ದೃಶ್ಯ ಶ್ರಾವ್ಯ ಸಮ್ಮಿಲನ ಮೈಮೆದ ಬಬ್ಬುಸ್ವಾಮಿ

ಬ್ರಾಮರಿ ನಾಟ್ಯಾಲಯ ಅಮ್ಮುಂಜೆ ಪ್ರಸ್ತುತಿ

Team Udayavani, Jul 5, 2019, 5:00 AM IST

7

ಶಾಸ್ತ್ರೀಯ ಶೈಲಿಯಲ್ಲಿ ದೈವದ ಕಾರ್ಣಿಕವನ್ನು ಸಾರುವ ಅಪರೂಪದ ನೃತ್ಯಪ್ರಯೋಗ. ಮಾಲ್ದಿದೇವಿ ಸತ್ಯದ ಗರ್ಭಕ್ಕಾಗಿ ಸಮಾಜದ ವಿರುದ್ಧ ಹೋರಾಡಿದ ಸನ್ನಿವೇಶಗಳು ರಂಗದಲ್ಲಿ ಅದ್ಭುತವಾಗಿ ಮೂಡಿಬಂದವು. ಬಬ್ಬುವಿನ ಕಾರ್ಣಿಕವನ್ನು ಎಳೆಎಳೆಯಾಗಿ ಪ್ರದರ್ಶಿಸಿದ್ದಕ್ಕೆ ಚಪ್ಪಾಳೆಯೇ ಸಾಕ್ಷಿ.

ಅಚ್ಚುಕಟ್ಟಾದ ವೇಷಭೂಷಣ, ಪರಿಪೂರ್ಣ ರಂಗನಡೆ , ಭಾವಪೂರ್ಣ ಅಭಿನಯ ರಂಗಕ್ಕೆ ತಕ್ಕುದಾದ ದೃಶ್ಯ-ಶ್ರಾವ್ಯಗಳು ಸಮ್ಮಿಲನಗೊಂಡು ಪ್ರೇಕ್ಷಕರನ್ನು ಕದಲದಂತೆ ಕೂರಿಸಿದ್ದು ಇತ್ತೀಚೆಗೆ ಉಪ್ಪೂರಿನ ತೆಂಕಬೆಟ್ಟುವಿನಲ್ಲಿ ನಡೆದ “ಮೈಮೆದ ಬಬ್ಬುಸ್ವಾಮಿ’ನೃತ್ಯರೂಪಕ.

ಜಾನಕಿ ಬ್ರಹ್ಮಾವರ ಇವರ ರಚನೆಯಲ್ಲಿ , ವಿ| ಕೆ. ಭವಾನಿ ಶಂಕರ್‌ ಅವರ ದಕ್ಷ ನಿರ್ದೇಶನದಲ್ಲಿ , ವೈಭವ್‌ ಪೈ ಮಣಿಪಾಲ ಇವರ ಸಂಗೀತ ಸಂಯೋಜನೆಯಲ್ಲಿ ಮನೀಷ್‌ ಅಮ್ಮುಂಜೆ ಹಾಗೂ ಸಂಗಡಿಗರಿಂದ ಮೂಡಿಬಂದ ರಂಗಪರಿಕಲ್ಪನೆ ಯಶಸ್ವಿಯಾಗಿ ಮೂರನೆಯ ಭಾರಿ ಶ್ರೀ ಬ್ರಾಮರಿ ನಾಟ್ಯಾಲಯ ಅಮ್ಮುಂಜೆ ಇಲ್ಲಿನ ನೃತ್ಯಕಲಾವಿದರಿಂದ ಪ್ರದರ್ಶನಗೊಂಡ ನೃತ್ಯರೂಪಕ ಭಾವಪೂರಿತ ಅಭಿನಯ ಚತುರತೆಗೆ ಸಾಕ್ಷಿಯಾಯಿತು.

ಕಚ್ಚಾರಿನ ಕಾಂತಣ್ಣ ಬನ್ನಾರ ಎನ್ನುವ ಸಾಮಂತ ಒಂದು ಹೆಣ್ಣು ಮಗುವನ್ನು ತಂದು ಸಾಕಿ ಮಾಲ್ದಿ ಎಂದು ಹೆಸರಿಟ್ಟಲ್ಲಿಂದ ಕಥೆ ಮುಂದುವರಿಯುತ್ತದೆ. ಮುಂದೆ ಮಾಲ್ದಿ ಹೆಣ್ಣು ಹೋಗಿ ಪ್ರೌಢಾವಸ್ಥೆಗೆ ಬಂದಾಗ ಶುದ್ಧಮೀಹಕ್ಕೆ ನೀರಿಗೆ ಮುಳುಗಿದಾಗ ಶಿವನ ಒಂದಂಶ ಇವಳ ಗರ್ಭದಲ್ಲಿ ಪ್ರವೇಶವಾಗಿ ಬಬ್ಬುವಿನ ಜನನವಾಗುತ್ತದೆ. ಇದೊಂದು ಶಾಸ್ತ್ರೀಯ ಶೈಲಿಯಲ್ಲಿ ದೈವದ ಕಾರ್ಣಿಕವನ್ನು ಸಾರುವ ಅಪರೂಪದ ನೃತ್ಯಪ್ರಯೋಗ. ಮಾಲ್ದಿದೇವಿ ಸತ್ಯದ ಗರ್ಭಕ್ಕಾಗಿ ಸಮಾಜದ ವಿರುದ್ಧ ಹೋರಾಡಿದ ಸನ್ನಿವೇಶಗಳು ರಂಗದಲ್ಲಿ ಅದ್ಭುತವಾಗಿ ಮೂಡಿಬಂದವು. ಹಾಗೆಯೇ ಬಬ್ಬುವಿನ ಕಾರ್ಣಿಕವನ್ನು ಎಳೆಎಳೆಯಾಗಿ ಪ್ರದರ್ಶಿಸಿದ್ದು ಪ್ರೇಕ್ಷಕರ ಚಪ್ಪಾಳೆಯೇ ಇದಕ್ಕೆ ಸಾಕ್ಷಿಯಾಯಿತು. ಕತೆಯ ಮಧ್ಯದಲ್ಲಿ ಬರುವ ನರ್ತಕಿಯರ ಲಾಸ್ಯನೃತ್ಯಗಳ ಸಂಯೋಜನೆ, ಹಳ್ಳಿ ಸೊಗಡಿನ ಪಾಡªನ, ಜನಪದ ಹಾಡುಗಳು ರಂಜಿಸಿದವು.

ಮುಂದೆ ಇಕ್ಕೇರಿಯ ಅರಸ ಕಂಡಾಲದ ಯಜಮಾನರಿಗೆ ಬಾವಿ ನೀರಿನ ಸೆಲೆಗಾಗಿ ಒಂದು ಓಲೆ ಬರೆದು ಕಳುಹಿಸುತ್ತಾರೆ. ಅದಕ್ಕಾಗಿ ಬಬ್ಬು ಇಕ್ಕೇರಿಗೆ ಪ್ರಯಾಣಿಸುವಾಗ ದಾರಿಯಲ್ಲಿ ಸನ್ಯಾಸಿ ಅಮ್ಮನವರ ಗುಡಿಗೆ ಕೈಮುಗಿದು ಮುಂದೆ ಸಾಗುವಾಗ ಹೂಕಟ್ಟುವ ಹೆಂಗಳೆಯರು. ಇದೆಲ್ಲ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದು ಭಕ್ತಿ ಉಕ್ಕಿಸುವಂತಿತ್ತು,ಸತ್ಯದರ್ಶನವಾಗುವಂತಿತ್ತು. ಮುಂದೆ ಬಬ್ಬು ಏಣಿಗೆ ಕಾಲುಕೊಟ್ಟು ಬಾವಿಗಿಳಿಯುತ್ತಾನೆ. ಬಾವಿಯಲ್ಲಿ ನೀರು ಕೊಳಗವಾಗಿ ಹರಿಯುತ್ತದೆ. ಮೇಲಿನ ಮಂದಿ ಏಣಿಯನ್ನು ಎಳೆದು ಬಾವಿಯ ಬಾಯಿಗೆ ಹಾಸುಗಲ್ಲನ್ನು ಹಾಸುತ್ತಾರೆ.

ರೂಪಕ ಹೀಗೆ ಸಾಗುತ್ತಿರುವಾಗ ತನ್ನಿಮಾನಿಗ ಅದೇ ದಾರಿಯಾಗಿ ಬಂದು ದಣಿವು ನಿವಾರಿಸಲು ಕುಳಿತಾಗ ಒಳಗಿನ ಬಾವಿಯಿಂದ ಒಮ್ಮೊಮ್ಮೆ ಒಂದೊಂದು ವಿಧದ ಪ್ರಾಣಿ -ಪಕ್ಷಿಗಳ ದನಿ ಕೇಳಿಸುತ್ತದೆ. ಇವೆಲ್ಲವೂ ರಂಗದಲ್ಲಿ ಜೀವಂತ ಪ್ರಾಣಿಗಳ ಕೂಗಿನಂತೆ ಕೇಳುತ್ತಿದ್ದವು. ಕೊನೆಗೆ ಒಂದು ಗಂಡಸಿನ ನೋವಿನ ದನಿ. ತನ್ನಿ ಮಾನಿಗ ತನ್ನ ಬೆಳ್ಳಿಯ ಗೆಜ್ಜೆಕತ್ತಿಯಿಂದ ಹದಿನಾರು ಗೆರೆ ಎಳೆದು ಹಾಸುಗಲ್ಲನ್ನು ನುಚ್ಚುನೂರು ಮಾಡುತ್ತಾಳೆ. ಮೇಲೆತ್ತಲು ಸಹಾಯ ಕೋರಿದ ಗಂಡುದನಿಗೆ ತಾನು ಉಟ್ಟ ಅರವತ್ತು ಮೊಳದ ಸೀರೆಯಲ್ಲಿ ಮೂವತ್ತು ಮೊಳವನ್ನು ಬಾವಿಗಿಳಿಸುತ್ತಾಳೆ. ಬಬ್ಬು ಭೂಮಿನೋಡುತ್ತ ಮೇಲೇರಿ ಬರುತ್ತಾನೆ. ಅಣ್ಣ-ತಂಗಿ ಕಾಯ ಬಿಟ್ಟು ಮಾಯಕ್ಕೆ ಸಂದು ನೆಲೆಯಾಗುತ್ತಾರೆ. ಬಬ್ಬುಸ್ವಾಮಿಯ ಮಹಿಮೆಯನ್ನು ಕೆ. ಭವಾನಿ ಶಂಕರ್‌ ನಿರ್ದೇಶನದಲ್ಲಿ ವಿದ್ಯಾರ್ಥಿಗಳು ವಿಹಂಗಮವಾಗಿ ನಡೆಸಿಕೊಟ್ಟರು.

ಸುಮಾರು ಒಂದೂವರೆ ಗಂಟೆಯ ಈ ಕಾರ್ಯಕ್ರಮದಲ್ಲಿ ನೃತ್ಯಾರ್ಥಿಗಳ ವೇಷಭೂಷಣದ ಬದಲಾವಣೆ ಹಾಗೂ ಚಲನೆ , ಪ್ರಾಣಿ-ಪಕ್ಷಿಗಳ ಪ್ರತಿಕೃತಿಗಳ ಬಳಕೆ, ಪಾತ್ರಧಾರಿಗಳ ಆಂಗಿಕ ಅಭಿನಯ, ರಂಗವಿನ್ಯಾಸ, ವಿಭಿನ್ನ ಬೆಳಕಿನ ಹಿನ್ನೆಲೆಯಲ್ಲಿ ರಂಗದ ಚೆಲುವು ಇವೆಲ್ಲವುಗಳಿಂದ ರೂಪಕ ಸಹೃದಯರ ಮನಮಿಡಿಯುವಂತೆ ಮಾಡಿತು.

ಸುಮಂಗಲಾ

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.