ನಿಮ್ಮ ಪ್ರವಾಸ ಸಂದರ್ಭ ಆರೋಗ್ಯ ರಕ್ಷಣೆಯ ಹೊಸ ವಿಭಾಗ


Team Udayavani, Mar 4, 2018, 6:00 AM IST

travel.jpg

ಹಿಂದಿನ ವಾರದಿಂದ– ಪ್ರವಾಸಿಗರಿಗೆ ಇತರ ಸಾಮಾನ್ಯ ಸಲಹೆಗಳು
– ಸುರಕ್ಷಿತ ಮೂಲಗಳಿಂದ ಪಡೆದ ನೀರನ್ನೇ ಕುಡಿಯಿರಿ.
– ನೈರ್ಮಲ್ಯಯುಕ್ತವಾಗಿ ಅಡುಗೆ ಮಾಡಿದ ಆಹಾರವನ್ನೇ ಸೇವಿಸಿ.
– ಬಿಸಿಬಿಸಿಯಾಗಿರುವ ಆಹಾರ ವಸ್ತುಗಳೇ ಸುರಕ್ಷಿತ.
– ಕತ್ತರಿಸಿ ತೆರೆದಿರಿಸಿದ ಹಣ್ಣುಗಳು ಮತ್ತು ತರಕಾರಿಗಳು, ಹಸಿ ಸಲಾಡ್‌ಗಳು, ಹಣ್ಣಿನ ರಸಗಳು, ಅರೆಬೆಂದ ಸಮುದ್ರ ಆಹಾರಗಳನ್ನು ವರ್ಜಿಸಿರಿ.
– ಸೊಳ್ಳೆ ಪರದೆಯೊಳಗೆ ನಿದ್ರಿಸಿರಿ, ಸೊಳ್ಳೆ ವಿಕರ್ಷಕಗಳನ್ನು ಉಪಯೋಗಿಸಿ.
– ಸ್ವತ್ಛ ಮತ್ತು ಸುರಕ್ಷಿತ ವಾಸ್ತವ್ಯ ವ್ಯವಸ್ಥೆಯಲ್ಲಿಯೇ ಉಳಿದುಕೊಳ್ಳಿ.
– ಅಪಾಯಕಾರಿ ಸ್ವಭಾವಗಳಿಂದ ದೂರವಿರಿ.
– ಪ್ರಯಾಣ ಸಂದರ್ಭದಲ್ಲಿ ಮದ್ಯಸೇವನೆಯಿಂದ ದೂರವಿರಿ.
– ಬೀದಿನಾಯಿಗಳು ಮತ್ತು ಪ್ರಾಣಿಗಳ ಸಂಪರ್ಕದಿಂದ ದೂರವಿರಿ.
– ಶಿಫಾರಸು ಮಾಡಲ್ಪಟ್ಟ ಲಸಿಕೆ ಮತ್ತು ಕಿಮೊಪ್ರೊಫಿಲ್ಯಾಕ್ಸಿಸ್‌ ಪಡೆಯಿರಿ.
– ಹತ್ತಿರದ ಆರೋಗ್ಯ ಸೇವೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಿ.

ಅತಿ ಸಾಮಾನ್ಯ ಪ್ರವಾಸ ಸಂಬಂಧಿ ಅನಾರೋಗ್ಯ – ಪ್ರಯಾಣಿಕ ಬೇಧಿ
ಪ್ರಯಾಣ ಸಂಬಂಧಿ ಅನಾರೋಗ್ಯಗಳಲ್ಲಿ ಅತ್ಯಂತ ಸಾಮಾನ್ಯವಾಗಿ ನಿರೀಕ್ಷಿಸಬಹುದಾದದ್ದು ಪ್ರಯಾಣಿಕ ಬೇಧಿ – ಟ್ರಾವೆಲರ್ಸ್‌ ಡಯರಿಯಾ (ಟಿಡಿ). ಪ್ರವಾಸಿಗರಲ್ಲಿ ಶೇ.30ರಿಂದ ಶೇ.70ರಷ್ಟು ಮಂದಿ ಈ ಅನಾರೋಗ್ಯದಿಂದ ಬಳಲಬಹುದಾಗಿದೆ. ಪ್ರಯಾಣಿಕ ಬೇಧಿ ಉಂಟಾಗಲು ಸ್ಥಳೀಯ ಉಪಾಹಾರ ಗೃಹ, ಹೊಟೇಲ್‌ಗ‌ಳಲ್ಲಿ ಇರುವ ಕಳಪೆ ನೈರ್ಮಲ್ಯ ಅತ್ಯಂತ ದೊಡ್ಡ ಕೊಡುಗೆದಾರನಾಗಿರುತ್ತದೆ. ಆಹಾರದ ಮೂಲಕ ಮುಂಚಿತವಾಗಿ ರೂಪುಗೊಂಡ ವಿಷಕಾರಿ ಅಂಶಗಳು ಹೊಟ್ಟೆ ಸೇರುವ ಈ ವಿದ್ಯಮಾನವನ್ನು ಸಾಮಾನ್ಯವಾಗಿ “ಫ‌ುಡ್‌ ಪಾಯಿಸನಿಂಗ್‌’ ಎಂದು ಕರೆಯುತ್ತಾರೆ. ಈ ಅನಾರೋಗ್ಯದಲ್ಲಿ ವಾಂತಿ ಮತ್ತು ಬೇಧಿಗಳೆರಡೂ ಇರಬಹುದು, ಆದರೆ ರೋಗಲಕ್ಷಗಳು ಸಾಮಾನ್ಯವಾಗಿ ತಂತಾನೇ 12 ತಾಸುಗಳ ಒಳಗೆ ಉಪಶಮನಗೊಳ್ಳುತ್ತವೆ. 

ಕಾರಣಗಳು
– ಕಳಪೆ ನೈರ್ಮಲ್ಯ
– ಅಗತ್ಯ ಪ್ರಮಾಣದ, ಸರಿಯಾದ ನೀರು ಮತ್ತು ನೈರ್ಮಲ್ಯ ಸೌಲಭ್ಯಗಳ ಕೊರತೆ – ಮಲದ ಮೇಲೆ ಕುಳಿತ ನೊಣಗಳು, ಶುಚಿಯಿಲ್ಲದ ಕೈಗಳು, ಶುಚಿಯಾಗಿಲ್ಲದ ವಸ್ತುಗಳು, ಶುಚಿಯಾಗಿಲ್ಲದ ತಟ್ಟೆಲೋಟಗಳು, ಚಮಚಗಳ ಮೂಲಕ ನೀರು ಮತ್ತು ಆಹಾರ ಮಲಿನಗೊಳ್ಳುವುದಕ್ಕೆ ಕಾರಣವಾಗುತ್ತದೆ. 
– ಅಸುರಕ್ಷಿತ ಆಹಾರ ನೈರ್ಮಲ್ಯ
– ಅಸುರಕ್ಷಿತ ಆಹಾರ ದಾಸ್ತಾನು 
– ಆಹಾರವನ್ನು ತಯಾರಿಸುವ, ಸಾಗಿಸುವ ಅಥವಾ ಬಡಿಸುವ ಜನರು ರೋಗವಾಹಕರಾಗಿರಬಹುದು.

ಲಕ್ಷಣಗಳು
ಬ್ಯಾಕ್ಟೀರಿಯಾ ಮತ್ತು ವೈರಲ್‌ಗ‌ಳಿಂದ ಉಂಟಾಗುವ ಪ್ರಯಾಣಿಕ ಬೇಧಿಯು ಲಘುವಾದ ಹೊಟ್ಟೆಹಿಡಿತ – ನೋವು, ಶೀಘ್ರ ಬೇಧಿಯ ಸಹಿತ ಹಠಾತ್ತನೆ ಕಾಣಿಸಿಕೊಳ್ಳುತ್ತದೆ, ತೀವ್ರ ಹೊಟ್ಟೆ ನೋವು, ಜ್ವರ, ವಾಂತಿ ಮತ್ತು ರಕ್ತಸಹಿತ ಬೇಧಿಗೂ ಮುಂದುವರಿಯಬಹುದಾಗಿದೆ. 

ಪ್ರತಿಬಂಧನೆ
ಆಹಾರ

– ಪ್ರಯಾಣಿಕ ಬೇಧಿಯನ್ನು “”ಕುದಿಸಿ, ಬೇಯಿಸಿ, ಸಿಪ್ಪೆ ತೆಗೆಯಿರಿ ಅಥವಾ ದೂರವಿರಿಸಿ” ಎಂಬ ಅತ್ಯಂತ ಸರಳವಾದ ಸಲಹಾಸೂತ್ರದ ಮೂಲಕ ತಡೆಯಬಹುದಾಗಿದೆ.
– ಬೀದಿಬದಿಯ ವ್ಯಾಪಾರಿಗಳಿಂದ ಖರೀದಿಸಿದ ಆಹಾರ ಮತ್ತು ಪಾನೀಯಗಳ ಉಪಯೋಗ ಈ ಅನಾರೋಗ್ಯಕ್ಕೆ ತುತ್ತಾಗುವ ಅಪಾಯವನ್ನು ಹೆಚ್ಚಿಸುತ್ತದೆ. 
– ಹಸಿ ಆಹಾರವಸ್ತುಗಳು ಮಲಿನಗೊಂಡಿರುವ ಸಾಧ್ಯತೆಗಳು ಹೆಚ್ಚು. ಹಸಿ ಅಥವಾ ಅರೆಬೆಂದ ಮೊಟ್ಟೆಗಳು, ಮಾಂಸ, ಮೀನು ಮತ್ತು ಚಿಪ್ಪು ಮೀನುಗಳು ವಿವಿಧ ರೋಗಕಾರಕಗಳನ್ನು ಹೊಂದಿರುವ ಸಾಧ್ಯತೆ ಅಧಿಕ. 
– ನೈರ್ಮಲ್ಯ ಮತ್ತು ಶುಚಿತ್ವ ಅಸಮರ್ಪಕವಾಗಿರುವ ಅಥವಾ ಅದರ ಸ್ಥಿತಿಗತಿ ತಿಳಿಯದೆ ಇರುವ ಸ್ಥಳಗಳಲ್ಲಿ ಪ್ರವಾಸಿಗರು ಸಲಾಡ್‌ಗಳು, ಬೇಯಿಸದ ತರಕಾರಿಗಳು, ಪ್ಯಾಶ್ಚರೀಕರಣಗೊಳ್ಳದ ಹಣ್ಣಿನ ರಸಗಳು, ಪ್ಯಾಶ್ಚರೀಕರಣಗೊಳ್ಳದ ಹಾಲು ಅಥವಾ ಪ್ಯಾಶ್ಚರೀಕರಿಸದ ಹಾಲಿನಿಂದ ತಯಾರಿಸಿದ ಚೀಸ್‌ ಉಪಯೋಗಿಸುವುದನ್ನು ವರ್ಜಿಸಬೇಕು. 
– ಪೂರ್ಣವಾಗಿ ಬೇಯಿಸಿದ ಮತ್ತು ಬಿಸಿಬಿಸಿಯಾಗಿರುವ ಆಹಾರ ವಸ್ತುಗಳನ್ನೇ ಸೇವಿಸುವುದು ಅತ್ಯಂತ ಸುರಕ್ಷಿತ. 
– ಆಹಾರ ತಯಾರಿಸುವ ಮುನ್ನ, ಸೇವಿಸುವ ಮುನ್ನ ಮತ್ತು ಶೌಚಾಲಯ ಬಳಕೆ, ಡಯಾಪರ್‌ ಬದಲಾವಣೆ ನಡೆಸಿ ಬಳಿಕ; ಅನಾರೋಗ್ಯಕ್ಕೆ ಈಡಾದವರ ಶುಶ್ರೂಷೆ ನಡೆಸಿದ ಅನಂತರ ಹಾಗೂ ಪ್ರಾಣಿಗಳು ಮತ್ತು ಅವುಗಳ ಪರಿಸರದ ಸಂಪರ್ಕ ನಡೆಸಿದ ಅನಂತರ ಪ್ರವಾಸಿಗರು ತಮ್ಮ ಕೈಗಳನ್ನು ಸಾಬೂನು ಮತ್ತು ನೀರು ಉಪಯೋಗಿಸಿ ಸ್ವತ್ಛವಾಗಿ ತೊಳೆದುಕೊಳ್ಳಬೇಕು. 
– ಸಾಬೂನು ಮತ್ತು ನೀರು ಅಲಭ್ಯವಾಗಿದ್ದಲ್ಲಿ, ಮದ್ಯಸಾರಯುಕ್ತ ಕೈಗಳನ್ನು ನಿರ್ಮಲಗೊಳಿಸುವ ದ್ರಾವಣಗಳ (ಶೇ.60 ಅಥವಾ ಹೆಚ್ಚು ಮದ್ಯಸಾರಯುಕ್ತ) ನ್ನು ಉಪಯೋಗಿಸಬೇಕು ಹಾಗೂ ಸಾಬೂನು ಮತ್ತು ನೀರು ಲಭ್ಯವಾದ ಕೂಡಲೇ ಅವುಗಳನ್ನು ಉಪಯೋಗಿಸಿ ಕೈಗಳನ್ನು ಸ್ವತ್ಛಗೊಳಿಸಿಕೊಳ್ಳಬೇಕು. 

ನೀರು
– ನೀರು ಶುದ್ಧೀಕರಣ, ನೈರ್ಮಲ್ಯ ಮತ್ತು ಶುಚತ್ವ ಅಸಮರ್ಪಕವಾಗಿರುವ ಕಡೆಗಳಲ್ಲಿ ನಲ್ಲಿನೀರು ರೋಗಕಾರಕ ಸೂಕ್ಷ್ಮಾಣುಗಳನ್ನು ಹೊಂದಿರಬಹುದು.
– ಶಿಶುಗಳು, ಮಕ್ಕಳು, ಗರ್ಭಿಣಿ ಮಹಿಳೆಯರು, ಹಿರಿಯರು ಮತ್ತು ರೋಗ ಪ್ರತಿರೋಧ ಶಕ್ತಿ ಬಲಗುಂದಿದ (ಉದಾಹರಣೆಗೆ, ಎಚ್‌ಐವಿ ಪೀಡಿತರು, ಕಿಮೋಥೆರಪಿಗೆ ಒಳಗಾದವರು, ಅಂಗಾಂಗ ಕಸಿಗೆ ಒಳಗಾದ ಬಳಿಕ ಔಷಧಿ ಸೇವಿಸುತ್ತಿರುವವರು) ವಿಶೇಷವಾಗಿ ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು.
– ಪ್ರವಾಸಿಗರು ನಲ್ಲಿನೀರನ್ನು ಕುಡಿಯುವುದು ಅಥವಾ ಬಾಯಿಗೆ ಹಾಕಿಕೊಳ್ಳುವುದನ್ನು ತಪ್ಪಿಸಬೇಕು. 
– ನಲ್ಲಿ ನೀರು ಅಸುರಕ್ಷಿತವಾಗಿರುವ ಕಡೆಗಳಲ್ಲಿ ತೆರೆದಿಲ್ಲದ, ಭದ್ರ ಮುಚ್ಚಳದ ವಾಣಿಜ್ಯವಾಗಿ ಲಭ್ಯವಿರುವ ಬಾಟಲಿ ಅಥವಾ ಸಮರ್ಪಕವಾಗಿ ಶುದ್ಧೀಕರಿಸಿದ ನೀರನ್ನು ಕುಡಿಯಲು, ಆಹಾರ ತಯಾರಿಸಲು, ಪಾನೀಯಗಳನ್ನು ತಯಾರಿಸಲು, ಐಸ್‌ ತಯಾರಿಸಲು, ಅಡುಗೆ ಮಾಡಲು ಮತ್ತು ಹಲ್ಲುಜ್ಜಲು ಉಪಯೋಗಿಸಬೇಕು. 
– ಕುದಿಸಿದ ನೀರಿನಿಂದ ತಯಾರಿಸಿದ ಪಾನೀಯಗಳು ಮತ್ತು ಹಬೆಯಾಡುತ್ತಿರುವ ಪಾನೀಯಗಳು (ಚಹಾ ಅಥವಾ ಕಾಫಿ) ಕುಡಿಯಲು ಸುರಕ್ಷಿತ.



– ಮುಂದಿನ ವಾರಕ್ಕೆ 

ಟಾಪ್ ನ್ಯೂಸ್

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

7-

Obsessive Psychiatry: ಗೀಳು ಮನೋರೋಗ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.