ಸ್ಕಿಝೋಫ್ರೇನಿಯಾ


Team Udayavani, Jul 29, 2018, 6:00 AM IST

schizophrenia-28.jpg

ಹಿಂದಿನ ವಾರದಿಂದ– ಮೂತ್ರದಲ್ಲಿ ಮಾದಕ ವಸ್ತುಗಳ ಪರೀಕ್ಷೆ  (Urine Drug Screening): ವ್ಯಕ್ತಿಯೋರ್ವ ಮಾದಕ ವಸ್ತುಗಳನ್ನು ಬಳಸುತ್ತಿದ್ದಾನೆಯೆಂಬ ಸಂಶಯವಿದ್ದು ಅವುಗಳ ಲಕ್ಷಣಗಳೂ ಕಂಡುಬಂದಲ್ಲಿ ಮನೋವೈದ್ಯರು ಇದರ ಪರೀಕ್ಷೆಗಾಗಿ ಹೇಳಬಹುದು. ವ್ಯಕ್ತಿ ಮಾದಕ ವಸ್ತು ಬಳಸಿದ್ದರೆ, ಮೂತ್ರದ ಈ ಪರೀಕ್ಷೆಯ ಮೂಲಕ ಆ ಮಾದಕ ವಸ್ತು ಪತ್ತೆಯಾಗಿಬಿಡುತ್ತದೆ. ಮೇಲೆ ಹೇಳಿದ ಹಾಗೆ ಕೆಲವು ಮಾದಕ ವಸ್ತುಗಳ ಉಪಯೋಗದಿಂದ ಮೇಲಿನ ಲಕ್ಷಣಗಳು ಕಂಡುಬರಬಹುದು.

ಸಿಫಿಲಿಸ್‌ (Syphillis) ಮತ್ತು ಎಚ್‌.ಐ.ವಿ. (HIV) : ಕೆಲವೊಮ್ಮೆ  ಇವೆರಡು ಮೆದುಳಿಗೆ ಪರಿಣಾಮ ಬೀರಿ ಸ್ಕಿಝೋಫ್ರೇನಿಯಾ ಕಾಯಿಲೆಯ ಲಕ್ಷಣಗಳು ವ್ಯಕ್ತಿಯಲ್ಲಿ ಕಂಡುಬರಬಹುದು. ಇವುಗಳ ಲಕ್ಷಣಗಳಿದ್ದರೆ, ಅಥವಾ ಇವುಗಳಿರಬಹುದೆಂಬ ಸೂಚಕಗಳಿದ್ದರೆ, ಮನೋವೈದ್ಯರು ಇವುಗಳ ಪರೀಕ್ಷೆ  ಮಾಡುತ್ತಾರೆ. ಆದರೆ, ಕೆಲವು ಚಿಕಿತ್ಸಾ ಕೇಂದ್ರಗಳಲ್ಲಿ, ಆಸ್ಪತ್ರೆಯ ನೀತಿ – ನಿಯಮಗಳಂತೆ
(Policy/Guidelines)) ಇವುಗಳನ್ನು ಇತರ ರಕ್ತ ಪರೀಕ್ಷೆಗಳ ಜೊತೆಗೆ ಸಹಜವಾಗಿಯೇ ಮಾಡಿಬಿಡುತ್ತಾರೆ.

ಕೆಲವೊಮ್ಮೆ ರೋಗ ನಿರ್ಣಯದಲ್ಲಿ  ಸಂಶಯಗಳಿದ್ದರೆ ಮನೋಪರೀಕ್ಷೆಗಳನ್ನು  (Psychological Tests) ಮಾಡಲಾಗುತ್ತದೆ.  ಈ ಸೈಕಾಲಾಜಿಕಲ್‌ ಪರೀಕ್ಷೆಗಳು ವಿವಿಧ ತರಹದ್ದಾಗಿದ್ದು ಅವುಗಳು ವ್ಯಕ್ತಿಯ ಆಲೋಚನಾ ಪ್ರಕ್ರಿಯೆಗಳನ್ನು ವಿಶ್ಲೇಷಿಸುತ್ತವೆ. ಸಾಧಾರಣವಾಗಿ ಮಾಡುವ ಕೆಲವು ಪರೀಕ್ಷೆಗಳೆಂದರೆ, ಅಬೆjಕ್ಟ್ ಸಾರ್ಟಿಂಗ್‌ ಟೆಸ್ಟ್‌  (Object Sorting Test). ರೊಷಾಕ್‌ ಟೆಸ್ಟ್‌ (Rorschach Test – TAT), ಇತ್ಯಾದಿ ಈ ಪರೀಕ್ಷೆಗಳಲ್ಲಿ  ವ್ಯಕ್ತಿಯ ಆಲೋಚನೆ ತೊಂದರೆಗಳು ಸ್ಕಿಝೋಫ್ರೆàನಿಯಾ ಕಾಯಿಲೆಯ ಸೂಚಕಗಳಾಗಿ ಹೊರಹೊಮ್ಮುತ್ತವೆ. ರೋಗನಿರ್ಣಯ ಜಟಿಲವಾದಾಗ ಅಥವಾ ರೋಗಿಯು ಸಂದರ್ಶನಕ್ಕೆ ಸಹಕಾರಿಯಾಗಿರದಿದ್ದಾಗ ಈ ತರಹದ ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತದೆ. ಸಾಮಾನ್ಯವಾಗಿ ಮನೋವೈದ್ಯರ ತಂಡದ ಸದಸ್ಯರಾದ ಸೈಕಾಲಾಜಿಸ್ಟ್‌ ಅವರು ಈ ಪರೀಕ್ಷೆಗಳನ್ನು ಮಾಡುತ್ತಾರೆ.

ಚಿಕಿತ್ಸೆ
ಸ್ಕಿಝೋಫ್ರೇನಿಯಾ ಚಿಕಿತ್ಸೆಗೆ ಆವಶ್ಯಕವಾಗಿರುವವುಗಳೆಂದರೆ, ಮಾತ್ರೆ/ಔಷಧಿಗಳು ಮನೋಸಾಮಾಜಿಕ ಪುನಃಶ್ಚೇತನ (ಸೈಕೋಸೋಶಿಯಲ್‌ ರಿಹ್ಯಾಬಿಲಿಟೇಶನ್‌). ಕಾಯಿಲೆಯ ಚಿಕಿತ್ಸೆಯನ್ನು ಹೊರರೋಗಿಯಾಗಿ ಅಥವಾ ಆಸ್ಪತ್ರೆಗೆ ದಾಖಲಾಗಿ ಒಳರೋಗಿಯಾಗಿ ಪಡೆಯಬಹುದು. ಇದರ ಆವಶ್ಯಕತೆಯ ಬಗ್ಗೆ ಚಿಕಿತ್ಸೆ ನೀಡುತ್ತಿರುವ ಮನೋವೈದ್ಯರು ಸಲಹೆ ನೀಡುವರು. ಔಷಧಿಗಳು ಕಾಯಿಲೆಯ ಲಕ್ಷಣಗಳನ್ನು  ಸ್ವಲ್ಪ ಪ್ರಮಾಣದಲ್ಲಿ ಹತೋಟಿಯಲ್ಲಿಡಲು ಸಹಕಾರಿಯಾಗಿರುತ್ತವೆ. ಕೆಲವರು ಗುಣಮುಖರಾಗುತ್ತಾರೆ. ಆದರೆ ಹಲವರ ಲಕ್ಷಣಗಳು ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗಿ ಭವಿಷ್ಯದಲ್ಲಿ ಲಕ್ಷಣಗಳು ಪುನಃ ಕಂಡುಬರುತ್ತಿರುತ್ತವೆ. ಹಾಗಾಗಿ ಕೆಲವೊಮ್ಮೆ ದೀರ್ಘ‌ ಕಾಲದವರೆಗೆ ಅಥವಾ ಜೀವನಪೂರ್ತಿ ಮಾತ್ರೆ ತೆಗೆದುಕೊಳ್ಳಬೇಕಾಗಬಹುದು. ಇವುಗಳಲ್ಲದೆ ಆವಶ್ಯಕತೆಯಿದ್ದಾಗ ಈ ಸಿಟಿ (ಎಲೆಕ್ಟ್ರೋಕನ್ವಲ್ಸಿàವ್‌ ಟ್ರೀಟ್‌ಮೆಂಟ್‌, ಕರೆಂಟ್‌ ಚಿಕಿತ್ಸೆ, ವಿದ್ಯುನ್ಮಾನ ಚಿಕಿತ್ಸೆ) ನೀಡಬೇಕಾಗಬಹುದು. ಇದರ ಬಗ್ಗೆ ಚಿಕಿತ್ಸೆ ನೀಡುವ ವೈದ್ಯರು ನಿರ್ಣಯ ತೆಗೆದುಕೊಳ್ಳುತ್ತಾರೆ.

ಮಾತ್ರೆಗಳು ಅಗತ್ಯವಾಗಿ ಬೇಕು. ಆದರೆ, ಅವುಗಳಿಂದಲೇ ಪೂರ್ತಿ ಗುಣಮುಖರಾಗುತ್ತಾರೆಂದು ಹೇಳಲಸಾಧ್ಯ. ಸ್ಕಿಝೋಫ್ರೆàನಿಯಾ ರೋಗಿಗಳಿಗೆ, ಇತರೆ ಮಾನಸಿಕ ಹಾಗೂ ದೈಹಿಕ ಕಾಯಿಲೆಗಳ ತರಹ (ಅಥವಾ ಹೆಚ್ಚಿನ ಪ್ರಮಾಣದಲ್ಲಿ) ಸಹಾಯ ಬೇಕಾಗುತ್ತದೆ. ಇದರಿಂದ ಕಾಯಿಲೆಯ ಲಕ್ಷಣಗಳನ್ನು ಹತೋಟಿಯಲ್ಲಿಡಲು ಸಾಧ್ಯವಾಗುತ್ತದೆಯಲ್ಲದೇ ಅವರ ಕಾರ್ಯಕ್ಷಮತೆಯೂ ಹೆಚ್ಚಾಗುತ್ತದೆ. ಕಾಯಿಲೆಯ ಲಕ್ಷಣಗಳು ಹತೋಟಿಯಲ್ಲಿರುವ ರೋಗಿಗಳಿಗಾಗಿ ಕೆಲವು ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಬಹುದು. ಅವರ ಹಳೆಯ ಕೌಶಲಗಳನ್ನು ಪುನಃಶ್ಚೇತನಗೊಳಿಸಲು, ಹೊಸ ಕೌಶಲ್ಯಗಳನ್ನು ಕಲಿಸಿಕೊಡುವುದು, ಕಾಯಿಲೆಯ ವಿವಿಧ ಆಯಾಮಗಳಿಂದಾಗುವ ಒತ್ತಡಗಳ ನಿರ್ವಹಣೆಯ ಬಗ್ಗೆ, ಮಾದಕ ವಸ್ತುಗಳಿಂದ ದೂರವಿರುವುದರ ಬಗ್ಗೆ, ಇತ್ಯಾದಿ ಈ ಕೆಲಸಕ್ಕಾಗಿ ಮನೆಯವರನ್ನು, ಸ್ನೇಹಿತರನ್ನು, ಹಿತೈಷಿಗಳನ್ನು, ಸಮಾಜದವರನ್ನು, ಸಹೋದ್ಯೋಗಿಗಳನ್ನು, ಸಂಬಂಧಿಕರನ್ನು ಸೇರಿಸಿಕೊಳ್ಳಬೇಕಾಗುತ್ತದೆ.

ಮಾತ್ರೆಗಳ ಪಾತ್ರ
ಸ್ಕಿಝೋಫ್ರೇನಿಯಾದಲ್ಲಿ ಕೊಡುವ ಮಾತ್ರೆಗಳನ್ನು ಆಂಟಿ ಸೈಕೋಟಿಕ್‌, ನ್ಯುರೋಲೆಪ್ಟಿಕ್‌ , ಸೈಕೋಟ್ರೋಪಿಕ್‌, ಇತ್ಯಾದಿ ಎಂದು ಹೇಳಬಹುದು. ಈ ಮಾತ್ರೆಗಳೆಲ್ಲಾ  ಸಂಪೂರ್ಣವಾಗಿ ಕಾಯಿಲೆಯನ್ನು ಗುಣಮುಖಗೊಳಿಸುತ್ತವೆಯೆಂದು ಹೇಳಲಾಗದಿದ್ದರೂ , ಕಾಯಿಲೆಯ ಲಕ್ಷಣಗಳನ್ನು, ಅವುಗಳ ತೀವ್ರತೆಯನ್ನು, ಹಾಗೂ ತುರ್ತುಕಾಲದ ಉಲ್ಬಣಗಳನ್ನು ತ್ವರಿತವಾಗಿ ಹತೋಟಿಯಲ್ಲಿ ತರಲು ಸಹಕಾರಿಯಾಗಿವೆ. ಇದಲ್ಲದೆ, ದೀರ್ಘ‌ ಕಾಲದಿಂದ ಬಳಲುತ್ತಿರುವವರಲ್ಲಿ ಲಕ್ಷಣಗಳನ್ನು ಹತೋಟಿಯಲ್ಲಿಡುವುದಲ್ಲದೇ, ಅವುಗಳು ಮರುಕಳಿಸದಂತೆ ಮಾತ್ರೆಗಳು ಕಾರ್ಯನಿರ್ವಹಿಸುತ್ತವೆ. ಜನರ ತಪ್ಪು ನಂಬಿಕೆಗಳಂತೆ ಈ ಮಾತ್ರೆಗಳು ಮಾದಕ ವಸ್ತುಗಳ ತರಹ ಮಾತ್ರೆಗಳ ಗರಿಷ್ಠ ಸಾಮರ್ಥ್ಯ ದೊರೆತು ರೋಗಿಗಳಿಗೆ ಸಹಾಯವಾಗುವಂತೆ ಚಟಕ್ಕೊಳಗಾಗುವಂತಹವುಗಳಲ್ಲ ಮನೋವೈದ್ಯರು ಮಾತ್ರೆಗಳನ್ನು ನಿರ್ದಿಷ್ಟ ಪ್ರಮಾಣದಲ್ಲಿ ತೆಗೆದುಕೊಳ್ಳುವಂತೆ, ಅಗತ್ಯಕ್ಕೆ ತಕ್ಕಂತೆ ಹೆಚ್ಚು ಕಡಿಮೆ ಮಾಡುವಂತೆ, ನಿರ್ದಿಷ್ಟ ಅವಧಿಗೆ ತೆಗೆದುಕೊಳ್ಳುವಂತೆ ಸೂಚಿಸುತ್ತಾರೆ. ಇವುಗಳ ಬಗ್ಗೆ ವ್ಯಕ್ತಿ ಹಾಗೂ ಅವರ ಕುಟುಂಬದವರು ವಿವರವಾಗಿ ತಿಳಿದುಕೊಂಡು, ಚರ್ಚಿಸಿ ಮುಂದುವರಿಯಬಹುದು. ವ್ಯಕ್ತಿಯ ಕಾಯಿಲೆಯ ತೀವ್ರತೆ, ವ್ಯಕ್ತಿಗಿರುವ ಇತರ ದೈಹಿಕ ಕಾಯಿಲೆ, ವ್ಯಕ್ತಿಯ ವಯಸ್ಸು, ಇತ್ಯಾದಿ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಮಾತ್ರೆಗಳನ್ನು ಸೂಚಿಸುತ್ತಾರೆ. ಇನ್ನೊಂದು ವಿಷಯವೆಂದರೆ, ಬೇರೆ ಬೇರೆ ವ್ಯಕ್ತಿಗಳು, ಮಾತ್ರೆಗಳಿಗೆ ಬೇರೆ ಬೇರೆ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ. ಅಂದರೆ ಒಂದು ಮಾತ್ರೆ ಒಬ್ಬರಲ್ಲಿ ಉಪಯೋಗಕರವಾಗಿದ್ದರೆ ಇನ್ನೊಬ್ಬರಲ್ಲಿ ಆ ಮಾತ್ರೆ ಹೆಚ್ಚು ಉಪಯೋಗಕರವಾಗಿರಲಿಕ್ಕಿಲ್ಲ ಹಾಗಾಗಿ ವ್ಯಕ್ತಿಯ ಲಕ್ಷಣಗಳಲ್ಲಿ  ಬದಲಾವಣೆಗಳನ್ನು ಅರಿತುಕೊಂಡು ಮನೋವೈದ್ಯರು ಮಾತ್ರೆಗಳನ್ನು ಬದಲಾಯಿಸುತ್ತಾರೆ. ಇದಲ್ಲದೇ ಕೆಲವೊಮ್ಮೆ ಅಲ್ಪ ಪ್ರಮಾಣದಲ್ಲಿ ಬದಲಾವಣೆಗಳು ಕಂಡುಬಂದರೆ ಮಾತ್ರೆ ಪ್ರಮಾಣ ಹೆಚ್ಚು ಮಾಡಬಹುದು. ಅಥವಾ ಇರುವ ಮಾತ್ರೆಯ ಜೊತೆಗೆ ಇನ್ನೊಂದು ಮಾತ್ರೆಯನ್ನು ತೆಗೆದುಕೊಳ್ಳಲು ಸೂಚಿಸಬಹುದು. ಮಾತ್ರೆಗಳಿಂದ ಕೆಲವು ಲಕ್ಷಣಗಳು ಉತ್ತಮವಾಗಬಹುದು ಆದರೆ ಕೆಲವು ಲಕ್ಷಣಗಳಲ್ಲಿ ಮಾತ್ರೆ ಈ ಲಕ್ಷಣಗಳೆಂದರೆ ಇಂಜೆಕ್ಷನಿಂದ ಹೆಚ್ಚಾಗಿ ಏನೂ ಬದಲಾವಣೆ ಕಂಡುಬರುವುದಿಲ್ಲ/ ಋಣಾತ್ಮಕ ಲಕ್ಷಣಗಳು ವ್ಯಕ್ತಪಡಿಸಲಿ ಕ್ಕಾಗದಿರುವುದು. ಭಾವನೆಗಳನ್ನು ಅನುಭವಿಸಲಿಕ್ಕಾಗದಿರುವುದು. ಏನು ಮಾಡಲು ಸ್ಫೂರ್ತಿಯಿರದಿರುವುದು. ಮಾತ್ರೆಗಳಿಂದ ಕೆಲವು ತರಹದ ಅಡ್ಡ ಪರಿಣಾಮಗಳು ಕಂಡುಬರಬಹುದು ಈ ಅಡ್ಡ, ಪರಿಣಾಮಗಳು ಮಾತ್ರೆಗೆ ತಕ್ಕಂತೆ ಇರುತ್ತವೆ ಹಾಗೂ ಮಾತ್ರೆ ತೆಗೆದುಕೊಳ್ಳುವವರೆಲ್ಲರಲ್ಲೂ ಕಂಡು ಬರುವುದಿಲ್ಲ. ಸಾಮಾನ್ಯವಾಗಿ ಕೈ ನಡುಕ, ಕೈಕಾಲು ಗಟ್ಟಿಯಾದಂತಾಗುವುದು. ಹಸಿವೆ ಹೆಚ್ಚಾಗುವುದು, ನಿದ್ದೆ ಬಂದಂತಾ ಗುವುದು ಇವುಗಳ ನಿರ್ವಹಣೆಗೆ ಕೆಲವು ಮಾತ್ರೆಗಳು ಅಥವಾ ಕೆಲವು ದಿನಚರಿಯಲ್ಲಿ ಬದಲಾವಣೆಗಳನ್ನು ಸೂಚಿಸುವಂತಾಗುವುದು.

ಆದರೆ ಚಿಕಿತ್ಸೆಯಲ್ಲಿ ಎದುರಾಗುವ ಮುಖ್ಯ ಸಮಸ್ಯೆಗಳೆಂದರೆ, ಕಾಯಿಲೆಯಿಂದ ಬಳಲುತ್ತಿರುವವರು ತನಗೆ ಕಾಯಿಲೆಯಿದೆಯೆಂದು ಒಪ್ಪಿಕೊಳ್ಳುವುದಿಲ್ಲ. ಒಪ್ಪಿಕೊಂಡರೂ ಮಾತ್ರೆಯ ಆವಶ್ಯಕತೆಯನ್ನು ಅರ್ಥಮಾಡಿಕೊಳ್ಳುವುದಿಲ್ಲ. ಅರ್ಥಮಾಡಿಕೊಂಡರೂ ಕೆಲವೊಮ್ಮೆ ಮರೆತುಹೋಗಿ ಅಥವಾ ಬೇಸರವಾಗಿ ಅಥವಾ ತಪ್ಪು ಮಾಹಿತಿಯಿಂದಾಗಿ ನಿಯಮಿತವಾಗಿ ಮಾತ್ರೆ ತೆಗೆದುಕೊಳ್ಳು ವುದಿಲ್ಲ. ನಿಯಮಿತವಾಗಿ ಮಾತ್ರೆ ತೆಗೆದುಕೊಂಡರೂ ಮಾತ್ರೆಯ ಪ್ರಮಾಣ ಸೂಚಿಸಿದ ಮಟ್ಟದಲ್ಲಿರದೇ ಹೆಚ್ಚು ಈ ಮಾತ್ರೆ ನೀಡುವ ಸಮಸ್ಯೆಗಳನ್ನು ಬಗೆಹರಿಸಲಾಗದಿದ್ದರೆ ಕಡಿಮೆಯಾಗಿರುವುದು. ವೈದ್ಯರನ್ನು ತಿಳಿಸಬೇಕು  ಆಗ ಅನ್ಯ ಮಾರ್ಗಗಳಾದ ವಾರಕ್ಕೊಮ್ಮೆ ಕೊಡುವ ಮಾತ್ರೆ. ವಾರಕ್ಕೊಮ್ಮೆ ಎರಡು/ತಿಂಗಳಿಗೊಮ್ಮೆ ಕೊಡುವ ಇಂಜೆಕ್ಷನ್ನುಗಳ/ವಾರಕ್ಕೊಮ್ಮೆ ಬಗ್ಗೆ ತಿಳಿಸಿ ಹೇಳುತ್ತಾರೆ. ಈ ಮಾತ್ರೆ ನಿಯಮಿತವಾಗಿ ತೆಗೆದುಕೊಳ್ಳುವುದರಿಂದ ಕಾಯಿಲೆ ಮರುಕಳಿಸುವ ಸಾಧ್ಯತೆ ಕಡಿಮೆಯಾಗುತ್ತದೆಯಾದರೂ ನಿಯಮಿತವಾಗಿ ಚಿಕಿತ್ಸೆ ಪಡೆ ಯುತ್ತಿರುವವರಲ್ಲಿಯೂ ಸಂಪೂರ್ಣ ವಾಗಿ ನಿಲ್ಲುತ್ತದೆಯೆಂದು ಹೇಳಲಸಾಧ್ಯ. ಚಿಕಿತ್ಸೆಯ ಮೊದಲ ವರ್ಷದಲ್ಲಿ ಶೇಕಡಾ 20ರಷ್ಟು ರೋಗಿಗಳಲ್ಲಿ  ಕಾಯಿಲೆ ಮರುಕಳಿಸುವ ಸಾಧ್ಯತೆಗಳಿರುತ್ತವೆ.

ಕಾಯಿಲೆಯಿಂದ  ಬಳಲುತ್ತಿರುವವರ ಆವಶ್ಯಕತೆಗಳು:
ಚಿಕಿತ್ಸೆ ಇತ್ಯಾದಿಗಳ ಬಗ್ಗೆಯೆಲ್ಲ ಹೆಚ್ಚಾಗಿ  ಪೋಷಕರು ಅಥವಾ ವೈದ್ಯರು ನಿರ್ಧಾರ ತೆಗೆದುಕೊಳ್ಳುತ್ತಾರೆ. ಆದರೆ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಯ ಆವಶ್ಯಕತೆಗಳನ್ನು ಹೆಚ್ಚಾಗಿ ನಿರ್ಲಕ್ಷಿಸಲಾಗುತ್ತದೆ. ಸ್ಕಿಝೋಫ್ರೇನಿಯಾದಿಂದ ಬಳಲುತ್ತಿರುವ ವ್ಯಕ್ತಿಗಳ ಆವಶ್ಯಕತೆಗಳು ಒಬ್ಬ ಸಾಮಾನ್ಯ ವ್ಯಕ್ತಿಯ ಆವಶ್ಯಕತೆಗಳಿಗಿಂತ ಏನೂ ಭಿನ್ನವಾಗಿರುವುದಿಲ್ಲ. ಆದರೆ, ಅವರ ಕಾಯಿಲೆಯಿಂದಾಗಿ ಅವರು ತಮ್ಮ ಅಗತ್ಯವಿರುವವುಗಳನ್ನು ಪಡೆಯಲಾಗುವುದಿಲ್ಲ ಅಥವಾ ಅವುಗಳನ್ನು ನಿರ್ಲಕ್ಷಿಸಲಾಗುತ್ತದೆ. ಮುಖ್ಯವಾಗಿ ಅಗತ್ಯವಿರುವವುಗಳೆಂದರೆ:
– ಕಾಯಿಲೆಯನ್ನು ಹತೋಟಿಯಲ್ಲಿಟ್ಟು, ಕಾಯಿಲೆಯಿರದ ಜೀವನ ಸಾಗಿಸುವುದು.
– ಸ್ವತ್ಛ , ಸುರಕ್ಷಿತ , ಹಿತಕರವಾಗಿರುವಂತಹ ವಾಸಸ್ಥಳ.
–  ಒತ್ತಡರಹಿತವಾದ, ಮನಸ್ಸಿಗೆ ಹಿತವಾಗುವ, ಯೋಗ್ಯವಾದ ಕೆಲಸ/ಚಟುವಟಿಕೆ.
–  ಅರ್ಥಮಾಡಿಕೊಂಡು, ತರ್ಕರಹಿತವಾಗಿ ನಡೆದುಕೊಳ್ಳದೆ ಹೊಂದಿಕೊಂಡು ಹೋಗುವಂತಹ ಸಂಬಂಧಗಳು ಈ ಆವಶ್ಯಕತೆಗಳನ್ನು ಒದಗಿಸಬೇಕಾದರೆ, ಪೋಷಕರಲ್ಲದೇ ಇತರ ಸೇವೆಗಳ ಅಗತ್ಯವಿರುತ್ತದೆ.

ಸ್ಕಿಝೋಫ್ರೇನಿಯಾದಿಂದ 
ಬಳಲುತ್ತಿರುವವರಿಗೆ 
ಲಭ್ಯವಿರುವ ಸೇವೆಗಳು

ಸ್ಕಿಝೋಫ್ರೇನಿಯಾದಿಂದ ಬಳಲುತ್ತಿರುವವರನ್ನು ಕೆಲವು ದಿನಗಳ/ವಾರಗಳ/ತಿಂಗಳುಗಳ ಮಟ್ಟಿಗೆ ಆಸ್ಪತ್ರೆಯಲ್ಲಿ  ಪುನಶ್ಚೇತನ ಕೇಂದ್ರಗಳಲ್ಲಿ (ರಿಹ್ಯಾಬಿಲಿಟೇಶನ್‌ ಸೆಂಟರ್‌) ದಾಖಲಿಸಿ ಕಾಯಿಲೆಯ ಲಕ್ಷಣಗಳನ್ನು ಹತೋಟಿಯಲ್ಲಿ ತಂದು ವ್ಯಕ್ತಿಯೂ  ತನ್ನ ಕುಟುಂಬ/ಸಮಾಜ/ಕೆಲಸಕ್ಕೆ ಮರಳಬೇಕೆಂದು ಪ್ರಯತ್ನಿಸಲಾಗುತ್ತದೆ. ಆದರೆ, ಇಲ್ಲಿ ಅರ್ಥ ಮಾಡಿಕೊಳ್ಳ ಬೇಕಾಗಿರುವುದೇನೆಂದರೆ, ಆಸ್ಪತ್ರೆಯಿಂದ ಮರಳಿದ ಅನಂತರ ಕಾಯಿಲೆಯೂ ಸಂಪೂರ್ಣವಾಗಿ ಗುಣಮುಖವಾಗಿದೆಯೆಂದಲ್ಲ ಆದರೆ ಪರಿವಾರ/ಸಮಾಜದ ಸೂಕ್ಷ್ಮ ಸಹಕಾರದಿಂದ ಕಾಯಿಲೆಯ ಲಕ್ಷಣಗಳು ಹತೋಟಿಯಲ್ಲಿರುವವೆಂದು ತಿಳಿದುಕೊಳ್ಳಬೇಕು. ಆಸ್ಪತ್ರೆಯಿಂದ ಡಿಸಾcರ್ಜ್‌ ಆಗುವ ಹೊತ್ತಿನಲ್ಲಿದ್ದ ಬದಲಾವಣೆ ಕಾಯ್ದುಕೊಂಡು ಹೋಗ ಬೇಕೆಂದರೆ, ವ್ಯಕ್ತಿಯ ಸಾಮರ್ಥ್ಯ, ವ್ಯಕ್ತಿಯ ಕಾರ್ಯಕ್ಷಮತೆಗಳನ್ನು ಅರ್ಥಮಾಡಿಕೊಂಡು ಅವುಗಳಿಗೆ ತಕ್ಕಂತೆ/ಒಗ್ಗುವಂತೆ ವಿಶೇಷ ಸೇವೆಗಳನ್ನು ನೀಡಬೇಕಾಗುತ್ತದೆಯಲ್ಲದೇ ವಿವಿಧ ಆಯಾಮಗಳಲ್ಲಿ ಹಲವು ಬದಲಾವಣೆಗಳನ್ನು ಮಾಡಬೇಕಾಗುತ್ತದೆ. ಆಸ್ಪತ್ರೆಯ ಚಿಕಿತ್ಸೆಯಲ್ಲದೆ, ಚಿಕಿತ್ಸೆಗೆ ಪೂರಕವಾಗಿರುವ ಇತರ ಅಗತ್ಯ ಆಯಾಮಗಳನ್ನು  ಈ ಕೆಳಗಿನವುಗಳಂತೆ ಅರ್ಥಮಾಡಿಕೊಳ್ಳಬಹುದು.

1. ವೈದ್ಯಕೀಯ ಸೌಲಭ್ಯಗಳು: ವ್ಯಕ್ತಿಯಿರುವ ಸಮುದಾಯದಲ್ಲೇ ವೈದ್ಯಕೀಯ ಸೌಲಭ್ಯಗಳು ದೊರಕುವ ಹಾಗೆ ನೋಡಿಕೊಳ್ಳಬೇಕು. ವೈದ್ಯರು, ಮನೋರೋಗ ತಜ್ಞರು, ಚಿಕಿತ್ಸಾಲಯ, ಆಸ್ಪತ್ರೆ ಇತ್ಯಾದಿ. ವ್ಯಕ್ತಿಗೆ ಆವಶ್ಯಕವಾಗಿರುವ ದೈಹಿಕ ಸಮಸ್ಯೆಗಳ ಅಂದರೆ, ಜ್ವರ, ಕೆಮ್ಮು ಇತರೆ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆಗಳಿಗೆ ಚಿಕಿತ್ಸಾ  ಸೌಲಭ್ಯಗಳು ವ್ಯಕ್ತಿಯಿರುವ ಸ್ಥಳದಲ್ಲಿರಬೇಕು. 
2. ಸಪೋರ್ಟಡ್‌ ಹೌಸಿಂಗ್‌ (ಪೂರಕವಾದ ವಾಸಸ್ಥಳಗಳು); ವ್ಯಕ್ತಿಗೆ ದೈನಂದಿನ ಮನೆಯ ಚಟುವಟಿಕೆಗಳ/ವ್ಯವಹಾರಗಳ ನಿರ್ವಹಣೆಯ ಜವಾಬ್ದಾರಿ ಕಡಿಮೆಯಿರುವ ಅಥವಾ ಇಲ್ಲದಿರುವಂತಹ ವಾಸಸ್ಥಳಗಳ ಲಭ್ಯತೆ. ಇವುಗಳ ಗ್ರೂಪ್‌ ಹೋಮ್‌ ಆಗಿರಬಹುದು ಅಥವಾ ಮುತುವರ್ಜಿಯಲ್ಲಿರುವ ಪೂರಕ ಮನೆಗಳಾಗಿರಬಹುದು ಅಥವಾ ಕ್ಲಬ್‌ ಹೌಸ್‌ ಮಾಡೆಲ್‌ ಆಗಿರ ಬಹುದು. ಗಮನಿಸಬೇಕಾದ ಅಂಶ ಗಳೆಂದರೆ, ಈ ಎಲ್ಲಾ ಸ್ಥಳಗಳಲ್ಲಿ ಹೆಚ್ಚಾಗಿ ಕಾಯಿಲೆಯಿಂದ ಬಳಲುತ್ತಿ ರುವವರಿಗಾಗಿ ವಿವಿಧ ರೀತಿಯ ಚಟುವಟಿಕೆಗಳು, ಕೆಲಸಗಳು, ಕಾರ್ಯಕ್ರಮಗಳನ್ನು ನಿಯಮಿತವಾಗಿ ಹಮ್ಮಿಕೊಳ್ಳಲಾಗುತ್ತದೆ.
3. ಸ್ನೇಹ, ಪ್ರೇಮ ಮತ್ತು ಕಾಳಜಿ: ವ್ಯಕ್ತಿಯ ನ್ಯೂನತೆಗಳನ್ನು, ಮಿತಿಗಳನ್ನು ಅರ್ಥಮಾಡಿಕೊಂಡು ಅವರ ಜೊತೆ ಪ್ರೀತಿ, ಕಾಳಜಿಯಿಂದ ನಡೆದುಕೊಳ್ಳುವ ಸ್ನೇಹಿತರೆ, ಕುಟುಂಬದವರು, ಸಹೋದ್ಯೋಗಿಗಳು ಇರಬೇಕು. 
4. ಸಮಾಜದ ಬೆಂಬಲ: ವ್ಯಕ್ತಿಯು ತಾನಿರುವ ಸಮಾಜದಲ್ಲಿಯೇ ಸಮಯ ಕಳೆಯಲು , ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ವಿವಿಧ ಅವಕಾಶಗಳು ಮತ್ತು ವಿವಿಧ ಕೇಂದ್ರಗಳಿರಬೇಕು. ದೈಹಿಕ ಚಟುವಟಿಕೆಗಾಗಿ ಆಟದ ಸೌಲಭ್ಯ ಗಳಿರಬೇಕು. ಗ್ರಂಥಾಲಯಗಳಿರಬೇಕು; ಹವ್ಯಾಸಿ ಸಂಘಗಳಿರಬೇಕು. ಅಧ್ಯಾತ್ಮದಲ್ಲಿ ಆಸಕ್ತಿಯಿದ್ದರೆ, ಅದರ ಸೌಲಭ್ಯಗಳಿರಬೇಕು; ಸಮಾಜದಲ್ಲಿನ ವರ್ತನೆಯ ಕೌಶಲಗಳ ಬಗ್ಗೆ ತರಬೇತಿ ನೀಡುವ ಸೌಲಭ್ಯಗಳಿರ ಬೇಕು. ಯಾವುದೇ ಒಂದು ಕೆಲಸ ದಲ್ಲಿ ಆಸಕ್ತಿಯಿದ್ದರೆ ಆ ಕೆಲಸಕ್ಕೆ ಅಗತ್ಯವಿರುವ ಕೌಶಲಗಳ ತರಬೇತಿ ಕೇಂದ್ರಗಳಿರಬೇಕು. ಈ ಎಲ್ಲಾ ಸೌಲಭ್ಯಗಳು ಒಂದೇ ಸ್ಥಳದಲ್ಲಿ ದೊರಕುವಂತೆ ಮಾಡುವುದು ಕಷ್ಟ ಅಂದರೆ ಆದಷ್ಟು ಲಭ್ಯವಿರುವ ಸವಲತ್ತುಗಳನ್ನೇ ಬಳಸಿಕೊಂಡು ಅವುಗಳಲ್ಲಿ ಮಾರ್ಪಾಡು ಮಾಡಿ ವ್ಯಕ್ತಿಗೆ ಪೂರಕವಾಗುವ ಹಾಗೆ ಉಪಯೋಗಿಸಿಕೊಳ್ಳಬಹುದು.

– ಮುಂದಿನ ವಾರಕ್ಕೆ  

ಟಾಪ್ ನ್ಯೂಸ್

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3–child-growth

Child Growth: ಮಕ್ಕಳು ಬೇಗನೇ ದೊಡ್ಡವರಾಗುವುದು

2-bamboo-brush

Bamboo:ಶುದ್ಧ ಮತ್ತು ಹಸುರು ಪರಿಸರ ಕಾಯ್ದುಕೊಳ್ಳಲು ಹಲ್ಲುಜ್ಜುವ ಬಿದಿರಿನಬ್ರಶ್‌ ಮೊರೆಹೋಗಿ

2-kidney-day

World Kidney Day: ಹಿಮೋಡಯಾಲಿಸಿಸ್‌: ಯಾವಾಗ ಅಗತ್ಯ? ಯಾಕೆ ಆವಶ್ಯಕ? ಕಾರ್ಯನಿರ್ವಹಣೆ ಹೇಗೆ?

3-health

Rare diseases: ಅಪರೂಪದ ರೋಗಗಳು: ಕೆಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

4-cholestral

Cholesterol: ಕೊಲೆಸ್ಟರಾಲ್‌ ತಗ್ಗಿಸುವ ಔಷಧ ಸ್ಟಾಟಿನ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Raksha Ramaiah: ಯಾರಿಗೆ ಟಿಕೆಟ್‌ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ: ರಕ್ಷಾ ರಾಮಯ್ಯ

Raksha Ramaiah: ಯಾರಿಗೆ ಟಿಕೆಟ್‌ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

Online Bitcoin Gambling Enterprises: An Overview to Betting with Cryptocurrency

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.