ಶಾಮನೂರು ಶಿವಶಂಕರಪ್ಪ ವಿರುದ್ಧ ಯುವ ಪಡೆ ಸೆಡ್ಡು

Team Udayavani, Mar 31, 2023, 6:32 AM IST

ಶಾಮನೂರು ಶಿವಶಂಕರಪ್ಪ ವಿರುದ್ಧ ಯುವ ಪಡೆ ಸೆಡ್ಡು

ದಾವಣಗೆರೆ: ಕಾಂಗ್ರೆಸ್‌ ಪಕ್ಷದ ಅತ್ಯಂತ ಹಿರಿಯ ರಾಜಕಾರಣಿ, 91 ವರ್ಷದ ಡಾ| ಶಾಮನೂರು ಶಿವಶಂಕರಪ್ಪ ಈ ಬಾರಿಯೂ ದಾವಣಗೆರೆ ದಕ್ಷಿಣ ವಿಧಾನಸಭೆ ಕ್ಷೇತ್ರದ ಚುನಾವಣ ಆಖಾಡದಲ್ಲಿ ಜಂಗೀ ಕುಸ್ತಿಗೆ ಇಳಿಯಲಿದ್ದಾರೆ. ಕಾಂಗ್ರೆಸ್‌ ಹಿರಿಯಜ್ಜನ ವಿರುದ್ಧ ಸೆಣಸಾಡಲು ಎದುರಾಳಿ ಪಕ್ಷಗಳಿಂದ ಯುವಕರ ಪಡೆ ಉತ್ಸಾಹ ತೋರುತ್ತಿರುವುದು ವಿಶೇಷ.
ಶಾಮನೂರು ಶಿವಶಂಕರಪ್ಪ ಅವರಿಗೆ ನಿರೀಕ್ಷೆಯಂತೆ ಕಾಂಗ್ರೆಸ್‌ನ ಮೊದಲ ಪಟ್ಟಿಯಲ್ಲಿಯೇ ಟಿಕೆಟ್‌ ಘೋಷಣೆ ಯಾಗಿದೆ. ಪ್ರಬಲ ಪ್ರತಿಸ್ಪರ್ಧಿ ಬಿಜೆಪಿ ಕಾದು ನೋಡುವ ತಂತ್ರ ಅನುಸರಿಸುತ್ತಿದ್ದು ಪಕ್ಷ ಯಾರಿಗೇ ಟಿಕೆಟ್‌ ನೀಡಿ ದರೂ ಅವರು ಶಾಮನೂರು ಶಿವಶಂಕರಪ್ಪ ಅವರಿಗಿಂತ ಕಿರಿಯರೇ ಆಗಿರುತ್ತಾರೆ. ಹೀಗಾಗಿ ಈ ಕ್ಷೇತ್ರ ಹಿರಿಯ- ಕಿರಿಯರ ನಡುವಿನ ಪೈಪೋಟಿಗೆ ಸಾಕ್ಷಿಯಾಗಲಿದೆ.

ಶಾಮನೂರು ಅಜ್ಜನ ವಿರುದ್ಧ ಸೆಣಸಾಡಲು ಬಿಜೆಪಿಯಲ್ಲಿ ಒಂದು ದೊಡ್ಡ ಯುವಪಡೆಯೇ ತುದಿಗಾಲಲ್ಲಿ ನಿಂತಿದೆ. ಟಿಕೆಟ್‌ಗಾಗಿ ಯುವಕರು ತಮ್ಮ ತಮ್ಮಲ್ಲಿಯೇ ಪೈಪೋಟಿ ನಡೆಸಿದ್ದು ಬಿಜೆಪಿ ಇನ್ನೂ ಅಧಿಕೃತವಾಗಿ ಟಿಕೆಟ್‌ ಘೋಷಿಸಿಲ್ಲ. ಹಿರಿಯಜ್ಜನ ವಿರುದ್ಧ ಸೋತರೂ, ಗೆದ್ದರೂ ಅದೊಂದು ಸಾಧನೆ (ಗೆದ್ದರೆ ಕಾಂಗ್ರೆಸ್‌ನ ಹಿರಿತಲೆಯನ್ನು ಸೋಲಿಸಿದ ಸಾಧನೆ, ಸೋತರೆ ಹಿರಿಯರನ್ನು ಗೆಲ್ಲಿಸಿದ ಹೆಮ್ಮೆ) ಎಂಬ ಸಮರ್ಥನೆಯ ಭಾವವೇ ಈ ಟಿಕೆಟ್‌ ಪೈಪೋಟಿಗೆ ಕಾರಣವಾಗಿದೆ. ಪಕ್ಷ ಯಾರಿಗೆ ಮಣೆ ಹಾಕುತ್ತದೆ ಎಂಬುದು ಕುತೂಹಲ ಕೆರಳಿಸಿದೆ.
91 ವರ್ಷದ ಶಾಮನೂರು ಶಿವಶಂಕರಪ್ಪ ಕ್ಷೇತ್ರ ಪುನರ್‌ ವಿಂಗಡಣೆ ಬಳಿಕ 2008ರಲ್ಲಿ ಅಸ್ತಿತ್ವಕ್ಕೆ ಬಂದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸತತ ಮೂರು ಬಾರಿ ಗೆಲುವು ಸಾಧಿಸಿ ಈಗ ನಾಲ್ಕನೇ ಬಾರಿ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

ಯುವ ಪಡೆಯಲ್ಲಿ ಪೈಪೋಟಿ: ಇಳಿವಯಸ್ಸಿನ ಶಾಮನೂರು ಶಿವಶಂಕರಪ್ಪ ವಿರುದ್ಧ ಚುನಾವಣ ಕಣದಲ್ಲಿ ಕಾದಾಡಲು ಬಿಜೆಪಿ ಯುವ ಮುಖಂಡರಾದ ಯಶವಂತರಾವ್‌ ಜಾಧವ್‌ (ಜಾಧವ್‌ ಈ ಹಿಂದೆ ಶಾಮನೂರು ವಿರುದ್ಧ ಸ್ಪರ್ಧಿಸಿ ಸೋತಿದ್ದಾರೆ), ಬಿ.ಜೆ.ಅಜಯಕುಮಾರ್‌, ಶ್ರೀನಿವಾಸ ದಾಸಕರಿಯಪ್ಪ, ರಾಜನಹಳ್ಳಿ ಶಿವಕುಮಾರ್‌, ಆನಂದಪ್ಪ ಟಿಕೆಟ್‌ ನಿರೀಕ್ಷೆಯಲ್ಲಿದ್ದಾರೆ. ಕ್ಷೇತ್ರದಲ್ಲಿ ಜೆಡಿಎಸ್‌ ಸಹಿತ ಇನ್ನಿತರ ರಾಜಕೀಯ ಪಕ್ಷಗಳಿಂದಲೂ ಪ್ರಬಲ ಪ್ರತಿಸ್ಪರ್ಧಿಗಳಾಗಿ ಯುವಕರೇ ಕಣಕ್ಕಿಳಿಯುವ ಸಾಧ್ಯತೆ ಇದೆ. ಶಾಮನೂರು ಶಿವಶಂಕರಪ್ಪ ತಮ್ಮ ರಾಜಕಾರಣದ ಅನುಭವ ತಂತ್ರವನ್ನು ಯುವಕರ ಮೇಲೆ ಹೇಗೆ ಪ್ರಯೋಗಿಸುತ್ತಾರೆ ಎಂಬುದು ಕುತೂಹಲ ಕೆರಳಿಸಿದರೆ, ಹಿರಿಯ ರಾಜಕಾರಣಿ ಯನ್ನು ಸೋಲಿಸಲು
ಬಿಜೆಪಿ ಸಹಿತ ಇತರೆ ರಾಜಕೀಯ ಪಕ್ಷಗಳು ಯಾವ ರೀತಿಯ ಪ್ರತಿತಂತ್ರ ಹೆಣೆಯುತ್ತವೆ ಎಂಬುದು ಸಹ ಎಲ್ಲ ರನ್ನೂ ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ.

ಮುಸ್ಲಿಂ ಅಭ್ಯರ್ಥಿಗಳ ಸಂಖ್ಯೆ ಏರಿಕೆ ಸಾಧ್ಯತೆ
ಮುಸ್ಲಿಂ ಸಮುದಾಯದ ಮತಗಳೇ (ಅಂದಾಜು 80 ಸಾವಿರ) ಅಧಿಕವಾಗಿರುವ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹೈಕಮಾಂಡ್‌ ಶಾಮನೂರು ಶಿವಶಂಕರಪ್ಪ ಅವರಿಗೇ ಟಿಕೆಟ್‌ ಕೊಡುತ್ತ ಬಂದಿದೆ. ಈ ಬಾರಿಯಾದರೂ ವಯಸ್ಸಿನ ಕಾರಣ ದಿಂದ ಶಿವಶಂಕರಪ್ಪ ಅವರನ್ನು ಕೈಬಿಟ್ಟು ಮುಸ್ಲಿಂ ಸಮು ದಾಯದವರಿಗೆ ಟಿಕೆಟ್‌ ಕೊಡಬೇಕು ಎಂಬ ಕೂಗು ಕಾಂಗ್ರೆಸ್‌ನಲ್ಲಿ ಪ್ರಬಲವಾಗಿ ಕೇಳಿಬಂದಿತ್ತು. ಆದರೂ ಶಾಮನೂರು ಶಿವಶಂಕರಪ್ಪ ಅವರಿಗೇ ಟಿಕೆಟ್‌ ನೀಡಲಾಗಿದೆ. ಹೀಗಾಗಿ ಬೇರೆ ಬೇರೆ ಪಕ್ಷಗಳಿಂದ ಮುಸ್ಲಿಂ ಅಭ್ಯರ್ಥಿಗಳು ಈ ಕ್ಷೇತ್ರದಲ್ಲಿ ಸ್ಪರ್ಧಿಸಲು ಹೆಚ್ಚಿನ ಆಸಕ್ತಿ ತೋರುತ್ತಿದ್ದಾರೆ. ಮುಸ್ಲಿಂ ಮತ ವಿಭಜನೆಯಾಗಬಹುದಾದ ಈ ತಂತ್ರಕ್ಕೆ ಬಿಜೆಪಿಯ ಬೆಂಬಲ ಸಿಗುವ ಲೆಕ್ಕಾಚಾರವೂ ಇದೆ. ಕಾಂಗ್ರೆಸ್‌ನ ಮುಸ್ಲಿಂ ಮತ ಬ್ಯಾಂಕ್‌ ಒಡೆಯುವ ಈ ತಂತ್ರಗಾರಿಕೆ ಕೂಡ ಚುನಾವಣ ಕಣವನ್ನು ಮತ್ತಷ್ಟು ರಂಗೇರಿಸುವ ಸಾಧ್ಯತೆ ಅಲ್ಲಗಳೆಯುವಂತಿಲ್ಲ.

– ಎಚ್‌.ಕೆ. ನಟರಾಜ

ಟಾಪ್ ನ್ಯೂಸ್

Mohan Bhagwat; ಪ್ರತಿಯೊಬ್ಬರೂ ಭಾರತದ ಏಕತೆ-ಸಮಗ್ರತೆಯನ್ನು ಕಾಪಾಡಿಕೊಳ್ಳಲು ಶ್ರಮಿಸಬೇಕು

Mohan Bhagwat; ಪ್ರತಿಯೊಬ್ಬರೂ ಭಾರತದ ಏಕತೆ-ಸಮಗ್ರತೆಯನ್ನು ಕಾಪಾಡಿಕೊಳ್ಳಲು ಶ್ರಮಿಸಬೇಕು

anಯಾವ ಯಾವ ರಾಜ್ಯಗಳಲ್ಲಿ ಸೌಲಭ್ಯ- ಕೊಡುಗೆಗಳ ಮಹಾಪೂರ ಜಾರಿಯಲ್ಲಿವೆ? ಇಲ್ಲಿದೆ ಮಾಹಿತಿ

ಯಾವ ಯಾವ ರಾಜ್ಯಗಳಲ್ಲಿ ಸೌಲಭ್ಯ- ಕೊಡುಗೆಗಳ ಮಹಾಪೂರ ಜಾರಿಯಲ್ಲಿವೆ? ಇಲ್ಲಿದೆ ಮಾಹಿತಿ

Mangaluru Airport bomb case; ಆದಿತ್ಯ ರಾವ್‌ ವಿರುದ್ಧ ಜೈಲು ಅಧಿಕಾರಿಗಳೇ ದೂರು ದಾಖಲು

Mangaluru Airport bomb case; ಆದಿತ್ಯ ರಾವ್‌ ವಿರುದ್ಧ ಜೈಲು ಅಧಿಕಾರಿಗಳ ದೂರು

Thailand Open Badminton: ಕಿರಣ್‌, ಸೇನ್‌ ಕ್ವಾರ್ಟರ್‌ ಫೈನಲಿಗೆ

Thailand Open Badminton: ಕಿರಣ್‌, ಸೇನ್‌ ಕ್ವಾರ್ಟರ್‌ ಫೈನಲಿಗೆ

ಪ್ರವಾಹ ಮುನ್ಸೂಚನೆ ನೀಡುವ ಗೂಗಲ್‌ನ ಫ್ಲಡ್‌ ಹಬ್‌

ಪ್ರವಾಹ ಮುನ್ಸೂಚನೆ ನೀಡುವ ಗೂಗಲ್‌ನ ಫ್ಲಡ್‌ ಹಬ್‌

Hunsur;ಪ್ರೀತಿಯ ನಾಯಿ ತಿಥಿ ಮಾಡಿ ಪ್ರೀತಿ ತೋರಿದ ಜನ

Hunsur;ಪ್ರೀತಿಯ ನಾಯಿ ತಿಥಿ ಮಾಡಿ ಪ್ರೀತಿ ತೋರಿದ ಜನ

Sri Lanka;ಏಕದಿನಕ್ಕೆ ಮರಳಿದ ದಿಮುತ್‌ ಕರುಣಾರತ್ನೆ

Sri Lanka;ಏಕದಿನಕ್ಕೆ ಮರಳಿದ ದಿಮುತ್‌ ಕರುಣಾರತ್ನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

ನೆಲೋಗಿ….: ಒಂದೇ ಊರಿನ ಇಬ್ಬರು ಈಗ ಶಾಸಕರು!

dk shivakumar

CM Post Crisis: ನಾನು ಈ ಪಕ್ಷ ಕಟ್ಟಿದ್ದೇನೆ..: ದೆಹಲಿಯಲ್ಲಿ ಗುಡುಗಿದ ಡಿಕೆ ಶಿವಕುಮಾರ್

dk shivakumar siddaramaiah rahul gandhi

ಸಿಎಂ ಆಯ್ಕೆಗೆ ಕಗ್ಗಂಟಾಗುತ್ತಿರುವುದು ಅಂದು ‘ರಾಹುಲ್ ಗಾಂಧಿ’ ಕೊಟ್ಟ ಆ ಒಂದು ಮಾತು!

Ramanath-rai

ಚುನಾವಣಾ ರಾಜಕೀಯದಿಂದ ನಿವೃತ್ತನಾಗುತ್ತಿದ್ದೇನೆ: ರಮಾನಾಥ ರೈ ಘೋಷಣೆ

1-wwe

ಮುಖ್ಯಮಂತ್ರಿ ಆಯ್ಕೆ; ಅಮ್ಮ ಡಿಕೆಶಿ ಪರ, ಮಗ ಸಿದ್ದು ಪರ: ಬಿಕ್ಕಟ್ಟಿಗೆ ಹೈಕಮಾಂಡ್‌ ಕಾರಣವೇ?

MUST WATCH

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

ಹೊಸ ಸೇರ್ಪಡೆ