ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

Team Udayavani, Mar 20, 2020, 10:38 AM IST

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಸರಸ್ವತಿ ವಿದ್ಯಾಲಯದ ವಿದ್ಯಾರ್ಥಿಗಳ ಪ್ರಸ್ತುತಿ

ಶಿಲಪ್ಪದಿಕಾರಂ ಮಹಾಕಾವ್ಯದ ಕತೆಯನ್ನು ಆಧರಿಸಿ ವಿಶ್ವೇಶ್ವರ ಅಡಿಗ ಬಿಜೂರು ರಚಿಸಿದ ಕನ್ನಗಿ
ನಾಟಕವನ್ನು ಮೂಲ ಕತೆಯ ಆಶಯಕ್ಕೆ ಭಂಗ ಬರದಂತೆ ಹಲವಾರು ಬದಲಾವಣೆಗಳೊಂದಿಗೆ ರಂಗರೂಪಕ್ಕೆ ಆಳವಡಿಸಿದ ನಾಟಕ.

ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿ ಪೂರ್ವ ಕಾಲೇಜಿನ ಸುವರ್ಣ ಮಹೋತ್ಸವ ಉದ್ಘಾಟನಾ ಸಮಾರಂಭ ಮತ್ತು ವಾರ್ಷಿಕೋತ್ಸವದ ಅಂಗವಾಗಿ ಅಲ್ಲಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ಕನ್ನಗಿ ನಾಟಕ ಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.

ಶಿಲಪ್ಪದಿಕಾರಂ ಕಾವ್ಯದ ಕತೆಯನ್ನು ಆಧರಿಸಿ ವಿಶ್ವೇಶ್ವರ ಅಡಿಗ ಬಿಜೂರು ರಚಿಸಿದ ಕನ್ನಗಿ ನಾಟಕವನ್ನು ಮೂಲ ಕತೆಯ ಆಶಯಕ್ಕೆ ಭಂಗ ಬರದಂತೆ ಹಲವಾರು ಬದಲಾವಣೆಗಳೊಂದಿಗೆ ರಂಗರೂಪಕ್ಕೆ ಆಳವಡಿಸಿ ನಿರ್ದೇಶಿಸಿದ್ದು ಸರಸ್ವತಿ ವಿದ್ಯಾಲಯದ ವಾಣಿಜ್ಯ ಶಾಸ್ತ್ರ ಉಪನ್ಯಾಸಕರಾದ ನರೇಂದ್ರ ಎಸ್‌. ಗಂಗೊಳ್ಳಿ. ಕೇವಲ ಮೂರೇ ದಿನಗಳಲ್ಲಿ ಕೆಲವೇ ಗಂಟೆಗಳ ಅಭ್ಯಾಸದೊಂದಿಗೆ ವೇದಿಕೆಯಲ್ಲಿ ಉತ್ತಮ ಪ್ರದರ್ಶನ ತೋರಿದ ವಿದ್ಯಾರ್ಥಿಗಳ ಈ ನಿರ್ವಹಣೆ ಜನ ಮೆಚ್ಚುಗೆಗೆ ಪಾತ್ರವಾಯಿತು.

ಚೋಳ ದೇಶದ ಕಾವೇರಿ ಪಟ್ಟಣದ ಪತಿವ್ರತೆ ಕನ್ನಗಿಯ ಪತಿ ಕೋಮಲ ನರ್ತಕಿ ಮಾಧವಿಗೆ ಮನಸೋತು ಮನೆ ತೊರೆಯುತ್ತಾನೆ. ಮತ್ತೆ ದಾಸಯ್ಯನವರ ಮಾತಿಗೆ ಮಣಿದು ಕನ್ನಗಿಯನ್ನು ಸೇರಿದ ಬಳಿಕ ವ್ಯವಹಾರ ಆರಂಭಿಸಲು ಹೊರಟವನು ವಿಧಿಯಾಟಕ್ಕೆ ಬಲಿಯಾಗಿ ಮಧುರೆಯಲ್ಲಿ ಕಳ್ಳತನದ ಆರೋಪವನ್ನು ಹೊತ್ತು ಶಿರಚ್ಛೇಧನಕ್ಕೊಳಗಾಗುತ್ತಾನೆ. ಕನ್ನಗಿ ಗಂಡನ ನಿರಪರಾಧಿತ್ವವನ್ನು ಸಾಬೀತು ಮಾಡಿ ಮಧುರೆ ಬೆಂಕಿ ಹೊತ್ತಿ ಸ್ಮಶಾನವಾಗಲಿ ಎಂದು ಶಾಪ ನೀಡಿ ತಾನು ಕೂಡ ಅಗ್ನಿ ಪ್ರವೇಶ ಮಾಡಿ ಪರಿವ್ರತೆಯ ಮಹಿಮೆ ಮತ್ತು ಶಕ್ತಿಯನ್ನು ಜಗಕೆ ಸಾರುವ ಕತೆಯನ್ನು ಕನ್ನಗಿ ನಾಟಕ ಒಳಗೊಂಡಿದೆ.

ಕನ್ನಗಿಯಾಗಿ ಚೈತ್ರಾ, ಸೂತ್ರಧಾರಳಾಗಿ ಋತು ಎಮ್‌.ಗುತ್ತೇದಾರ್‌, ಚೋಳ ಮತ್ತು ಪಾಂಡ್ಯ ದೇಶದ ರಾಜನಾಗಿ ಶ್ವೇತಾ ಪೂಜಾರಿ ಅಭಿನಯ ವಿಶೇಷ ಗಮನ ಸೆಳೆದರೆ ಕೋಮಲನಾಗಿ ಶ್ರೇಯಾ ಎಸ್‌. ಗಂಗೊಳ್ಳಿ, ಮಾಧವಿಯಾಗಿ ತನಿಖಾ, ಡಂಗುರದವನಾಗಿ ಅಕ್ಷಯ್‌ , ರಾಣಿಯಾಗಿ ಕಾವ್ಯ , ದಾಸಯ್ಯನಾಗಿ ಕೀರ್ತಿ, ಅಕ್ಕಸಾಲಿಗನಾಗಿ ಪೂಜಾ, ರಾಜಭಟರಾಗಿ ವಿಶ್ವಾಸ್‌ ಮತ್ತು ವಿಘ್ನೇಶ್‌ ತಮ್ಮ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು.

ಸುಮಾರು ನಲವತ್ತು ನಿಮಿಷದ ಈ ನಾಟಕದಲ್ಲಿ ಹಿತಮಿತ ರಂಗೋಪಕರಣಗಳನ್ನು ಬಳಸಲಾಗಿತ್ತು. ಹಲವು ಭಾವಗೀತೆಗಳನ್ನು ಅಲ್ಲಲ್ಲಿ ಆಳವಡಿಸಿದ್ದು, ನಾಟಕದುದ್ದಕ್ಕೂ ಕೊಳಲು ಮತ್ತಿತರ ವಾದ್ಯಗಳ ಸಿದ್ಧ ಸಂಗೀತವನ್ನು ಸನ್ನಿವೇಶಕ್ಕೆ ತಕ್ಕುದಾದ ರೀತಿಯಲ್ಲಿ ಬಳಸಿದ್ದು ನಾಟಕದ ಆಕರ್ಷಣೆ ಹೆಚ್ಚಿಸಿತ್ತು. ಒಟ್ಟಿನಲ್ಲಿ ಒಂದು ವಿಭಿನ್ನ ಎನಿಸುವಂತಹ ನಾಟಕವನ್ನು ಇರುವ ಸೀಮಿತ ಅವಕಾಶಗಳಲ್ಲಿ ಪರಿಣಾಮಕಾರಿಯಾದ ರಂಗ ತಂತ್ರಗಳೊಂದಿಗೆ ಆಳವಡಿಸಿ ಯಶಸ್ಸು ಕಂಡಿತು.

ಕಲಾಪ್ರಿಯ

ಟಾಪ್ ನ್ಯೂಸ್

ಸಚಿವರಿಗೆ ವರ್ಗಾವಣೆ ಅಧಿಕಾರ: ಶೇ. 6ರಷ್ಟು ಸರಕಾರಿ ನೌಕರರ ವರ್ಗಕ್ಕೆ ಆದೇಶ

ಸಚಿವರಿಗೆ ವರ್ಗಾವಣೆ ಅಧಿಕಾರ: ಶೇ. 6ರಷ್ಟು ಸರಕಾರಿ ನೌಕರರ ವರ್ಗಕ್ಕೆ ಆದೇಶ

ರಾತ್ರೋ ರಾತ್ರಿ ಲಕ್ಷ್ಮಣ ಸವದಿ ನಿವಾಸಕ್ಕೆ ಡಿಸಿಎಂ ಡಿಕೆಶಿ ಭೇಟಿ

ರಾತ್ರೋ ರಾತ್ರಿ ಲಕ್ಷ್ಮಣ ಸವದಿ ನಿವಾಸಕ್ಕೆ ಡಿಸಿಎಂ ಡಿಕೆಶಿ ಭೇಟಿ

ಬೃಹತ್‌ ಅನ್ಯ ಗ್ರಹ ಪತ್ತೆ: ಭಾರತದ ವಿಜ್ಞಾನಿಗಳಿಂದ ಈ ಸಾಧನೆ

ಬೃಹತ್‌ ಅನ್ಯ ಗ್ರಹ ಪತ್ತೆ: ಭಾರತದ ವಿಜ್ಞಾನಿಗಳಿಂದ ಈ ಸಾಧನೆ

manish sisodia

ಸಿಸೋಡಿಯಾಗಿಲ್ಲ ಜಾಮೀನು

ರಕ್ಷಣ ಸರಕು ರಫ್ತಿನಲ್ಲಿ ಭಾರತ ಸಾರ್ವಕಾಲಿಕ ದಾಖಲೆ: 10 ವರ್ಷಗಳಲ್ಲಿ 23 ಪಟ್ಟು ಹೆಚ್ಚಳ

ರಕ್ಷಣ ಸರಕು ರಫ್ತಿನಲ್ಲಿ ಭಾರತ ಸಾರ್ವಕಾಲಿಕ ದಾಖಲೆ: 10 ವರ್ಷಗಳಲ್ಲಿ 23 ಪಟ್ಟು ಹೆಚ್ಚಳ

ನಾಳೆಯೇ ಗ್ಯಾರಂಟಿ? ಜಾರಿಗಾಗಿ ಸಂಪುಟ ಸಹೋದ್ಯೋಗಿಗಳ ಜತೆ ಇಂದು ಸಿಎಂ ನಿರ್ಣಾಯಕ ಸಭೆ

ನಾಳೆಯೇ ಗ್ಯಾರಂಟಿ? ಜಾರಿಗಾಗಿ ಸಂಪುಟ ಸಹೋದ್ಯೋಗಿಗಳ ಜತೆ ಇಂದು ಸಿಎಂ ನಿರ್ಣಾಯಕ ಸಭೆ

ಸರಕಾರಿ ನೌಕರರ ತುಟ್ಟಿಭತ್ತೆ ಶೇ. 4 ಹೆಚ್ಚಳ

ಸರಕಾರಿ ನೌಕರರ ತುಟ್ಟಿಭತ್ತೆ ಶೇ. 4 ಹೆಚ್ಚಳ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

ಹುಟ್ಟುಹಬ್ಬದ ಕಛೇರಿ “ಜನ್ಮದಿನಮಿದಂ’

ಹುಟ್ಟುಹಬ್ಬದ ಕಛೇರಿ “ಜನ್ಮದಿನಮಿದಂ’

MUST WATCH

udayavani youtube

ಜಾನಪದ ಕಲೆಯನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದ ಸೋಲಿಗರು

udayavani youtube

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರುಗಳ ನಡುವೆ ಅಪಘಾತ, ನಾಲ್ವರಿಗೆ ಗಾಯ

udayavani youtube

ಮಂಡ್ಯ ರಮೇಶ ಅವರ ನಟನದ ರಂಗ ಮಂದಿರ ಹೇಗಿದೆ ನೋಡಿ

udayavani youtube

ಈದ್ಗಾ…ಹಿಂದುತ್ವ…ಅಂದು ಚುನಾವಣೆಯಲ್ಲಿ ಶೆಟ್ಟರ್‌ ವಿರುದ್ಧ ಬೊಮ್ಮಾಯಿ ಪರಾಜಯಗೊಂಡಿದ್ದರು!

udayavani youtube

ಕಾಪು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ನಾಮಪತ್ರ ಸಲ್ಲಿಕೆ

ಹೊಸ ಸೇರ್ಪಡೆ