ಬ್ಲಡ್‌ ಬ್ಯಾಂಕ್‌ ಕಾಲೋನಿ! ರಕ್ತ ಕೊಟ್ಟು,ಜೀವ ಉಳಿಸುವ ರಾಜಧಾನಿ


Team Udayavani, May 27, 2017, 4:11 PM IST

46.jpg

ಬೆಂಗ್ಳೂರು, ಜೀವ ಉಳಿಸುವವರ ನಗರಿಯೂ ಹೌದು. ಇಲ್ಲಿ ನಿತ್ಯವೂ ಸಾವಿರಾರು ಬಾಟಲಿ ರಕ್ತದಾನ ನಡೆಯುತ್ತದೆ. ಹೆಸರು, ಊರು, ಜಾತಿ, ಲಿಂಗ ಯಾವುದೆಂದು ತಿಳಿಯಬಯಸದ ದಾನಿಗಳು ಸಹಸ್ರಾರು ಜನರ ಜೀವ ಉಳಿಸುತ್ತಾರೆ. ಹಾಗೆ ಜೀವ ಕಾಪಾಡುತ್ತಲೇ, ಸಂಕಷ್ಟಕ್ಕೆ ಸಿಲುಕಿದವರ ಪಾಲಿಗೆ ದೇವರಾಗುತ್ತಾರೆ. “ರಕ್ತದಾನಿಗಳ ರಾಜಧಾನಿ’ ಅಹ್ಮದಾಬಾದ್‌ ಆದರೆ, ಬೆಂಗಳೂರು ಆ ನಗರಿಯನ್ನೂ ಓವರ್‌ಟೇಕ್‌ ಮಾಡಲು ಇನ್ನು ಜಾಸ್ತಿ ಕಾಲವಂತೂ ಬೇಡ.

ಇಂತಿಪ್ಪ ಬೆಂಗಳೂರಿನಲ್ಲಿ ಆ್ಯಕ್ಸಿಡೆಂಟಾದರೆ… ಆರೋಗ್ಯದಲ್ಲಿ ಏರುಪೇರಾಗಿ ರಕ್ತದ ಅಗತ್ಯಬಿದ್ದರೆ… ಹುಟ್ಟಿಕೊಳ್ಳುವ ಏಕೈಕ ಪ್ರಶ್ನೆ: “ಬ್ಲಡ್‌ ಬ್ಯಾಂಕ್‌ ಎಲ್ಲಿದೆ?’. ರಕ್ತ ಎಲ್ಲಿ ಸುಲಭವಾಗಿ ಸಿಗುತ್ತೆ ಎನ್ನುವ ಅರಿವೂ ಈ ಹೊತ್ತಿನಲ್ಲಿ ಬಹಳ ಮುಖ್ಯ. ಬೇಸಿಗೆಯ ಅಂಚಿನಲ್ಲಿರುವ ನಗರಿಯಲ್ಲಿ, ನೂರಾರು ರಕ್ತದಾನ ಶಿಬಿರಗಳು ಜರುಗಿವೆ. ಹಾಗೆ ಮಳೆಗಾಲ ಕಾಲಿಡುತ್ತಿದ್ದಂತೆ, ಜ್ವರ, ಇನ್ನಿತರ ಕಾಯಿಲೆಗಳು ದಾಳಿ ಇಟ್ಟು, ಮನುಷ್ಯನನ್ನು ಆಪತ್ತಿಗೆ ತಳ್ಳುವ ಸಾಧ್ಯತೆಯೂ ಇರುತ್ತದೆ. ಈ ವೇಳೆ ಖಂಡಿತ ರಕ್ತದ ಅಗತ್ಯ ಬೀಳುತ್ತದೆ. ಆಗಲೇ, ಬ್ಲಿಡ್‌ ಬ್ಯಾಂಕ್‌ ನೆನಪಾಗುತ್ತದೆ.

ಯಾವ ರಕ್ತಕ್ಕೆ ಬೇಡಿಕೆ ಹೆಚ್ಚು?

ಬೆಂಗಳೂರು ನಗರದಲ್ಲಿ “ಎ’ ನೆಗೆಟಿವ್‌, “ಬಿ’ ನೆಗೆಟಿವ್‌, “ಒ’ ನೆಗೆಟಿವ್‌, “ಎಬಿ’ ನೆಗೆಟಿವ್‌, “ಬಾಂಬೆ ಒ’ ನೆಗೆಟಿವ್‌ ರಕ್ತದ ಗುಂಪಿಗೆ ಅಪಾರ ಬೇಡಿಕೆಯಿದೆ. ನೆಗೆಟಿವ್‌ ಗ್ರೂಪ್‌ನ ರಕ್ತವು ಬೇಡಿಕೆಗಿಂತ ಪೂರೈಕೆ ಕಡಿಮೆ ಇರುವುದರಿಂದ, ಅದು ಸದಾ ಕೊರತೆಯಲ್ಲೇ ಇರುತ್ತದೆ. “ಒ’ ಪಾಸಿಟಿವ್‌ ರಕ್ತ ಎಲ್ಲೆಡೆ ಲಭ್ಯವಿರುತ್ತದೆ. 100 ಜನರಿಗೆ ರಕ್ತದ ಅವಶ್ಯಕತೆ ಇದ್ದಾಗ, ಅದರಲ್ಲಿ ಕನಿಷ್ಠ 50- 60 ಜನ “ಒ’ ಪಾಸಿಟಿವ್‌ ರಕ್ತದ ಗುಂಪಿಗೆ ಸೇರಿದವರಾಗಿರುತ್ತಾರೆ.

ಅತಿ ವಿರಳವಾದ ರಕ್ತದ ಅವಶ್ಯಕತೆ ಕಂಡುಬಂದಾಗ ಆ ಗುಂಪಿನ ರಕ್ತ ಹೊಂದಿರುವ ದಾನಿಯನ್ನು ಹುಡುಕಿ, ಅವರಿಂದಲೇ ರಕ್ತದಾನ ಮಾಡಿಸುವುದು ಉತ್ತಮ. ಬೆಂಗಳೂರಿನ ಬಹುತೇಕ ರಕ್ತನಿಧಿ ಕೇಂದ್ರದಲ್ಲಿ ಅತಿವಿರಳ ರಕ್ತದ ಕೊರತೆ ಬಹಳ ಇದೆ.

ಬ್ಲಡ್‌ ಬ್ಯಾಂಕ್‌ಗೆ ಹೋಗುವ ಮುನ್ನ…
– ಅವಶ್ಯಕತೆಗೆ ಅನುಗುಣವಾಗಿ ರಕ್ತ ಮತ್ತು ರಕ್ತದ ಉತ್ಪನ್ನಗಳನ್ನು ಪರವಾನಿಗೆ ಹೊಂದಿದ ರಕ್ತನಿಧಿಗಳಿಂದ ಪಡೆಯಬೇಕು. 

– ರಕ್ತದ ಲೇಬಲ್‌ ಮೇಲೆ ರಕ್ತದ ಗುಂಪು, ರಕ್ತವನ್ನು ಸಂಗ್ರಹಿಸಿದ ದಿನಾಂಕ, ಅವಧಿ ಮುಗಿಯುವ ದಿನಾಂಕ ಇತ್ಯಾದಿಗಳನ್ನು ನಮೂದಿಸಿರುವ ಬಗ್ಗೆ ಪರಿಶೀಲಿಸಿ, ರಕ್ತ ಪಡೆಯಬೇಕು.

– ಲೇಬಲ್‌ ಇಲ್ಲದ ರಕ್ತ ಮತ್ತು ರಕ್ತದ ಉತ್ಪನ್ನಗಳನ್ನು ಯಾವುದೇ ಕಾರಣಕ್ಕೂ ಪಡೆಯಬಾರದು. 

– ರಕ್ತ ಪಡೆಯುವ ಮೊದಲು ದಾನಿಯ ರಕ್ತದೊಂದಿಗೆ ರೋಗಿಯ ರಕ್ತವನ್ನು ಹೊಂದಾಣಿಕೆ ಮಾಡಲಾಗಿದೆಯೇ ಎಂಬುದನ್ನು ಗಮನಿಸಿರಬೇಕು.

– ರಕ್ತವು ಎಚ್‌ಐವಿ-1 ಮತ್ತು 2, ಎಚ್‌ಬಿಎಸ್‌ಎಜಿ, ಎಚ್‌ಸಿವಿ, ವಿಡಿಆರ್‌ಎಲ್‌, ಮಲೇರಿಯಾ, ರಕ್ತದ ಗುಂಪು ಮತ್ತು ಆರ್‌ಎಚ್‌ ಫ್ಯಾಕ್ಟರ್‌ಗಳ ಪರೀಕ್ಷೆಗೆ ಒಳಪಟ್ಟಿದೆಯೇ ಎಂಬುದನ್ನು ತಪ್ಪದೇ ತಿಳಿದುಕೊಳ್ಳಬೇಕು.

– ರಕ್ತ ನಿಧಿಗಳಲ್ಲಿ ರಕ್ತ ಪಡೆಯುವಾಗ ರಕ್ತದ ಬಣ್ಣ ಕೆಟ್ಟಿರುವುದು ಅಥವಾ ರಕ್ತ ಹೆಪ್ಪು ಗಟ್ಟಿರುವುದು ಕಂಡುಬಂದಲ್ಲಿ ಅಂಥ ರಕ್ತವನ್ನು ಪಡೆಯಬಾರದು. 

– ರಕ್ತದಾನ ಮಾಡುವಾಗ ಅಥವಾ ರಕ್ತ ಪಡೆಯುವಾಗ ರಕ್ತದ ವಿಧಗಳು ಬಹಳ ಮುಖ್ಯವಾಗುತ್ತದೆ. ತಪ್ಪು ವಿಧದ ರಕ್ತ ಪಡೆದರೆ, ಅವಘಡ ಕಟ್ಟಿಟ್ಟಬುತ್ತಿ.

ರಕ್ತದ ವಿಧಗಳು
ಎ, ಬಿ, ಎಬಿ ಮತ್ತು ಒ

ಹುಷಾರು…
“ರೋಗಿಯ ಸ್ಥಿತಿ ಚಿಂತಾಜನಕವಾಗಿದ್ದು, ತುರ್ತು ರಕ್ತ ಬೇಕಾಗಿದೆ. ದಯವಿಟ್ಟು, ಈ ನಂಬರ್‌ಗೆ ಕರೆಮಾಡಿ ಮತ್ತು ಈ ಸಂದೇಶವನ್ನು ಆದಷ್ಟು ಜನರಿಗೆ ಫಾರ್ವರ್ಡ್‌ ಮಾಡಿ’ ಎಂಬ ಸಂದೇಶ ಇತ್ತೀಚಿನ ದಿನಗಳಲ್ಲಿ ವಾಟ್ಸಾéಪ್‌, ಫೇಸ್‌ಬುಕ್ಕುಗಳಲ್ಲಿ ಸಾಮಾನ್ಯವಾಗಿದೆ. ನಂಬರ್‌ ಸರಿ ಇದೆಯೇ ಎಂಬುದನ್ನು ಮೊದಲು ಪರಿಶೀಲಿಸಬೇಕು. ನಿಜವಾಗಿಯೂ ರಕ್ತದ ಅವಶ್ಯಕತೆ ಇದ್ದ ಸಂದರ್ಭದಲ್ಲಿ ಸಂದೇಶ ಕಳುಹಿಸುವಾಗ ದಿನಾಂಕ, ಆಸ್ಪತ್ರೆ ಹಾಗೂ ಮೊಬೈಲ್‌ ಸಂಖ್ಯೆಯನ್ನು ಸ್ಪಷ್ಟವಾಗಿ ನಮೂದಿಸಬೇಕು.

ಡಾಕ್ಟರ್‌ ಹೇಳ್ತಾರೆ…
ತುರ್ತು ಸಂದರ್ಭದಲ್ಲಿ ರಕ್ತದ ಅವಶ್ಯಕತೆ ಇದ್ದಾಗ  ಸರ್ಕಾರದ ಸಹಾಯವಾಣಿ 104 ಅಥವಾ ಸಂಕಲ್ಪ್ ಇಂಡಿಯಾ ಫೌಂಡೇಷನ್‌ನ ಹೆಲ್ಪ್ಲೈನ್‌ 9480044444ಗೆ ಕರೆಮಾಡಿ. ನಿಮ್ಮ ಅವಶ್ಯಕತೆಯ ರಕ್ತ, ಯಾವ ರಕ್ತನಿಧಿಯಲ್ಲಿದೆ ಎಂಬುದನ್ನು ಅವರು ತಿಳಿಸುತ್ತಾರೆ. ಡ್ರಗ್ಸ್‌ ಕಂಟ್ರೋಲ್‌ ಬೋರ್ಡ್‌ನಿಂದ ಪರವಾನಿಗೆ ಪಡೆದ ರಕ್ತನಿಧಿಗಳಲ್ಲಿ ಲಭ್ಯವಿರುವ ರಕ್ತದ ಮಾಹಿತಿಯನ್ನು ಈ ಸಹಾಯವಾಣಿಯ ಮೂಲಕ ತಿಳಿಯಬಹುದು.
– ಡಾ. ಸುಮಿತ್ರಾ

ಬೆಂಗ್ಳೂರಿನ ಟಾಪ್‌ 10 ರಕ್ತನಿಧಿಗಳು
1. ಎಂ.ಎಸ್‌.ರಾಮಯ್ಯ ಮೆಡಿಕಲ… ಟೀಚಿಂಗ್‌ ಆಸ್ಪತ್ರೆ
9845120603, 080- 22183100
2. ರಾಷ್ಟ್ರೋತ್ಥಾನ ರಕ್ತನಿಧಿ
9480436702, 080- 26610916
3. ಬೌರಿಂಗ್‌ ಮತ್ತು ಲೇಡಿ ಕರ್ಜನ್‌ ಆಸ್ಪತ್ರೆ
9449621169, 080- 25327714
4. ಜಯದೇವ ಹೃದ್ರೋಗ ಸಂಸ್ಥೆ
9886812718, 080- 26534600
5. ವೈದೇಹಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಮತ್ತು ಆಸ್ಪತ್ರೆ
9916749060, 080- 28410874
6. ಕಿಮ್ಸ… ಆಸ್ಪತ್ರೆ 
9448559664, 080- 080- 2667 3056
7. ಟ್ರಾನ್ಸ್‌ಪ್ಯೂಷನ್‌ ಮೆಡಿಸಿನ್‌ ಸೆಂಟರ್‌ (ನಿಮ್ಹಾನ್ಸ್‌ )
9448509793, 080- 2665712
8. ಸಂಜೀವಿನಿ ಟ್ರಸ್ಟ್‌, ಜಯನಗರ, ವಾಲೆಂಟರಿ ರಕ್ತನಿಧಿ
9342171911, 080- 26494748
9. ಕೆ.ಸಿ. ಸಾರ್ವಜನಿಕ ಆಸ್ಪತ್ರೆ ರಕ್ತನಿಧಿ
9742279098, 080- 23567673
10. ಶ್ರೀ ಸತ್ಯಸಾಯಿ ವೈದ್ಯಕೀಯ ವಿಜ್ಞಾನ ಸಂಸ್ಥೆ 
9741597101/ 080- 28411500

ಜಾಲತಾಣಕ್ಕೆ ಭೇಟಿ ನೀಡಿ
www.friends2support.org
www.sankalpindia.net
www.bloodhelpers.com
www.bharatbloodbank.com

ಫೇಸ್‌ಬುಕ್‌ ಪೇಜ್‌
https://www.facebook.com/BloodDonorsOnline/
https://www.facebook.com/Voluntary-blood-donors-in-bangalore-336824313025939/

1. Blood Banking
ವಿಶೇಷತೆ: ಬ್ಯಾಂಕ್‌ ಮಾದರಿಯ ಖಾತೆ, ಉಳಿತಾಯ, ಟ್ರಾನ್ಸ್‌ಫ‌ರ್‌ ಮುಂತಾದ ವಿಭಾಗ ಹೊಂದಿರುವ ಈ ಆ್ಯಪ್‌, ಎಲ್ಲರ ಮೊಬೈಲಿನಲ್ಲೂ ಇರಬೇಕಾದಂಥದ್ದು. ಬ್ಲಿಡ್‌ ಬ್ಯಾಂಕ್‌ಗಳ ಮಾಹಿತಿಗಳೂ ಇಲ್ಲಿ ಸಿಗುತ್ತವೆ.
ನಿರ್ಮಾತೃ: ಸೆಂಥಿಲ್‌ ಕುಮಾರ್‌, ಬೆಂಗಳೂರು

2.Ausodhyatmika
ವಿಶೇಷತೆ: 100 ಕಿಲೋಮೀಟರ್‌ ಅಂತರದಲ್ಲಿರುವ ರಕ್ತನಿಧಿಗಳ ಮಾಹಿತಿ ಸಿಗುತ್ತದೆ. ಅಗತ್ಯವಿರುವ ರಕ್ತ ಯಾವ ನಿಧಿಯಲ್ಲಿದೆ ಎಂಬುದರ ಮಾಹಿತಿ ಇಲ್ಲಿ ಲಭ್ಯ. 
ನಿರ್ಮಾತೃ: ಕೃಷ್ಣಕಾಂತ್‌ ತಿವಾರಿ, ಬೆಂಗಳೂರು

ರಾಜು ಖಾರ್ವಿ ಕೊಡೇರಿ

ಟಾಪ್ ನ್ಯೂಸ್

ವಿನಯ್ ಧಾರವಾಡ ಗ್ರಾಮೀಣದಿಂದಲೇ ಸ್ಪರ್ಧಿಸಬೇಕು: ರಕ್ತದಲ್ಲಿ ಪತ್ರ ಬರೆದ ಅಭಿಮಾನಿಗಳ ಧರಣಿ

ವಿನಯ್ ಧಾರವಾಡ ಗ್ರಾಮೀಣದಿಂದಲೇ ಸ್ಪರ್ಧಿಸಬೇಕು: ರಕ್ತದಲ್ಲಿ ಪತ್ರ ಬರೆದ ಅಭಿಮಾನಿಗಳ ಧರಣಿ

1-ascdsadasd

ಬೈಂದೂರು ಕ್ಷೇತ್ರಕ್ಕೆ ಬಿಜೆಪಿಯಿಂದ ಮುನಿಯಾಲು ಉದಯಕುಮಾರ್ ಶೆಟ್ಟಿ ಹೆಸರು ಪ್ರಸ್ತಾಪ

Ra

ಜೈಲು ಶಿಕ್ಷೆ ವಿರುದ್ಧ ರಾಹುಲ್ ಗಾಂಧಿ ನಾಳೆ ಸೂರತ್ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ

ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಪ್ರಯಾಣಿಕರ ಬಸ್: 2 ಮೃತ್ಯು, ಹಲವರಿಗೆ ಗಾಯ

ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಬಸ್: 2 ಮೃತ್ಯು, ಹಲವರಿಗೆ ಗಂಭೀರ ಗಾಯ

1-sadsdsad

ಕುನೋ ಉದ್ಯಾನವನದಿಂದ ಸಮೀಪದ ಗ್ರಾಮ ಪ್ರವೇಶಿಸಿದ ಚೀತಾ!; ವಿಡಿಯೋ

‘ನಸ್ರುಲ್ಲಗಂಜ್’ ಪಟ್ಟಣದ ಹೆಸರನ್ನು ‘ಭೈರುಂಡಾ’ ಎಂದು ಬದಲಾಯಿಸಿದ ಮಧ್ಯಪ್ರದೇಶ ಸರ್ಕಾರ

‘ನಸ್ರುಲ್ಲಗಂಜ್’ ಪಟ್ಟಣದ ಹೆಸರನ್ನು ‘ಭೈರುಂಡಾ’ ಎಂದು ಬದಲಾಯಿಸಿದ ಮಧ್ಯಪ್ರದೇಶ ಸರ್ಕಾರ

1-fwwewewqe

ಯಾವುದೇ ಕಾರಣಕ್ಕೂ ನಿತೀಶ್ ಕುಮಾರ್ ಪ್ರಧಾನಿಯಾಗುವುದಿಲ್ಲ: ಬಿಹಾರದಲ್ಲಿ ಗುಡುಗಿದ ಶಾ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bachuilar-of-coro

ಬ್ಯಾಚುಲರ್‌ ಆಫ್ ಕೊರೊನಾ

niffa-kanna

ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

yava-sama

ಯಾವ ಸಮಸ್ಯೆಯೂ ಶಾಶ್ವತವಲ್ಲ…

mole

ಮೊಳೆ ಕೀಳುವ ಸೈನಿಕರು

hiriyarige

ಹಿರಿಯರಿಗೆ ಟೆರೇಸೇ ಪಾರ್ಕು, ಮೈದಾನ

MUST WATCH

udayavani youtube

ಸ್ನೇಕ್ ಶಾಮ್ ಹಾವುಗಳ ರಕ್ಷಣೆಗೆ ಮುಂದಾಗಲು ಇದೇ ಕಾರಣ | ಸ್ನೇಕ್ ಶ್ಯಾಮ್ ಮನದಾಳದ ಮಾತು

udayavani youtube

ಎವರೆಸ್ಟ್ ಹತ್ತುವವರ ಊಟ ತಿಂಡಿ ಕ್ರಮ ಹೇಗಿರುತ್ತೆ ನೋಡಿ !

udayavani youtube

ಮೈಸೂರಿಗೆ ಬಂದವರು ಇಲ್ಲಿಗೊಮ್ಮೆ ಭೇಟಿ ಕೊಡಲೇಬೇಕು

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

ಹೊಸ ಸೇರ್ಪಡೆ

ವಿನಯ್ ಧಾರವಾಡ ಗ್ರಾಮೀಣದಿಂದಲೇ ಸ್ಪರ್ಧಿಸಬೇಕು: ರಕ್ತದಲ್ಲಿ ಪತ್ರ ಬರೆದ ಅಭಿಮಾನಿಗಳ ಧರಣಿ

ವಿನಯ್ ಧಾರವಾಡ ಗ್ರಾಮೀಣದಿಂದಲೇ ಸ್ಪರ್ಧಿಸಬೇಕು: ರಕ್ತದಲ್ಲಿ ಪತ್ರ ಬರೆದ ಅಭಿಮಾನಿಗಳ ಧರಣಿ

1-ascdsadasd

ಬೈಂದೂರು ಕ್ಷೇತ್ರಕ್ಕೆ ಬಿಜೆಪಿಯಿಂದ ಮುನಿಯಾಲು ಉದಯಕುಮಾರ್ ಶೆಟ್ಟಿ ಹೆಸರು ಪ್ರಸ್ತಾಪ

Ra

ಜೈಲು ಶಿಕ್ಷೆ ವಿರುದ್ಧ ರಾಹುಲ್ ಗಾಂಧಿ ನಾಳೆ ಸೂರತ್ ಕೋರ್ಟ್ ಮೆಟ್ಟಿಲೇರುವ ಸಾಧ್ಯತೆ

1-saddsadsad

ಉತ್ತರಾಖಂಡದಲ್ಲಿ ಕಂದಕಕ್ಕೆ ಬಿದ್ದ 22 ಪ್ರಯಾಣಿಕರಿದ್ದ ಬಸ್

ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಪ್ರಯಾಣಿಕರ ಬಸ್: 2 ಮೃತ್ಯು, ಹಲವರಿಗೆ ಗಾಯ

ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿ ಬಿದ್ದ ಬಸ್: 2 ಮೃತ್ಯು, ಹಲವರಿಗೆ ಗಂಭೀರ ಗಾಯ