ ಬಗ್ಗೆ ಎಚ್ಚರ, ಉದ್ಯೋಗಸ್ಥರಿಗೆ ಕೈತುಂಬಾ ಕೆಲಸ