ಹೃದಯದಲ್ಲಿ ಪ್ರೀತಿಯ ಬೀಜ ಬಿತ್ತೋಣ

Team Udayavani, Jan 13, 2020, 5:44 AM IST

“ಹೃದಯ ಅತ್ಯಂತ ಫ‌ಲವತ್ತಾದ ಜಾಗ. ಅಲ್ಲಿ ನೀವು ಪ್ರೇಮ, ದ್ವೇಷ, ಮತ್ಸರ, ಸೌಹಾರ್ದ ಏನನ್ನೇ ಬಿತ್ತಿದರೂ ಸೊಂಪಾಗಿ ಬೆಳೆಯುತ್ತದೆ. ಅದರಲ್ಲಿ ಬಿಡುವ ಫ‌ಲವನ್ನು ನಾವು ತಿನ್ನಲೇಬೇಕಿರುವುದು ಕಡ್ಡಾಯ. ಆದ್ದರಿಂದ ಬಿತ್ತುವಾಗಲೇ ಫ‌ಲದ ಬಗ್ಗೆ ಎಚ್ಚರವಿರಲಿ’ ಎನ್ನುವುದು ವಿವೇಕಾನಂದರ ಮಾತು. ಹೌದು… ನಮ್ಮ ಹೃದಯದಲ್ಲಿ ಪ್ರೀತಿಯ ಬೀಜ ಬಿತ್ತಿದರೆ ಅಲ್ಲಿ ಬೆಳೆಯುವುದು ಪ್ರೀತಿಯೇ. ಬೇರೆಯವರಿಗೂ ನಮ್ಮಿಂದ ಪ್ರೀತಿಯೇ ಹಂಚಲು ಸಾಧ್ಯ. ನಮ್ಮಲ್ಲಿ ದ್ವೇಷ, ಮತ್ಸರಗಳಿದ್ದರೆ ನಾವು ಯಾರನ್ನೂ ಪ್ರೀತಿಯಿಂದ ಕಾಣಲು ಸಾಧ್ಯವಿಲ್ಲ.

ನಮ್ಮ ಹೃದಯದೊಳಗಡೆ ಪ್ರೀತಿಯಿದ್ದರೆ ಎಲ್ಲರಲ್ಲೂ ನಾವು ಪ್ರೀತಿಯನ್ನೇ ಕಾಣುತ್ತೇವೆ. ದ್ವೇಷ, ಅಸೂಯೆಗಳು ಮನುಷ್ಯನಲ್ಲಿರುವ ಅನುಕಂಪ, ಮಾನವೀಯತೆಗಳನ್ನು ಕೊಲ್ಲುತ್ತವೆ. ಆ ವ್ಯಕ್ತಿಯಲ್ಲಿ ಪ್ರೀತಿಯನ್ನು ಕಾಣಲು ಸಾಧ್ಯವೇ ಇಲ್ಲ. ದ್ವೇಷದಿಂದ ಏನನ್ನೂ ಸಾಧಿಸಲು ಏನು ಸಾಧ್ಯವಿಲ್ಲ. ಮನೆ ಪಕ್ಕದಲ್ಲಿ ಇದ್ದ ಒಬ್ಬ ವ್ಯಕ್ತಿ ದ್ವೇಷ ದ್ವೇಷ ಎನ್ನುತ್ತಾ ತನ್ನ ಜೀವನವನ್ನೀಡಿ ದ್ವೇಷ ಸಾಧನೆಗೆ ಮೀಸಲಿರಿಸಿದ. ತನ್ನೊಂದಿಗಿದ್ದವರನ್ನೂ ಪ್ರೀತಿಸದೇ, ಅವರೊಂದಿಗೆ ಸಮಯ ಕಳೆಯದೆ ತನ್ನ ಜೀವನದ ಖುಷಿಯನ್ನೂ ಅನುಭವಿಸದೆ ದ್ವೇಷದ ಹಿಂದೆ ಹೊರಟ. ಆದರೆ ದ್ವೇಷ ಸಾಧನೆಯಲ್ಲೇ ಜೀವನ ಕಳೆಯುತ್ತಿದ್ದ ಆತನಿಗೆ ಒಂದು ದಿನ ಅಪಘಾತವಾಗಿ ಆಸ್ಪತ್ರೆ ಸೇರಿದ.ಆತನೊಂದಿಗಿದ್ದದ್ದು ಆತನ ದ್ವೇಷವೇ ಹೊರತು ಯಾರೂ ಜತೆಗಿರಲಿಲ್ಲ. ಆತನಿಗೇನೋ ತಾನು ಮತ್ತೆ ತನ್ನ ತಪ್ಪನ್ನು ತಿದ್ದಿಕೊಳ್ಳಲು ಅವಕಾಶ ಸಿಕ್ಕಿತು. ಆದರೆ ಇನ್ನು ಎಷ್ಟೋ ಮಂದಿಗೆ ಆ ಅವಕಾಶವೇ ಸಿಗುವುದಿಲ್ಲ. ತಾನು ಕಳೆದುಕೊಂಡಿರುವುದು ಏನು ಎನ್ನುವುದನ್ನು ತಿಳಿಯುವಾಗಲೇ ಜೀವನದ ಕೊನೆಯ ಹಂತದಲ್ಲಿರುತ್ತಾರೆ.

ಪ್ರತಿಯೊಬ್ಬರಲ್ಲೂ ಪ್ರೀತಿ ಕಾಣಿಸುವುದು ತಮಲ್ಲಿ ನಂಬಿಕೆಯಿದ್ದಾಗ. ನಮ್ಮಲ್ಲಿ ನಂಬಿಕೆಯಿದ್ದರೆ ಬೇರೆಯವರ ಮೇಲೂ ನಂಬಿಕೆ ಬರಲು ಸಾಧ್ಯ. ನಂಬಿಕೆಯಿದ್ದರೆ ಮಾತ್ರ ಪ್ರೀತಿ, ಸ್ನೇಹ. ನಂಬಿಕೆ ಮನುಷ್ಯ ಸಂಬಂಧಗಳ ಅಡಿಪಾಯ. ನಂಬಿಕೆಯೇ ಇಲ್ಲದಿದ್ದರೆ ಯಾವುದೇ ಸಂಬಂಧಗಳು ಬಾಳಿಕೆ ಬರುವುದು ಎರಡೇ ದಿನ. ಯಾವುದೇ ಸಂಬಂಧಗಳು ಉಳಿಯಬೇಕಾದರೆ ಅಲ್ಲಿ ನಂಬಿಕೆ ಬೇಕು. ಸಂಬಂಧಗಳಿಗಷ್ಟೇ ಅಲ್ಲ. ನಮ್ಮ ಕೆಲಸದಲ್ಲೂ ನಮಗೆ ನಂಬಿಕೆಯಿರಬೇಕು.

ಖುಷಿಯ ಮಾಪನ ಸಂಪತ್ತು ಆಗದಿರಲಿ
ಜೀವನದಲ್ಲಿ ಎಷ್ಟೇ ಸಂಪತ್ತು, ಸೌಂದರ್ಯ ಇದ್ದರೂ ಅದಾವುದೂ ಶಾಶ್ವತವಲ್ಲ ಎನ್ನುವುದು ಗೊತ್ತಿದ್ದರೂ ನಾವು ಅವುಗಳ ಬೆನ್ನತ್ತಿ ಸಂಬಂಧಗಳನ್ನು ಕಡೆಗಣಿಸುತ್ತೇವೆ. ಎಷ್ಟೇ ಬಡವನಾದರೂ ಆತ ಜೀವನದಲ್ಲಿ ಖುಷಿಯಲ್ಲಿರುತ್ತಾನೆ. ಯಾಕೆಂದರೆ ಆತನ ಖುಷಿಯ ಮಾಪನ ಹಣ, ಸೌಂದರ್ಯವಲ್ಲ. ಬದಲಾಗಿ ಜೀವನದ ಖುಷಿಯನ್ನು ಆತ ತನ್ನ ಜತೆಗಿದ್ದವರು, ತನ್ನ ಕೆಲಸ, ತನ್ನ ಸ್ವಾಭಿಮಾನದಲ್ಲೇ ಕಂಡಿರುತ್ತಾನೆ.

ಸಾಧನೆ, ಗುರಿಯ ಬೆನ್ನತ್ತಿ ಅಥವಾ ಸಂಪತ್ತಿನ ಹಿಂದೆ ಹೋಗಿ ಸಂಬಂಧಗಳನ್ನು ಕಳೆದುಕೊಳ್ಳುವುದು ಬೇಡ. ಒಂದು ದಿನ ಸಾಧನೆಯ ತುತ್ತತುದಿ ತಲುಪಿದ ಮೇಲೆ ನಮ್ಮ ಸಂತೋಷ ಆಚರಣೆಗೂ ಜತೆಗೆ ಯಾರೂ ಇರುವುದಿಲ್ಲ. ಗುರಿಯ ಜತೆಗೆ ಜತೆಗಿದ್ದವರಿಗೂ ಸಮಯ ನೀಡಿ. ಪ್ರೀತಿ ನೀಡಿ.

-  ರಂಜಿನಿ ಮಿತ್ತಡ್ಕ

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

  • ಇತ್ತೀಚಿನ ಹವಮಾನ ತೀರಾ ವಿಚಿತ್ರವೆನ್ನಬಹುದು. ಚಳಿಗಾಲವಾಗಿದ್ದರೂ ಸುಡುಬಿಸಿಲು ನೆತ್ತಿಯ ಮೇಲೆ ಮಂಜು ಹನಿಯುವ ಬದಲು ಬೆವರಲ್ಲಿಯೇ ಸ್ನಾನ ಮಾಡಿಸುವಂತಿರುತ್ತದೆ....

  • ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಕೈಯಲ್ಲೊಂದು ಸ್ಮಾರ್ಟ್‌ಫೋನ್‌, ಮಡಿಲಲ್ಲೊಂದು ಲ್ಯಾಪ್‌ಟಾಪ್‌ ಇರಲೇಬೇಕು. ಈಗಿನ ಕೆಲಸ ಕಾರ್ಯಗಳೆಲ್ಲವೂ ಈ ಎರಡರಲ್ಲೇ ನಿಭಾಯಿಸಲ್ಪಡುವುದರಿಂದ...

  • ಕಾರು ನಿಲ್ಲಿಸಿ ಕೆಲವು ದಿನ ಆಯ್ತು. ಆದ್ರೆ ಈಗ ಸ್ಟಾರ್ಟ್‌ ಮಾಡಲು ನೋಡ್ತಿದ್ರೆ ಜಪ್ಪಯ್ಯ ಅಂದ್ರೂ ಸ್ಟಾರ್ಟ್‌ ಆಗ್ತಿಲ್ಲ ಎನ್ನುವ ಸಮಸ್ಯೆಯನ್ನು ನೀವು ಎದುರಿಸಿರಬಹುದು....

  • ನಂಬಿಗಸ್ತ ಆಟಗಾರ ಎಂದು ಕಣ್ಮುಚ್ಚಿಕೊಂಡು ಹೇಳಬಹುದಾಗಿದ್ದ ಕ್ರಿಕೆಟಿಗರ ಪೈಕಿ ಹರ್ಭಜನ್‌ ಸಿಂಗ್‌ ಕೂಡ ಒಬ್ಬರು. ಅಪಾರ ಪ್ರತಿಭಾವಂತರು ಎಂಬುದು ಪ್ಲಸ್‌ ಪಾಯಿಂಟ್‌....

  • ನವದಂಪತಿ ಪರಸ್ಪರ ಅರಿಯಲು, ರೊಮ್ಯಾಂಟಿಕ್‌ ಕ್ಷಣಗಳನ್ನು ಮತ್ತಷ್ಟು ಮಧುರವಾಗಿಸಲು ಹನಿಮೂನ್‌ ಗೆ ತೆರಳುತ್ತಾರೆ. ಏಕಾಂತದಿಂದ ಜೋಡಿ ಹಕ್ಕಿಗಳಾಗಿ ವಿಹರಿಸುವ...

ಹೊಸ ಸೇರ್ಪಡೆ