ಜಗನ್ಮಾತೆ ಶ್ರೀ ಪದ್ಮಾವತಿ ಮಹಾತ್ಮೆ ಯಕ್ಷಗಾನ ನಾಟ್ಯ ವೈಭವ


Team Udayavani, Jan 10, 2020, 6:53 PM IST

11

ಜೈನ ಧರ್ಮದ ಇಪ್ಪತ್ಮೊರನೆಯ ತೀರ್ಥಂಕರ ಶ್ರೀ ಪಾರ್ಶ್ವನಾಥ ಸ್ವಾಮಿಯ ವೃತ್ತಾಂತವನ್ನು ಪ್ರಚುರಪಡಿಸುವಾಗ ಯಕ್ಷ ಧರಣೇಂದ್ರ ಮತ್ತು ಯಕ್ಷಿ ಪದ್ಮಾವತಿ ದೇವಿಯ ಮಹಿಮೆಯನ್ನು ತಿಳಿಸಬೇಕಾಗುತ್ತದೆ.

ಜಿನದತ್ತರಾಯ ಉತ್ತರ ಭಾರತದ ಮಥುರೆಯಿಂದ ದಕ್ಷಿಣ ಭಾರತದತ್ತ ಬಂದು ಹುಂಚ (ಹೊಂಬುಜ) ದಲ್ಲಿ ನೆಲೆನಿಂತು, ಆತನ ಆರಾಧ್ಯದೇವಿ ಪದ್ಮಾವತಿ ಮಾತೆಯ ಅನುಗ್ರಹದಿಂದ ರಾಜ್ಯ ಸ್ಥಾಪಿಸಿದ ಕಥೆಯನ್ನಾಧರಿಸಿ ಯಕ್ಷಗಾನ ಕಥಾ ಪ್ರಸಂಗವೊಂದನ್ನು ಬರೆದು, ಪ್ರಕಟಿಸಿ ಲೋಕಾರ್ಪಣೆ ಮಾಡುವ ಸಂದರ್ಭದಲ್ಲಿ ವಿಶಿಷ್ಠ ಯಕ್ಷಗಾನ ವೈಭವ-ನಾಟ್ಯ ವೈಭವ ಎಂಬ ಕಾರ್ಯಕ್ರಮವು ಯಶಸ್ವಿಯಾಗಿ ಹೊಂಬುಜ ಅತಿಶಯ ಶ್ರೀಕ್ಷೇತ್ರದಲ್ಲಿ ಇತ್ತೀಚೆಗೆ ಜರುಗಿತು.

ಪೌರಾಣಿಕ, ಐತಿಹಾಸಿಕ ಘಟನಾವಳಿಯನ್ನು ಆಧರಿಸಿ, ಯಕ್ಷರಂಗದ ಪ್ರದರ್ಶನಕ್ಕೆ ಅಣಿಯಾಗುವಂತೆ ಪ್ರಸಂಗಕರ್ತ ಬೇಳೂರು ವಿಷ್ಣುಮೂರ್ತಿ ನಾಯಕರು 339 ಪದ್ಯಗಳುಳ್ಳ ಕೃತಿಯನ್ನು ರಚಿಸಿದ್ದಾರೆ.

ಯಕ್ಷರಂಗದ ತೆಂಕುತಿಟ್ಟು ಪದ್ಧತಿಯಲ್ಲಿ ಡಾ| ಪ್ರಖ್ಯಾತ ಶೆಟ್ಟಿ (ಭಾಗವತಿಕೆ), ಗುರುಪ್ರಸಾದ್‌ ಬೊಳಿಂಜಡ್ಕ (ಮದ್ದಳೆ), ಪದ್ಮನಾಭ ಉಪಾಧ್ಯಾಯ (ಚಂಡೆ), ರಾಜೇಂದ್ರಕೃಷ್ಣ (ಚಕ್ರತಾಳ) ಹಾಗೂ ಮುಮ್ಮೇಳದಲ್ಲಿ ಮಾರ್ನಾಡ್‌ ಅಕ್ಷಯ ಕುಮಾರ, ಲೋಕೇಶ ಮುಚ್ಚಾರು ಉತ್ತಮ ಪ್ರದರ್ಶನ ಸಂಯೋಜಿಸಿದರು.

ಗಾನ ಮತ್ತು ನಾಟ್ಯ ವೈಭವದ ವಿಶಿಷ್ಠ ಪ್ರಯೋಗವು ಯಕ್ಷಗಾನಾಸಕ್ತರಿಗೆ ಮುದ ನೀಡಿತು. ಬಡಗುತಿಟ್ಟು ಸಂಯೋಜನೆಯಲ್ಲಿ ಭಾಗವತರಾಗಿ ಜಿ. ರಾಘವೇಂದ್ರ ಮಯ್ಯ ಹಾಲಾಡಿ, ಆಗುಂಬೆ ಮಂಜುನಾಥ ಗೌಡ, ಹರಿಹರಪುರ ಶಿವಶಂಕರ ಭಟ್‌, ನಾಗರಕೊಡಿಗೆ ನಾಗೇಶ ಕುಲಾಲ ಹಿಮ್ಮೇಳದಲ್ಲಿ ಯಲ್ಲಾಪುರ ರಾಘವೇಂದ್ರ ಹೆಗಡೆ, ಶ್ರೀನಿವಾಸ ಪ್ರಭು (ಚಂಡೆ) ಮತ್ತು ಮುಮ್ಮೇಳದಲ್ಲಿ ಹೆನ್ನೆಬೈಲು ವಿಶ್ವನಾಥ ಪುಜಾರಿ, ಉಪ್ಪೂರು ಸುಧೀರ್‌, ಪ್ರಸನ್ನ ಶೆಟ್ಟಿಗಾರ್‌, ವಂಡ್ಸೆ ಗೋವಿಂದ, ಬಿಲ್ಲೇಶ್ವರ ಶ್ರೀನಿವಾಸ ಜನಮೆಚ್ಚುಗೆ ಗಳಿಸಿದರು.

ಡಾ| ಎಸ್‌.ಎನ್‌. ಅಮೃತ ಮಲ್ಲ

ಟಾಪ್ ನ್ಯೂಸ್

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

rahul-Gandhi-Car

Defamation case; ಪ್ರಚಾರಕ್ಕಾಗಿ ನನ್ನ ವಿರುದ್ಧ ಮಾನಹಾನಿ ಕೇಸ್‌: ರಾಹುಲ್‌ ಆರೋಪ

1-dubey

Increase of Muslims; ಝಾರ್ಖಂಡ್‌,ಪಶ್ಚಿಮ ಬಂಗಾಲ ಕೇಂದ್ರಾಡಳಿತ ಪ್ರದೇಶವಾಗಿಸಿ: ದುಬೆ

Supreme Court

State-Governor ಕದನ: ಕೇಂದ್ರ ಸರಕಾರಕ್ಕೆ ಸುಪ್ರೀಂ ನೋಟಿಸ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3

Yakshagana: ಚಪ್ಪಾಳೆಗಾಗಿ ರಸಾಭಾಸ ಮಾಡಬಾರದು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

court

Court; ದೇಶಾದ್ಯಂತ 5 ಕೋಟಿ ಕೇಸು ಇತ್ಯರ್ಥಕ್ಕೆ ಬಾಕಿ: ಉ.ಪ್ರ.ದಲ್ಲೇ ಹೆಚ್ಚು!

robbers

Note!;ಕಳ್ಳತನಕ್ಕೆಂದು ಬಂದವ ತಾನೇ 20 ರೂಪಾಯಿ ನೋಟು ಇಟ್ಟು ಹೋದ!

Kohli IPL 2024

Champions Trophy; ಕೊಹ್ಲಿ ಪಾಕ್‌ನಲ್ಲಿ ಆಡಲಿ: ಯೂನಿಸ್‌ ಖಾನ್‌

1-tatoo

Mumbai: 22 ಶತ್ರುಗಳ ಹೆಸರು ಟ್ಯಾಟೂ ಹಾಕಿಸಿಕೊಂಡಾತನ ಕೊಲೆ!

1-wewqewq

Mumbai; 2005ರ ಭೀಕರ ಪ್ರವಾಹ ನೆನಪಿಸಿದ ಮಳೆ!:19 ವರ್ಷ ಹಿಂದಿನ ಸ್ಥಿತಿ ಮರುಕಳಿಸಲಿದೆಯೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.