
ಬೋಗಸ್ ಕಾರ್ಡ್ ಗಳ ಬಿಡುಗಡೆ ಸರಣಿ ಆರಂಭ : ಸಿಎಂ ಬೊಮ್ಮಾಯಿ ಲೇವಡಿ
Team Udayavani, Mar 20, 2023, 8:40 PM IST

ಹುಬ್ಬಳ್ಳಿ: ಚುನಾವಣೆ ಸಮೀಪಿಸುತ್ತಿದ್ದಂತೆ ಕಾಂಗ್ರೆಸ್ ಬೋಗಸ್ ಕಾರ್ಡ್ ಗಳ ಬಿಡುಗಡೆ ಸರಣಿ ಆರಂಭಿಸಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾಂಗ್ರೆಸ್ ವಿರುದ್ಧ ವ್ಯಂಗ್ಯವಾಡಿದರು.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ಸಿಗರು ತಮ್ಮ ಆಡಳಿತ ರಾಜ್ಯಗಳಲ್ಲಿ ಜನರಿಗೆ ಆಶ್ವಾಸನೆ ನೀಡಿದಂತೆ ಯೋಜನೆಗಳನ್ನು ಎಷ್ಟರ ಮಟ್ಟಿಗೆ ಅನುಷ್ಠಾನಗೊಳಿಸಿದ್ದಾರೆ ಎಂಬುವದರ ಬಗ್ಗೆ ಶೀಘ್ರವೇ ಪಟ್ಟಿ ಬಿಡುಗಡೆ ಮಾಡುತ್ತೇನೆ. ಅಧಿಕಾರದ ಹತಾಶೆಯಿಂದ ಆಗಲಾರದ ಬೋಗಸ್ ಗ್ಯಾರಂಟಿ ಕಾರ್ಡ್ ಗಳನ್ನು ಬಿಡುಗಡೆ ಮಾಡುತ್ತಿದ್ದಾರೆ. ಇದು ಚುನಾವಣೆಗಾಗಿ ಮಾಡುತ್ತಿರುವ ಬೋಗಸ್ ಕಾರ್ಡ್ ಸರಣಿಯಾಗಿದೆ. ಜನರು ಇದನ್ನು ನಂಬುವುದಿಲ್ಲ. ಈಗಾಗಲೇ ಮೂರನ್ನು ಬಿಟ್ಟಿದೆ. ಈಗ ನಾಲ್ಕನೆಯ ಬೋಗಸ್ ಕಾರ್ಡ್ ಬಿಡುಗಡೆ ಮಾಡಿದೆ ಎಂದರು.
ರಾಹುಲ್ ಗಾಂಧಿಗೆ ದೇಶದ ಬಗ್ಗೆ ಎಷ್ಟು ಪ್ರೀತಿ ಇದೆ ಎಂಬುದು ಎಲ್ಲರಿಗೂ ಗೊತ್ತು. ಹೊರ ದೇಶಕ್ಕೆ ಹೋದಾಗ ನಾಡಿನ ಬಗ್ಗೆ ಕೀಳಾಗಿ ಮಾತನಾಡುತ್ತಾರೆ. ಇವರಿಗೆ ದೇಶದ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಅವರು ಕರ್ನಾಟಕದ ಬಗ್ಗೆ ಏನು ಮಾತನಾಡುತ್ತಾರೆ ಎಂದು ಕುಟುಕಿದರು.
ಉರಿಗೌಡ, ನಂಜೇಗೌಡ ಆಧಾರ ಕಾರ್ಡ್ ಕುರಿತು ಮಾಧ್ಯಮದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಸಂಶೋಧನೆ ಆಗಲಿ. ಆಗ ಎಲ್ಲವೂ ಹೊರಬೀಳಿಲಿದೆ ಎಂದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ
ಹೊಸ ಸೇರ್ಪಡೆ

ಇದು ಯಾವ ರೀತಿಯ ಪ್ರೀತಿ? ರಾಹುಲ್ ‘ಮೊಹಬ್ಬತ್ ಕಿ ದುಕಾನ್’ ಹೇಳಿಕೆಗೆ ಸ್ಮೃತಿ ತಿರುಗೇಟು

ChatGPT: ಪ್ರಧಾನಿ ಮೋದಿ ಭೇಟಿಯಾದ ಚಾಟ್ ಜಿಪಿಟಿ ಸೃಷ್ಟಿಕರ್ತ ಸ್ಯಾಮ್ ಆಲ್ಟ್ಮನ್

Singer arrested : ಅಪ್ರಾಪ್ತೆ ಮೇಲೆ ಅತ್ಯಾಚಾರಗೈದು,ಆಕ್ಷೇಪಾರ್ಹ ಫೋಟೋ ಪೋಸ್ಟ್; ಗಾಯಕ ಬಂಧನ

HUNSUR: ಜಿಂಕೆಯನ್ನು ಬೇಟೆಯಾಡಿ ಮಾಂಸ ತಿನ್ನುತ್ತಿರುವ ಚಿರತೆ; ವಿಡಿಯೋ

ಟಿಕೆಟ್ ಖಚಿತ, ಕಾಮಿಡಿ ಉಚಿತ, ಖುಷಿ ನಿಶ್ಚಿತ!: ‘ದರ್ಬಾರ್’ ಸಿನಿಮಾ ಇಂದು ಬಿಡುಗಡೆ