ಅಭಿಪ್ರಾಯ ಸಂಗ್ರಹ ಮಧ್ಯೆಯೇ ಬಿ ಪ್ಲ್ರಾನ್‌?

ಅಭ್ಯರ್ಥಿಗಳ ಆಯ್ಕೆಯ ಹಿನ್ನೆಲೆಯಲ್ಲಿ ಹಲವು ಲೆಕ್ಕಾಚಾರಕ್ಕೆ ಮೊರೆ ಹೋದ ಬಿಜೆಪಿ ವರಿಷ್ಠರು

Team Udayavani, Apr 2, 2023, 7:42 AM IST

ಅಭಿಪ್ರಾಯ ಸಂಗ್ರಹ ಮಧ್ಯೆಯೇ ಬಿ ಪ್ಲ್ರಾನ್‌?

ಮಂಗಳೂರು: ಅಭ್ಯರ್ಥಿಗಳ ಆಯ್ಕೆಗೆ ಬಿಜೆಪಿಯು ಜಿಲ್ಲಾ ಶಕ್ತಿಕೇಂದ್ರಗಳ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿರುವ ಬೆನ್ನಲ್ಲೇ, ಚುನಾವಣೆ ಹತ್ತಿರವಾಗಿರುವ ಹಿನ್ನೆಲೆಯಲ್ಲಿ ಹಾಲಿ ಶಾಸಕರಿಗೇ ಮತ್ತೂಮ್ಮೆ ಅವಕಾಶ ನೀಡುವ ಬಿ ಪ್ಲ್ರಾನ್‌ ಗೆ ವರಿಷ್ಠರು ಮೊರೆ ಹೋಗುತ್ತಾರೆಯೇ ಎಂಬ ಪ್ರಶ್ನೆ ಪಕ್ಷದ ವಲಯದಲ್ಲಿ ಮೂಡಿದೆ.

ಈಗಾಗಲೇ ಎಲ್ಲ 224 ಕ್ಷೇತ್ರಗಳಲ್ಲಿ ಏಕಕಾಲದಲ್ಲಿ ಮಾ. 31ರಂದು ಬಿಜೆಪಿ ಶಕ್ತಿಕೇಂದ್ರ, ಮಹಾಶಕ್ತಿ ಕೇಂದ್ರ, ಮೋರ್ಚಾದವರಿಂದ ಅಭಿಪ್ರಾಯ ಸಂಗ್ರಹಿಸಲಾಗಿದೆ. ಈ ಸಂದರ್ಭದಲ್ಲಿ ಕೆಲವೆಡೆ ಅಭಿ ಪ್ರಾಯ ಸಂಗ್ರಹ ತಡವಾಯಿತು. ಇವೆಲ್ಲವೂ ಒಂದು ತಿಂಗಳ ಹಿಂದೆಯೇ ನಡೆಯಬೇಕಾಗಿತ್ತು ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿ ಹಾಲಿ ಶಾಸಕರನ್ನು ಬದಲಾಯಿಸುವ ಸಾಧ್ಯತೆ ಕಡಿಮೆ ಎನ್ನುತ್ತದೆ ಪಕ್ಷದ ಆಂತರಿಕ ವಲಯದ ಮೂಲಗಳು.
ಬಿಜೆಪಿ ಆಂತರಿಕ ಸಮೀಕ್ಷೆ ಪ್ರಕಾರ 90ರಿಂದ 105 ಸೀಟು ಗೆಲ್ಲಬಹುದು ಎಂದಿದೆ. ಜತೆಗೆ ಕರಾವಳಿಯಲ್ಲಿ ಉತ್ತಮ ಪ್ರದರ್ಶನದ ವಿಶ್ವಾಸವಿದೆ.

ಹೀಗಿರುವಾಗ ಅಭ್ಯರ್ಥಿಗಳ ಬದಲಾವಣೆ ಅಗತ್ಯವಿದೆಯೆ? ಒಂದು ವೇಳೆ ಬದಲಾಯಿಸಿದರೆ ಗೊಂದಲ ಸೃಷ್ಟಿಯಾಗುವುದೇ? ಅದನ್ನು ಸೀಮಿತ ದಿನಗಳಲ್ಲಿ ಸರಿಪಡಿಸಲು ಸಾಧ್ಯವೇ? ಇತ್ಯಾದಿ ಅಂಶಗಳನ್ನು ಇಟ್ಟುಕೊಂಡು ಹಿರಿಯ ನಾಯಕರು ಲೆಕ್ಕ ಹಾಕುತ್ತಿದ್ದಾರೆ ಎನ್ನಲಾಗಿದೆ.

ಆಂತರಿಕ ಸಮೀಕ್ಷೆಯ ಪ್ರಕಾರ ಪುತ್ತೂರಿನಲ್ಲಿ ಸ್ವಲ್ಪ ತ್ರಾಸದಾಯಕವಾದುದು ಎಂಬ ಅಭಿಪ್ರಾಯವಿದೆ. ಸುಳ್ಯ ಕ್ಷೇತ್ರದಲ್ಲೂ ಹಾಲಿ ಶಾಸಕರ ವಿರುದ್ಧವೂ ಕೆಲವು ಕಾರ್ಯಕರ್ತರ ಆಕ್ರೋಶ ವ್ಯಕ್ತವಾಗಿದೆ. ಆದರೆ ಹಿರಿಯ ನಾಯಕರ ಪ್ರಕಾರ ಇಲ್ಲಿ ಕಾರ್ಯಕರ್ತರಿಗೆ ಸಿಟ್ಟು ಬಿಟ್ಟರೆ ಮತದಾರರಿಗೆ ಇಲ್ಲ. ಇವೆರಡನ್ನು ಹೊರತುಪಡಿಸಿದರೆ ಉಳಿದೆಡೆ ವಿರೋಧ ಕಡಿಮೆ ಎಂಬ ಅಭಿಪ್ರಾಯವಿದೆ.

ಪರೋಕ್ಷ ಸೂಚನೆ?
ವರಿಷ್ಠರು ಇನ್ನೂ ಯಾರ ಹೆಸರನ್ನೂ ಪ್ರಕಟಿಸಿಲ್ಲ. ಹಾಗೆಂದು ಕ್ಷೇತ್ರಗಳಲ್ಲಿ ಪಕ್ಷದ ಪ್ರಚಾರ ನಿಂತಿಲ್ಲ. ಬಹುತೇಕ ಟಿಕೆಟ್‌ ಖಚಿತ ಎಂದೆನಿಸಿರುವ ಅಭ್ಯರ್ಥಿಗಳ ಪರ ಕಾರ್ಯಕರ್ತರು ಪ್ರಚಾರ ನಡೆಸುತ್ತಿದ್ದು, ಶಾಸಕರು ಗಣ್ಯರು, ಹಿರಿಯರನ್ನು ಭೇಟಿ ಮಾಡುತ್ತಿದ್ದಾರೆ. ಇದು ಚುನಾವಣೆಗೆ ತಯಾರಾಗಿ ಎಂಬ ವರಿಷ್ಠರ ಪರೋಕ್ಷ ಸೂಚನೆಯ ಪರಿಣಾಮ ಎನ್ನಲಾಗುತ್ತಿದೆ. ಹೆಸರು ಪ್ರಕಟವಾದ ಮೇಲೆ ಅಭ್ಯರ್ಥಿಗಳ ಮನೆ ಮನೆ ಭೇಟಿ ಅಧಿಕೃತವಾಗಿ ಪ್ರಾರಂಭವಾಗಲಿದೆ.

ದುಬಾರಿ ಆದೀತೆ?
ಸುಳ್ಯ, ಪುತ್ತೂರು ಕ್ಷೇತ್ರಗಳಲ್ಲಿ ಕಾಣಿಸಿದ ಬಿಕ್ಕ ಟ್ಟನ್ನು ಮುಂಚಿತವಾಗಿಯೇ ಹಿರಿಯ ನಾಯ ಕರು ಬಗೆಹರಿಸದಿರುವುದು ದುಬಾರಿಯಾಗಿ ಪರಿಣ ಮಿಸಬಹುದೇ ಎನ್ನುವ ಆತಂಕವೂ ಪಕ್ಷದ ಕಾರ್ಯಕರ್ತರಲ್ಲಿದೆ. ಮಂಗಳೂರು ಕ್ಷೇತ್ರ ದಲ್ಲೂ ಗುಂಪುಗಾರಿಕೆ ಇದ್ದು, ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿರುವುದೂ ಕಾರಣ. ಒಗ್ಗಟ್ಟಾಗಿ ಚುನಾ ವಣೆಗೆ ಹೋಗುವುದು ಬಿಟ್ಟು ಇಂಥ ಗುಂಪುಗಾರಿಕೆ ಸರಿಯಲ್ಲ ಎಂಬ ಅಭಿಪ್ರಾ ಯವೂ ಕಾರ್ಯಕರ್ತರಿಂದ ಕೇಳಿಬರುತ್ತಿದೆ.

 

ಟಾಪ್ ನ್ಯೂಸ್

EAR BUDS

Ear Buds: ಇಯರ್‌ ಬಡ್ಸ್‌ನಿಂದ ಶ್ರವಣಶಕ್ತಿ ನಷ್ಟ!

indigo

Indigo ದಿಂದ ಆಫ್ರಿಕಾಕ್ಕೆ ವಿಮಾನ

manipur violance

Manipur ದ 5 ಜಿಲ್ಲೆಗಳಲ್ಲಿ ಕರ್ಫ್ಯೂ ಸಡಿಲಿಕೆ 

rahul gandhi 1

Rahul Gandhi: ಮುಸ್ಲಿಂ ಲೀಗ್‌ ಜಾತ್ಯತೀತ ಎಂದ ರಾಹುಲ್‌!

GOVT EMPLOYEEES

Rajasthan ಸರ್ಕಾರಿ ಉದ್ಯೋಗಿಗಳಿಗೆ ವೇತನಕ್ಕೂ ಮೊದಲೇ ಮುಂಗಡ !

OBC

ವೀರಶೈವ- ಲಿಂಗಾಯತ ಸಮುದಾಯದಲ್ಲಿರುವ ಎಲ್ಲ ಉಪ ಪಂಗಡಗಳನ್ನೂ OBC ಪಟ್ಟಿಗೆ ಸೇರ್ಪಡೆಗೆ ಆಗ್ರಹ

D K SHI 1

ಡಿಕೆಶಿ: CBI ತನಿಖೆಗೆ ತಡೆ ವಿಸ್ತರಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

police siren

ಸೋಮೇಶ್ವರ: ನೈತಿಕ ಪೊಲೀಸ್‌ಗಿರಿ; ಆರು ಮಂದಿಯ ಬಂಧನ

death

ಸುಬ್ರಹ್ಮಣ್ಯ: ಕುಸಿದು ಬಿದ್ದು ವಿದ್ಯಾರ್ಥಿನಿ ಸಾವು

power lines

kadaba: ಲೈನ್‌ಮನ್‌ ಸಾವು ಪ್ರಕರಣ: ಇಬ್ಬರು ಮೆಸ್ಕಾಂ ಅಧಿಕಾರಿಗಳ ವಿರುದ್ಧ ಪ್ರಕರಣ

1-sddasd

SNM ಪಾಲಿಟೆಕ್ನಿಕ್ NSS ನವರಿಂದ ಬಡವರ ಮನೆಗಳಿಗೆ ಕಾಯಕಲ್ಪ

MLA Vedavyasa Kamath

ಪಾಲಿಕೆ ವ್ಯಾಪ್ತಿಯ ಅನುದಾನ ತಡೆಯಿಂದ ತೀವ್ರ ಸಮಸ್ಯೆ: ಶಾಸಕ ವೇದವ್ಯಾಸ ಕಾಮತ್

MUST WATCH

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

ಹೊಸ ಸೇರ್ಪಡೆ

EAR BUDS

Ear Buds: ಇಯರ್‌ ಬಡ್ಸ್‌ನಿಂದ ಶ್ರವಣಶಕ್ತಿ ನಷ್ಟ!

indigo

Indigo ದಿಂದ ಆಫ್ರಿಕಾಕ್ಕೆ ವಿಮಾನ

manipur violance

Manipur ದ 5 ಜಿಲ್ಲೆಗಳಲ್ಲಿ ಕರ್ಫ್ಯೂ ಸಡಿಲಿಕೆ 

rahul gandhi 1

Rahul Gandhi: ಮುಸ್ಲಿಂ ಲೀಗ್‌ ಜಾತ್ಯತೀತ ಎಂದ ರಾಹುಲ್‌!

GOVT EMPLOYEEES

Rajasthan ಸರ್ಕಾರಿ ಉದ್ಯೋಗಿಗಳಿಗೆ ವೇತನಕ್ಕೂ ಮೊದಲೇ ಮುಂಗಡ !