ಕನಸು ಕಾಣಿ ಸಾಕಾರಗೊಳಿಸಿ

Team Udayavani, Feb 24, 2020, 5:53 AM IST

ಯಾವ ಮನುಷ್ಯನಿಗೆ ಕನಸು ಬೀಳುವುದಿಲ್ಲ ಹೇಳಿ. ಕೆಲವರಿಗೆ ಒಂದೊಂದು ರೀತಿಯ ಕನಸುಗಳು ಅವರನ್ನು ಎಚ್ಚರಿಸುತ್ತಿರುತ್ತವೆ. ಭವಿಷ್ಯ, ಪ್ರೀತಿ, ಜೀವನ ಮೊದಲಾದ ಸಂಗತಿಗಳ ಕುರಿತು ಆಲೋಚನೆಗಳೇ ನಮ್ಮ ಕನಸುಗಳು ಆಗಿರುತ್ತವೆ. ಈ ನಿಟ್ಟಿನಲ್ಲಿ ಕನಸುಗಳ ಬಗೆಗಿನ ಪಿಸುಮಾತು ಇಲ್ಲಿ ಅಕ್ಷರದಲ್ಲಿ ವ್ಯಕ್ತವಾಗಿದೆ.

ಕನಸು ಕಾಣುವ ಮನಸ್ಸು ಎಲ್ಲರಿಗೆ ಇರುತ್ತದೆ. ಎಲ್ಲ ಕನಸುಗಳಿಗೆ ನನಸಾಗುವ ಸೌಭಾಗ್ಯ ಇರುವುದಿಲ್ಲ ಅಷ್ಟೇ!.

ಅದೊಂದು ಸಮಯದಲ್ಲಿ ನಮಗೆ ಶಿಕ್ಷಕರು ದೊಡ್ಡವರರಾದ ಮೇಲೆ ಏನು ಆಗುತ್ತೀಯಾ? ಎಂದು ಕೇಳುತ್ತಿದ್ದರು. ಬಹುಶಃ ಎಲ್ಲರಿಗೂ ಆ ವಯಸ್ಸಿನಲ್ಲಿ ಕನಸನ್ನು ಬಾಯಿ ಮಾತಿನಲ್ಲಿ ಹೇಳುವ ಧೈರ್ಯ ಇರುತ್ತಿತ್ತು. ಬದಲಾಗಿ ಕನಸಿನ ದಾರಿಯಲ್ಲಿ ನಡೆಯುವ ಸ್ಥೈರ್ಯ ಮೊಳಕೆಯೊಡೆಯುದಿರುವುದಿಲ್ಲ. ಅದು ಬೆಳೆಯುವುದು ವಯಸ್ಸಿನ ಹಾಗೆ ಹಂತ ಹಂತವಾಗಿಯೇ.

ಶಿಕ್ಷಕರು ಕೇಳುವ ಪ್ರಶ್ನೆಗಳಿಗೆ ವಿದ್ಯಾರ್ಥಿಗಳಾಗಿದ್ದ ನಾವು ಅಂದು ಹೇಳಿದ ಉತ್ತರಗಳು, ನಾನಾ ಬಗೆಯದು. ಒಬ್ಬರು ಪೊಲೀಸ್‌, ಕೆಲವರು ಡಾಕ್ಟರ್‌, ಇನ್ನೂ ಕೆಲವರು ಟೀಚರ್‌, ಕೆಲವರದು ಅಂದು ಸರಿಯಾಗಿ ಪದದ ಅರ್ಥವೇ ತಿಳಿಯಾದ ಎಂಜಿನಿಯರಿಂಗ್‌, ವಿಜ್ಞಾನಿ ಕನಸಿನೊಂದಿಗೆ ಉತ್ತರಗಳು ತೇಲಿ ಬರುತ್ತಿದ್ದವು. ಇನ್ನೂ ಹೈಸ್ಕೂಲ್‌ ಹಂತದಲ್ಲಿ ಬಂದಾಗ ಅದೇ ಪ್ರಶ್ನೆಗಳಿಗೆ ಒಂದು ಅರೆ ಸ್ಪಷ್ಟತೆವುಳ್ಳ ಉತ್ತರವನ್ನು ಹೇಳುತ್ತಿದ್ದೆವು.

ಕನಸು ಹಾಗೂ ಗುರಿಯ ವ್ಯತ್ಯಾಸವೇ ಅರಿಯದ ಹರೆಯದಲ್ಲಿ ಮಾಡಿದ ಶಪಥಗಳು, ನಿದ್ದೆ ಬಿಟ್ಟು ನಾನು ಹೀಗೆ ಆಗಬೇಕು, ಹಾಗೆ ಆಗಬೇಕೆನ್ನುವ ಹಠವನ್ನು ರೂಢಿಸಿಕೊಂಡಿದ್ದು ಇದೆ. ಕನಸು ಹಾಗೂ ಗುರಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಮೊದಲು ಗುರಿಯನ್ನು ಸಾಧಿಸಬೇಕು. ಗುರಿಯ ಯಶಸ್ಸಿನ ಬಳಿಕ ಬರುವುದು ಕನಸು. ಕನಸಿಗೆ ರೆಕ್ಕೆ ಬರುವುದೇ ಗುರಿ ಸಾಧನೆಯ ಅನಂತರ. ಕನಸು ಹಾಗೂ ಗುರಿ ಒಂದೇ ಆಗಿ ನಾವು ಪರಿಗಣಿಸಬಾರದು. ಕನಸು ಕಲರ್‌ಫುಲ್‌ , ಗುರಿ ಸುಲಭವಾಗಿ ದಕ್ಕದ, ನಾನಾ ಅಡ್ಡಿಗಳು-ಆತಂಕಗಳು ಬರುವ ಗೊಂದಲದ ಗೂಡು ಆಗಿರುತ್ತದೆ.

ಬಣ್ಣ ಬಣ್ಣದ ಕನಸು ನನಸಾಗುವುದು ಡೌಟ್‌ !
ನಿದ್ದೆಯ ಕನಸುಗಳೆಂದರೆ, ಅಲ್ಲಿ ಸ್ವಾರ್ಥಗಳಿರುತ್ತವೆ, ಆಸೆಗಳಿರುತ್ತವೆ. ನಮ್ಮ ಮೆಚ್ಚಿನ ನಟ- ನಟಿಯರನ್ನು ಭೇಟಿಯಾಗ ಬೇಕು, ತಾನು ಒಂದೊಳ್ಳೆ ವ್ಯಕ್ತಿಯಾಗಬೇಕು, ಬೆಳೆಯಬೇಕು, ಸಾಧಿಸಬೇಕು, ಹೀಗೆ ಬಣ್ಣದ ಜಗತ್ತಿನ ಕನಸುಗಳು ಎಷ್ಟು ಸುಲಭವಾಗಿ ಕಣ್ಣಿನಂಚಿನಲ್ಲಿ ಬರುತ್ತದೆ. ನಾವು ಗಾಢ ನಿದ್ದೆಗೆ ಹೋದಷ್ಟು ನಮ್ಮ ಕನಸಿನ ಕಲ್ಪನೆ ಅಷ್ಟೇ ಗಾಢವಾಗಿ ನಮ್ಮನ್ನು ಕಾಡಿಸುತ್ತದೆ. ಕನಸಿನ ಮೂಲ ಉದ್ದೇಶವೇ ಮನಸ್ಸನ್ನು ಎಚ್ಚರಿಸುವುದು, ಭೀತಿಗೊಳಿಸುವುದು.

ನಮ್ಮ ಜೀವನದಲ್ಲಿ ಕನಸುಗಳಿಗೆ ಮಹತ್ವ ಹೆಚ್ಚು, ಯಾರ ಬಳಿಯೂ ಹೇಳಿಕೊಳ್ಳದೆ ಇದನ್ನು ಮಾಡಬೇಕು, ಯಾರು ಇದನ್ನು ಮಾಡಿರಬಾರದು ಹೀಗೆ ಗೌಪ್ಯವಾಗಿಟ್ಟು ಕನಸಿನ ಮಹತ್ವವನ್ನು ನಾವು ಕಾಪಿಟ್ಟುಕೊಳ್ಳುತ್ತೇವೆ. ಆದರೆ ಕಾಪಿಟ್ಟ ಎಲ್ಲ ಸಂಗತಿಗಳು ಅನುಭವಿಸುವ ಮುನ್ನವೇ ಮುಗ್ಗರಿಸಿ ಬಿಡುತ್ತವೆ ಅನ್ನುವುದು ವಿಪರ್ಯಾಸ.

ಕನಸುಗಳು ಯಾವುದೇ ಇರಲಿ, ಅಲ್ಲಿ ಸ್ವಾರ್ಥ, ಆಸೆ, ನಿರಾಸೆ, ಭೀತಿ ಅಕಾಂಕ್ಷೆ, ನಿರೀಕ್ಷೆಗಳು ಇದ್ದೇ ಇರುತ್ತವೆ. ಅಂದ ಹಾಗೆ ನಿನ್ನೆ ಯಾವ ಕನಸು ಬಿತ್ತು ನೆನಪಿಕೊಳ್ಳಿ, ಅದರಲ್ಲಿ ಮೇಲಿನ ಅಂಶವೊಂದು ಇದ್ದೆ ಇರುತ್ತದೆ.

ಕನಸೊಂದೇ ಉಚಿತ ಉಡುಗೊರೆ
ನಿದ್ದೆಯಲ್ಲಿ ಕಾಣುವ ಕನಸುಗಳು ಒಂಥರ ವಿಭಿನ್ನ, ಕೆಲವೊಮ್ಮೆ ವಿಚಿತ್ರ. ಜಗತ್ತಿನಲ್ಲಿ ಕನಸಿಲ್ಲದೆ ನಿದ್ರಿಸುವವನು ಯಾರೂ ಇಲ್ಲ. ನಿದ್ದೆಗೆ ಭಂಗ ತರುವುದು ಕನಸು, ನಿದ್ದೆಗೆ ಆಧಾರವಾಗುವುದು ಇದೇ ಕನಸು. ನಡುರಾತ್ರಿಯ ಭಯಭೀತಿಯ ಕನಸು, ಅರೆ ಮುಂಜಾನೆಯ ವಿಚಿತ್ರ ಕನಸು, ಕನಸಿನ ನಡುವೆ ಮನೆಯ ಅಟ್ಟದಲ್ಲಿ ಇಲಿಯೂ ಬೆಕ್ಕೋ ಹಾರುವ ಸದ್ದು ಕೇಳಿ ಒಮ್ಮೆ ಜೀವ ಹೌಹಾರುವುದುಂಟು. ಈ ಅನುಭವ ಆಸ್ವಾದಿಸುವುದೇ ಒಂದು ಖುಷಿ. ಶ್ರೀಮಂತರು ಬಡವರಾಗುವ ಕನಸು, ಬಡವ ಶ್ರೀಮಂತನಾಗುವ ಕನಸು, ಯಾರೋ ಅಸ್ಪಷ್ಟವಾಗಿ ಆಳುವ ಕನಸು, ಮಗು ಹುಟ್ಟುವ ಕನಸು ಈ ಕನಸುಸಗಳಿಗೆಲ್ಲ ಒಂದೊಂದು ರೂಪ, ಅರ್ಥ ಕೊಡುವವರು ನಮ್ಮ ಅಜ್ಜಿ ಅಜ್ಜಂದಿರು…

 ಸುಹಾನ್‌ ಶೇಕ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ದೀವಿ ಹಲಸು. ಎಲ್ಲ ಉಷ್ಣ ವಲಯ ಪ್ರದೇಶಗಳಲ್ಲಿ ಬೆಳೆಯುವ ಬೆಳೆಯಿದು. ಮಲಯ ದ್ವೀಪ ಸಮೂಹಗಳ ಮೂಲ ಆಗಿದ್ದು, ಭಾರತದ ನಾನಾ ಭಾಗದಲ್ಲಿ ಇದನ್ನು ಕಾಣಬಹುದು. ವಿವಿಧ ಖಾದ್ಯ...

  • ಹೇರಳ ಆರೋಗ್ಯವರ್ಧಕ ಗುಣಗಳಿರುವ ದಾಳಿಂಬೆಯನ್ನು ಉಪಬೆಳೆಯಾಗಿ ಕೃಷಿ ಮಾಡಬಹುದು. ಮೂಲತಃ ಇರಾನ್‌ ದೇಶಕ್ಕೆ ಸೇರಿರುವ ದಾಳಿಂಬೆಯನ್ನು ಭಾರತದಲ್ಲೂ ಹಲವಾರು ವರ್ಷಗಳಿಂದ...

  • ಕೈಕಾಲುಗಳು ಸಣ್ಣದಾಗಿ, ಹೊಟ್ಟೆ ದೊಡ್ಡದಾಗಿ, ಅದರ ಮೈಮೇಲಿನ ಕೂದಲು ನುಣುಪು ಕಳೆದುಕೊಂಡು ಒರಟಾಗಿ ಕಾಣಿಸತೊಡಗಿದರೆ, ಆ ದನ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದೆ...

  • "ಅರೇ ಇದೇನಿದು?'ಎಂದು ಯೋಚಿಸಿದ್ದೀರಾ?ತುಂಬಾ ಸರಳ. ಮನೆ ಸುತ್ತ ಮುತ್ತ ಜಾಗದಲ್ಲಿ ಗಿಡಗಳನ್ನು ಬೆಳೆಸಿದರಾಯಿತು. ಮನೆ ಚಿಕ್ಕದು, ಅಂಗಳ ಇಲ್ಲದಿದ್ದರೂ ಚಿಂತೆ ಇಲ್ಲ....

  • ಸಾಮಾನ್ಯವಾಗಿ ಎಲ್ಲರೂ ಮನೆಯ ಅಂದವನ್ನು ಹೆಚ್ಚಿಸಲು, ಸುಂದರವಾಗಿ ಕಾಣಲು ಬಯಸುತ್ತಾರೆ. ಸೋಫಾ, ಲೈಟ್ಸ್‌, ಇನ್ನಿತರ ಅಲಂಕಾರಿಕ ವಸ್ತುಗಳಿಂದ ಮನೆಯನ್ನು ವಿನ್ಯಾಸಗೊಳಿಸುತ್ತೇವೆ....

ಹೊಸ ಸೇರ್ಪಡೆ