ವರ್ಷದ ರಾಶಿಫಲ: ಈ ವರ್ಷ ದ್ವಾದಶ ರಾಶಿಗಳ ಫ‌ಲಾಫ‌ಲ ಹೇಗಿದೆ ನೋಡಿ


Team Udayavani, Jan 1, 2022, 9:09 AM IST

year horoscope of 2022

ಮೇಷ: ವ್ಯಯದ ಗುರು ಧನಹಾನಿ. ಶುಭ ಕಾರ್ಯಗಳಿಗೆ ವೆಚ್ಚ. ಬಂಧುಗಳಿಂದ ತೊಂದರೆ. ಕಲಹ ಕೊಟ್ಟರೂ ದಶಮದ ಶನಿ ಉದ್ಯೋಗದಲ್ಲಿ ಲಾಭ ಕೊಡುತ್ತಾನೆ. ಜ್ವರ, ಶಸ್ತ್ರ ಚಿಕಿತ್ಸೆಯ ಭೀತಿ ಇರುತ್ತದೆ. ಎಪ್ರಿಲ್‌ ಅನಂತರ ಜಾಗ್ರತೆ ಅಗತ್ಯ. ಜುಲೈ, ಆಗಸ್ಟ್‌ನಲ್ಲಿ ಮಧ್ಯಮ ಫಲವಿದೆ. ವರ್ಷದ ಕೊನೆಯಲ್ಲಿ ಖಂಡಿತ ಉತ್ತಮ ಫಲ ನಿರೀಕ್ಷಿಸ ಬ ಹುದು. ಕಲ್ಲು, ಕಬ್ಬಿಣದ ವ್ಯಾಪಾರಿಗಳಿಗೆ ಉತ್ತಮ ಲಾಭವಿದೆ. ತಂದೆ ಅಥವಾ ಹಿರಿಯರೊಂದಿಗೆ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ತೃಪ್ತಿಯು ಈ ವರ್ಷ ಖಂಡಿತ ಕಾಣಿಸುವುದಿಲ್ಲ. ಶತ್ರುಗಳು ಜಾಸ್ತಿಯಾಗುತ್ತಾರೆ. ಜನ್ಮದ ರಾಹು ಮಾನಸಿಕ ಅಶಾಂತಿ ಕೊಡುತ್ತಾನೆ. ಅಲ್ಲದೇ ಚರ್ಮಕ್ಕೆ ಸಂಬಂಧಿಸಿದ ತೊಂದರೆ ಬರಬಹುದು. ಸಪ್ತಮದ ಕೇತು ಪತಿ ಅಥವಾ ಪತ್ನಿಗೆ ಅನಾರೋಗ್ಯ ಕೊಡಬಹುದು. ದಾಂಪತ್ಯದಲ್ಲಿ ಹಾನಿ ಸಂಭವಿಸದ ಹಾಗೆ ಜಾಗ್ರತೆ ಅವಶ್ಯ. ನೆರೆಹೊರೆಯವರಿಂದ ಕಿರುಕುಳ ಒದಗಿ ಬರಲಿದೆ. ಜನವರಿ ತಿಂಗಳು ಉತ್ತಮ. ಫೆಬ್ರವರಿ ಸಾಮಾನ್ಯ. ಮಾರ್ಚ್‌ ಉತ್ತಮ. ಎಪ್ರಿಲ್‌ ಕನಿಷ್ಠ. ಮೇ ಉತ್ತಮ. ಜೂನ್‌ ಸಾಧಾರಣ. ಜುಲೈ ಕನಿಷ್ಠ. ಆಗಸ್ಟ್‌ ಸಾಧಾರಣ. ಸೆಪ್ಟಂಬರ್‌ ಉತ್ತಮ. ಅಕ್ಟೋಬರ್‌, ನವೆಂಬರ್‌ ಕನಿಷ್ಠ. ಡಿಸೆಂಬರ್‌ ಉತ್ತಮ. ಈ ರೀತಿಯ ಫಲ ಈ ವರ್ಷ ಇರುತ್ತದೆ. ಸುಬ್ರಹ್ಮಣ್ಯ ಮತ್ತು ಶಿವಾರಾಧನೆ ಮಾತ್ರ ಉತ್ತಮ ಫಲ ತಂದು ಕೊಡಬ ಲ್ಲದು. ಒಟ್ಟಿನಲ್ಲಿ ಮಿಶ್ರ ಫಲವಿದೆ.

ಶುಭ ರತ್ನ: ಹವಳ. ಅದೃಷ್ಟ ಬಣ್ಣ: ಕೆಂಪು.

ಅದೃಷ್ಟ ಸಂಖ್ಯೆಗಳು: 1,2,10 ಈ ವರ್ಷ ಉತ್ತಮ ಫಲ: ಶೇ.65

ಧರಣೀ ಗರ್ಭ ಸಂಭೂತಂ ವಿದ್ಯುತ್‌ ಕಾಂತಿ ಸಮಪ್ರಭಂ|

ಕುಮಾರಂ ಶಕ್ತಿ ಹಸ್ತಂ ತಂ ಮಗಳಂ ಪ್ರಣಮಾಮ್ಯಹಂ||

ಈ ಶ್ಲೋಕವನ್ನು ಪ್ರತೀ ಮಂಗಳವಾರ ಪಠಿಸುವುದು ಉತ್ತಮ.

ವೃಷಭ: ಕಳೆದ ವರ್ಷದ ಗೊಂದಲದಿಂದ ಹೊರ ಬರುತ್ತೀರಿ. ದೈವಾನುಗ್ರಹ ಜತೆಯಲ್ಲೇ ಇರುವುದರಿಂದ ಭಯಪಡಬೇಕಾದ ಆವಶ್ಯಕತೆ ಈ ವರ್ಷ ಇಲ್ಲ. ಖರ್ಚು ಸ್ವಲ್ಪ ಜಾಸ್ತಿ ಆಗಬಹುದು. ಆದರೆ ದುಡಿಮೆಗೆ ಈ ವರ್ಷ ತೊಂದರೆ ಇರುವುದಿಲ್ಲ. ಕೌಟುಂಬಿಕ ಕಲಹ, ಚರ್ಮದ ತೊಂದರೆ ಉಂಟಾದರೂ ಶತ್ರುಗಳೇ ಮಿತ್ರರಾಗಿ ಈ ವರ್ಷ ನೆಮ್ಮದಿಯ ಜೀವನ ನಡೆ ಸು ತ್ತೀರಿ. ಮೇ ಅನಂತರ ನೂತನ ವಾಹನ, ಆಸ್ತಿ ಖರೀದಿಸುವ ಯೋಗವಿದೆ. ಜೂನ್‌ನಲ್ಲಿ ಸ್ವಲ್ಪ ಉದ್ಯೋಗದಲ್ಲಿ ತೊಂದರೆ ಉಂಟಾಗಬಹುದು. ಅನಂತರ ಉತ್ತಮ ಫಲವಿದೆ. ಹೇರಳವಾದ ಸಂಪಾದನಾ ಯೋಗವಿದೆ. ಗುರು ಎಲ್ಲ ಕಡೆಯಿಂದ ಲಾಭ, ಶುಭವನ್ನೇ ತಂದುಕೊಡುವುದರಲ್ಲಿ ಅನುಮಾನವೇ ಇಲ್ಲ. ಸಾಧನೆ ಮಾಡುವ ವರ್ಷ ನಿಮಗೆ ಇದಾಗಲಿದೆ. ವಿವಾಹ, ಸಂತಾನ ವಿಚಾರದಲ್ಲೂ ಉತ್ತಮವಿದೆ. ಕಷ್ಟ ಅಂದರೆ ಏನು ಎಂದು ಪ್ರಶ್ನೆ ಮಾಡುವ ವರ್ಷ ಇದಾಗಲಿದ್ದು, ಅಧಿಕವಾದ ಶುಭಫಲವಿದೆ. ಷಷ್ಠದ ಕೇತು ಶತ್ರು ನಾಶ ಉಂಟು ಮಾಡುತ್ತಾನೆ. ವ್ಯಯದ ರಾಹು ಸ್ವಲ್ಪ ಧನಹಾನಿ ಮಾಡಬಹುದು. ಆರಾಧನೆ ಮಾಡಿ. ಜನವರಿ, ಫೆಬ್ರವರಿ ಕನಿಷ್ಠ. ಮಾರ್ಚ್‌, ಎಪ್ರಿಲ್‌ ಸಾಮಾನ್ಯ. ಮೇ ಉತ್ತಮ. ಜೂನ್‌ ಸಾಧಾರಣ. ಜುಲೈ ಉತ್ತಮ, ಆಗಸ್ಟ್‌ ಸಾಧಾರಣ. ಸೆಪ್ಟಂಬರ್‌, ಅಕ್ಟೋಬರ್‌ ಉತ್ತಮ. ನವೆಂಬರ್‌ ಸಾಧಾರಣ. ಡಿಸೆಂಬರ್‌ ಉತ್ತಮ.

ಶುಭ ರತ್ನ : ವಜ್ರ. ಶುಭ ಬಣ್ಣ : ಬಿಳಿ

ಅದೃಷ್ಟ ಸಂಖ್ಯೆಗಳು: 2,5, 6. ಶುಭಫಲ: ಶೇ. 90

ಹಿಮಕುಂದ ಮೃಡಾಲಾಭಂ ದೈತ್ಯಾನಾಂ ಪರಮಂಗುರುಂ|

ಸರ್ವಶಾಸ್ತ್ರ ಪ್ರವಕ್ತಾರಂ ಭಾರ್ಗವಂ ಪ್ರಣಮಾಮ್ಯಹಂ||

ಪ್ರತೀ ಶುಕ್ರವಾರ ಈ ಶ್ಲೋಕ ಪಠಿಸುವುದರಿಂದ ಇನ್ನೂ ಉತ್ತಮ ಫಲವಿದೆ.

ಮಿಥುನ: ಮಿಥುನ ರಾಶಿಯವರು ಕಳೆದ ಎರಡು ವರ್ಷಗಳಿಂದ ಅಷ್ಟಮ ಶನಿಯಿಂದ ಬೇಸತ್ತಿದ್ದು ಎಪ್ರಿಲ್‌ ಅನಂತರ ಉಸಿರಾಡುವ ಸ್ಥಿತಿ ಲಭಿಸುತ್ತದೆ. ಆದರೂ ಶನಿಕಾಟ ತಪ್ಪುವುದಿಲ್ಲ. ಆಪ್ತ ಜನರಿಂದ ವಂಚನೆಗೆ ಸಿಲುಕುತ್ತೀರಿ. ಸಂಚಾರದಲ್ಲಿ ಹಾನಿ ಸಂಭವಿಸಲಿದೆ. ಮೇ ತಿಂಗಳಿಂದ ಧನ ಆಗಮನವಾಗಲಿದೆ. ಸಮಾಜದಲ್ಲಿ ಉತ್ತಮ ಸ್ಥಾನಮಾನ ಸಿಗಲಿದೆ. ಸಂಚಾರದಲ್ಲಿ ದುಃಖ ಉಂಟಾಗಬಹುದು. ಶತ್ರು ಕಾಟ ಇರಲಿದೆ. ಭೂಮಿಗೆ ಸಂಬಂಧಿಸಿದ ಕಲಹ, ಅನಾರೋಗ್ಯ, ತೀರ್ಥಯಾತ್ರೆ ಇತ್ಯಾದಿ ಮಿಶ್ರ ಫಲವಿದೆ. ಏಕಾದಶದ ರಾಹು ಆ ಗಾಗ ಲಾಭ ತಂದು ಕೊಟ್ಟರೂ ಪಂಚಮದ ಶನಿ ಅನಾರೋಗ್ಯ, ಹೊಟ್ಟೆ ಭಾಗದಲ್ಲಿ ತೊಂದರೆ ಕೊಡುತ್ತಾನೆ. ಸ್ವಲ್ಪ ಮಟ್ಟಿಗೆ ಸೋಲು ಇದ್ದರೂ ಗೆಲುವು ಜತೆಗೇ ಇರುವುದರಿಂದ ಸ್ವಲ್ಪ ಮಟ್ಟಿನ ಸಮಾಧಾನ ಸಿಗಲಿದೆ. ಜನವರಿ, ಫೆಬ್ರವರಿ ತಿಂಗಳು ಉತ್ತಮವಾಗಿರಲಿದ್ದು, ಮಾರ್ಚ್‌, ಎಪ್ರಿಲ್‌ ತಿಂಗಳು ಸಾಧಾರಣವಾಗಿರುತ್ತದೆ. ಮೇ ತಿಂಗಳು ಉತ್ತಮ, ಜೂನ್‌, ಜುಲೈ ತಿಂಗಳು ಕನಿಷ್ಠ. ಆಗಸ್ಟ್‌ ತಿಂಗಳು ಉತ್ತಮ. ಸೆಪ್ಟಂಬರ್‌ ತಿಂಗಳು ಕನಿಷ್ಠ. ಅಕ್ಟೋಬರ್‌ ತಿಂಗಳು ಉತ್ತಮ. ನವೆಂಬರ್‌, ಡಿಸೆಂಬರ್‌ ತಿಂಗಳು ಅತೀ ಕನಿಷ್ಠ. ಈ ರೀತಿಯ ಫಲ ಈ ವರ್ಷ ಇರುತ್ತದೆ. ದೇವರ ಆರಾಧನೆ ಮಾಡಿದರೆ ಕಷ್ಟದಿಂದ ದೂರವಾಗಬಹುದು.

ಶುಭ ರತ್ನ : ಪಚ್ಚೆ. ಶುಭ ಬಣ್ಣ : ಹಸುರು.

ಅದೃಷ್ಟ ಸಂಖ್ಯೆ: 3,6,11. ಉತ್ತಮ ಫಲಗಳು: ಶೇ.70

ಪ್ರಿಯಂಗು ಗುಲಿಕಾ ಭಾಸಂ ರುಪೇಣಾ ಪ್ರತಿಮಂ ಬುಧಂ|

ಸೌಮ್ಯಂ ಸೌಮ್ಯ ಗುಣೋಪೇತಂ ತಂ ಬುಧಂ ಪ್ರಣಮಾಮ್ಯಹಂ||

ಈ ಶ್ಲೋಕವನ್ನು ಬುಧವಾರ ಪಠಿಸುವುದರಿಂದ ಉತ್ತಮ ಫಲವಿದೆ.

ಕಟಕ: ಈ ವರ್ಷ ಸಾಮಾನ್ಯ ಫಲವಿರುತ್ತದೆ. ಅಷ್ಟಮ ಶನಿ ಪ್ರಾರಂಭವಾಗ ಲಿದ್ದು, ಎಲ್ಲ ಕಡೆಯಿಂದ ಹಾನಿ ಸಂಭವಿಸಲಿದೆ. ವಾಹನದಿಂದ ನಷ್ಟ ಸಂಭವಿಸಲಿದೆ. ನಂಬಿಕೆಯೇ ಎಲ್ಲವನ್ನೂ ದೋಚಲಿದೆ. ಸಹೋ ದರ ದ್ವೇಷದಿಂದ ದುಃಖಕ್ಕೆ ಒಳ ಗಾ ಗುವಿರಿ. ಉದ್ಯೋಗದಲ್ಲಿ ವರ್ಗಾವಣೆ ಜತೆಗೆ ಅಶಾಂತಿಯ ವಾತಾವರಣ ಇರುತ್ತದೆ. ಆಕಸ್ಮಿಕ ಅನಾರೋಗ್ಯ ಖರ್ಚು ತರಿಸಲಿದೆ. ಸಾಲ ಬಾಧೆಯಿಂದ ದಂಗಾಗುವಿರಿ. ಕೊಟ್ಟ ಹಣ ಮರಳಿ ಬಾರದೇ ಅತ್ಯಂತ ಕಷ್ಟ ಪಡುವಿರಿ. ತಾಯಿಗೆ ತೊಂದರೆ ಬರಬಹುದು. ಬಂಧು ವರ್ಗದವರೊಂದಿಗೆ ಸುಮ್ಮನೆ ನಿಷ್ಠುರ ಮಾಡಿಕೊಳ್ಳಬೇಕಾಗುತ್ತದೆ. ಹೊಸ ಗೆಳೆಯರೇ ಸಹಾಯ ಮಾಡುತ್ತಾರೆ. ಗೃಹ ನಿರ್ಮಾಣದಂತಹ ಕೆಲಸ ನಿಂತು ಹೋಗಬಹುದು. ದಶಮದ ರಾಹು ಉದ್ಯೋಗದಲ್ಲಿ ಅನುಕೂಲ ಕೊಡಬಹುದು. ನಾಲ್ಕನೇ ಸ್ಥಾನ ದಲ್ಲಿ ರುವ ಕೇತು ವಾಹನದಿಂದ ಹಾನಿ ಕೊಡುತ್ತಾನೆ. ಇಷ್ಟೆಲ್ಲ ಕೆಟ್ಟ ಫಲವಿದ್ದರೂ ಗುರುಬಲ ಇರುವುದರಿಂದ ಕೆಲವು ಶುಭ ಫಲವಿದೆ. ಎಲ್ಲವನ್ನೂ ಎದುರಿಸುವ ಶಕ್ತಿ ಗುರು ನೀಡುತ್ತಾನೆ. ವಿದೇಶ ಪ್ರಯಾಣ ಯೋಗ ಬರಬಹುದು. ಗುರು ಆಗಾಗ ಖಂಡಿತ ಸಂತಸದ ಫಲ ನೀಡುತ್ತಾನೆ. ಜನವರಿ, ಫೆಬ್ರ ವರಿ ಸಾಮಾನ್ಯ. ಮಾರ್ಚ್‌, ಎಪ್ರಿಲ್‌ನಲ್ಲಿ ಉತ್ತಮ. ಮೇಯಲ್ಲಿ ಸಾಧಾರಣ, ಜೂನ್‌ ಕನಿಷ್ಠ. ಜುಲೈ ಸಾಧಾರಣ. ಆಗಸ್ಟ್‌, ಸೆಪ್ಟಂಬರ್‌, ಅಕ್ಟೋಬರ್‌ ಕನಿಷ್ಠ. ಡಿಸೆಂಬರ್‌ನಲ್ಲಿ ಉತ್ತಮ ಫಲವಿರುತ್ತದೆ. ಆಂಜನೇಯ ಸೇವೆ ಅತೀ ಅವಶ್ಯ.

ಶುಭ ರತ್ನ: ಮುತ್ತು. ಶುಭ ಬಣ್ಣ : ಬಿಳಿ.

ಅದೃಷ್ಟ ಸಂಖ್ಯೆಗಳು : 2,3,9. ಶುಭ ಫಲ: ಶೇ.70

ದಧಿ ಶಂಖ ತುಷಾರಾಭಂ ಕ್ಷೀರೊದಾರ್ಣವ ಸಂಭವಂ|

ನಮಾಮಿ ಶಶಿನಂ ಸೋಮಂ ಶಂಭೊರ್ಮುಕುಟ ಭೂಷಣಂ||

ಈ ಶ್ಲೋಕವನ್ನು ಪ್ರತೀ ಸೋಮವಾರ ಪಠಿಸುವುದು ಉತ್ತಮ.

ಸಿಂಹ:  ಸಿಂಹ ರಾಶಿಯವರು ಕಳೆದ ವರ್ಷ ದಷ್ಟು ಸುಲಭವಾಗಿ ಈ ವರ್ಷ ಕಳೆಯಲಾಗದು. ಹೌದು, ಈ ವರ್ಷ ಅಷ್ಟಮ ಗುರು, ಸಪ್ತಮ ಶನಿ, ನವಮದ ರಾಹುಗಳು ನಿಮ್ಮನ್ನು ತೊಂದರೆಗೆ ಗುರಿ ಮಾಡುತ್ತಾರೆ. ಜೀವನವೇ ಬೇಸರ ಎಂದು ಅನಿಸಬಹುದು. ಯಾರನ್ನೂ ನಂಬಿ ಅಥವಾ ಹೊಸ ವ್ಯವಹಾರ ಮಾಡಲು ಹೋಗಿ ದೊಡ್ಡ ಮೊತ್ತ ಕಳೆದುಕೊಳ್ಳುವ ಸಾಧ್ಯತೆ ಇರುವುದರಿಂದ ಹುಷಾರಾಗಿ ವ್ಯವಹಾರ ನಡೆಸಬೇಕಾಗುತ್ತದೆ. ಮನೆಯಲ್ಲಿ ಕಲಹದ ವಾತಾವರಣ ಇರಲಿದ್ದು , ಹಿರಿಯರಿಗೆ ಅನಾರೋಗ್ಯ ಉಂಟಾಗುವ ಸಂಭವವಿದೆ. ಅಧಿಕ ಖರ್ಚು ನಿಮಗೆ ಹುಚ್ಚು ಹಿಡಿಸಲಿದೆ. ಅಧಿಕಾರ ದೂರವಾಗಲಿದೆ. ಆದರೆ ತೃತೀಯದ ಕೇತು ನಾನೇನೂ ಕಡಿಮೆ ಇಲ್ಲ ಅಂತ ಕೆಲವು ಉತ್ತಮ ಫಲ ಕೊಡುವುದರಿಂದ ಸ್ವಲ್ಪ ಮಟ್ಟಿಗೆ ಸಮಾಧಾನ ತಂದೀತು. ಸಹೋದರರಿಂದ ಸಹಾಯ ಒದಗಿ ಬರಲಿದೆ. ಪರಾಕ್ರಮದಿಂದ ಹೆಸರು ಮಾಡುವ ಅವಕಾಶವಿದೆ. ಒಟ್ಟಿನಲ್ಲಿ ಈ ವರ್ಷ ತೊಂದರೆಯೇ ಅಧಿಕ. ಧೈರ್ಯ ಬಿಡಬಾರದು. ಜನವರಿ, ಫೆಬ್ರವರಿ, ಮಾರ್ಚ್‌ ಉತ್ತಮವಾಗಿರಲಿದೆ. ಎಪ್ರಿಲ್‌ ಸಾಮಾನ್ಯ. ಮೇ, ಜೂನ್‌, ಜುಲೈ ಕನಿಷ್ಠ. ಆಗಸ್ಟ್‌, ಸೆಪ್ಟಂಬರ್‌ ಅತೀ ಕನಿಷ್ಠ. ಅಕ್ಟೋಬರ್‌ ಉತ್ತಮ. ನವೆಂಬರ್‌, ಡಿಸೆಂಬರ್‌ ಕನಿಷ್ಠ. ಈ ರೀತಿಯ ಫಲವಿರುತ್ತದೆ. ಈಶ್ವರ ಸೇವೆಯನ್ನು ನಿತ್ಯ ನಿರಂತರ ಮಾಡಲೇಬೇಕು.

ಶುಭ ರತ್ನ: ಮಾಣಿಕ್ಯ. ಶುಭ ಬಣ್ಣ: ಕೆಂಪು.

ಅದೃಷ್ಟ ಸಂಖ್ಯೆಗಳು: 1, 3, 5. ಶುಭ ಫಲ: ಶೇ. 40

ಜಪಾಕುಸುಮ ಸಂಕಾಶಂ ಕಾಶ್ಯಪೇಯಂ ಮಹಾದ್ಯುತಿಂ|

ತಮೋರಿಂ ಸರ್ವ ಪಾಪಘ್ನಂ ಪ್ರಣತೋಸ್ಮಿ ದಿವಾಕರಂ||

ಈ ಶ್ಲೋಕವನ್ನು ಪ್ರತೀ ರವಿವಾರ ಪಠಿಸಬೇಕು.

ಕನ್ಯಾ: ಕಳೆದ ವರ್ಷ ಅಷ್ಟಮ ಶನಿಯಿಂದ ಅನಾರೋಗ್ಯ, ಅಶಾಂತಿ, ಧನಹಾನಿ ಇತ್ಯಾದಿ ತೊಂದರೆ ಅನುಭವಿಸಿದ್ದ ಕನ್ಯಾ ರಾಶಿಯವರಿಗೆ ಈ ವರ್ಷದಲ್ಲಿ ಹೊಸ ಬೆಳಕು ಕಾಣ ಸಿಗುತ್ತದೆ. ಶನಿ ಬಿಟ್ಟು ಮತ್ತೆ ಬಂದರೂ ಕೂಡ ಉತ್ತಮ ಫಲ ಸಿಗಲಿದೆ. ಗುರು ಅನುಗ್ರಹದಿಂದ ಅಧಿಕ ಲಾಭ ಸಿಗಲಿದ್ದು, ವಿವಾಹ ಇತ್ಯಾದಿ ಶುಭಕಾರ್ಯ ಜರುಗಲಿದೆ. ಅಷ್ಟಮ ರಾಹು ಆಕಸ್ಮಿಕ ಅಪಾಯ ತಂದೊಡ್ಡುತ್ತಾನೆ. ತಂದೆ, ಮಕ್ಕಳಲ್ಲಿ ವಿರಸ ಮೂಡಲಿದ್ದು, ಹಿರಿಯರಿಗೆ ಅಪಾಯವಿದ್ದು ಜಾಗ್ರತೆಯಿಂದ ಇರುವುದು ಒಳಿತು. ಧನಹಾನಿ, ಅಶಾಂತಿ ಇರುತ್ತದೆ. ವಾತ ರೋಗಗಳು ಕಾಡಲಿದೆ. ಆದರೂ ಭೂಮಿ ಖರೀದಿ, ಗೃಹ ನಿರ್ಮಾಣದಂಥ ಒಳ್ಳೆಯ ಕಾರ್ಯಗಳು ನಡೆಯುತ್ತವೆ. ಅಧಿಕವಾದ ಧನ ಪ್ರಾಪ್ತಿ ಯೋಗವಿದೆ. ಶತ್ರು ಕಾಟವಿದ್ದರೂ ಗೆಲುವು ನಿಮ್ಮದಾಗಲಿದೆ. ವ್ಯವಹಾರ ಚೇತರಿಕೆ ಕಾಣಲಿದೆ. ಒಟ್ಟಿನಲ್ಲಿ ಶುಭ ಫಲಗಳು ಅಧಿಕವಾಗಿರುತ್ತವೆ. ಜನವರಿ, ಫೆಬ್ರವರಿ, ಮಾರ್ಚ್‌ ತಿಂಗ ಳಲ್ಲಿ ಕನಿಷ್ಠ ಫಲವಿದೆ. ಎಪ್ರಿಲ್‌ ತಿಂಗಳು ಸಾಧಾರಣ. ಮೇ ತಿಂಗಳು ಕನಿಷ್ಠ. ಜೂನ್‌, ಜುಲೈ ತಿಂಗಳು ಉತ್ತಮ. ಆಗಸ್ಟ್‌ ತಿಂಗಳು ಸಾಧಾರಣ. ಸೆಪ್ಟಂಬರ್‌, ಅಕ್ಟೋಬರ್‌, ನವೆಂಬರ್‌, ಡಿಸೆಂಬರ್‌ ತಿಂಗಳು ಉತ್ತಮ ಫಲವಿದೆ. ನಾಗಾರಾಧನೆ ಮಾಡುವುದು ಆವಶ್ಯಕವಾಗಿದೆ.

ಶುಭ ರತ್ನ: ಪಚ್ಚೆ. ಶುಭ ಬಣ್ಣ :ಹಸುರು.

ಅದೃಷ್ಟ ಸಂಖ್ಯೆಗಳು: 3,5,6. ಶುಭ ಫಲ: ಶೇ. 80

ಪ್ರಿಯಂಗು ಗುಲಿಕಾ ಭಾಸಂ ರುಪೇಣಾ ಪ್ರತಿಮಂ ಬುಧಂ|

ಸೌಮ್ಯಂಸೌಮ್ಯ ಗುಣೊಪೇತಂ ತಂ ಬುಧಂ ಪ್ರಣಮಾಮ್ಯಹಂ||

ಈ ಶ್ಲೋಕವನ್ನು ಪ್ರತೀ ಬುಧವಾರ ಪಠಿಸಬೇಕು.

ತುಲಾ:  ತುಲಾ ರಾಶಿಯವರಿಗೆ ಈ ವರ್ಷ ಮಿಶ್ರ ಫಲವಿದೆ. ಆದರೂ ತೊಂದರೆಗಳೇ ಅಧಿಕ ಎನ್ನಬಹುದು. ಸಂಪಾದನೆಯಲ್ಲಿ ಉತ್ತಮವಾಗಿದ್ದರೂ, ಪಂಚಮ ಶನಿ. ಜನ್ಮದ ಕೇತುವಿನಿಂದ ತೊಂದರೆ ಇದ್ದೇ ಇರುತ್ತದೆ. ಸಹೋದರ ಕಲಹ. ಮಾನಸಿಕ ಅಶಾಂತಿ, ಮಾನಹಾನಿ ಉಂಟಾಗಬಹುದು. ಕಳ್ಳರ ಭಯ ಇರುವುದರಿಂದ ಹುಷಾರಾಗಿರುವುದು ಉತ್ತಮ. ಸಾಲ ಬಾಧೆಯಿಂದ ಧೈರ್ಯಗೆಡಬಾರದು. ಹೊಟ್ಟೆ ಭಾಗದಲ್ಲಿ ತೊಂದರೆ, ಶರೀರದಲ್ಲಿ ಗಾಯ ಉಂಟಾಗಬಹುದು. ಪತ್ನಿಯ ಆರೋಗ್ಯದಲ್ಲಿ ಜಾಗ್ರತೆ ಬೇಕು. ವರ್ಷದ ಮೊದಲ ಭಾಗದಲ್ಲಿ ಶತ್ರುಗಳಿಂದ ತೊಂದರೆ ಇರುತ್ತದೆ. ವಿವಾಹ, ಗೃಹ ನಿರ್ಮಾಣದಂತಹ ಕಾರ್ಯದಲ್ಲಿ ವಿಘ್ನಗಳಿದೆ. ಕೈಗೊಳ್ಳುವ ಎಲ್ಲ ಕೆಲಸದಲ್ಲೂ ಆರಂಭಿಕ ತೊಂದರೆಯೇ ಕಾಣಿಸಬಹುದು. ಅಕ್ಕಪಕ್ಕದವರು ಅಥವಾ ಸ್ನೇಹಿತರು ಸುಮ್ಮನೆ ಕಲಹಕ್ಕೆ ನಿಲ್ಲುತ್ತಾರೆ. ಆದರೂ ಹೊಸ ವಾಹನ ಅಥವಾ ಯಂತ್ರ ಖರೀದಿ. ನಿಂತುಹೋಗಿದ್ದ ಕೆಲಸ ಮರು ಜೀವ ಪಡೆಯುವುದು. ಆಭರಣ ಖರೀದಿ, ಪುಣ್ಯ ಕೆಲಸಗಳು ಇತ್ಯಾದಿ ಶುಭ ವಿಚಾರವೂ ಇರುತ್ತದೆ. ಜನವರಿ, ಫೆಬ್ರವರಿ ಮಧ್ಯಮ. ಮಾರ್ಚ್‌, ಎಪ್ರಿಲ್‌, ಮೇ ಕನಿಷ್ಠ. ಜೂನ್‌, ಜುಲೈ,  ಗಸ್ಟ್‌, ಸೆಪ್ಟಂಬರ್‌ ಉತ್ತಮ. ಅಕ್ಟೋಬರ್‌ ಮಧ್ಯಮ. ನವೆಂಬರ್‌, ಡಿಸೆಂಬರ್‌ ಕನಿಷ್ಠ ಫಲ ಇರುತ್ತದೆ. ಶಿವಾರಾಧನೆ ಅವಶ್ಯ.

ಶುಭ ರತ್ನ: ವಜ್ರ. ಶುಭ ಬಣ್ಣ : ಬಿಳಿ.

ಅದೃಷ್ಟ ಸಂಖ್ಯೆಗಳು: 2, 6, 14 ಶುಭ ಫಲ: ಶೇ. 68

ಹಿಮಕುಂದ ಮೃಡಾಲಾಭಂ ದೈತ್ಯಾನಾಂ ಪರಮಂ ಗುರುಂ|

ಸರ್ವ ಶಾಸ್ತ್ರ ಪ್ರವಕ್ತಾರಂ ಭಾರ್ಗವಂ ಪ್ರಣಮಾಮ್ಯಹಂ||

ಈ ಶ್ಲೋಕವನ್ನು ಪ್ರತಿ ಶುಕ್ರವಾರ ಪಠಿಸಬೇಕು.

ವೃಶ್ಚಿಕ : ಈ ವರ್ಷ ವೃಶ್ಚಿಕ ರಾಶಿಯವರಿಗೆ ಉತ್ತಮ ಯೋಗಗಳಿದ್ದು, ಬಹುಪಾಲು ಒಳ್ಳೆಯ ಫಲವನ್ನೇ ಪಡೆಯಬಹುದಾಗಿದೆ. ವ್ಯಯದ ಕೇತು ಧನಹಾನಿ. ಕೆಟ್ಟ ವ್ಯಸನದಿಂದ ತೊಂದರೆ ಕೊಟ್ಟರೂ ಗುರುವಿನ ಅನುಗ್ರಹದಿಂದ ಅತ್ಯುತ್ತಮವಿರುತ್ತದೆ. ಸಂತಾನ ಯೋಗ ಕುಟುಂಬದಲ್ಲಿ ನೆಮ್ಮದಿ ತರುತ್ತದೆ. ಎಷ್ಟೋ ಸಮ ಯ ದಿಂದ ಕಾದು ಕುಳಿತಿದ್ದ ಎಲ್ಲ ಕೆಲಸಗಳು ಈಗ ನೆರವೇರುತ್ತವೆ. ಮಕ್ಕಳಿಗೆ ಶುಭವಾಗಲಿದೆ. ಎಲ್ಲರ ಸಹಾಯ ನಿಮಗೆ ಸಂತಸ ತರಲಿದೆ. ಮನೆಯಲ್ಲಿ ನೆಮ್ಮದಿ, ಸಂತೋಷ ಮರುಕಳಿಸಲಿದೆ. ಉದ್ಯೋಗದಲ್ಲಿ ಉನ್ನತವಾದ ಸ್ಥಾನ, ಉತ್ತಮವಾದ ಕೀರ್ತಿ ಮತ್ತು ಧನಲಾಭ ಇರುತ್ತದೆ. ಮನೆ ನಿರ್ಮಾಣ ಕಾರ್ಯ ಮಾಡಬಹುದಾಗಿದೆ. ಭೂಮಿ ಖರೀದಿಸುವ ಯೋಗವಿದ್ದರೂ ಮೋಸ ಹೋಗದ ಹಾಗೆ ಜಾಗ್ರತೆ ವಹಿಸುವುದು ಒಳ್ಳೆಯದು. ಅನಿರೀಕ್ಷಿತವಾದ ಸ್ಥಾನ ಲಭಿಸಲಿದ್ದು, ವಿವಾಹ, ದೇವತಾಸೇವೆ ನಡೆಯುತ್ತದೆ. ಆಭರಣ ಖರೀದಿ ಮಾಡಲಿದ್ದೀರಿ. ತೀರ್ಥಯಾತ್ರೆ ಸಂತಸ ತರುತ್ತದೆ. ಒಟ್ಟಿನಲ್ಲಿ ಉತ್ತಮ ಫಲಗಳು ಈ ವರ್ಷ ನಿಮಗೆ ಸಂತಸ ತರಲಿವೆ. ಜನವರಿ, ಫೆಬ್ರವರಿ, ಮಾರ್ಚ್‌ ತಿಂಗಳು ಸಾಧಾರಣ. ಎಪ್ರಿಲ್‌ನಿಂದ ನವೆಂಬರ್‌ತಿಂಗಳವರೆಗೂ ಉತ್ತಮ. ಡಿಸೆಂಬರ್‌ ತಿಂಗಳು ಸಾಧಾರಣ ಫಲ ಇರುತ್ತದೆ. ದುರ್ಗಿ ಆರಾಧನೆ ಮಾಡುವುದರಿಂದ ಉತ್ತಮ ಫಲ ವೃದ್ಧಿಸುತ್ತದೆ.

ಶುಭ ರತ್ನ: ಹವಳ. ಶುಭ ಬಣ್ಣ : ಕೆಂಪು.

ಅದೃಷ್ಟ ಸಂಖ್ಯೆಗಳು: 1,2,5. ಉತ್ತಮ ಫಲ: ಶೇ.90

ಧರಣೀ ಗರ್ಭ ಸಂಭೂತಂ ವಿದ್ಯುತ್‌ ಕಾಂತಿ ಸಮಪ್ರಭಂ|

ಕುಮಾರಂ ಶಕ್ತಿ ಹಸ್ತಂ ತಂ ಮಗಳಂ ಪ್ರಣಮಾಮ್ಯಹಂ||

ಈ ಶ್ಲೋಕವನ್ನು ಪ್ರತೀ ಮಂಗಳವಾರ ಪಠಿಸಬೇಕು.

ಧನು: ಸಾಡೇ ಸಾಥಿ ಶನಿಯಿಂದ ಕಷ್ಟ ಅನುಭವಿಸಿದ್ದ ಧನು ರಾಶಿಯವರಿಗೆ ಈ ವರ್ಷ ಉತ್ತಮ ಎಂದೆನಿಸಬಹುದು. ಅನಾರೋಗ್ಯ ಸ್ವಲ್ಪ ಬೇಸರ ತರಿಸುತ್ತದೆ. ವಿದ್ಯೆಯಲ್ಲಿ ಹಿನ್ನಡೆ. ದೊಡ್ಡ ಮೊತ್ತದ ಧನಹಾನಿ ಆಗಲಿದೆ. ಗೆಳೆಯರಿಂದ ತೊಂದರೆಯಾಗಲಿದೆ. ಶತ್ರು ಕಾಟ. ತಂದೆ, ಮಕ್ಕಳಲ್ಲಿ ಭಿನ್ನಾಭಿಪ್ರಾಯ ಬರಬಹುದು. ವರ್ಷದ ಕೊನೆಯಲ್ಲಿ ಆಸ್ಪತ್ರೆ ವಾಸ ಅನುಭವಿಸಬೇಕಾಗಬಹುದು. ಅಶಾಂತಿ ಇತ್ಯಾದಿಗಳಿಂದ ಪರಿತಪಿಸಬೇಕಾದರೂ ಭೂಮಿ ಅಥವಾ ನಿವೇಶನ ಖರೀದಿಯಿಂದ ಸಂತಸ ಲಭಿಸಲಿದೆ. ಕೃಷಿ ಕ್ಷೇತ್ರದಲ್ಲಿ ಉನ್ನತಿ, ವಾಹನ ಖರೀದಿಸುವ ಯೋಗ, ವಿದೇಶ ಪ್ರಯಾಣ, ವಿವಾಹ ಯೋಗ, ತಾಯಿಗೆ ಆರೋಗ್ಯ ಚೇತರಿಕೆ ವಾತಾವರಣ, ಉದ್ಯೋಗದಲ್ಲಿ ಉನ್ನತಿ ಇತ್ಯಾದಿಗಳಿಂದ ಸಂತಸ, ಸಮಾಧಾನ ತಂದೀತು. ಸಾಡೇ ಸಾಥಿ ಶನಿ ವರ್ಷಾಂತ್ಯದಲ್ಲಿ ಕೊನೆಯಾಗಲಿದೆ. ಪಂಚಮದ ರಾಹು ಸಂತಾನದಲ್ಲಿ ತೊಂದರೆ, ಅನಾರೋಗ್ಯ ಕೊಡುತ್ತಾನೆ. ಒಟ್ಟಿನಲ್ಲಿ ಈ ವರ್ಷ ಮಿಶ್ರ ಫಲವಿದೆ. ಜನವರಿ, ಫೆಬ್ರವರಿ, ಮಾರ್ಚ್‌ ತಿಂಗಳು ಸಾಧಾರಣ. ಎಪ್ರಿಲ್‌, ಮೇ ಕನಿಷ್ಠ. ಜೂನ್‌, ಜುಲೈ ತಿಂಗಳು ಉತ್ತಮ. ಆ ಗಸ್ಟ್‌, ಸೆಪ್ಟಂಬರ್‌ ಸಾಧಾರಣ. ಅಕ್ಟೋಬರ್‌, ನವೆಂಬರ್‌ ತಿಂಗಳು ಉತ್ತಮ. ಡಿಸೆಂಬರ್‌ ತಿಂಗಳು ಕನಿಷ್ಠ ಫಲವಿರುತ್ತದೆ. ಶಿವಾರಾಧನೆ ಉತ್ತಮ ಫಲ ನೀಡುತ್ತದೆ.

ಶುಭ ರತ್ನ: ಪುಷ್ಯರಾಗ. ಶುಭ ಬಣ್ಣ: ಅರಿಸಿನ.

ಅದೃಷ್ಟ ಸಂಖ್ಯೆಗಳು:2,3,8. ಉತ್ತಮ ಫಲ: ಶೇ.68

ದೇವಾನಾಂಚ ಋಷೀನಾಂಚ ಗುರುಮ್‌ ಕಾಂಚನ ಸನ್ನಿಭಂ|

ಬುದ್ಧಿಭೂತಂ ತ್ರಿಲೊಕೇಶಂ ತಂ ನಮಾಮಿ ಬೃಹಸ್ಪತಿಂ||

ಈ ಶ್ಲೋಕವನ್ನು ಪ್ರತೀ ಗುರುವಾರ ಪಠಿಸುವುದು ಉತ್ತಮ.

ಮಕರ: ಈ ವರ್ಷ ಕೂಡ ಕಳೆದ ವರ್ಷದಂತೆಯೇ ಕೆಟ್ಟ ಪರಿಸ್ಥಿತಿ ಮುಂದುವರಿಯುತ್ತದೆ. ಸಾಡೇ ಸಾಥಿ ಶನಿ, ರಾಹು ಕೇತುವಿನಿಂದ ಬಹುತೇಕ ತೊಂದರೆ ಜತೆಯೇ ಇರುತ್ತದೆ. ಕೆಲವು ಶುಭ ಕಾರ್ಯ ನಡೆಯಬಹುದಾಗಿದೆ. ಗೆಳೆಯರಿಂದ ಸಹಕಾರ ಸಿಗುತ್ತದೆ. ಸಹೋದರರಿಂದ ನೆಮ್ಮದಿ ಸಿಗುತ್ತದೆ. ಇವುಗಳನ್ನು ಬಿಟ್ಟರೆ ಬಹುತೇಕ ಮಾನಸಿಕ ಅಶಾಂತಿ, ಎಲ್ಲ ಕೆಲಸದಲ್ಲೂ ವಿಘ್ನ, ದುಡಿಮೆಯಲ್ಲಿ ಕೊರತೆ, ಅಧಿಕ ಖರ್ಚು. ಕುಟುಂಬ ಕಲಹ ಇರುತ್ತದೆ. ಆಸ್ತಿ ಕೈ ತಪ್ಪಿ ಪರಿತಪಿಸಬೇಕಾಗಬಹುದು. ಮಾತಿನಿಂದ ತೊಂದರೆ ಅನುಭವಿಸಬೇಕಾಗುತ್ತದೆ. ಅಧಿಕ ಸಿಟ್ಟು ನಷ್ಟ ತರಲಿದೆ. ಉದ್ಯೋಗದಲ್ಲಿ ನಷ್ಟ, ಅಪವಾದ, ಚಿಂತೆ ಮೇಲೆ ಚಿಂತೆ, ಮನೆ ಬಿಟ್ಟು ಪರಸ್ಥಳ ವಾಸ, ತಂದೆಗೆ ತೊಂದರೆ ಇವೆಲ್ಲ ಜೀವನವೇ ಸಾಕಾಯಿತು ಎಂಬ ಪರಿಸ್ಥಿತಿಗೆ ತರುತ್ತದೆ. ಆದರೆ ಧೃತಿಗೆಡದೇ ಧೈರ್ಯದಿಂದ ಇರಲೇಬೇಕು. ನಂಬಿದವರೇ ಮೋಸ ಮಾಡುತ್ತಾರೆ. ಹೊಸ ವ್ಯವಹಾರಕ್ಕೆ ಇದು ಸೂಕ್ತ ಸಮಯ ಅಲ್ಲ. ವಾಹನ, ಭೂಮಿ, ಮನೆ ಖರೀದಿಸುವ ಯೋಗವಿರುವುದಿಲ್ಲ. ಒಟ್ಟಿನಲ್ಲಿ ಈ ವರ್ಷ ತೊಂದರೆಯೇ ಅಧಿಕವಾಗಿರಲಿದೆ. ಜನವರಿ, ಫೆಬ್ರವರಿ, ಮಾರ್ಚ್‌ ಸಾಮಾನ್ಯ. ಎಪ್ರಿಲ್‌, ಮೇ, ಜೂನ್‌ ಉತ್ತಮ. ಜುಲೈಯಿಂದ ಡಿಸೆಂಬರ್‌ವರೆಗೂ ಕನಿಷ್ಠ ಫಲ ಇರುತ್ತದೆ. ಆಂಜನೇಯನ ಸೇವೆ ಅತೀ ಅಗತ್ಯ.

ಶುಭ ರತ್ನ: ನೀಲ. ಶುಭ ಬಣ್ಣ: ನೀಲಿ.

ಅದೃಷ್ಟ ಸಂಖ್ಯೆ:4,5,9. ಉತ್ತಮ ಫಲ: ಶೇ.30

ನೀಲಾಂಜನ ಸಮಾಭಾಸಂ ರವಿಪುತ್ರಂ ಯಮಾಗ್ರಜಂ|

ಛಾಯಾ ಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಂ||

ಈ ಶ್ಲೋಕವನ್ನು ಪ್ರತೀ ಶನಿವಾರ ಪಠಿಸಬೇಕು.

ಕುಂಭ: ಕಳೆದ ವರ್ಷ ಸಾಡೇಸಾಥಿ ಶನಿಯಿಂದ ತೊಂದರೆಯೇ ಅಧಿಕವಾಗಿ ಅನುಭವಿಸಿದ್ದ ನಿಮಗೆ ಈ ವರ್ಷವೂ ಬಹಳ ಅನುಕೂಲ ಎಂದೆನಿಸದು. ಆದರೆ ಗುರು ಅನುಗ್ರಹದಿಂದ ಕೆಲವು ಉತ್ತಮ ಫಲಗಳೂ ಈ ವರ್ಷ ಲಭಿಸುತ್ತವೆ. ಕೆಲಸ ಕಾರ್ಯದಲ್ಲಿ ಅಪಜಯ. ಧನಹಾನಿ. ದಾಂಪತ್ಯದಲ್ಲಿ ತೊಂದರೆ. ಆಪ್ತಮಿತ್ರರ ವಿರಹ. ವಿರೋಧಿಗಳಿಂದ ತೊಂದರೆ. ಅಪಕೀರ್ತಿ. ತಾಯಿಗೆ ತೊಂದರೆ. ಪಶುಸಂಗೋಪನೆಯಿಂದ ನಷ್ಟ. ಸಾಲಗಳು ಹೆಚ್ಚಾಗುವಿಕೆ. ಮೂಳೆ ಮುರಿತ. ವಾತ, ಕಫದ ರೋಗಗಳು. ಸಿಟ್ಟು, ಅಶಾಂತಿ. ಭೂಮಿಯಿಂದ ನಷ್ಟ, ಇತ್ಯಾದಿ ತೊಂದರೆಯೇ ಅಧಿಕವಾಗಿದ್ದರೂ ಸ್ಥಾನ ಪ್ರಾಪ್ತಿ. ದ್ವಿತೀಯ ಗುರುವಿನಿಂದ ಧನಾಗಮನ. ಕಳೆದ ವಸ್ತು ಮತ್ತೆ ಸಿಗುವ ಯೋಗಗಳು. ವಿವಾಹ ಯೋಗ, ಬಡ್ಡಿ ವ್ಯವಹಾರದಿಂದ ಲಾಭ. ಪ್ರಶಂಸೆ. ಗೌರವಗಳೂ ಲಭಿಸಿ ಸ್ವಲ್ಪ ನೆಮ್ಮದಿ ತರುತ್ತದೆ. ಕೋರ್ಟ್‌ ಕಚೇರಿಯ ಅಲೆದಾಟ ಇರಲಿದೆ. ಕಣ್ಣಿಗೆ ಸಂಬಂಧಿಸಿದ ತೊಂದರೆ ಬರಬಹುದು. ಒಟ್ಟಿನಲ್ಲಿ ಈ ವರ್ಷ ಮಿಶ್ರ ಫಲವಿದೆ. ಜನವರಿ, ಫೆಬ್ರವರಿ, ಮಾರ್ಚ್‌ ಸಾಮಾನ್ಯ. ಎಪ್ರಿಲ್‌, ಮೇ ಕನಿಷ್ಠ. ಜೂನ್‌, ಜುಲೈ ಆಗಸ್ಟ್‌ ಉತ್ತಮ. ಸೆಪ್ಟಂಬರ್‌ ಕನಿಷ್ಠ. ಅಕ್ಟೋಬರ್‌ ಉತ್ತಮ. ನವೆಂಬರ್‌ ಕನಿಷ್ಠ. ಡಿಸೆಂಬರ್‌ ಉತ್ತಮ, ಈ ರೀತಿಯ ಫಲವಿರುತ್ತದೆ. ಶಿವಾರಾಧನೆ ಅತೀ ಅವಶ್ಯ.

ಶುಭ ರತ್ನ: ನೀಲ. ಶುಭ ವರ್ಣ: ನೀಲಿ.

ಅದೃಷ್ಟ ಸಂಖ್ಯೆಗಳು 4,8,11. ಉತ್ತಮ ಫಲಗಳು ಶೇ.60

ನೀಲಾಂಜನ ಸಮಾಭಾಸಂ ರವಿ ಪುತ್ರಂ ಯಮಾಗ್ರಜಂ|

ಛಾಯಾ ಮಾರ್ತಾಂಡ ಸಂಭೂತಂ ತಂ ನಮಾಮಿ ಶನೈಶ್ಚರಂ||

ಈ ಶ್ಲೋಕವನ್ನು ಪ್ರತೀ ಶನಿವಾರ ಪಠಿಸಬೇಕು.

ಮೀನ: ಈ ವರ್ಷ ಮೀನ ರಾಶಿಯವರಿಗೆ ಅಶುಭ ಫಲಗಳೇ ಅಧಿಕವಾಗಿರುತ್ತವೆ. ಸಾಡೇಸಾಥಿ ಶನಿ ಆರಂಭವಾಗುವುದರಿಂದ ಅಶಾಂತಿ ಹೆಚ್ಚಲಿದೆ. ಜನ ನಿಷ್ಠುರ. ಧನಹಾನಿಯಾಗಲಿದೆ. ಸ್ಥಾನ ಪಲ್ಲಟ. ಶತ್ರುಕಾಟ ಇರಲಿದೆ. ಕೆಲಸ ಕಾರ್ಯದಲ್ಲಿ ವಿಘ್ನ. ಸಂಚಾರದಲ್ಲಿ ತೊಂದರೆ, ಆರೋಗ್ಯದಲ್ಲೂ ಜಾಗ್ರತೆ ಅಗತ್ಯವಾಗಿ, ಕಳ್ಳತನದಿಂದ ನಷ್ಟ ಅನುಭವಿಸಬೇಕಾಗುತ್ತದೆ. ವಿಪರೀತ ಧನಹಾನಿ ಮಾನಸಿಕ ಅಶಾಂತಿ ಕೊಡುತ್ತದೆ. ಆಪ್ತರಿಂದ ದೂರ ಆಗುವ ಸಂದರ್ಭವಿದೆ. ಆದರೂ ಜನ್ಮದ ಗುರು ಸ್ವಲ್ಪ ಧನಲಾಭ, ಭೂಮಿ ಖರೀದಿ ಅಥವಾ ಗೃಹ ನಿರ್ಮಾಣದಂತಹ ಕಾರ್ಯ ಮಾಡಿಸುತ್ತಾನೆ. ಉದ್ಯೋಗದಲ್ಲಿ ಅನುಕೂಲವಾಗಲಿದೆ. ಅಪವಾದ ಬರಬಹುದು. ಒಟ್ಟಿನಲ್ಲಿ ಈ ವರ್ಷ ತೊಂದರೆಯಿಂದ ನೆಮ್ಮದಿ ಹಾಳಾಗುವುದರಲ್ಲಿ ಸಂಶಯವಿಲ್ಲ. ಜಾಗ್ರತೆಯಿಂದ ಇರಬೇಕು, ಇಲ್ಲವಾದಲ್ಲಿ ನಷ್ಟ ಸರಿದೂಗಿಸಲಾಗದು. ಜನವರಿ, ಫೆಬ್ರವರಿ, ಮಾರ್ಚ್‌ ತಿಂಗಳು ಉತ್ತಮ. ಎಪ್ರಿಲ್‌, ಮೇ, ಜೂನ್‌, ಜುಲೈ ತಿಂಗಳು ಕನಿಷ್ಠ. ಆಗಸ್ಟ್‌ ತಿಂಗಳು ಉತ್ತಮ. ಸೆಪ್ಟಂಬರ್‌, ಅಕ್ಟೋಬರ್‌ ತಿಂಗಳು ಕನಿಷ್ಠ. ನವೆಂಬರ್‌, ಡಿಸೆಂಬರ್‌ ತಿಂಗಳು ಸಾಮಾನ್ಯ. ಈ ರೀತಿಯ ಫಲಗಳು ಈ ವರ್ಷ ಇರುತ್ತದೆ. ಶನೈಶ್ಚರ ಸೇವೆ ಅತೀ ಅವಶ್ಯವಾಗಿದೆ.

ಶುಭ ರತ್ನ: ಪುಷ್ಯರಾಗ. ಶುಭ ವರ್ಣ: ಅರಿಸಿನ.

ಅದೃಷ್ಟ ಸಂಖ್ಯೆಗಳು 3,8,9 ಉತ್ತಮ ಫಲ ಶೇ. 60

ದೇವಾನಾಂಚ ಋಷೀನಾಂಚ ಗುರುಮ್‌ ಕಾಂಚನ ಸನ್ನಿಭಂ|

ಬುದ್ಧಿ ಭೂತಂ ತ್ರಿಲೊಕೇಶಂ ತಂ ನಮಾಮಿ ಬೃಹಸ್ಪತಿಂ||

ಈ ಶ್ಲೋಕವನ್ನು ಪ್ರತೀ ಗುರುವಾರ ಪಠಿಸಬೇಕು

ಟಾಪ್ ನ್ಯೂಸ್

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದಿಂದ ವಿದೇಶದಲ್ಲಿ ಯಕ್ಷಗಾನ ಪ್ರದರ್ಶನ

ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದಿಂದ ವಿದೇಶದಲ್ಲಿ ಯಕ್ಷಗಾನ ಪ್ರದರ್ಶನ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

banPuttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Puttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Kota ಮತದಾನ ಮಾಡಿ ಕೊನೆಯುಸಿರೆಳೆದ ಅಜ್ಜಿ!

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Daily Horoscope

Daily Horoscope; ಈ ರಾಶಿಯವರಿಗೆ ಏಳೂವರೆ ಶನಿಯ ಕೊನೆಯ ಹಂತದಲ್ಲಿ ಶುಭವಾಗುವ ಲಕ್ಷಣ

Horoscope Today: ಈ ರಾಶಿಯವರಿಗೆ ಅಕಸ್ಮಾತ್‌ ಧನಾಗಮ ಯೋಗ ಇರಲಿದೆ

Horoscope Today: ಈ ರಾಶಿಯವರಿಗೆ ಅಕಸ್ಮಾತ್‌ ಧನಾಗಮ ಯೋಗ ಇರಲಿದೆ

1-24-sunday

Horoscope: ಅವಿವಾಹಿತರಿಗೆ ಸರಿಯಾದ ಜೋಡಿ ಲಭಿಸುವ ಆಶೆ, ಆಭರಣ ವ್ಯಾಪಾರಿಗಳಿಗೆ ಲಾಭ

1-24-saturday

Daily Horoscope: ಉದ್ಯೋಗದಲ್ಲಿ ಜವಾಬ್ದಾರಿಗಳ ಸಮರ್ಥ ನಿರ್ವಹಣೆ, ನಿಗದಿತ ಕೆಲಸ ಮುಕ್ತಾಯ

Daily Horoscope

Daily Horoscope; ಈ ರಾಶಿಯವರಿಗಿಂದು ಉದ್ಯೋಗದಲ್ಲಿ ನಿರೀಕ್ಷೆ ಮೀರಿ ಪ್ರಗತಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದಿಂದ ವಿದೇಶದಲ್ಲಿ ಯಕ್ಷಗಾನ ಪ್ರದರ್ಶನ

ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದಿಂದ ವಿದೇಶದಲ್ಲಿ ಯಕ್ಷಗಾನ ಪ್ರದರ್ಶನ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

ನಾರಾಯಣ ಗುರುಗಳ ಪ್ರತಿಮೆ ಜಗತ್ತು ನೋಡುವಂತೆ ಮಾಡಿದ ಪ್ರಧಾನಿ ಮೋದಿ: ಸತೀಶ್‌ ಕುಂಪಲ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

Congress; ಕ್ಷೇತ್ರದ ಅಭಿವೃದ್ಧಿಗಾಗಿ ಪ್ರತ್ಯೇಕ ಪ್ರಣಾಳಿಕೆ: ಜಯಪ್ರಕಾಶ್‌ ಹೆಗ್ಡೆ

banPuttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Puttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.