

Team Udayavani, Aug 3, 2024, 7:31 AM IST
ಮೇಷ: ಸಪ್ತಾಹದ ಅಂತಿಮ ದಿನವೂ ಕೂಡ ಕುಗ್ಗದ ಉತ್ಸಾಹ. ಉದ್ಯೋಗ ಸ್ಥಾನದಲ್ಲಿ ಸಮಾಧಾನ. ಉದ್ಯಮಗಳ ನಡುವೆ ಉತ್ಪನ್ನಗಳ ಪ್ರಚಾರದಲ್ಲಿ ಮೇಲಾಟ. ಹಿರಿಯರ ಆರೋಗ್ಯದ ಕಡೆಗೆ ಗಮನ ಇರಲಿ.
ವೃಷಭ: ಸರಕಾರಿ ರಂಗದಲ್ಲಿ ಒಂದು ಬಗೆಯ ನಿರುತ್ಸಾಹ. ಖಾಸಗಿ ರಂಗದ ಉತ್ಪಾದನೆ ಹೆಚ್ಚಳ. ದೇವತಾ ಸಾನ್ನಿಧ್ಯಕ್ಕೆ ಭೇಟಿ. ಹಿರಿಯರು, ಗೃಹಿಣಿಯರು ಮತ್ತು ಮಕ್ಕಳಿಗೆ ಉಲ್ಲಾಸದ ವಾತಾವರಣ. ಲೇವಾದೇವಿ ವ್ಯವಹಾರಕ್ಕೆ ವಿರಾಮ.
ಮಿಥುನ: ಎಚ್ಚರದ ನಡೆಯಿಂದ ಕಡಿಮೆ ನಷ್ಟ. ಉದ್ಯೋಗ ಸ್ಥಾನದಲ್ಲಿ ಹೊಸ ಸವಾಲುಗಳು. ಸ್ವಂತ ಉದ್ಯಮದ ಪ್ರಗತಿ ತೃಪ್ತಿಕರ. ಕೃಷ್ಯುತ್ಪನ್ನಗಳ ಮಾರಾಟದಿಂದ ಲಾಭ. ಶಿಕ್ಷಣದಲ್ಲಿ ಮಕ್ಕಳ ಆಸಕ್ತಿ ವೃದ್ಧಿಗೆ ನಿಲ್ಲದ ಪ್ರಯತ್ನ.
ಕರ್ಕಾಟಕ: ಉದ್ಯೋಗ ಸ್ಥಾನದಲ್ಲಿ ಪ್ರತಿಭೆ, ಹಿರಿತನಕ್ಕೆ ಪ್ರಾಶಸ್ತ್ಯ. ಉದ್ಯಮದ ಉತ್ಪಾದನೆಗಳಿಗೆ ಅಧಿಕ ಬೇಡಿಕೆ. ವಸ್ತ್ರ, ಸಿದ್ಧ ಉಡುಪು, ಆಭರಣ, ಶೋಕಿ ವಸ್ತುಗಳ ವ್ಯಾಪಾರ ಹೆಚ್ಚಳ. ಹಳೆಯ ಸಾಲ ವಸೂಲಿಯಾಗಿ ನೆಮ್ಮದಿ.
ಸಿಂಹ: ವ್ಯವಹಾರಸ್ಥರಿಗೆ ಮತ್ತು ಉದ್ಯೋಗಸ್ಥ ರಿಗೆ ಸಂತೃಪ್ತಿಯ ಭಾವನೆ. ಗ್ರಾಹಕರ ಪ್ರಚಾರ ದಿಂದ ವ್ಯಾಪಾರಕ್ಕೆ ಪೋಷಣೆ. ಕಟ್ಟಡ ನಿರ್ಮಾಣ ಕಂಟ್ರಾಕ್ಟರರಿಗೆ ಕಾರ್ಮಿಕರ ಸಮಸ್ಯೆ. ಲೇವಾದೇವಿ ವ್ಯವಹಾರದಲ್ಲಿ ನಷ್ಟ.
ಕನ್ಯಾ: ಉದ್ಯೋಗ ಸ್ಥಾನದಲ್ಲಿ ಹಿತಕರ ವಾತಾವರಣ. ಸ್ವಂತ ಉದ್ಯಮದಲ್ಲಿ ಗಮ ನಾರ್ಹ ಪ್ರಗತಿ, ಹೊಸ ನೌಕರರ ಸೇರ್ಪಡೆ. ಉದ್ಯೋ ಗಾಸಕ್ತ ರಿಗೆ ಅಯಾಚಿತ ಅವಕಾಶಗಳು ಲಭ್ಯ. ಕೃಷಿ ಭೂಮಿ ಯಲ್ಲಿ ಉತ್ತಮ ಬೆಳೆ. ಬಂಧುಗಳ ಆಗಮನ.
ತುಲಾ: ಸಮಸ್ಯೆಗಳಿಗೆ ಸಕಾಲದಲ್ಲಿ ಪರಿಹಾರ. ಅನಿರೀಕ್ಷಿತ ಮೂಲದಿಂದ ಧನಪ್ರಾಪ್ತಿ. ಗೃಹೋಪ ಯೋಗಿ ಸಾಮಗ್ರಿಗಳ ವ್ಯಾಪಾರಿಗಳಿಗೆ ಲಾಭ. ಕುಶಲಕರ್ಮಿಗಳಿಗೆ ಉದ್ಯೋಗಾವಕಾಶ. ಕೀರ್ತನೆ, ಸತ್ಸಂಗಗಳಲ್ಲಿ ಆಸಕ್ತಿ. ಆರೋಗ್ಯ ಉತ್ತಮ.
ವೃಶ್ಚಿಕ: ಎಲ್ಲ ವಿಧದ ಬಾಧೆಗಳಿಂದ ಬಿಡುಗಡೆ. ಉದ್ಯೋಗ ಸ್ಥಾನದಲ್ಲಿ ವರಿಷ್ಠರಿಗೆ ಹರ್ಷ. ಉದ್ಯಮ ಭರದಲ್ಲಿ ಮುನ್ನಡೆ. ಉತ್ಪನ್ನಗಳ ಗುಣಮಟ್ಟಕ್ಕೆ ಸಾಮಾಜಿಕರ ಶ್ಲಾಘನೆ. ಗೃಹೋದ್ಯಮ ಉತ್ಪನ್ನಗಳ ಜನಪ್ರಿಯತೆ ವೃದ್ಧಿ.
ಧನು: ದಾಯಾದಿ ಕಲಹ ನಿವಾರಣೆ. ಉದ್ಯೋಗ ಸ್ಥಾನದಲ್ಲಿ ಸಜ್ಜನರ ಸದ್ಭಾವನೆಗೆ ಪಾತ್ರರಾಗುವಿರಿ. ಸಣ್ಣ ಪ್ರಮಾಣದ ಉದ್ಯಮಗಳ ಅಭಿವೃದ್ಧಿ. ಕೃಷಿ ಭೂಮಿ ಅಭಿವೃದ್ಧಿಗೆ ಪ್ರಯತ್ನ. ಹೈನುಗಾರಿಕೆ, ಜೇನು ವ್ಯವಸಾಯದಲ್ಲಿ ಪ್ರಗತಿ.
ಮಕರ: ಉದ್ಯೋಗ ಸ್ಥಾನಕ್ಕೆ ಹೊಸರೂಪ. ವಸ್ತ್ರ, ಆಭರಣ ವ್ಯಾಪಾರಿಗಳಿಗೆ ನಿರೀಕ್ಷೆ ಮೀರಿ ಲಾಭ. ಕೃಷ್ಯುತ್ಪನ್ನಗಳ ಮಾರಾಟದಿಂದ ಸಾಮಾನ್ಯ ಲಾಭ. ಹಣ್ಣು, ತರಕಾರಿ ಬೆಳೆಗಾರರಿಗೆ ಆದಾಯ ವೃದ್ಧಿ. ಸಂಸಾರದಲ್ಲಿ ಸಾಮರಸ್ಯ ವರ್ಧನೆ.
ಕುಂಭ: ಹೊಸ ಆದಾಯ ಮೂಲಗಳ ಅನ್ವೇಷಣೆ. ಸರಕಾರಿ ನೌಕರರಿಗೆ ಅನುಕೂಲ. ಕೆಲವು ಉದ್ಯಮಗಳಲ್ಲಿ ನಿರೀಕ್ಷೆ ಮೀರಿದ ಪ್ರಗತಿ. ಸೇವಾಕಾರ್ಯಗಳಲ್ಲಿ ಕೈಜೋಡಿಸಲು ಮನೆಮಂದಿಯ ಸಹಕಾರ. ಮುದ್ರಣ ಸಾಮಗ್ರಿ ವಿತರಕರ ವ್ಯಾಪಾರ ವೃದ್ಧಿ.
ಮೀನ: ಧರ್ಮ ಮಾರ್ಗದಲ್ಲಿ ನಡೆಯಲು ಸ್ಥಿರಬುದ್ಧಿ. ಉದ್ಯೋಗ ಸ್ಥಾನದಲ್ಲಿ ಅಜಾತಶತ್ರುತ್ವ. ಸರಕಾರಿ ಇಲಾಖೆ ನೌಕರರಿಂದ ಸಹಕಾರ. ಪಾಲುದಾರಿಕೆಯಲ್ಲಿ ಹೊಸ ವ್ಯವಹಾರ ಆರಂಭ. ಹಿರಿಯ ಬಂಧುವಿಗೆ ಆಪತ್ಕಾಲದಲ್ಲಿ ಸಹಾಯ.
Ad
America: ಕಾರು-ಮಿನಿ ಟ್ರಕ್ ಡಿಕ್ಕಿ; ಭಾರತೀಯ ಮೂಲದ ದಂಪತಿ ಸೇರಿ ನಾಲ್ವರು ಸಜೀವ ದಹನ
Arrested: ಕರೆ ಮಾಡಲು ಕೊಟ್ಟ ಮೊಬೈಲ್ ವಾಪಸ್ ಕೇಳಿದ್ದಕ್ಕೆ ಹಲ್ಲೆ: ಬಂಧನ
ರಸ್ತೆಯಲ್ಲಿ ಕಾರು ತಗುಲಿದ್ದನ್ನು ಪ್ರಶ್ನಿಸಿದ್ದಕ್ಕೆ ಮಾರಕಾಸ್ತ್ರ ತೋರಿಸಿ ಪ್ರಾಣ ಬೆದರಿಕೆ
Bengaluru: ವರದಕ್ಷಿಣೆ: ಡಿವೈಎಸ್ಪಿ ವಿರುದ್ಧ ಕೇಸ್
High Court: ಗಾರ್ಡನ್ ಅಲ್ಲ, ಫ್ಲೆಕ್ಸ್ ಸಿಟಿ: ಹೈಕೋರ್ಟ್ ಚಾಟಿ
You seem to have an Ad Blocker on.
To continue reading, please turn it off or whitelist Udayavani.