Breast Cancer Awareness: ಪುರುಷರಲ್ಲಿ ಸ್ತನ ಕ್ಯಾನ್ಸರ್‌ ಅರಿವು


Team Udayavani, Oct 24, 2023, 3:00 PM IST

4-breast-cancer

ಭಾರತೀಯ ಮಹಿಳೆಯರಲ್ಲಿ ಸ್ತನದ ಕ್ಯಾನ್ಸರ್‌ ಅತೀ ಸಾಮಾನ್ಯವಾಗಿ ಉಂಟಾಗುವ ಕ್ಯಾನ್ಸರ್‌ ಆಗಿದೆ. ಭಾರತದಲ್ಲಿ ಪತ್ತೆಯಾಗುವ ಒಟ್ಟು ಕ್ಯಾನ್ಸರ್‌ ಪ್ರಕರಣಗಳಲ್ಲಿ ಕಾಲು ಭಾಗದಷ್ಟು ಸ್ತನ ಕ್ಯಾನ್ಸರ್‌ ಆಗಿರುತ್ತವೆ. ದೇಶದಲ್ಲಿ ಪ್ರತೀ 4 ನಿಮಿಷಗಳಿಗೆ ಒಬ್ಬ ಮಹಿಳೆಗೆ ಸ್ತನ ಕ್ಯಾನ್ಸರ್‌ ಇರುವುದು ಪತ್ತೆಯಾಗುತ್ತದೆ, ಪ್ರತೀ 8 ನಿಮಿಷಗಳಿಗೆ ಒಬ್ಬ ಮಹಿಳೆ ಸ್ತನ ಕ್ಯಾನ್ಸರ್‌ನಿಂದ ಸಾವನ್ನಪ್ಪುತ್ತಾರೆ. ದೇಶದಲ್ಲಿ ಯುವ ಜನಸಂಖ್ಯೆ ಹೆಚ್ಚಿದ್ದು, ಈ ಸ್ತನ ಕ್ಯಾನ್ಸರ್‌ಗೆ ಸಂಬಂಧಿಸಿದ ಈ ಅಂಕಿಅಂಶಗಳು ಮುಂದಿನ ವರ್ಷಗಳಲ್ಲಿ ಹೆಚ್ಚಳವಾಗುವುದು ನಿರೀಕ್ಷಿತ.

ಮನಸ್ಸು ತಿಳಿದದ್ದನ್ನೇ ಕಣ್ಣುಗಳು ಕಾಣು ತ್ತವೆ! ಸ್ತನ ಕ್ಯಾನ್ಸರ್‌ಗೆ ಸಂಬಂಧಿಸಿದ ಈ ಸ್ಥಿತಿ ಗತಿಯ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ಬಹಳ ಮುಖ್ಯವಾಗಿದೆ. ಸ್ತನವು ದೇಹದ ಒಂದು ಬಾಹ್ಯ ಅಂಗ. ಜನರಲ್ಲಿ ಕಾಯಿಲೆಯ ಬಗ್ಗೆ ತಿಳಿವಳಿಕೆ ಮತ್ತು ಮಾಹಿತಿ ಇದ್ದಾಗ ಬೇಗನೆ ರೋಗ ತಪಾಸಣೆಗೆ ಒಳಗಾಗುವುದು ಮತ್ತು ಚಿಕಿತ್ಸೆ ಪಡೆಯುವುದು ಸಾಧ್ಯವಾಗುತ್ತದೆ. ಸ್ತನವು ಬಾಹ್ಯ ಅಂಗವಾಗಿರುವುದರಿಂದ ಅದರಲ್ಲಿ ಉಂಟಾಗುವ ಯಾವುದೇ ಪ್ರಾಥಮಿಕ ಬದಲಾವಣೆ/ ವ್ಯತ್ಯಾಸವನ್ನು ವ್ಯಕ್ತಿಗಳು ಸ್ವತಃ ಪತ್ತೆ ಹಚ್ಚುವುದು ಸಾಧ್ಯ. ಕ್ಯಾನ್ಸರ್‌ನಂತಹ ಕಾಯಿಲೆಗಳನ್ನು ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಚಿಕಿತ್ಸೆಗೆ ಒಳಪಡಿಸಿದರೆ ಚಿಕಿತ್ಸೆಯ ಬಳಿಕದ ಪರಿಣಾಮ ಉತ್ತಮವಾಗಿರುತ್ತದೆ.

ಪ್ರತೀ 100 ಸ್ತನ ಕ್ಯಾನ್ಸರ್‌ ಪ್ರಕರಣ ಗಳಲ್ಲಿ ಒಂದು ಪುರುಷರಲ್ಲಿ ಸ್ತನ ಕ್ಯಾನ್ಸರ್‌ ಆಗಿರಬಲ್ಲುದು!

ಗೈನಕೊಮ್ಯಾಸ್ಟಿಯಾ ಪುರುಷರಲ್ಲಿ ಸಾಮಾನ್ಯವಾಗಿ ಕಂಡುಬರುವ ತೊಂದರೆ. ನನ್ನ ಪರಿಚಯದ ಹಿರಿಯ ಪ್ಲಾಸ್ಟಿಕ್‌ ಶಸ್ತ್ರಚಿಕಿತ್ಸಾ ತಜ್ಞರೊಬ್ಬರು ಹಂಚಿ ಕೊಂಡು ಅನುಭವ ಹೀಗಿದೆ:

ಅವರು ರೋಗಿಯೊಬ್ಬರನ್ನು ಗೈನೆಕೊಮ್ಯಾಸ್ಟಿಯಾ ಶಸ್ತ್ರಚಿಕಿತ್ಸೆಗೆ ಒಳಪಡಿಸಿದ್ದರು. ಆದರೆ ಅಂತಿಮ ಹಿಸ್ಟೊಪೆತಾಲಜಿಯಲ್ಲಿ ಆ ರೋಗಿಗೆ ಸ್ತನದ ಕ್ಯಾನ್ಸರ್‌ ಇರುವುದು ಪತ್ತೆ ಯಾಗಿತ್ತು. ಹೀಗಂದ ತತ್‌ಕ್ಷಣ ಪುರುಷ ರೆಲ್ಲರೂ ಗೈನಕೊಮ್ಯಾಸ್ಟಿಯಾ ಅಥವಾ ಸ್ತನ ಕ್ಯಾನ್ಸರ್‌ ಬಗ್ಗೆ ಆತಂಕ ಹೊಂದಬೇಕಾಗಿಲ್ಲ. ಯಾವುದೇ ಸಂಶಯ ಉಂಟಾದರೆ ತಜ್ಞ ರನ್ನು ಸಂಪರ್ಕಿಸಬೇಕು. ಸ್ತನ ಕ್ಯಾನ್ಸರ್‌ ಬಗ್ಗೆ ಕುಟುಂಬದ ಸದಸ್ಯ ಮಹಿಳೆಯರಿಗೆ ತಿಳಿವಳಿಕೆ, ಮಾಹಿತಿ ನೀಡುವಲ್ಲಿ ಕುಟುಂಬದ ಪುರುಷ ಸದಸ್ಯರು ಕೂಡ ಸಕ್ರಿಯ ಪಾತ್ರ ವಹಿಸಬೇಕು – ಸ್ತನ ಕ್ಯಾನ್ಸರ್‌ನ ಅರಿವು ಸ್ತ್ರೀ-ಪುರುಷರಿಬ್ಬರಿಗೂ ಸಮಾನವಾಗಿ ಅಗತ್ಯ.

ಸ್ತನ ಕ್ಯಾನ್ಸರ್‌ ಲಕ್ಷಣಗಳು (ಪುರುಷರು ಮತ್ತು ಸ್ತ್ರೀಯರಲ್ಲಿ) ­

  • ಸ್ತನದಲ್ಲಿ ಗಂಟು ಅಥವಾ ಬಾವು ­
  • ಇತ್ತೀಚೆಗೆ ಚರ್ಮದಲ್ಲಿ ಬದಲಾವಣೆಗಳು ಕಂಡುಬಂದಿರುವುದು (ಕೆಂಪಾಗಿರುವುದು, ಗುಳ್ಳೆಗಳು, ಹುರುಪೆ ಎದ್ದಂತಿರುವುದು, ಕಿರಿಕಿರಿ, ಕುಳಿ ಬಿದ್ದಿರುವುದು) ­
  • ಸ್ತನದ ತೊಟ್ಟು ಒಳಕ್ಕೆ ಸರಿದಿರುವುದು
  • ಸ್ತನದ ತೊಟ್ಟಿನಿಂದ ಸ್ರಾವ ಸ್ತನ ಕ್ಯಾನ್ಸರ್‌ಗೆ ಕಾರಣವಾಗಬಲ್ಲ ಅಂಶಗಳು (ಪುರುಷರು ಮತ್ತು ಸ್ತ್ರೀಯರಲ್ಲಿ) ­
  • ವಯಸ್ಸು: ವಯಸ್ಸು ಹೆಚ್ಚಿದಂತೆ ಸ್ತನದ ಕ್ಯಾನ್ಸರ್‌ ಕಾಣಿಸಿಕೊಳ್ಳುವ ಸಾಧ್ಯತೆಯೂ ಹೆಚ್ಚುತ್ತದೆ; ಆದರೆ ಸಣ್ಣ ವಯಸ್ಸಿನವರೂ ಎಚ್ಚರಿಕೆಯಿಂದ ಇರಬೇಕು. ­
  • ಸ್ತನ ಕ್ಯಾನ್ಸರ್‌ನ ಕೌಟುಂಬಿಕ ಇತಿಹಾಸ ಮತ್ತು ವಂಶವಾಹಿ ಪರಿವರ್ತನೆ ­
  • ಹೆಚ್ಚು ದೇಹತೂಕ ಮತ್ತು ಬೊಜ್ಜು ­
  • ಸಿರೋಸಿಸ್‌ ಮತ್ತು ಯಕೃತ್‌ ಕಾಯಿಲೆ ಇವು ತಿಳಿದಿರುವಂತಹ ಅಪಾಯಾಂಶಗಳಾಗಿದ್ದು, ಇವುಗಳನ್ನು ಹೊಂದಿರುವವರು ಹೆಚ್ಚು ಎಚ್ಚರಿಕೆಯಿಂದ ಇರಬೇಕು.

ನಿರ್ವಹಣೆ

ರೋಗಪತ್ತೆ ಮತ್ತು ಚಿಕಿತ್ಸೆಯನ್ನು ಒಳಗೊಂಡಿರುತ್ತದೆ. ಯಾವುದೇ ಸಂದೇಹ ಅಥವಾ ಅಪಾಯಾಂಶಗಳು ಇದ್ದಲ್ಲಿ ವೈದ್ಯರ ಜತೆಗೆ ಸಮಾಲೋಚನೆ ನಡೆಸಿ ಸಲಹೆ ಪಡೆಯಿರಿ. ವೈದ್ಯರು ಸಾಮಾನ್ಯವಾಗಿ ರೋಗಿಯನ್ನು ಕೂಲಂಕಷವಾಗಿ ಪರೀಕ್ಷಿಸಿ ಆರೋಗ್ಯ-ಅನಾರೋಗ್ಯವನ್ನು ಖಚಿತಪಡಿಸಿಕೊಳ್ಳಲು ಕೆಲವು ತಪಾಸಣೆಗಳನ್ನು ಸೂಚಿಸುತ್ತಾರೆ.

ರೋಗಪತ್ತೆಯು ಖಚಿತವಾದ ಬಳಿಕ ರೋಗಶಮನಾತ್ಮಕ ಚಿಕಿತ್ಸೆಯಲ್ಲಿ ಶಸ್ತ್ರಕ್ರಿಯೆಯು ಪ್ರಧಾನ ಆಯ್ಕೆಯಾಗಿದೆ. ಆದರೆ ಸಮಯವೂ ಬಹಳ ಮುಖ್ಯವಾಗಿದೆ. ಕೆಲವು ರೋಗಿಗಳಿಗೆ ಶಸ್ತ್ರಚಿಕಿತ್ಸೆಗೆ ಮತ್ತು ಅಥವಾ ಬಳಿಕ ಕಿಮೊಥೆರಪಿ ಅಗತ್ಯವಾಗಬಹುದು; ಇನ್ನು ಕೆಲವರಿಗೆ ಶಸ್ತ್ರಚಿಕಿತ್ಸೆಯ ಬಳಿಕ ರೇಡಿಯೋಥೆರಪಿಯ ಅಗತ್ಯ ಬೀಳಬಹುದು.

ಇತ್ತೀಚೆಗಿನ ದಿನಗಳಲ್ಲಿ ಸ್ತನ ಕ್ಯಾನ್ಸರ್‌ಗೆ ಚಿಕಿತ್ಸೆಯು ಬಹಳ ನಿರ್ದಿಷ್ಟವಾಗಿದ್ದು, ಸ್ಪಷ್ಟ ವಿಧಿವಿಧಾನಗಳು ಚಾಲ್ತಿಯಲ್ಲಿವೆ. ಅತ್ಯಂತ ವೈಜ್ಞಾನಿಕವಾಗಿ ಚಿಕಿತ್ಸೆ ಒದಗಿಸಿದಾಗ ಉತ್ತಮ ಫ‌ಲಿತಾಂಶ ದೊರಕುತ್ತದೆ. ಮಹಿಳೆಯರು ಮ್ಯಾಸ್ಟೆಕ್ಟೊಮಿ (ಸ್ತನವನ್ನು ಸಂಪೂರ್ಣವಾಗಿ ತೆಗೆದುಹಾಕುವುದು) ಬಗ್ಗೆ ಚಿಂತಿಸಬೇಕಾಗಿಲ್ಲ; ಸ್ತನ ರಕ್ಷಣೆಯೊಂದಿಗೆ ಚಿಕಿತ್ಸೆ ನೀಡುವುದಕ್ಕೆ ಆದ್ಯತೆ ನೀಡಲಾಗುತ್ತದೆ.

ಸ್ತನ ಕ್ಯಾನ್ಸರ್‌ ಬಗ್ಗೆ ಇರುವ ಮುಜುಗರ, ಹಿಂಜರಿಕೆ ಮತ್ತು ಋಣಾತ್ಮಕ ಭಾವನೆಗಳನ್ನು ತ್ಯಜಿಸಬೇಕು. ಇಂತಹ ಅನಾರೋಗ್ಯ ಸಂದರ್ಭದಲ್ಲಿ ಜನರು ಪರಸ್ಪರ ತಮಗೆ ಸಾಧ್ಯವಾದ ಯಾವುದೇ ಸ್ವರೂಪದಲ್ಲಿ ಸಹಕರಿಸಬೇಕು. ನಾವೆಲ್ಲರೂ ಜತೆಗೂಡಿ ಸ್ತನ ಕ್ಯಾನ್ಸರ್‌ ವಿರುದ್ಧ ಹೋರಾಡೋಣ.

-ಡಾ| ಕಾರ್ತಿಕ್‌ ಕೆ.ಎಸ್‌.,

ಸರ್ಜಿಕಲ್‌ ಆಂಕಾಲಜಿಸ್ಟ್‌,

ಕೆಎಂಸಿ ಆಸ್ಪತ್ರೆ, ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ, ಮಂಗಳೂರು

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಸರ್ಜಿಕಲ್‌ ಆಂಕಾಲಜಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು)

ಟಾಪ್ ನ್ಯೂಸ್

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

1-sadasdasd

China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ

1-eewqeqwe

Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-qqewewqe

Gujarat ಕರಾವಳಿಯಲ್ಲಿ ಪಾಕ್ ಬೋಟ್ ನಿಂದ 600 ಕೋಟಿ ಮೌಲ್ಯದ ಹೆರಾಯಿನ್ ವಶ

1-qweqwqe

Mangaluru Airport; ಗುದನಾಳದಲ್ಲಿ ಬಚ್ಚಿಟ್ಟ 54 ಲಕ್ಷ ರೂ. ಮೌಲ್ಯದ ಅಕ್ರಮ ಚಿನ್ನ ಪತ್ತೆ !

1-qewqeqw

Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು

1-wqwqeqw

RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ

1-ewqeqwew

Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.