ಪಂಚವಟಿ ಪರ್ಯಟನೆ

Team Udayavani, Dec 14, 2019, 6:10 AM IST

ಅಲ್ಲಿಯ ತನಕ ಪ್ರಶಾಂತವಾಗಿದ್ದ ರಾಮನ ಬದುಕಿನಲ್ಲಿ ಕಾಣದ ಕಲ್ಲೊಂದು ಬೀಳುವುದು, ಇದೇ ಪಂಚವಟಿಯಲ್ಲಿಯೇ. ಸುಖೀಯಾಗಿದ್ದ ರಾಮನ ದಾಂಪತ್ಯದ ಮೇಲೆ ರಾವಣನ ದೃಷ್ಟಿ ಬಿದ್ದಿದ್ದು, ಸೀತಾಪಹರಣಕ್ಕಾಗಿ ಶೂರ್ಪನಖೀ ಪ್ರವೇಶಿಸಿದ್ದು, ಇದೇ ಗೋದಾವರಿಯ ತೀರದಲ್ಲಿ…

ಐದು ಆಲದ ಮರಗಳು ಒಟ್ಟಿಗೆ ಇರುವ ಸುಂದರ ತಾಣವೇ ಪಂಚವಟಿ. ಗೋದಾವರಿ ತಟದ ಈ ತಂಪು ನೆಲದಲ್ಲಿ ಸುಮ್ಮನೆ ಕೆಲಹೊತ್ತು ಕಳೆದರೆ, ತನುಮನಗಳಿಗೆ ಅಪಾರ ಆನಂದ ದಕ್ಕುತ್ತದೆ. ಇಲ್ಲಿನ ಪರಿಸರ ಅಷ್ಟೊಂದು ಪ್ರಶಾಂತ ಮತ್ತು ರಮ್ಯವೂ ಆಗಿದೆ. ರಾಮಾಯಣ ಕಾಲದಲ್ಲೂ ಪಂಚವಟಿ ಹೀಗೆಯೇ ಇತ್ತೇ? ದಂಡಕಾರಣ್ಯದ ಒಂದು ಭಾಗದಲ್ಲಿದ್ದ ಪಂಚವಟಿ, ಅತಿಸುಂದರವೇ ಇತ್ತೆಂಬುದು ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖವಾದ ರೂಪಕಗಳಿಂದ ತಿಳಿಯುತ್ತದೆ.

ರಾಮ- ಸೀತೆ ಇಲ್ಲಿಗೆ ಬಂದ ಆರಂಭದಲ್ಲಿ ಅತ್ಯಂತ ಖುಷಿಯ ದಾಂಪತ್ಯ ನಡೆಸಿದ್ದರಂತೆ. ಆದರೆ, ನಂತರದ ದಿನಗಳು ಸಂಘರ್ಷಕ್ಕೆ ಮುನ್ನುಡಿ ಬರೆದವು. ಅಲ್ಲಿಯತನಕ ಪ್ರಶಾಂತವಾಗಿದ್ದ ರಾಮನ ಬದುಕಿನಲ್ಲಿ ಕಾಣದ ಕಲ್ಲೊಂದು ಬೀಳುವುದು, ಇದೇ ಪಂಚವಟಿಯಲ್ಲಿಯೇ. ಸುಖೀಯಾಗಿದ್ದ ರಾಮನ ದಾಂಪತ್ಯದ ಮೇಲೆ ರಾವಣನ ದೃಷ್ಟಿ ಬಿದ್ದಿದ್ದು, ಸೀತಾಪಹರಣಕ್ಕಾಗಿ ಶೂರ್ಪನಖೀ ಪ್ರವೇಶಿಸಿದ್ದು, ಇದೇ ಗೋದಾವರಿಯ ತೀರದಲ್ಲಿ.

ರಾಮಾಯಣದ ಕಥೆಗೆ ಪುಷ್ಟಿ ನೀಡುವಂಥ ಕುರುಹುಗಳು, ಪ್ರವಾಸಿಗರಿಗೆ ಈಗಲೂ ವಿಸ್ಮಯ ಹುಟ್ಟಿಸುತ್ತಿವೆ. ಪಂಚವಟಿಯು ಮಹಾರಾಷ್ಟ್ರದ ನಾಸಿಕ್‌ ನಗರದ ಒಂದು ಭಾಗ. ಗೋದಾವರಿಯ ಎಡಭಾಗವು “ನಾಸಿಕ್‌’ ಆಗಿಯೂ, ಬಲಭಾಗವು “ಪಂಚವಟಿ’ ಆಗಿಯೂ, ಇಂದಿಗೂ ಹಲವು ಕತೆಗಳನ್ನು ಹೇಳುತ್ತಿವೆ. ಪ್ರತಿ 12 ವರ್ಷಕ್ಕೊಮ್ಮೆ ನಾಸಿಕ್‌ ಕುಂಭಮೇಳದೊಂದಿಗೆ, ಜಗತ್ತನ್ನು ಸೆಳೆಯುವಂಥ ಶ್ರದ್ಧಾಕೇಂದ್ರವೂ ಆಗಿದೆ.

ಕಲಾ ರಾಮ ಮಂದಿರ: ಇಲ್ಲಿಗೆ ಬಂದವರು ಮೊದಲು ನೋಡುವುದೇ, ಕಲಾರಾಮ ಮಂದಿರವನ್ನು. ರಾಮಾಯಣ ಕಾಲದಲ್ಲಿ, ರಾಮ- ಲಕ್ಷ¾ಣ- ಸೀತೆ ಇದೇ ಜಾಗದ ಗುಡಿಸಲಿನಲ್ಲಿ ವಾಸವಿದ್ದರು ಎನ್ನುವ ನಂಬಿಕೆಯಿದೆ. ಇಲ್ಲಿ ತ್ರಿಮೂರ್ತಿಗಳ ಮಂದಿರವೂ ಇದ್ದು, ವರ್ಷದ ಎರಡು ಪ್ರಮುಖ ಉತ್ಸವದ ದಿನಗಳಲ್ಲಿ ಇದರ ಮೇಲೆ ಸೂರ್ಯನ ಕಿರಣಗಳು ಬೀಳುತ್ತವೆ ಎನ್ನುವುದು ವಿಶೇಷ.

ಸೀತಾ ಗುಹೆ: ಸೀತಾ ಮಾತೆ ಶಿವನ ಭಕ್ತೆಯೂ ಆಗಿದ್ದಳು. ಪಂಚವಟಿಯಲ್ಲಿ ಇದ್ದಷ್ಟು ದಿನ, ಈಕೆ ಈ ಗುಹೆಯಲ್ಲಿ ಶಿವನನ್ನು ಆರಾಧಿಸುತ್ತಿದ್ದಳು ಎನ್ನುವ ನಂಬಿಕೆಯಿದೆ. ಇಲ್ಲಿ 5 ಬೃಹತ್‌ ಆಲದ ಮರಗಳಿದ್ದು, ಅದರ ನೆರಳಿನಲ್ಲಿ ಕೆಲ ಹೊತ್ತು ಕಳೆಯಬಹುದು. ರಾವಣನು ಸೀತೆಯನ್ನು ಅಪಹರಿಸಿದ ತಾಣವೂ ಇದೇ ಎಂದು ಹೇಳಲಾಗುತ್ತದೆ.

ಕಪಾಲೇಶ್ವರ: ಇಲ್ಲೊಂದು ರಾಮಕುಂಡವಿದ್ದು, ಮರ್ಯಾದಾ ಪುರುಷೋತ್ತಮನು ಈ ಕುಂಡದಲ್ಲಿಯೇ ಸ್ನಾನ ಮಾಡುತ್ತಿದ್ದ ಎಂದು ಜನ ನಂಬುತ್ತಾರೆ. ಇಲ್ಲಿಗೆ ಆಗಮಿಸುವ ಅನೇಕ ಭಕ್ತರು ರಾಮಕುಂಡದಲ್ಲಿ ಮುಳುಕು ಹೊಡೆದು, ರಾಮನಾಮ ಸ್ಮರಣೆ ಮಾಡುತ್ತಾರೆ. ಈ ಕುಂಡದಿಂದ 43 ಮೆಟ್ಟಿಲುಗಳು ಮೇಲೇರಿದರೆ ಸಿಗುವುದು ಕಪಾಲೇಶ್ವರನ ಸನ್ನಿಧಾನ. ಇದು ಭಾರತದ ಅತ್ಯಂತ ವಿಶಿಷ್ಟ ಶಿವಮಂದಿರಗಳಲ್ಲಿ ಒಂದು.

ಇಲ್ಲಿ ನಂದಿಯು ಶಿವನ ಗರ್ಭಗುಡಿಯ ಮುಂದೆ ಇರದೇ, ಹಿಂಭಾಗದಲ್ಲಿದೆ ಹಾಗೂ ಶಿವನ ಮೂರ್ತಿಗಿಂತ ಎತ್ತರವಿದೆ. ಇದರ ಸಮೀಪದಲ್ಲೇ, ಗೋದಾವರಿ ದೇವಿಯ ದೇವಸ್ಥಾನವನ್ನೂ ಕಾಣಬಹುದು. 12 ವರ್ಷಗಳಿಗೊಮ್ಮೆ, ಕುಂಭಮೇಳದ ಸಮಯದಲ್ಲಷ್ಟೇ ಈ ದೇಗುಲದ ಬಾಗಿಲುಗಳನ್ನು ತೆರೆಯುತ್ತಾರೆ. ಪಂಚವಟಿಯಲ್ಲಿ ವರ್ಣಚಿತ್ರಗಳು ರಾಮಾಯಣ ಕಾಲದ ದೃಶ್ಯಗಳನ್ನು ಕಣ್ಣೆದುರು ನಿಲ್ಲಿಸುವಷ್ಟು ಕಲಾತ್ಮಕವೂ, ಕಣ್ಮನಗಳಿಗೆ ಆನಂದವನ್ನೂ ನೀಡುವಂತಿದೆ.

ದಂಡಕಾರಣ್ಯವಾಗಿದ್ದ ಕಾರಣ, ಆ ಕಾಲದಲ್ಲಿ ದಟ್ಟ ಕಾಡಿತ್ತು. ಅಂದು ಇಲ್ಲಿ ಮಧ್ಯಾಹ್ನ ಘಟಿಸಿದ್ದ ಸೂರ್ಯಗ್ರಹಣದಿಂದಾಗಿ, ಪಂಚವಟಿಯನ್ನು ಸಂಪೂರ್ಣ ಕತ್ತಲು ಆವರಿಸಿತ್ತು. ಪಕ್ಷಿಗಳೆಲ್ಲ ಗೂಡು ಸೇರಿದ್ದವು. ಆಕಾಶದಲ್ಲಿ ಗ್ರಹಗಳು ಕಾಣಿಸುತ್ತಿದ್ದವು ಎಂದು ವಾಲ್ಮೀಕಿ ಮಹರ್ಷಿ ವರ್ಣಿಸುತ್ತಾರೆ. ಆದರೆ, ಇಂದು ಪಂಚವಟಿಯಲ್ಲಿ ಆ ಪ್ರಮಾಣದ ಅರಣ್ಯವೇನೂ ಇಲ್ಲ. ನಾಸಿಕ್‌, ಜಿಲ್ಲಾಕೇಂದ್ರವೂ ಆಗಿರುವುದರಿಂದ, ಪಂಚವಟಿ ಪ್ರಗತಿಯತ್ತಲೂ ಮುಖಮಾಡಿದೆ.

ಇದುವೇ ಮಾರ್ಗ…: ಪಂಚವಟಿಯ ಸಮೀಪವೇ ಇರುವ ನಾಸಿಕ್‌ನಲ್ಲಿ ವಿಮಾನ ನಿಲ್ದಾಣವೂ ಇದೆ. ಅಲ್ಲಿಂದ ಪಂಚವಟಿಗೆ ಕೇವಲ 20 ಕಿ.ಮೀ. ಅಂತರ. ನಾಸಿಕ್‌ನಲ್ಲಿ ರೈಲ್ವೆ ನಿಲ್ದಾಣವೂ ಇದ್ದು, ಅಲ್ಲಿಂದ ಕೇವಲ 10 ಕಿ.ಮೀ. ಆಗುತ್ತದೆ. ಬೇಕಾದಷ್ಟು ಬಸ್‌ ವ್ಯವಸ್ಥೆಯೂ ಇದೆ.

* ಡಾ. ಸುಹಾಸ್‌ ರೈ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಕರಾವಳಿಯ ಕಂಬಳದ ಕಹಳೆ ಜಗದಗಲ ಮೊಳಗಿದೆ. ಕಂಬಳ ಓಟಗಾರನಿಗೆ ಬಹುಪರಾಕ್‌ ಸಿಗುತ್ತಲೇ ಇದೆ. ರಾಜ್ಯಕ್ರೀಡಾಕೂಟದಲ್ಲೂ ಕಂಬಳ ಪ್ರವೇಶಿಸುವ ಮಾತುಗಳು ಕೇಳಿಬರುತ್ತಿವೆ....

  • ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ ಈಗಾಗಲೇ ಆಸೆ- ನಿರೀಕ್ಷೆಗಳ ತೋರಣ ಕಟ್ಟಿದೆ. ಫೆ.26ರಿಂದ ಮಾ.4ರ ವರೆಗೆ, 7 ದಿನಗಳ ಕಾಲ, ವಿಶ್ವದ ಅನೇಕ ದೇಶಗಳಲ್ಲಿ ಪ್ರಸಿದ್ಧಿ...

  • ಕೈಗಳೇ ಇಲ್ಲದವರು ಕಲಾವಿದರಾಗಬಹುದಾ? ಕಾಲಿನಲ್ಲೋ, ಬಾಯಿಯಲ್ಲೋ ಬ್ರಷ್‌ ಕಚ್ಚಿಕೊಂಡು ಗೆರೆ ಎಳೆಯಲು, ಕಲ್ಪನೆಗೆ ಬಣ್ಣ ತುಂಬಲು ಸಾಧ್ಯವಾ? ಸಿಕೆಪಿಯಲ್ಲಿ ಇದಕ್ಕೆ...

  • ಕನ್ನಡ, ಹಿಂದಿ ಚಿತ್ರಭೂಮಿಕೆಗಳಲ್ಲಿ ನಟಿಸಿದ್ದ, ಹಿರಿಯ ಅಭಿನೇತ್ರಿ ಕಿಶೋರಿ ಬಲ್ಲಾಳ್‌ ಇತ್ತೀಚೆಗಷ್ಟೇ ಇಹವನ್ನು ಅಗಲಿದರು. ಆಪ್ತ ಬಳಗದಲ್ಲಿ ಅವರು ಬಿತ್ತಿದ...

  • ರಾವಣ, ಸೀತೆಯನ್ನು ಅಪಹರಿಸಿ, ಲಂಕೆಗೆ ಕರೆತಂದಿದ್ದಾನೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ ರಾಮ ಬಳಗದಲ್ಲಿ ಮುಂದಿನ ಪ್ರಶ್ನೆ ಎದ್ದು ಕುಳಿತಿತ್ತು: ಲಂಕೆಗೆ ಹೋಗುವುದು...

ಹೊಸ ಸೇರ್ಪಡೆ