Health; ಮಲೇರಿಯಾ ಮತ್ತು ಡೆಂಗ್ಯೂ: ವೈಯಕ್ತಿಕ ರಕ್ಷಣಾ ಕ್ರಮಗಳು


Team Udayavani, Nov 26, 2023, 4:49 PM IST

7-mosquito

 ಮಲೇರಿಯಾ ಸೋಂಕುಕಾರಕ ಪರೋಪಜೀವಿಗಳನ್ನು ಪ್ರಸಾರ ಮಾಡುವ ಅನಾಫಿಲಿಸ್‌ ಸೊಳ್ಳೆಗಳಿಂದ ರಕ್ಷಣೆ ಪಡೆಯುವುದಕ್ಕಾಗಿ ಕೀಟನಾಶಕ ಹಾಯಿಸಿದ ಸೊಳ್ಳೆ ಪರದೆ (ಐಟಿಎನ್‌ಗಳು)ಗಳನ್ನು ಉಪಯೋಗಿಸುವುದು. ಡೆಂಗ್ಯೂ ರೋಗವನ್ನು ಹರಡುವ ಈಡಿಸ್‌ ಈಜಿಪ್ಟಿ ಸೊಳ್ಳೆಗಳಿಂದ ರಕ್ಷಣೆ ಪಡೆಯುವುದಕ್ಕಾಗಿ ಮನೆಯೊಳಗೆ ಮತ್ತು ಆಸುಪಾಸಿನಲ್ಲಿ ಪರಿಣಾಮಕಾರಿ ಕೀಟನಾಶಕಗಳನ್ನು ಸಿಂಪಡಿಸಬೇಕು.

 ಒಳಾಂಗಣದಲ್ಲಿ ಕೀಟನಾಶಕ (ಇನ್‌ಡೋರ್‌ ರೆಸಿಡ್ಯುಯಲ್‌ ಸ್ಪ್ರೆàಯಿಂಗ್‌ – ಐಆರ್‌ಎಸ್‌) ಗಳನ್ನು ಸಿಂಪಡಿಸುವುದರಿಂದ ಹೆಣ್ಣು ಸೊಳ್ಳೆಗಳ ಸಂತಾನಾಭಿವೃದ್ಧಿಗೆ ತಡೆ ಉಂಟಾಗುತ್ತದೆ. ಇದರಿಂದ ಡೆಂಗ್ಯೂ ವೈರಸ್‌ ಪ್ರಸಾರವು ಪ್ರತಿಬಂಧಿಸಲ್ಪಡುತ್ತದೆ.

 ಸೊಳ್ಳೆಗಳು ಆಹಾರ ಪಡೆದ ಬಳಿಕ ಗೋಡೆಗಳು ಮತ್ತು ಛಾವಣಿಗಳಲ್ಲಿ ವಿರಮಿಸುತ್ತವೆ. ಹೀಗಾಗಿ ಕೀಟನಾಶಕಗಳ ಸಿಂಪಡನೆಯ ಮೂಲಕ ಅವುಗಳನ್ನು ಯಶಸ್ವಿಯಾಗಿ ನಿಯಂತ್ರಿಸಬಹುದಾಗಿದೆ. ಸೊಳ್ಳೆಗಳ ಲಾರ್ವಾಗಳನ್ನು ನಾಶಪಡಿಸುವುದಕ್ಕಾಗಿ ಮನೆಯೊಳಗೆ ಕೀಟನಾಶಕಗಳನ್ನು ಸಿಂಪಡಿಸುವುದರ ಜತೆಗೆ ಮನೆಯ ಆಸುಪಾಸಿನಲ್ಲಿ ನೀರು ನಿಲ್ಲುವ ಸ್ಥಳಗಳನ್ನು ಗುರುತಿಸಿ ಅಲ್ಲೂ ಕೀಟನಾಶಕ ಸಿಂಪಡಿಸಬೇಕು. ಇದರಿಂದಲೂ ಸೊಳ್ಳೆಗಳ ಸಂತಾನಾಭಿವೃದ್ಧಿ ಮತ್ತು ಸಂಖ್ಯೆಯನ್ನು ನಿಯಂತ್ರಿಸಬಹುದು.

 ಬೆಳಗ್ಗಿನಿಂದ ಸಂಜೆಯ ವರೆಗೂ ಸೊಳ್ಳೆಗಳ ಕಡಿತಕ್ಕೆ ಗುರಿಯಾಗುವುದನ್ನು ತಪ್ಪಿಸಿ. ವಿಶೇಷವಾಗಿ ಮುಂಜಾನೆ ಮತ್ತು ಮುಸ್ಸಂಜೆಯ ಹೊತ್ತು ಸೊಳ್ಳೆಗಳು ಸಾಕಷ್ಟು ಕ್ರಿಯಾಶೀಲವಾಗಿರುತ್ತವೆ. ದೇಹ ಮುಚ್ಚುವ ಉದ್ದನೆಯ ತೋಳಿನ ಉಡುಪುಗಳು ಮತ್ತು ಪ್ಯಾಂಟುಗಳನ್ನು ಧರಿಸಿ.

 ಕಿಟಕಿಗಳ ಮೂಲಕ ಸೊಳ್ಳೆಗಳು ಬಾರದಂತೆ ಪರದೆಗಳನ್ನು ಅಳವಡಿಸುವುದು ಕಡಿಮೆ ಖರ್ಚಿನ ಮತ್ತು ಸರಳವಾದ ಸೊಳ್ಳೆ ನಿಯಂತ್ರಣ ವಿಧಾನವಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ಸೊಳ್ಳೆ ವಿಕರ್ಷಕಗಳನ್ನು ಮನೆಯೊಳಗೆ ಉಪಯೋಗಿಸಬಹುದಾಗಿದೆ.

 ಮನೆಯೊಳಗೂ ಹೊರಗೂ ನೀರು ನಿಲ್ಲುವ ಸ್ಥಳಗಳಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಬೇಕು, ನೀರು ಸಂಗ್ರಾಹಕ ಟ್ಯಾಂಕಿ ಇತ್ಯಾದಿಗಳಲ್ಲಿ ದೀರ್ಘ‌ಕಾಲ ನೀರು ಸಂಗ್ರಹಿಸಿ ಇಡಬಾರದು. ಇದು ಬಹಳ ಉಪಯುಕ್ತವಾದ ಸರಳ ನಿಯಂತ್ರಣ ವಿಧಾನವಾಗಿದೆ. ಕೊಳಚೆ ಮತ್ತು ಹಳೆಯ ಟಯರುಗಳು, ಕುಡಿದು ಎಸೆದ ಸೀಯಾಳದ ಬುರುಡೆ ಇತ್ಯಾದಿ ನೀರು ನಿಂತು ಸೊಳ್ಳೆ ಸಂತಾನಾಭಿವೃದ್ಧಿ ಆಗುವಂತಹ ಸ್ಥಳಗಳನ್ನು ನಾಶ ಮಾಡುವುದು, ಕೊಳಚೆ ನೀರು ಹರಿಯುವ ಕೊಳವೆಗಳನ್ನು ಮತ್ತು ಚರಂಡಿಗಳನ್ನು ಶುಚಿಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡುವುದರಿಂದ ಸೊಳ್ಳೆಗಳ ಲಾರ್ವಾಗಳನ್ನು ನಾಶಪಡಿಸಿ ಪ್ರೌಢ ಸೊಳ್ಳೆ ಉತ್ಪಾದನೆ ಆಗದಂತೆ ತಡೆಯಲು ಸಹಕಾರಿಯಾಗುತ್ತದೆ.

 ಡೆಂಗ್ಯೂ ಹರಡುವ ಈಡಿಸ್‌ ಈಜಿಪ್ಟಿ ಸೊಳ್ಳೆಯು ಶುದ್ಧ ನೀರಿನಲ್ಲಿಯೇ ಸಂತಾನೋತ್ಪತ್ತಿ ನಡೆಸುತ್ತದೆ. ಹೀಗಾಗಿ ಡ್ರಮ್‌, ಬಕೆಟ್‌, ಹೂಕುಂಡ ಇತ್ಯಾದಿಗಳನ್ನು ಶುಚಿಯಾಗಿ ಇರಿಸಿಕೊಳ್ಳಬೇಕು ಮತ್ತು ನೀರಿನ ಸಂಗ್ರಾಹಕಗಳು ತೆರೆದಿರದಂತೆ ನೋಡಿಕೊಳ್ಳಬೇಕು.

ಟಾಪ್ ನ್ಯೂಸ್

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ

15

Ranveer Singh : ʼಹನುಮಾನ್‌ʼ ನಿರ್ದೇಶಕನ ಸಿನಿಮಾದಲ್ಲಿ ರಣ್ವೀರ್‌ ಸಿಂಗ್‌ ನಟನೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.