Preterm Infants: ಅವಧಿಪೂರ್ವ ಜನಿಸಿದ ಶಿಶುಗಳ ಬದುಕುಳಿಯುವಿಕೆ

ಮಣಿಪಾಲ ಕೆಎಂಸಿ ಆಸ್ಪತ್ರೆಯಿಂದ ಹೊಸ ಮೈಲುಗಲ್ಲು

Team Udayavani, Nov 20, 2023, 11:41 AM IST

6–Preterm-Infants

ಕೆಎಂಸಿ ಆಸ್ಪತ್ರೆಯು ಅನೇಕ ವರ್ಷಗಳಿಂದ ಇಂತಹ ಅವಧಿಪೂರ್ವ ಜನಿಸುವ ಶಿಶುಗಳಿಗೆ ವಿಶ್ವದರ್ಜೆಯ ಗುಣಮಟ್ಟದ ಅತ್ಯಾಧುನಿಕ ವೈದ್ಯಕೀಯ ಆರೈಕೆಯನ್ನು ಒದಗಿಸುತ್ತಿದೆ. ಮಕ್ಕಳ ವಿಭಾಗದಡಿಯಲ್ಲಿ ಡಾ| ಲೆಸ್ಲೀ ಲೂಯಿಸ್‌ ಅವರು ಅಭಿವೃದ್ಧಿಪಡಿಸಿದ ಎನ್‌ಐಸಿಯು ಸೌಲಭ್ಯವು ಅತ್ಯಂತ ಉನ್ನತ ದರ್ಜೆಯದಾಗಿದ್ದು, ಕಳೆದ ಒಂದು ವರ್ಷದಿಂದೀಚೆಗೆ ಡಾ| ಶೀಲಾ ಮಥಾಯ್‌ (ನಿವೃತ್ತ ಸರ್ಜನ್‌ ವೈಸ್‌ ಅಡ್ಮಿರಲ್‌) ಅವರ ನೇತೃತ್ವದಲ್ಲಿ ಪೂರ್ಣ ಪ್ರಮಾಣದ ಸ್ವತಂತ್ರ ನಿಯೋನೇಟಾಲಜಿ ವಿಭಾಗವಾಗಿ ಬೆಳೆದು ನಿಂತಿದೆ.

ಕಳೆದ ಒಂದು ವರ್ಷದ ಅಂಕಿಅಂಶಗಳನ್ನು ಗಮನಿಸಿದರೆ ಅತ್ಯಂತ ಅವಧಿಪೂರ್ವವಾಗಿ ಮತ್ತು ತೀರಾ ಅವಧಿಪೂರ್ವವಾಗಿ ಜನಿಸುವ ಶಿಶುಗಳ ಬದುಕುಳಿಯುವಿಕೆ ಪ್ರಮಾಣವು ಶೇ. 75ರಷ್ಟಿದ್ದು, ಇದು ಈ ವಿಭಾಗದ ವಿಶ್ವಾಸಾರ್ಹತೆಯನ್ನು ಸೂಚಿಸುತ್ತದೆಯಲ್ಲದೆ, ಕಳೆದ ಹಲವು ವರ್ಷಗಳಿಂದೀಚೆಗೆ ಎನ್‌ಐಸಿಯು ವಿಭಾಗವನ್ನು ಪ್ರಸ್ತುತ ಸ್ವತಂತ್ರ ವಿಭಾಗವಾಗಿ ಬೆಳೆಸಿದ್ದರ ಹಿಂದಿರುವ ಅತ್ಯಂತ ಕಠಿನ ಪರಿಶ್ರಮವನ್ನು ಸೂಚಿಸುತ್ತದೆ.

ಪ್ರತೀ ವರ್ಷ ನವೆಂಬರ್‌ 17ರಂದು ಜಾಗತಿಕ ಅವಧಿಪೂರ್ವ ಶಿಶು ಜನನ ದಿನವನ್ನು ಆಚರಿಸಲಾಗುತ್ತದೆ. ಶಿಶುಗಳ ನವಮಾಸ ತುಂಬದೆ, ಅವಧಿಗೆ ಮುನ್ನ ಜನಿಸುವ ಸಮಸ್ಯೆಯ ವ್ಯಾಪಕತೆ ಮತ್ತು ಅದಕ್ಕೆ ನೀಡಬೇಕಾದ ಗಮನ, ಪ್ರಾಮುಖ್ಯಗಳತ್ತ ಒತ್ತು ನೀಡುವುದಕ್ಕಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಗರ್ಭಧಾರಣೆಯ ಬಳಿಕ 37 ವಾರಗಳು ತುಂಬುವುದಕ್ಕೆ ಮುನ್ನ ಜನಿಸುವ ಶಿಶುಗಳನ್ನು ಅವಧಿಪೂರ್ವ ಜನಿಸಿದ ಶಿಶು ಎಂದೂ; 32 ವಾರಗಳು (ಗರ್ಭ ಧರಿಸಿದ ಬಳಿಕ ಏಳೂವರೆ ತಿಂಗಳು) ಪೂರ್ಣಗೊಳ್ಳುವುದಕ್ಕೆ ಮುನ್ನ ಜನಿಸಿದ ಶಿಶುಗಳನ್ನು ಅತ್ಯಂತ ಅವಧಿಪೂರ್ವ ಜನಿಸಿದ ಶಿಶುಗಳು ಎಂದೂ ಹೇಳಲಾಗುತ್ತದೆ. 28 ವಾರಗಳು (ಗರ್ಭ ಧಾರಣೆಯ ಬಳಿಕ ಆರೂವರೆ ತಿಂಗಳು) ತುಂಬುವುದಕ್ಕೆ ಮುನ್ನ ಜನಿಸಿದ ಮತ್ತು ಜನನ ಕಾಲದಲ್ಲಿ 1 ಕೆಜಿಗೂ ಕಡಿಮೆ ತೂಕ ಹೊಂದಿರುವ ಪುಟ್ಟ ಶಿಶುಗಳನ್ನು ತೀರಾ ಅವಧಿಪೂರ್ವ ಅಥವಾ ತೀರಾ ಕಡಿಮೆ ಜನನ ತೂಕ ಹೊಂದಿರುವ ಶಿಶುಗಳು ಆಗಿರುತ್ತವೆ.

ಭಾರತದಲ್ಲಿ ಪ್ರತೀ ವರ್ಷ 30 ಲಕ್ಷ ಅವಧಿಪೂರ್ವ ಶಿಶುಜನನವಾಗುತ್ತಿದ್ದು, ಇವುಗಳಲ್ಲಿ ಶೇ. 7ರಿಂದ 10ರಷ್ಟು ಶಿಶುಗಳು 32 ವಾರಗಳಿಗೆ ಮುನ್ನ ಜನಿಸಿದವಾಗಿರುತ್ತವೆ. ಈ ಶಿಶುಗಳು ಬದುಕುಳಿಯುವುದಕ್ಕೆ ಜನಿಸಿದ ಕೂಡಲೇ ಮತ್ತು ಆ ಬಳಿಕದ ಕೆಲವು ತಿಂಗಳುಗಳ ಅವಧಿಯಲ್ಲಿ ಅತ್ಯಾಧುನಿಕ ತಾಂತ್ರಿಕ ಜನನೋತ್ತರ ತೀವ್ರ ನಿಗಾ ಘಟಕದ ಆರೈಕೆ ಅಗತ್ಯವಾಗಿರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯು ಹೇಳುವಂತೆ, ಸಂಪನ್ಮೂಲಗಳ ಕೊರತೆ ಇರುವ ದೇಶಗಳಲ್ಲಿ ಇಂತಹ ಸೌಲಭ್ಯಗಳ ಕೊರತೆಯಿಂದಾಗಿ ಅವಧಿಪೂರ್ವ ಜನಿಸುವ ಶಿಶುಗಳ ಪೈಕಿ ಶೇ. 50ರಷ್ಟು ಶಿಶುಗಳು ಬದುಕುಳಿಯಲು ಶಕ್ತವಾಗುವುದಿಲ್ಲ.

ಈ ವಿಭಾಗದ ಇತಿಹಾಸದಲ್ಲಿಯೇ ಅತ್ಯಂತ ಪುಟ್ಟ ಶಿಶುವೊಂದಕ್ಕೆ ಆರೈಕೆ, ಚಿಕಿತ್ಸೆ ಒದಗಿಸಿ ಬದುಕುಳಿಯುವಂತೆ ಮಾಡುವ ಮೂಲಕ ಎನ್‌ಐಸಿಯು ವಿಭಾಗವು ಇತ್ತೀಚೆಗೆ ಹೊಸ ಮೈಲುಗಲ್ಲನ್ನು ಸ್ಥಾಪಿಸಿದೆ. ಗರ್ಭಧಾರಣೆಯ 23 ವಾರಗಳು ಮತ್ತು 4 ದಿನಗಳಲ್ಲಿ ಜನಿಸಿ 590 ಗ್ರಾಂ ತೂಕವಿದ್ದ ಶಿಶು ಈಗ ಎನ್‌ಐಸಿಯು ವಿಭಾಗದಲ್ಲಿ ಯಶಸ್ವಿಯಾಗಿ 4 ತಿಂಗಳುಗಳನ್ನು ಪೂರೈಸಿದೆ.

ಸಾಮಾನ್ಯವಾಗಿ ನಮ್ಮ ದೇಶದಲ್ಲಿ 24 ವಾರಗಳ ಗರ್ಭಸ್ಥ ಶಿಶು ಅವಧಿಪೂರ್ವ ಜನನವಾದರೆ ಬದುಕುಳಿಯುವುದು ಕಾರ್ಯಸಾಧ್ಯವಲ್ಲ ಎಂದು ಪರಿಗಣಿಸಲ್ಪಡುತ್ತದೆಯಾದರೂ ಶಿಶುವಿನ ಹೆತ್ತವರ ಆಗ್ರಹದ ಮೇರೆಗೆ ನಾವು ನಮ್ಮ ಸಂಪೂರ್ಣ ಶ್ರಮ ವಹಿಸಿ ಕಾರ್ಯಪ್ರವೃತ್ತರಾದೆವು. ಪ್ರಸ್ತುತ ಶಿಶು 2.8 ತೂಕ ಗಳಿಸಿಕೊಂಡಿದ್ದು, ಹೆಚ್ಚು ಕಡಿಮೆ ಆಮ್ಲಜನಕದ ನೆರವಿಲ್ಲದೆ ಉಸಿರಾಡುತ್ತಿದೆ ಮತ್ತು ಶೀಘ್ರವೇ ಹೆತ್ತವರ ಜತೆಗೆ ಮನೆ ಸೇರಲಿದೆ. ಈ ಯಶಸ್ಸನ್ನು ಸಾಧಿಸಲು ನಮ್ಮ ವೈದ್ಯರು, ದಾದಿಯರು, ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಮತ್ತು ಚಿಕಿತ್ಸಕರು ಹಗಲಿರುಳು ಶ್ರಮಿಸಿದ್ದಾರೆ.

ಅತ್ಯಾಧುನಿಕ ತಾಂತ್ರಿಕ ಆರೈಕೆಯನ್ನು ಒದಗಿಸುವುದರ ಜತೆಗೆ ನಮ್ಮ ಎನ್‌ಐಸಿಯು ಸೌಲಭ್ಯವು ತಾಯಂದಿರು ಮಾತ್ರವಲ್ಲದೆ ತಂದೆ ಹಾಗೂ ಅಜ್ಜ-ಅಜ್ಜಿಯರಿಂದ ಕಾಂಗರೂ ಆರೈಕೆಯನ್ನು ಕೂಡ ಅನುಷ್ಠಾನಗೊಳಿಸುತ್ತಿದೆ. ಇದರಲ್ಲಿ ಆರೈಕೆದಾರರು ಎನ್‌ ಐಸಿಯುನಲ್ಲಿ ವೈದ್ಯಕೀಯ ತಂಡದ ಮೇಲ್ವಿಚಾರಣೆಯಡಿ ವಿಶೇಷ ಆರಾಮ ಕುರ್ಚಿಯಲ್ಲಿ ಕುಳಿತು ಸ್ಥಿರ ಆರೋಗ್ಯ ಹೊಂದಿರುವ ಅವಧಿಪೂರ್ವ ಶಿಶುವನ್ನು ಎದೆಯ ಮೇಲೆ ಮಲಗಿಸಿಕೊಂಡು ಕಾಂಗರೂ ಆರೈಕೆ ಒದಗಿಸುತ್ತಾರೆ. ಅವಧಿಪೂರ್ವ ಜನಿಸಿದ ಶಿಶುಗಳ ದೀರ್ಘ‌ಕಾಲೀನ ನರಶಾಸ್ತ್ರೀಯ ಬೆಳವಣಿಗೆಯಲ್ಲಿ ಇದು ಮಹತ್ವದ ಪಾತ್ರ ವಹಿಸುವುದರಿಂದ ಅವಧಿಪೂರ್ವ ಜನಿಸಿದ ಎಲ್ಲ ಶಿಶುಗಳಿಗೆ ದಿನವೊಂದಕ್ಕೆ ಕನಿಷ್ಠ 8 ತಾಸುಗಳ ಕಾಲ ಈ ಆರೈಕೆ ಒದಗಿಸಬೇಕು ಎಂಬುದಾಗಿ ವಿಶ್ವ ಆರೋಗ್ಯ ಸಂಸ್ಥೆಯು ಶಿಫಾರಸು ಮಾಡುತ್ತದೆ.

ಅವಧಿಪೂರ್ವ ಜನಿಸಿದ ಎಲ್ಲ ಶಿಶುಗಳ ಕುಟುಂಬಗಳು ಶಿಶು ಆರೈಕೆಯಲ್ಲಿ ಸಕ್ರಿಯವಾಗಿ, ಸಂತೋಷದಿಂದ ಭಾಗವಹಿಸುವುದರಿಂದ ಕಸ್ತೂರ್ಬಾ ಆಸ್ಪತ್ರೆಯ ಎನ್‌ಐಸಿಯು ಕಾಂಗರೂ ಆರೈಕೆಯ ಈ ಪ್ರಮಾಣವನ್ನು ಶೇ. 90 ಪ್ರಕರಣಗಳಲ್ಲಿ ಸಾಧಿಸಲು ಶಕ್ತವಾಗಿದೆ. ನಮ್ಮ ಶಿಶುಗಳ ಕುಟುಂಬಗಳು ನಮ್ಮ ಮೇಲೆ ಇರಿಸಿರುವ ವಿಶ್ವಾಸ ಮತ್ತು ನಂಬಿಕೆಯೇ ನಮಗೆ ಅತ್ಯಂತ ಸ್ಪೂರ್ತಿದಾಯಕವಾಗಿದೆ ಎಂದು ವಿಭಾಗದ ಕಾಂಗರೂ ಆರೈಕೆಯ ಇನ್‌ ಚಾರ್ಜ್‌ ಆಗಿರುವ ಡಾ| ಶ್ರುತಿ ಭಾರದ್ವಾಜ್‌ ಹೇಳುತ್ತಾರೆ.

ಅವಧಿಪೂರ್ವ ಜನಿಸಿದ ಶಿಶುಗಳ ಸಹಿತ ಎಲ್ಲ ಶಿಶುಗಳಿಗೆ ತಾಯಂದಿರು ತಮ್ಮದೇ ಸ್ತನ್ಯವನ್ನು ಆಹಾರವಾಗಿ ಉಣಿಸುವುದನ್ನು ಕಸ್ತೂರ್ಬಾ ಆಸ್ಪತ್ರೆಯು ಸದಾ ಪ್ರೋತ್ಸಾಹಿಸುತ್ತದೆ. ಆಸ್ಪತ್ರೆಗೆ ನೂತನ ಮಾನವ ಎದೆಹಾಲು ಬ್ಯಾಂಕ್‌ ಮಂಜೂರುಗೊಂಡಿದ್ದು, ತಮ್ಮ ಅವಧಿಪೂರ್ವ ಶಿಶುವಿಗೆ ತಮ್ಮದೇ ಎದೆಹಾಲನ್ನು ಉಣಿಸಲು ಅಶಕ್ತರಾದ ತಾಯಂದಿರು ಪ್ಯಾಶ್ಚರೀಕೃತ ಮಾನವ ಎದೆಹಾಲನ್ನು ಒದಗಿಸುವುದಕ್ಕಾಗಿ ಕಾರ್ಯಾರಂಭಗೊಳ್ಳಲಿದೆ.

ನಮ್ಮ ಅತ್ಯಂತ ಪುಟಾಣಿ ರೋಗಿಗಳಿಗೆ ನಾವು ಒದಗಿಸುವ ಆರೈಕೆಯನ್ನು ಇನ್ನಷ್ಟು ಉತ್ತಮಪಡಿಸಲು ಇದೊಂದು ಹೊಸ ಸೇರ್ಪಡೆ ಎಂದು ಈ ಹೊಸ ಹೆಜ್ಜೆಯನ್ನು ಸಾಧ್ಯವಾಗಿಸುವಲ್ಲಿ ಮುಂಚೂಣಿಯಲ್ಲಿರುವ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ| ಅವಿನಾಶ್‌ ಶೆಟ್ಟಿ ಹೇಳಿದ್ದಾರೆ.

ಅವಧಿಪೂರ್ವ ಶಿಶುಗಳು ಎನ್‌ಐಸಿಯು ಆರೈಕೆಯಲ್ಲಿದ್ದು ಮನೆಗೆ ತೆರಳಿದರಷ್ಟೇ ಸಾಲದು. ಇಂತಹ ಶಿಶುಗಳ ಅನುಸರಣ ಚಿಕಿತ್ಸೆ-ಆರೈಕೆಯೂ ಅಷ್ಟೇ ಪ್ರಾಮುಖ್ಯವಾದುದಾಗಿದೆ. ಹೀಗಾಗಿ ಎನ್‌ಐಸಿಯುನಲ್ಲಿದ್ದು ಬಿಡುಗಡೆ ಹೊಂದಿರುವ ಅವಧಿಪೂರ್ವ ಜನಿಸಿದ ಶಿಶುಗಳನ್ನು ಯಾವುದೇ ಸಂಭಾವ್ಯ ನರಶಾಸ್ತ್ರೀಯ ಬೆಳವಣಿಗೆ ವಿಳಂಬಕ್ಕಾಗಿ ನಮ್ಮ ವಿಭಾಗದಿಂದ ನಡೆಸಲಾಗುತ್ತಿರುವ ನ್ಯೂರೊ ಡೆವಲಪ್‌ಮೆಂಟಲ್‌ ಫಾಲೊ ಅಪ್‌ ಕ್ಲಿನಿಕ್‌ನಲ್ಲಿ ನಿಯಮಿತವಾಗಿ ತಪಾಸಣೆಗೆ ಒಳಪಡಿಸಲಾಗುತ್ತದೆ. ನೇತ್ರತಜ್ಞರು, ಆಡಿಯಾಲಜಿ ತಜ್ಞರು, ಆಕ್ಯುಪೇಶನಲ್‌ ಥೆರಪಿಸ್ಟ್‌ಗಳು ಮತ್ತು ಫಿಸಿಯೋಥೆರಪಿಸ್ಟ್‌ಗಳು ಇಂತಹ ಫಾಲೊಅಪ್‌ ತಪಾಸಣೆಗಳ ಸಂದರ್ಭಗಳಲ್ಲಿ ಸದಾ ಲಭ್ಯರಿದ್ದು, ಈ ಪುಟಾಣಿ ಗ್ರಾಹಕರಿಗೆ ಅತ್ಯುತ್ಕೃಷ್ಟ ಫ‌ಲಿತಾಂಶಗಳು ಲಭಿಸುವುದನ್ನು ಖಾತರಿಪಡಿಸುತ್ತಿದ್ದಾರೆ.

ಸರ್ಜನ್‌ ವೈ|ಅ| ಶೀಲಾ ಎಸ್‌. ಮಥಾಯ್‌,

ಎನ್‌ಎಂ, ವಿಎಸ್‌ಎಂ (ನಿ.)

ಪ್ರೊಫೆಸರ್‌ ಮತ್ತು ವಿಭಾಗ ಮುಖ್ಯಸ್ಥರು,

ನಿಯೋನೇಟಾಲಜಿ ವಿಭಾಗ,

ಕೆಎಂಸಿ ಆಸ್ಪತ್ರೆ, ಮಾಹೆ, ಮಣಿಪಾಲ

(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ನಿಯೋನೇಟಾಲಜಿ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು)

ಟಾಪ್ ನ್ಯೂಸ್

1-sacdsadas

TMC ಮಹುವಾ ಮೊಯಿತ್ರಾಗೆ ಬೆಂಬಲ: ಬಿಎಸ್ ಪಿಯಿಂದ ಡ್ಯಾನಿಷ್ ಅಲಿ ಅಮಾನತು

1-sadsdasd

2025ರ ಅಂತ್ಯದ ವೇಳೆಗೆ ಭಾರತದ ಆರ್ಥಿಕತೆ 5 ಟ್ರಿಲಿಯನ್ ಡಾಲರ್: ಅಮಿತ್ ಶಾ

raRabkavi Banhatti 25 ಕೆಜಿ ಬೆಳ್ಳಿ ಅಂಬಾರಿ ಗೌರಿಮನಿ ಕುಟುಂಬದ ಕಲೆಗೆ ಸಾಕ್ಷಿ

Rabkavi Banhatti 25 ಕೆಜಿ ಬೆಳ್ಳಿ ಅಂಬಾರಿ ಗೌರಿಮನಿ ಕುಟುಂಬದ ಕಲೆಗೆ ಸಾಕ್ಷಿ

1-sadsadasd

Kargil ಯೋಜನೆಯನ್ನು ವಿರೋಧಿಸಿದ್ದಕ್ಕಾಗಿ ನನ್ನ ಪದಚ್ಯುತಿಯಾಯಿತು: ನವಾಜ್ ಷರೀಫ್

Mangaluru; ಸೋಮೇಶ್ವರ ಕಡಲತೀರದಲ್ಲಿ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

Mangaluru; ಸೋಮೇಶ್ವರ ಕಡಲತೀರದಲ್ಲಿ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

Kashvee Gautam bagged 2 crore in WPL Auction 2024

WPL Auction: ಕಳೆದ ವರ್ಷ ಅನ್ ಸೋಲ್ಡ್, ಈ ಬಾರಿ 2 ಕೋಟಿ ರೂ ಪಡೆದ ದಾಖಲೆ ಬರೆದ ಕಶ್ವಿ

modiViksit Bharat Sankalp Yatra; ಮುದ್ರಾ ಫಲಾನುಭವಿಗಳ ಜತೆ ಪ್ರಧಾನಿ ಮೋದಿ ಸಂವಾದ

Viksit Bharat Sankalp Yatra; ಮುದ್ರಾ ಫಲಾನುಭವಿಗಳ ಜತೆ ಪ್ರಧಾನಿ ಮೋದಿ ಸಂವಾದ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9-ostioporosis

Osteoporosis: ನೀವು ಭಾವಿಸಿದ್ದಕ್ಕಿಂತಲೂ ಹೆಚ್ಚು ವ್ಯಾಪಕವಾದುದು!

7-health

New Born Child: ಎಳವೆಯಲ್ಲೇ ತಲೆ ಮತ್ತು ಕುತ್ತಿಗೆಯ ಚಲನೆಯ ಸಾಮರ್ಥ್ಯದ ಮಹತ್ವ

3–Brain-tumors-in-children

Brain Tumors: ಮಕ್ಕಳಲ್ಲಿ ಮೆದುಳು ಗಡ್ಡೆಗಳು

6-diet

Diabetes: ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಿಸಲು ಪಥ್ಯಾಹಾರ

5-health

Premature ಮಗುವಿನ ಆರೈಕೆ,ಅವರೊಂದಿಗೆ ಮಾಡುವ ಚಟುವಟಿಕೆಗಳಲ್ಲಿ ಮಕ್ಕಳ ಫಿಸಿಯೋಥೆರಪಿಯ ಪಾತ್ರ

MUST WATCH

udayavani youtube

ಬಿಜೆಪಿ ಕೈ ಹಿಡಿದ ಉತ್ತರ ಭಾರತದ ಮತದಾರರು

udayavani youtube

ಕರಾವಳಿಯಲ್ಲಿ ಕಂಡುಕೇಳರಿಯದ ಮತ್ಸ್ಯ ಕ್ಷಾಮ

udayavani youtube

ಉತ್ತರಪ್ರದೇಶ ಹಲಾಲ್ ಬ್ಯಾನ್ ಮಾಡಿದ್ದೇಕೆ?

udayavani youtube

ವೈಜ್ಞಾನಿಕ ಲೋಕಕ್ಕೆ ಸವಾಲಾದ ಅಲುಗಾಡುವ ಹುತ್ತ ..ಸಂಭ್ರಮಾಚರಣೆಯ ಉಣ್ಣಕ್ಕಿ ಉತ್ಸವಕ್ಕೆ ತೆರೆ

udayavani youtube

ಕಾಂತರದ ರಿಷಬ್ ಶೆಟ್ರಿಗೆ ಕೋಣ ಓಡಿಸೋಕೆ ಕಲಿಸಿದ್ದು ಇವರೇ ನೋಡಿ

ಹೊಸ ಸೇರ್ಪಡೆ

1-sacdsadas

TMC ಮಹುವಾ ಮೊಯಿತ್ರಾಗೆ ಬೆಂಬಲ: ಬಿಎಸ್ ಪಿಯಿಂದ ಡ್ಯಾನಿಷ್ ಅಲಿ ಅಮಾನತು

1-sadsdasd

2025ರ ಅಂತ್ಯದ ವೇಳೆಗೆ ಭಾರತದ ಆರ್ಥಿಕತೆ 5 ಟ್ರಿಲಿಯನ್ ಡಾಲರ್: ಅಮಿತ್ ಶಾ

raRabkavi Banhatti 25 ಕೆಜಿ ಬೆಳ್ಳಿ ಅಂಬಾರಿ ಗೌರಿಮನಿ ಕುಟುಂಬದ ಕಲೆಗೆ ಸಾಕ್ಷಿ

Rabkavi Banhatti 25 ಕೆಜಿ ಬೆಳ್ಳಿ ಅಂಬಾರಿ ಗೌರಿಮನಿ ಕುಟುಂಬದ ಕಲೆಗೆ ಸಾಕ್ಷಿ

1-sadsadasd

Kargil ಯೋಜನೆಯನ್ನು ವಿರೋಧಿಸಿದ್ದಕ್ಕಾಗಿ ನನ್ನ ಪದಚ್ಯುತಿಯಾಯಿತು: ನವಾಜ್ ಷರೀಫ್

Mangaluru; ಸೋಮೇಶ್ವರ ಕಡಲತೀರದಲ್ಲಿ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

Mangaluru; ಸೋಮೇಶ್ವರ ಕಡಲತೀರದಲ್ಲಿ ಇಬ್ಬರು ವಿದ್ಯಾರ್ಥಿಗಳು ನೀರುಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.