ಆಡಳಿತ ಯಂತ್ರವಿನ್ನು ಚುನಾವಣ ಕಾರ್ಯದಲ್ಲಿ ವ್ಯಸ್ತ: ನಾಗರಿಕ ಸೇವೆಯಲ್ಲಿ ವ್ಯತ್ಯಯ ಸಂಭವ


Team Udayavani, Mar 30, 2023, 7:35 AM IST

ಆಡಳಿತ ಯಂತ್ರವಿನ್ನು ಚುನಾವಣ ಕಾರ್ಯದಲ್ಲಿ ವ್ಯಸ್ತ: ನಾಗರಿಕ ಸೇವೆಯಲ್ಲಿ ವ್ಯತ್ಯಯ ಸಂಭವ

ಮಂಗಳೂರು: ಚುನಾವಣೆ ಘೋಷಣೆಯಾಗುತ್ತಿದ್ದಂತೆ ಇಡೀ ಆಡಳಿತ ಯಂತ್ರ ಚುನಾವಣ ಪ್ರಕ್ರಿಯೆಯತ್ತ ಗಮನ ಹರಿಸಿದೆ. ಒಂದೆರಡು ತಿಂಗಳುಗಳಿಂದಲೇ ಪೂರಕ ಕೆಲಸಗಳು ನಡೆಯುತ್ತಿದ್ದು, ಈಗ ನೀತಿ ಸಂಹಿತೆ ಜಾರಿಯಾಗಿರುವುದರಿಂದ ಅಧಿಕಾರಿಗಳು, ಸರಕಾರಿ ಸಿಬಂದಿ ಇನ್ನು ಅದರಲ್ಲೇ ವ್ಯಸ್ತರಾಗಲಿದ್ದಾರೆ.

ಜಿಲ್ಲಾ ಚುನಾವಣಾಧಿಕಾರಿಯವರ ಅಧೀನದಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ಉಪ ವಿಭಾಗಾಧಿಕಾರಿಗಳು, ತಹಶೀಲ್ದಾ ರರು, ಮಂಗಳೂರು ಪಾಲಿಕೆಯ ಅಧಿ ಕಾರಿಗಳಿಗೆ ವಿವಿಧ ಹೊಣೆ ವಹಿಸಲಾಗಿದೆ.

ರಿಟರ್ನಿಂಗ್‌ ಅಧಿಕಾರಿ, ಸಹಾಯಕ ರಿಟರ್ನಿಂಗ್‌ ಅಧಿಕಾರಿಗಳಾಗಿ ಹಿರಿಯ ಅಧಿಕಾರಿಗಳನ್ನು ನಿಯೋಜಿಸಿದರೆ ಮಧ್ಯಮ ಸ್ತರದ ಅಧಿಕಾರಿಗಳನ್ನು ಸೆಕ್ಷನ್‌ ಅಧಿಕಾರಿ ಗಳನ್ನಾಗಿ, ನಗದು ವಶ ತಂಡ, ದೂರು ನಿಗಾ ಸಮಿತಿ, ಮಾಧ್ಯಮ ನಿಗಾ, ಸಾಮಾಜಿಕ ಜಾಲತಾಣ ನಿಗಾ, ಫ್ಲೆ$çಯಿಂಗ್‌ ಸ್ಕ್ಯಾಡ್‌ಗಳಲ್ಲಿ ನಿಯೋಜಿಸಲಾಗಿದೆ. ಸ್ವೀಪ್‌ ವಿಭಾಗ, ತರಬೇತಿ, ಇವಿಎಂ ನಿರ್ವಹಣೆ, ಕಾನೂನು ಸುವ್ಯವಸ್ಥೆ ನಿರ್ವಹಣೆ ಇತ್ಯಾದಿಗೆ 15ಕ್ಕೂ ಅಧಿಕ ಉಪಸಮಿತಿಗಳನ್ನು ರಚಿಸಲಾಗಿದೆ.

ಇನ್ನೆರಡು ತಿಂಗಳು ಚುನಾವಣ ಕೆಲಸ ಗಳೇ ಇರುವುದರಿಂದ ಕಂದಾಯ, ಮಹಾ ನಗರ ಪಾಲಿಕೆ ಸೇರಿದಂತೆ ಸ್ಥಳೀಯಾಡಳಿತ ಸಂಸ್ಥೆಗಳ ಅನೇಕ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆಗಳಿವೆ.

ತಾಲೂಕು ಕಚೇರಿಗಳಲ್ಲಿ ಜಾತಿ ಪ್ರಮಾಣ ಪತ್ರ, ಪಹಣಿ ಪತ್ರ ಖಾತೆ ಬದಲಾವಣೆ, ಆದಾಯ ಪ್ರಮಾಣ ಪತ್ರ, ತಹಸೀಲ್ದಾರ್‌, ರೆವಿನ್ಯೂ ಇನ್‌ಸ್ಪೆಕ್ಟರ್‌ ಸಹಿ ಹಾಕಬೇಕಾದ ವಿವಿಧ ಎನ್‌ಒಸಿಗಳು ಇತ್ಯಾದಿ ಪಡೆಯುವುದು ಬಹುತೇಕ ಕಷ್ಟಸಾಧ್ಯ.

ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತ್‌ಗಳ ಲ್ಲೂ ಕಟ್ಟಡ ಪರವಾನಿಗೆ ಪಡೆಯು ವುದು, ನೀರು, ಒಳಚರಂಡಿ ಸಂಬಂ ಧಿಸಿದ ದೂರು ದುಮ್ಮಾನಗಳನ್ನು ಬಗೆಹರಿ ಸಲು ಅಧಿಕಾರಿಗಳು ಸಿಗುವುದು ತುಸು ಕಷ್ಟ. ಇನ್ನು ಮುಂದೆ ಅಧಿಕಾರಿಗಳಿಗೆ ಕರ್ತವ್ಯದ ಜತೆಯಲ್ಲೇ ತರಬೇತಿ, ಸಭೆಗಳು ನಿರಂತರವಾಗಿ ನಡೆಯುತ್ತಲೇ ಇರಲಿವೆ.ಅದರ ನಡುವೆ ಅಧಿಕಾರಿಗಳು ಚುನಾವಣೆ ನೆಪ ಹೇಳಿ ಕೆಲಸ ಮಾಡದಿರುವ ಸಾಧ್ಯತೆಗಳೂ ಇವೆ. ಹಾಗಾಗಿ ತುರ್ತು ಕೆಲಸಗಳಿಗಾಗಿ ಒಂದು ಡೆಸ್ಕ್ ಹಾಗೂ ಅಧಿಕಾರಿಗಳನ್ನು ಮಹಾನಗರಪಾಲಿಕೆಯಲ್ಲಿ ನಿಯೋಜನೆ ಮಾಡಬೇಕು ಎನ್ನುತ್ತಾರೆ ನಾಗರಿಕ ಹಿತರಕ್ಷಣ ವೇದಿಕೆಯ ಜಿ. ಹನುಮಂತ ಕಾಮತ್‌.

ಕುಡಿಯುವ ನೀರಿನ ಬಿಸಿ
ಚುನಾವಣೆಗೆ ಈ ಬಾರಿ ಕುಡಿಯುವ ನೀರಿನ ಬಿಸಿಯೂ ತಟ್ಟುವ ಸಾಧ್ಯತೆ ದಟ್ಟವಾಗಿದೆ. ಕಳೆದ ನಾಲ್ಕಾರು ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮಾರ್ಚ್‌ನಲ್ಲಿ ಮಳೆಯೇ ಆಗದಿರುವುದು ಕುಡಿಯುವ ನೀರಿನ ತತ್ವಾರ ಹೆಚ್ಚಲು ಕಾರಣ. ಇಂತಹ ಜನರ ಸಮಸ್ಯೆಗಳಿಗೆ ಸ್ಪಂದಿಸುವುದಕ್ಕೆ ಅಧಿಕಾರಿಗಳಿಲ್ಲದೆ ಹೋದರೂ ಅದು ಚುನಾವಣೆಗೆ ಹಿನ್ನಡೆ ತರುವ ಸಾಧ್ಯತೆಯೂ ಇಲ್ಲದಿಲ್ಲ.

ಅಧಿಕಾರಿಗಳಿಗೆ ಚುನಾವಣ
ಕೆಲಸ ಇದ್ದರೂ ಅವರು ದೈನಂದಿನ ಜನರ ಸೇವೆಗಳನ್ನು ಕೈಬಿಡು ವಂತಿಲ್ಲ, ಈ ಬಗ್ಗೆ ನಾನು ಎಲ್ಲ ಅಧಿಕಾರಿ ಗಳಿಗೆ ಸೂಚನೆ ನೀಡಲಿ ದ್ದೇನೆ. ನೀರಿನ ಸಮಸ್ಯೆ ಇರ ಬಹುದು, ಯಾವುದೇ ಇತರ ಸೇವೆಗಳಿರ ಬಹುದು, ಮಂಗಳೂರು ಮಹಾನಗರ ಪಾಲಿಕೆಯಲ್ಲೂ ಪ್ರತ್ಯೇಕ ಕೌಂಟರ್‌ ಮಾಡುವಂತೆ ಸೂಚಿಸಿದ್ದೇನೆ.
– ರವಿಕುಮಾರ್‌ ಎಂ.ಆರ್‌, ದ.ಕ ಜಿಲ್ಲಾಧಿಕಾರಿ

ಯಾವತ್ತಿನಂತೆ ಚುನಾವಣ ಕರ್ತವ್ಯದಲ್ಲಿ ಸರಕಾರಿ ಅಧಿಕಾರಿಗಳು ಪಾಲ್ಗೊಳ್ಳಬೇಕಾಗುತ್ತದೆ. ಕೆಲವು ಸೇವೆಗಳಲ್ಲಿ ವ್ಯತ್ಯಯ ಆಗುತ್ತದೆ ನಿಜ, ಆದಷ್ಟೂ ಜನರಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ವ್ಯವಸ್ಥೆ ಮಾಡಲಾಗು ವುದು.
ಚನ್ನಬಸಪ್ಪ, ಆಯುಕ್ತರು, ಮಂಗಳೂರು ಮಹಾನಗರಪಾಲಿಕೆ

ಟಾಪ್ ನ್ಯೂಸ್

amithab RAJANIKANTH

32 ವರ್ಷಗಳ ಬಳಿಕ ಒಂದಾಗುತ್ತಿದ್ದಾರೆ ಬಿಗ್‌ ಬಿ – ತಲೈವಾ

1rewe

Vijayapura: ಕರಿ ಓಟದ ಹೋರಿ ಇರಿತ; 8 ಜನರಿಗೆ ಗಾಯ

1-sadsadsad

WTC title ; ಆಸ್ಟ್ರೇಲಿಯ ರಣತಂತ್ರ: ಭಾರತಕ್ಕೆ ಬೃಹತ್ ಗುರಿ ನೀಡಿ ಶಾಕ್

arrest-25

Mumbai; 1 ಕೋಟಿ ರೂ.ಮೌಲ್ಯದ ಮಾದಕ ವಸ್ತು ಸಹಿತ ವಿದೇಶಿ ವ್ಯಕ್ತಿ ಸೆರೆ

1-wewerrwe

Modi ಸರಕಾರದಲ್ಲಿ ಭಾರತದ ಸಾಲ 155 ಲಕ್ಷ ಕೋಟಿ ರೂ.ಗೆ ಏರಿದೆ: ಕಾಂಗ್ರೆಸ್

1-sadadsad

Opposition ಮೈತ್ರಿ ಕೂಟದಿಂದ ದೂರ ಉಳಿಯುವ ಸೂಚನೆ ನೀಡಿದ ಒಮರ್ ಅಬ್ದುಲ್ಲಾ

ಬೆಂಗಳೂರು ಕಾರ್ಯಕ್ರಮ ರದ್ದುಮಾಡಿ ಕುತ್ತಾರು ಕೊರಗಜ್ಜಕ್ಷೇತ್ರದಲ್ಲಿ ಮುಹೂರ್ತ ಮಾಡಿದ ಚಿತ್ರತಂಡ

ಬೆಂಗಳೂರು ಕಾರ್ಯಕ್ರಮ ರದ್ದುಮಾಡಿ ಕುತ್ತಾರು ಕೊರಗಜ್ಜಕ್ಷೇತ್ರದಲ್ಲಿ ಮುಹೂರ್ತಮಾಡಿದ ಚಿತ್ರತಂಡ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೆಂಗಳೂರು ಕಾರ್ಯಕ್ರಮ ರದ್ದುಮಾಡಿ ಕುತ್ತಾರು ಕೊರಗಜ್ಜಕ್ಷೇತ್ರದಲ್ಲಿ ಮುಹೂರ್ತ ಮಾಡಿದ ಚಿತ್ರತಂಡ

ಬೆಂಗಳೂರು ಕಾರ್ಯಕ್ರಮ ರದ್ದುಮಾಡಿ ಕುತ್ತಾರು ಕೊರಗಜ್ಜಕ್ಷೇತ್ರದಲ್ಲಿ ಮುಹೂರ್ತಮಾಡಿದ ಚಿತ್ರತಂಡ

PU ಫೇಲಾದ ಪ್ರಿಯಾಂಕ ಖರ್ಗೆ ಎಂಜಿನಿಯರ್ ಸೂಲಿಬೆಲೆಯ ಪದವಿ ಕೇಳುತ್ತಿದ್ದಾರೆ: ಭರತ್ ಶೆಟ್ಟಿ

PU ಫೇಲಾದ ಪ್ರಿಯಾಂಕ ಖರ್ಗೆ ಎಂಜಿನಿಯರ್ ಸೂಲಿಬೆಲೆಯ ಪದವಿ ಕೇಳುತ್ತಿದ್ದಾರೆ: ಭರತ್ ಶೆಟ್ಟಿ

Mangaluru: ಎಂಡಿಎಂಎ ಮಾದಕ ವಸ್ತು ಹೊಂದಿದ ಇಬ್ಬರು ಆರೋಪಿಗಳ ಸೆರೆ

Mangaluru: ಎಂಡಿಎಂಎ ಮಾದಕ ವಸ್ತು ಹೊಂದಿದ ಇಬ್ಬರು ಆರೋಪಿಗಳ ಸೆರೆ

arrest

ಮಟ್ಕಾ ಜುಗಾರಿ: 25 ಮಂದಿ ಸೆರೆ

ಉಳ್ಳಾಲ: 24 ಪುಟಗಳ ಡೆತ್ ನೋಟ್ ಬರೆದಿಟ್ಟು ನೂತನ ಮನೆಯಲ್ಲೇ ಆತ್ಮಹತ್ಯೆಗೆ ಶರಣಾದ ಯುವತಿ

ಉಳ್ಳಾಲ: 24 ಪುಟಗಳ ಡೆತ್ ನೋಟ್ ಬರೆದಿಟ್ಟು ನೂತನ ಮನೆಯಲ್ಲೇ ಆತ್ಮಹತ್ಯೆಗೆ ಶರಣಾದ ಯುವತಿ

MUST WATCH

udayavani youtube

ಮನೆಯಲ್ಲಿಯೇ ಮಾಡಿ ರುಚಿಕರವಾದ ಎಗ್‌ ಘೀ ರೋಸ್ಟ್‌

udayavani youtube

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

udayavani youtube

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

udayavani youtube

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

ಹೊಸ ಸೇರ್ಪಡೆ

1-sadasd

Sirsi ಭಾರಿ ಮೌಲ್ಯದ ನಾಟಾ ಅಕ್ರಮ ಸಾಗಾಟ; ನಾಲ್ವರ ಬಂಧನ

amithab RAJANIKANTH

32 ವರ್ಷಗಳ ಬಳಿಕ ಒಂದಾಗುತ್ತಿದ್ದಾರೆ ಬಿಗ್‌ ಬಿ – ತಲೈವಾ

1rewe

Vijayapura: ಕರಿ ಓಟದ ಹೋರಿ ಇರಿತ; 8 ಜನರಿಗೆ ಗಾಯ

1-adsd

Guarantee Scheme ಟೀಕಿಸಿ ಸ್ಟೇಟಸ್; ಶಿಕ್ಷಕ- ಶಿಕ್ಷಕಿಗೆ ನೋಟಿಸ್

1-sadsadsad

WTC title ; ಆಸ್ಟ್ರೇಲಿಯ ರಣತಂತ್ರ: ಭಾರತಕ್ಕೆ ಬೃಹತ್ ಗುರಿ ನೀಡಿ ಶಾಕ್