ಮಹಿಳೆಯರಲ್ಲಿ ಕೌಟುಂಬಿಕ ಕ್ಯಾನ್ಸ ರ್‌ ಸಿಂಡ್ರೋಮ್‌ಗಳು ಮತು ವಂಶವಾಹಿ ಪರೀಕ್ಷೆ


Team Udayavani, May 29, 2022, 1:00 PM IST

cancer

ಕ್ಯಾನ್ಸರ್‌ ಎಂಬುದು ಈಗ ಒಂದು ಸರ್ವೇಸಾಮಾನ್ಯ ಕಾಯಿಲೆ ಆಗಿಬಿಟ್ಟಿದೆ, ಅನೇಕ ಕುಟುಂಬಗಳಲ್ಲಿ ಕ್ಯಾನ್ಸರ್‌ಪೀಡಿತ ಕೆಲವರಾದರೂ ಸದಸ್ಯರಿರುತ್ತಾರೆ.

ಮಹಿಳೆಯರ ವಿಚಾರವಾಗಿ ಹೇಳುವುದಾದರೆ, ಕೆಲವು ವಿಧವಾದ ಕ್ಯಾನ್ಸರ್‌ ಗಳು ಕುಟುಂಬದಲ್ಲಿ ತಲೆಮಾರಿನಿಂದ ತಲೆಮಾರಿಗೆ ಹರಿದು ಬರುವುದು ತಿಳಿದುಬಂದಿದೆ. ಧೂಮಪಾನ ದಂತಹ ಕ್ಯಾನ್ಸರ್‌ ಉಂಟಾಗುವ ಸಾಧ್ಯತೆಯನ್ನು ಹೆಚ್ಚಿಸುವ ನಡವಳಿಕೆ ಅಥವಾ ಒಡ್ಡಿಕೊಳ್ಳುವಿಕೆ ಯನ್ನು ಈ ಕುಟುಂಬಗಳ ಸದಸ್ಯರು ಸಮಾನವಾಗಿ ಹೊಂದಿರುವುದು ಇದಕ್ಕೆ ಕಾರಣವೆಂಬಂತೆ ಕಾಣುತ್ತಿದೆ. ಬೊಜ್ಜಿನಂತಹ ಇತರ ಕೆಲವು ಅಂಶಗಳು ಕೂಡ ಕೌಟುಂಬಿಕ ವಾಗಿದ್ದು, ಇವು ಕೂಡ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆಯನ್ನು ಹೆಚ್ಚಿಸುತ್ತವೆ.

ಕೆಲವು ನಿರ್ದಿಷ್ಟ ಕುಟುಂಬಗಳಲ್ಲಿ ಪೀಳಿಗೆಯಿಂದ ಪೀಳಿಗೆಗೆ ಹರಿದುಬರುವ ಅಸಹಜ ವಂಶವಾಹಿಯಿಂದಾಗಿ ಕ್ಯಾನ್ಸರ್‌ ತಲೆದೋರುತ್ತದೆ. ಇದನ್ನು ಕೆಲವೊಮ್ಮೆ “ಬಳುವಳಿಯಾಗಿ ಪಡೆದ ಕ್ಯಾನ್ಸರ್‌’ ಎನ್ನಲಾಗುತ್ತದೆ; ಇಲ್ಲಿ ಬಳುವಳಿಯಾಗಿ ಬರುವುದು ಕ್ಯಾನ್ಸರ್‌ ಉಂಟಾಗಲು ಕಾರಣವಾಗುವ ಅಸಹಜ ವಂಶವಾಹಿಯೇ ವಿನಾ ಸ್ವತಃ ಕ್ಯಾನ್ಸರ್‌ ಅಲ್ಲ.

ವ್ಯಕ್ತಿಯೊಬ್ಬರಿಗೆ ಕೌಟುಂಬಿಕ ಕ್ಯಾನ್ಸರ್‌ ಸಿಂಡ್ರೋಮ್‌ ಬರುವುದು ಹೇಗೆ?

ಜೀವಕೋಶಗಳು ಅನಿಯಂತ್ರಿತವಾಗಿ ಬೆಳವಣಿಗೆ ಕಾಣುವುದೇ ಕ್ಯಾನ್ಸರ್‌ ಕಾಯಿಲೆ. ಜೀವಕೋಶಗಳ ಒಳಗಿರುವ ವಂಶವಾಹಿಗಳಲ್ಲಿ ಆಗಿರುವ ಬದಲಾವಣೆ ಇದಕ್ಕೆ ಕಾರಣವಾಗಿರುತ್ತದೆ. ವಂಶವಾಹಿಗಳು ಎಂದರೆ ಜೀವಕೋಶಗಳು ಹೇಗೆ ಸಮತೋಲನದಲ್ಲಿರಬೇಕು ಮತ್ತು ದೇಹವು ಕಾರ್ಯಾಚರಿಸಲು ಅಗತ್ಯವಾದ ಪ್ರೊಟೀನ್‌ಗಳನ್ನು ಹೇಗೆ ಉತ್ಪಾದಿಸಬೇಕು ಎನ್ನುದನ್ನು ನಿಯಂತ್ರಿಸುವ ಡಿಎನ್‌ಎ ತುಣುಕುಗಳು. ಉದಾಹರಣೆಗೆ, ನಮ್ಮ ತಲೆಗೂದಲಿನ ಬಣ್ಣ, ಕಣ್ಣುಗಳ ಬಣ್ಣ ಮತ್ತು ನಾವೆಷ್ಟು ಎತ್ತರ ಬೆಳೆಯುತ್ತೇವೆ ಇತ್ಯಾದಿಗಳಿಗೆ ವಂಶವಾಹಿಗಳು ಕಾರಣವಾಗುತ್ತವೆ. ಕ್ಯಾನ್ಸರ್‌ನಂತಹ ಕೆಲವು ಕಾಯಿಲೆಗಳು ಉಂಟಾಗುವ ಸಾಧ್ಯತೆಗಳ ಮೇಲೆಯೂ ವಂಶವಾಹಿಗಳು ಪರಿಣಾಮ ಬೀರುತ್ತವೆ.

ವಂಶವಾಹಿಯೊಂದರಲ್ಲಿ ಉಂಟಾಗಿರುವ ಅಸಹಜ ಬದಲಾವಣೆಯೇ ರೂಪಾಂತರ ಅಥವಾ ಮ್ಯುಟೇಶನ್‌. ವಂಶವಾಹಿಯೊಂದರಲ್ಲಿ ಉಂಟಾಗುವ ರೂಪಾಂತರವು ಅದು ಹೇಗೆ ಕಾರ್ಯಾಚರಿಸುತ್ತದೆ ಎಂಬುದರ ಮೇಲೆ ಪರಿಣಾಮ ಬೀರಬಲ್ಲುದು. ಉದಾಹರಣೆಗೆ, ರೂಪಾಂತರದಿಂದಾಗಿ ವಂಶವಾಹಿಯೊಂದು ಕೆಲಸ ಮಾಡುವುದನ್ನು ನಿಲ್ಲಿಸಬಹುದು ಅಥವಾ ಅದರ ಕಾರ್ಯಚಟುವಟಿಕೆಯ ಅಗತ್ಯ ಇಲ್ಲದಿದ್ದಾಗಲೂ ಅದು ಕೆಲಸ ಮಾಡುತ್ತಿರುವಂತಾಗಬಹುದು. ಅಂತಹ ಸಂದರ್ಭದಲ್ಲಿ ಎರಡು ರೀತಿಯ ಬದಲಾವಣೆಗಳಿಂದಲೂ ಜೀವಕೋಶದ ಒಳಗೆ ತೊಂದರೆಗಳು ಆರಂಭವಾಗುತ್ತವೆ.

ವಂಶವಾಹಿ ರೂಪಾಂತರವು ತಲೆಮಾರಿನಿಂದ ಬಳುವಳಿಯಾಗಿ ಬಂದುದಾಗಿರಬಹುದು ಅಥವಾ ಪ್ರಸ್ತುತ ಗಳಿಸಿಕೊಂಡದ್ದಾಗಿರಬಹುದು.

ಬಳುವಳಿಯಾಗಿ ಬಂದಿರುವ ವಂಶವಾಹಿ ರೂಪಾಂತರವು ಶಿಶುವು ರೂಪುಗೊಳ್ಳಲು ಕಾರಣವಾಗುವ ವೀರ್ಯಾಣು ಅಥವಾ ಅಂಡದಲ್ಲಿ ಇರುತ್ತದೆ. ಅಂಡವು ವೀರ್ಯಾಣುವಿನಿಂದ ಫ‌ಲಿತವಾದಾಗ ಅಲ್ಲಿ ಒಂದು ಜೀವಕೋಶವು ಸೃಷ್ಟಿಯಾಗಿ, ಅದು ಆ ಬಳಿಕ ಹಲವಾಗಿ ದ್ವಿಗುಣಗೊಳ್ಳುತ್ತ ಕ್ರಮೇಣ ಭ್ರೂಣವಾಗಿ ರೂಪುಗೊಳ್ಳುತ್ತದೆ. ಎಲ್ಲ ಜೀವಕೋಶಗಳು ಕೂಡ ಈ ಮೊದಲನೆಯ ಜೀವಕೋಶದಿಂದಲೇ ರೂಪುಗೊಳ್ಳುವವಾದ ಕಾರಣ ಪ್ರತಿಯೊಂದು ಜೀವಕೋಶದಲ್ಲಿಯೂ ಈ ರೂಪಾಂತರವು ಇರುತ್ತದೆ (ಅಂಡ ಅಥವಾ ವೀರ್ಯಾಣು ಸಹಿತ) ಮತ್ತು ಅದು ಮುಂದಿನ ಪೀಳಿಗೆಗೆ ರವಾನೆಯಾಗುತ್ತದೆ.

ಪ್ರಸ್ತುತ ಗಳಿಸಿಕೊಂಡ (ಸೊಮ್ಯಾಟಿಕ್‌) ರೂಪಾಂತರವು ಹೆತ್ತವರಿಂದ ಬಂದುದಾಗಿರುವುದಿಲ್ಲ; ಆ ಬಳಿಕ ಯಾವಾಗಲಾದರೂ ವ್ಯಕ್ತಿಯೇ ಗಳಿಸಿಕೊಂಡದ್ದಾಗಿರುತ್ತದೆ. ಇದು ಒಂದು ಜೀವಕೋಶದಲ್ಲಿ ಆರಂಭವಾಗುತ್ತದೆ ಮತ್ತು ಆ ಜೀವಕೋಶದಿಂದ ಉತ್ಪತ್ತಿಯಾದ ಯಾವುದೇ ಹೊಸ ಜೀವಕೋಶಗಳಿಗೆ ಹರಡುತ್ತದೆ. ಇಂತಹ ರೂಪಾಂತರವು ಅಂಡ ಅಥವಾ ವೀರ್ಯಾಣುವಿನಲ್ಲಿ ಇರುವುದಿಲ್ಲ; ಹಾಗಾಗಿ ಮುಂದಿನ ಪೀಳಿಗೆಗೆ ರವಾನೆಯಾಗುವುದಿಲ್ಲ. ಗಳಿಸಿಕೊಂಡ ರೂಪಾಂತರಗಳು ಬಳುವಳಿಯಾಗಿ ಬರುವ ರೂಪಾಂತರಗಳಿಗಿಂತ ಹೆಚ್ಚು ಸಾಮಾನ್ಯವಾಗಿವೆ. ಹೆಚ್ಚಿನ ಕ್ಯಾನ್ಸರ್‌ ಗಳು ಗಳಿಸಿಕೊಂಡ ರೂಪಾಂತರಗಳಿಂದ ಉಂಟಾಗುತ್ತವೆ.

ಕೌಟುಂಬಿಕ ಕ್ಯಾನ್ಸರ್‌ ಸಿಂಡ್ರೋಮ್‌ ಗಳಲ್ಲಿ ಬಹುತೇಕ ಪ್ರಕರಣಗಳು ಗಡ್ಡೆಗಳನ್ನು ನಿಯಂತ್ರಿಸುವ ವಂಶವಾಹಿ (ಟ್ಯೂಮರ್‌ ಸಪ್ರಸರ್‌ ಜೀನ್ಸ್‌)ಗಳಿಂದ ಉಂಟಾಗುತ್ತವೆ. ಈ ವಂಶವಾಹಿಗಳು ಜೀವಕೋಶಗಳು ದ್ವಿಗುಣಗೊಳ್ಳುವ ವೇಗವನ್ನು ನಿಯಂತ್ರಿಸುವ (ಅಂದರೆ ಹೊಸ ಜೀವಕೋಶಗಳು ರೂಪುಗೊಳ್ಳುವ ವೇಗ), ಡಿಎನ್‌ಎ ಪ್ರಮಾದಗಳನ್ನು ದುರಸ್ತಿಪಡಿಸುವ ಅಥವಾ ಜೀವಕೋಶಗಳು ಸರಿಯಾದ ಸಮಯದಲ್ಲಿ ಸಾಯುವಂತೆ ಆದೇಶಿಸುವ ಕೆಲಸ ಮಾಡುತ್ತವೆ. ನಮ್ಮೆಲ್ಲರ ದೇಹದಲ್ಲಿ ಪ್ರತೀ ಹೆತ್ತವರಿಂದ ಒಂದೊಂದರಂತೆ ವಂಶವಾಹಿಗಳ ಎರಡು ಪ್ರತಿಗಳಿರುತ್ತವೆ. ಯಾವುದೇ ವ್ಯಕ್ತಿ ವಂಶವಾಹಿಯೊಂದರ ಅಸಹಜ ಪ್ರತಿಯನ್ನು ಬಳುವಳಿಯಾಗಿ ಪಡೆದಾಗ, ಅವರ ಜೀವಕೋಶಗಳು ಒಂದು ರೂಪಾಂತರದೊಂದಿಗೆ ಕಾರ್ಯಾಚರಣೆ ಆರಂಭಿಸುತ್ತವೆ. ಸಾಮಾನ್ಯವಾಗಿ ಇದರಿಂದ ಸಮಸ್ಯೆಯಾಗುವುದಿಲ್ಲ; ಏಕೆಂದರೆ ಸಹಜವಾಗಿರುವ ಇನ್ನೊಂದು ಪ್ರತಿ ಕೆಲಸ ಮಾಡುತ್ತಿರುತ್ತದೆ. ಆದರೆ ಸಹಜವಾಗಿರುವ ಇನ್ನೊಂದು ವಂಶವಾಹಿಯು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದಾಗ (ಉದಾಹರಣೆಗೆ, ಗಳಿಸಿಕೊಂಡ ರೂಪಾಂತರದಿಂದಾಗಿ) ಆ ವಂಶವಾಹಿಗಳ ಕಾರ್ಯಾಚರಣೆ ಸಂಪೂರ್ಣವಾಗಿ ನಷ್ಟವಾಗುತ್ತದೆ. ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದ ವಂಶವಾಹಿಯು ಗಡ್ಡೆಗಳನ್ನು ನಿಯಂತ್ರಿಸುವ ವಂಶವಾಹಿ ಆಗಿದ್ದ ಸಂದರ್ಭದಲ್ಲಿ ಜೀವಕೋಶಗಳು ಅನಿಯಂತ್ರಿತವಾಗಿ ದ್ವಿಗುಣಗೊಳ್ಳಲು ಆರಂಭಿಸುತ್ತವೆ, ಇದು ಕ್ಯಾನ್ಸರ್‌ ಆಗಿ ಬೆಳವಣಿಗೆ ಕಾಣುವುದು ಸಾಧ್ಯ. ಗಡ್ಡೆ ಬೆಳವಣಿಗೆಯನ್ನು ನಿಯಂತ್ರಿಸುವ ವಂಶವಾಹಿಯ ಪ್ರತಿಯೊಂದರಲ್ಲಿ ರೂಪಾಂತರವನ್ನು ಬಳುವಳಿಯಾಗಿ ಪಡೆದುಕೊಂಡು ಜನಿಸಿರುವ ವ್ಯಕ್ತಿಯಲ್ಲಿ ಆ ವಂಶವಾಹಿಯ ಕಾರ್ಯಾಚರಣೆ ಸ್ಥಗಿತಗೊಳ್ಳಬೇಕಾದರೆ ಅದರ ಇನ್ನೊಂದು ಪ್ರತಿಯಲ್ಲಿ ರೂಪಾಂತರವು ಉಂಟಾಗಬೇಕು. ಆ ವಂಶವಾಹಿಯ ಎರಡೂ ಪ್ರತಿಗಳಲ್ಲಿ ರೂಪಾಂತರವನ್ನು ಗಳಿಸಿಕೊಳ್ಳುವುದಕ್ಕಿಂತ ಇದು ಹೆಚ್ಚು ಸಾಮಾನ್ಯವಾಗಿ ಉಂಟಾಗುವುದು ಸಾಧ್ಯ; ಹೀಗಾಗಿ ಇಂತಹ ವ್ಯಕ್ತಿಯು ಕ್ಯಾನ್ಸರ್‌ಗೆ ತುತ್ತಾಗುವ ಅಪಾಯವು ವಂಶವಾಹಿ ರೂಪಾಂತರವಿಲ್ಲದೆ ಜನಿಸಿದ ವ್ಯಕ್ತಿಗಿಂತ ಹೆಚ್ಚಿರುತ್ತದೆ.

ಕೌಟುಂಬಿಕ ಕ್ಯಾನ್ಸರ್‌ ಸಿಂಡ್ರೋಮ್‌ ಪತ್ತೆಹಚ್ಚುವುದು ಹೇಗೆ?

ಒಂದು ಕುಟುಂಬದಲ್ಲಿ ಅನೇಕ ಕ್ಯಾನ್ಸರ್‌ ಪ್ರಕರಣಗಳು ಕಂಡುಬಂದರೆ ಅದು ಅಕಸ್ಮಾತ್‌ ಆಗಿರಬಹುದು ಅಥವಾ ಧೂಮಪಾನದಂತಹ ಸಮಾನ ಅಪಾಯಾಂಶಕ್ಕೆ ಕುಟುಂಬ ಸದಸ್ಯರು ತೆರೆದುಕೊಂಡ ಕಾರಣದಿಂದ ಆಗಿರಬಹುದು.

ಕೆಲವು ವಂಶವಾಹಿಗಳು ಅಥವಾ ಅಪಾಯಾಂಶಗಳು ಪರಸ್ಪರ ಕೊಡು-ಕೊಳುಗೆ ನಡೆಸುತ್ತವೆ. ಉದಾಹರಣೆಗೆ, ಕೆಲವರು ತಮ್ಮ ದೇಹವು ತಂಬಾಕಿನ ಧೂಮದ ವಿಷಾಂಶದಿಂದ ಮುಕ್ತಗೊಳ್ಳುವುದು ಕಠಿನವಾಗುವಂತಹ ವಂಶವಾಹಿಗಳನ್ನು ಬಳುವಳಿಯಾಗಿ ಪಡೆದಿರುತ್ತಾರೆ. ಇಂತಹವರು ಧೂಮಪಾನಿಗಳಾದಲ್ಲಿ ಕ್ಯಾನ್ಸರ್‌ಗೆ ತುತ್ತಾಗುವ ಸಾಧ್ಯತೆಗಳು ಇಂತಹ ವಂಶವಾಹಿ ಬದಲಾವಣೆಗಳನ್ನು ಹೊಂದಿಲ್ಲದವರಿಗಿಂತ ಅಧಿಕವಾಗಿರುತ್ತವೆ.

ಕೆಲವೊಮ್ಮೆ, ಕುಟುಂಬವೊಂದರಲ್ಲಿ ಕಂಡುಬರುವ ಕ್ಯಾನ್ಸರ್‌ ಪ್ರಕರಣಗಳು ಕೌಟುಂಬಿಕ ಕ್ಯಾನ್ಸರ್‌ ಸಿಂಡ್ರೋಮ್‌ನ ಭಾಗವಾಗಿರುವ ಬಳುವಳಿಯಾಗಿ ಬಂದ ವಂಶವಾಹಿ ರೂಪಾಂತರದ ಜತೆಗೆ ಬಲವಾದ ನಂಟನ್ನು ಹೊಂದಿರುತ್ತವೆ. ನಿಕಟ ಸಂಬಂಧಿಗಳಲ್ಲಿ ಕಂಡುಬರುವ ಕ್ಯಾನ್ಸರ್‌ (ಹೆತ್ತವರು ಅಥವಾ ಅಣ್ಣ, ತಮ್ಮ, ತಂಗಿ, ಅಕ್ಕ) ದೂರದ ಸಂಬಂಧಿಗಳಲ್ಲಿ ಕಂಡುಬರುವ ಕ್ಯಾನ್ಸರ್‌ ಗಿಂತ ಹೆಚ್ಚು ಕಳವಳಕಾರಿಯಾಗಿರುತ್ತದೆ. ಕ್ಯಾನ್ಸರ್‌ ಉಂಟಾಗಿರುವುದು ವಂಶವಾಹಿ ರೂಪಾಂತರದಿಂದ ಆಗಿದ್ದರೂ ದೂರದ ಸಂಬಂಧಿಯಾದಾಗ ಅದು ನಮಗೆ ರವಾನೆಯಾಗುವ ಸಾಧ್ಯತೆಗಳು ಕಡಿಮೆಯಾಗುತ್ತವೆ.

ಯಾವ ವಿಧವಾದ ಕ್ಯಾನ್ಸರ್‌ ಎಂಬುದು ಕೂಡ ಗಮನಾರ್ಹವೇ. ಸಂಬಂಧಿಗಳಲ್ಲಿ ಅನೇಕರು ಒಂದೇ ವಿಧವಾದ ಕ್ಯಾನ್ಸರ್‌ಗೆ ತುತ್ತಾಗುವುದು ಅವರು ಹಲವು ಬೇರೆ ಬೇರೆ ವಿಧವಾದ ಕ್ಯಾನ್ಸರ್‌ಗಳಿಗೆ ತುತ್ತಾಗುವುದಕ್ಕಿಂತ ಹೆಚ್ಚು ಕಳವಳಕಾರಿಯಾಗಿರುತ್ತದೆ. ಆದರೂ ಕೆಲವು ಕೌಟುಂಬಿಕ ಕ್ಯಾನ್ಸರ್‌ ಸಿಂಡ್ರೋಮ್‌ಗಳಲ್ಲಿ ಕೆಲವು ವಿಧವಾದ ಕ್ಯಾನ್ಸರ್‌ಗಳು ಜತೆ ಜತೆಯಾಗಿ ಕಂಡುಬರುತ್ತವೆ. ವಂಶವಾಹಿಯಾಗಿ ಬರುವ ಸ್ತನ ಮತ್ತು ಅಂಡಾಶಯ ಕ್ಯಾನ್ಸರ್‌ ಸಿಂಡ್ರೋಮ್‌ (ಎಚ್‌ಬಿಒಸಿ) ಹೊಂದಿರುವ ಕುಟುಂಬಗಳಲ್ಲಿ ಸ್ತನದ ಕ್ಯಾನ್ಸರ್‌ ಮತ್ತು ಅಂಡಾಶಯ ಕ್ಯಾನ್ಸರ್‌ ಜತೆಯಾಗಿ ಕಂಡುಬರುತ್ತದೆ. ಲಿಂಚ್‌ ಸಿಂಡ್ರೋಮ್‌ (ವಂಶವಾಹಿ ನಾನ್‌ ಪಾಲಿಪೋಸಿಸ್‌ ಕೊಲೊರೆಕ್ಟಲ್‌ ಕ್ಯಾನ್ಸರ್‌ ಅಥವಾ ಎಚ್‌ಎನ್‌ಪಿಸಿಸಿ ಎಂದೂ ಕರೆಯಲ್ಪಡುತ್ತದೆ) ನಲ್ಲಿ ಕರುಳು ಮತ್ತು ಎಂಡೊಮೆಟ್ರಿಯಲ್‌ ಕ್ಯಾನ್ಸರ್‌ಗಳು ಜತೆಯಾಗಿ ಕಂಡುಬರುತ್ತವೆ.

ಇದೇ ರೀತಿಯಲ್ಲಿ, ಹೆಚ್ಚು ಸಾಮಾನ್ಯವಾದ ಕ್ಯಾನ್ಸರ್‌ನ ಹಲವು ಪ್ರಕರಣಗಳು ಒಂದು ಕುಟುಂಬದಲ್ಲಿ ಕಂಡುಬರುವುದಕ್ಕಿಂತ ಅಪರೂಪದ ಯಾವುದೇ ಒಂದು ಕ್ಯಾನ್ಸರ್‌ನ ಹಲವು ಪ್ರಕರಣಗಳು ಕಾಣಿಸಿಕೊಳ್ಳುವುದು ಹೆಚ್ಚು ಅಪಾಯಕಾರಿ ಮತ್ತು ಕಳವಳಕಾರಿಯಾಗಿರುತ್ತದೆ. ಕೆಲವು ಅಪರೂಪದ ಕ್ಯಾನ್ಸರ್‌ ಪ್ರಕರಣಗಳು ಕೌಟುಂಬಿಕ ಕ್ಯಾನ್ಸರ್‌ ಸಿಂಡ್ರೋಮ್‌ ಆಗಿ ಪರಿವರ್ತನೆ ಹೊಂದಲು ಒಂದು ಪ್ರಕರಣ ಕಂಡುಬಂದರೂ ಸಾಕಾಗುತ್ತದೆ.

ಕ್ಯಾನ್ಸರ್‌ ವ್ಯಕ್ತಿಯಲ್ಲಿ ಪತ್ತೆಯಾದ ವಯಸ್ಸು ಕೂಡ ಮುಖ್ಯವಾಗುತ್ತದೆ. ಉದಾಹರಣೆಗೆ, 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಕರುಳಿನ ಕ್ಯಾನ್ಸರ್‌ ಕಂಡುಬರುವುದು ಅಪರೂಪ. 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ನಿಕಟ ಸಂಬಂಧಿಯಲ್ಲಿ ಕರುಳಿನ ಕ್ಯಾನ್ಸರ್‌ ಕಂಡುಬರುವುದು ಬಳುವಳಿಯಾಗಿ ಬಂದಿರುವ ಕ್ಯಾನ್ಸರ್‌ ಸಿಂಡ್ರೋಮ್‌ನ ಲಕ್ಷಣವಾಗಿರಲೂ ಬಹುದು. ಕೆಲವು ವಿಧವಾದ ಅಪಾಯಕಾರಿಯಲ್ಲದ ಗಡ್ಡೆಗಳು ಮತ್ತು ದೇಹಾರೋಗ್ಯ ಸ್ಥಿತಿಗಳು ಕೂಡ ಕೆಲವೊಮ್ಮೆ ಕೌಟುಂಬಿಕ ಕ್ಯಾನ್ಸರ್‌ ಸಿಂಡ್ರೋಮ್‌ನ ಭಾಗವಾಗಿರುವ ಸಾಧ್ಯತೆಗಳಿರುತ್ತವೆ. ಬಹು ಎಂಡೊಕ್ರೈನ್‌ ನಿಯೋಪ್ಲಾಸಿಯಾ, ಟೈಪ್‌ 2 ಸಿಂಡ್ರೋಮ್‌ (ಎಂಇಎನ್‌ 2) ಹೊಂದಿರುವ ವ್ಯಕ್ತಿಗಳು ಥೈರಾಯ್ಡ ಕ್ಯಾನ್ಸರ್‌ನ ಕೆಲವು ವಿಧಗಳಿಗೆ ತುತ್ತಾಗುವ ಸಾಧ್ಯತೆಗಳು ಹೆಚ್ಚಿರುತ್ತವೆ. ಇಂತಹವರಿಗೆ ಪ್ಯಾರಾಥೈರಾಯ್ಡ ಗ್ರಂಥಿಗಳಲ್ಲಿ ಅಪಾಯಕಾರಿಯಲ್ಲದ ಗಡ್ಡೆಗಳು ಉಂಟಾಗುವ ಸಾಧ್ಯತೆಗಳು, ಅಲ್ಲದೆ ಫಿಯೋಕ್ರೊಮೊಸೈಟೊಮಾಸ್‌ ಎಂದು ಕರೆಯಲ್ಪಡುವ ಅಡ್ರಿನಾಲಿನ್‌ ಗ್ರಂಥಿಗಳಲ್ಲಿ ಅಪಾಯಕಾರಿಯಲ್ಲದ ಗಡ್ಡೆಗಳು ಉಂಟಾಗುವ ಸಾಧ್ಯತೆಗಳು ಅಧಿಕವಾಗಿರುತ್ತವೆ.

ಹಲವು ಮಂದಿ ಸಂಬಂಧಿಗಳು ಒಂದೇ ವಿಧವಾದ ಕ್ಯಾನ್ಸರ್‌ ನಿಂದ ಬಾಧಿತರಾಗಿದ್ದಲ್ಲಿ, ಧೂಮಪಾನದಂತಹ ಸಮಾನ ಅಪಾಯಾಂಶಗಳು ಕಾರಣವಾಗಿರುವ ವಿಚಾರವೂ ಗಮನಾರ್ಹವಾಗಿರುತ್ತದೆ. ಸಾಮಾನ್ಯವಾಗಿ ಶ್ವಾಸಕೋಶದ ಕ್ಯಾನ್ಸರ್‌ ಧೂಮಪಾನದಿಂದ ಉಂಟಾಗುತ್ತದೆ, ಹೀಗಾಗಿ ಧೂಮಪಾನಿಗಳಾಗಿರುವ ಹಲವು ಮಂದಿಯ ಕುಟುಂಬದಲ್ಲಿ ಹಲವರಿಗೆ ಶ್ವಾಸಕೋಶದ ಕ್ಯಾನ್ಸರ್‌ ಕಂಡುಬಂದಿರುವುದಕ್ಕೆ ಧೂಮಪಾನವು ಕಾರಣವಾಗಿರುವ ಸಾಧ್ಯತೆ ಹೆಚ್ಚು; ಅದಕ್ಕೆ ಬಳುವಳಿಯಾಗಿ ಬಂದಿರುವ ವಂಶವಾಹಿ ರೂಪಾಂತರ ಕಾರಣವಾಗಿರುವ ಸಾಧ್ಯತೆಗಳು ಕಡಿಮೆ.

ಗೊತ್ತಾಗಿರುವ ಕೆಲವು ಕೌಟುಂಬಿಕ ಕ್ಯಾನ್ಸರ್‌ ಸಿಂಡ್ರೋಮ್‌ಗಳು

ಆನುವಂಶಿಕ ಸ್ತನ ಅಂಡಾಶಯ ಕ್ಯಾನ್ಸರ್‌ (ಎಚ್‌ಬಿಒಸಿ) ಸಿಂಡ್ರೋಮ್‌ ಕೆಲವು ಕುಟುಂಬಗಳಲ್ಲಿ ಯಾವುದೇ ಮಹಿಳೆಯೊಬ್ಬರು ಸ್ತನದ ಕ್ಯಾನ್ಸರ್‌ ಮತ್ತು/ ಅಥವಾ ಅಂಡಾಶಯ ಕ್ಯಾನ್ಸರ್‌ಗೆ ತುತ್ತಾಗುತ್ತಾರೆ. ಈ ಕ್ಯಾನ್ಸರ್‌ ಪ್ರಕರಣಗಳು ಸಾಮಾನ್ಯವಾಗಿ ಕಂಡುಬರುವುದಕ್ಕಿಂತ ಸಣ್ಣ ವಯಸ್ಸಿನಲ್ಲಿ ಕಂಡುಬರುತ್ತವೆ. ಅಲ್ಲದೆ ಕೆಲವು ಮಹಿಳೆಯರಿಗೆ ಒಂದಕ್ಕಿಂತ ಹೆಚ್ಚು ವಿಧವಾದ ಕ್ಯಾನ್ಸರ್‌ ಇರಬಹುದು (ಎರಡೂ ಸ್ತನಗಳಲ್ಲಿ ಕ್ಯಾನ್ಸರ್‌ ಅಥವಾ ಸ್ತನ ಹಾಗೂ ಅಂಡಾಶಯದ ಕ್ಯಾನ್ಸರ್‌ ಎರಡೂ). ಇದನ್ನು ಆನುವಂಶಿಕ ಸ್ತನ ಮತ್ತು ಅಂಡಾಶಯ ಕ್ಯಾನ್ಸರ್‌ ಸಿಂಡ್ರೋಮ್‌ (ಎಚ್‌ಬಿಒಸಿ) ಎಂದು ಕರೆಯಲಾಗುತ್ತದೆ.

ಎಚ್‌ಬಿಒಸಿಯು ಬಿಆರ್‌ ಸಿಎ1 ಅಥವಾ ಬಿಆರ್‌ಸಿಎ 2 ವಂಶವಾಹಿಗಳಲ್ಲೊಂದರಲ್ಲಿ ಬಳುವಳಿಯಾಗಿ ಬಂದಿರುವ ರೂಪಾಂತರದಿಂದ ಉಂಟಾಗುತ್ತದೆ. ಸ್ತನ ಮತ್ತು ಅಂಡಾಶಯ ಕ್ಯಾನ್ಸರ್‌ ಎರಡೂ ಉಂಟಾಗುವ ಅಪಾಯವು ಬಿಆರ್‌ಸಿಎ1 ಅಥವಾ ಬಿಆರ್‌ಸಿಎ2ಗಳಲ್ಲಿ ಒಂದರಲ್ಲಿ ರೂಪಾಂತರವನ್ನು ಹೊಂದಿರುವ ಮಹಿಳೆಯರಲ್ಲಿ ಅಧಿಕ. ಆದರೆ ಬಿಆರ್‌ಸಿಎ1 ರೂಪಾಂತರ ಹೊಂದಿರುವವರಲ್ಲಿ ಈ ಅಪಾಯ ಸಾಧ್ಯತೆ ಹೆಚ್ಚಿರುವುದಾಗಿ ಕಂಡುಬಂದಿದೆ. ಸ್ತನ ಮತ್ತು ಅಂಡಾಶಯ ಕ್ಯಾನ್ಸರ್‌ಗಳ ಜತೆಗೆ ಈ ಸಿಂಡ್ರೋಮ್‌ ಫಾಲೋಪಿಯನ್‌ ಕೊಳವೆಯ ಕ್ಯಾನ್ಸರ್‌, ಪ್ರೈಮರಿ ಪೆರಿಟೋನಿಯಲ್‌ ಕ್ಯಾನ್ಸರ್‌ ಮತ್ತು ಇನ್ನಿತರ ಕೆಲವು ಕ್ಯಾನ್ಸರ್‌ಗಳಿಗೂ ಕಾರಣವಾಗಬಹುದಾಗಿದೆ. ಪುರುಷರಲ್ಲಿ ಸ್ತನದ ಕ್ಯಾನ್ಸರ್‌, ಮೇದೋಜೀರಕ ಗ್ರಂಥಿಯ ಕ್ಯಾನ್ಸರ್‌ ಮತ್ತು ಪ್ರೊಸ್ಟೇಟ್‌ ಕ್ಯಾನ್ಸರ್‌ಗಳು ಇವುಗಳಲ್ಲಿ ಒಂದು ವಂಶವಾಹಿಯಲ್ಲಿ ರೂಪಾಂತರವಿದ್ದಾಗ ಕಾಣಿಸಿಕೊಳ್ಳುತ್ತವೆಯಾದರೂ ಬಿಆರ್‌ಸಿಎ2 ರೂಪಾಂತರ ಇರುವವರಲ್ಲಿ ಸಾಧ್ಯತೆಗಳು ಹೆಚ್ಚು. ಅಷ್ಕೆಂಝಾಯಿ ಯಹೂದ್ಯ ಮೂಲದವರಲ್ಲಿ ಬಿಆರ್‌ಸಿಎ2 ವಂಶವಾಹಿ ರೂಪಾಂತರ ಇತರರಿಗಿಂತ ಹೆಚ್ಚಿರುತ್ತದೆ.

ಡಾ| ರೇಖಾ ಉಪಾಧ್ಯ ಅಸೋಸಿಯೇಟ್‌ ಪ್ರೊಫೆಸರ್‌, ಒಬಿಜಿ ವಿಭಾಗ ಮತ್ತು ಗೈನೆಕ್‌ ಓಂಕೋ ಫೆಲೋಶಿಪ್‌ ಫ್ಯಾಕಲ್ಟಿ ಕೆಎಂಸಿ, ಮಾಹೆ, ಮಣಿಪಾಲ.

ಟಾಪ್ ನ್ಯೂಸ್

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Lok Sabha 1 Phase: ನಿತಿನ್‌ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ

pramod-muthalik

Neha Hiremath Case; ಕೊಲೆಗಡುಕನನ್ನು ಎನ್ ಕೌಂಟರ್ ಮಾಡಿ: ಪ್ರಮೋದ್ ಮುತಾಲಿಕ್ ಆಗ್ರಹ

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

Neha Hiremath Case: ಹಂತಕನ ಊರಿನಲ್ಲಿ ಪ್ರತಿಭಟನೆ, ಮುಸ್ಲಿಂ ಸಮುದಾಯದ ಸಾಥ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

6-thyroid

Thyroid Disease: ಥೈರಾಯ್ಡ್ ಅನಾರೋಗ್ಯ ನಿರ್ಲಕ್ಷಿಸಿದರೆ ಮಾರಕವಾದೀತು ಎಚ್ಚರ!

4-health

Nutritional Foods: ಹದಿಹರಯದಲ್ಲಿ ಪೌಷ್ಟಿಕಾಂಶ ಅಗತ್ಯಗಳು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

Lok Sabha Election: ‘ಬಿವೈಆರ್‌ಗೆ 3 ಲಕ್ಷ ಮತ ಅಂತರದ ಗೆಲುವು ಖಚಿತ’

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

11-

Kushtagi: ನಿರೀಕ್ಷಿತ ಫಲಿತಾಂಶ ಬಾರದ ಹಿನ್ನೆಲೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ  

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Vijayapura: ಸಿಡಿಲು ಬಡಿದು ಓರ್ವನಿಗೆ ಗಾಯ, ಮೂರು ಜಾನುವಾರು ಸಾವು

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.