ಫೈಬ್ರೊಮಯಾಲ್ಜಿಯಾ ಮತ್ತು ಇತರ ನೋವು ಸಿಂಡ್ರೋಮ್‌ಗಳನ್ನು ತಿಳಿಯಿರಿ

Team Udayavani, Sep 8, 2019, 5:15 AM IST

“ಡಾಕ್ಟ್ರೇ ನನ್ನ ದೇಹಾದ್ಯಂತ ನೋಯುತ್ತಿದೆ, ನನಗೆ ಬಹಳ ದಣಿವಾಗಿದೆ. ಇದನ್ನು ನನ್ನ ಗೆಳೆಯರು ಅಥವಾ ಸಂಬಂಧಿಕರಿಗೆ ಎಷ್ಟು ಹೇಳಿದರೂ ಅರ್ಥವೇ ಆಗುವುದಿಲ್ಲ…’ ವೈದ್ಯರ ಬಳಿ ಯಾರಾದರೂ ಹೀಗೆ ದೂರಿಕೊಂಡರೆ ಅದು ಫೈಬ್ರೊಮಯಾಲ್ಜಿಯಾದ ಲಕ್ಷಣವಾಗಿರಬಹುದು. ಇಂತಹ ಪ್ರಕರಣದಲ್ಲಿ ವೈದ್ಯರ ಬಳಿಗೆ ಬಂದಿರುವ ರೋಗಿ ಓರ್ವ ಯುವ ಮಹಿಳೆಯಾಗಿರುತ್ತಾಳೆ.

ಫೈಬ್ರೊಮಯಾಲ್ಜಿಯಾ ಒಂದು ನೋವು ಕಾಯಿಲೆ ಅಥವಾ ಪೈನ್‌ ಸಿಂಡ್ರೋಮ್‌. ಪೈನ್‌ ಸಿಂಡ್ರೋಮ್‌ಗಳಲ್ಲಿ ಹಲವಾರು ವಿಧಗಳಿವೆ.

ಮೇಯೊಫೇಶಿಯಲ್‌ ಪೈನ್‌ ಸಿಂಡ್ರೋಮ್‌, ಕ್ರಾನಿಕ್‌ ಫ್ಯಾಟಿಗ್‌ ಸಿಂಡ್ರೋಮ್‌, ಪೋಸ್ಟ್‌ ವೈರಲ್‌ ಆಥಾಲ್ಜಿಯಾ, ಮಯಾಲ್ಜಿಯಾ ಸಿಂಡ್ರೋಮ್‌ ಅವುಗಳಲ್ಲಿ ಕೆಲವು. ಈ ಎಲ್ಲ ನೋವು ಸಿಂಡ್ರೋಮ್‌ಗಳಿಗೆ ಕೆಲವು ಸಾಮಾನ್ಯ ಲಕ್ಷಣಗಳಿರುತ್ತವೆ.

ರೋಗಿ ತನಗೆ ತಾನೇ ಗಾಯ ಮಾಡಿಕೊಳ್ಳುತ್ತಾನೆ, ದೇಹಾದ್ಯಂತ ತೀವ್ರ ತೆರನಾದ ನೋವಿರುವ ಬಗ್ಗೆ ದೂರುತ್ತಾನೆ. ಅವರಿಗೆ ಉಲ್ಲಾಸವನ್ನು ನೀಡುವಂಥ ನಿದ್ದೆ ಬರುವುದಿಲ್ಲ; ರಾತ್ರಿಯಿಡೀ ನಿದ್ದೆ ಮಾಡಿದ ಬಳಿಕವೂ ಈ ಕಾಯಿಲೆಯುಳ್ಳವರು ಉತ್ಸಾಹ ಭರಿತರಾಗುವುದಿಲ್ಲ. ಅವರಿಗೆ ಭಾರೀ ದಣಿವು ಇರುತ್ತದೆ, ಸಾಕಷ್ಟು ವಿಶ್ರಾಂತಿಯ ಬಳಿಕವೂ ಅವರನ್ನು ದಣಿವು ಕಾಡುತ್ತದೆ.

ರೋಗಿ ತನಗೆ ನೋವು ಇರುವುದನ್ನು ಬಂಧುಗಳಿಗೆ ಅಥವಾ ಗೆಳೆಯರಿಗೆ ಹೇಳಿದಾಗಲೂ ಅವರು ನಂಬುತ್ತಿಲ್ಲ ಎನ್ನುತ್ತಾರೆ. ಏಕೆಂದರೆ ನೋವು, ದಣಿವು ಇದೆ ಎಂದು ರೋಗಿ ಹೇಳಿದರೂ ಅವರು ಆರೋಗ್ಯವಾಗಿ ಇರುವಂತಿರುತ್ತಾರೆ. ಯಾವುದೇ ಅನಾರೋಗ್ಯದ ಕುರುಹು ಬಾಹ್ಯವಾಗಿ ಕಂಡುಬರುವುದಿಲ್ಲ. ಹೀಗಾಗಿ ಕಾಯಿಲೆ ಇದೆ ಎಂಬ ಬಗ್ಗೆ ಯಾರಿಗೂ ವಿಶ್ವಾಸ ಉಂಟಾಗುವುದಿಲ್ಲ.

ಫೈಬ್ರೊಮಯಾಲ್ಜಿಯಾ ರೋಗ ಪತ್ತೆ
ರೋಗ ಹೊಂದಿರುವ ವ್ಯಕ್ತಿಗಳ ಟೆಂಡರ್‌ ಪಾಯಿಂಟ್‌ಗಳನ್ನು ಪರೀಕ್ಷಿಸುವುದರಿಂದ ರೋಗ ಪತ್ತೆ ಮಾಡಲಾಗುತ್ತದೆ. ಫೈಬ್ರೊಮಯಾಲ್ಜಿಯಾ ರೋಗಿಗಳ ದೇಹದಲ್ಲಿ ಕೆಲವು ಬಿಂದುಗಳಲ್ಲಿ ಅತೀವ ವೇದನೆಯಿರುತ್ತದೆ. ಇವುಗಳನ್ನು ಟೆಂಡರ್‌ ಪಾಯಿಂಟ್‌ಗಳೆನ್ನುತ್ತಾರೆ. ಇದರ ವಿನಾ ಫೈಬ್ರೊಮಯಾಲ್ಜಿಯಾವನ್ನು ಗೊತ್ತು ಮಾಡಬಹುದಾದ ಯಾವುದೇ ವೈದ್ಯಕೀಯ ಲಕ್ಷಣಗಳಿರುವುದಿಲ್ಲ.

ಫೈಬ್ರೊಮಯಾಲ್ಜಿಯಾವನ್ನು ಪತ್ತೆ ಮಾಡುವುದು ಇತರ ಸಮಾನ ಲಕ್ಷಣಗಳ ಕಾಯಿಲೆಗಳಿಲ್ಲದಿರುವುದನ್ನು ಖಾತರಿಪಡಿಸುವುದು (ಹೈಪೊಥೈರಾಯಿಸಂ, ಹೈಪರ್‌ ಪ್ಯಾರಾಥೈರಾಯಿxಸಂ, ಟೆಂಡರ್‌ ಪಾಯಿಂಟ್‌ಗಳ ಪರೀಕ್ಷೆ ಮತ್ತು ಫೈಬ್ರೊಮಯಾಲ್ಜಿಯಾದ ಮೇಲೆ ಹೇಳಲಾದ ಅಪಾಯಾಂಶಗಳ ಬಗ್ಗೆ ತಿಳಿದುಕೊಳ್ಳುವುದು).

ಫೈಬ್ರೊಮಯಾಲ್ಜಿಯಾ ಕಾಣಿಸಿಕೊಳ್ಳುವುದಕ್ಕೆ ಕೆಲವು ಅಪಾಯಾಂಶಗಳನ್ನು ಗುರುತಿಸಲಾಗಿದೆ. ಫೈಬ್ರೊಮಯಾಲ್ಜಿಯಾ ಹೇಗೆ ಉಂಟಾಗುತ್ತದೆ ಎಂಬ ಪ್ರಶ್ನೆಗೆ ಉತ್ತರಿಸುವುದು ಬಹಳ ಕಷ್ಟ. ಆದರೂ ಇದಕ್ಕೆ ಹಲವಾರು ಬಗೆಯ ವ್ಯಾಖ್ಯಾನಗಳನ್ನು ಹೇಳಲಾಗುತ್ತದೆ.

ಖಚಿತವಾಗಿ ಗುರುತಿಸಲಾಗಿರುವ ಅಪಾಯಾಂಶಗಳು ಎಂದರೆ:
– ಇತ್ತೀಚೆಗೆ ನಡೆಸಲಾದ ಶಸ್ತ್ರಕ್ರಿಯೆ
– ಹತ್ತಿರದ ಸಂಬಂಧಿ ಮೃತಪಟ್ಟಿರುವುದು, ಹೆರಿಗೆ , ವೈಯಕ್ತಿಕ ಮತ್ತು ಸಾಮಾಜಿಕ ಒತ್ತಡ
ಫೈಬ್ರೊಮಯಾಲ್ಜಿಯಾ ಜತೆಗೆ ಸಂಬಂಧ ಹೊಂದಿರುವ ಕೆಲವು ಆರೋಗ್ಯ ಸ್ಥಿತಿಗಳಿವೆ- ಇರಿಟೇಬಲ್‌ ಬವೆಲ್‌ ಸಿಂಡ್ರೋಮ್‌, ಇರಿಟೇಬಲ್‌ ಬ್ಲಾಡರ್‌ ಸಿಂಡ್ರೋಮ್‌, ಮೈಗ್ರೇನ್‌ ಮತ್ತು ಋತುಚಕ್ರಕ್ಕೆ ಸಂಬಂಧಿಸಿದ ಸಮಸ್ಯೆಗಳು.

ಫೈಬ್ರೊಮಯಾಲ್ಜಿಯಾಕ್ಕೆ ಚಿಕಿತ್ಸೆಯು ಬಹು ಶಿಸ್ತೀಯ ವಿಧಾನವನ್ನು ಅನುಸರಿಸಲಾಗುತ್ತದೆ; ಮನಸ್ಸಿನ ಆರೈಕೆ ಇದರಲ್ಲಿ ಸೇರಿರುತ್ತದೆ.
– ಮನಸ್ಸಿನ ಆರೈಕೆ
– ಮೊದಲಿಗೆ ಮನಶಾಸ್ತ್ರೀಯ ಆಪ್ತ ಸಮಾಲೋಚನೆ, ಸಾಧ್ಯವಿದ್ದರೆ ಸಾಮಾಜಿಕ ಪರಿಸರವನ್ನು ಬದಲಾಯಿಸುವುದು, ಫೈಬ್ರೊಮಯಾಲ್ಜಿಯಾಕ್ಕೆ ಸಂಬಂಧಿಸಿದ ಲಘು ಖನ್ನತೆ ಇದ್ದರೆ ಅದಕ್ಕೆ ಔಷಧ ನೀಡುವುದು.
– ದೇಹದ ಆರೈಕೆ
– ಏರೋಬಿಕ್‌ ಸ್ಟ್ರೆಚಿಂಗ್‌ ವ್ಯಾಯಾಮಗಳು ನೋವನ್ನು ತಾಳಿಕೊಳ್ಳುವ ದೇಹದ ಸಾಮರ್ಥ್ಯವನ್ನು ಹೆಚ್ಚಿಸುತ್ತವೆ. ಅಲ್ಲದೆ ಫೈಬ್ರೊಮಯಾಲ್ಜಿಯಾ ಜತೆಗೆ ಸಂಬಂಧ ಹೊಂದಿರುವ ಸ್ನಾಯು ಹಾನಿಯನ್ನು ಕಡಿಮೆ ಮಾಡುತ್ತದೆ. ನಿದ್ದೆಯು ಉಲ್ಲಾಸ ನೀಡದಿರುವುದೂ ಇದರಿಂದ ಕಡಿಮೆಯಾಗುತ್ತದೆ. ಫೈಬೊÅಮಯಾಲ್ಜಿಯಾ ಜತೆಗೆ ಸಂಬಂಧ ಹೊಂದಿರುವ ಭಾವನಾತ್ಮಕ ಏರುಪೇರುಗಳನ್ನು ಕೂಡ ಇದು ಸರಿಪಡಿಸುತ್ತದೆ.
ಫೈಬ್ರೊಮಯಾಲ್ಜಿಯಾದ ಲಕ್ಷಣಗಳು ಕೆಲವೊಮ್ಮೆ ಜನರನ್ನು ದಾರಿತಪ್ಪಿಸುತ್ತವೆ. ಫೈಬ್ರೊಮಯಾಲ್ಜಿಯಾದ ವಿವಿಧ ಲಕ್ಷಣಗಳಿಂದಾಗಿ ವಿನಾಕಾರಣ ಶಸ್ತ್ರಚಿಕಿತ್ಸೆಗೂ ಒಳಗಾಗುವವರಿದ್ದಾರೆ. ಕೈಯ ಕಾರ್ಪಲ್‌ ಟನಲ್‌ ಸಿಂಡ್ರೋಮ್‌ನ ಶಸ್ತ್ರಚಿಕಿತ್ಸೆ, ಬೆನ್ನುನೋವಿಗಾಗಿ ಡಿಸೆಕ್ಟಮಿ ಇಂಥವರು ಸಾಮಾನ್ಯವಾಗಿ ಒಳಗಾಗುವ ಶಸ್ತ್ರಚಿಕಿತ್ಸೆಗಳು.

ಶಂಕಿತ ಫೈಬ್ರೊಮಯಾಲ್ಜಿಯಾ ಹೊಂದಿರುವ ವ್ಯಕ್ತಿಗಳಿಗೆ ಕೆಲವು ರಕ್ತ ಪರೀಕ್ಷೆಗಳನ್ನು ಮಾಡಲಾಗುತ್ತದೆ. ಥೈರಾಯ್ಡ ಇರುವುದನ್ನು ನಿರಾಕರಿಸುವುದಕ್ಕಾಗಿ ಆರ್ಡರ್ಸ್‌ (ಸೀರಮ್‌ ಟಿ3, ಟಿ4 ಮತ್ತು ಟಿಎಸ್‌ಎಚ್‌) ಮತ್ತು ಪ್ಯಾರಾಥೈರಾಯ್ಡ ಡಿಸಾರ್ಡರ್ಸ್‌ (ಸೀರಂ ಪಿಟಿಎಚ್‌), ಕೊಲಾಜೆನ್‌ ವಾಸ್ಕಾಲರ್‌ ಡಿಸಾರ್ಡರ್ಸ್‌ (ಎಎನ್‌ಎ, ಸಿ3). ವೈದ್ಯಕೀಯ ಲಕ್ಷಣಗಳು ಫೈಬ್ರೊಮಯಾಲ್ಜಿಯಾವನ್ನು ಸಂಕೇತಿಸುವ ರೋಗಿಯಲ್ಲಿ ಇಎಸ್‌ಆರ್‌ ಮತ್ತು ಸಿಆರ್‌ಪಿ ಹೆಚ್ಚಿದ್ದರೆ ರೋಗಿಯನ್ನು ದೀರ್ಘ‌ಕಾಲ ಫಾಲೊ ಅಪ್‌ನಲ್ಲಿ ಇರಿಸಬೇಕಾಗುತ್ತದೆ. ಶಂಕಿತ ಫೈಬ್ರೊಮಯಾಲ್ಜಿಯಾ ರೋಗಿಯಲ್ಲಿ ದೃಷ್ಟಿನಾಶ, ಜ್ವರ, ಹಸಿವು ನಷ್ಟದಂತಹ ದೇಹ ವ್ಯವಸ್ಥೆಗೆ ಸಂಬಂಧಿಸಿದ ಲಕ್ಷಣಗಳು ಕಂಡುಬಂದರೆ ಅಂತಹ ರೋಗಿಗಳನ್ನು ತತ್‌ಕ್ಷಣವೇ ಕೂಲಂಕಷವಾದ ಪರೀಕ್ಷೆಗೆ ಒಳಪಡಿಸಿ ಇತರ ವೈದ್ಯಕೀಯ ಸಮಸ್ಯೆ ಉಂಟಾಗಿರುವ ಸಾಧ್ಯತೆಯನ್ನು ನಿವಾರಿಸಬೇಕಾಗುತ್ತದೆ.

ಫೈಬ್ರೊಮಯಾಲ್ಜಿಯಾದಲ್ಲಿ ಮನಸ್ಸು ಮತ್ತು ದೇಹಗಳ ನಡುವೆ ತೊಂದರೆ ಉದ್ಭವಿಸುತ್ತದೆ. ಕೆಲವೊಮ್ಮೆ ತೊಂದರೆ ಮನಸ್ಸಿನಲ್ಲಿ ಹೆಚ್ಚಿರಬಹುದು ಅಥವಾ ವೈಸ್‌ ವರ್ಸಾ. ಮನಶಾಸ್ತ್ರೀಯ ಆಪ್ತ ಸಮಾಲೋಚನೆಯ ಜತೆಗೆ ಫಿಸಿಯೋಥೆರಪಿ, ಔಷಧ ಚಿಕಿತ್ಸೆಗಳನ್ನು ಒಳಗೊಂಡಿರುವ ಬಹುಶಿಸ್ತೀಯ ಚಿಕಿತ್ಸಾವಿಧಾನವನ್ನು ಫೈಬ್ರೊಮಯಾಲ್ಜಿಯಾಕ್ಕೆ ಅನುಸರಿಸಬೇಕಾಗುತ್ತದೆ.

ಡಾ| ಪ್ರದೀಪ್‌ ಕುಮಾರ್‌ ಶೆಣೈ
ಕನ್ಸಲ್ಟಂಟ್‌ ರುಮಟಾಲಜಿ
ಕೆಎಂಸಿ ಆಸ್ಪತ್ರೆ, ಮಂಗಳೂರು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಪ್ಲಾಸ್ಟಿಕ್‌ ಇಂದು ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದರೆ ತಪ್ಪಾಗಲಾರದು. ಕಡಿಮೆ ವೆಚ್ಚದಲ್ಲಿ ತಯಾರಿಕೆ ಹಾಗೂ ಕೈಗೆಟಕುವ ದರದಲ್ಲಿ ಈ ಪ್ಲಾಸ್ಟಿಕ್‌...

  • ಹೃದ್ರೋಗಗಳಿಂದ ಹಿಡಿದು ಅಧಿಕ ರಕ್ತದೊತ್ತಡ, ಇನ್ಸುಲಿನ್‌ ಅವಲಂಬಿಯಲ್ಲದ ಟೈಪ್‌ 2 ಮಧುಮೇಹ, ಸಂಧಿವಾತ, ಪಿತ್ತಕೋಶದ ಕಲ್ಲುಗಳು ಮತ್ತು ಎಂಡೊಮೆಟ್ರಿಕ್‌ ಕ್ಯಾನ್ಸರ್‌...

  • ದೀರ್ಘ‌ಕಾಲಿಕವಾಗಿ ಉಂಟಾಗುವ ಕ್ರಾನಿಕ್‌ ಒಟಿಟಿಸ್‌ ಮೀಡಿಯಾವನ್ನು ಸಂಕ್ಷಿಪ್ತವಾಗಿ ಸಿಒಎಂ ಎನ್ನಲಾಗುತ್ತದೆ. ಇದು ನಮ್ಮ ದೇಶದಲ್ಲಿ ಅತಿ ಸಾಮಾನ್ಯವಾಗಿರುವ...

  • ಚೀನದ ವುಹಾನ್‌ ಪ್ರಾಂತ್ಯದಲ್ಲಿ 2019ರ ಡಿಸೆಂಬರ್‌ ತಿಂಗಳಲ್ಲಿ ಅಸಾಮಾನ್ಯ ಬಗೆಯ ನ್ಯುಮೋನಿಯಾ ಪ್ರಕರಣಗಳಲ್ಲಿ ಹೆಚ್ಚಳ ಉಂಟಾಗುತ್ತಿರುವುದು ಕಂಡುಬಂತು. ಇದರ ಬಗ್ಗೆ...

  • ನಾವು ಸಮಾಜಜೀವಿಗಳು.ಹಾಗಾಗಿ ಸಮಾಜದಲ್ಲಿರುವ ಎಲ್ಲ ವರ್ಗದ ಜನರ, ಅದರಲ್ಲೂ ಏಡ್ಸ್‌ನಂತಹ ಗುಣವಾಗದ ಕಾಯಿಲೆಗಳಿಂದ ಬಾಧಿತರಾದವರ ಅಗತ್ಯಗಳನ್ನು ಅರಿತುಕೊಳ್ಳುವುದು,...

ಹೊಸ ಸೇರ್ಪಡೆ