ಅಕ್ಕಿ ಅಡುಗೆಯ ಸವಿರುಚಿ


Team Udayavani, Dec 1, 2018, 3:12 PM IST

1-december-12.gif

ಅಕ್ಕಿ ಅಡುಗೆಯ ರುಚಿಯೇ ಅಂಥದ್ದು. ವೆರೈಟಿ ಎಂಬುವುದು ಇದರಲ್ಲಿ ಬಹಳಷ್ಟಿದೆ. ಒಮ್ಮೆ ತಿಂದರೆ ಮತ್ತೊಮ್ಮೆ ತನ್ನಬೇಕೆಂಬ ತವಕ. ಓಹೋ ಇದು ಅಕ್ಕಿಯಿಂದ ಮಾಡಿದ್ದೇ ಎಂಬ ಕುತೂಹಲ ಬೇರೆ. ಅದಕ್ಕೆಂದೇ ವಿವಿಧ ರೀತಿಯ ಅಕ್ಕಿ ತಿನಿಸುಗಳನ್ನು ಇಲ್ಲಿ ನೀಡಲಾಗಿದೆ. 

ಸ್ವೀಟ್‌ ಕಾರ್ನ್ರೈಸ್‌
ಬೇಕಾಗುವ ಸಾಮಗ್ರಿ

· ಸ್ವೀಟ್‌ಕಾರ್ನ್ : 1ಕಪ್‌
· ಅಕ್ಕಿ : 2 ಕಪ್‌
· ತೆಂಗಿನಕಾಯಿಯ ಹಾಲು: 1 ಕಪ್‌
· ಈರುಳ್ಳಿ: 3
· ಟೊಮೇಟೊ: 2
· ಸಣ್ಣಗೆ ಹೆಚ್ಚಿದ ಪುದೀನಾ, ಕೊತ್ತಬಂರಿ ಸೊಪ್ಪು: 1/4ಕಪ್‌,
  ಶುಂಠಿ, ಬೆಳ್ಳುಳ್ಳಿ ಪೇಸ್ಟ್‌: 2 ಚಮಚ, ಸ್ವಲ್ಪ ಅರಶಿನ,
ಮೆಣಸಿನ ಹುಡಿ, ಸ್ವಲ್ಪ ಚಕ್ಕೆ
· ಉಪ್ಪು : ರುಚಿಗೆ ತಕ್ಕಷ್ಟು
· ಲವಂಗ: 5- 6
· ಏಲಕ್ಕಿ 2- 3
· ಎಣ್ಣೆ , ತುಪ್ಪ – 2 ಚಮಚ

ಮಾಡುವ ವಿಧಾನ
ಅಕ್ಕಿ ತೊಳೆದು ನೀರು ಬಸಿದಿಡಿ. ಈರುಳ್ಳಿ, ಟೊಮೇಟೊವನ್ನು ಹೆಚ್ಚಿ ಕುಕ್ಕರ್‌ ಒಲೆಯ ಮೇಲಿಟ್ಟು ಎಣ್ಣೆ, ತುಪ್ಪ ಹಾಕಿ ಬಿಸಿಯಾದ ಮೇಲೆಚಕ್ಕೆ, ಲವಂಗ, ಏಲಕ್ಕಿ ಹಾಕಿ ಹೊಂಬಣ್ಣ ಬರುವಂತೆ ಹರಿಯಿರಿ. ಅದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟ್‌ ಹಾಕಿ ಹಸಿ ವಾಸನೆ ಹೋಗುವ ತನಕ ಫ್ರೈ ಮಾಡಿ. ಇದಕ್ಕೆ ಹೆಚ್ಚಿದ ಪುದೀನಾ ಕೊತ್ತಂಬರಿ ಸೊಪ್ಪು ಹಾಕಿ ಬಾಡಿಸಿ ಅನಂತರ ಅದಕ್ಕೆ ಕಾರ್ನ್ ಹಾಕಿ, ಅರಸಿನ ಪುಡಿ, ಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ. ಇದಕ್ಕೆ ತೆಂಗಿನ ಹಾಲು, ಉಪ್ಪು ಹಾಕಿಸ್ವಲ್ಪ ಕುದಿಸಿ, ಇದು ಗ್ರೇವಿಯ ತರ ಆದಾಗ ಅಕ್ಕಿ, ಸುಮಾರು 4 ಕಪ್‌ನಷ್ಟು ನೀರು ಹಾಕಿ ಕುಕ್ಕರ್‌ ಮುಚ್ಚಿ 2 ವಿಷಲ್‌ ಕೂಗಿಸಿ. ಮೊಸರು ಬಜ್ಜಿ ಅಥವಾ ರಾಯ್ತದ ಜತೆ ತನ್ನಲು ಇದು ಸೂಕ್ತ. 

ಸಾಂಬಾರ್‌ ರೈಸ್‌
ಬೇಕಾಗುವ ಸಾಮಗ್ರಿ
· ಬಾಸುಮತಿ ಅಕ್ಕಿ : 1 1/2 ಕಪ್‌
· ಮಸೂರ್‌ ದಾಲ್‌( ಬೇಳೆ) : 1/2 ಕಪ್‌
· ಸಾಂಬಾರ್‌ ಪೌಡರ್‌: 2 ಚಮಚ
· ಮೆಣಸಿನ ಹುಡಿ: 1 ಚಮಚ
· ಅರಸಿನ: ಸ್ವಲ್ಪ
· ಸಾಸಿವೆ: 1 ಚಮಚ
· ಕರಿಬೇವಿನ ಎಲೆ: 4/5
· ನೀರಳ್ಳಿ: 1/2ಕಪ್‌
· ಟೊಮೆಟೊ: 1/2ಕಪ್‌
· ತರಕಾರಿ: 2 ಕಪ್‌ ( ಕ್ಯಾಪ್ಸಿಕಮ್‌, ಹೂಕೋಸು, ಕ್ಯಾರೆಟ್‌,
ಬಟಾಟೆ) ಉಪ್ಪು, ಎಣ್ಣೆ: ಸ್ವಲ್ಪ

ಮಾಡುವ ವಿಧಾನ
ಮೊದಲು ಅಕ್ಕಿ ಹಾಗೂ ಬೇಳೆಯನ್ನು ತೊಳೆದಿಟ್ಟುಕೊಳ್ಳಬೇಕು. ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ ಅದಕ್ಕೆ ಸಾಸಿವೆ ಮತ್ತು ಕರಿಬೇವಿನ ಎಲೆಯನ್ನು ಹಾಕಬೇಕು. ನೀರುಳ್ಳಿಯನ್ನು ಹಾಕಿ ಅದು ಕೆಂಪಾದಾಗ ಅದಕ್ಕೆ ಟೊಮೆಟೊ ಹಾಗೂ ಎಲ್ಲ ತರಕಾರಿಗಳನ್ನು ಹಾಕಿ ಸ್ವಲ್ಪ ಬಿಸಿ ಮಾಡಬೇಕು. ಆನಂತರ ಅದಕ್ಕೆ ಅಕ್ಕಿ, ಬೇಳೆ, ಅರಸಿನ, ಉಪ್ಪು, ಮೆಣಸಿನ ಹುಡಿ, ಸಾಮಬಾರು ಹುಡಿ ಮತ್ತು ಉಪ್ಪು ಹಾಕಿ ಚೆನ್ನಾಗಿ ಮಿಶ್ರ ಮಾಡಬೇಕು. ಅದಕ್ಕೆ 5 ಕಪ್‌ ನೀರು ಹಾಖೀ ಹದವಾದ ಬಿಸಿಯಲ್ಲಿ ಬೇಯಿಸಬೇಕು. ಬೇಕಾದರೆ ಮತ್ತೆ ಸ್ವಲ್ಪ ನೀರು ಸೇರಿಸಿಕೊಳ್ಳಿ . ಹದವಾಗಿ ಬೆಂದ ಮೇಲೆ ಗ್ಯಾಸ್‌ ಆಪ್‌ ಮಾಡಬೇಕು. ಅದರ ಮೇಲೆ ತುಪ್ಪ ಹಾಕಿ ಸವಿಯಿರಿ.

ಟೊಮೆಟೊ- ಕ್ಯಾಪ್ಸಿಕಂ ರೈಸ್‌
ಬೇಕಾಗುವ ಸಾಮಗ್ರಿ
· ಅಕ್ಕಿ- 1ಕಪ್‌
· ನೀರುಳ್ಳಿ- 1/4
· ಟೊಮೆಟೊ- 1/2ಕಪ್‌, ಕ್ಯಾಪ್ಸಿಕಂ- 1/2 ಕಪ್‌
· ಶುಂಠಿ- 1 ಚಮಚ
·ಹಸಿಮೆಣಸು- 4
· ಕರಿಬೇವಿನ ಎಲೆ- 4/5
· ಸಾಸಿವೆ, ಉದ್ದಿನ ಬೇಳೆ- ಅರ್ಧ ಚಮಚ
ಹೆಚ್ಚಿದ ಕೊತ್ತಂಬರಿ ಸೊಪ್ಪು- 1 ಚಮಚ
·ಉಪ್ಪು, ತುಪ್ಪ : ಸ್ವಲ್ಪ.

ಮಾಡುವ ವಿಧಾನ
ಮೊದಲು ಅಕ್ಕಿಯನ್ನು ಬೇಯಿಸಿ ಅನ್ನ ಮಾಡಿಟ್ಟುಕೊಳ್ಳಿ, ಅದನ್ನು ತಣಿಯಲು ಬಿಡಿ. ತುಪ್ಪವನ್ನು ಬಿಸಿ ಮಾಡಿ ಅದಕ್ಕೆ ಸಾಸಿವೆ, ಉದ್ದಿನ ಬೇಳೆಯನ್ನು ಹಾಕಿ ಅದು ಕೆಂಪಾದಾಗ ಹಸಿಮೆಣಸು, ಕರಿಬೇವಿ ಎಲೆ, ಶುಂಠಿ ಹಾಕಿ ಬಿಸಿ ಮಾಡಿ ನೀರುಳ್ಳಿ ಹಾಕಿ ಅದು ಕೆಂಪಾಗುವವರೆಗೆ ಬಿಸಿ ಮಾಡಿ ಅನಂತರ ಕ್ಯಾಪ್ಸಿಕಂ, ಟೊಮೆಟೊ, ಉಪ್ಪು ಮತ್ತು ಅರಸಿನ ಹಾಕಿ ಮೃದು ಆಗುವವರೆಗೆ ಬೇಯಿಸಿಕೊಳ್ಳಿ. ಅನಂತರ ಅದಕ್ಕೆ ಅನ್ನವನ್ನು ಸೇರಿಸಿ ಚೆನ್ನಾಗಿ ಮಿಶ್ರಗೊಳಿಸಿ, ಗ್ಯಾಸ್‌ ಆಫ್ ಮಾಡಿ ಕೊತ್ತಂಬರಿ ಸೊಪ್ಪಿನಿಂದ ಅಲಂಂಕರಿಸಿ. 

ಮೆಂತೆ ಸೊಪ್ಪು ರೈಸ್‌
ಬೇಕಾಗುವ ಸಾಮಗ್ರಿ
· ಅವರೆಕಾಳು- 1/4ಕಪ್‌
· ಬಾಸುಮತಿ ಅಕ್ಕಿ- 1ಕಪ್‌
· ಮೆಂತೆ ಸೊಪ್ಪು -1/2
· ನೀರಳ್ಳಿ- 1/2ಕಪ್‌
· ಹಸಿರು ಏಲಕ್ಕಿ – 1
· ತುಪ್ಪ/ ಎಣ್ಣೆ- ಸ್ವಲ್ಪ
· ಉಪ್ಪು- ಸ್ವಲ್ಪ.

ಮಾಡುವ ವಿಧಾನ
3 ಹಸಿಮೆಣಸು, ಶುಂಠಿ1 ಚಮಚ,, ಬೆಳ್ಳುಳ್ಳಿ1 ಚಮಚ, ಚಕ್ಕೆ ಸ್ವಲ್ಪ, ಎಳ್ಳು,ಕೊತ್ತಂಬರಿ ಬೀಜ 1 ಚಮಚ, ಜೀರಿಗೆ 1 ಚಮಚ, ಇವುಗಳನ್ನು ಒಟ್ಟಿಗೆ ಮಿಕ್ಸಿಯಲ್ಲಿ ಹಾಕಿ ಅರೆಯಬೇಕು. ಅವರೆ ಕಾಳನ್ನು 3 ಗಂಟೆ ನೀರಿನಲ್ಲಿ ನೆನೆಸಿಡಬೇಕು. ಅನಂತರ ಅದನ್ನು ಬೇಯಿಸಬೇಕು. ಎಣ್ಣೆ ಅಥವಾ ತುಪ್ಪವನ್ನು ಬಿಸಿ ಮಾಡಿ ಅದಕ್ಕೆ ಏಲಕ್ಕಿಯನ್ನು ಹಾಕಿ ನೀರುಳ್ಳಿ ಹಾಕಿ ಕೆಂಪಾಗುವವರೆಗೆ ಹುರಿಯಬೇಕು. ಅನಂತರ ಅದಕ್ಕೆ ಉಪ್ಪು ಟೊಮೆಟೊವನ್ನು ಹಾಕಿ ಬಿಸಿ ಮಾಡಬೇಕು. ಮೆಂತೆ ಸೊಪ್ಪು , ಅಕ್ಕಿ ಹಾಗೂ ಮಸಾಲೆ ಸೇರಿಸಿ ಬಿಸಿ ಮಾಡಬೇಕು. ಬೇಯಿಸಿದ ಅವರೆಯನ್ನು ಸೇರಿಸಿ 2 ಕಪ್‌ ನೀರು ಹಾಕಿ ಹದವಾದ ಬಿಸಿಯಲ್ಲಿ ಬೇಯಿಸಿದಾಗ ಅವರೆಕಾಳು- ಮೆಂತೆಸೊಪ್ಪು ರೈಸ್‌ ಸಿದ್ಧವಾಗುತ್ತದೆ.

ಕ್ಯಾಬೇಜ್‌ ರೈಸ್‌
ಬೇಕಾಗುವ ಸಾಮಗ್ರಿ

· ಕ್ಯಾಬೇಜ್‌- 1 ಕಪ್‌
· ನೀರುಳ್ಳಿ-1/4 ಕಪ್‌
· ಕರಿಬೇವು ಸೊಪ್ಪು- 4/5
· ಸಾಸಿವೆ- 1 ಚಮಚ

ಮಸಾಲೆ ಮಾಡುವ ವಿಧಾನ: 1/2ಚಮಚ ಬೇಳೆ, 1/2ಚಮಚ ಎಳ್ಳು, 1/2ಚಮಚ ಕೊತ್ತಂಬರಿ ಬೀಜ, ತೆಂಗಿನ ತುರಿ 1 ಚಮಚ, ಕೆಂಪು ಮೆಣಸು 4/5, ಶುಂಠಿ 1 ಚಮಚ: ಇವುಗಳನ್ನು ಎಣ್ಣೆಯಲ್ಲಿ ಹುರಿದು ಮಸಾಲೆ ತಯಾರಿಸಬೇಕು. 

ಮಾಡುವ ವಿಧಾನ
ತುಪ್ಪ/ ಎಣ್ಣೆಯನ್ನು ಬಿಸಿ ಮಾಡಿ ಸಾಸಿವೆ ಹಾಕಿ ಅದು ಒಡೆಯುವಾಗ ಕರಿಬೇವಿನ ಎಲೆಯನ್ನು ಹಾಕಬೇಕು. ನೀರುಳ್ಳಿ ಹಾಕಿ ಕೆಂಪಾಗುವವರೆಗೆ ಹುರಿದು ಕ್ಯಾಬೇಜ್‌ ಹಾಗೂ ರುಬ್ಬಿದ ಮಸಾಲೆಯನ್ನು ಸೇರಿಸಬೇಕು. ಚೆನ್ನಾಗಿ ಮಿಶ್ರಗೊಳಿಸಿ ಉಪ್ಪು ಹಾಕಿ 1/4 ಕಪ್‌ ನೀರುಹಾಕಿ ಬೇಯಿಸಬೇಕು. ಕ್ಯಾಬೇಜ್‌ ಚೆನ್ನಾಗಿ ಬೆಂದ ಮೇಲೆ ಅದಕ್ಕೆ ಬೇಯಿಸಿದ ಅನ್ನವನ್ನು ಸೇರಿಸಿ ಮಿಶ್ರ ಮಾಡಿದರೆ ಕ್ಯಾಬೇಜ್‌ ರೈಸ್‌ ಸಿದ್ಧ.

ಸುಶ್ಮಿತಾ ಶೆಟ್ಟಿ

ಟಾಪ್ ನ್ಯೂಸ್

ಪರಮ ಪಾವನೆಯಾಗುವತ್ತ ಗಂಗಾಮಾತೆ

ಪರಮ ಪಾವನೆಯಾಗುವತ್ತ ಗಂಗಾಮಾತೆ

2022ರ ಆರಂಭಕ್ಕೆ ಆರೋಗ್ಯವಂತ ಮಕ್ಕಳಿಗೆ ಲಸಿಕೆ?

2022ರ ಆರಂಭಕ್ಕೆ ಆರೋಗ್ಯವಂತ ಮಕ್ಕಳಿಗೆ ಲಸಿಕೆ?

ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಇನ್ನು ವಾಹನ ಎನ್‌ಒಸಿ

ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ಇನ್ನು ವಾಹನ ಎನ್‌ಒಸಿ

ಶಂಕಿತ ಐಸಿಸ್‌ ಉಗ್ರ ಸೆರೆ; ಉಗ್ರ ಸಂಘಟನೆಗೆ ಯುವಕರ ನೇಮಕ ಆರೋಪ

ಶಂಕಿತ ಐಸಿಸ್‌ ಉಗ್ರ ಸೆರೆ; ಉಗ್ರ ಸಂಘಟನೆಗೆ ಯುವಕರ ನೇಮಕ ಆರೋಪ

ಕನ್ನಡದಲ್ಲಿ ಪದವಿ ಮಾತ್ರ ಸಾಲದು, ಉದ್ಯೋಗವೂ ಬೇಕು

ಕನ್ನಡದಲ್ಲಿ ಪದವಿ ಮಾತ್ರ ಸಾಲದು, ಉದ್ಯೋಗವೂ ಬೇಕು

ಭಯೋತ್ಪಾದನೆ: ಕಠಿನ ಸಂದೇಶ ರವಾನಿಸಿದ ಅಮಿತ್‌ ಶಾ

ಭಯೋತ್ಪಾದನೆ: ಕಠಿನ ಸಂದೇಶ ರವಾನಿಸಿದ ಅಮಿತ್‌ ಶಾ

ವಿಧಾನಸಭೆ ಮಹಾಸಮರಕ್ಕೆ ಹಾನಗಲ್‌-ಸಿಂದಗಿ ಶಸ್ತ್ರಾಭ್ಯಾಸ

ವಿಧಾನಸಭೆ ಮಹಾಸಮರಕ್ಕೆ ಹಾನಗಲ್‌-ಸಿಂದಗಿ ಶಸ್ತ್ರಾಭ್ಯಾಸ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಸ್ವಾದಿಷ್ಟಕರ ಹಲ್ವ

ಸ್ವಾದಿಷ್ಟಕರ ಹಲ್ವ

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

MUST WATCH

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

udayavani youtube

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

udayavani youtube

ಕುಮ್ಕಿ ಹಕ್ಕು ಅಂದ್ರೇನು?

ಹೊಸ ಸೇರ್ಪಡೆ

2060ರ ಹೊತ್ತಿಗೆ ಸೌದಿ, ಮಾಲಿನ್ಯ ಮುಕ್ತ

2060ರ ಹೊತ್ತಿಗೆ ಸೌದಿ, ಮಾಲಿನ್ಯ ಮುಕ್ತ

2ನೇ ತರಗತಿ ಮಕ್ಕಳಿಂದ ರಸ್ತೆ ದುರಸ್ತಿ!

2ನೇ ತರಗತಿ ಮಕ್ಕಳಿಂದ ರಸ್ತೆ ದುರಸ್ತಿ!

ಪರಮ ಪಾವನೆಯಾಗುವತ್ತ ಗಂಗಾಮಾತೆ

ಪರಮ ಪಾವನೆಯಾಗುವತ್ತ ಗಂಗಾಮಾತೆ

ಸಿಒಪಿ26 ಶೃಂಗ, ಏನು ಎತ್ತ?

ಸಿಒಪಿ26 ಶೃಂಗ, ಏನು ಎತ್ತ?

ಡ್ರಗ್ಸ್‌ ಕೇಸಿಗೆ ಲಂಚದ ಟ್ವಿಸ್ಟ್‌

ಡ್ರಗ್ಸ್‌ ಕೇಸಿಗೆ ಲಂಚದ ಟ್ವಿಸ್ಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.