ತಡೆಗಟ್ಟಬಹುದಾದ ಗರ್ಭಗೊರಳ ಅರ್ಬುದ….


Team Udayavani, Feb 10, 2019, 12:30 AM IST

kkk.jpg

ಮುಂದುವರಿದುದು

ಚಿಕಿತ್ಸೆ:
ಗರ್ಭಗೊರಳಿನ ಅರ್ಬುದ ಯಾವ ಹಂತದಲ್ಲಿದೆ ಎಂಬುದನ್ನು ನಿರ್ದಿಷ್ಟವಾಗಿ ಖಚಿತಪಡಿಸಿಕೊಂಡು ಯಾವ ಚಿಕಿತ್ಸೆಯನ್ನು ಕೊಡಬೇಕು ಎಂಬುದನ್ನು  ತೀರ್ಮಾನಿಸಬೇಕಾಗುತ್ತದೆ. 
1. ರೇಡಿಯೋಥೆರಪಿ ಅಥವಾ ವಿಕಿರಣ ಚಿಕಿತ್ಸೆ
2. ಶಸ್ತ್ರ ಚಿಕಿತ್ಸೆ
ವಿಕಿರಣ ಚಿಕಿತ್ಸೆ  (Radiotherapy): ಗರ್ಭಗೊರಳಿನ ಅರ್ಬುದ ವಿಕಿರಣ ಚಿಕಿತ್ಸೆಗೆ ಬಹಳಷ್ಟು ಕರಗುತ್ತದೆ. ಹೀಗಾಗಿ ಇದೊಂದು ಉತ್ತಮ ಚಿಕಿತ್ಸಾ ವಿಧಾನವಾಗಿದೆ.ವಿಕಿರಣ ಚಿಕಿತ್ಸೆಯ ಜೊತೆ ವಾರಕ್ಕೊಮ್ಮೆ ಔಷಧಿ ಚಿಕಿತ್ಸೆಯನ್ನೂ ಸೇರಿಸುವುದರಿಂದ ಉತ್ತಮ ಫ‌ಲ ದೊರಕುತ್ತದೆ.

ಶಸ್ತ್ರಚಿಕಿತ್ಸೆ
ಮೊದಲು ಕ್ಯಾನ್ಸರಿನ ಭಾಗ, ಅದರ ಹಬ್ಬಿರುವ ಹಂತದ ಭಾಗಗಳು ಎಲ್ಲವನ್ನೂ ವಿವಿಧ ಆಧುನಿಕ ಉಪಕರಣಗಳಿಂದ ಪತ್ತೆ ಮಾಡಲಾಗುತ್ತದೆ. ಹಂತ 1 ಮತ್ತು 2ನೆಯದ ಕ್ಕೆ ಶಾಸ್ತ್ರ ಚಿಕಿತ್ಸೆ ಮಾಡಿದ್ದಲ್ಲಿ  ರೋಗವನ್ನು ಗುಣಪಡಿಸಬಹುದು. ಚಿಕಿತ್ಸೆಯ ನಂತರ, ಫಾಲೋಅಪ್‌ ತಪಾಸಣೆಗಳು ಬಹಳ ಮುಖ್ಯ. ಇದು ಕ್ಯಾನ್ಸರ್‌ ಮರುಕಳಿಸಿದಲ್ಲಿ  ಬೇಗನೆ ಪತ್ತೆ ಹಚ್ಚಲು ಸಹಾಯವಾಗುತ್ತದೆ.

ರೋಗಿಯನ್ನು ಸದಾ ಸಂತೋಷ ಚಿತ್ತದಲ್ಲಿ ಇರಿಸುವುದು ಬಹಳ ಮುಖ್ಯ. ನೋವಿದ್ದಾಗ, ನೋವು ಶಮನ ಮಾತ್ರೆಗಳನ್ನು ಕೊಡಬೇಕು. ಶಕ್ತಿಯುತ, ಸತ್ವಯುತ ಸಮತೋಲನ ಆಹಾರವನ್ನು ನೀಡಬೇಕು. ರೋಗಿಗೆ ತ್ರಾಸಿಗೆ ತಕ್ಕ ಚಿಕಿತ್ಸೆಯನ್ನು ಕೊಡಿಸುವಲ್ಲಿ ಸಂಬಂಧಿಕರು ಸಹಕರಿಸಬೇಕು. ನಿದ್ದೆ ಬಾರದಿದ್ದಾಗ ನಿದ್ರಾಜನಕಗಳನ್ನು ಕೊಡಿಸಬೇಕು. ಒಟ್ಟಿನಲ್ಲಿ ಕ್ಯಾನ್ಸರ್‌ ರೋಗಿ ಸದ್ಯ ಬದುಕನ್ನು ಸಾಗಿಸಲು ಮನೆಯವರು, ಸ್ನೇಹಿತರು, ಬೆಂಬಲ ನೀಡಬೇಕು. ಯಾವುದೇ ಕಾರಣಕ್ಕೂ ಸಹನೆಯನ್ನು ಕಳೆದುಕೊಳ್ಳದೇ ಸಂಯಮದಿಂದ ನಡೆದುಕೊಳ್ಳಬೇಕು. ರೋಗಿಯ ಖನ್ನತೆಗೆ ಒಳಗಾಗುವ ಸಾಧ್ಯತೆಗಳಿರುವುದರಿಂದ ಆಪ್ತ ಸಲಹೆ, ಸಮಾಧಾನ ಬಹಳ ಅಗತ್ಯ. ನೆನಪಿಡಿ: ಗರ್ಭಗೊರಳಿನ ಅಭುìದವನ್ನು ಪ್ರಾರಂಭದ ಹಂತದಲ್ಲಿ  ಪತ್ತೆ ಹಚ್ಚಿದಲ್ಲಿ  ಸಂಪೂರ್ಣವಾಗಿ ಮಾರ್ಪಡಿಸಬಹುದು.

ಕ್ಯಾನ್ಸರ್‌ ಎಂದಾಕ್ಷಣ ಭಯಪಡುವ ,ಸಾವು ಖಚಿತವೆಂದು ನಿರಾಶೆಗೊಳ್ಳುವ ಅಗತ್ಯವಿಲ್ಲ. ಕ್ಯಾನ್ಸರ್‌ನ್ನು ಪ್ರಾರಂಭಿಕ ಹಂತದಲ್ಲಿ ಪತ್ತೆ ಹಚ್ಚಿದರೆ ಇದೊಂದು ಗುಣಪಡಿಸಬಹುದಾದ ಕಾಯಿಲೆ.

ಸಾಮಾನ್ಯವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಹಿಳೆಯರು ಪ್ರತಿವರ್ಷಕ್ಕೊಮ್ಮೆ ಸತತವಾಗಿ ಮೂರು ವರ್ಷಗಳ ವರೆಗೆ ಪಾಪ್‌ ಸ್ಮಿಯರ್‌ ಪರೀಕ್ಷೆಗೊಳಗಾದಲ್ಲಿ ತುಂಬಾ ಉಪಯುಕ್ತವಾಗುತ್ತದೆ. ಈ ಪರೀಕ್ಷೆಯಲ್ಲಿ ಸತತವಾಗಿ ಮೂರು ವರ್ಷಗಳ ಕಾಲ ಯಾವುದೇ ತೊಂದರೆ ಕಂಡು ಬರದಿದ್ದಲ್ಲಿ, ಆ ಬಳಿಕ ಪ್ರತಿಮೂರು ವರ್ಷಗಳಿಗೊಮ್ಮೆ ಈ ಪರೀಕ್ಷೆಗೆ ಒಳಗಾದರೆ ಸಾಕು. 60ವರ್ಷ ಕಳೆದ ನಂತರ ಪ್ರತಿ ಐದು ವರ್ಷಗಳಿಗೊಮ್ಮೆ ಪರೀಕ್ಷೆಗೊಳಗಾಗಬಹುದು. ಈ ಎಲ್ಲಾ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಗರ್ಭಗೊರಳಿನ ಅಬುìದ ತಡೆಗಟ್ಟಬಹುದು. ಇತ್ತೀಚೆಗೆ ಪ್ರಚಲಿತವಾಗುತ್ತಿರುವ ಎಚ್‌.ಪಿ.ವಿ. ಪರೀಕ್ಷೆಗೊಳಗಾದಲ್ಲಿ , ಐದು ವರ್ಷಗಳಿಗೊಮ್ಮೆ ಆ ಪರೀಕ್ಷೆ ಮಾಡಿಸಿದರೆ ಸಾಕು.

ಮುಂಜಾಗ್ರತಾ ಕ್ರಮಗಳು:
ಪ್ರಷಾಲನಾತಹಿ ಪಂಕಸ್ಯ ದೂರಾದ ಸ್ಪರ್ಶನಂ ವರಂ ಎಂಬುದು ಗರ್ಭಗೊರಳಿನ  ಅಬುìದದಲ್ಲಂತೂ ನೂರಕ್ಕೆ ನೂರು ಸತ್ಯ. ಕ್ಯಾನ್ಸರ್‌ ಬಂದ ನಂತರ ಚಿಕಿತ್ಸೆ ಕೃಷ್ಣಕರ ಹಾಗೂ ದುಬಾರಿ ಈ ಕಾಯಿಲೆಯನ್ನು ತಡೆಗಟ್ಟಲು ತಜ್ಞರು ಕೆಲವು ಸಲಹೆಗಳನ್ನು ನೀಡಿದ್ದಾರೆ. ಅವುಗಳನ್ನು ಅರಿತು ಆಚರಿಸುವುದು ಒಳ್ಳೆಯದು. 
– ಹೆಚ್ಚಾಗಿ ಮಕ್ಕಳಿಗೆ 20 ವರ್ಷಗಳಾದ ನಂತರ ಮದುವೆ ಮಾಡುವುದು.
– ಅನೈತಿಕ ಲೈಂಗಿಕ ಸಂಪರ್ಕದಿಂದ ದೂರವಿರುವುದು.
– 30 ವರ್ಷಗಳಾದ ನಂತರವೇ ಗರ್ಭದರಿಸುವುದು. ಒಂದೋ ಎರಡೋ ಮಕ್ಕಳಿಗಿಂತ ಹೆಚ್ಚಾಗಿ ಹೆರದಿರುವುದು ಹಾಗೂ ಎರಡು ಮಕ್ಕಳ ನಡುವೆ ಕನಿಷ್ಟ ಮೂರು ವರ್ಷಗಳ ಅಂತರವಿರುವಂತೆ ನೋಡಿಕೊಳ್ಳುವುದು.
– ಪರಿಸರ ನೈರ್ಮಲ್ಯ, ದೈಹಿಕ ಶುಚಿತ್ವಕ್ಕೆ ಗಮನ ಕೊಡುವುದು. ಬಿಳಿ ಸೆರಗು, ಋತು ಸ್ರಾವದ ಏರುಪೇರುಗಳು ಕಂಡು ಬಂದೊಡನೆ ತಜ್ಞರ ಸಲಹೆ ಪಡೆಯುವುದು.
– ಗುಣ್ಯರೋಗ ಬಾರದೆ ಇರುವ ಹಾಗೆ ಲೈಂಗಿಕ ಜೀವನ ರತಿರೋಗ, ಉರಿಮೂತ್ರಗಳಿಗೆ ಸೂಕ್ತ ಚಿಕಿತ್ಸೆಯನ್ನು ಪ್ರಾರಂಭದಲ್ಲಿಯೇ ಪಡೆಯುವುದು.
– ಹೆಣ್ಣು ಮಕ್ಕಳಿಗೆ 9ರಿಂದ 13 ವರ್ಷದೊಳಗೆ ಎರಡು ಡೋಜು ಎಚ್‌.ಐ.ವಿ. ಲಸಿಕೆಯನ್ನು ಕೊಡಿಸುವುದು.
– ಮಾನಸಿಕ ಒತ್ತಡ, ಆತಂಕ, ಉದ್ವೇಗಗಳಿಗೆ ಸೂಕ್ತ ಸಲಹೆ ನೀಡಿ ಪರಿಹಾರ ಸೂಚಿಸುವುದು.
– ಶೋಧನೆ ಪರೀಕ್ಷೆ (Screening test) ಗ ರ್ಭಗೊರಳಿನ ಕ್ಯಾನ್ಸರ್‌ನ್ನು ಪ್ರಾರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚುವುದು ಸ್ಕ್ರೀನಿಂಗ್‌ ಟೆಸ್ಟ್‌ಗಳಿಂದ ಸಾಧ್ಯ ಅಷ್ಟೇ ಅಲ್ಲ ಸಂಪೂರ್ಣವಾಗಿ ತಡೆಗಟ್ಟಬಹುದು.

ಟಾಪ್ ನ್ಯೂಸ್

1-eqwqewq

IPL;ಲಕ್ನೋ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ

Congress ಸಚಿವರಿಗೆ 13 ಲೋಕಸಭಾ ಕ್ಷೇತ್ರಗಳ ಹೆಚ್ಚುವರಿ ಉಸ್ತುವಾರಿ

Congress ಸಚಿವರಿಗೆ 13 ಲೋಕಸಭಾ ಕ್ಷೇತ್ರಗಳ ಹೆಚ್ಚುವರಿ ಉಸ್ತುವಾರಿ

“ಡಿಕೆಶಿಗೆ ಸಹೋದರನ ಸೋಲಿನ ಕನಸು ಬಿದ್ದಿದೆ’: ಆರ್‌. ಅಶೋಕ್‌

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

Kerala ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-eqwqewq

IPL;ಲಕ್ನೋ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 7 ವಿಕೆಟ್ ಗಳ ಜಯ

Congress ಸಚಿವರಿಗೆ 13 ಲೋಕಸಭಾ ಕ್ಷೇತ್ರಗಳ ಹೆಚ್ಚುವರಿ ಉಸ್ತುವಾರಿ

Congress ಸಚಿವರಿಗೆ 13 ಲೋಕಸಭಾ ಕ್ಷೇತ್ರಗಳ ಹೆಚ್ಚುವರಿ ಉಸ್ತುವಾರಿ

“ಡಿಕೆಶಿಗೆ ಸಹೋದರನ ಸೋಲಿನ ಕನಸು ಬಿದ್ದಿದೆ’: ಆರ್‌. ಅಶೋಕ್‌

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Neha Case: ಬೇಜವಾಬ್ದಾರಿ ಹೇಳಿಕೆಗಳು ತನಿಖೆ ದಾರಿ ತಪ್ಪಿಸುತ್ತವೆ: ಜ್ಯೋತಿ ಪ್ರಕಾಶ್ ಮಿರ್ಜಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.