ಫೆ.6 ರಿಂದ ಕಾಂಗ್ರೆಸ್ ಕರಾವಳಿ ಪ್ರಜಾಧ್ವನಿ ಯಾತ್ರೆ
Team Udayavani, Feb 4, 2023, 2:14 PM IST
ಉಡುಪಿ:ಕರಾವಳಿಯ 5 ಜಿಲ್ಲೆಯ 26 ಕ್ಷೇತ್ರಗಳಲ್ಲಿ ಪ್ರಜಾಧ್ವನಿಯಾತ್ರೆ ನಡೆಯಲಿದೆ. ದ. ಕ. ಜಿಲ್ಲೆಯ ಸುಳ್ಯದಲ್ಲಿ ಪ್ರಜಾಧ್ವನಿ ಯಾತ್ರೆಗೆ ಫೆ. 5ರ ರವಿವಾರ ಚಾಲನೆ ನೀಡಲಾಗುವುದು ಎಂದು ಶಾಸಕ ಆರ್.ವಿ.ದೇಶಪಾಂಡೆ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಫೆ. 6 ಮೂಡುಬಿದಿರೆ, ಫೆ. 7 ಕಾಪು, ಫೆ. 8ಕುಂದಾಪುರ, ಫೆ.9 ಶೃಂಗೇರಿಯಲ್ಲಿ ನಡೆಯಲಿದೆ. ಆಯಾ ಸ್ಥಳಗಳಲ್ಲಿ ಸಭೆ, ಸಮಾರಂಭ, ಅಭಿವೃದ್ಧಿ ಚರ್ಚೆಗಳು ನಡೆಯಲಿವೆ. ಕರಾವಳಿ ಪ್ರಜಾಧ್ವನಿಯಾತ್ರೆ ಉಡುಪಿ, ದ.ಕ., ಉತ್ತರ ಕನ್ನಡ,ಚಿಕ್ಕಮಗಳೂರು,ಕೊಡಗು ಜಿಲ್ಲೆಗಳಲ್ಲಿ ನಡೆಯಲಿದೆ ಎಂದರು.
ಬಿಜೆಪಿ ಪಕ್ಷ ಹಿಂದಿನ ಚುನಾವಣೆಯಲ್ಲಿ ನೀಡಿದಂತಹ ಯಾವುದೇ ಆಶ್ವಾಸನೆಗಳನ್ನುಈಡೇರಿಸಿಲ್ಲ. ರಚನಾತ್ಮಕ ಕೆಲಸಗಳೂ ನಡೆದಿಲ್ಲ. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಹಲವಾರು ಭಾಗ್ಯಗಳನ್ನು ನೀಡಲಾಗಿತ್ತು. ಆದರೆ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ನಿರುದ್ಯೋಗ ಸಮಸ್ಯೆ, ಬೆಲೆ ಏರಿಕೆ ಸಹಿತ ಮಧ್ಯಮ ವರ್ಗದವರಿಗೆ ಜೀವನ ನಡೆಸುವುದೇ ಕಷ್ಟಕರವಾಗಿದೆ ಎಂದು ಬಿಜೆಪಿ ವಿರುದ್ಧ ಕಿಡಿ ಕಾರಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಂಗಳೂರು ಗ್ರಾಮಾಂತರ: ಕಮಲ ಅಭ್ಯರ್ಥಿಗಳ ಆಯ್ಕೆ ಕುತೂಹಲ
ಕಾಂಗ್ರೆಸ್ 2ನೇ ಪಟ್ಟಿ ಆಯ್ಕೆ ಕಬ್ಬಿಣದ ಕಡಲೆ?
ಸುಳ್ಯ ಕ್ಷೇತ್ರದಲ್ಲಿ ಕೃಷ್ಣಪ್ಪ ಅವರಿಗೆ ʼಕೈʼ ಟಿಕೆಟ್ ನೀಡಿದಕ್ಕೆ ಕಾರ್ಯಕರ್ತರ ವಿರೋಧ
ನೀತಿ ಸಂಹಿತೆ ಹಿನ್ನೆಲೆ: ಸರ್ಕಾರಿ ಬಿಟ್ಟು ಖಾಸಗಿ ಕಾರಿನಲ್ಲಿ ಪ್ರಯಾಣಿಸಿದ ಸಿದ್ದರಾಮಯ್ಯ
ಡೈಲಿಡೋಸ್:ಅಗ್ನಿ ಪರೀಕ್ಷೆ ಕಾಲ ಮುಗೀತು ಇನ್ನು ಹೊಸ ಪರೀಕ್ಷೆ-ಕುದುರೆಯೂ ಇಲ್ಲ,ಅಗ್ನಿಯೂ ಇಲ್ಲ