ದಂತ ವೈದ್ಯರು ಕಂಡುಹಿಡಿಯಬಹುದೇ?


Team Udayavani, Jul 8, 2018, 6:00 AM IST

f1.jpg

ಸಾಮಾನ್ಯವಾಗಿ ಜನರಲ್ಲಿ , ದಂತವೈದ್ಯರೆಂದರೆ, ಕೇವಲ 32 ಹಲ್ಲುಗಳು ಮತ್ತು ಅದರ ಸುತ್ತಲಿರುವ ವಸಡು, ನಾಲಿಗೆ ಮತ್ತು ಬಾಯಿಯ ಬಳಿ ಮಾಂಸಗಳ ಸಂಬಂಧಪಟ್ಟ ಚಿಕಿತ್ಸಕರು ಮಾತ್ರ ಎನ್ನುವ ನಂಬಿಕೆ ಇರುವುದು. ಇದು ಸಹಜ, ಆದರೆ ನೀವು ನಿಮ್ಮ ದಂತವೈದ್ಯರು ನಿಮಗಿರುವ ದೇಹದ ಇತರ ರೋಗಗಳ ಸಂಬಂಧದ ಬಗ್ಗೆ ಕೂಡ ತಿಳಿಸಬಹುದು. ಬಾಯಿ/ಹಲ್ಲು/ವಸಡುಗಳ ರೋಗ ಬದಲಾವಣೆ/ರೋಗ ಚಿಹ್ನೆಗಳನ್ನು ಕಂಡು ನಿಮಗೆ  ಇಂತಹುದೇ ದೇಹದ ಕಾಯಿಲೆಗಳಾದ, ಸಕ್ಕರೆ ಕಾಯಿಲೆ, ಅಥವಾ ಬೇರೆ ರೋಗಗಳಿರಬಹುದೆಂದು ಕಂಡುಹಿಡಿಯಬಹುದು.

ಬಾಯಿಯು ನಮ್ಮ ದೇಹದ ಇತರ ಭಾಗಗಳ ಪ್ರವೇಶದ್ವಾರವಿದ್ದಂತೆ, ಹೀಗೆ ನಮ್ಮ ದೇಹದ ಇತರ ರೋಗಗಳ ಚಿಹ್ನೆಯು ಬಾಯಿಯಲ್ಲಿ ಕಂಡುಬರಬಹುದು. ನಿಮಗೆ ಸಕ್ಕರೆ ಕಾಯಿಲೆ ಇದ್ದಲ್ಲಿ ಕೂಡ, ಇದರ ಚಿಹ್ನೆಗಳು ಬಾಯಿಯಲ್ಲಿ ಕಾಣಬಹುದು.

ದಂತ ವೈದ್ಯರಲ್ಲಿ ಹೋದಾಗ, ದಂತ ವೈದ್ಯರು ನಿಮಗೆ ಬೇರೆ ಬೇರೆ ರೀತಿಯ ಪ್ರಶ್ನೆಗಳನ್ನು ಕೇಳಬಹುದು. ಅದರಲ್ಲಿ ಮೊದಲನೇಯದಾಗಿ ನಿಮಗೆ ಸಕ್ಕರೆ ಕಾಯಿಲೆ ಇದೆಯೇ ? ಎಂದು ಕೇಳಿದಾಗ, ದಂತವೈದ್ಯರಿಗೆ ನನ್ನ ಸಕ್ಕರೆಕಾಯಿಲೆ ಬಗ್ಗೆ ಯಾಕೆ ಹೇಳಲಿ ? ಎಂದು ನೀವು ತಿಳಿಯಬಹುದು. ಆದರೆ ನಿಮಗೆ ಇರುವ ಯಾವುದೇ ಕಾಯಿಲೆಯ ಬಗ್ಗೆ ಮತ್ತು ಅದಕ್ಕೆ ತೆಗೆದುಕೊಳ್ಳುವ ಔಷಧಿಗಳ ಬಗ್ಗೆ ಮಾಹಿತಿಯನ್ನು ದಂತವೈದ್ಯರಿಗೆ ಕೊಡುವುದು ಸೂಕ್ತ.

ಸಂಶೋಧನೆಯ ಪ್ರಕಾರ, ಎಷ್ಟೋ ಜನರಿಗೆ ಸಕ್ಕರೆ ಕಾಯಿಲೆ  ಇದ್ದರೂ ಅದರ ಅರಿವು ಇರುವುದಿಲ್ಲ. ಅವರು ದಂತವೈದ್ಯರನ್ನು ಸಂದರ್ಶಿಸಿದಾಗ, ನಿಮ್ಮಲ್ಲಿ ಕೇಳಿದ ಪ್ರಶ್ನೆಯ ಉತ್ತರಕ್ಕೆ ಸರಿಯಾಗಿ ಅಥವಾ  ನಿಮ್ಮ ಬಾಯಿಯಲ್ಲಿ ಇರುವ ಕೆಲವು ಬದಲಾವಣೆಯ ಬಗ್ಗೆ ನೋಡಿ ನಿಮಗೆ, ಸಕ್ಕರೆ ಕಾಯಿಲೆ ರಕ್ತ ಪರಿಶೀಲನೆಗೆ ಕಳುಹಿಸಬಹುದು. ಹೀಗೆ ಅವರು ಕಳುಹಿಸುವಾಗ  ನಾನ್ಯಾಕೆ ಹಣ ಖರ್ಚು ಮಾಡಿ, ರಕ್ತ ಪರಿಶೀಲನೆ ಮಾಡಿಕೊಳ್ಳಲಿ ಎಂದು ತಿಳಿಯಬೇಡಿ. ಇದರಿಂದಾಗಿ ನಿಮಗೆ ಒಳಿತೇ ಏಕೆಂದರೆ, ಶೀಘ್ರದಲ್ಲಿ ಸಕ್ಕರೆ ಕಾಯಿಲೆ ಗುರುತಿಸುವಿಕೆಯಿಂದ ನಿಮ್ಮ ದೇಹದಲ್ಲಿ ಮುಂದೆ ಡಯಾಬಿಟಿಸ್‌ನಿಂದ ಆಗುವ ದುಷ್ಪರಿಣಾಮವನ್ನು ತಡೆಯಬಹುದು.

ನಿಮಗೆ ಸಕ್ಕರೆ ಕಾಯಿಲೆ ಇದ್ದಲ್ಲಿ  ನಿಮ್ಮ ಬಾಯಿ/ಹಲ್ಲು/ ವಸಡಿನಲ್ಲಾಗುವ ಬದಲಾವಣೆಗಳೇನು ? ಈ ಚಿಹ್ನೆ/ಬದಲಾವಣೆ ಗಳಿದ್ದಲ್ಲಿ ನೀವು ನಿಮ್ಮ ದಂತವೈದ್ಯರನ್ನು/ವೈದ್ಯರನ್ನು ಸಂದರ್ಶಿಸಿ ಸಕ್ಕರೆ ಕಾಯಿಲೆ -ರಕ್ತ ಪರಿಶೀಲನೆ ಮಾಡಿಕೊಳ್ಳುವುದು ಉತ್ತಮ.

ವಸಡು ರೋಗ ಮತ್ತು ವಸಡು ಸುತ್ತ ಪರೆ ರೋಗ  ಹಲ್ಲಿನ ಮೇಲೆ ಕುಳಿತುಕೊಳ್ಳುವ, ಶೇಖರವಾಗುವ ಬ್ಯಾಕ್ಟೀರಿಯಾಯುಕ್ತ ದಂತ ಪಾಚಿ .ಸಾಮಾನ್ಯವಾಗಿ, ವಸಡು ರೋಗವು ನಮ್ಮ ಹಲ್ಲಿನ ಮೇಲಿನ ದಂತ ಪಾಚಿಗೆ ಅನುಗುಣವಾಗಿರುತ್ತದೆ, ಆಂದರೆ, ಕಡಿಮೆ ದಂತಪಾಚಿ ಇರುವವರಲ್ಲಿ ವಸಡು ರೋಗ ಮತ್ತು ವಸಡು ಸುತ್ತ ಪರೆ ರೋಗ ತೀವ್ರತೆ ಕಡಿಮೆಯಿರುತ್ತದೆ. ಮತ್ತು ದಂತ ಪಾಚಿ ಹೆಚ್ಚು ಇರುವವರಲ್ಲಿ ಇದರ ತೀವ್ರತೆ ಹೆಚ್ಚಾಗಿರುತ್ತದೆ.

ಆದರೆ ಸಕ್ಕರೆ ಕಾಯಿಲೆ ಇರುವವರಲ್ಲಿ, ದಂತ ಪಾಚಿಯು ಸ್ವಲ್ಪವಿದ್ದರೂ ಕೂಡ ವಸಡು ರೋಗದ ತೀವ್ರತೆ ಹೆಚ್ಚಿರುತ್ತದೆ. ವಸಡು ಮತ್ತು ಹಲ್ಲಿನ ಸುತ್ತ ಇರುವ ಎಲುಬು, ಒಳಗೊಳಗೆ ಹಾಳಾಗುತ್ತಾ ಇರುವುದು. ದಂತ ಸುತ್ತು ಪರೆ ರೋಗ ತಜ್ಞರು ನಿಮ್ಮ ವಸಡನ್ನು ಪರೀಕ್ಷಿಸುವಾಗ ಈ ಅಂಶ ನಿಮ್ಮ ಗಮನಕ್ಕೆ ತಂದು ಡಯಾಬಿಟಿಸ್‌ ಪರೀಕ್ಷೆಗೆ ನಿಮ್ಮನ್ನೇ ಕೇಳಬಹುದು.

ವಸಡಿನಲ್ಲಿ ಕೀವು ತುಂಬಿದ ಗುಳ್ಳೆಗಳು 
ಡಯಾಬಿಟಿಸ್‌ ಇರುವವರಲ್ಲಿ, ನಮ್ಮ ಬಿಳಿರಕ್ತ ಕಣಗಳು ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದರಿಂದ ಮತ್ತು ದಂತಪಾಚಿಗಳಲ್ಲಿ ರೋಗಕಾರಕ ಬ್ಯಾಕ್ಟೀರಿಯಾಗಳ ಹೆಚ್ಚುವಿಕೆಯಿಂದಾಗಿ, ಅಲ್ಲಲ್ಲಿ ವಸಡು ಗುಳ್ಳೆಗಳಾಗಿ ಕೀವು ತುಂಬಿರುತ್ತದೆ. ಇವು ಡಯಾಬಿಟಿಸ್‌ ರಕ್ತದಲ್ಲಿ ಸಕ್ಕರೆ ಅಂಶ ಜಾಸ್ತಿಯಾದಾಗ ಬಂದು ರಕ್ತದಲ್ಲಿ ಸಕ್ಕರೆ ಅಂಶ ಕಡಿಮೆಯಾದಾಗ ಕಡಿಮೆಯಾಗುತ್ತದೆ. ಒಮ್ಮೆ ಒಂದು ಹಲ್ಲಿನ ಪಕ್ಕ ಕಂಡುಬಂದರೆ, ಇನ್ನೊಮ್ಮೆ ಇನ್ನೊಂದು ಹಲ್ಲಿನ ಪಕ್ಕ ಕಂಡುಬರುತ್ತದೆ. ಇಂತಹ ಚಿಹ್ನೆಗಳಿದ್ದಲ್ಲಿ ನಿಮ್ಮ ರಕ್ತಪರೀಕ್ಷೆ ಮಾಡುವುದು ಉತ್ತಮ.

ಜೊಲ್ಲು  ಸ್ರವಿಕೆ ಮತ್ತು “ರುಚಿ’ಯಲ್ಲಿ  ಬದಲಾವಣೆಜೊಲ್ಲುರಸ 
ನಮ್ಮ ಬಾಯಿಯ ಆರೋಗ್ಯ ಕಾಪಾಡುವಲ್ಲಿ ಪ್ರಮುಖ ಅಂಗವಾಗಿದೆ. ಸಕ್ಕರೆ ಕಾಯಿಲೆ ಇರುವವರಲ್ಲಿ ಜೊಲ್ಲುರಸ ಪ್ರಮುಖ ಅಂಗವಾಗಿದೆ. ಸಕ್ಕರೆ ಕಾಯಿಲೆ ಇರುವವರಲ್ಲಿ ಜೊಲ್ಲುರಸ ಸ್ರವಿಸುವಿಕೆ ಕಡಿಮೆಯಾಗುವುದು. ಇದರಿಂದಾಗಿ, ಇವರಿಗೆ ಆವಾಗಾವಾಗ ನೀರು ಕುಡಿಯಬೇಕೆನ್ನಬಹುದು. ಜೊಲ್ಲುರಸ ಸ್ರವಿಸುವಿಕೆ ಕಡಿಮೆಯಾಗಿ, ಬಾಯಿಯ ಒಳಚರ್ಮವು ಉರಿಯೂತವು ಕಾಣಬಹುದು. ಇದಲ್ಲದೆಯೂ, ಹಲ್ಲಿನ ಮೇಲೆ ದಂತ ಪಾಚಿಯ ಸಂಗ್ರಹಣೆಯೂ ಜಾಸ್ತಿಯಾಗುವುದು. ಜೊಲ್ಲಿನಲ್ಲಿರುವ ರೋಗ ನಿರೋಧಕ ಅಂಶಗಳು, ಬಾಯಿಯಲ್ಲಿ ಸಿಗದೇ ಇರುವುದರಿಂದ, ದಂತಕುಳಿ (ಹಲ್ಲು ಕುಳಿಗಳು) ಕೂಡ ಜಾಸ್ತಿಯಾಗುವುದು. ವಿಪರೀತ ಸಕ್ಕರೆ ಕಾಯಿಲೆ ಇರುವವರಲ್ಲಿ ಜೊಲ್ಲುರಸ ಸ್ರವಿಸುವ ಗ್ರಂಥಿಗಳು ಊದಿಕೊಂಡಿರುವುದು ಕೂಡ  ನಿಮ್ಮ ಬಾಯಿಯಲ್ಲಿ ಸರಿಯಾಗಿ ಜೊಲ್ಲು ರಸ ಸ್ರವಿಸುವಿಕೆ ಆಗುತ್ತಿದೆಯೇ ಇಲ್ಲವೇ ಎಂದು ನಿಮ್ಮ ದಂತವೈದ್ಯರು ಪರೀಕ್ಷಿಸಿ, ಸರಿಯಿಲ್ಲದಿದ್ದಲ್ಲಿ  ‘ಸಕ್ಕರೆ ಕಾಯಿಲೆಗಾಗಿ’ ರಕ್ತ ಪರೀಕ್ಷೆ ಮಾಡುತ್ತಾರೆ. ಇದಲ್ಲದೆಯೂ ‘ರುಚಿ’ಯಲ್ಲಿ ಹೆಚ್ಚು ಕಡಿಮೆಯಾಗುವುದು ಕೂಡ ವಿಪರೀತ ಸಕ್ಕರೆ ಕಾಯಿಲೆ ಇರುವವರಲ್ಲಿ ಸಾಮಾನ್ಯ.

ಶೀಲೀಂಧ್ರ ಸೋಂಕುಗಳು 
ಬಾಯಿಯ ಒಣಚರ್ಮದಲ್ಲಿ ನಾಲಿಗೆಯ ಮೇಲೆ ಶಿಲೀಂಧ್ರ ಸೂಕ್ಷ್ಮಜೀವಿಗಳಿಂದ ಬಿಳಿ ಪದರವು ಕಂಡುಬರುತ್ತದೆ. ಇದನ್ನು ಹತ್ತಿಯಿಂದ ತೆಗೆದಾಗ ಬಂದು ಬಿಡುವುದಲ್ಲದೇ, ಕೆಳಗಿರುವ  ಕೆಂಪಾದ ಭಾಗವು ಕಾಣುವುದು. ಇಂತಹ ಶಿಲೀಂಧ್ರ ಸೋಂಕು, ಸಕ್ಕರೆ ಕಾಯಿಲೆ ಇರುವವರಲ್ಲಿ ಸಾಮಾನ್ಯ ಇಂತಹ ಬಿಳಿಪದರವು ನಿಮ್ಮ ಬಾಯಿಯಲ್ಲಿ ಕಂಡಲ್ಲಿ ನಿಮಗೆ ‘ಸಕ್ಕರೆ ಕಾಯಿಲೆ’ ಪರಿಶೀಲನೆ ಅಗತ್ಯ.
ಇದಲ್ಲದೇ, ಸಕ್ಕರೆ ಕಾಯಿಲೆ ಇರುವವರಲ್ಲಿ, ಒಳಚರ್ಮವು, ಕೆಲವು ಚರ್ಮರೋಗಗಳಾದ, ಲೈಕನ್‌ ಪ್ಲಾನಸ್‌ ಬಾಯಿಯ ಉರಿಯ ಕಾಯಿಲೆಯೂ ಜಾಸ್ತಿಯಾಗಿರುವುದು.

ಇವೆಲ್ಲಾ ಬಾಯಿಯಲ್ಲಿ ಕಾಣುವ ಚಿಹ್ನೆಯಾದರೆ, ಇನ್ನು ಕೆಲವರಲ್ಲಿ ಯಾವ ಚಿಹ್ನೆಯೂ ಕಾಣದಿದ್ದರೂ ದಂತ ವೈದ್ಯರು ‘ರಕ್ತ ಪರಿಶೀಲನೆ’ಗೆ ಸೂಚಿಸಬಹುದು. ನೀವು 40 ವರ್ಷಕ್ಕಿಂತ ಮೇಲಿನವರಾಗಿದ್ದರೆ ಅಥವಾ ನಿಮ್ಮ ತಂದೆ/ತಾಯಿ/ಅಣ್ಣ-ತಮ್ಮ/ಅಕ್ಕ-ತಂಗಿಯವರಲ್ಲಿ ಸಕ್ಕರೆ ಕಾಯಿಲೆ ಇದ್ದಲ್ಲಿ, ಅಥವಾ ಕೆಲವು ದೇಹದ ಇತರೇ ಚಿಹ್ನೆಗಳಾದ ಅತಿಯಾದ ಹಸಿವು, ಬಾಯಾರಿಕೆ ಅಥವಾ ಆವಾಗಾವಾಗ ಮೂತ್ರ ಹೋಗಬೇಕಾಗಿ ಅನಿಸುವುದು, ನಿಮಗೆ ಆದ ದೇಹದ ದೇಹದ ಗಾಯಗಳು ಗುಣವಾಗದೇ ಇರುವುದು. ಇವೆಲ್ಲವೂ ಸಕ್ಕರೆಯ ಕಾಯಿಲೆಯ ರಕ್ತ ಪರಿಶೀಲನೆಗೆ ಎಡವು ಮಾಡಿಕೊಡುವುದು. ಹೀಗೆ ಇದ್ದಲ್ಲಿ ನಿಮ್ಮ ದಂತವೈದ್ಯರು ನಿಮಗೆ, ರಕ್ತ ಪರಿಶೀಲನೆಗೆ ಹೇಳಿದ್ದಲ್ಲಿ ತಪ್ಪದೇ ಮಾಡಿಸಿ, ಇದರಿಂದಾಗಿ ನಿಮಗೆ ಸಕ್ಕರೆ ಕಾಯಿಲೆ ಇದ್ದಲ್ಲಿ  ಸೂಕ್ತ ಚಿಕಿತ್ಸೆ ಪ್ರಾರಂಭ ಮಾಡಿದ್ದಲ್ಲಿ, ಸಕ್ಕರೆ ಕಾಯಿಲೆ ದುಷ್ಪರಿಣಾಮಗಳು ಕಡಿಮೆಯಾಗುವುದು ಮತ್ತು ಆರೋಗ್ಯ ಜೀವನದಲ್ಲಿ ದಂತವೈದ್ಯರ ಪಾತ್ರವು ನಿಮಗೆ ಅರಿವಾಗುವುದು.

ಡಾ| ಜಿ. ಸುಬ್ರಾಯ ಭಟ್‌, 
ಅಸೋಸಿಯೇಟ್‌ ಡೀನ್‌, ಪೀರಿಯೋಡಾಂಟಿಕ್ಸ್‌ ವಿಭಾಗ,
ಮಣಿಪಾಲ ವಿ.ವಿ.

Ad

ಟಾಪ್ ನ್ಯೂಸ್

ಕಿರುತೆರೆಗೆ ಮರಳಿದ ಸ್ಮೃತಿ ಇರಾನಿ: ಒಂದು ಎಪಿಸೋಡ್‌ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

ಕಿರುತೆರೆಗೆ ಮರಳಿದ ಸ್ಮೃತಿ ಇರಾನಿ: ಒಂದು ಎಪಿಸೋಡ್‌ಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತಾ?

ಖಾಸಗಿ ವಿಡಿಯೋ ಹೆಸರಲ್ಲಿ ಬ್ಲಾಕ್‌ಮೇಲ್… 3 ಕೋಟಿ ಕಳೆದುಕೊಂಡು CA ಪತ್ರ ಬರೆದು ಆತ್ಮಹತ್ಯೆ

ಖಾಸಗಿ ವಿಡಿಯೋ ಹೆಸರಲ್ಲಿ ಬ್ಲಾಕ್‌ಮೇಲ್: ಕಾರು, 3ಕೋಟಿ ಹಣ ಕಳೆದುಕೊಂಡು ಆತ್ಮಹತ್ಯೆ ಶರಣಾದ CA

Video: ಬೈಕ್ – ಸ್ಕೂಟರ್‌ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವು; ಸುಟ್ಟು ಕರಕಲಾದ ಹಯಬುಸಾ

Video: ಬೈಕ್ – ಸ್ಕೂಟರ್‌ ಡಿಕ್ಕಿಯಾಗಿ ಇಬ್ಬರು ಸ್ಥಳದಲ್ಲೇ ಸಾವು; ಸುಟ್ಟು ಕರಕಲಾದ ಹಯಬುಸಾ

1-gurme

Udupi: ಶಾಸಕರೊಬ್ಬರ ಹೇಳಿಕೆ ರಾಜ್ಯ ಕಾಂಗ್ರೆಸ್ ಸರಕಾರದ ಇಂದಿನ ನೈಜ ಸ್ಥಿತಿ ಅನಾವರಣ: ಗುರ್ಮೆ

Himachal Pradesh: ಭೂಕುಸಿತಕ್ಕೂ ಮುನ್ನ ಬೊಗಳಿ 67 ಜನರ ಪ್ರಾಣ ಉಳಿಸಿದ ಶ್ವಾನ.!

Himachal Pradesh: ಭೂಕುಸಿತಕ್ಕೂ ಮುನ್ನ ಬೊಗಳಿ 67 ಜನರ ಪ್ರಾಣ ಉಳಿಸಿದ ಶ್ವಾನ.!

ಜು.13 ರಂದು ಜಮ್ಮುವಿನಲ್ಲಿ ವಿಶ್ವ ಮಟ್ಟದ ಹಿಂದೂ ಸಮಾವೇಶ: ಮುತಾಲಿಕ್

ಜು.13 ರಂದು ಜಮ್ಮುವಿನಲ್ಲಿ ನಡೆಯುವ ಹಿಂದೂ ಸಮಾವೇಶದಲ್ಲಿ ಶ್ರೀರಾಮ ಸೇನೆ ಭಾಗಿ: ಮುತಾಲಿಕ್

ಎಂಎಂ ಕೀರವಾಣಿ ತಂದೆ, ಖ್ಯಾತ ಗೀತ ರಚನೆಕಾರ ಶಿವಶಕ್ತಿ ದತ್ತ ನಿಧನ; ಟಾಲಿವುಡ್‌ ಸಂತಾಪ

ಎಂಎಂ ಕೀರವಾಣಿ ತಂದೆ, ಖ್ಯಾತ ಗೀತ ರಚನೆಕಾರ ಶಿವಶಕ್ತಿ ದತ್ತ ನಿಧನ; ಟಾಲಿವುಡ್‌ ಸಂತಾಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-sinus

Allergic Rhinitis:ನಿರಂತರ ಸೀನು,ಉಸಿರಾಟಕ್ಕೆ ಅಡಚಣೆ;ನಿಮಗೆ ಅಲರ್ಜಿಕ್‌ ರೈನೈಟಿಸ್‌ಇರಬಹುದು

2-health

Health Tests: ವಿವಿಧ ಆರೋಗ್ಯ ಪರೀಕ್ಷೆಗೆ ಹೇಗೆ ತೆರಳಬೇಕು?

7–Endometrial

Endometrial Cancer: ಮಹಿಳೆಯರು ನಿರ್ಲಕ್ಷಿಸಬಾರದ ನಿಶ್ಶಬ್ದ ಅಪಾಯ

6-snoring

OSA: ಗೊರಕೆಯನ್ನು ನಿರ್ಲಕ್ಷಿಸಬೇಡಿ! ಒಬ್‌ಸ್ಟ್ರಕ್ಟಿವ್‌ ಸ್ಲೀಪ್‌ ಅಪ್ನಿಯಾ (ಒಎಸ್‌ಎ)

8-diabetis

Diabetes: ಮಧುಮೇಹಕ್ಕೆ ಸಕ್ಕರೆಯೊಂದೇ ಕಾರಣವೇ?

MUST WATCH

udayavani youtube

ಬೇಲೂರು ಇತಿಹಾಸ | 900 ವರ್ಷಗಳ ಹಿಂದೆ ದಾಸಿಯರು Bermuda ಧರಿಸುತ್ತಿದ್ದರು

udayavani youtube

ಸಾವಿರ ವರ್ಷಗಳ ಹಳೆಯದಾದ ರಂಗನಾಥ ಸ್ವಾಮಿ ದೇವಸ್ಥಾನ

udayavani youtube

ಲೇಡಿಗೋಷನ್ ಎದೆಹಾಲು ಘಟಕ: ಅವಧಿ ಪೂರ್ವ ಶಿಶುಗಳಿಗೆ ಜೀವದಾನ

udayavani youtube

ಗ್ರಾಹಕರು ಅಡವಿಟ್ಟ ಚಿನ್ನಕ್ಕೇ ಕನ್ನ ಹಾಕಿದ ಕ್ಯಾಷಿಯರ್

udayavani youtube

ಸಾವಯವ ಅಕ್ಕಿ ಹಾಗೂ ಸಾವಯವ ಧಾನ್ಯಗಳ ಬಗ್ಗೆ ಮಾಹಿತಿ

ಹೊಸ ಸೇರ್ಪಡೆ

18

Nalatawad ಇದ್ದೂ ಇಲ್ಲದಂತಾಗಿದೆ ದೋಬಿಘಾಟ್‌

17

Vijayapura: ಸ್ನಾತಕೋತ್ತರ ಕೇಂದ್ರಕ್ಕೆ ಬೇಕಿದೆ ಕಾಯಕಲ್ಪ

15

New Kannada Movie: ಹಾಡಿನಲ್ಲಿ ʼತಿಮ್ಮಣ್ಣ  ಡಾಕ್ಟ್ರುʼ

16

Naregal: ನಿರ್ವಹಣೆ ಇಲ್ಲದೇ ಪಾಳು ಬಿದ್ದ ಬಸ್‌ ಶೆಲ್ಟರ್‌

15

Gadag:‌ ನಾಯಿಗಳ ಕಡಿತ ಪ್ರಕರಣಗಳು ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.