ಮೈಕಾಂತಿ ಹೆಚ್ಚಳಕ್ಕೆ ಇಲ್ಲಿದೆ ಉಪಾಯ

Team Udayavani, Sep 17, 2019, 5:00 AM IST

ಚರ್ಮ ನಮ್ಮ ಸೌಂದರ್ಯ ಎಂಬ ಮಾತಿದೆ. ಸುಂದರವಾದ, ಹೊಳೆಯುವ ಚರ್ಮವನ್ನು ಹೊಂದುವುದು ಅನೇಕರ ಆಶಯ. ಆದರೆ ಮುಖದ ಸೌಂದರ್ಯಕ್ಕೆ ಹೆಚ್ಚಿನ ಮಹತ್ವ ನೀಡುವ ಎಲ್ಲರೂ ಚರ್ಮದ ಸೌಂದರ್ಯದ ಬಗ್ಗೆ ಹೆಚ್ಚು ಗಮನಹರಿಸುವುದಿಲ್ಲ. ಮನೆಯಲ್ಲೇ ಇರುವ ವಸ್ತುಗಳಿಂದ ಹೊಳೆಯುವ ಚರ್ಮ ಪಡೆಯಬಹುದು.. ಮನೆ ಮದ್ದುಗಳನ್ನು ಸ್ನಾನದ ನೀರಿನಲ್ಲಿ ಬಳಸುವುದರಿಂದ ಕಾಂತಿಯುತ ಚರ್ಮವನ್ನು ಪಡೆಯಬಹುದು. ನಿಸರ್ಗ ದತ್ತ ಸಾಮಗ್ರಿಗಳು ಹೆಚ್ಚು ಪರಿಣಾಮಕಾರಿ ಹಾಗೂ ಅಡ್ಡಪರಿಣಾ ಮಗಳಿಲ್ಲ. ಸ್ನಾನದ ನೀರಿಗೆ ಯಾವ ವಸ್ತು ಗಳನ್ನು ಬೆರೆಸುವುದರಿಂದ ಚರ್ಮದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು ಮಾಹಿತಿ ಇಲ್ಲಿದೆ.

ಉಪ್ಪು
ಸ್ನಾನದ ನೀರಿನಲ್ಲಿ ಕಲ್ಲುಪ್ಪು ಸೇರಿಸುವುದರಿಂದ ತ್ವಚೆಯ ತುರಿಕೆ, ಉರಿಯೂತ, ಸನ್‌ಬರ್ನ್ ಹಾಗೂ ಮಾನಸಿಕ ಒತ್ತಡದಂತೆ ಚರ್ಮದ ಸೂಕ್ಷ್ಮ ಸಮಸ್ಯೆಗಳನ್ನು ದೂರಗೊಳಿಸಬಹುದು. ರಕ್ತಪರಿಚಲನೆಯನ್ನು ಸುಗಮವಾಗುತ್ತದೆ.

ಜೇನುತುಪ್ಪ
ಜೇನುತುಪ್ಪವನ್ನು ಸ್ನಾನದ ನೀರಿಗೆ ಬೆರೆಸಿದರೆ ಚರ್ಮ ಮೃದುವಾಗುತ್ತದೆ. ಅರ್ಧ ಬಟ್ಟಲು ಜೇನನನ್ನು ನೀರಿಗೆ ಬೆರಿಸಿ ಅರ್ಧಗಂಟೆಯ ಬಳಿಕ ಸ್ನಾನ ಮಾಡಿದರೆ ತ್ವಚೆಯ ಕಾಂತಿ ಹೆಚ್ಚುತ್ತದೆ.

ವಿನೆಗರ್‌
ತ್ವಚೆಯ ಪಿಎಚ್‌ ಪ್ರಮಾಣವನ್ನು ಸಮತೋಲನ ದಲ್ಲಿರಿಸಿಕೊಳ್ಳಲು ವಿನೆಗರ್‌ ಅನ್ನು ಸ್ನಾನದ ನೀರಿಗೆ ಬೆರೆಸುವುದು ಉತ್ತಮ. ಬೆನ್ನುನೋವು, ಮಂಡಿನೋವು, ಮಣಿಕಟ್ಟು ನೋವನ್ನು ವಿನೆಗರ್‌ ನೀರು ನಿವಾರಿಸುತ್ತದೆ.

ಅಡುಗೆ ಸೋಡ
ಅಡುಗೆ ಸೋಡವನ್ನು ನೀರಿಗೆ ಬೆರೆಸಿ ಸ್ನಾನ ಮಾಡುವುದರಿಂದ ಚರ್ಮದ ರಂಧ್ರಗಳು ಆಳದವರೆಗೆ ಶುಚಿಯಾಗುತ್ತದೆ. ಆ್ಯಂಟಿ ಇನಾ#$Éಮೆಟರಿ ಅಂಶಗಳನ್ನು ಹೊಂದಿರುವ ಸೋಡ ಮೊಡವೆ ಕಲೆ, ದದ್ದುಗಳನ್ನು ದೂರ ಮಾಡುತ್ತದೆ.

ತೆಂಗಿನೆಣ್ಣೆ
ಸ್ನಾನದ ನೀರಿಗೆ ತೆಂಗಿನೆಣ್ಣೆ ಅಥವಾ ಬಾದಮಿ ಎಣ್ಣೆಯನ್ನು ಬೆರೆಸುವುದರಿಂದ ಹೊಳೆಯುವ ಚರ್ಮವನ್ನು ಪಡೆಯಬಹುದು. ನೈಸರ್ಗಿಕ ಮೊಶ್ಚರೈಸರ್‌ ಇದಾಗಿದ್ದು, ಶುಷ್ಕತೆಯನ್ನು ಹೋಗಲಾಡಿಸುತ್ತದೆ.

- ಆರ್‌.ಕೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಕಣ್ಣಿನ ದೋಷವಿರುವವರ ಕನ್ನಡಕ ಬಳಸುತ್ತಿದ್ದ ಕಾಲ ಮರೆಯಾಗಿ ಆಧುನಿಕತೆಗೆ ತಕ್ಕಂತೆ ಕಾಂಟೆಕ್ಟ್ ಲೆನ್ಸ್‌ಗಳ ಬಳಕೆ ಹೆಚ್ಚಾಗಿದೆ. ಎಲ್ಲರ ಮುಂದೆ ಕನ್ನಡಕ ಹಾಕಲು...

  • ಅಸಿಡಿಟಿ ಇತ್ತೀಚಿಗೆ ಎಲ್ಲರಲ್ಲೂ ಬಾಧಿಸಿರುವ ಸಮಸ್ಯೆಯಾಗಿದೆ. ಹೊಟ್ಟೆಯ ಗ್ಯಾಸ್ಟ್ರಿಕ್‌ ಗ್ರಂಥಿಗಳಲ್ಲಿ ಆಮ್ಲಗಳು ಸ್ರವಿಸಿದಾಗ ಅಸಿಡಿಟಿ ಹೆಚ್ಚಾಗಿ ಉಸಿರಾಟದ...

  • ದಂತಕ್ಷಯ ಅಥವಾ ಹಲ್ಲು ಹುಳುಕಾಗುವುದು ಬಾಯಿಯ ಒಂದು ಪ್ರಮುಖ ಆರೋಗ್ಯ ಸಮಸ್ಯೆಯಾಗಿದೆ. ಅಧಿಕ ಸಕ್ಕರೆ ಸೇವಿಸಿದರೆ ನಿಸ್ಸಂದೇಹವಾಗಿ ಹಲ್ಲಿನಲ್ಲಿ ಹುಳುಕಾಗುತ್ತದೆ....

  • ತೆಂಗಿನ ಎಣ್ಣೆ ಬಳಕೆ ಯಿಂದ ಕೊಬ್ಬಿನಾಂಶ ಹೆಚ್ಚುತ್ತದೆ ಎಂಬುದು ಕೆಲವರ ನಂಬಿಕೆ. ಆದರೆ ಪ್ರತಿನಿತ್ಯ ತೆಂಗಿನ ಎಣ್ಣೆ ಸೇವನೆಯಿಂದ ಆರೋಗ್ಯವಾಗಿರ ಬಹುದು ಮತ್ತು...

  • ಶಿಸ್ತಿನ ದೇಹ ಎಂದೂ ಔಟ್‌ ಆಫ್ ಫ್ಯಾಷನ್‌ ಆಗುವುದೇ ಇಲ್ಲ. ಈಗಲೂ ನಮ್ಮ ಜೀವನದಲ್ಲಿ ಬಿಡುವಿಲ್ಲದ ಕೆಲಸಗಳ ನಡುವೆ ಸಾಧ್ಯವಾದಷ್ಟು ವ್ಯಾಯಾಮ ಮಾಡಿ ಫಿಟ್‌ ಆಗಲು ಪ್ರಯತ್ನಿಸುತ್ತೇವೆ....

ಹೊಸ ಸೇರ್ಪಡೆ