ಮಾದಕ ವಸ್ತುಗಳ ದುರುಪಯೋಗದ ಲಕ್ಷಣಗಳು

ಮಾದಕ ವಸ್ತುಗಳ ಚಟವು ವ್ಯಕ್ತಿಯ ಮೆದುಳಿನ ಮೇಲೆ ದೀರ್ಘ‌ ಕಾಲದ ಮತ್ತು ಪ್ರಭಾವಿ ಪರಿಣಾಮ ಬೀರುತ್ತದೆ.

Team Udayavani, Jul 11, 2022, 10:20 AM IST

4

ಮಾದಕ ವಸ್ತುಗಳ ಉಪಯೋಗ ಸಾಮಾನ್ಯವಾಗಿ ಪ್ರಪಂಚಾದ್ಯಂತ ಕಂಡು ಬರುವ ಒಂದು ದೊಡ್ಡ ಪಿಡುಗು. ಇದು ಗಂಡು-ಹೆಣ್ಣು, ಬಡವ-ಶ್ರೀಮಂತ ಎನ್ನುವ ಯಾವುದೇ ಭೇದ-ಭಾವವಿಲ್ಲದೆ ಎಲ್ಲೆಡೆಯೂ ಕಂಡು ಬರುವ ತೊಂದರೆ.

ಸಾಮಾನ್ಯವಾಗಿ ಉಪಯೋಗಿಸುವ ಮಾದಕ ವಸ್ತುಗಳು: ಮದ್ಯ, ತಂಬಾಕು, ಗಾಂಜಾ, ಕೋಕೇನ್‌, ಓಪಿಯಮ್‌, ಆಂಫಿಟಮೈನ್‌, ಹೆರಾಯಿನ್‌, ಎಲ್‌.ಎಸ್‌.ಡಿ., ಪಿ.ಸಿ.ಪಿ., ನಿದ್ದೆ ಮಾತ್ರೆಗಳು, ಅನಿಲಗಳು (ವೈಟನರ್‌, ಪೆಟ್ರೋಲಿಯಮ್‌ ಉತ್ಪನ್ನಗಳು) ಇತ್ಯಾದಿ.

ಮಾದಕ ವಸ್ತುಗಳ ಚಟವು ವ್ಯಕ್ತಿಯ ಮೆದುಳಿನ ಮೇಲೆ ದೀರ್ಘ‌ ಕಾಲದ ಮತ್ತು ಪ್ರಭಾವಿ ಪರಿಣಾಮ ಬೀರುತ್ತದೆ. ಈ ಪರಿಣಾಮಗಳೆಂದರೆ: ಮಾದಕ ವಸ್ತುಗಳ ಸೇವನೆಯ ತವಕ/ಹಪಹಪಿಸುವಿಕೆ, ಮಾದಕ ವಸ್ತುಗಳ ಸೇವನೆ/ಉಪಯೋಗದ ಮೇಲೆ ನಿಯಂತ್ರಣ ತಪ್ಪಿ ಹೆಚ್ಚಿನ ಪ್ರಮಾಣದಲ್ಲಿ ಸೇವಿಸುವುದು, ಮಾದಕ ವಸ್ತುಗಳ ದುಷ್ಪರಿಣಾಮಗಳಾಗುತ್ತಿದ್ದರೂ ಅದರ ಸೇವನೆ/ ಉಪಯೋಗ ಮುಂದುವರಿಸುವುದು.

ಮಾದಕ ವಸ್ತುಗಳನ್ನು ದುರುಪಯೋಗಿಸುವವರನ್ನು ಗುರುತಿಸುವುದು ಹೇಗೆಂದರೆ: 

  1. ವ್ಯಕ್ತಿಯು ತನ್ನ ಜವಾಬ್ದಾರಿಗಳನ್ನು ನಿರ್ಲಕ್ಷಿಸಲಾರಂಭಿಸುತ್ತಾನೆ: ಶಾಲೆಗೆ/ಕಾಲೇಜಿಗೆ ಚಕ್ಕರ್‌ ಹೊಡೆದು ಮಾದಕ ವಸ್ತು ಬಳಸಲು ಹೋಗುವುದು; ಕೆಲಸಕ್ಕೆ ಗೈರುಹಾಜರಾಗುವುದು/ ಕೆಲಸ ಅರ್ಧಕ್ಕೆ ಬಿಟ್ಟು ಹೋಗುವುದು; ಹೆಂಡತಿ ಮಕ್ಕಳನ್ನು ನಿರ್ಲಕ್ಷಿಸುವುದು; ಮನೆ ಖರ್ಚಿಗೆ ದುಡ್ಡು ಕೊಡದೆ ಅದನ್ನು ಮಾದಕ ವಸ್ತುಗಳ ಖರೀದಿಯಲ್ಲಿ ಉಪಯೋಗಿಸುವುದು; ಸಾಮಾಜಿಕ ಜವಾಬ್ದಾರಿಗಳನ್ನು ನಿರ್ಲಕ್ಷಿಸುವುದು, ಇತ್ಯಾದಿ.
  2. ವ್ಯಕ್ತಿಯು ಅಪಾಯಕಾರಿ ಸನ್ನಿವೇಶಗಳಲ್ಲಿ ಮಾದಕ ವಸ್ತುಗಳನ್ನು ಬಳಸಲಾರಂಭಿಸುತ್ತಾನೆ ಹಾಗೂ ಮಾದಕ ವಸ್ತುವಿನ ಮತ್ತಿನಲ್ಲಿರುವಾಗ ಅಪಾಯಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು: ಮಾದಕ ವಸ್ತುಗಳನ್ನು ಬಳಸಿ ವಾಹನ ಚಲಾಯಿಸುವುದು, ಒಂದೇ ಸಿರಿಂಜಿನಲ್ಲಿ ಎಲ್ಲರೂ ಸೇರಿ ಇಂಜೆಕ್ಷನ್‌ ತೆಗೆದುಕೊಳ್ಳುವುದು, ಮಾದಕ ವಸ್ತು ತೆಗೆದುಕೊಳ್ಳಲು ಬಳಸಿದ ಸೂಜಿಯನ್ನೇ ಪದೇಪದೆ ಬಳಸುವುದು, ಅಮಲಿನಲ್ಲಿ ವೇಶ್ಯೆಯರ ಜತೆಗೆ /ಅಪರಿಚಿತರ ಜತೆಗೆ ಅಸುರಕ್ಷಿತ ಲೈಂಗಿಕ ಕ್ರಿಯೆಗೆ ತೊಡಗುವುದು ಇತ್ಯಾದಿ.
  3. ವ್ಯಕ್ತಿಯ ಮಾದಕ ವಸ್ತುವಿನ ಉಪಯೋಗದಿಂದಾಗಿ ಅಪರಾಧವೆಸಗಿ ಕಾನೂನು ಕ್ರಮಕ್ಕೊಳಗಾಗುವುದು: ಅಮಲಿನಲ್ಲಿ ವಾಹನ ಚಲಾಯಿಸುವುದು, ಜಗಳಕ್ಕೊಳಗಾಗುವುದು, ಇತರರ/ಮನೆಯವರ ನಿಂದೆ ಮಾಡಿ ಜಗಳಕ್ಕೆ ಹೋಗುವುದು.
  4. ಸಂಬಂಧಗಳಲ್ಲಿ ಬಿರುಕುಗಳು ಉಂಟಾಗುವುದು: ಮಾದಕ ವಸ್ತುವಿನ ಸೇವನೆಯಿಂದಾಗಿ, ಅಮಲಿನಲ್ಲಿ ನಡವಳಿಕೆಗಳಿಂದಾಗಿ, ಬೇಜವಾಬ್ದಾರಿಯಿಂದಾಗಿ ಹೆಂಡತಿ-ಮಕ್ಕಳೊಂದಿಗೆ ಜಗಳಗಳಾಗುವುದು, ಸ್ನೇಹಿತರೊಟ್ಟಿಗೆ ಜಗಳಗಳಾಗುವುದು, ಕುಟುಂಬ/ಸಹೋದ್ಯೋಗಿಗಳ ಜತೆಗೆ ಮನಸ್ತಾಪವಾಗುವುದು, ಸ್ನೇಹಗಳು ಮುರಿದುಬೀಳುವುದು.

ಮಾದಕ ವಸ್ತುಗಳ ಚಟ/ದುರ್ವ್ಯಸನ/ ಹವ್ಯಾಸಕ್ಕೆ ಒಳಗಾದಾಗ ಕಂಡುಬರುವ ಲಕ್ಷಣಗಳು.

ಈ ಕೆಳಗೆ ನಮೂದಿಸಿದ ಲಕ್ಷಣಗಳಲ್ಲಿ ಮೂರು ಅಥವಾ ಅದಕ್ಕಿಂತ ಹೆಚ್ಚಿನ ಲಕ್ಷಣಗಳು ವ್ಯಕ್ತಿಯೊಬ್ಬನಲ್ಲಿ ಕಳೆದ ಒಂದು ವರ್ಷದಲ್ಲಿ ಹಲವು ಸಮಯದ ವರೆಗೆ ಕಂಡುಬಂದಲ್ಲಿ ಆತನನ್ನು ಚಟಕ್ಕೆ ಒಳಗಾಗಿದ್ದಾನೆಯೆಂದು ಪರಿಗಣಿಸಲಾಗುತ್ತದೆ.

  1. ಮಾದಕ ವಸ್ತು ಸೇವಿಸಲೇಬೇಕೆಂಬ ಅತಿಯಾದ ಆಸೆ, ತವಕ ಮತ್ತು ಒತ್ತಡವನ್ನು ಅನುಭವಿಸುವುದು (Craving).
  2. ಮಾದಕ ವಸ್ತುವಿನ ಪ್ರಮಾಣದ ತಾಳಿಕೊಳ್ಳುವ ಶಕ್ತಿ ಹೆಚ್ಚಾಗುವಿಕೆ (Tolerance) ವ್ಯಕ್ತಿಗೆ ಮೊದಲಿಗೆ ಸ್ವಲ್ಪ ಪ್ರಮಾಣದಲ್ಲಿ ಮಾದಕ ವಸ್ತು ಉಪಯೋಗಿಸಿದರೆ ಸಾಕಾಗುತ್ತಿತ್ತು. ಆದರೆ ಸಮಯ ಕಳೆದಂತೆ ಅದೇ ಮೊದಲಿನ ಅನುಭವ ಪಡೆಯಲು ಸ್ವಲ್ಪ ಪ್ರಮಾಣದಲ್ಲಿ ಮಾದಕ ವಸ್ತು ಸಾಕಾಗುವುದಿಲ್ಲ. ಅಂದರೆ ಅದೇ ಅನುಭವ ಪಡೆಯಲು ಹೆಚ್ಚು ಹೆಚ್ಚಿನ ಪ್ರಮಾಣದಲ್ಲಿ ಮಾದಕ ವಸ್ತು ಉಪಯೋಗಿಸಬೇಕಾಗುತ್ತದೆ ಮತ್ತು ಹೆಚ್ಚಿನ ಸಾಂದ್ರತೆಯ ಮಾದಕ ವಸ್ತು ಬೇಕಾಗುತ್ತದೆ.

ಉದಾ: ಮೊದಲಿಗೆ ವ್ಯಕ್ತಿಯೊಬ್ಬನಿಗೆ ಅರ್ಧ ಬಿಯರ್‌ ಸಾಕಾಗುತ್ತಿತ್ತು. ಆದರೆ ಸಮಯ ಕಳೆದಂತೆ ಆತ ಇದು ಏನೂ ಕಿಕ್‌ ನೀಡುತ್ತಿಲ್ಲ ಎಂದು ಪೂರ್ತಿ ಬಿಯರ್‌ ಕುಡಿಯಲಾರಂಭಿಸಿದ; ಅನಂತರ ಬಿಯರ್‌ಕೂಡ ಕಿಕ್‌ ನೀಡುತ್ತಿಲ್ಲ ಎಂದು ಹಾರ್ಡ್‌ ಡ್ರಿಂಕ್‌ (ವಿಸ್ಕಿ, ರಮ್‌, ಜಿನ್‌, ವೊಡ್ಕಾ ಇತ್ಯಾದಿ) ಆರಂಭಿಸಿದ. ಸಮಯ ಕಳೆದಂತೆ ಹಾರ್ಡ್‌ ಡ್ರಿಂಕ್‌ ಪ್ರಮಾಣವನ್ನು 2 ಪೆಗ್ಗಿನಿಂದ 3 ಪೆಗ್‌ (ಸಾಮಾನ್ಯವಾಗಿ ಬಳಸುವ ಮದ್ಯದ ಮಾಪನ, ಇದು 30, 60, 90 ml ಆಗಿರುತ್ತದೆ) ಮಾಡಿದ. ಅನಂತರ ಮಧ್ಯಾಹ್ನ ಕೂಡ ಕುಡಿಯಲು ಆರಂಭಿಸಿದ. ಇದನ್ನು ಸಹನಶಕ್ತಿಯೆಂದು ಹೇಳಲಾಗುತ್ತದೆ. ಅಂದರೆ ಸಮಯ ಕಳೆದಂತೆ ಮದ್ಯಪಾನದ ಸಲುವಾಗಿ ವ್ಯಕ್ತಿಯ ದೇಹದ/ಮೆದುಳಿನ ಸಹನಶಕ್ತಿ ಹೆಚ್ಚಾಗುತ್ತ ಹೋಗಿ ಮೊದಲಿನ ಕಿಕ್‌/ಪರಿಣಾಮ ಬರಲು ಹೆಚ್ಚಿನ ಪ್ರಮಾಣದಲ್ಲಿ ಮತ್ತು ಹೆಚ್ಚೆಚ್ಚು ಸಲ ಮಾದಕ ವಸ್ತು ಬೇಕಾಗುತ್ತದೆ.

  1. ವಿಥಡ್ರಾವಲ್‌ ಸಿಂಪ್ಟಮ್ಸ್‌ (Withdrawal Symptoms)

ಅಂದರೆ ಮಾದಕ ವಸ್ತುವಿನ ಉಪಯೋಗ ನಿಲ್ಲಿಸಿದ ಅನಂತರ ಕೆಲವು ದೈಹಿಕ ಮತ್ತು ಮಾನಸಿಕ ಲಕ್ಷಣಗಳು ಕಂಡುಬರುತ್ತವೆ. ಉದಾ: ದಿನಾ ಮಾದಕ ವಸ್ತು ತೆಗೆದುಕೊಳ್ಳುವ ವ್ಯಕ್ತಿ ಒಂದು ದಿನ ತೆಗೆದುಕೊಳ್ಳದಿದ್ದರೆ ಆತನಿಗೆ ತಲೆ ಸುತ್ತುವುದು, ಮೈ ಬೆವರುವುದು, ಎದೆ ಡಬ ಡಬ ಎಂದು ಬಡಿದುಕೊಳ್ಳುವುದು, ಗಾಬರಿಯಾಗುವುದು, ಕೈ-ಕಾಲು ನಡುಗುವುದು, ಹೊಟ್ಟೆ ನೋವಾಗುವುದು, ಕೆಲಸದ ಮೇಲೆ ಗಮನ ಕೊಡಲು ಕಷ್ಟವಾಗುವುದು ಇತ್ಯಾದಿ ಲಕ್ಷಣಗಳು ಮಾದಕ ವಸ್ತುವಿಗೆ ತಕ್ಕಂತೆ ಕಂಡುಬರಲಾರಂಭಿಸುತ್ತವೆ.

  1. ಮಾದಕ ವಸ್ತುವಿನ ಉಪಯೋಗದ ಮೇಲಿನ ಹತೋಟಿ ತಪ್ಪಿಹೋಗುವುದು (Withdrawal Symptoms) ವ್ಯಕ್ತಿಯು ತಾನು ಅಂದುಕೊಂಡದ್ದಕ್ಕಿಂತ ಹೆಚ್ಚಾಗಿ ಮಾದಕ ವಸ್ತುವನ್ನು ಉಪಯೋಗಿಸಲಾರಂಭಿಸುತ್ತಾನೆ. ಅದನ್ನು ನಿಯಂತ್ರಿಸಬೇಕೆಂದರೂ ಅದು ಆತನಿಂದ ಸಾಧ್ಯವಾಗುವುದಿಲ್ಲ. ಅಂದರೆ ವ್ಯಕ್ತಿಗೆ ಮಾದಕ ವಸ್ತುವಿನ ಉಪಯೋಗದ ಆರಂಭ, ಅದರ ಪ್ರಮಾಣ ಮತ್ತು ಅದನ್ನು ಎಷ್ಟರ ಮಟ್ಟಿಗೆ ನಿಲ್ಲಿಸಬೇಕು ಎನ್ನುವುದರ ಮೆಲೆ ನಿಯಂತ್ರಣವಿರುವುದಿಲ್ಲ. ಉದಾ: ವ್ಯಕ್ತಿಯು ಒಂದು ಪೆಗ್‌ ವಿಸ್ಕಿ ಕುಡಿಯಬೇಕೆಂದು ದೃಢ ನಿರ್ಧಾರ ಮಾಡಿ ಹೋಗುತ್ತಾನೆ. ಆದರೆ ಅಲ್ಲಿ ಹೋದ ಮೇಲೆ ಅದು ಎರಡಾಗಿ ಅನಂತರ ಮೂರು ಪೆಗ್‌ ಆಗಿಬಿಡುತ್ತದೆ.
  2. ವ್ಯಕ್ತಿಯ ಜೀವನವಿಡೀ ಮಾದಕ ವಸ್ತುವಿನ ಸುತ್ತವೇ ತಿರುಗಲಾರಂಭಿಸುತ್ತದೆ. ಸಮಯ ಕಳೆದಂತೆ ವ್ಯಕ್ತಿಯ ದಿನಚರಿ ಕೇವಲ ಮಾದಕ ವಸ್ತುವಿನಲ್ಲಿಯೇ ಮುಳುಗಿರುತ್ತದೆಯಲ್ಲದೆ ಆತನ ಎಲ್ಲ ಚಟುವಟಿಕೆಗಳು ಮಾದಕ ವಸ್ತುವಿಗೆ ಸಂಬಂಧಿಸಿದಂತೆ ಮಾರ್ಪಾಟಾಗುತ್ತವೆ. ಆತನ ಆಲೋಚನೆಗಳೆಲ್ಲವುಗಳೂ ಮಾದಕ ವಸ್ತುಗಳಿಗೆ ಸಂಬಂಧಪಟ್ಟಂತೆ ಇರುತ್ತವೆ. ಉದಾ: ಮಾದಕ ವಸ್ತು ಖರೀದಿಸುವ ಬಗ್ಗೆ, ಅದಕ್ಕಾಗಿ ಹಣ ಹೊಂದಿಸುವ ಬಗ್ಗೆ ಇತ್ಯಾದಿ. ಕ್ರಮೇಣವಾಗಿ ವ್ಯಕ್ತಿಯು ತನ್ನ ಜೀವನದ ಎಲ್ಲ ಸಂತೋಷ ನೀಡುವ ಸನ್ನಿವೇಶಗಳನ್ನು/ ಸಮಯವನ್ನು/ ವ್ಯಕ್ತಿಗಳನ್ನು/ ಕುಟುಂಬದವರನ್ನು/ ಸ್ನೇಹಿತರನ್ನು/ ಆಟೋಟಗಳನ್ನು/ ದಿನಚರಿಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸುತ್ತಾನೆ.
  3. ಮಾದಕ ವಸ್ತುವಿನಿಂದ ತನ್ನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹಾನಿಯಾಗುತ್ತದೆಯೆಂದು ಗೊತ್ತಿದ್ದರೂ/ ಆ ಹಾನಿಯನ್ನು ಅನುಭವಿಸುತ್ತಿದ್ದರೂ ಅದರ ಬಳಕೆ ಮುಂದುವರಿಸುತ್ತಾರೆ. ಉದಾ: ಮದ್ಯಪಾನದಿಂದ ಲಿವರ್‌ ಹಾಳಾಗಿ ಜಾಂಡೀಸ್‌ (ಕಾಮಾಲೆ ರೋಗ) ಆಗಿದ್ದರೂ ಮದ್ಯಪಾನವನ್ನು ಮುಂದುವರಿಸುವುದು; ಒಂದು ಸಲ ಗಾಂಜಾ ಸೇವನೆಯಿಂದ ಚಿತ್ತಭ್ರಮೆಯಾಗಿ ಏನೇನೋ ವಿಚಿತ್ರ ಅನುಭವಗಳಾಗಿ ಚಿಕಿತ್ಸೆಗಾಗಿ ವಾರಗಟ್ಟಲೇ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ಅನಂತರವೂ ಪುನಃ ಗಾಂಜಾ ಸೇದುವುದು, ಸಿಗರೇಟ್‌ ಸೇದುವುದರಿಂದ ಹಾರ್ಟ್‌ ಅಟ್ಯಾಕ್‌ (ಹೃದಯಾಘಾತ) ಆಗಿದ್ದರೂ ಸಿಗರೇಟ್‌ ಸೇದುವುದನ್ನು ಮುಂದುವರಿಸುವುದು, ಇತ್ಯಾದಿ.

-ಮುಂದಿನ ವಾರಕ್ಕೆ

-ಡಾ| ರವೀಂದ್ರ ಮುನೋಳಿ ಸಹ ಪ್ರಾಧ್ಯಾಪಕರು

ಮನೋ ರೋಗ ಚಿಕಿತ್ಸಾ ವಿಭಾಗ,

ಕೆಎಂಸಿ, ಮಾಹೆ, ಮಣಿಪಾಲ

ಟಾಪ್ ನ್ಯೂಸ್

4-mangaluru

ಮಂಗಳೂರು: 14ನೇ ಮಹಡಿಯಿಂದ ಬಿದ್ದು ಯುವಕ ಮೃತ್ಯು

ಸಿನಿಮಾಕ್ಕೆ ಭಾಷೆಗಳ ಗಡಿ ಸಲ್ಲದು…: ಕನ್ನಡಕ್ಕೆ ಬಂದ ಅನುಪಮ್ ಖೇರ್

ಸಿನಿಮಾಕ್ಕೆ ಭಾಷೆಗಳ ಗಡಿ ಸಲ್ಲದು…: ಕನ್ನಡಕ್ಕೆ ಬಂದ ಅನುಪಮ್ ಖೇರ್

tdy-10

ಚನ್ನಪಟ್ಟಣಕ್ಕೆ ಕಾಂಗ್ರೆಸ್‌ ಅಭ್ಯರ್ಥಿ ಯಾರು?

ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ: ಯಡಿಯೂರಪ್ಪ

ಬಿಜೆಪಿ ಅಧಿಕಾರಕ್ಕೆ ಬರುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ: ಯಡಿಯೂರಪ್ಪ

ODI World Cup 2023: Mumbai, Ahmedabad To Hosts Semis And Final

ಮುಂಬೈನಲ್ಲಿ ವಿಶ್ವಕಪ್ ಸೆಮಿಫೈನಲ್ ಮ್ಯಾಚ್; ಭಾರತ- ಪಾಕ್ ಪಂದ್ಯ ನಡೆಯುವುದು ಎಲ್ಲಿ?

ರಾಮನವಮಿ ಆಚರಣೆ ಮಾಡುವುದು ಹೇಗೆ? ರಾಮನವಮಿಯ ಮಹತ್ವ ಏನು…

ರಾಮನವಮಿ ಆಚರಣೆ ಮಾಡುವುದು ಹೇಗೆ? ರಾಮನವಮಿಯ ಮಹತ್ವ ಏನು…

3–sulya

ಕಾಣಿಯೂರು: ದೈವ ನರ್ತನದ ವೇಳೆ ಕುಸಿದು ಬಿದ್ದು ಇಹಲೋಕ ತ್ಯಜಿಸಿದ ದೈವ ನರ್ತಕಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6-health

ಮಕ್ಕಳಲ್ಲಿ ಅನ್ಯವಸ್ತುಗಳ ಶ್ವಾಸಾಂಗ ಪ್ರವೇಶ: ಹೆತ್ತವರಿಗೆ ಮಾಹಿತಿ

5-health

ನ್ಯುರೊಬ್ಲಾಸ್ಟೊಮಾ ಉತ್ತಮ ಗುಣ ಕಾಣುವುದಕ್ಕೆ ಉತ್ತಮ ಚಿಕಿತ್ಸೆ ಅಗತ್ಯ

mental-health-of-children

ಸ್ವಲೀನತೆಯಿರುವ ಮಕ್ಕಳಲ್ಲಿ ಕಂಡು ಬರುವ ಮಾನಸಿಕ ಲಕ್ಷಣಗಳು

large-intestine–health

ಆರೋಗ್ಯ: ದೊಡ್ಡ ಕರುಳಿನ ಕ್ಯಾನ್ಸರ್‌ ಬಗ್ಗೆ ಅರಿಯಿರಿ

4-health

ಮೂತ್ರಪಿಂಡ (ಕಿಡ್ನಿ); ಆರೋಗ್ಯ ಅಭಿಯಾನ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

firing

ಕಚೇರಿಯಲ್ಲಿ ಕುರ್ಚಿ ವಿಚಾರಕ್ಕೆ ವಾಗ್ವಾದ ; ಸಹೋದ್ಯೋಗಿಯ ಮೇಲೆ ಗುಂಡು!

tdy-12

ಎಚ್‌.ಡಿ.ಕೋಟೆಯಲ್ಲಿ ಜನ ಸಾಮಾನ್ಯರಿಗೆ ಸಿಗದ ಜನೌಷಧ

tdy-11

ಹನೂರು ಕ್ಷೇತ್ರದಲ್ಲಿ ಕಗ್ಗಂಟಾದ ಬಿಜೆಪಿ ಅಭ್ಯರ್ಥಿಯ ಆಯ್ಕೆ

4-mangaluru

ಮಂಗಳೂರು: 14ನೇ ಮಹಡಿಯಿಂದ ಬಿದ್ದು ಯುವಕ ಮೃತ್ಯು

ಸಿನಿಮಾಕ್ಕೆ ಭಾಷೆಗಳ ಗಡಿ ಸಲ್ಲದು…: ಕನ್ನಡಕ್ಕೆ ಬಂದ ಅನುಪಮ್ ಖೇರ್

ಸಿನಿಮಾಕ್ಕೆ ಭಾಷೆಗಳ ಗಡಿ ಸಲ್ಲದು…: ಕನ್ನಡಕ್ಕೆ ಬಂದ ಅನುಪಮ್ ಖೇರ್