ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ


Team Udayavani, Mar 20, 2020, 10:33 AM IST

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಕೃಷ್ಣ ಮಠದ ರಾಜಾಂಗಣದಲ್ಲಿ ಶ್ರೀ ವಿದ್ಯಾಧೀಶ ತೀರ್ಥ ಶ್ರೀಪಾದರ ಆಶೀರ್ವಾದಗಳೊಂದಿಗೆ ಡಿ.12ರಂದು ಉಡುಪಿಯ ರಾಧಾಕೃಷ್ಣ ನೃತ್ಯನಿಕೇತನದ ಭರತಮುನಿ ಜಯಂತ್ಯುತ್ಸವ ಹಾಗೂ ತ್ರಿಂಶತ್‌ ವರ್ಷ ಉದ್ಘಾಟನಾ ಕಾರ್ಯಕ್ರಮ ನೆರವೇರಿತು.

ಬೆಳಗಿನ ಕಾರ್ಯಕ್ರಮದಲ್ಲಿ ಶ್ರೀಕೃಷ್ಣನಿಗೆ ಪ್ರಿಯವಾದ ಕೊಳಲು ವಾದನ ಬಿ. ಪವನ್‌ ರಾಜ್‌ ಸಾಮಗರಿಂದ ನಡೆಯಿತು. ಮೃದಂಗದಲ್ಲಿ ಪೃಥ್ವಿರಾಜ್‌ ಸಾಮಗ ವಯೋಲಿನ್‌ನಲ್ಲಿ ವೈಭವ್‌ ಪೈ ಹಾಗೂ ಆದಿತ್ಯ ಅಡಿಗ ಸಹಕರಿಸಿದರು.

ಸಂಸ್ಥೆಯ ಕಿರಿಯ ವಿದ್ಯಾರ್ಥಿಗಳಿಂದ ಭರತನಾಟ್ಯ ಹಾಗೂ ಹಾಗೂ ವಿ| ಕಾವ್ಯಾ ಹೆಗಡೆ ಹೊನ್ನಾವರ, ಸಂಸ್ಥೆಯ ವಿದ್ಯಾರ್ಥಿನಿಯಿಂದ ಮೈಸೂರು ವಾಸುದೇವಾಚಾರ್ಯರಿಂದ ರಚಿಸಿದ ಶ್ರೀ ಚಾಮುಂಡೇಶ್ವರಿ ಪಾಲಯಮಾಂ ಹಾಗೂ ಬೃಂದಾವನಿ ರಾಗದ ತಿಲ್ಲಾನ ಹಾಗೂ ವಿ| ಕಲ್ಯಾಣಿ ಜೆ. ಪೂಜಾರಿಯವರು ನರಸಿಂಹ ಕೌತ್ವಂ ಹಾಗೂ ಅನ್ನಮಾಚಾರ್ಯರ ಕೃತಿ ಶ್ರೀಮನ್ನಾರಾಯಣ ನೃತ್ಯಗಳಿಂದ ಮುದಗೊಳಿಸಿದರು. ಅನಂತರ ಸಂಸ್ಥೆಯ ವಿದ್ಯಾರ್ಥಿಗಳಿಂದ ಕಥ‌ಕ್‌ ನೃತ್ಯ ಜರಗಿತು.

ಸಂಜೆಯ ಕಾರ್ಯಕ್ರಮದಲ್ಲಿ ಸಂಸ್ಥೆಯ ವಿದುಷಿಯರಿಂದ ನಾಟ್ಯಶಾಸ್ತ್ರ ಪೂರ್ವರಂಗ ವಿಧಿ, ಗಣೇಶ ಸ್ತುತಿ, ಧ್ಯಾನ ಶ್ಲೋಕ ಶಾಂತಾಕಾರಂಗೆ ಸಂಯೋಜಿಸಿದ ವಿಶ್ವರೂಪದರ್ಶನ ನೃತ್ಯ ಕಣ್ಮನ ಸೂರೆಗೊಂಡಿತು. ಶೇಷಶಾಯಿ ಮಹಾವಿಷ್ಣು, ಗರುಡ ಗಮನ ಮಹಾವಿಷ್ಣು

, ದಶಾವತಾರಗಳು ಕಣ್ಮನ ಸೆಳೆದವು. ನಟರಾಜನ ವರ್ಣನೆ ಮಾಡುವ ಕಾಲೈತೂಕಿ ಎಂಬ ತಮಿಳು ಸಾಹಿತ್ಯದ ನೃತ್ಯ ಬಂಧದಲ್ಲಿ ನಟರಾಜನ ಹಲವಾರು ಭಂಗಿಗಳು ಹಾಗೂ ಭೌಮಚಾರಿಗಳ ಪ್ರಯೋಗಗಳು ಅಚ್ಚುಕಟ್ಟಾಗಿ ಮೂಡಿಬಂದವು.

ಕಾರ್ಯಕ್ರಮದ ಕೇಂದ್ರ ಬಿಂದುವಾದ ನೃತ್ಯ ರೂಪಕವೇ ತುಳುನಾಡಿನ ದೀಪಾವಳಿ. ತುಳುನಾಡಿನಲ್ಲಿ ದೀಪಾವಳಿಯನ್ನು ಆಚರಿಸುವ ಪರಿಯನ್ನು ವರ್ಣಮಯವಾಗಿ ಪ್ರದರ್ಶಿಸಲಾಯಿತು. ದೀಪಗಳ ನೃತ್ಯದಿಂದ ಸಂಧ್ಯಾದೀಪಕ್ಕೆ ನಮಿಸುವುದರ ಮೂಲಕ ಪ್ರಾರಂಭವಾಗಿ ಜಲಪೂರಣ ಅಭ್ಯಂಗಸ್ನಾನ ನರಕಾಸುರವಧೆ, ಬಲಿಪೂಜೆ, ಲಕ್ಷ್ಮೀ ಪೂಜೆ, ಗೋ ಪೂಜೆ, ತುಳಸಿ ಪೂಜೆ ಚಿತ್ರಣವನ್ನು ನೃತ್ಯ ರೂಪಕದಲ್ಲಿ ಭಾವಪೂರ್ಣವಾಗಿ ಅಭಿನಯಿಸಿದರು.}

ನರಕ ಚತುರ್ದಶಿಯ ನರಕಾಸುರನ ಪಾತ್ರಧಾರಿ ವಿಶ್ವರೂಪ ಮಧ್ಯಸ್ಥ ಜನಮನಗೆದ್ದರು. ಬಲೀಂದ್ರನನ್ನು ಸಭಿಕರ ಮಧ್ಯೆ ವೇದಿಕೆಗೆ ಸ್ವಾಗತಿಸಿದ ಪರಿ ಸೊಗಸಾಗಿತ್ತು. ಬಲೀಂದ್ರನಾಗಿ ಪವನ್‌ರಾಜ್‌ ಸಾಮಗರವರು ಅಭಿನಯಿಸಿದರು. ವಾಮನನಾಗಿ ಶ್ರಾವ್ಯಾ ಮುಗ್ಧ ಅಭಿನಯದಿಂದ ನಿಜವಾದ ವಾಮನರೂಪಿ ಎಂಬಂತೆ ಕಾಣಿಸಿದರು. ಸ್ವರ್ಗ ಲೋಕದ ವೇದಿಕೆ ವಿನ್ಯಾಸ ಅದ್ಭುತವಾಗಿತ್ತು. ರೂಪಕಕ್ಕೆ ಪೂರಕವಾಗಿ ಬಳಸಿಕೊಂಡ ಜಲಪೂರಣದ ಬಾವಿ, ತುಳಸಿ ಪೂಜೆಯ ತುಳಸಿಕಟ್ಟೆ, ಗೂಡುದೀಪ ಏರಿಸುವಿಕೆ, ಗೋವುಗಳ ಮುಖ ಧರಿಸಿ ಬಂದ ಪರಿ ಹಾಗೂ ಸುಡುಮದ್ದುಗಳುನ್ನು ಸಿಡಿಸುವ ಮೂಲಕ ಇಡೀ ದೀಪಾವಳಿ ಹಬ್ಬ ರಾಜಾಂಗಣ ವೇದಿಕೆಯಲ್ಲಿ ಆಚರಿಸಿದಂತಿತ್ತು.

ಕೊನೆಯಲ್ಲಿ ಯತಿಶ್ರೇಷ್ಠ ಭಾವಿಸಮೀರ ವಾದಿರಾಜರ ವಿರಚಿತ ತುಳಸಿ ಸಂಕೀರ್ತನೆ ಪ್ರೇಕ್ಷಕರೂ ಕೂಡಾ ನೀರೆ ತೊರೆಲೆ ಹಾಡನ್ನು ಗುಣುಗುವಂತೆ ಮಾಡಿ ತನ್ಮಯಗೊಳಿಸಿತು.ವಿ| ಶ್ರೀಧರ ಆಚಾರ್ಯ ಈ ದೀಪಾವಳಿಯ ನೃತ್ಯ ರೂಪಕವನ್ನು ರಚಿಸಿ, ಸಂಗೀತ ಸಂಯೋಜಿಸಿದ್ದರು.

ವಿಷ್ಣುವಾಗಿ ವಿನಿತಾ, ಭಾಮೆಯಾಗಿ ವಿ| ಶ್ರೀಕಲ್ಯಾಣಿ, ಇಂದ್ರನಾಗಿ ವಿ| ರಾಧಿಕಾ, ಶುಕ್ರಾಚಾರ್ಯನಾಗಿ ವಿ| ಗಾಯತ್ರಿ ಅಭಿಷೇಕ್‌ ಸೇರಿದಂತೆ ಎಲ್ಲ ಪಾತ್ರಧಾರಿಗಳು ಮೆಚ್ಚುಗೆಗೆ ಪಾತ್ರರಾದರು.

ನಟುವಾಂಗ, ಹಾಡುಗಾರಿಕೆ, ನೃತ್ಯ ನಿರ್ದೇಶನದಲ್ಲಿ ವಿ| ವೀಣಾ ಎಂ. ಸಾಮಗ, ಮೃದಂಗದಲ್ಲಿ ವಿ| ಮನೋಹರ ರಾವ್‌ ಮಂಗಳೂರು, ತಬಲಾದಲ್ಲಿ ಪೃಥ್ವಿರಾಜ್‌ ಸಾಮಗ, ಚಂಡೆಯಲ್ಲಿ ರಾಮಚಂದ್ರ ಪಾಂಗಣ್ಣಾಯ, ವಯೋಲಿನ್‌ನಲ್ಲಿ ವಿ|ಶ್ರೀಧರ ಆಚಾರ್ಯ, ವರ್ಣಾಲಂಕಾರದಲ್ಲಿ ರಮೇಶ್‌ ಪಣಿಯಾಡಿ, ವೇಷಭೂಷಣ ಬಾಷಾ ಆರ್ಟ್ಸ್ ಸಹಕರಿಸಿದ್ದರು.

ಇಂದು ನಾಡಿಗ್‌ ಬಿ.ಎಸ್‌.

ಟಾಪ್ ನ್ಯೂಸ್

SCHOOL TEA-STUDENTS

ಪಠ್ಯಪುಸ್ತಕ ಪರಿಷ್ಕರಣೆ ನೆಪದಲ್ಲಿ ವೃಥಾ ವಿವಾದ ಬೇಡ

ಉದ್ಯೋಗದ ಆಮಿಷ: ಲಕ್ಷಾಂತರ ರೂ.ವಂಚನೆ

ಉದ್ಯೋಗದ ಆಮಿಷ: ಲಕ್ಷಾಂತರ ರೂ.ವಂಚನೆ

ಹಿಪ್ಪರಗಿಯಲ್ಲಿ ಬಿರುಗಾಳಿಗೆ ಗೋಡೆ ಕುಸಿದು ಮಹಿಳೆ ಸಾವು

ಹಿಪ್ಪರಗಿಯಲ್ಲಿ ಬಿರುಗಾಳಿಗೆ ಗೋಡೆ ಕುಸಿದು ಮಹಿಳೆ ಸಾವು

ಕರ್ತವ್ಯ ಲೋಪ; ಪಿಎಸೈ ಅಮಾನತ್ತು, ಸಿಪಿಐಗೆ ನೋಟಿಸ್

ಕರ್ತವ್ಯ ಲೋಪ; ಪಿಎಸೈ ಅಮಾನತ್ತು, ಸಿಪಿಐಗೆ ನೋಟಿಸ್

Koppalangadi: ಸಿಡಿಲು ಬಡಿದು ಯುವತಿಯರಿಗೆ ಗಾಯ  

Koppalangadi: ಸಿಡಿಲು ಬಡಿದು ಯುವತಿಯರಿಗೆ ಗಾಯ  

ಬೆಳ್ಳಾಯರು: ಮನೆಗೆ ಆಕಸ್ಮಿಕ ಬೆಂಕಿ; ಅಪಾರ ಹಾನಿ

ಬೆಳ್ಳಾಯರು: ಮನೆಗೆ ಆಕಸ್ಮಿಕ ಬೆಂಕಿ; ಅಪಾರ ಹಾನಿ

ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ

ನೇಣು ಬಿಗಿದ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

ಹುಟ್ಟುಹಬ್ಬದ ಕಛೇರಿ “ಜನ್ಮದಿನಮಿದಂ’

ಹುಟ್ಟುಹಬ್ಬದ ಕಛೇರಿ “ಜನ್ಮದಿನಮಿದಂ’

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ

SCHOOL TEA-STUDENTS

ಪಠ್ಯಪುಸ್ತಕ ಪರಿಷ್ಕರಣೆ ನೆಪದಲ್ಲಿ ವೃಥಾ ವಿವಾದ ಬೇಡ

ಉದ್ಯೋಗದ ಆಮಿಷ: ಲಕ್ಷಾಂತರ ರೂ.ವಂಚನೆ

ಉದ್ಯೋಗದ ಆಮಿಷ: ಲಕ್ಷಾಂತರ ರೂ.ವಂಚನೆ

ಹಿಪ್ಪರಗಿಯಲ್ಲಿ ಬಿರುಗಾಳಿಗೆ ಗೋಡೆ ಕುಸಿದು ಮಹಿಳೆ ಸಾವು

ಹಿಪ್ಪರಗಿಯಲ್ಲಿ ಬಿರುಗಾಳಿಗೆ ಗೋಡೆ ಕುಸಿದು ಮಹಿಳೆ ಸಾವು

ಕರ್ತವ್ಯ ಲೋಪ; ಪಿಎಸೈ ಅಮಾನತ್ತು, ಸಿಪಿಐಗೆ ನೋಟಿಸ್

ಕರ್ತವ್ಯ ಲೋಪ; ಪಿಎಸೈ ಅಮಾನತ್ತು, ಸಿಪಿಐಗೆ ನೋಟಿಸ್

Koppalangadi: ಸಿಡಿಲು ಬಡಿದು ಯುವತಿಯರಿಗೆ ಗಾಯ  

Koppalangadi: ಸಿಡಿಲು ಬಡಿದು ಯುವತಿಯರಿಗೆ ಗಾಯ