ಮಧುಮೇಹ ಮತ್ತು ದಂತ ಸಮಸ್ಯೆಗಳು

Team Udayavani, Jan 26, 2020, 5:00 AM IST

“ಮಧುಮೇಹ’ ಅಥವಾ “ಸಕ್ಕರೆ ಕಾಯಿಲೆ’ (ಡಯಾಬಿಟೀಸ್‌ ಮೆಲ್ಲಿಟಸ್‌) ವಿಶ್ವವ್ಯಾಪಿಯಾಗಿ ಕಂಡುಬರುವಂತಹ ಪಿಡುಗಾಗಿದೆ. ವಿಶ್ವ ಆರೋಗ್ಯ ಸಂಸ್ಥೆ (WHO)ಯ ಇತ್ತೀಚಿನ ಸಮೀಕ್ಷೆಯ ಪ್ರಕಾರ ಸುಮಾರು 70 ದಶಲಕ್ಷ ಭಾರತೀಯರು ಈ ರೋಗಕ್ಕೆ ತುತ್ತಾಗಿದ್ದಾರೆ. ನಮ್ಮ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಹೊಟ್ಟೆಯಲ್ಲಿರುವ ಮೇದೋಜೀರಕ ಗ್ರಂಥಿ(ಪ್ಯಾಂಕ್ರಿಯಾಸ್‌ನಿಂದ) ಯಿಂದ ಉತ್ಪತ್ತಿಯಾಗುವ “ಇನ್ಸುಲಿನ್‌’ ಎಂಬ ಹಾರ್ಮೋನು ನಿಯಂತ್ರಿಸುತ್ತದೆ. “ಇನ್ಸುಲಿನ್‌’ ಕಾರ್ಯಚಟುವಟಿಕೆಯಲ್ಲಿ ವ್ಯತ್ಯಯಗೊಂಡು ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಏರುಪೇರಾಗುವುದೆ ಮಧುಮೇಹಕ್ಕೆ ಕಾರಣ. ಇದು ಆನುವಂಶೀಯವೂ ಹೌದು.

(1) ಒಣ ಬಾಯಿಯ ಸಮಸ್ಯೆ (Xerostomia):
ಅನಿಯಂತ್ರಿತ ಮಧುಮೇಹವು ಲಾಲಾರಸ ಸ್ರವಿಸುವ ಗ್ರಂಥಿಗಳ ಮೇಲೆ ಹಾನಿಕಾರಕ ಪರಿಣಾಮ ಬೀರಬಲ್ಲದು. ಇದರಿಂದ ಲಾಲಾರಸದ ಕೊರತೆ ಉಂಟಾಗಿ ಮಾತನಾಡಲು, ತಿನ್ನಲು ಹಾಗೂ ನುಂಗಲು ತೊಂದರೆಯುಂಟಾಗುತ್ತದೆ. ಬಾಯಿಯಲ್ಲಿ ಹುಣ್ಣು ಹಾಗೂ ಸೋಂಕು ಸಹ ಉಂಟಾಗಬಹುದು.(2) ಹಲ್ಲು ಹುಳುಕು ಮಧುಮೇಹಿಗಳಲ್ಲಿ ಲಾಲಾರಸದ ಕೊರತೆಯಿಂದ ಹಲ್ಲುಗಳ ಶುದ್ಧೀಕರಣ ಹಾಗೂ ಬಫ‌ರಿಂಗ್‌ ಸಾಮರ್ಥ್ಯ ಕಡಿಮೆಯಾಗುತ್ತದೆ. “ಈಸ್ಟ್‌’, “ಲ್ಯಾಕ್ಟೋ ಬ್ಯಾಸಿಲ್ಲಸ್‌’ನಂತಹ ಸೂಕ್ಷ್ಮಾಣು ಜೀವಿಗಳಿಂದ ಹೆಚ್ಚಾಗಿ ಹಲ್ಲು ಹುಳುಕು ಉಂಟಾಗಬಹುದು ಮತ್ತು ಹಲ್ಲಿನ ನರ ತಂತುಗಳಿಗೂ ಸೋಂಕು ತಗಲಬಹುದು.

(2) ಹಲ್ಲು ಹುಳುಕು
ಮಧುಮೇಹಿಗಳಲ್ಲಿ ಲಾಲಾರಸದ ಕೊರತೆಯಿಂದ ಹಲ್ಲುಗಳ ಶುದ್ಧೀಕರಣ ಹಾಗೂ ಬಫ‌ರಿಂಗ್‌ ಸಾಮರ್ಥ್ಯ ಕಡಿಮೆಯಾಗುತ್ತದೆ. “ಈಸ್ಟ್‌’, “ಲ್ಯಾಕ್ಟೋ ಬ್ಯಾಸಿಲ್ಲಸ್‌’ನಂತಹ ಸೂಕ್ಷ್ಮಾಣು ಜೀವಿಗಳಿಂದ ಹೆಚ್ಚಾಗಿ ಹಲ್ಲು ಹುಳುಕು ಉಂಟಾಗಬಹುದು ಮತ್ತು ಹಲ್ಲಿನ ನರ ತಂತುಗಳಿಗೂ ಸೋಂಕು ತಗಲಬಹುದು.

(3) ವಸಡಿನ ಉರಿಯೂತ (ಜಿಂಜಿವೈಟಿಸ್‌ ಮತ್ತು ಪೆರಿಯೋಡಾಂಟಾçಟಿಸ್‌):
ಮಧುಮೇಹಿಗಳಲ್ಲಿ ಇದೊಂದು ಬಹಳ ಸಾಮಾನ್ಯವಾಗಿ ಕಂಡು ಬರುವಂತಹ ಸಮಸ್ಯೆ. ವಸಡಿನ ಸೋಂಕಿನಿಂದ ವಸಡಿನ ಉರಿಯೂತ ಉಂಟಾಗುತ್ತದೆ. ಇದರಿಂದ ಬಾಯಿಯಲ್ಲಿ ದುರ್ವಾಸನೆ ಮತ್ತು ಕೆಟ್ಟ ರುಚಿ ಉಂಟಾಗುತ್ತದೆ.

(4) ಹಲ್ಲುಗಳ ಉದುರುವಿಕೆ:
ಸೂಕ್ಷ್ಮಾಣು ಜೀವಿಗಳನ್ನು ಒಳಗೊಂಡ ಪದರ ಹಲ್ಲಿನ ಸುತ್ತ ಗಡುಸಾಗಿ ಪಾಚಿ ಕಟ್ಟುತ್ತದೆ ಇದಕ್ಕೆ “ಕಾಲ್ಕುéಲಸ್‌’ ಎನ್ನುತ್ತೇವೆ. ಇದರಿಂದ ವಸಡಿನ ರೋಗ ಉಲ್ಬಣಗೊಂಡು ವಸಡುಗಳು ಕೆಂಪಾಗಿ, ಕೀವು ಮತ್ತು ರಕ್ತಸ್ರಾವ ಉಂಟಾಗುತ್ತದೆ. ಹೀಗಾಗಿ ಹಲ್ಲುಗಳ ಅಡಿಪಾಯವಾಗಿರುವ ವಸಡು ಹಾಗೂ ಹಲ್ಲನ್ನೊಳಗೊಂಡ ಮೂಳೆಯ ನಾಶವಾಗತೊಡಗಿ ಹಲ್ಲುಗಳು ಬಹು ಬೇಗನೇ ಬಿದ್ದು ಹೋಗಬಹುದು. ಇದರಿಂದ ಜಗಿಯಲು ತೊಂದರೆಯುಂಟಾಗಿ ಪೋಷಕಾಂಶಗಳ ಕೊರತೆಯುಂಟಾಗಬಹುದು.

(5) ಬಾಯಿಯ ಸೋಂಕು:
ಮಧುಮೇಹಿಗಳಲ್ಲಿ ಸೋಂಕನ್ನು ನಿಯಂತ್ರಿಸುವ ರೋಗ ನಿರೋಧಕ ಶಕ್ತಿಯು ಕಡಿಮೆಯಿರುತ್ತದೆ. ಅನಿಯಂತ್ರಿತ ಮಧುಮೇಹವು ಬಾಯಿಯಲ್ಲಿ ಅಪಾಯಕಾರಿ ಸೋಂಕು ಗಳನ್ನು ಉಂಟು ಮಾಡುತ್ತದೆ. “ಕ್ಯಾಂಡಿಡಾ” ಎಂಬ ಶಿಲೀಂಧ್ರದ (ಫ‌ಂಗಸ್‌) ಸೋಂಕಿನಿಂದ ನಾಲಗೆ ಮತ್ತು ಬಾಯಿಯ ಒಳಭಾಗದಲ್ಲಿ ಬಿಳಿ ಅಥವಾ ಕೆಂಪು ಮಚ್ಚೆಗಳು ಕಂಡುಬಂದು ಉರಿ ಮತ್ತು ನೋವುಂಟಾಗುತ್ತದೆ. ಇದು ಕೃತಕ ದಂತ ಪಂಕ್ತಿಗಳನ್ನು ಹೊಂದಿದವರಲ್ಲಿ ಜಾಸ್ತಿಯಾಗಿ ಕಂಡು ಬರುತ್ತದೆ.

(6) ಕುತ್ತಿಗೆಯ ಒಳಭಾಗದಲ್ಲಿ ತಗಲುವ ಆಳವಾದ ಸೋಂಕು:
ಬಾಯಿಯ ಮೂಲದ ಸೋಂಕುಗಳಿಗೆ ಸರಿಯಗಿ ಚಿಕಿತ್ಸೆ ದೊರಕದಿದ್ದಾಗ ಅದು ಕೀವುಗಟ್ಟಿ ಗಂಟಲು ಮತ್ತು ಕುತ್ತಿಗೆಯ ಒಳಭಾಗದಲ್ಲಿ ಹರಡತ್ತದೆ. ಸೆಲ್ಯುಲಾಯಿrಸ್‌ ಮತ್ತು ಲುಡ್‌ ವಿಗ್ಸ್‌ ಆಂಜೈನಾದಂತಹ ಗಂಭೀರ ಸೋಂಕುಗಳಿಂದ ಕುತ್ತಿಗೆಯ ನೋವು, ಊತ ಮತ್ತು ಉಸಿರಾಟದ ತೊಂದರೆ ಉಂಟಾಗಿ ಜೀವಕ್ಕೇ ಮಾರಕವಾಗಬಲ್ಲದು.

ಮುಂಜಾಗ್ರತಾ ಕ್ರಮಗಳು
(1) ಮಧುಮೇಹವು ನಿಯಂತ್ರಣದಲ್ಲಿ ಇಲ್ಲದಿದ್ದರೆ ಹಲ್ಲು ತೆಗೆಯುವುದು, ಬಾಯಿಯ ಶಸ್ತ್ರಚಿಕಿತ್ಸೆ ಹಾಗೂ ಯಾವುದೇ ದಂತ ಚಿಕಿತ್ಸೆಯ ಬಳಿಕ ಗಾಯ ಗುಣವಾಗಲು ಹೆಚ್ಚು ಸಮಯ ಬೇಕಾಗುತ್ತದೆ. ಆದ್ದರಿಂದ ಚಿಕಿತ್ಸೆಗೂ ಮುನ್ನ ರಕ್ತದಲ್ಲಿನ ಗ್ಲೂಕೋಸ್‌ ಪ್ರಮಾಣವನ್ನು ನಿಯಂತ್ರಿಸುವುದು ಅತಿ ಮುಖ್ಯವಾಗಿದೆ.
(2) ಬಾಯಿಯ ಸುತ್ತ ಯಾವುದೇ ಕೆಂಪು ಅಥವಾ ಬಿಳಿ ಮಚ್ಚೆ , ಉರಿ ಕಂಡು ಬಂದಲ್ಲಿ ಕೂಡಲೇ ತಜ್ಞ ದಂತ ವೈದ್ಯರಿಂದ ಸಲಹೆ ಪಡೆಯಬೇಕು.
(3) ಸರಿಯಾದ ಕ್ರಮದಲ್ಲಿ ಹಲ್ಲುಜ್ಜುವುದು ಹಾಗೂ ದಂತ ಪಂಕ್ತಿಗಳನ್ನು ಹೊಂದಿದ್ದರೆ ಅದನ್ನು ಶುಚಿಯಾಗಿಟ್ಟುಕೊಳ್ಳುವುದು ಮತ್ತು ನಿಯಮಿತ ದಂತ ತಪಾಸಣೆ.
ಇಂದಿನ ದಿನಗಳಲ್ಲಿ ಸರ್ವ ಸಾಮಾನ್ಯವಾಗಿ ಕಂಡು ಬರುತ್ತಿರುವ ಮಧುಮೇಹ ಶಾಪವೇನೂ ಅಲ್ಲ. ಜೀವನ ಶೈಲಿಯ ಬದಲಾವಣೆ, ಆಹಾರದಲ್ಲಿ ಪಥ್ಯ, ನಿಯಮಿತ ವ್ಯಾಯಾಮ ಹಾಗೂ ಆರೋಗ್ಯ ತಪಾಸಣೆಯಿಂದ ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ ಹಾಗೂ ದೀರ್ಘ‌ಕಾಲ ಆರೋಗ್ಯದಿಂದಿರಿ.

ಡಾ| ನೀತಾ ಶೆಣೈ, ಎಂಡಿಎಸ್‌, (MDS)
ಕನ್ಸರ್ವೇಟಿವ್‌ ಡೆಂಟಿಸ್ಟ್ರಿ ಮತ್ತು ಎಂಡೊಡಾಂಟಿಕ್ಸ್‌ ವಿಭಾಗ
ಮಣಿಪಾಲ ದಂತ ವೈದ್ಯಕೀಯ ಕಾಲೇಜು, ಮಣಿಪಾಲ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಪ್ಲಾಸ್ಟಿಕ್‌ ಇಂದು ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದರೆ ತಪ್ಪಾಗಲಾರದು. ಕಡಿಮೆ ವೆಚ್ಚದಲ್ಲಿ ತಯಾರಿಕೆ ಹಾಗೂ ಕೈಗೆಟಕುವ ದರದಲ್ಲಿ ಈ ಪ್ಲಾಸ್ಟಿಕ್‌...

  • ಹೃದ್ರೋಗಗಳಿಂದ ಹಿಡಿದು ಅಧಿಕ ರಕ್ತದೊತ್ತಡ, ಇನ್ಸುಲಿನ್‌ ಅವಲಂಬಿಯಲ್ಲದ ಟೈಪ್‌ 2 ಮಧುಮೇಹ, ಸಂಧಿವಾತ, ಪಿತ್ತಕೋಶದ ಕಲ್ಲುಗಳು ಮತ್ತು ಎಂಡೊಮೆಟ್ರಿಕ್‌ ಕ್ಯಾನ್ಸರ್‌...

  • ದೀರ್ಘ‌ಕಾಲಿಕವಾಗಿ ಉಂಟಾಗುವ ಕ್ರಾನಿಕ್‌ ಒಟಿಟಿಸ್‌ ಮೀಡಿಯಾವನ್ನು ಸಂಕ್ಷಿಪ್ತವಾಗಿ ಸಿಒಎಂ ಎನ್ನಲಾಗುತ್ತದೆ. ಇದು ನಮ್ಮ ದೇಶದಲ್ಲಿ ಅತಿ ಸಾಮಾನ್ಯವಾಗಿರುವ...

  • ಚೀನದ ವುಹಾನ್‌ ಪ್ರಾಂತ್ಯದಲ್ಲಿ 2019ರ ಡಿಸೆಂಬರ್‌ ತಿಂಗಳಲ್ಲಿ ಅಸಾಮಾನ್ಯ ಬಗೆಯ ನ್ಯುಮೋನಿಯಾ ಪ್ರಕರಣಗಳಲ್ಲಿ ಹೆಚ್ಚಳ ಉಂಟಾಗುತ್ತಿರುವುದು ಕಂಡುಬಂತು. ಇದರ ಬಗ್ಗೆ...

  • ನಾವು ಸಮಾಜಜೀವಿಗಳು.ಹಾಗಾಗಿ ಸಮಾಜದಲ್ಲಿರುವ ಎಲ್ಲ ವರ್ಗದ ಜನರ, ಅದರಲ್ಲೂ ಏಡ್ಸ್‌ನಂತಹ ಗುಣವಾಗದ ಕಾಯಿಲೆಗಳಿಂದ ಬಾಧಿತರಾದವರ ಅಗತ್ಯಗಳನ್ನು ಅರಿತುಕೊಳ್ಳುವುದು,...

ಹೊಸ ಸೇರ್ಪಡೆ