ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು


Team Udayavani, Mar 20, 2020, 10:21 AM IST

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳ ಪ್ರದರ್ಶನವೊಂದು ಇತ್ತೀಚೆಗೆ ಬ್ರಹ್ಮಾವರದ ಆವರ್ಸೆ ಸರಕಾರಿ ಪ್ರೌಢಶಾಲೆಯಲ್ಲಿ ಎರಡು ದಿನ ನಡೆಯಿತು. ಉಡುಪಿ ಜಿಲ್ಲೆಯ ಎಲ್ಲಾ ಪ್ರೌಢಶಾಲೆಗಳ ವಿದ್ಯಾರ್ಥಿಗಳು ಸೃಜನಾತ್ಮಕವಾಗಿ ರಚಿಸಿರುವ ಚಿತ್ರಕಲೆ ಮತ್ತು ಕ್ರಾಫ್ಟ್ ಕೃತಿಗಳ ರಚನೆ, ಪ್ರಾತ್ಯಕ್ಷಿಕೆ ಮತ್ತು ಪ್ರದರ್ಶನ ನಡೆದು ಶಾಲೆಯ ಎಲ್ಲಾ ಕೊಠಡಿಗಳು ಕಲಾಕೃತಿಗಳಿಂದ ತುಂಬಿತುಳುಕಿದವು. ಕಲಾಕೃತಿಗಳ ಸೊಬಗನ್ನು ಸವಿಯಲು ಎರಡು ದಿನ ಸಾಲದು ಎಂಬ ಗೊಣಗಾಟ ಕೇಳಿಬರುತ್ತಿತ್ತು. ಕಿರಿಯ ಕರಗಳ ಕರಕುಶಲತೆಗೆ ಎಲ್ಲರೂ ಮನಸೋತರು.

ಉಡುಪಿ ಜಿಲ್ಲಾ ಪಂಚಾಯತ್‌, ಸಾರ್ವಜನಿಕ ಶಿಕ್ಷಣ ಇಲಾಖೆ, ಪ್ರೌಢಶಾಲಾ ವೃತ್ತಿ ಶಿಕ್ಷಣ ಶಿಕ್ಷಕರ ಸಂಘ ಹಾಗೂ ಚಿತ್ರಕಲಾ ಶಿಕ್ಷಕರ ಸಂಘಗಳು ಜಂಟಿಯಾಗಿ ಆಯೋಜಿಸಿದ ಈ ಕಲಾಪ್ರದರ್ಶನದಲ್ಲಿ ಪ್ರತಿಯೊಂದು ಶಾಲೆಯ ಮಕ್ಕಳೂ ವಿಶಿಷ್ಟ ಉಮೇದ್ವಾರಿಕೆಯೊಂದಿಗೆ ಅಚ್ಚುಕಟ್ಟಾಗಿ ಚಿತ್ರಗಳನ್ನು, ಕರಕುಶಲ ವಸ್ತುಗಳನ್ನು ಜೋಡಿಸಿಟ್ಟಿದ್ದರು. ಸ್ವತಃ ಮಕ್ಕಳೇ ತಮ್ಮ ಸೃಷ್ಟಿಯೆದುರು ತಾವು ಬೆರಗುಗೊಂಡರು. ಇನ್ನಷ್ಟು ಹೊಸ ಕಲಾಕೃತಿ ರಚಿಸಬೇಕೆಂಬುದಕ್ಕೆ ಈ ಕಲಾಪ್ರದರ್ಶನ ಪ್ರೇರಣೆಯಾಯಿತು.

ಕಸದಿಂದ ರಸ ಎಂಬಂತೆ ಅನುಪಯುಕ್ತ ವಸ್ತುಗಳಿಂದ ರಚಿಸಿದ ಕಲಾಕೃತಿಗಳು ತುಂಬಾ ಇದ್ದವು. ಜೊತೆಗೆ ಪ್ರಕೃತಿಯ ವಸ್ತುಗಳನ್ನು ಬಳಸಿ ರಚಿಸಿದ ಕೃತಿಗಳು, ಸಿದ್ಧವಸ್ತುಗಳನ್ನು ಬಳಸಿ ರಚಿಸಿದ ಕಲಾಕೃತಿಗಳು ಹಾಗೂ ತೋಟಗಾರಿಕೆಯ ಫ‌ಲಪುಷ್ಪಗಳು, ಔಷಧೀಯ ಸಸ್ಯಗಳು, ಕಸಿಗಿಡಗಳು ಪ್ರದರ್ಶನದಲ್ಲಿದ್ದವು. ತರಕಾರಿ ಕತ್ತರಿಸಿ ಮೂಡಿಸಿದ ಮಾದರಿಗಳು, ನಿರುಪಯೋಗಿ ರಟ್ಟು, ಕಾಗದ, ಗೆರಟೆ, ಸ್ಟ್ರಾ, ನಾರು, ಬೀಜ, ಧವಸಧಾನ್ಯ, ಮಣಿಗಳು, ಪ್ಲಾಸ್ಟಿಕ್‌ ಬಾಟಿÉಗಳಿಂದ ಸೃಷ್ಟಿಸಿದ ಹೂದಾನಿಗಳು, ಹಕ್ಕಿ ಗೂಡುಗಳು, ಗೂಡುದೀಪಗಳು, ಭತ್ತದ ಕಣಜ, ಯಕ್ಷಗಾನ ಮುಖವಾಡಗಳು, ಬಟ್ಟೆಯ ಕಸೂತಿಗಳು, ಆಭರಣಗಳು, ಶೃಂಗಾರ ಸಾಧನಗಳು, ಮನೆಗುಡಿಸಲುಗಳ ಮಾದರಿಗಳು, ಟೊಪೊಗ್ರಫಿ ಭೂದೃಶ್ಯಗಳು, ಬಲೂನಿನ ಮುಖವಾಡಗಳು ರಾಶಿ ರಾಶಿ ಇದ್ದವು. ಮಕ್ಕಳ ಮೆಚ್ಚಿನ ವಿಷಯಗಳಾದ ಗುಡ್ಡ-ಬೆಟ್ಟಗಳಿರುವ ನಿಸರ್ಗ, ಮಳೆಗಾಲದ ದೃಶ್ಯ, ಕಡಲತೀರ, ಕಂಬಳ, ಕೋಳಿ ಅಂಕ, ತನ್ನ ಮನೆ ಹಾಗೂ ಸುತ್ತಲಿನ ವಾತಾವರಣ, ನನ್ನ ಶಾಲೆ, ನನ್ನ ಮೆಚ್ಚಿನ ನಾಯಿ, ದೀಪಾವಳಿ-ಕ್ರಿಸ್ಮಸ್‌ ಹಬ್ಬ, ಬರ್ತ್‌ಡೇ ಆಚರಣೆ, ಉತ್ಸವ-ಜಾತ್ರೆಗಳು, ಆಟದ ಮೈದಾನ, ಕುಂಬಾರ, ಬಡಗಿ, ದೇವದೇವತೆಗಳ ರೂಪಗಳು ಗ್ಲಾಸ್‌ ಪೈಟಿಂಗ್‌, ಎಂಬ್ರಾಯಟರಿ, ಕೊಲಾಜ್‌ ಹೀಗೆ ವಿವಿಧ ಮಾಧ್ಯಮಗಳಲ್ಲಿ ಆಕರ್ಷಕವಾಗಿ ಮೂಡಿಬಂದಿದ್ದವು. ಅಯಾ ಶಾಲೆಯ ವೃತ್ತಿಶಿಕ್ಷಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಿ ನಿಂತು ಕಲಾಪ್ರದರ್ಶನವನ್ನು ಚೆಂದಗಾಣಿಸಿಕೊಟ್ಟರು. ಎರಡನೆ ದಿನ ನಡೆದ ಸಮಾರಂಭದಲ್ಲಿ ಅತ್ಯುತ್ತಮ ಮಾದರಿ ರಚಿಸಿದ ಶಾಲೆಗಳಿಗೆ ಬಹುಮಾನ ಹಾಗೂ ಹೂ ಗಿಡಗಳನ್ನು ನೀಡಿ ಪ್ರೋತ್ಸಾಹಿಸಲಾಯಿತು.

ಉಪಾಧ್ಯಾಯ ಮೂಡುಬೆಳ್ಳೆ

ಟಾಪ್ ನ್ಯೂಸ್

1-wewqe

Protesting wrestlers ತಮ್ಮ ಬೇಡಿಕೆಗಳನ್ನು ಬದಲಾಯಿಸುತ್ತಿದ್ದಾರೆ: ಬ್ರಿಜ್ ಭೂಷಣ್

b y vijayendra

Free Bus Pass ಕೊಡುವವರು ಮಹಿಳೆಯರ ರಕ್ಷಣೆ ಬಗ್ಗೆ ಯೋಚನೆ ಮಾಡುತ್ತಿಲ್ಲ: ವಿಜಯೇಂದ್ರ

ದಾವಣಗೆರೆ

ದಾವಣಗೆರೆ: ಮಕ್ಕಳಿಬ್ಬರಿಗೆ ಟಿಕ್ಸೋಟೇಪ್ ಸುತ್ತಿ ಕೊಲೆಗೈದ ತಂದೆ!; ಬಂಧನ

big takeaways of ipl 2023

ತವರಿನ ಲಾಭವಿಲ್ಲ, ಟಾಸ್ ಗೆದ್ದು ಫೀಲ್ಡಿಂಗ್ ಮಾಡಬೇಕಿಲ್ಲ…: ಇದು 2023ರ IPL ವಿಶೇಷತೆ

Asia Cup ಶ್ರೀಲಂಕಾದಲ್ಲಿ ಆಡಿ, ಇಲ್ಲವಾದರೆ ಬಿಟ್ಟುಹೋಗಿ: ಪಾಕಿಸ್ಥಾನಕ್ಕೆ BCCI ಚಾಟಿಯೇಟು

Asia Cup ಶ್ರೀಲಂಕಾದಲ್ಲಿ ಆಡಿ, ಇಲ್ಲವಾದರೆ ಬಿಟ್ಟುಹೋಗಿ: ಪಾಕಿಸ್ಥಾನಕ್ಕೆ BCCI ಚಾಟಿಯೇಟು

ಪಣಜಿ: ಮುಂದಿನ ನಾಲ್ಕು ದಿನಗಳ ಕಾಲ ಗೋವಾದಲ್ಲಿ ಗುಡುಗು ಸಹಿತ ಮಳೆ… ಹವಾಮಾನ ಇಲಾಖೆ

ಪಣಜಿ: ಮುಂದಿನ ನಾಲ್ಕು ದಿನ ಗೋವಾದಲ್ಲಿ ಗುಡುಗು ಸಹಿತ ಮಳೆ… ಹವಾಮಾನ ಇಲಾಖೆ ಎಚ್ಚರಿಕೆ

1-csasd

Foxconn ಗೆ ಜುಲೈ 1ರ ವೇಳೆಗೆ ಪೂರ್ತಿ ಭೂಮಿ ಹಸ್ತಾಂತರ: ಎಂ.ಬಿ.ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

ಹುಟ್ಟುಹಬ್ಬದ ಕಛೇರಿ “ಜನ್ಮದಿನಮಿದಂ’

ಹುಟ್ಟುಹಬ್ಬದ ಕಛೇರಿ “ಜನ್ಮದಿನಮಿದಂ’

MUST WATCH

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

ಹೊಸ ಸೇರ್ಪಡೆ

1-wewqe

Protesting wrestlers ತಮ್ಮ ಬೇಡಿಕೆಗಳನ್ನು ಬದಲಾಯಿಸುತ್ತಿದ್ದಾರೆ: ಬ್ರಿಜ್ ಭೂಷಣ್

b y vijayendra

Free Bus Pass ಕೊಡುವವರು ಮಹಿಳೆಯರ ರಕ್ಷಣೆ ಬಗ್ಗೆ ಯೋಚನೆ ಮಾಡುತ್ತಿಲ್ಲ: ವಿಜಯೇಂದ್ರ

1-sadsd

Krishna River ಒಂದು ಟಿಎಂಸಿ ನೀರು ಮಾತ್ರ; 15 ದಿನ ಯಾವುದೆ ಸಮಸ್ಯೆ ಇಲ್ಲ

ಬೀದರ ನಗರಸಭೆ ನಾವಿಕನಿಲ್ಲದ ದೋಣಿ!

ಬೀದರ ನಗರಸಭೆ ನಾವಿಕನಿಲ್ಲದ ದೋಣಿ!

ಕಡೂರು: ಅರಿವು ಮೂಡಿಸುವುದೇ ಗುರುವಿನ ಧರ್ಮ: ರಂಭಾಪುರಿ ಶ್ರೀ