ಪೈಪ್‌ ಕಾಂಪೋಸ್ಟ್‌’ ಮನೆಯೊಳಗಿನ ತ್ಯಾಜ್ಯ; ಹಿತ್ತಲಿನಲ್ಲಿ ಹಸುರಿನ ಹೊನ್ನು


Team Udayavani, Jan 5, 2020, 5:53 AM IST

17

ಅಡುಗೆ ಮನೆಯಲ್ಲಿ ಸಿಗುವ ಹಣ್ಣು ಮತ್ತು ತರಕಾರಿಗಳ ಸಿಪ್ಪೆ ಮತ್ತಿತರ ತ್ಯಾಜ್ಯಗಳು, ಮಜ್ಜಿಗೆಯನ್ನೆಲ್ಲ ಪೈಪಿನೊಳಗೆ ತುಂಬಬಹುದು. ಆದರೆ ಗಟ್ಟಿಯಾಗಿರುವ ಚಿಪ್ಪುಗಳು, ಗೆರಟೆ, ಬೆಣ್ಣೆಹಣ್ಣಿನ ಬೀಜ, ಲಿಂಬೆ, ಕಿತ್ತಳೆ ಇತ್ಯಾದಿ ಸಿಟ್ರಸ್‌ ಅಂಶವಿರುವ ಹಣ್ಣುಗಳ ತ್ಯಾಜ್ಯ, ಬೇಯಿಸಿದ ಆಹಾರಗಳು, ಸಾಂಬಾರು, ಈರುಳ್ಳಿ ಸಿಪ್ಪೆ ಇದೊಂದನ್ನೂ ತುಂಬಿಸಬಾರದು.

ಮನೆಯಲ್ಲಿನ ತ್ಯಾಜ್ಯಗಳನ್ನು ತಿಪ್ಪೆಗೆ ಎಸೆದರೆ ದುರ್ವಾಸನೆ ಬೀರುತ್ತವೆ. ರೋಗಕಾರಕ ಅಣುಗಳ ಸೃಷ್ಟಿಗೆ ಕಾರಣವಾಗುತ್ತವೆ. ಆದರೆ ಇದೇ ತ್ಯಾಜ್ಯವನ್ನು ಗೊಬ್ಬರವಾಗಿಸಿದರೆ ಹಿತ್ತಲಿನಲ್ಲಿ ಹಸುರಿನ ಹೊನ್ನು ಬೆಳೆಯಬಹುದು. ಇದಕ್ಕೆ ಪ್ರತ್ಯಕ್ಷ ನಿದರ್ಶನವೆಂದರೆ ಗುರುವಾಯನಕೆರೆಯ ರಾಜಗೋಪಾಲ ಭಟ್ಟರು.

ಕೆಲವು ವರ್ಷಗಳ ಹಿಂದೆಯೇ ಅವರು ಕಸವನ್ನು ರಸವಾಗಿಸುವ ವಿದ್ಯೆಯಲ್ಲಿ ಪರಿಣತರು. ಏನಿದು ಈ ವಿದ್ಯೆಯೆಂದು ತಿಳಿಯಬೇಕಾದರೆ, ಅವರ ಮನೆಯಂಗಳದ ಸುತ್ತಲೂ ಇರುವ ವೈವಿಧ್ಯಮಯ ಗಿಡಗಳ ಸಾಲಿನಲ್ಲೊಮ್ಮೆ ಸುತ್ತಬೇಕು. ಕಣ್ಣಿಗೆ ರಾಚುವ ಹಚ್ಚ ಹಸುರಿನ ನಡುವೆ ನೆಲದಲ್ಲಿ ಅಲ್ಲಲ್ಲಿ ಹೂಳಿದ ಪೈಪುಗಳು ಗಮನ ಸೆಳೆಯುತ್ತವೆ. ಈ ಪೈಪುಗಳಲ್ಲಿದೆ ರಾಜಗೋಪಾಲ ಭಟ್ಟರು ತ್ಯಾಜ್ಯವನ್ನು ಹಸುರ ಸಿರಿಯ ಚಿನ್ನವಾಗಿಸುವ ಗುಟ್ಟು.

ಅವರು ತಮ್ಮ ಮನೆಯ ಹಿತ್ತಲಿನಲ್ಲಿ ಪೈಪ್‌ ಕಾಂಪೋಸ್ಟ್‌ ಮೂಲಕ ಗೊಬ್ಬರ ಪಡೆದವರು. ಅದು ಪೈಪು ಕಾಂಪೋಸ್ಟ್‌. ವರ್ಷಗಳ ಹಿಂದೆಯೇ ಗ್ರಾಮ ಪಂಚಾಯತ್‌ಗಳಿಗೆ ಇದರ ಪ್ರಯೋಜನದ ಬಗೆಗೆ ಜನರ ಗಮನ ಸೆಳೆಯುವಂತೆ ಆದೇಶಗಳು ಬಂದಿದ್ದರೂ ಅಳವಡಿಸಿದ ಅಧಿಕಾರಿ ವರ್ಗ ಅಪರೂಪ. ಆದರೆ ಭಟ್ಟರು ಅದನ್ನು ಅಳವಡಿಸಿಕೊಂಡು ಮಾದರಿಯಾಗಿದ್ದಾರೆ. ನಿರ್ವಹಣೆಯನ್ನೂ ಅವರು ಉತ್ತಮವಾಗಿ ಮಾಡುತ್ತಾರೆ. ಪೇಟೆ-ಪಟ್ಟಣಗಳಲ್ಲಿರುವವರು ಕೂಡ ಪೈಪ್‌ ಕಾಂಪೋಸ್ಟಿನ ಲಾಭ ಹೊಂದಬಹುದೆಂದು ಹೇಳುತ್ತಾರೆ.

ಅಳವಡಿಕೆ ಹೇಗೆ?
ನಾಲ್ಕು ಮಿಲಿ ಲೀಟರ್‌ ದಪ್ಪವಿರುವ ಉತ್ತಮ ಗುಣಮಟ್ಟದ ಬಲವಾದ ಪಿವಿಸಿ ಪೈಪು ಆಯ್ದುಕೊಳ್ಳಬೇಕು. ಹತ್ತು ಇಂಚು ಅಗಲವಾದ ಬಾಯಿ ಇದ್ದರೆ ಉತ್ತಮ. ಒಂದೂವರೆ ಮೀಟರ್‌ ಉದ್ದದ ಪೈಪಿನ ಕಾಲುಭಾಗವನ್ನು ಮಣ್ಣಿನ ಗುಂಡಿ ತೋಡಿ ಹೂಳಬೇಕು. ಗ್ರಾನೈಟ್‌ ತುಂಡು ಮತ್ತು ಮರಳು ಬಳಸಿ ಬುಡವನ್ನು ಗಟ್ಟಿ ಮಾಡಿದರೆ ಒಳ್ಳೆಯದು. ಇಲ್ಲವಾದರೆ ಒಳಗೆ ಎರೆಹುಳಗಳಿದ್ದರೆ ಬುಡದಲ್ಲಿ ಇಲಿಗಳು ಕೊರೆದು ಹಾನಿ ಮಾಡುತ್ತವೆ. ಅಡುಗೆ ಮನೆಯಲ್ಲಿ ಸಿಗುವ ಹಣ್ಣು ಮತ್ತು ತರಕಾರಿಗಳ ಸಿಪ್ಪೆ ಮತ್ತಿತರ ತ್ಯಾಜ್ಯಗಳು, ಮಜ್ಜಿಗೆ ಇದನ್ನೆಲ್ಲ ಪೈಪಿನೊಳಗೆ ತುಂಬಬಹುದು. ಆದರೆ ಗಟ್ಟಿಯಾಗಿರುವ ಚಿಪ್ಪುಗಳು, ಗೆರಟೆ, ಬೆಣ್ಣೆಹಣ್ಣಿನ ಬೀಜ, ನಿಂಬೆ, ಕಿತ್ತಳೆ ಇತ್ಯಾದಿ ಸಿಟ್ರಸ್‌ ಅಂಶವಿರುವ ಹಣ್ಣುಗಳ ತ್ಯಾಜ್ಯ, ಬೇಯಿಸಿದ ಆಹಾರಗಳು, ಸಾಂಬಾರು, ಈರುಳ್ಳಿ ಸಿಪ್ಪೆ ಇದೊಂದನ್ನೂ ತುಂಬಿಸಬಾರದು. ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸುವ ಜೀವಾಣುಗಳಿಗೆ ಇದೆಲ್ಲವೂ ಹಾನಿ ಮಾಡುತ್ತವೆಯಂತೆ. ನೀರಿನಂಶ ಶೇ. 50ಕ್ಕಿಂತ ಹೆಚ್ಚಿದ್ದರೂ ಗೊಬ್ಬರ ಚೆನ್ನಾಗಿರುವುದಿಲ್ಲ. ಪೈಪು ಭರ್ತಿಯಾದ ಬಳಿಕ ಲಭ್ಯವಿದ್ದರೆ ಎರೆಹುಳುಗಳ ಮರಿಗಳನ್ನು ಒಳಗೆ ಬಿಡಬಹುದು. ಬಳಿಕ ಮುಚ್ಚಳ ಹಾಕಬೇಕು. ಆದರೆ ಭದ್ರವಾಗಿ ಮುಚ್ಚಳ ಹಾಕಬಾರದು. ಒಳಗೆ ಗಾಳಿಯಾಡಲು ಅವಕಾಶ ಬೇಕು. ಇದರಿಂದ ತುಂಬಿದ ತ್ಯಾಜ್ಯವನ್ನು ನಾವು ಕಲಸುವ ಪ್ರಕ್ರಿಯೆ ಅಗತ್ಯ ಬೀಳುವುದಿಲ್ಲ. ಗಾಳಿಯೇ ಆ ಕ್ರಿಯೆಯನ್ನು ನಡೆಸಿ ಮೂರು ತಿಂಗಳಲ್ಲಿ ಹದನಾದ ಗೊಬ್ಬರವಾಗಿ ಮಾರ್ಪಡಿಸುತ್ತದೆಂಬುದು ಭಟ್ಟರು ಹೇಳುವ ವಿವರಣೆ.

ಸೆಗಣಿ ಹಾಕಬೇಕು
ಲಭ್ಯವಿದ್ದರೆ ವಾರಕ್ಕೊಮ್ಮೆ ಸೆಗಣಿಯನ್ನು ಕರಗಿಸಿ ಪೈಪಿನೊಳಗೆ ಹಾಕಬಹುದು. ಇನ್ನು ಇದರೊಳಗಿನಿಂದ ದುರ್ವಾಸನೆ ಬರತೊಡಗಿದರೆ ಒಳಗೆ ಕೊಳೆಯುವ ಪ್ರಕ್ರಿಯೆ ಸುಗಮವಾಗಿ ನಡೆಯುತ್ತಿಲ್ಲ ಎಂದರ್ಥವಂತೆ. ಚಳಿಗಾಲದಲ್ಲಿ ಗೊಬ್ಬರವಾಗಲು ಸ್ವಲ್ಪ ಹೆಚ್ಚು ಅವಧಿ ಬೇಕು. ಬೇಸಗೆಯಲ್ಲಿ ಬೇಗನೆ ಆಗುತ್ತದೆ. ಹಲಸಿನಂತಹ ಮರಗಳು ಪೈಪಿನ ಬಳಿ ಇದ್ದರೆ ಅದರ ಬೇರುಗಳು ಒಳಗೆ ಪ್ರವೇಶಿಸಿ ಗೊಬ್ಬರವನ್ನು ಮೊದಲೇ ತಿಂದುಬಿಡುತ್ತವೆ. ಹೀಗಾಗಿ ಎಚ್ಚರಿಕೆಯಿಂದ ಸ್ಥಳದ ಆಯ್ಕೆ ಮಾಡಬೇಕು.

ಹುಡಿ ಗೊಬ್ಬರ ಲಭ್ಯ
ಒಂದು ಪೈಪಿನಲ್ಲಿ ಒಂದು ಅಡಿ ವ್ಯಾಸದಷ್ಟು ಹುಡಿ ಗೊಬ್ಬರ ಸಿಗುತ್ತದೆ. ಭಟ್ಟರು ರಾಸಾಯನಿಕ ಬಳಸದೆ ಇದೇ ಗೊಬ್ಬರ ಮಾತ್ರ ಬಳಸಿ ತೊಂಡೆ, ಬೆಂಡೆ, ಬಸಳೆಯಂತಹ ತರಕಾರಿಗಳು, ಬಾಳೆ, ವಿಧವಿಧದ ಹೂಗಿಡಗಳನ್ನು ಬೆಳೆಯಬಹುದೆಂಬುದನ್ನು ಸುಂದರವಾದ ತಮ್ಮ ಹಿತ್ತಿಲಿನ ಗಿಡಗಳ ಸಾಕ್ಷ್ಯದ ಮೂಲಕ ತೋರಿಸುತ್ತಾರೆ. ಒಂದು ಸ್ಥಾವರಕ್ಕೆ ಸುಮಾರು ಎರಡು ಸಾವಿರ ರೂಪಾಯಿ ವೆಚ್ಚವಾಗುತ್ತದೆ. ಆದರೂ ಅದರಿಂದ ಪರಿಸರವೂ ಸ್ವತ್ಛವಾಗುತ್ತದೆ. ಕೃಷಿಗೂ ಲಾಭವಾಗುತ್ತದೆ ಎನ್ನುವ ಲೆಕ್ಕಾಚಾರ ಭಟ್ಟರದು. ಎಲ್ಲರ ಮನೆಯ ಹಿತ್ತಿಲಲ್ಲೂ ಇದರ ಅಳವಡಿಕೆ ಬಲು ಸುಲಭ ಎನ್ನುತ್ತಾರವರು.

ನಾಲ್ಕು ಮಿಲಿ ಲೀಟರ್‌ ದಪ್ಪವಿರುವ ಉತ್ತಮ ಗುಣಮಟ್ಟದ ಬಲವಾದ ಪಿವಿಸಿ ಪೈಪು ಆಯ್ದುಕೊಳ್ಳಬೇಕು. ಹತ್ತು ಇಂಚು ಅಗಲವಾದ ಬಾಯಿ ಇದ್ದರೆ ಉತ್ತಮ. ಒಂದೂವರೆ ಮೀಟರ್‌ ಉದ್ದದ ಪೈಪಿನ ಕಾಲುಭಾಗವನ್ನು ಮಣ್ಣಿನ ಗುಂಡಿ ತೋಡಿ ಹೂಳಬೇಕು. ಗ್ರಾನೈಟ್‌ ತುಂಡು ಮತ್ತು ಮರಳು ಬಳಸಿ ಬುಡವನ್ನು ಗಟ್ಟಿ ಮಾಡಿದರೆ ಒಳ್ಳೆಯದು. ಇಲ್ಲವಾದರೆ ಒಳಗೆ ಎರೆಹುಳಗಳಿದ್ದರೆ ಬುಡದಲ್ಲಿ ಇಲಿಗಳು ಕೊರೆದು ಹಾನಿ ಮಾಡುತ್ತವೆ.

– ಪ. ರಾಮಕೃಷ್ಣ ಶಾಸ್ತ್ರಿ

ಟಾಪ್ ನ್ಯೂಸ್

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

Outrage over mistakes in CET exam question paper; Request for mercy marks

CET ಪರೀಕ್ಷೆ ಪ್ರಶ್ನೆಪತ್ರಿಕೆಯಲ್ಲಿ ಲೋಪಕ್ಕೆ ಆಕ್ರೋಶ; ಕೃಪಾಂಕಕ್ಕೆ ಆಗ್ರಹ

1-qweeweq

Viral video; ಯಾರಿವರು ಇಶಾ ಅರೋರಾ? ಮತದಾನದ ದಿನ ಭಾರಿ ಸುದ್ದಿ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

New Jersey: ಸ್ಥಳೀಯ ಶಾಪ್‌ ನಲ್ಲಿ ಕಳ್ಳತನ- ಇಬ್ಬರು ಭಾರತೀಯ ವಿದ್ಯಾರ್ಥಿನಿಯರ ಬಂಧನ

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

RCB; ಸುಮ್ಮನೆ ಒಪ್ಪಂದಕ್ಕೆ ಸಹಿ ಹಾಕು…: ವಿರಾಟ್ ಜತೆಗಿನ ಮಾತುಕತೆ ನೆನೆದ ಕೆ.ಎಲ್ ರಾಹುಲ್

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರಕಾರ ಬದ್ದ: ಸತೀಶ್ ಜಾರಕಿಹೊಳಿ

ನೇಹಾ ಹತ್ಯೆ ಖಂಡನೀಯ… ಅಪರಾಧಿಗೆ ಕಠಿಣ ಶಿಕ್ಷೆ ನೀಡಲು ಸರ್ಕಾರ ಬದ್ಧ: ಸತೀಶ್ ಜಾರಕಿಹೊಳಿ

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!

Lok Sabha Poll: 2019ರಲ್ಲಿ ಕೇವಲ 9 ರೂ. ಇದ್ದ ವ್ಯಕ್ತಿ ಈಗ 108 ಕೋಟಿ ಒಡೆಯ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-weew

Mudigere; ಹುಲಿ ಹತ್ಯೆ ಆರೋಪದ ಮೇಲೆ ಇಬ್ಬರ ಬಂಧನ

1-wwqwqe

BJP ಶ್ರೀರಾಮುಲು, ಗಾಯತ್ರಿ ಸಿದ್ದೇಶ್ವರ್ ಈಗಾಗಲೇ ಗೆದ್ದಿದ್ದಾರೆ: ಜನಾರ್ದನ ರೆಡ್ಡಿ

1-qeqwqwe

Kumta: ಮಾಜಿ ಶಾಸಕಿ ಶಾರದಾ ಮೋಹನ್ ಶೆಟ್ಟಿ ಮರಳಿ ಕಾಂಗ್ರೆಸ್ ಸೇರ್ಪಡೆ

4-udupi

Udupi: ರಮಾಬಾಯಿ ಕೊಚ್ಚಿಕಾರ್‌ ಪೈ ನಿಧನ

1-aaa

Bajpe: ಹೆದ್ದಾರಿಯಲ್ಲಿ ಬ್ರೇಕ್ ಫೇಲ್ ಆಗಿ ಅಂಗಡಿಗಳು, ಹಲವು ವಾಹನಗಳಿಗೆ ಗುದ್ದಿದ ಲಾರಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.