ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ


Team Udayavani, Mar 22, 2020, 4:13 AM IST

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೈಕಾಲುಗಳು ಸಣ್ಣದಾಗಿ, ಹೊಟ್ಟೆ ದೊಡ್ಡದಾಗಿ, ಅದರ ಮೈಮೇಲಿನ ಕೂದಲು ನುಣುಪು ಕಳೆದುಕೊಂಡು ಒರಟಾಗಿ ಕಾಣಿಸತೊಡಗಿದರೆ, ಆ ದನ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದೆ ಎಂದೇ ಅರ್ಥ. ಅಂತಹ ದನಗಳಿಗೆ ಸಾಕಷ್ಟು ಕಾಳಜಿ ವಹಿಸಿ ಉತ್ತಮ ಮೇವು, ಶುದ್ಧ ನೀರು ಕೊಟ್ಟು ಸಲಹಿದರೆ ಪ್ರಾಣಪಾಯದಿಂದ ಪಾರಾಗುತ್ತವೆ. ತೀರಾ ಕೃಶವಾಗಿದ್ದರೆ ಪಶುವೈದ್ಯರ ಸಲಹೆ ಪಡೆಯುವುದು ಉತ್ತಮ.

ಬೇಸಗೆ ಕಾಲವಾದ್ದರಿಂದ ಮುಂದಿನ ದಿನಗಳಲ್ಲಿ ಬಿಸಿಲು ಏರುತ್ತಲೇ ಹೋಗುತ್ತದೆ. ಮಳೆಗಾಲದಿಂದ ಚಳಿಗಾಲ. ಚಳಿಗಾಲದಿಂದ ಬೇಸಗೆಕಾಲ. ಹೀಗೆ, ವಾತಾವರಣ ಬದಲಾದ ಹಾಗೆಲ್ಲ ಪ್ರಾಣಿಗಳ ಆರೋಗ್ಯದಲ್ಲಿ ಏರುಪೇರು ಆಗುವುದು ಸಹಜ. ಹಾಗೆಯೇ ಜಾನುವಾರುಗಳಿಗೆ ಬೇಸಗೆಯಲ್ಲಿ ಮಾತ್ರ ಕಾಡುವ ಹಲವು ಕಾಯಿಲೆಗಳಿವೆ. ಅವುಗಳ ಬಗ್ಗೆ ತಿಳಿದು ಮುಂಜಾಗ್ರತೆ ವಹಿಸಬೇಕು. ಮುಖ್ಯವಾಗಿ ಬೇಸಗೆಯಲ್ಲಿ ನೀರು ಹಾಗೂ ಮೇವಿನ ಸಮಸ್ಯೆ ಎದುರಾಗುತ್ತದೆ. ಜಾನುವಾರು ಹೊಂದಿರುವವರು ಸಾಕಷ್ಟು ಮೇವು ಹಾಗೂ ನೀರಿನ ಲಭ್ಯತೆ ಹೊಂದಿರಬೇಕು. ಹಸಿರು ಮೇವು- ಮೇವಿನ ಸೊಪ್ಪು ಕೂಡ ಹೊಂದಿಸಿಕೊಂಡಿರಬೇಕು.

ಪೋಷಕಾಂಶಯುಕ್ತ ಆಹಾರ
ಪಶು ಆಹಾರ ದುಬಾರಿಯಾದ್ದರಿಂದ ಅದರ ಬದಲು ಪೋಷಕಾಂಶಭರಿತ ಮೇವು ಕೊಡುವತ್ತ ಗಮನ ಹರಿಸಬೇಕು. ಸಾಕಾಗುವಷ್ಟು ಮೇವು ಕೊಡದೇ ಹೋದರೆ ಜಾನುವಾರುಗಳ ದೇಹದಲ್ಲಿ ಕ್ಯಾಲ್ಸಿಯಂ, ಕಬ್ಬಿಣದ ಪೋಷಕಾಂಶಗಳ ಜತೆಗೆ ವಿಟಮಿನ್‌ ಗಳ ಕೊರತೆಯುಂಟಾಗಿ ದನಗಳು ರಕ್ತಹೀನತೆಯಿಂದ ಬಳಲುತ್ತವೆ. ಇದರಿಂದ ಪ್ರಾಣಕ್ಕೂ ಅಪಾಯ ಒದಗಬಹುದು.

ಕೈಕಾಲುಗಳು ಸಣ್ಣದಾಗಿ, ಹೊಟ್ಟೆ ದೊಡ್ಡದಾಗಿ, ಅದರ ಮೈಮೇಲಿನ ಕೂದಲು ನುಣುಪು ಕಳೆದುಕೊಂಡು ಒರಟಾಗಿ ಕಾಣಿಸತೊಡಗಿದರೆ, ಆ ದನ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದೆ ಎಂದೇ ಅರ್ಥ. ಅಂತಹ ದನಗಳಿಗೆ ಸಾಕಷ್ಟು ಕಾಳಜಿ ವಹಿಸಿ ಉತ್ತಮ ಮೇವು, ಶುದ್ಧ ನೀರು ಕೊಟ್ಟು ಸಲಹಿದರೆ ಪ್ರಾಣಪಾಯದಿಂದ ಪಾರಾಗುತ್ತವೆ. ತೀರಾ ಕೃಶವಾಗಿದ್ದರೆ ಪಶುವೈದ್ಯರ ಸಲಹೆ ಪಡೆಯುವುದು ಉತ್ತಮ.

ಗಿಡಮರಗಳ ಕೆಳಗೆ ಕಟ್ಟಿ ಹಾಕಿ
ಹಸುಗಳಿಗೆ ಹೋಲಿಸಿದಲ್ಲಿ ಎಮ್ಮೆಗಳಿಗೆ ಬಿಸಿಲಿನ ಬಾಧೆ ಜಾಸ್ತಿ. ಎಮ್ಮೆಗಳದ್ದು ಕಪ್ಪನೆಯ ಮೈ ಬಣ್ಣ, ಕೂದಲು ಕಡಿಮೆ. ಜೊತೆಗೆ ಬೆವರಿನ ಗ್ರಂಥಿಗಳ ಸಾಂದ್ರತೆ ಕಮ್ಮಿ ಇರುವುದರಿಂದ ಉರಿ ಬಿಸಿಲನ್ನು ತಡೆದುಕೊಳ್ಳುವ ಸಾಮರ್ಥ್ಯವೂ ಅವುಗಳಲ್ಲಿ ಕಡಿಮೆ. ಆದ್ದರಿಂದ ಎಮ್ಮೆ ಸಾಕುವವರು ಕೊಟ್ಟಿಗೆಯಲ್ಲಿ ತಂಪಾದ ವಾತಾವರಣ ಇರುವಂತೆ ನೋಡಿಕೊಳ್ಳಬೇಕು. ಬೆಳಗ್ಗೆ ಹಾಗೂ ಸಾಯಂಕಾಲ ಮಾತ್ರ ಹೊರಗೆ ಅಡ್ಡಾಡಲು ಬಿಡಬೇಕು. ಜಮೀನಿನಲ್ಲಿ ಸಾಕಷ್ಟು ಗಿಡ ಮರಗಳಿದ್ದರೆ, ಅದರ ಕೆಳಗೆ ಕಟ್ಟಿ ಹಾಕಿ. ಶೆಡ್‌ ಗಿಂತ ಗಿಡ ಮರಗಳ ಕೆಳಗೆ ಎಮ್ಮೆಗಳು ಹಾಯಾಗಿರುತ್ತವೆ. ತಂಪು ಹೊತ್ತಿನಲ್ಲಿ ಪಶು ಆಹಾರ ನೀಡುವುದು, ಆದಷ್ಟು ಹಸಿರು ಮೇವು ನೀಡುವುದು ಒಳ್ಳೆಯ ಕ್ರಮ. ಇನ್ನು ಹವಾಮಾನದಲ್ಲಿ ಒಮ್ಮೆಲೇ ಬದಲಾವಣೆಯಾದಾಗ, ರೋಗಾಣುಗಳು ವೃದ್ಧಿಯಾಗಿ ಹಲವಾರು ಕಾಯಿಲೆಗಳನ್ನು ಹುಟ್ಟು ಹಾಕುತ್ತವೆ. ಕಂದು ಮೂತ್ರ ರೋಗ, ಥೈಲೀರಿಯ, ಅನಾಪ್ಲಾಸ್ಮ ಮುಂತಾದ ಕಾಯಿಲೆಗಳ ಕಾಟ ಬೇಸಗೆಯಲ್ಲಿ ಜಾಸ್ತಿ.

ಕೊಟ್ಟಿಗೆಯಲ್ಲಿ ಫ್ಯಾನ್‌, ಏರ್‌ಕೂಲರ್‌
ಕೊಟ್ಟಿಗೆಯಲ್ಲಿ ಕಟ್ಟಿದರೂ ಬಿಸಿಲಿನ ತಾಪಕ್ಕೆ ಜಾನುವಾರುಗಳು ಮೇವು ತಿನ್ನುವುದನ್ನು ಕಮ್ಮಿ ಮಾಡುತ್ತವೆ. ಆದ್ದರಿಂದ ಕೊಟ್ಟಿಗೆಯಲ್ಲಿ ಸಾಕಷ್ಟು ಗಾಳಿಯಾಡುವಂತೆ ನೋಡಿಕೊಳ್ಳಿ. ಶೆಡ್‌ ಕಬ್ಬಿಣದ ತಗಡಿನ¨ªಾಗಿದ್ದರೆ ಅದರ ಮೇಲೆ ತೆಂಗಿನ ಗರಿ, ನಿರುಪಯುಕ್ತ ಹುಲ್ಲು ಇತ್ಯಾದಿ ಹಾಕಿ ತಣ್ಣಗಿರುವಂತೆ ನೋಡಿಕೊಳ್ಳಬಹುದು. ಕೊಟ್ಟಿಗೆ ಹಾಗೂ ಜಾನುವಾರುಗಳ ಮೇಲೆ ಆಗಾಗ ನೀರು ಚಿಮುಕಿಸುತ್ತಾ ಇರಿ. ಅನುಕೂಲ ಇದ್ದವರು ಅವುಗಳಿಗೆ ಫ್ಯಾನ್‌- ಏರ್‌ಕೂಲರ್‌ನ ವ್ಯವಸ್ಥೆ ಮಾಡಬಹುದು. ಇಲ್ಲದಿದ್ದರೆ ಮೇವು ತಿನ್ನುವುದು ಕಮ್ಮಿಯಾಗುವುದರ ಜತೆಗೆ ಅದರ ಆರೋಗ್ಯವೂ ಕುಸಿಯುತ್ತದೆ. ಇದು ಹಾಲಿನ ಇಳುವರಿ ಮೇಲೆಯೂ ಪ್ರತಿಕೂಲ ಪರಿಣಾಮ ಬೀರುತ್ತದೆ.

ಪರಾವಲಂಬಿ ಜೀವಿಗಳಿಂದ ದೂರವಿಡಿ
ಬೇಸಗೆಯಲ್ಲಿ ಉಣ್ಣೆಗಳ ಬಾಧೆ ಜಾಸ್ತಿ. ಟ್ರಿಪನೊಸೋಮಿಯಾಸಿಸ್‌ ಎಂಬ ಕಾಯಿಲೆ ಪ್ರಾಣಿಗಳ ರಕ್ತ ಹೀರುವ ಕುರುಡು ನೊಣಗಳಿಂದ ಹರಡುತ್ತದೆ. ಬೇಸಗೆಯಲ್ಲಿ ಈ ನೊಣಗಳ ಹಾವಳಿ ಜಾಸ್ತಿ. ಇದೇ ಸಮಯದಲ್ಲಿ ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆಯ ಪ್ರಕರಣಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ರೈತರು ಪರಾವಲಂಬಿ ಜೀವಿಗಳಾದ ಉಣ್ಣೆ, ಹೇನು, ಚಿಗಟಗಳನ್ನು ನಿಯಂತ್ರಿಸಿ ತಮ್ಮ ಜಾನುವಾರುಗಳ ಆರೋಗ್ಯ ಕಾಪಾಡಿಕೊಳ್ಳಬೇಕು. ಉತ್ಕೃಷ್ಟ ಮೇವು, ಶುದ್ಧ ನೀರು ಕೊಡುವುದರ ಜತೆಗೆ ಸ್ವತ್ಛತೆ ಕಾಪಾಡಿಕೊಂಡು ಪಾಲನೆ ಪೋಷಣೆ ಬಗ್ಗೆ ಕಾಳಜಿ ವಹಿಸಿದರೆ ಬೇಸಗೆಯಲ್ಲಿ ಕಾಡುವ ಬಹುತೇಕ ಸಮಸ್ಯೆಗಳಿಂದ ನಮ್ಮ ಜಾನುವಾರುಗಳನ್ನು ರಕ್ಷಿಸಬಹುದು.

ಕೊಳಚೆ ನೀರು ಬೇಡ
ಹೊರಗಡೆ ಮೇಯಲು ಹೋಗುವ ಜಾನುವಾರುಗಳು ಬಿಸಿಲಿನ ಧಗೆಗೆ ಬಾಯಾರಿ ಎಲ್ಲೆಲ್ಲೋ ನಿಂತಿರುವ ನೀರು, ಕೊಳಚೆ ನೀರು ಕುಡಿಯುತ್ತವೆ. ಇದರಿಂದ ಅವುಗಳ ರೋಗ ನಿರೋಧಕ ಶಕ್ತಿ ಕುಂದುವುದರ ಜತೆಗೆ, ಹಲವು ಕಾಯಿಲೆಗಳು ಕೂಡ ಬಂದೆರಗುತ್ತವೆ. ಬಹುತೇಕ ರೋಗಗಳು ಕಲುಷಿತ ನೀರಿನಿಂದಲೇ ಬರುತ್ತವೆ ಎಂಬುದು ತಿಳಿದಿರಲಿ.

ಎಸ್‌.ಕೆ. ಪಾಟೀಲ್‌

ಟಾಪ್ ನ್ಯೂಸ್

4-mangaluru

Mangaluru: ನೈತಿಕ ಪೊಲೀಸ್ ಗಿರಿ ತಡೆಗೆ ಆ್ಯಂಟಿ ಕಮ್ಯುನಲ್‌ ವಿಂಗ್ ಆರಂಭಿಸಲು ಸೂಚನೆ

asia cup 2023

Hybrid Model ಒಪ್ಪದ ಎಸಿಸಿ: ಏಷ್ಯಾ ಕಪ್ ಆಡದಿರಲು ಪಾಕಿಸ್ತಾನ ಚಿಂತನೆ

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಶಾಸಕರ ಜೊತೆ ಟೋಲ್ ಸಿಬ್ಬಂದಿ ಕಿರಿಕ್

ಬೆಂಗಳೂರು-ಮೈಸೂರು ದಶಪಥ ಹೆದ್ದಾರಿಯಲ್ಲಿ ಶಾಸಕರ ಜೊತೆ ಟೋಲ್ ಸಿಬ್ಬಂದಿ ಕಿರಿಕ್

ಮೊದಲ ಮಗುವಿನ ನಿರೀಕ್ಷೆಯಲ್ಲಿ ಫಹಾದ್‌ – ಸ್ವರಾ ಭಾಸ್ಕರ್‌ ದಂಪತಿ: Baby Bump ಫೋಟೋ ವೈರಲ್

ಮೊದಲ ಮಗುವಿನ ನಿರೀಕ್ಷೆಯಲ್ಲಿ ಫಹಾದ್‌ – ಸ್ವರಾ ಭಾಸ್ಕರ್‌ ದಂಪತಿ: Baby Bump ಫೋಟೋ ವೈರಲ್

pavitra lokesh and naresh starer matte maduve releasing on June 9

ಮದುವೆ ಓಡಾಟದಲ್ಲಿ ಪವಿತ್ರ-ನರೇಶ್‌

siddaramaiah

Guarantee Scheme ಬಗ್ಗೆ ಪ್ರತಿಭಟನೆ ಮಾಡಲು ಬಿಜೆಪಿಗೆ ನೈತಿಕ ಹಕ್ಕಿಲ್ಲ; ಸಿದ್ದರಾಮಯ್ಯ

Adipurush: ʼಆದಿಪುರುಷ್ʼ ಸಿನಿಮಾದ ಪ್ರತಿ ಶೋನ ಒಂದು ಸೀಟು ಹನುಮಾನ್‌ ದೇವರಿಗೆ ಮೀಸಲು

Adipurush: ʼಆದಿಪುರುಷ್ʼ ಸಿನಿಮಾದ ಪ್ರತಿ ಶೋನ ಒಂದು ಸೀಟು ಹನುಮಾನ್‌ ದೇವರಿಗೆ ಮೀಸಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

Garden

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

udayavani youtube

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಹೊಸ ಸೇರ್ಪಡೆ

ಎಂಡಿ ವಿದ್ಯಾರ್ಥಿನಿ ಕ್ವಾರಿಗೆ ಹಾರಿ ಆತ್ಮಹತ್ಯೆ

ಎಂಡಿ ವಿದ್ಯಾರ್ಥಿನಿ ಕ್ವಾರಿಗೆ ಹಾರಿ ಆತ್ಮಹತ್ಯೆ

tdy-7

ಪತ್ನಿಯ ಶೀಲ ಶಂಕಿಸಿ ಗುಪ್ತಾಂಗಕ್ಕೆ ಇರಿದು ಹತ್ಯೆ

tdy-6

ನಿಮಿಷದಲ್ಲಿ ಸಾವಿರ ಸಸಿ ನೆಡುವ ಅಭಿಯಾನ

4-mangaluru

Mangaluru: ನೈತಿಕ ಪೊಲೀಸ್ ಗಿರಿ ತಡೆಗೆ ಆ್ಯಂಟಿ ಕಮ್ಯುನಲ್‌ ವಿಂಗ್ ಆರಂಭಿಸಲು ಸೂಚನೆ

asia cup 2023

Hybrid Model ಒಪ್ಪದ ಎಸಿಸಿ: ಏಷ್ಯಾ ಕಪ್ ಆಡದಿರಲು ಪಾಕಿಸ್ತಾನ ಚಿಂತನೆ