ನಿಫಾ ಕನ್ನಡಿಯಲ್ಲಿ ಕೊರೊನಾ ಬಿಂಬ

Team Udayavani, Mar 21, 2020, 6:13 AM IST

ಆ ಮನುಷ್ಯ ಜ್ವರದಿಂದ ತೂರಾಡುತ್ತಾ, ಕೆಮ್ಮುತ್ತಾ ಬಂದು ಆಟೋದೊಳಗೆ ಕೂರುತ್ತಾನೆ. ಚಾಲಕ ಅವನನ್ನು ಆಸ್ಪತ್ರೆಗೆ ಕರೆದೊಯ್ಯಲು ನಿರಾಕರಿಸುತ್ತಾನೆ. ಅಷ್ಟರಲ್ಲೇ ಬರುವ ಬೈಕ್‌ ಅನ್ನು ರೋಗಿ ಅಡ್ಡಹಾಕುತ್ತಾನೆ. “ಏಯ್‌ ನಿಲ್ಲಿಸ್ಬೇಡ, ಅವನಿಗೆ ನಿಫಾ ಇದೆ’ ಎನ್ನುವ ಆಟೋ ಚಾಲಕನ ಕೂಗು, ರೋಗಿಯ ಅಸಹಾಯಕ ಧ್ವನಿ, ಇಂದಿನ ಕೊರೊನಾ ಕಾಲಕ್ಕೂ ಕೇಳುವಂಥ ಪ್ರತಿಧ್ವನಿ.

ಕೊರೊನಾದಷ್ಟೇ ರಣಭೀಕರ ವೈರಸ್‌ ನಿಫಾ, ಈ ಹಿಂದೆ ಕೇರಳವನ್ನು ತಬ್ಬಿಬ್ಬಾಗಿಸಿತ್ತು. ಸಾಕಷ್ಟು ಜನರನ್ನು ಬಲಿಪಡೆದಿತ್ತು. ನಿಫಾ ಬಂದಾಗ ಸಮಾಜ ವರ್ತಿಸಿದ ರೀತಿಯನ್ನು “ವೈರಸ್‌’ ಚಿತ್ರ ನೈಜ ಕಥನದೊಂದಿಗೆ ಮನ ತಟ್ಟುವಂತೆ ಚಿತ್ರಿಸಿದೆ. ಝಕಾರಿಯಾ ಎನ್ನುವ ಸಾಮಾನ್ಯ ವ್ಯಕ್ತಿಯಿಂದ ಹರಡಿದ ಜ್ವರ, ನೂರಾರು ಜನರನ್ನು ದಾಟಿಕೊಂಡು, ಹಬ್ಬುತ್ತಾ ಹೋಗುತ್ತೆ.

ಇದ್ಯಾವ ಜ್ವರ? ಯಾರಿಂದ, ಹೇಗೆ ಹಬ್ಬಿತು? ಎನ್ನುವ ಡಾ. ಅನು ನಡೆಸುವ ಶೋಧವೇ, ಈ ಕಥೆಯ ರೋಚಕ ಓಟ. ಮನುಷ್ಯನ ಅಹಂನ ಕಟ್ಟಡವನ್ನು ಪುಟಾಣಿ ವೈರಸ್‌ ಹೇಗೆ ಧಸಕ್ಕನೆ ಕುಸಿದುಬೀಳುವಂತೆ ಮಾಡುತ್ತೆ ಎನ್ನುವ ಪಾಠ ಇಲ್ಲಿದೆ. ವೈರಸ್‌ಗಳು ಇಂಥ ರಣಭೀಕರ ಅವತಾರ ಎತ್ತಿದಾಗ, ವೈದ್ಯಲೋಕಕ್ಕೂ ಕಾಡುವ “ಪ್ಯಾನಿಕ್‌’ ಅತ್ಯಂತ ಕ್ಲೋಸಪ್‌ ಭಾವಗಳಲ್ಲಿ ತೋರಿಸಲಾಗಿದೆ.

ವೈದ್ಯನೊಬ್ಬ ತಾನು ಪ್ರೀತಿಸುತ್ತಿರುವ ಹುಡುಗಿಗೆ ನಿಫಾ ಬಂದಾಗ, ಸಾವಿನಂಚಿನಲ್ಲಿರುವ ಆಕೆಯನ್ನು ಪ್ರೀತಿ ತೋರಿಸಿಯೇ ಗುಣಮುಖವಾಗಿಸುವ ಸನ್ನಿವೇಶ ಮನೋಜ್ಞವಾಗಿದೆ. ಕೊರೊನಾ ಪೀಡಿತ ಸಮಾಜದ ಭವಿಷ್ಯದ ದಿನಗಳು ಹೇಗಿರಬಹುದು ಎನ್ನುವುದನ್ನು “ವೈರಸ್‌’ ಚಿತ್ರದ ಕನ್ನಡಿ ಮೂಲಕ ನಾವು ನೋಡಿಕೊಳ್ಳಬಹುದು.

ವೈರಸ್‌ (2019)
ಭಾಷೆ: ಮಲಯಾಳಂ
ಅವಧಿ: 152 ನಿಮಿಷ
ವೀಕ್ಷಣೆ: ಅಮೇಜಾನ್‌ಪ್ರೈಮ್‌ನಲ್ಲಿ ಲಭ್ಯ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಕೊರೊನಾಗೆ ವ್ಯಾಕ್ಸಿನ್ನಾದರೂ ಸಿಗಬಹುದು, ಆದರೆ, "ಒಂದು ಲೋಟ ರವೆಗೆ ಎಷ್ಟು ನೀರು ಹಾಕಬೇಕು?' ಎಂಬ ಬ್ಯಾಚುಲರ್‌ ಜೀವನದ ಮಿಲಿಯನ್‌ ಡಾಲರ್‌ ಪ್ರಶ್ನೆಗೆ ಉತ್ತರ...

  • ಕರೋನಾ ರಜೆಯನ್ನು ಶಾಲಾ ಮಕ್ಕಳ ಪೋಷಕರು ಸದುಪಯೋಗ ಮಾಡಿಕೊಳ್ಳಲು ಇದು ಒಳ್ಳೆಯ ಸಮಯ. ಮಧ್ಯಾಹ್ನದ ಹೊತ್ತು ಚೌಕಾಬಾರ, ಕೇರಂ, ಹುಲಿಕಲ್ಲಾಟ ಇಂಥವನ್ನು ಆಡಿ, ನೀವು...

  • ರಸ್ತೆಯ ಬದಿಯಲ್ಲೊಂದು ಮರ. ಅದರ ಮೇಲೆ ಏನೇನೋ ಜಾಹೀರಾತು. ಅದನ್ನು ನೋಡ್ಕೊಂಡು, ಮನಸ್ಸಿನಲ್ಲಿ ಏನೇನೋ ಲೆಕ್ಕಾಚಾರ ಹಾಕ್ಕೊಂಡು ಹೋಗುವ ನಮಗೆ, ಆ ಮರದ ಹಿಂದಿ ನೋವು...

  • -ಇಷ್ಟು ದಿನ ಟೆರೇಸ್‌ ಕೇವಲ ಬಟ್ಟೆ ಒಣಗಿಸುವ ಜಾಗವಾಗಿತ್ತು. ಆದರೆ, ಹಿರಿಯರ ಪಾಲಿಗೆ ಈಗ ಟೆರೇಸ್‌ ಕೂಡ ಪುಟ್ಟ ಮೈದಾನ. ಇದನ್ನೇ ವಾಕಿಂಗ್‌ಗೆ ಆಯ್ದುಕೊಳ್ಳುವುದು...

  • ಕಾಡು ನೋಡಲೆಂದೇ ಬೆಂಗಳೂರಿಗರು ಎಲ್ಲೆಲ್ಲಿಗೋ, ಬೈಕ್‌- ಕಾರನ್ನೇರಿಕೊಂಡು ಟ್ರಿಪ್‌ ಹೋಗುತ್ತಾರೆ. ಮತ್ತೆ ಕೆಲವರು ತಾವು ಇರುವಲ್ಲಿಯೇ ಕಾಡು ಸೃಷ್ಟಿಸುತ್ತಾರೆ....

ಹೊಸ ಸೇರ್ಪಡೆ