ಆಟೋಮೊಬೈಲ್‌ ಕ್ಲಸ್ಟರ್‌ ಮಂಗಳೂರಿನಲ್ಲೂ ಸ್ಥಾಪನೆಯಾಗಲಿ

Team Udayavani, Feb 24, 2019, 7:17 AM IST

ಚೀನ ಮಾದರಿಯ ಆಟೋ ಮೊಬೈಲ್‌ ಕ್ಲಸ್ಟರ್‌ ಮಂಗಳೂರಿನಲ್ಲೂ ಸ್ಥಾಪನೆಗೆ ಹಲವು ಕಾರಣಗಳೂ ಇವೆ ಜತೆಗೆ ಅವಕಾಶಗಳೂ. ಎಲ್ಲ ರೀತಿಯ ಸಾರಿಗೆ ವ್ಯವಸ್ಥೆ ಇಲ್ಲಿದೆ. ಅಲ್ಲದೇ ಹಲವು ತಾಂತ್ರಿಕ ಕಾಲೇಜುಗಳು ಇರುವುದರಿಂದ ಆಟೋ ಮೊಬೈಲ್‌ ಕ್ಲಸ್ಟರ್‌ ಸ್ಥಾಪಿಸಿದರೆ ಇಲ್ಲಿ ಸಾಕಷ್ಟು ಉದ್ಯೋಗವಕಾಶಗಳನ್ನೂ ಸೃಷ್ಟಿಸಲು ಸಾಧ್ಯವಿದೆ. ಜತೆಗೆ ಮಂಗಳೂರಿನ ಸಮಗ್ರ ಅಭಿವೃದ್ಧಿಗೂ ಇದು ಪೂರಕವಾಗಲಿದೆ.

ಕರ್ನಾಟಕ ಸರಕಾರ ರಾಜ್ಯದ ಒಂಬತ್ತು ಜಿಲ್ಲೆಗಳಲ್ಲಿ ಚೀನ ಮಾದರಿಯಲ್ಲಿ ಕೈಗಾರಿಕಾ ಕ್ಲಸ್ಟರ್‌ ಗಳನ್ನು ಸ್ಥಾಪಿಸುತ್ತಿದೆ. ಕೊಪ್ಪಳದಲ್ಲಿ ಟಾಯ್ಸ ಕ್ಲಸ್ಟರ್‌ ಹಾಗೂ ಬಳ್ಳಾರಿಯಲ್ಲಿ ಜವಳಿ ಕ್ಲಸ್ಟರ್‌ ಗಳು ಫೆ.18ರಂದು ಉದ್ಘಾಟನೆಗೊಂಡಿವೆ. ಚಿಕ್ಕಬಳ್ಳಾಪುರದಲ್ಲಿ ಮೊಬೈಲ್‌ ಫೋನ್ಸ್‌, ಮೈಸೂರಿನಲ್ಲಿ ಪ್ರಿಂಟೆಡ್‌ ಸರ್ಕ್ನೂಟ್‌ ಬೋರ್ಡ್ಸ್‌, ಹಾಸನದಲ್ಲಿ ಟೈಲ್ಸ್‌, ಕಲಬುರಗಿಯಲ್ಲಿ ಸೋಲಾರ್‌ ಪ್ಯಾನಲ್ಸ್‌, ಚಿತ್ರದುರ್ಗದಲ್ಲಿ ಎಲ್‌ಇಡಿ ಲೈಟ್ಸ್‌, ಬೀದರ್‌ನಲ್ಲಿ ಕೃಷಿ ಉಪಕರಣಗಳು ಹಾಗೂ ತುಮಕೂರಿನಲ್ಲಿ ನ್ಪೋರ್ಟ್ಸ್ಗೂಡ್ಸ್‌ ಕ್ಲಸ್ಟರ್‌ ಗಳು ಸ್ಥಾಪಿಸಲು ಸರಕಾರ ಕಾರ್ಯಯೋಜನೆ ರೂಪಿಸಿದೆ. ಒಟ್ಟು 9 ಉತ್ಪನ್ನ ಪ್ರವರ್ಗಗಳಲ್ಲಿ ಪ್ರಸ್ತುತ 9 ಜಿಲ್ಲೆಗಳಲ್ಲಿ ಕೈಗಾರಿಕಾ ಕ್ಲಸ್ಟರ್‌ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಇದರಿಂದ 9 ಲಕ್ಷ ಮಂದಿಗೆ ಉದ್ಯೋಗ ಲಭಿಸುವ ನಿರೀಕ್ಷೆಯಿದೆ.

ಮಂಗಳೂರು ನಗರ ಒಂದೊಮ್ಮೆ ಹೆಂಚು ಉದ್ದಿಮೆಗೆ ದೇಶವಿದೇಶಗಳಲ್ಲಿ ಗುರುತಿಸಿಕೊಂಡಿತ್ತು. ಮಂಗಳೂರು ಹೆಂಚು ಎಂಬ ಬ್ರ್ಯಾಂಡ್ ನಿಂದಲೇ ಇಲ್ಲಿನ ಹೆಂಚುಗಳು ಗುರುತಿಸಿಕೊಂದ್ದವು. ಇದು ಮಂಗಳೂರು ನಗರಕ್ಕೆ ಒಂದು ಅನನ್ಯತೆಯನ್ನು ತಂದುಕೊಟ್ಟಿತ್ತು. ಗೋಡಂಬಿ ಉದ್ಯಮಕ್ಕೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಹೆಸರುವಾಸಿಯಾಗಿದೆ ಮತ್ತು ಈಗಲೂ ಇಲ್ಲಿಂದ ವಿದೇಶಗಳಿಗೆ ಸಂಸ್ಕರಿತ ಗೋಡಂಬಿ ರಫ್ತು ಆಗುತ್ತಿದೆ. ಆತಿಥ್ಯ ಉದ್ಯಮದಲ್ಲಿ ಅನೇಕ ಹೊಸಬಗೆಯ ತಿಂಡಿಗಳನ್ನು ಪರಿಚಯಿಸಿದ ಹೆಗ್ಗಳಿಕ ಜಿಲ್ಲೆಯದ್ದಾಗಿದೆ.

ಮಸಾಲೆದೋಸೆ ಮಂಗಳೂರಿಗರ ಕೊಡುಗೆಯಾಗಿದೆ. ಶತಮಾನಗಳ ಹಿಂದೆ ವಿದೇಶಗಳಿಗೆ ಸಾಂಬಾರು ಜೀನಸುಗಳ ರಫ್ತು ಮತ್ತು ಆಮದು ವ್ಯವಹಾರದ ಹೆಬ್ಟಾಗಿಲು ಕೂಡ ಮಂಗಳೂರು ನಗರವೇ ಆಗಿತ್ತು. ಆದರೆ ಒಟ್ಟಾರೆಯಾಗಿ ಮಂಗಳೂರು ಇನ್ನೂ ಉದ್ಯಮ ಕ್ಷೇತ್ರಗಳಲ್ಲಿ ದೇಶದ ಪ್ರಮುಖ ನಗರಗಳ ಸಾಲಿನಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿಲ್ಲ. ಚೀನ ಮಾದರಿಯಲ್ಲಿ ರಾಜ್ಯದ ಒಂದೊಂದು ಜಿಲ್ಲೆಗಳಲ್ಲಿ ಒಂದೊಂದು ಉತ್ಪನ್ನಗಳಿಗೆ ಆದ್ಯತೆ ನೀಡಿ ಅದನ್ನು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸುವಂತೆ ಮಾಡುವ ಸರಕಾರದ ಯೋಜನೆ ಉತ್ತಮವಾಗಿದೆ. ಇದೇ ಮಾದರಿಯಲ್ಲಿ ಮಂಗಳೂರು ನಗರದಲ್ಲೂ ಒಂದು ಉತ್ಪನ್ನ ಕ್ಷೇತ್ರಕ್ಕೆ ವಿಶೇಷ ಆದ್ಯತೆ ನೀಡಿ ಅದನ್ನು ಅಭಿವೃದ್ಧಿಪಡಿಸಿ ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಚುರಪಡಿಸಿ ಉತ್ಪನ್ನ ಕೇಂದ್ರವಾಗಿ ಗುರುತಿಸುವಂತೆ ಮಾಡಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ಮಂಗಳೂರು ನಗರವನ್ನು ಆಟೋಮೊಬೈಲ್‌ ಉತ್ಪನ್ನ ತಯಾರಿಕಾ ಕ್ಲಸ್ಟರ್‌ ಆಗಿ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಚಿಂತನೆ ನಡೆಸಬಹುದಾಗಿದೆ.

ಮಂಗಳೂರು ಆಟೋಮೊಬೈಲ್‌ ಉದ್ಯಮಕ್ಕೆ ಪೂರಕವಾದ ನಗರವಾಗಿದೆ. ಇಲ್ಲಿ ಹೂಡಿಕೆಗಳಿಗೆ
ವಿಪುಲ ಅವಕಾಶಗಳಿರುವ ನಗರ ಎಂಬುದಾಗಿ ಪರಿಗಣಿಸಲ್ಪಟ್ಟಿದೆ. ಕಾರು, ವ್ಯಾನ್‌ ಸಹಿತ ಲಘು
ವಾಹನಗಳು, ಲಾರಿ, ಬಸ್‌ ಸಹಿತ ಭಾರೀ ವಾಹನಗಳಿಗೆ ಪೂರಕ ಬಿಡಿಭಾಗಗಳನ್ನು ಸರಬರಾಜು ಮಾಡುವ ಕೆಲವು ಕೈಗಾರಿಕೆಗಳು ಜಿಲ್ಲೆಯಲ್ಲಿ ಈಗಾಗಲೇ ಕಾರ್ಯಾಚರಿಸುತ್ತಿವೆ. ಬ್ರೇಕ್‌ ಡ್ರಮ್‌, ಲೀಪ್‌ ಸ್ಟ್ರಿಂಗ್‌, ಸೂð, ನಟ್‌ ಮುಂತಾದವುಗಳು ಇದರಲ್ಲಿ ಸೇರಿವೆ. ವಿದೇಶಗಳಿಗೂ ರಫ್ತು ಆಗುತ್ತಿವೆ. ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಎಲ್ಲ ಕಂಪೆನಿಗಳ, ಎಲ್ಲ ಮಾದರಿಗಳ ಕಾರುಗಳು, ವಾಹನಗಳ ಶೋರೂಂಗಳು , ಸರ್ವಿಸ್‌ ಕೇಂದ್ರಗಳು ಮಂಗಳೂರಿನಲ್ಲಿವೆ. ಐಷಾರಾಮಿ ಅತ್ಯಂತ ದುಬಾರಿ ಕಾರುಗಳು ಹೆಚ್ಚಿನ ಸಂಖ್ಯೆಯಲ್ಲಿ ಮಂಗಳೂರಿನಲ್ಲಿ ಮಾರಾಟವಾಗುತ್ತಿರುವ ಹಿನ್ನೆಲೆಯಲ್ಲಿ ಇದರ ಕಂಪೆನಿಗಳು ತಮ್ಮ ಶೋರೂಂಗಳನ್ನು, ಸರ್ವಿಸ್‌ ಕೇಂದ್ರಗಳನ್ನು ಸುತ್ತಮುತ್ತಲಿನ ನಾಲ್ಕೈದು ಜಿಲ್ಲೆಗಳನ್ನು ಕೇಂದ್ರೀಕರಿಸಿಕೊಂಡು ಮಂಗಳೂರಿನಲ್ಲಿ ತೆರೆದಿವೆ.

ಪ್ರಸ್ತಾವನೆ ಇತ್ತು
ಮಂಗಳೂರನ್ನು ಆಟೋಮೊಬೈಲ್‌ ಉತ್ಪನ್ನಗಳ ಕೇಂದ್ರವಾಗಿ ಅಭಿವೃದ್ಧಿ ಪಡಿಸುವ ಪ್ರಸ್ತಾವನೆ ಬಹಳಷ್ಟು ವರ್ಷಗಳ ಹಿಂದೆಯೇ ಕೇಳಿಬಂದಿತ್ತು. ನಗರದ ಹೊರವಲಯದ ಮುಡಿಪು ಹಾಗೂ ಮಂಗಳೂರು ಬೈಕಂಪಾಡಿಯಲ್ಲಿ ಜೆಸ್ಕೋ ಉದ್ದಿಮೆಗೆ ಸ್ವಾಧೀನಪಡಿಸಲಾಗಿದ್ದ ಭೂಮಿಯಲ್ಲಿ ಒಂದು ಭಾಗವನ್ನು ವಶಪಡಿಸಿಕೊಂಡು ಅಲ್ಲಿ ಆಟೋಮೊಬೈಲ್‌ ಪಾರ್ಕ್‌ ಸ್ಥಾಪನೆ ಪ್ರಸ್ತಾವನೆ ಮಾಡಲಾಗಿತ್ತು. ಕಾರು ತಯಾರಿಕಾ ಕಂಪೆನಿಗಳು ಕೂಡ ಮಂಗಳೂರಿನಲ್ಲಿ ತಮ್ಮ ಉತ್ಪಾದಕ ಘಟಕಗಳನ್ನು ಸ್ಥಾಪಿಸಲು ಆಸಕ್ತಿ ತೋರ್ಪಡಿಸಿದ್ದವು. ಆದರೆ ಬಳಿಕ ಕಾರಣಾಂತರಗಳಿಗೆ ಇದು ಸಾಕಾರಗೊಳ್ಳಲಿಲ್ಲ.

ಅನುಕೂಲತೆಗಳು
ಮುಡಿಪು ಬಳಿಯ ಕೆನರಾ ಕೈಗಾರಿಕಾಭಿವೃದ್ಧಿ ಪ್ರದೇಶದಲ್ಲಿ 80 ಎಕರೆ, ಕೈರಂಗಳ ಐಟಿ ಎಸ್‌ ಇಝಡ್‌ನ‌ಲ್ಲಿ 80 ಎಕರೆ, ಬೈಕಂಪಾಡಿ ಎಸ್‌ ಇಝಡ್‌ನ‌ಲ್ಲಿ 340 ಎಕ ರೆ, ಗಂಜಿಮಠದ ರಫ್ತು ಉತ್ತೇಜನ ಹೂಡಿಕೆ ಪಾರ್ಕ್‌ನಲ್ಲಿ (ಇಪಿಐಪಿ) 50 ಎಕರೆ ಜಾಗ ಪ್ರಸ್ತುತ ಲಭ್ಯವಿದೆ. ಒಟ್ಟು ಸೇರಿದರೆ ಸುಮಾರು ಮಂಗಳೂರು ನಗರದಲ್ಲಿ 550 ಎಕರೆ ಭೂಮಿ ಕೈಗಾರಿಕೆಗಳ ಸ್ಥಾಪನೆಗೆ ಸಿದ್ಧವಾಗಿದೆ. ಕೆಲವು ಕಡೆ ಹೊಸದಾಗಿ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಬೈಕಂಪಾಡಿ, ಯೆಯ್ನಾಡಿ, ಕಾರ್ನಾಡ್‌ ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 15 ಕೈಗಾರಿಕಾ ಪ್ರದೇಶಗಳಿವೆ. ಇದಲ್ಲದೆ ಹೊಸದಾಗಿ ಇವುಗಳಲ್ಲಿ ಯಾವುದಾದರೂ ಒಂದು ಪ್ರದೇಶವನ್ನು ಆಯ್ದುಕೊಂಡು ಆಟೋಮೊಬೈಲ್‌ ಕ್ಲಸ್ಟರ್‌ ಅಭಿವೃದ್ಧಿಪಡಿಸಬಹುದಾಗಿದೆ. ನಗರದಲ್ಲಿ ರಸ್ತೆ ಸೇರಿದಂತೆ ಮೂಲಸೌಕರ್ಯಗಳು ಕೂಡ ಉತ್ತಮವಾಗಿವೆ. ಉತ್ಪನ್ನಗಳ ಸಾಗಾಟ , ರಫ್ತಿಗೆ ರೈಲು, ಬಂದರು, ಉತ್ತಮ ಹೆದ್ದಾರಿ ಸೌಲಭ್ಯಗಳಿವೆ. ಮಂಗಳೂರು ನಗರವೂ ಸಹಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಅಧಿಕ ಸಂಖ್ಯೆಯಲ್ಲಿ ಪ್ರತಿಷ್ಠಿತ ಎಂಜಿನಿಯರಿಂಗ್‌ ಕಾಲೇಜುಗಳಿವೆ. ಬಹುಸಂಖ್ಯೆಯಲ್ಲಿ ಐಟಿಐ, ಪಾಲಿಟೆಕ್ನಿಕ್‌ಗಳಿವೆ. ವರ್ಷಕ್ಕೆ ಸಾವಿರಾರು ತಾಂತ್ರಿಕ ಪದವೀಧರರು, ಡಿಪ್ಲೊಮಾ ಪಡೆದವರು ಹೊರಬರುತ್ತಿದ್ದಾರೆ. ಮಂಗಳೂರಿನಲ್ಲಿ ಆಟೋಮೊಬೈಲ್‌ ಕ್ಲಸ್ಟರ್‌ ಆಭಿವೃದ್ಧಿಗೆ ಉತ್ತೇಜನ ನೀಡುವುದರಿಂದ ಕರಾವಳಿಯ ಜಿಲ್ಲೆ ಸಾವಿರಾರು ಯುವಕರಿಗೆ ಉದ್ಯೋಗಾವಕಾಶಗಳು ಕೂಡ ಲಭ್ಯವಾಗಲಿವೆ.

 ಕೇಶವ ಕುಂದರ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ