ಅಲ್ಜೀಮರ್ ಡಿಮೆನ್ಶಿಯಾ


Team Udayavani, Oct 10, 2021, 5:44 AM IST

ಅಲ್ಜೀಮರ್ ಡಿಮೆನ್ಶಿಯಾ

ಡಿಮೆನ್ಶಿಯಾ ಎಂಬುದು ಒಂದು ದೀರ್ಘ‌ಕಾಲಿಕ ಅನಾರೋಗ್ಯ. ಮಿದುಳಿನ ಅನಾರೋಗ್ಯದಿಂದಾಗಿ ಸ್ಮರಣೆ, ಕಲಿಕೆ, ಗ್ರಹಣ, ಗಮನ ಮತ್ತು ತೀರ್ಮಾನ ತೆಗೆದುಕೊಳ್ಳುವ ಸಾಮರ್ಥ್ಯಗಳ ಸಹಿತ ಒಟ್ಟಾರೆ ಮನೋಸಾಮರ್ಥ್ಯ ನಿಧಾನವಾಗಿ ಕ್ಷಯಿಸುತ್ತ ಹೋಗುವುದು ಇದರ ಲಕ್ಷಣಗಳು. ಡಿಮೆನ್ಶಿಯಾಕ್ಕೆ ಗುಣ ಎಂಬುದಿಲ್ಲ. ಚಿಕಿತ್ಸೆಯಿಂದ ಅದರ ಪ್ರಗತಿಯನ್ನು ಅಥವಾ ಮಿದುಳಿನ ಸಾಮರ್ಥ್ಯ ನಶಿಸುವುದನ್ನು ವಿಳಂಬ ಅಥವಾ ನಿಧಾನಗೊಳಿಸುವುದಷ್ಟೇ ಸಾಧ್ಯ. ಅಲ್ಜೀಮರ್ ಡಿಮೆನ್ಶಿಯಾಕ್ಕೆ ಡಾ| ಅಲಾಯಿಸ್‌ ಅಲ್ಜೀಮರ್‌ ಎಂಬ ವಿಜ್ಞಾನಿಯ ಸ್ಮರಣಾರ್ಥ ಆ ಹೆಸರನ್ನು ನೀಡಲಾಗಿದೆ. ಸ್ಮರಣ ಶಕ್ತಿ ನಷ್ಟ, ಭಾಷಿಕ ಸಮಸ್ಯೆಗಳು ಮತ್ತು ಅನೂಹ್ಯ ವರ್ತನೆಗಳನ್ನು ಹೊಂದಿದ್ದ ಮಹಿಳೆಯೊಬ್ಬರಿಗೆ ಮಿದುಳಿನ ಅಂಗಾಂಶಗಳಲ್ಲಾದ ಬದಲಾವಣೆಗಳಿಂದ ಈ ಸಮಸ್ಯೆ ಉಂಟಾಗಿದೆ ಎಂಬುದನ್ನು ಅವರು ಮೊತ್ತ ಮೊದಲ ಬಾರಿಗೆ ಪತ್ತೆ ಮಾಡಿದ್ದರು.

ಪ್ರತೀ ವರ್ಷ ಸೆಪ್ಟಂಬರ್‌ 21ನ್ನು ವಿಶ್ವ ಅಲ್ಜಿಮರ್ ದಿನವನ್ನಾಗಿ ಆಚರಿಸಲಾಗುತ್ತದೆ. ಸಾರ್ವಜನಿಕರಲ್ಲಿ ಈ ಅನಾರೋಗ್ಯದ ಬಗ್ಗೆ ಅರಿವು ಮೂಡಿಸುವುದು, ಈ ಕಾಯಿಲೆಯ ಬಗ್ಗೆ ಇರುವ ತಪ್ಪುಕಲ್ಪನೆಗಳನ್ನು ದೂರ ಮಾಡುವುದು ಮತ್ತು ಈ ರೋಗಿಗಳ ಆರೈಕೆಗೆ ಇರುವ ಆರೋಗ್ಯ ಸೇವೆಗಳನ್ನು ಹೆಚ್ಚಿಸಲು ಸರಕಾರಗಳು, ನೀತಿರೂಪಕರನ್ನು ಒತ್ತಾಯಿಸುವುದಕ್ಕೆ ಈ ದಿನ ಪ್ರಯತ್ನ ಪಡಲಾಗುತ್ತಿದೆ. ಅಲ್ಜೀಮರ್ ಡಿಮೆನ್ಶಿಯಾ ವಯೋವೃದ್ಧರನ್ನೇ ಹೆಚ್ಚಾಗಿ ಬಾಧಿಸುತ್ತದೆಯಾಗಿದ್ದು, ಒಟ್ಟು ಡಿಮೆನ್ಶಿಯಾ ಪ್ರಕರಣಗಳಲ್ಲಿ ಶೇ. 50ರಿಂದ 60ರಷ್ಟಿರುತ್ತದೆ. ವಯಸ್ಸು ಹೆಚ್ಚಿದಂತೆ ಡಿಮೆನ್ಶಿಯಾ ಬಾಧಿಸುವ ಪ್ರಮಾಣವೂ ಹೆಚ್ಚುತ್ತದೆ. 65 ವರ್ಷಕ್ಕಿಂತ ಹೆಚ್ಚು ವಯಸ್ಸಿನವರಲ್ಲಿ ಈ ತೊಂದರೆ ಶೇ. 0.6ರಷ್ಟಿದ್ದರೆ, 85 ವರ್ಷಕ್ಕಿಂತ ಹೆಚ್ಚು ವಯಸ್ಸಿನವರಲ್ಲಿ ಶೇ. 20ರಷ್ಟಿರುತ್ತದೆ. ಭಾರತದ ಜನಸಂಖ್ಯೆ 138 ಕೋಟಿಗಳಷ್ಟಿದ್ದು, ಇವರಲ್ಲಿ 14 ಕೋಟಿಯಷ್ಟು ಮಂದಿ ಹಿರಿಯ ನಾಗರಿಕರಾಗಿದ್ದಾರೆ. ಇವರಲ್ಲಿ ಶೇ.5ರಷ್ಟು ಮಂದಿ ಅಂದರೆ, 50 ಲಕ್ಷ ಮಂದಿ ಡಿಮೆನ್ಶಿಯಾದಿಂದ ಬಳಲುತ್ತಿದ್ದಾರೆ. ಡಿಮೆನ್ಶಿಯಾದ ವಿಧಗಳಲ್ಲಿ ಅಲ್ಜೀಮರ್ ಡಿಮೆನ್ಶಿಯಾ ಅತ್ಯಂತ ಸಾಮಾನ್ಯವಾದುದಾಗಿದೆ.

ಡಿಮೆನ್ಶಿಯಾ ಹಿರಿಯ ನಾಗರಿಕರನ್ನು ಮಾತ್ರವಲ್ಲದೆ ಅವರ ಕುಟುಂಬದವರನ್ನೂ ಸಂಕಟಕ್ಕೀಡು ಮಾಡುತ್ತದೆ. ಇದರಿಂದ ಕುಟುಂಬ ಮತ್ತು ಸಮುದಾಯದ ಮೇಲೆ ಭಾರೀ ಹೊರೆ ಬೀಳುತ್ತದೆ. ಈ ಕಾಯಿಲೆ ಉಲ್ಬಣವಾಗುತ್ತ ಹೋದಂತೆ ಡಿಮೆನ್ಶಿಯಾ ರೋಗಿಗಳಿಗೆ ಅವರ ದೈನಿಕ ಚಟುವಟಿಕೆಗಳಲ್ಲಿ ತುಂಬಾ ಸಹಾಯ ಬೇಕಾಗುತ್ತದೆ ಮತ್ತು ಅವರಿಗೆ ಆರೈಕೆ ಒದಗಿಸುವುದಕ್ಕಾಗಿ ಯಾರಾದರೊಬ್ಬರು ದಿನದ 24 ತಾಸು ಮೀಸಲಿಡಬೇಕಾಗುತ್ತದೆ.

ಇದನ್ನೂ ಓದಿ:ಗೋವಾದಲ್ಲಿ ಚಾರ್ಟರ್ ವಿಮಾನಗಳು ಆರಂಭ: ಉತ್ತಮ ಪ್ರವಾಸಿ ಋತು ನಿರೀಕ್ಷೆ

ನಿಧಾನವಾಗಿ ಪ್ರಗತಿ ಹೊಂದುವ ಸ್ಮರಣಶಕ್ತಿ ನಷ್ಟ, ಕಿರಿಕಿರಿಗೊಳ್ಳುವುದು ಮತ್ತು ಉದ್ವೇಗಗೊಳ್ಳುವುದರ ಸಹಿತ ಭಾವನಾತ್ಮಕ ಬದಲಾವಣೆಗಳು, ಹೊಸ ಮಾಹಿತಿಗಳನ್ನು ಸಂಸ್ಕರಿಸುವ ಮತ್ತು ಹೊಸ ಸಂಗತಿಗಳನ್ನು ಕಲಿಯುವ ಮಿದುಳಿನ ಸಾಮರ್ಥ್ಯ ನಷ್ಟವಾಗುವುದು, ಸಮಯಪ್ರಜ್ಞೆ ಮತ್ತು ಹೊಸ ಆರಂಭಗಳ ನಷ್ಟ, ಕುಟುಂಬ ಸದಸ್ಯರು ಮತ್ತು ಗೆಳೆಯ-ಗೆಳತಿಯರನ್ನು ಗುರುತಿಸಲಾಗದಿರುವುದು, ಸಮಯ ಮತ್ತು ಸ್ಥಳದ ಬಗ್ಗೆ ಗೊಂದಲಗಳು, ಮನೆಯ ದಾರಿಯನ್ನು ನೆನಪಿಸಿಕೊಳ್ಳಲು ಅಥವಾ ಮನೆಯೊಳಗೆಯೇ ಸರಿಯಾದ ದಿಕ್ಕು, ಕೊಠಡಿ, ವಸ್ತುಗಳ ಸ್ಥಾನ ನೆನಪಿಸಿಕೊಳ್ಳಲಾಗದಿರುವುದು, ಸಂವಹನ-ಸಂಭಾಷಣೆಗೆ ಕಷ್ಟವಾಗುವುದು, ದೈನಿಕ ರೂಢಿಗತ ಚಟುವಟಿಕೆಗಳನ್ನು ನಡೆಸುವ ಸಾಮರ್ಥ್ಯ ಕ್ಷಯಿಸುವುದು, ಏಕಾಗ್ರತೆ ಕುಸಿಯುತ್ತ ಹೋಗುವುದು, ಓದುವುದು-ಬರೆಯುವುದು ಹಾಗೂ ಅಂಕೆಸಂಖ್ಯೆಗಳ ಗೊಂದಲ, ವೈಯಕ್ತಿಕ ನೈರ್ಮಲ್ಯ ಕಡಿಮೆಯಾಗುವುದು ಡಿಮೆನ್ಶಿಯಾದ ಲಕ್ಷಣಗಳಾಗಿವೆ. ವ್ಯಕ್ತಿತ್ವದಲ್ಲಿ ಬದಲಾವಣೆ (ಉದಾಹರಣೆಗೆ, ಉದ್ವಿಗ್ನತೆ, ಮನೋಭಾವನೆಗಳಲ್ಲಿ ಗಮನಾರ್ಹ ಬದಲಾವಣೆಗಳು), ದೈನಿಕ ಚಟುವಟಿಕೆಗಳಲ್ಲಿ ಸಹಾಯದ ಅಗತ್ಯ ಹೆಚ್ಚುತ್ತ ಹೋಗುವುದು ಮನೋಶಾಸ್ತ್ರೀಯ ಲಕ್ಷಣಗಳು ಕೂಡ ಇದ್ದು, ಇಂಥವರು ಸಂಪೂರ್ಣವಾಗಿ ಇತರರ ಮೇಲೆ ಅವಲಂಬಿತರಾಗುತ್ತಾರೆ.

ಅಲ್ಜೀಮರ್ ಡಿಮೆನ್ಶಿಯಾ ಉಂಟಾಗಲು ಕಾರಣವೇನು ಎಂಬುದು ಇನ್ನೂ ಕೂಡ ಸ್ಪಷ್ಟವಾಗಿ ತಿಳಿದುಬಂದಿಲ್ಲ. ಆದರೆ ಅಧ್ಯಯನಗಳು ಮತ್ತು ಸಂಶೋಧನೆಗಳು ಹೇಳುವ ಪ್ರಕಾರ, ನ್ಯೂರಾನ್‌ಗಳು (ಮಿದುಳಿನ ಅಂಗಾಂಶಗಳು) ಕ್ಷಯಿಸಲು ಆರಂಭವಾಗುತ್ತದೆ, ಪರಸ್ಪರ ಸಂಪರ್ಕ ಕಳೆದುಕೊಳ್ಳುತ್ತವೆ ಮತ್ತು ನಿಧಾನವಾಗಿ ಸಾಯುತ್ತವೆ.

ಅಲ್ಜೀಮರ್ಸ್‌ ಡಿಮೆನ್ಶಿಯಾ ಉಂಟಾಗಲು ಖಚಿತವಾದ ಕಾರಣಗಳು ಇನ್ನೂ ತಿಳಿದುಬಂದಿಲ್ಲ. ಆದರೆ ನ್ಯೂರಾನ್‌ಗಳು (ಮಿದುಳಿನ ಅಂಗಾಂಶಗಳು) ಕ್ಷಯಿಸಲು ಆರಂಭಿಸುತ್ತವೆ, ಪರಸ್ಪರ ಸಂಪರ್ಕ ಕಳೆದುಕೊಳ್ಳುತ್ತವೆ ಮತ್ತು ನಿಧಾನವಾಗಿ ಸಾಯುತ್ತವೆ. ಅಸಹಜ ಪ್ರೊಟೀನ್‌ಗಳು ಶೇಖರಣೆಯಾಗಿ ಮಿದುಳಿನ ಅಂಗಾಂಶಗಳ ಸುತ್ತ “ಅಮೈಲಾಯ್ಡ ಪ್ಲೇಕ್ಸ್‌’ ಮತ್ತು “ಟ್ಯಾಂಗಲ್ಸ್‌’ ಶೇಖರವಾಗುತ್ತವೆ. ಎಪಿಒಇ ಜೀನ್‌ನ ಇ4 ಆವೃತ್ತಿಯು ಅಪೊಲಿಪೊಪ್ರೊಟೀನ್‌ ಎಂಬ ಪ್ರೊಟೀನ್‌ ತಯಾರಾಗಲು ಸೂಚನೆಗಳನ್ನು ನೀಡುತ್ತದೆ. ಈ ವಂಶವಾಹಿಯು ಅಮಲಾಯ್ಡ ಪ್ಲೇಕ್‌ಗಳು ಮತ್ತು ಟ್ಯಾಂಗಲ್‌ಗ‌ಳು ಉಂಟಾಗಲು ಕಾರಣವಾಗಿರಬಹುದು.

ಹೆಚ್ಚುತ್ತಿರುವ ವಯಸ್ಸು, ಕೌಟುಂಬಿಕ ಚರಿತ್ರೆ, ಅಧಿಕ ರಕ್ತದೊತ್ತಡ, ಮಧುಮೇಹ, ಬೊಜ್ಜು, ತಲೆಯ ಗಾಯದ ಚರಿತ್ರೆ, ಮಾದಕ ದ್ರವ್ಯ ಮತ್ತು ಧೂಮಪಾನ, ಆಲಸಿ ಜೀವನಶೈಲಿ, ಕಳಪೆ ನಿದ್ದೆಯ ಅಭ್ಯಾಸಗಳು, ಔಪಚಾರಿಕ ಶಿಕ್ಷಣದ ಕೊರತೆ ಇತ್ಯಾದಿಗಳು ಡಿಮೆನ್ಶಿಯಾದ ಅಪಾಯಾಂಶಗಳಾಗಿವೆ.

ಅಲ್ಜೀಮರ್ಸ್‌ ಕಾಯಿಲೆ ಪತ್ತೆ ಮಾಡುವ ಸಂದರ್ಭದಲ್ಲಿ ಮಾದಕದ್ರವ್ಯ ಸೇವನೆ, ಪೌಷ್ಟಿಕಾಂಶ, ಹೃದ್ರೋಗ, ಎನ್‌ಪಿಎಚ್‌/ಎಸ್‌ಒಎಲ್‌/ ಗಡ್ಡೆಗಳು, ಸಬ್‌ಡ್ನೂರಲ್‌ ಹೆಮಟೋಮಾ, ಸೋಂಕುಗಳು, ಮೂಛೆìರೋಗ, ಕುಶಿಂಗ್ಸ್‌/ ಅಡಿಸನ್ಸ್‌/ ಹೈಪೊಥೈರಾಯಿxಸಂ, ದೀರ್ಘ‌ಕಾಲಿಕ ಮೂತ್ರಪಿಂಡ ವೈಫ‌ಲ್ಯ/ ಪಿತ್ತಕೋಶ ವೈಫ‌ಲ್ಯ ಮತ್ತು ವಿಲ್ಸನ್ಸ್‌ ಕಾಯಿಲೆಗಳು ಅಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಬೇಕಾಗುತ್ತದೆ. ಸಂಪೂರ್ಣವಾದ ವೈದ್ಯಕೀಯ ಮತ್ತು ಮಾನಸಿಕ ಚರಿತ್ರೆ ಹಾಗೂ ಸಂಪೂರ್ಣವಾದ ದೈಹಿಕ ಮತ್ತು ನರಶಾಸ್ತ್ರೀಯ ತಪಾಸಣೆಗಳನ್ನು ನಡೆಸಲಾಗುತ್ತದೆ. ರೂಢಿಗತ ರಕ್ತ ಮತ್ತು ಮೂತ್ರ ಪರೀಕ್ಷೆಗಳು, ಸಿಟಿ ಸ್ಕ್ಯಾನ್‌ ಮತ್ತು/ ಎಂಆರ್‌ಐ ಸ್ಕ್ಯಾನ್‌, ಮಾನಸಿಕ ಸ್ಥಿತಿಗತಿಯ ಪರೀಕ್ಷೆಗಳನ್ನು ಮಾನಸಿಕ ಕ್ಷಯಿಸುವಿಕೆಯನ್ನು ನಿರ್ಧರಿಸಲು ನಡೆಸಬೇಕಾಗುತ್ತದೆ. ಅವಲಂಬನೆಯ ಪ್ರಮಾಣವನ್ನು ತಿಳಿದುಕೊಳ್ಳಲು ಆರೈಕೆದಾರರ ಜತೆಗೆ ಸಮಾಲೋಚಿಸಲಾಗುತ್ತದೆ.

ಅಲ್ಜೀಮರ್ಸ್‌ ಡಿಮೆನ್ಶಿಯಾ ಗುಣವಾಗುವುದಿಲ್ಲ. ಕಾಯಿಲೆಯ ಪ್ರಗತಿಯನ್ನು (ಮಿದುಳಿನ ಅಂಗಾಂಶಗಳ ಕ್ಷಯಿಸುವಿಕೆಯನ್ನು) ವಿಳಂಬಗೊಳಿಸುವುದು, ಆರೈಕೆಯನ್ನು ಸಮುದಾಯದಲ್ಲಿ ಹಂಚಿಕೊಳ್ಳುವ ಮೂಲಕ ಆರೈಕೆದಾರರ ಮೇಲಣ ಹೊರೆಯನ್ನು ಕಡಿಮೆ ಮಾಡಲಾಗುತ್ತದೆ. ಕೊಲೈನ್‌ಸ್ಟಿರೇಸ್‌ ಇನ್‌ಹಿಬಿಟರ್‌ಗಳು-ಗಲಾಟಾಮೈನ್‌, ರಿವಾಸ್ಟಿಜಿಮೈನ್‌, ಡೊನೆಪಿಜಿಲ್‌ ಮತ್ತು ಮೆಮಾಂ
ಟೈನ್‌ ಲಭ್ಯವಿರುವ ಕಾಯಿಲೆಯ ಪ್ರಗತಿಯನ್ನು ನಿಧಾನಗೊಳಿಸುವ ಏಜೆಂಟ್‌ಗಳಾಗಿವೆ. ಅಡುಕನುಮಾಬ್‌ ಔಷಧವನ್ನು ಈಚೆಗೆ ಎಫ್ಡಿಎ ಮನುಷ್ಯರಲ್ಲಿ ಆ್ಯಂಟಿಬಾಡಿ ಅಥವಾ ಇಮ್ಯುನೊಥೆರಪಿಗೆ ಅನುಮೋದಿಸಿದೆ. ಇದು ಪ್ರೊಟೀನ್‌ ಬೀಟಾ-ಅಮಲಾಯ್ಡಗಳನ್ನು ಗುರಿಪಡಿಸುತ್ತಿದ್ದು, ಅಮಲಾಯ್ಡ ಪ್ಲೇಕ್‌ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇನ್ನಿತರ ಯಾವುದೇ ವೈದ್ಯಕೀಯ ಮತ್ತು ಮನೋಶಾಸ್ತ್ರೀಯ ಸಹ ಕಾಯಿಲೆಗಳಿಗೆ ಚಿಕಿತ್ಸೆ ನೀಡಬೇಕಾಗಿರುತ್ತದೆ.

– ಡಾ| ಕೃತಿಶ್ರೀ ಸೋಮಣ್ಣ
ಕನ್ಸಲ್ಟಂಟ್‌ ಸೈಕಿಯಾಟ್ರಿ
ಕೆಎಂಸಿ ಆಸ್ಪತ್ರೆ, ಮಂಗಳೂರು

 

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.