ನಗರ 24×7 ಪರಿಕಲ್ಪನೆಗೆ ಒಲವು


Team Udayavani, Mar 8, 2020, 5:10 AM IST

ನಗರ 24×7 ಪರಿಕಲ್ಪನೆಗೆ ಒಲವು

ನಗರಗಳು ಎಂದ ಮೇಲೆ ಅಲ್ಲಿ ನಿತ್ಯ ನೂತನ ಬದಲಾವಣೆಗಳು ಆಗುತ್ತಾ ಇರುತ್ತವೆ. ಇದೀಗ ನಗರ 24×7 ವ್ಯವಸ್ಥೆ ಪ್ರಾಯೋಗಿಕವಾಗಿ ಮುಂಬಯಿಯಲ್ಲಿ ನಗರ ಆರಂಭವಾಗಲಿದೆ. ಮುಂದೆ ಈ ಪರಿಕಲ್ಪನೆ ಮಂಗಳೂರು ನಗರದಲ್ಲೂ ಆರಂಭವಾಗಬಹುದು. ಶಾಪಿಂಗ್‌ ಮಾಲ್‌, ರೆಸ್ಟೋರೆಂಟ್‌ ಸಹಿತ ಇನ್ನಿತರ ಮಳಿಗೆಗಳು ದಿನದ 24 ಗಂಟೆ ತೆರೆದಿಡುವುದೇ ನಗರ 24×7 ಆಗಿದೆ.

ಮುಂಬಯಿಯಲ್ಲಿ ನಗರ 24×7 ವ್ಯವಸ್ಥೆ ಪ್ರಾಯೋಗಿಕವಾಗಿ ಜ.27 ರಿಂದ ಜಾರಿಗೆ ಬಂದಿದೆ. ಆರಂಭಿಕವಾಗಿ ಇದಕ್ಕೆ ದೊರಕಿರುವ ಉತ್ತಮ ಜನಸ್ಪಂದನೆಯಿಂದಾಗಿ ಇದನ್ನು ಶಾಶ್ವತ ಕ್ರಮವಾಗಿ ಅಂಗೀಕರಿಸಲು ಮಹಾರಾಷ್ಟ್ರ ಸರಕಾರ ಚಿಂತನೆ ನಡೆಸಿದೆ. ಮುಂಬಯಿ ಮಾದರಿಯಲ್ಲೇ ನಗರ 24×7 ವ್ಯವಸ್ಥೆ ಜಾರಿಗೆ ತರುವ ಬಗ್ಗೆ ಇತರ ನಗರಗಳಲ್ಲೂ ಒಲವು ಹೆಚ್ಚುತ್ತಿದೆ.

ಮುಂಬಯಿಯಲ್ಲಿ ನಗರ 24×7 ವ್ಯವಸ್ಥೆ ಮಾಲ್‌ಗ‌ಳು, ಮಳಿಗೆಗಳು ,ರೆಸ್ಟೋರೆಂಟ್‌ಗಳು ದಿನದ 24 ತಾಸುಗಳ ಕಾಲವೂ ಕಾರ್ಯಾಚರಣೆಗೆ ಅನುವು ಮಾಡಿಕೊಡುತ್ತದೆ. ಮುಂಬಯಿ ನಗರದಲ್ಲಿ ಈವರೆಗೆ ಮಳಿಗೆಗಳಿಗೆ ರಾತ್ರಿ 10 ಗಂಟೆಯವರೆಗೆ ಹಾಗೂ ರೆಸ್ಟೋರೆಂಟ್‌ಗಳಿಗೆ 1.30ರವರೆಗೆ ಮಾತ್ರ ಕಾರ್ಯಾಚರಿಸಲು ಅನುಮತಿ ಇತ್ತು. ಹಿಂದೆ ಬಿಜೆಪಿ ಸರಕಾರದಲ್ಲಿ ಫಡ್ನವಿಸ್‌ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮುಂಬಯಿ 24×7 ಪರಿಕಲ್ಪನೆ ರೂಪುಗೊಂಡಿತ್ತು.ಆದರೆ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಇದೀಗ ಶಿವಸೇನೆ- ಕಾಂಗ್ರೆಸ್‌- ಎನ್‌ಸಿಪಿ ನೇತೃತ್ವದ ಮೈತ್ರಿ ಸರಕಾರದ ಪ್ರವಾಸೋದ್ಯಮ ಮತ್ತು ಪರಿಸರ ಸಚಿವರಾಗಿರುವ ಆದಿತ್ಯ ಠಾಕ್ರೆಯವರು ಇದನ್ನು ಪ್ರಾಯೋಗಿಕವಾಗಿ ಜ. 27 ರಂದು ಅನುಷ್ಟಾನಕ್ಕೆ ತಂದಿದ್ದಾರೆ. ಇದರಂತೆ ಆಸಕ್ತಿ ಇರುವವರು ದಿನದ 24 ತಾಸುಗಳ ಕಾಲವೂ ಮಳಿಗೆ, ರಸ್ಟೋರೆಂಟ್‌ಗಳನ್ನು ತೆರದಿಡಬಹುದು. ರೆಸ್ಟೊರೆಂಟ್‌ಗಳು, ಕಮರ್ಷಿಯಲ್‌ ಹಾಟ್‌ಸ್ಪಾಟ್‌ಗಳು ಇದರ ಪ್ರಮುಖ ಪ್ರಯೋಜನದಾರರು. ಆರಂಭದಲ್ಲೇ ಈ ಪರಿಕಲ್ಪನೆಗೆ ವ್ಯಾಪಾರಿ ಸಮುದಾಯ ಹಾಗೂ ಜನತೆಯಿಂದ ದೊರಕಿರುವ ಉತ್ತಮ ಸ್ಪಂದನೆ ಇದನ್ನು ಶಾಶ್ವತವಾಗಿ ನಗರದಲ್ಲಿ ಅನುಷ್ಟಾನಗೊಳಿಸಲು ಸರಕಾರ ಕಾರ್ಯೋನ್ಮುಖವಾಗಿದೆ.

ನಗರ 24×7 ಪರಿಕಲ್ಪನೆಯು ಉದ್ಯೋಗ ಸೃಷ್ಟಿ ಹಾಗೂ ಆದಾಯ ವೃದ್ಧಿಗೆ ಸಹಕಾರಿಯಾಗಲಿದೆ ಎಂಬ ಆಶಯವನ್ನು ಯೋಜನೆಯನ್ನು ಜಾರಿಗೆ ತರುವ ಸಂದರ್ಭದಲ್ಲಿ ಆದಿತ್ಯ ಠಾಕ್ರೆ ವ್ಯಕ್ತಪಡಿಸಿದ್ದಾರೆ. ಮಳಿಗೆ, ರೆಸ್ಟೋರೆಂಟ್‌ಗಳನ್ನು ದಿನದ 24 ತಾಸುಗಳ ಕಾಲ ತೆರೆದಿಡುವುದರಿಂದ ಮೂರು ಪಾಳಿಗಳಲ್ಲಿ ನೌಕರರು ಕೆಲಸ ಮಾಡಬೇಕಾಗುತ್ತದೆ. ಇದರಿಂದ ಒಂದಷ್ಟು ಉದ್ಯೋಗಗಳು ಸೃಷ್ಟಿಯಾಗುತ್ತವೆ. ಜತೆಗೆ ವಾಣಿಜ್ಯ ವ್ಯವಹಾರಗಳು ವೃದ್ಧಿಯಾಗುತ್ತವೆ. ರಿಟೈಲ್‌ ವ್ಯವಹಾರ ಕ್ಷೇತ್ರಕ್ಕೂ ಉತ್ತೇಜನಕಾರಿಯಾಗಿದೆ. ಪ್ರಸ್ತುತ ರಿಟೈಲ್‌ ವ್ಯವಹಾರ ಕ್ಷೇತ್ರ ದೇಶದ ಜಿಡಿಪಿಯಲ್ಲಿ ಶೇ.10 ರಷ್ಟು ಪಾಲು ಹೊಂದಿದೆ. ಸರಕಾರದ ಈ ಕ್ರಮ ಮುಂಬಯಿ ನಗರದಲ್ಲಿ ರಿಟೈಲ್‌ ವ್ಯವಹಾರ ಕ್ಷೇತ್ರದಲ್ಲಿ ಮುಂದಿನ 3 ವರ್ಷಗಳಲ್ಲಿ ಕನಿಷ್ಟ ಶೇ.10 ರಷ್ಟು ಹೆಚ್ಚವರಿ ಉದ್ಯೋಗಾವಕಾಶಗನ್ನು ಸೃಷ್ಠಿಸಲಿದೆ ಎಂದು ರಿಟೈಲ್‌ರ್ ಆಸೋಸಿಯೇಶನ್‌ ಆಫ್‌ ಇಂಡಿಯಾ ( ಆರ್‌ಎಐ) ಅಭಿಪ್ರಾಯ ಪಟ್ಟಿದೆ.

ಬೆಂಗಳೂರಿನಲ್ಲೂ ಹೊಟೇಲು, ಪಬ್‌ಗಳನ್ನು ಮಧ್ಯರಾತ್ರಿಯವರೆಗೆ ತೆರೆದಿಡಲು ಅವಕಾಶವಿದೆ. ಮೆಜೆಸ್ಟಿಕ್‌ನಲ್ಲಿ ತಳ್ಳುಗಾಡಿಗಳು ಕೂಡಾ ರಾತ್ರಿ ಮಧ್ಯರಾತ್ರಿಯವರೆಗೆ ಇರುತ್ತವೆ. ವಿಕೆಂಡ್‌ಗಳಲ್ಲಿ ನಗರದ ಕೆಲವು ಪ್ರದೇಶಗಳಲ್ಲಿ ಪಬ್‌ಗಳು ಅನಧಿಕೃತವಾಗಿ ರಾತ್ರಿ 3 ಗಂಟೆಯವರೆಗೂ ಕಾರ್ಯಾಚರಿಸುತ್ತಿರುವುದು ಕಂಡುಬರುತ್ತವೆ. ಇದು ನಗರಕ್ಕೆ ಹೊರ ಪ್ರದೇಶಗಳಿಂದ ಯುವಕರನ್ನು, ಪ್ರವಾಸಿಗರನ್ನು ಆಕರ್ಷಿಸಲು ನೆರವಾಗುತ್ತಿದೆ.

ಮಂಗಳೂರು ನಗರದ ಕೆಲವು ಸಿಟಿಬಸ್‌ಗಳು ಕನಿಷ್ಠ 12 ಗಂಟೆಯವರೆಗೆ ಸಂಚರಿಸಬೇಕು ಮತ್ತು ಆಯ್ದ ಕೆಲವು ಪ್ರದೇಶದಲ್ಲಿ ರಾತ್ರಿ 12 ಗಂಟೆಯವರೆಗೆ ಮಳಿಗೆಗಳು ಹಾಗೂ ರೆಸ್ಟೋರೆಂಟ್‌ಗಳು ತೆರೆದಿಡಲು ಅವಕಾಶ ಇರಬೇಕು ಎಂಬ ಬೇಡಿಕೆ ಈ ಹಿಂದೆಯೇ ಕೇಳಿಬಂದಿತ್ತು. ನಗರದ ಒಟ್ಟು ಪರಿಸ್ಥಿತಿಯನ್ನು ಅವಲೋಕಿಸಿ ನಿರ್ದಿಷ್ಟವಾಗಿ ಕೆಲವು ರಸ್ತೆಗಳಲ್ಲಿ ಆಹಾರ ಮಳಿಗೆಗಳು, ಮಾಲ್‌ಗ‌ಳು ಹಾಗೂ ರೆಸ್ಟೋರೆಂಟ್‌ಗಳನ್ನು ಮಧ್ಯರಾತ್ರಿಯವರೆಗೆ ತೆರೆದಿಡಲು ಅವಕಾಶ ನೀಡಿದರೆ ನಗರ ಹೆಚ್ಚು ಅವಧಿಯವರೆಗೆ ವಾಣಿಜ್ಯವಾಗಿ ಚಟುವಟಿಕೆಯಿಂದ ಇರುತ್ತದೆ. ನಗರ ಪ್ರವಾಸೋದ್ಯಮ ಅವಕಾಶಗಳಿಗೆ ಈಗಾಗಲೇ ಗುರುತಿಸಿಕೊಂಡಿದೆ. ಹೊರ ಪ್ರದೇಶಗಳಿಂದ ಬರುವ ಪ್ರವಾಸಿಗರಿಗೆ ರಾತ್ರಿ ಹೆಚ್ಚು ಹೊತ್ತು ಶಾಫಿಂಗ್‌ ಮಾಡಲು ಅವಕಾಶ ದೊರೆಯುತ್ತದೆ. ಆಹಾರ ಖಾದ್ಯಗಳು ತಡರಾತ್ರಿವರೆಗೆ ಲಭ್ಯವಿರುತ್ತದೆ. ಇದಲ್ಲದೆ ಸ್ಥಳೀಯವಾಗಿ ಹಗಲಿನಲ್ಲಿ ಉದ್ಯಮ, ಕಚೇರಿ ಕೆಲಸಗಳಲ್ಲಿ ತೊಡಗಿರುವವರಿಗೆ ರಾತ್ರಿ ಕುಟುಂಬದ ಜತೆಗೆ ಮಳಿಗೆ, ರೆಸ್ಟೋರೆಂಟ್‌ಗಳಿಗೆ ತೆರಳಲು ಅನೂಕೂಲವಾಗುತ್ತದೆ. ಮಂಗಳೂರಿಗೆ ಟೆಕ್ಕಿಗಳನ್ನು ಆಕರ್ಷಿಸಲು ಕೂಡಾ ಸಾಧ್ಯವಾಗುತ್ತದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

ನಗರದಲ್ಲಿ ಮಳಿಗೆಗಳು, ಮಾಲ್‌ಗ‌ಳು, ರೆಸ್ಟೋರೆಂಟ್‌ಗಳು ತಡರಾತ್ರಿವರೆಗೆ ತೆರೆದಿಡುವ ಸಂದರ್ಭದಲ್ಲಿ ಒಂದಷ್ಟು ಕಾನೂನು ಸುವ್ಯವಸ್ಥೆ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳಿರುತ್ತವೆ. ಭದ್ರತಾ ಕ್ರಮಗಳು ಕೂಡ ಇರಬೇಕಾಗುತ್ತದೆ. ಈ ದೃಷ್ಟಿಯಲ್ಲಿ ನಗರದಲ್ಲಿ ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ಮಧ್ಯರಾತ್ರಿವರೆಗೆ ತೆರೆದಿಡಲು ಅವಕಾಶ ನೀಡಿದರೆ ಪೊಲೀಸ್‌ ಇಲಾಖೆಗೂ ನಿಗಾವಹಿಸಲು ಸಾಧ್ಯವಾಗುತ್ತದೆ. ಅದುದರಿಂದ ಮಂಗಳೂರಿನಲ್ಲಿ ಒಂದು ನಿರ್ದಿಷ್ಟ ಪ್ರದೇಶ ಅಥವಾ ರಸ್ತೆಯನ್ನು ತೆಗೆದುಕೊಂಡು ರಾತ್ರಿ 12 ಗಂಟೆಯವರೆಗೆ ಮಳಿಗೆಗಳು, ಮಾಲ್‌ಗ‌ಳು, ರೆಸ್ಟೋರೆಂಟ್‌ಗಳಿಗೆ ಕಾರ್ಯನಿರ್ವಹಿಸಲು ಪ್ರಾಯೋಗಿಕವಾಗಿ ಅವಕಾಶ ನೀಡುವ ಚಿಂತನೆ ನಡೆಸಬಹುದಾಗಿದೆ.

ಮಂಗಳೂರಿನಲ್ಲಿ ಸಾಧ್ಯತೆಗಳು
ಮಂಗಳೂರು ನಗರ ಬೆಳೆಯುತ್ತಿದೆ. ವಾಣಿಜ್ಯವಾಗಿ ಮತ್ತು ಔದ್ಯೋಗಿಕವಾಗಿ ವಿಸ್ತರಣೆ ನಿಟ್ಟಿನಲ್ಲಿ ಹೂಡಿಕೆಗಳನ್ನು ಆಕರ್ಷಿಸುವ ಪ್ರಯತ್ನಗಳು ನಡೆಯುತ್ತಿವೆ. ಪ್ರಸ್ತುತ ನಗರದಿಂದ ಹೊರ ಹೋಗುವ ಸರ್ವಿಸ್‌ , ಎಕ್ಸ್‌ಪ್ರೆಸ್‌ ಬಸ್‌ಗಳು ರಾತ್ರಿ 9.30 ಕ್ಕೆ ಸ್ಥಗಿತಗೊಳ್ಳುತ್ತವೆ. ಸಿಟಿಬಸ್‌ಗಳು ಕೂಡ ರಾತ್ರಿ 10.15 ಕ್ಕೆ ಕೊನೆಗೊಳ್ಳುತ್ತವೆ . ಹೊರಗಿನಿಂದ ಬರುವ ಖಾಸಗಿ ಬಸ್‌,ಎಕ್ಸ್‌ಪ್ರೆಸ್‌ ಬಸ್‌ಗಳು ರಾತ್ರಿ 10.30 ರ ವೇಳೆಗೆ ಸ್ಥಗಿತಗೊಳ್ಳುತ್ತವೆ. ಆ ಬಳಿಕ ದೂರದ ಊರಿನಿಂದ ಬರುವ ಕೆಎಸ್‌ಆರ್‌ಟಿಸಿ ಬಸ್‌ಗಳು ಸಂಚಾರ ವಿರಳವಾಗಿ ಇರುತ್ತವೆ. ಮಂಗಳೂರು ಸೆಂಟ್ರಲ್‌ ಹಾಗೂ ಮಂಗಳೂರು ಜಂಕ್ಷನ್‌ಗೆ ರೈಲುಗಳ ಆಗಮನ ನಿರ್ಗಮನ ಇರುತ್ತವೆ. ಬಸ್‌ಗಳ ಸಂಚಾರ ಸ್ಥಗಿತಗೊಂಡ ಬಳಿಕ ನಗರದೊಳಗೆ ಸಂಚರಿಸಲು ಆಟೋರಿಕ್ಷಾಗಳು ಮಾತ್ರ ಆಧಾರವಾಗಿರುತ್ತವೆ. ಬಸ್‌ ಸಂಚಾರಗಳು ಬಹುತೇಕ ರಾತ್ರಿ 10.30ಕ್ಕೆ ಕೊನೆಗೊಳ್ಳುವುದರಿಂದ ನಗರ ಕೂಡ 10 ಗಂಟೆಯ ವೇಳೆ ಬಹುತೇಕ ಸ್ತಬ್ಧವಾಗುತ್ತದೆ. ಹೊಟೇಲ್‌ಗ‌ಳು,ಮಾಲ್‌ಗ‌ಳು ರಾತ್ರಿ 10.30 ಕ್ಕೆ ಬಂದ್‌ ಆಗುತ್ತವೆ.

- ಕೇಶವ ಕುಂದರ್‌

ಟಾಪ್ ನ್ಯೂಸ್

1-sadsa-d

IPL Final ; ಚೆನ್ನೈಗೆ ದೊಡ್ಡ ಸವಾಲು ಮುಂದಿಟ್ಟ ಗುಜರಾತ್; ಸುದರ್ಶನ್ ಸೆಂಚುರಿ ಮಿಸ್

ಕುರುಬೂರು ಬಳಿ ನಡೆದ ಅಪಘಾತ: ಆಸ್ಪತ್ರೆಗೆ ಸಚಿವರ ಭೇಟಿ, ಗಾಯಾಳುಗಳ ಅರೋಗ್ಯ ವಿಚಾರಣೆ

ಮೈಸೂರು: ಕುರುಬೂರು ಬಳಿ ನಡೆದ ಅಪಘಾತ: ಆಸ್ಪತ್ರೆಗೆ ಸಚಿವರ ಭೇಟಿ, ಗಾಯಾಳುಗಳ ಅರೋಗ್ಯ ವಿಚಾರಣೆ

2018 ರಲ್ಲಿ ಪತ್ನಿ ಮತ್ತು ಮಗುವನ್ನು ಕೊಲೆಗೈದ ಪ್ರಕರಣ…: ಆರೋಪಿ ಪತಿಗೆ ಜೀವಾವಧಿ ಶಿಕ್ಷೆ

2018 ರಲ್ಲಿ ಪತ್ನಿ ಮತ್ತು ಮಗುವನ್ನು ಕೊಲೆಗೈದ ಪ್ರಕರಣ…: ಆರೋಪಿ ಪತಿಗೆ ಜೀವಾವಧಿ ಶಿಕ್ಷೆ

ನಾನೇ ಪಕ್ಷದ ಪ್ರಣಾಳಿಕೆಯ ಅಧ್ಯಕ್ಷ…. 5 ಗ್ಯಾರಂಟಿಯ ಆರ್ಥಿಕತೆ ಬಗ್ಗೆ ನನಗೆ ಗೊತ್ತು: ಪರಂ

ನಾನೇ ಪಕ್ಷದ ಪ್ರಣಾಳಿಕೆಯ ಅಧ್ಯಕ್ಷ…. 5 ಗ್ಯಾರಂಟಿಯ ಆರ್ಥಿಕತೆ ಬಗ್ಗೆ ನನಗೆ ಗೊತ್ತು: ಪರಂ

ಪಣಜಿ: ಜೂನ್ 1ರಿಂದ ಮೀನುಗಾರಿಕೆಗೆ ನಿಷೇಧ… ದಡ ಸೇರುತ್ತಿವೆ ಬೋಟುಗಳು

ಪಣಜಿ: ಜೂನ್ 1ರಿಂದ ಮೀನುಗಾರಿಕೆ ನಿಷೇಧ… ದಡ ಸೇರುತ್ತಿವೆ ಬೋಟುಗಳು

police crime

UP ಇಬ್ಬರು ಸ್ಮಗ್ಲರ್ ಗಳ ಬಂಧನ; 2.5 ಕೋಟಿ ರೂ. ಡ್ರಗ್ಸ್ ವಶ

IPL 2023 Final: Dhoni won the toss against GT

GTvsCSK ಮೀಸಲು ದಿನದ ಐಪಿಎಲ್ ಫೈನಲ್: ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದ ಧೋನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ಬೀಚ್‌ ಪ್ರವಾಸೋದ್ಯಮಕ್ಕೆ ಸ್ವಚ್ಛತೆಯ ಸ್ಪರ್ಶ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

ತುಂಬೆ: 7 ಮೀ. ನೀರು ಸಂಗ್ರಹಕ್ಕೆ ಕ್ರಮ ಅಗತ್ಯ

Mangalore-railway

ಮಂಗಳೂರು: ರೈಲ್ವೇ ಸಂಪರ್ಕ ಜಾಲ ವಿಸ್ತರಣೆಗೆ ಹೊಸ ಸಾಧ್ಯತೆಗಳ ಪರಿಶೀಲನೆ

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

ಅಂಗಡಿ ಬದಿಗಳ ಶುಚಿತ್ವಕ್ಕೆ ಮಹತ್ವ ನೀಡಲಿ

garbage

ಕಸ ವಿಲೇವಾರಿ ನಿರ್ಲಕ್ಷ್ಯ ಬೇಡ

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

1-sadsa-d

IPL Final ; ಚೆನ್ನೈಗೆ ದೊಡ್ಡ ಸವಾಲು ಮುಂದಿಟ್ಟ ಗುಜರಾತ್; ಸುದರ್ಶನ್ ಸೆಂಚುರಿ ಮಿಸ್

ಕುರುಬೂರು ಬಳಿ ನಡೆದ ಅಪಘಾತ: ಆಸ್ಪತ್ರೆಗೆ ಸಚಿವರ ಭೇಟಿ, ಗಾಯಾಳುಗಳ ಅರೋಗ್ಯ ವಿಚಾರಣೆ

ಮೈಸೂರು: ಕುರುಬೂರು ಬಳಿ ನಡೆದ ಅಪಘಾತ: ಆಸ್ಪತ್ರೆಗೆ ಸಚಿವರ ಭೇಟಿ, ಗಾಯಾಳುಗಳ ಅರೋಗ್ಯ ವಿಚಾರಣೆ

2018 ರಲ್ಲಿ ಪತ್ನಿ ಮತ್ತು ಮಗುವನ್ನು ಕೊಲೆಗೈದ ಪ್ರಕರಣ…: ಆರೋಪಿ ಪತಿಗೆ ಜೀವಾವಧಿ ಶಿಕ್ಷೆ

2018 ರಲ್ಲಿ ಪತ್ನಿ ಮತ್ತು ಮಗುವನ್ನು ಕೊಲೆಗೈದ ಪ್ರಕರಣ…: ಆರೋಪಿ ಪತಿಗೆ ಜೀವಾವಧಿ ಶಿಕ್ಷೆ

ನಾನೇ ಪಕ್ಷದ ಪ್ರಣಾಳಿಕೆಯ ಅಧ್ಯಕ್ಷ…. 5 ಗ್ಯಾರಂಟಿಯ ಆರ್ಥಿಕತೆ ಬಗ್ಗೆ ನನಗೆ ಗೊತ್ತು: ಪರಂ

ನಾನೇ ಪಕ್ಷದ ಪ್ರಣಾಳಿಕೆಯ ಅಧ್ಯಕ್ಷ…. 5 ಗ್ಯಾರಂಟಿಯ ಆರ್ಥಿಕತೆ ಬಗ್ಗೆ ನನಗೆ ಗೊತ್ತು: ಪರಂ

Minchu

Shivamogga: ಸಿಡಿಲು ಬಡಿದು ಮಹಿಳೆ ಮೃತ್ಯು