

Team Udayavani, Feb 19, 2017, 3:45 AM IST
ಹಿಂದಿನ ವಾರದಿಂದ – 2) ಶಸ್ತ್ರಚಿಕಿತ್ಸೆ: ಹೆಚ್ಚಿನ ಯುವ ರೋಗಿಗಳು ಮತ್ತು ಕ್ರೀಡೆಗಳಲ್ಲಿ ಸಕ್ರಿಯವಾಗಿ ತೊಡಗಿರುವವರು ತಮ್ಮ ಭುಜಗಳನ್ನು ಸ್ಥಿರಗೊಳಿಸಲು ಅಥವಾ ಭುಜಗಳಿಗೆ ಸಾಮರ್ಥ್ಯ ತುಂಬಲು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುವುದು. ಹೆಚ್ಚಾಗಿ ಅನುಸರಿಸುವ ಶಸ್ತ್ರಚಿಕಿತ್ಸಾ ಕ್ರಮಗಳು ಅಂದರೆ:
1. ಆಥ್ರೋìಸ್ಕೋಪಿಕ್
ಬ್ಯಾಂಕಾರ್ಟ್ ರಿಪ್ಯಾರ್
(ಕೀ-ಹೋಲ್ ಶಸ್ತ್ರಚಿಕಿತ್ಸೆ)
ಮೂರು ಸಣ್ಣ ರಂಧ್ರಗಳ ಮೂಲಕ ಈ ಶಸ್ತ್ರಚಿಕಿತ್ಸೆಯನ್ನು ಕೈಗೊಳ್ಳಲಾಗುತ್ತದೆ. ಬ್ಯಾಂಕಾರ್ಟ್ ರಿಪ್ಯಾರ್‌ನಲ್ಲಿ ಕಳಚಿಕೊಂಡ ಕ್ಯಾಪುÕಲೋ-ಲ್ಯಾಬ್ರಲ್ ಭಾಗವನ್ನು ಗ್ಲೆನಾಯ್ಡಗೆ ಜೋಡಿಸುತ್ತಾರೆ. ಅದೇ ಸಮಯದಲ್ಲಿ ಕ್ಯಾಪುÕಲಾರ್ ಶಿಫ್ಟ್ (ಸಡಿಲ ಕ್ಯಾಪುÕಲ್ ಅನ್ನು ಬಿಗಿಗೊಳಿಸುವುದು) ಪ್ರಕ್ರಿಯೆಯನ್ನು ನಡೆಸುವುದೂ ಸಹ ಸಾಧ್ಯವಿದೆ. ಆಥ್ರೋìಸ್ಕೋಪಿಕ್ ತಂತ್ರಜಾnನದ ಪ್ರಯೋಜನ ಅಂದರೆ ಅದರ ಕಡಿಮೆ ಛೇದನಕಾರಿ ಸ್ವರೂಪ. ಇದರಿಂದಾಗಿ ಶಸ್ತ್ರಚಿಕಿತ್ಸೆಯ ತೊಂದರೆ ಮತ್ತು ಆಸ್ಪತ್ರೆವಾಸದ ಅವಧಿಯೂ ಕಡಿಮೆ. ಇಷ್ಟು ಮಾತ್ರ ಅಲ್ಲದೆ ಈ ಶಸ್ತ್ರಚಿಕಿತ್ಸೆಯಲ್ಲಿ ಭುಜದ ಕೀಲುಗಳನ್ನು ಸಂಪೂರ್ಣವಾಗಿ ನೋಡಬಹುದು ಮತ್ತು ಈ ಮೂಲಕ ಜಾರುವಿಕೆಗೆ ಕಾರಣ ಆಗಬಹುದಾದ ಇನ್ನಿತರ ಕಾರಣಗಳನ್ನು ಪತ್ತೆ ಮಾಡಿ ಚಿಕಿತ್ಸೆ ನೀಡಬಹುದು.
2. ತೆರೆದ ಬ್ಯಾಂಕಾರ್ಟ್ ರಿಪ್ಯಾರ್
ತೆರೆದ ಶಸ್ತ್ರಚಿಕಿತ್ಸೆಯ ಮೂಲಕ ಬ್ಯಾಂಕಾರ್ಟ್ ರಿಪ್ಯಾರ್ ಮತ್ತು ಕ್ಯಾಪುÕಲಾರ್ ಶಿಫ್ಟ್ ಪ್ರಕ್ರಿಯೆಗಳನ್ನೂ ಸಹ ನಡೆಸಬಹುದು, ಇಲ್ಲಿ ಭುಜದ ಮುಂಭಾಗದಲ್ಲಿ 3 -5 ಸೆಂ .ಮೀ ಉದ್ದದ ಒಂದು ಛೇದನ ಮಾಡಬೇಕಾಗುತ್ತದೆ. ಈ ಪ್ರಕ್ರಿಯೆಯಲ್ಲಿ, ಕೊನೆಯ ಹಂತದಲ್ಲಿ ಸರಿಪಡಿಸಬೇಕಿರುವ ಸಬ್-ಕ್ಯಾಪ್ಯುಲರಿ ಸ್ನಾಯುವಿನ ಉದ್ದಕ್ಕೂ ಛೇದನವನ್ನು ಮಾಡುತ್ತಾರೆ.
3. ಮೂಳೆಗಳ ಶಸ್ತ್ರಚಿಕಿತ್ಸೆ
(Bony operations)
ವಿಶೇಷವಾಗಿ ಮೂಳೆ ನಷ್ಟವಾಗಿರುವ ಪ್ರಕರಣಗಳಲ್ಲಿ ಅಥವಾ ವಿಶೇಷ ಹಿಲ್- ಸ್ಯಾಶಸ್ ಹಾನಿಯ ಪ್ರಕರಣಗಳಲ್ಲಿ ಬ್ಯಾಂಕರ್ಟ್ ರಿಪ್ಯಾರ್ ಒಂದನ್ನೇ ಮಾಡಿದರೆ ಅದು ಸಂಪೂರ್ಣ ಪ್ರಯೋಜನಕಾರಿ ಆಗದು. ಇಂತಹ ಸಂದರ್ಭದಲ್ಲಿ ಬ್ರಿಸ್ಟೋ-ಲತರ್ಜೆಟ್ ಪ್ರಕ್ರಿಯೆಯನ್ನು ( ಗ್ಲೆನಾಯ್ಡ ವೈಕಲ್ಯಕ್ಕೆ ಕಾರ್ಕಾಯ್ಡ ಪ್ರಕ್ರಿಯೆಯನ್ನು ವರ್ಗಾಯಿಸುವುದು) ಅಥವಾ ಹಿಲ್- ಸ್ಯಾಶಸ್ ಹಾನಿಗೆ ಮೂಳೆ ಕಸಿಯ ಪ್ರಕ್ರಿಯೆಯನ್ನು ನಡೆಸಬೇಕಾಗುವುದು. ಈ ಪ್ರಕ್ರಿಯೆಗಳಿಗೆ ತೆರೆದ ಶಸ್ತ್ರಚಿಕಿತ್ಸೆ ಆವಶ್ಯಕ.
ಶಸ್ತ್ರಚಿಕಿತ್ಸಾ ನಂತರದ ಕ್ರಮಗಳು
ಆಥ್ರೋìಸ್ಕೋಪಿಕ್ ಬ್ಯಾಂಕಾರ್ಟ್ ರಿಪ್ಯಾರ್ ಸಂದರ್ಭದಲ್ಲಿ ರೋಗಿಯು ಶಸ್ತ್ರಚಿಕಿತ್ಸೆಯಾದ ದಿನವೇ ಅಥವಾ ಮಾರನೆಯ ದಿನ ಆಸ್ಪತ್ರೆಯನ್ನು ಬಿಡಬಹುದು. ತೆರೆದ ಶಸ್ತ್ರಚಿಕಿತ್ಸೆ ಆಗಿದ್ದರೆ ಶಸ್ತ್ರಚಿಕಿತ್ಸೆ ಆದ 2-3 ದಿನಗಳ ಅನಂತರ ಆಸ್ಪತ್ರೆಯನ್ನು ಬಿಡಬಹುದು. ಭುಜವನ್ನು ಚಲನರಹಿತಗೊಳಿಸಬೇಕು. ದಬ್ಬೆಯ ಮೂಲಕ ತೋಳನ್ನು ಮೇಲೆ, ಕೆಳಗೆ ಮತ್ತು ಅತ್ತಿತ್ತ ಆಡದಂತೆ ಚಲನರಹಿತ ಸ್ಥಿತಿಯಲ್ಲಿ ಇರಿಸಬೇಕು. ಶಸ್ತ್ರಚಿಕಿತ್ಸೆಯ ವಿವಿಧ ಮತ್ತು ಸರಿಪಡಿಸುವಿಕೆಯಿಂದ ಗಳಿಸಿದ ಸಾಮರ್ಥ್ಯವನ್ನು ಅವಲಂಬಿಸಿಕೊಂಡು 3-6 ವಾರಗಳ ವರೆಗೆ ತೋಳನ್ನು ದಬ್ಬೆಯ ಮೂಲಕ ಚಲನರಹಿತ ಸ್ಥಿತಿಯಲ್ಲಿ ಇರಿಸಬೇಕಾಗುವುದು. ಶಸ್ತ್ರಚಿಕಿತ್ಸೆ ಆದ 2-3 ವಾರಗಳ ಅನಂತರ ಪೆಂಡ್ಯುಲಮ್ ವ್ಯಾಯಾಮವನ್ನು ಅರಂಭಿಸುತ್ತಾರೆ. ಶಸ್ತ್ರಚಿಕಿತ್ಸೆಯಾದ 6 ವಾರಗಳ ಅನಂತರ ಸಂಪೂರ್ಣ ರೀತಿಯ ಚಲನೆಯ ವ್ಯಾಯಾಮ ಮತ್ತು ಭುಜಕ್ಕೆ ಸಾಮರ್ಥ್ಯವನ್ನು ಕೊಡುವ ವ್ಯಾಯಾಮವನ್ನು ಆರಂಭಿಸಲಾಗುವುದು.
ಒಬ್ಬ ವ್ಯಕ್ತಿಯು ಯಾವಾಗ
ತನ್ನ ದೈನಂದಿನ ಚಟುವಟಿಕೆ
ಮತ್ತು ಕ್ರೀಡಾ ಚಟುವಟಿಕೆಗಳಿಗೆ
ಮರಳಬಹುದು?
ಶಸ್ತ್ರಚಿಕಿತ್ಸೆಯಾದ ಅನಂತರ ಯಾವುದೇ ವ್ಯಕ್ತಿಯು ಶಸ್ತ್ರಚಿಕಿತ್ಸಾ ಪೂರ್ವ ಸ್ಥಿತಿಯನ್ನು ಗಳಿಸಲು ಅಥವಾ ತನ್ನ ದೈನಂದಿನ ಚಟುವಟಿಕೆಗಳನ್ನು ನಡೆಸಲು ಒಟ್ಟಾರೆ 2-3 ತಿಂಗಳುಗಳ ಸಮಯ ಬೇಕಾಗುತ್ತದೆ. ಕ್ರೀಡಾಳುಗಳಿಗೆ ಅವರು ನಿರ್ವಹಿಸುವ ಮತ್ತು ಭಾಗವ ಹಿಸುವ ಕ್ರೀಡೆಗಳನ್ನು ಮತ್ತು ಸ್ಪರ್ಧಾ ಮಟ್ಟವನ್ನು ಅವಲಂಬಿಸಿಕೊಂಡು ತಮ್ಮ ಕ್ರೀಡಾ ಚಟುವಟಿಕೆಗಳನ್ನು ಮತ್ತೆ ಆರಂಭಿಸಲು 3-4 ತಿಂಗಳು ಮತ್ತು ಅದಕ್ಕಿಂತಲೂ ಹೆಚ್ಚು ಸಮಯ ಬೇಕಾಗಬಹುದು.
Ad
Thyroid: ನಮ್ಮ ಮನೋಭಾವ, ಚೈತನ್ಯ, ದೇಹತೂಕಗಳ ಮೇಲೆ ಥೈರಾಯ್ಡ್ ನ ಪರಿಣಾಮಗಳು
Lifestyle-related Cancers: ಜೀವನಶೈಲಿ ಸಂಬಂಧಿ ಕ್ಯಾನ್ಸರ್‌ಗಳು
Allergic Rhinitis:ನಿರಂತರ ಸೀನು,ಉಸಿರಾಟಕ್ಕೆ ಅಡಚಣೆ;ನಿಮಗೆ ಅಲರ್ಜಿಕ್ ರೈನೈಟಿಸ್‌ಇರಬಹುದು
Health Tests: ವಿವಿಧ ಆರೋಗ್ಯ ಪರೀಕ್ಷೆಗೆ ಹೇಗೆ ತೆರಳಬೇಕು?
Endometrial Cancer: ಮಹಿಳೆಯರು ನಿರ್ಲಕ್ಷಿಸಬಾರದ ನಿಶ್ಶಬ್ದ ಅಪಾಯ
You seem to have an Ad Blocker on.
To continue reading, please turn it off or whitelist Udayavani.