ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ


Team Udayavani, Mar 22, 2020, 5:50 AM IST

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ದೈನಂದಿನ ಜೀವನದಲ್ಲಿ ಒತ್ತಡ ಮತ್ತು ಜಂಜಾಟಗಳಿಂದ ದೂರವಾಗಲು ಹೆಚ್ಚಿನವರು ಸಮುದ್ರದ ಅಲೆಗಳ ಮಾತು ಕೇಳಲೆಂದು ಸಮುದ್ರ ತೀರಗಳಿಗೆ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ವೀಕ್ಷಿಸಲು ಬರುತ್ತಾರೆ. ಹೆಚ್ಚಿನ ಪ್ರವಾಸಿಗರು ತಮ್ಮ ಪ್ರವಾಸ ತಾಣಗಳ ಲೀಸ್ಟ್‌ಗಳಲ್ಲಿ ಸಮುದ್ರ ವೀಕ್ಷಣೆಯನ್ನು ಕೂಡ ಸೇರಿಸಿಕೊಂಡಿರುತ್ತಾರೆ. ವರದಿಯೊಂದರ ಪ್ರಕಾರ ರಜೆಯ ವೇಳೆ ಪ್ರವಾಸ ಮಾಡುವ 10 ಜನರಲ್ಲಿ ಸುಮಾರು 8ರಷ್ಟು ಜನ ಬೀಚ್‌ಗಳತ್ತ ಮುಖ ಮಾಡುತ್ತಾರಂತೆ ಎಂಬುದು ಇದಕ್ಕೆ ಸಾಕ್ಷಿಯಾಗಿದೆ.

ಈ ನಿಟ್ಟಿನಲ್ಲಿ ಇಂದು ಬೀಚ್‌ ಪ್ರವಾಸೋದ್ಯಮದ ಅಭಿವೃದ್ಧಿ ಕೂಡ ಸರಕಾರದ ಆದ್ಯತೆಯಾಗಿ ಪರಿಣಮಿಸಿದೆ. ಹೀಗಾಗಿ ಬೀಚ್‌ಗಳನ್ನು ಸ್ವಚ್ಛ, ಸುಂದರ ಮತ್ತು ಅತ್ಯಾಧುನಿಕವಾಗಿ ನಿರ್ಮಿಸಲು ಪಣ ತೊಡಲಾಗುತ್ತಿದೆ. ಪ್ಲಾಸ್ಟಿಕ್‌ ನಿಷೇಧಕ್ಕೆ ಹೆಚ್ಚು ಗಮನಹರಿಸಬೇಕು. ಈ ಮೂಲಕ ಪ್ರತೀ ವರ್ಷ ಮಿಲಿಯಾಂತರ ಪ್ರಾಣಿ ಪಕ್ಷಿಗಳು ಸಾವನ್ನಪ್ಪುತ್ತಿರುವುದನ್ನು ತಡೆಯಬಹುದಾಗಿದೆ.

ಬೀಚ್‌ಗಳ ಸ್ವಚ್ಛತೆಗೆ ಮೊದಲ ಆದ್ಯತೆ
ಬೀಚ್‌ಗಳಿಗೆ ಮಳೆಗಾಲವೊಂದನ್ನು ಬಿಟ್ಟರೆ ಉಳಿದೆಲ್ಲ ಸಮಯದಲ್ಲೂ ಪ್ರವಾಸಿಗರ ಪ್ರಮಾಣ ಹೆಚ್ಚಾಗಿಯೇ ಇರುತ್ತದೆ. ಜನ ಹೆಚ್ಚು ಹೆಚ್ಚು ಭೇಟಿ ನೀಡುವಾಗ ಅಲ್ಲಿ ಕಸ, ಮಾಲಿನ್ಯದ ಪ್ರಮಾಣವೂ ಹೆಚ್ಚುತ್ತದೆ. ತಾಜ್ಯದ ನಿರ್ವಹಣೆಗೆ ಸರಕಾರ ಸರಿಯಾದ ಕ್ರಮ ತೆಗೆದುಕೊಳ್ಳುವುದು ಮುಖ್ಯವಾಗಿದೆ. ಇಲ್ಲಿಗೆ ಬರುವ ಪ್ರವಾಸಿಗರು ತಮ್ಮೊಂದಿಗೆ ತರುವಂಥ ಏಕ ಬಳಕೆಯ ಪ್ಲಾಸ್ಟಿಕ್‌ ಬಾಟಲಿ, ಚಾಕೊಲೇಟ್‌ ಹಾಳೆ, ಪ್ಲಾಸ್ಟಿಕ್‌ ಸ್ಟ್ರಾಗಳು ಹಗೂ ಇತರೆ ಪ್ಲಾಸ್ಟಿಕ್‌ ತಾಜ್ಯವನ್ನು ಬಿಸಾಡುವುದರಿಂದ ಬೀಚ್‌ಗಳಲ್ಲಿ ಟನ್‌ಗಟ್ಟಲೆ ಪ್ಲಾಸ್ಟಿಕ್‌ ತಾಜ್ಯ ಸೃಷ್ಟಿಯಾಗುತ್ತಿದೆ. ಇದರಿಂದ ಪರಿಸರ, ಬೀಚ್‌ನ ಸ್ವಚ್ಛತೆ ಮತ್ತು ಅಲ್ಲಿ ಜಲಚರ ಜೀವರಾಶಿಯ ಮೇಲೂ ಗಂಭೀರವಾದ ಪರಿಣಾಮ ಉಂಟಾಗುತ್ತಿದೆ.

ಕಸದ ಬುಟ್ಟಿಗಳ ಅಲಭ್ಯತೆ
ನಗರದ ಅನೇಕ ಬೀಚ್‌ಗಳಲ್ಲಿ ಇಂದು ಎಷ್ಟು ದೂರಕ್ಕೆ ಪ್ರಯಾಣಿಸಿದರೂ ಕಸ ಹಾಕುವಂಥ ಬುಟ್ಟಿಗಳು ಕಾಣುವುದೇ ಇಲ್ಲ. ಇದು ಕಸ ಬಿಸಾಡುವವರಿಗೆ ಒಂದು ನೆಪ ಆಗಿ ಪರಿಣಮಿಸುತ್ತದೆ. ಹಾಗಾಗಿ ಬೀಚ್‌ಗಳಲ್ಲಿ ಕಸ ಹಾಕುವ ಬುಟ್ಟಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಒದಗಿಸುವತ್ತ ಅಲ್ಲಿನ ನಗರ ಪಾಲಿಕೆ ಅಥವಾ ಸಂಬಂಧಪಟ್ಟ ಆಡಳಿತ ವ್ಯವಸ್ಥೆ ಗಮನಹರಿಸಬೇಕಾಗಿದೆ.

ಬೀಚ್‌ ಸ್ವಚ್ಛತಾ ದಿನ
ವಿಶ್ವ ಸಂಸ್ಥೆ ಬೀಚ್‌ ಮಾಲಿನ್ಯವನ್ನು ತಡೆಯುವ ಸಲುವಾಗಿ ಪ್ರತೀ ವರ್ಷ ಸೆ. 21ನ್ನು ಅಂತಾರಾಷ್ಟ್ರೀಯ ಬೀಚ್‌ ಸ್ವಚ್ಛತಾ ದಿನವನ್ನಾಗಿ ಅಚರಿಸುತ್ತದೆ. ವಿಶ್ವಾದ್ಯಂತ ಸುಮಾರು 40ಕ್ಕೂ ಹೆಚ್ಚು ರಾಷ್ಟ್ರಗಳು ಈ ಅಭಿಯಾನದಲ್ಲಿ ಪಾಲ್ಗೊಳ್ಳುವ ಮೂಲಕ ಬೀಚ್‌ ಸ್ವಚ್ಛತೆಗೆ ಪ್ರಾಮುಖ್ಯತೆ ನೀಡಿವೆ.

ಬೀಚ್‌ ಸ್ವಚ್ಛತೆಗೆ ಅನುಸರಿಸಬೇಕಾದ ಕ್ರಮ
ಬೀಚ್‌ನ ಸ್ವಚ್ಛತೆಯನ್ನು ಕಾಪಾಡುವಲ್ಲಿ ಸಂಬಂಧಪಟ್ಟ ಇಲಾಖೆ ಕೆಲವೊಂದು ಕಟ್ಟುನಿ ಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯ.
1 ತಿಂಗಳಿಗೆ ಒಂದು ಬಾರಿಯಾದರೂ ಅಲ್ಲಿನ ಜನಪ್ರತಿನಿಧಿಗಳು ಬೀಚ್‌ ಸ್ವಚ್ಛತಾ ಅಭಿಯಾನದ ಮೂಲಕ ಜನರಲ್ಲಿ ಜಾಗೃತಿ ಮೂಡಿಸುವುದು ಮತ್ತು ಜನರು ಸಹ ಅದರಲ್ಲಿ ಸಕ್ರೀಯವಾಗಿ ಪಾಲ್ಗೊಳ್ಳುವಂತೆ ಪ್ರೇರೇಪಿಸುವುದು.
2 ಬೀಚ್‌ಗಳಲ್ಲಿ ಸಂಪೂರ್ಣವಾಗಿ ಪ್ಲಾಸ್ಟಿಕ್‌ ಬಳಕೆಗೆ ನಿರ್ಬಂಧಸ ಹೇರುವುದು. ಅಲ್ಲಿನ ಅಂಗಡಿ ಮುಂಗಟ್ಟುಗಳಲ್ಲಿ ಪ್ಲಾಸ್ಟಿಕ್‌ ವಸ್ತುಗಳ ಬಳಕೆಯನ್ನು ನಿಷೇಧಿಸುವುದು.
3 ಸ್ವತ್ಛತೆಗೆ ಅಲ್ಲಲ್ಲಿ ಕಸದ ಬುಟ್ಟಿಗಳನ್ನು ಇರಿಸುವುದು ಮತ್ತು ಸಂಗ್ರಹವಾದ ತ್ಯಾಜ್ಯದ ಸಮರ್ಪಕ ನಿರ್ವಹಣೆ ಮಾಡುವುದು.
4 ಬೀಚ್‌ ನಿರ್ವಹಣೆ ಸಿಬಂದಿ ನೇಮಿಸುವುದು. ಭೇಟಿ ನೀಡುವ ಪ್ರವಾಸಿಗರು ಕಸ ಬಿಸಾಡಿದರೆ ಅಂಥವರ ವಿರುದ್ಧ ಕಟ್ಟುನಿಟ್ಟಾಗಿ ಕ್ರಮ ಜರಗಿಸುವುದು.

 ಶಿವಾನಂದ ಎಚ್‌.

ಟಾಪ್ ನ್ಯೂಸ್

byv

ನಾನು ಎಲ್ಲಿಂದ ಸ್ಪರ್ಧಿಸಬೇಕೆಂದು ಪಕ್ಷ ತೀರ್ಮಾನ ಮಾಡಬೇಕು: ಬಿ.ವೈ.ವಿಜಯೇಂದ್ರ

ಅಧಿಪತ್ಯ ಸಾಧಿಸಲು ಸಿದ್ದು ಮತ್ತೆ ಅಖಾಡಕ್ಕೆ

ಅಧಿಪತ್ಯ ಸಾಧಿಸಲು ಸಿದ್ದು ಮತ್ತೆ ಅಖಾಡಕ್ಕೆ

bommai

ಗಡಿ ಜಿಲ್ಲೆಗಳಲ್ಲಿ ಸೋಂಕು ನಿಯಂತ್ರಣಕ್ಕೆ ಕಟ್ಟೆಚ್ಚರ: ಸಿಎಂ ಬಸವರಾಜ ಬೊಮ್ಮಾಯಿ

1-ffff

ಬೆಂಗಳೂರು: ಮುನಾವರ್ ಫರೂಕಿ ಹಾಸ್ಯ ಕಾರ್ಯಕ್ರಮಕ್ಕೆ ಪೊಲೀಸರ ತಡೆ

ಆರಂಭಿಕ ಆಘಾತದಿಂದ ಚೇತರಿಸಿದ ಭಾರತ: ಕಿವೀಸ್ ಗೆ 284 ರನ್ ಗುರಿ

ಆರಂಭಿಕ ಆಘಾತದಿಂದ ಚೇತರಿಸಿದ ಭಾರತ: ಕಿವೀಸ್ ಗೆ 284 ರನ್ ಗುರಿ

Arvind Kejriwal

ಒಮಿಕ್ರಾನ್ ಪೀಡಿತ ದೇಶಗಳಿಂದ ಬರುವ ವಿಮಾನಗಳನ್ನು ಕೂಡಲೇ ನಿಲ್ಲಿಸಿ: PMಗೆ ಕೇಜ್ರಿವಾಲ್ ಪತ್ರ

20film

ಗರುಡ ಗಮನ ವೃಷಭ ವಾಹನ ಚಿತ್ರಕ್ಕೆ ಭಟ್ಟರ ಪ್ರಶಂಸೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

Mangalore-railway

ಮಂಗಳೂರು: ರೈಲ್ವೇ ಸಂಪರ್ಕ ಜಾಲ ವಿಸ್ತರಣೆಗೆ ಹೊಸ ಸಾಧ್ಯತೆಗಳ ಪರಿಶೀಲನೆ

ನಗರ 24×7 ಪರಿಕಲ್ಪನೆಗೆ ಒಲವು

ನಗರ 24×7 ಪರಿಕಲ್ಪನೆಗೆ ಒಲವು

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

garbage

ಕಸ ವಿಲೇವಾರಿ ನಿರ್ಲಕ್ಷ್ಯ ಬೇಡ

MUST WATCH

udayavani youtube

4.2 ಕಿ.ಮೀ. ಸೈಕಲ್ ಚಾಲನೆ ಮಾಡಿದ ಸಚಿವ ಅಶ್ವತ್ಥ ನಾರಾಯಣ

udayavani youtube

ವಾಹನ ತಪಾಸಣೆಗೆ ಇಳಿದ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ ಪ್ರಯಾಣಿಕರು.!

udayavani youtube

ದಾಂಡೇಲಿ: ಗಬ್ಬು ನಾರುತ್ತಿದೆ ಸಂಡೆ ಮಾರ್ಕೆಟ್ ಹೊರ ಆವರಣ

udayavani youtube

ನೀರಿನಿಂದ ಮಲ್ಲಿಗೆ ಗಿಡವನ್ನು ಬೆಳೆಯಬಹುದೇ ?

udayavani youtube

ಎರೆಹುಳು ಸಾಕಾಣಿಕೆ ಮಾಡಿ ಭೂಮಿಯ ಫಲವತ್ತತೆ ಹೆಚ್ಚಿಸಿ, ಕೈತುಂಬಾ ಆದಾಯವೂ ಗಳಿಸಿ

ಹೊಸ ಸೇರ್ಪಡೆ

ಬಿಜೆಪಿ ಅಭ್ಯರ್ಥಿ ಗೆಲುವು ಶತಸಿದ್ಧ    

ಬಿಜೆಪಿ ಅಭ್ಯರ್ಥಿ ಗೆಲುವು ಶತಸಿದ್ಧ    

ಅಭಿವೃದ್ಧಿಗಾಗಿ ಪರಿಷತ್‌ಗೆ ಸ್ಪರ್ಧಿಸಿದ್ದೇನೆ: ನಾರಾಯಣಸ್ವಾಮಿ 

ಅಭಿವೃದ್ಧಿಗಾಗಿ ಪರಿಷತ್‌ಗೆ ಸ್ಪರ್ಧಿಸಿದ್ದೇನೆ: ನಾರಾಯಣಸ್ವಾಮಿ 

ಪಾದಯಾತ್ರೆ ಹಿನ್ನೆಲೆ: ಮೇಕದಾಟುವಿಗೆ ಭೇಟಿ ನೀಡಿದ ಡಿಕೆಶಿ

ಪಾದಯಾತ್ರೆ ಹಿನ್ನೆಲೆ: ಮೇಕದಾಟುವಿಗೆ ಭೇಟಿ ನೀಡಿದ ಡಿಕೆಶಿ

byv

ನಾನು ಎಲ್ಲಿಂದ ಸ್ಪರ್ಧಿಸಬೇಕೆಂದು ಪಕ್ಷ ತೀರ್ಮಾನ ಮಾಡಬೇಕು: ಬಿ.ವೈ.ವಿಜಯೇಂದ್ರ

ಅಧಿಪತ್ಯ ಸಾಧಿಸಲು ಸಿದ್ದು ಮತ್ತೆ ಅಖಾಡಕ್ಕೆ

ಅಧಿಪತ್ಯ ಸಾಧಿಸಲು ಸಿದ್ದು ಮತ್ತೆ ಅಖಾಡಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.