
ಮೊಳೆ ಕೀಳುವ ಸೈನಿಕರು
Team Udayavani, Mar 21, 2020, 6:11 AM IST

ರಸ್ತೆಯ ಬದಿಯಲ್ಲೊಂದು ಮರ. ಅದರ ಮೇಲೆ ಏನೇನೋ ಜಾಹೀರಾತು. ಅದನ್ನು ನೋಡ್ಕೊಂಡು, ಮನಸ್ಸಿನಲ್ಲಿ ಏನೇನೋ ಲೆಕ್ಕಾಚಾರ ಹಾಕ್ಕೊಂಡು ಹೋಗುವ ನಮಗೆ, ಆ ಮರದ ಹಿಂದಿ ನೋವು ಕಾಣಿಸುವುದೇ ಇಲ್ಲ. ಹೀಗೆ ಜಾಹೀರಾತು ಪೋಸ್ಟರ್ ಅಂಟಿಸುವವರು, ಮರಕ್ಕೆ ಮೊಳೆಗಳನ್ನು ಹೊಡೆದಿರುತ್ತಾರೆ.
ಒಂದೊಂದು ಮೊಳೆಯ ಹೊಡೆತಕ್ಕೂ ಆ ಮರ, ಅದೆಷ್ಟು ಬಾರಿ “ಅಯ್ಯೋ, ಅಮ್ಮಾ’ ಎಂದಿರಬಹುದು? ನೋವುಂಡ ಆ ಮರದ ಕೂಗು ಯಾರಿಗೆ ಕೇಳಿಸಿತೋ ಗೊತ್ತಿಲ್ಲ, ಆದರೆ ಇತ್ತೀಚೆಗೆ ಕರುನಾಡ ಸೇವಕರಿಗಂತೂ ಕೇಳಿಸಿತ್ತು. ಮಲ್ಲೇಶ್ವರ ಸುತ್ತಮುತ್ತ ಮರಗಳ ಮೇಲೆ, ವಿದ್ಯುತ್ ಕಂಬಗಳ ಮೇಲೆ ಹಾಕಿರುವ ಕಾನೂನು ಬಾಹಿರ ಭಿತ್ತಿಪತ್ರ ಮತ್ತು ಪೋಸ್ಟರ್‌ಗಳನ್ನು ತೆಗೆದು, ಮರಗಳ ರಕ್ಷಣೆಗೆ ಈ ಬಳಗ ಮುಂದಾಗಿತ್ತು.
ಅಲ್ಲದೆ, ಮರಗಳಿಗೆ ಉಸಿರು ಕಟ್ಟುವಂತೆ ಬಿಗಿದ ಕೇಬಲ್ ವಯರ್‌ಗಳನ್ನೂ ತೆರವುಗೊಳಿಸಿ, ಇಡೀ ಮರವನ್ನು ಸ್ವತಂತ್ರಗೊಳಿಸಿದರು. “ನಮಗೆ ಮುಳ್ಳು ಚುಚ್ಚಿದಾಗ, ಮೊಳೆ ಚುಚ್ಚಿದಾಗ ಆಗುವಂಥ ನೋವಾಗುತ್ತೆ. ಹಾಗೆಯೇ ಮರಗಳೂ ನಮ್ಮಂತೆ ಜೀವಿಗಳು. ಇದನ್ನು ಅರಿತೇ ನಾವು ನೂರಾರು ಮರಗಳಿಗೆ ಹೊಡೆಯಲಾಗಿದ್ದ ಮೊಳೆಗಳನ್ನು ತೆಗೆದುಹಾಕಿದೆವು’ ಎನ್ನುತ್ತಾರೆ, ಕರುನಾಡ ಬಳಗದ ರೂವಾರಿ ರೂಪೇಶ್ ರಾಜಣ್ಣ.
ಟಾಪ್ ನ್ಯೂಸ್
