App ಮುಂದೆ ಟಿವಿ ಹ್ಯಾಪ್‌ ಮೋರೆ ?


Team Udayavani, Feb 25, 2019, 12:30 AM IST

tv-serial.jpg

ಕಿರುತೆರೆ ವೀಕ್ಷಕರಿಗೆ  ಮೊದಲಿನಷ್ಟು ಟೆನ್ಶನ್ ಇಲ್ಲ. ಜಾನಕಿಯ ತಾಯಿಗೆ ಸತ್ಯ ಗೊತ್ತಾಯ್ತಾ?  ಹಂಸಲೇಖ ಕಣ್ಣೀರು ಹಾಕಿದ್ದು ಏಕೆ ? ಟಿ.ಎನ್ನೆಸ್‌ ಏನು ವಾದ ಮಾಡಿದರು ಹೀಗೆ ಎಲ್ಲಾ ಸೀರಿಯಲ್‌ ಕೌತುಕಗಳನ್ನು ಆಯಾ ಸಮಯಕ್ಕೆ ನೋಡಿ ತಣಿಯುವ ಅನಿವಾರ್ಯವೂ ಇಲ್ಲ.  ದಿನದ 24 ಗಂಟೆಯಲ್ಲಿ ಯಾವಾಗ ಬೇಕಾದರೂ ನೋಡಬಹುದು. ಕಾರಣ, ಕನ್ನಡದ ಪ್ರತಿ ಮನರಂಜನ ಚಾನೆಲ್‌ಗ‌ಳದ್ದೂ ಒಂದೊಂದು ಆ್ಯಪ್‌ಗ್ಳಿರುವುದರಿಂದ, ಎಲ್ಲರ ಕೈಯಲ್ಲೂ ಆ್ಯಪಲ್ಲುಗಳೇ ಬಂದು,  ಟಿ.ವಿಯಷ್ಟೇ ಪ್ರಬಲವಾಗುವ ಇನ್ನೊಂದು  ಡಿಜಿಟಲ್‌ ಜಗುಲಿ ತೆರೆದು ಕೊಂಡಿದೆ.  ಹಾಗಾದರೆ ಟಿ.ವಿ ಗತಿ ಏನು? 

“ಜಾನಕಿ ಮನೆ ಹೊರಗೆ ಹೋಗ್ತಾಳೆ. ಅಪ್ಪನಿಗೆ ಮಗಳು ಅಂತ ಗೊತ್ತಿದ್ದರೂ ಅಮ್ಮನಿಗೆ ಅದು ಗೊತ್ತಿಲ್ಲ. ಇವತ್ತೇನಾಗುತ್ತೋ?  ರಾತ್ರಿ 9.30ಕ್ಕೆ ಟಿ.ವಿ ಮುಂದೆ ಪ್ರತಿಷ್ಠಾಪನೆ ಆಗಲೇಬೇಕು.  ಆದರೆ, ಈ ಹಾಳಾದ್‌ ಕರೆಂಟ್‌ ಹೋಗದೇ ಇದ್ದರೆ ಸಾಕಪ್ಪಾ…’ ಕೆ.ಆರ್‌ಪುರದ ಶಾಂತವೇಲು ಹೀಗೆ ಕೇಳಿಕೊಳ್ಳುತ್ತಿದ್ದರೆ, ಮಗ ಕೇಶವನಾರಾಯಣ ಒಳಗೊಳಗೇ ನಗುತ್ತಿದ್ದ. 

ಹಾಗೇನೆ, 

“ಇವತ್ತು ಪಾರುಗೆ ಅಮ್ಮೊàರು ಮನೆ ಜವಾಬ್ದಾರಿ ಕೊಡ್ತಾರಾ? ಈ ಪಾಚು ಶ್ರೀಮತಿ ನಿಜಕ್ಕೂ ಪ್ರಗ್ನೆಂಟಾ…   ಕಡೇ ಪಕ್ಷ ರೀಪೀಟ್‌ ಟೆಲಾಕಾಸ್ಟ್‌ನಲ್ಲಾದರೂ ನಿಜ ತಿಳ್ಕೊಬೇಕು’  ಅಮ್ಮ ಹೀಗೆ ತನ್ನಗೇ ತಾನೇ ಹೇಳಿಕೊಳ್ಳುತ್ತಿರಲು ಕೇವಶವನಾರಾಯಣನಿಗೆ ನಗುವ ಸರದಿ ಮತ್ತೆ ಬಂತು. ಏಕೆಂದರೆ ಅವನ ಕೈಯಲ್ಲಿ ಆ್ಯಪ್‌ ಇತ್ತು.

ನಿಜ, ಇವತ್ತು ಯಾರೂ ಕೂಡ ಸಿರಿಯಲ್‌ನ  ಸರಿಯಾದ ಸಮಯಕ್ಕೆ ನೋಡಬೇಕು ಅಂತ ಲೆಕ್ಕಾ ಹಾಕೋಲ್ಲ. ಮಾಯಾಮೃಗ, ಮುಕ್ತ ಮುಕ್ತ ಧಾರಾವಾಹಿ ಪ್ರಸಾರವಾಗುತ್ತಿದ್ದ ಕಾಲಮಾನದಲ್ಲಿ  ಕರೆಂಟ್‌ ಹೋದರೆ ಕೆ.ಇ.ಬಿಗೆ ಶಾಪದ ಸುರಿಮಳೆ ಗೈಯುತ್ತಿದ್ದವರೂ ಕೂಡ ಈಗ ನಿರಾಳರಾಗಿದ್ದಾರೆ.   ಏಕೆಂದರೆ, ಎಲ್ಲರ ಕೈಯಲ್ಲಿ ಆ್ಯಪ್‌ ಇದೆ. ಜಿಯೋ ನೆಟ್‌ವರ್ಕ್‌ ಬಂದ ಮೇಲಂತೂ ಹಳ್ಳಿ ಹಳ್ಳಿಗಳಲ್ಲಿ ಸ್ಮಾರ್ಟ್‌ಫೋನ್‌ ಇಟ್ಟುಕೊಂಡಿರುವ ಶಾಂತವೇಲು ಕೂಡ  ನಿಶ್ಚಿಂತೆಯಿಂದ ಧಾರಾವಾಹಿಗಳನ್ನು ಕಣ್ಣಿಗಿಳಿಸಿಕೊಳ್ಳುತ್ತಿದ್ದಾರೆ. 

ಕಾರಣ ಇಷ್ಟೇ. 

ಎಲ್ಲದಕ್ಕೂ ಟಿ.ವಿನೇ ಬೇಕು ಅಂತಿಲ್ಲ. ಧಾರಾವಾಹಿಗಳು ಟಿ.ವಿಗಳಲ್ಲಿ ಪ್ರಸಾರವಾದ ಕೆಲವೇ ಕ್ಷಣಗಳಲ್ಲೇ. ಆ್ಯಪ್‌ಗ್ಳಲ್ಲಿ ಪ್ರತ್ಯಕ್ಷವಾಗುತ್ತವೆ. ಅಲ್ಲಿ ಜಾಹೀರಾತಿನ ಕಿರಿಕಿರಿ  ಕಡಿಮೆ. ಇದ್ದರೂ, ಸೆಕೆಂಡುಗಳಲ್ಲಷ್ಟೇ. ಅಂದರೆ, ಟಿ.ವಿಯಂತೆ ಆ್ಯಪ್‌ನ ಪುಟ್ಟ ಜಾಹೀರಾತು ಪ್ರಪಂಚ ಕೂಡ ದೊಡ್ಡದಾಗಿ ತೆರೆದು ಕೊಳ್ಳಲು ಹವಣಿಸುತ್ತಿದೆ. ಹೀಗಾಗಿ, ಎಲ್ಲೇ ಇದ್ದರೂ, ಹೇಗೇ ಇದ್ದರೂ, ಏನೇ ಮಾಡುತ್ತಿದ್ದರೂ ಧಾರಾವಾಹಿಗಳು ನಿಮ್ಮನ್ನು ಹಿಂಬಾಲಿಸುತ್ತಿರುತ್ತವೆ;  ಬೆಡ್‌ ರೂಂ ಟು. ಟಾಯ್ಲೆಟ್‌.  ಇದರಿಂದ ಆಗಿರುವ ಇನ್ನೊಂದು ಲಾಭ ಏನೆಂದರೆ, ಹೆತ್ತವರು-ಮಕ್ಕಳು, ಅತ್ತೆ ಸೊಸೆ ನಡುವೆ ಧಾರಾವಾಹಿ ನೋಡಲು  ನಡೆಯುತ್ತಿದ್ದ “ಸೀರಿಯಲ್‌ಕದನ’ಗಳಿಗೂ ಬಿಗ್‌ ಬ್ರೇಕ್‌ ಸಿಕ್ಕಿದೆ.  ಟಿ.ವಿ ಚಾನೆಲ್‌ಗ‌ಳಿಗೆ ಟಿ. ವಿ ಅಲ್ಲದೇ ಆ್ಯಪ್‌ಗ್ಳೂ ಆದಾಯದ ಮೂಲವಾಗುತ್ತಿವೆ ಅನ್ನೋದು ಲಾಭದ ಮುಂದುವರಿದ ಕಂತು.  

ಕನ್ನಡದ ಮಟ್ಟಿಗೆ ಕಲರ್ಸ್‌ ಸಮೂಹದ್ದು ವೂಟ್‌, ಸುವರ್ಣ ಹಾಟ್‌ ಸ್ಟಾರ್‌, ಜೀ .ಟಿವಿ ಜೀ.ಫೈ  ಉದಯ ಟಿ.ವಿ  ಸನ್‌ ನೆಕ್ಸ್ಟ್ ಹೀಗೆ ಟಿ.ವಿ ಚಾನೆಲ್‌ಗೆ ಸಮಾನಾಂತರವಾಗಿ ಡಿಜಿಟಲ್‌ ಮಾಧ್ಯಮ (ಆ್ಯಪ್‌ಗ್ಳು) ಕೂಡ ತಮ್ಮದೇ ಆದ ವೀಕ್ಷಕರನ್ನು ಸೆಳೆಯಲು ಮುಂದಾಗಿವೆ. ಇದಲ್ಲದೇ,  ಹಾಟ್‌ ಸ್ಟಾರ್‌, ನೆಟ್‌ಫಿಕ್ಸ್‌ ಅಮೇಜಾನ್‌ ಪ್ರೈಂ ನಂಥ ಒಂದಷ್ಟು ಲೋಕ ಖ್ಯಾತಿಯ ಆ್ಯಪ್‌ಗ್ಳೂ ಇವೆ.  ಹೀಗಾಗಿ, ಇವತ್ತಿನ ಯುವ ಸಮುದಾಯದಲ್ಲಿ ಬಹುತೇಕರು ಸಿನಿಮಾ, ಸಂಗೀತ, ಧಾರಾವಾಹಿ, ರಿಯಾಲಿಟಿ ಶೋ, ಡಾಕ್ಯುಮೆಂಟರಿ ಯಾವುದೇ ಆಗಲಿ ಬೆಡ್‌ರೂಮಲ್ಲಿ ಕೂತು, ಅಂಗೈ ಅಗಲಿಸಿಕೊಂಡು ನೋಡುತ್ತಿದ್ದಾರೆ.  ಹೀಗಂತ 2018ರಲ್ಲಿ ಕನ್ಸೂಮರ್‌ ಟ್ರಾÂಕಿಂಗ್‌ ಅನ್ನೋ ಕಂಪೆನಿ ನಡೆಸಿದ  ಸಮೀಕ್ಷೆಯೇ ಹೇಳುತ್ತಿದೆ.  ಇದರಲ್ಲಿ 18ರಿಂದ 34 ವರ್ಷದ ವಯೋಮಾನದವರನ್ನು ಸರ್ವೆಗೆ ಬಳಸಿಕೊಳ್ಳಲಾಗಿದೆ.  ಅದರ ಪ್ರಕಾರ ನೆಟ್‌ಫಿಕ್ಸ್‌ ನಲ್ಲಿ ವೀಕ್ಷಕರು ಶೇ.39.7ರಷ್ಟು, ಯೂ ಟ್ಯೂಬ್‌ ಶೇ.17, ಕೇಬಲ್‌ ಮೂಲಕ ನೋಡುವವರು ಶೇ.12.6, ಅಮೇಜಾನ್‌ ಪ್ರೈಂ ಶೇ.3.4, ಇತರೆ 8.7ರಷ್ಟು ಹೀಗೆ ಗುರುತು ಮಾಡಿದೆ. 

ಅಂಕಿ ಅಂಶಗಳತ್ತ ಹೊರಳಿದರೆ-ನಮ್ಮಲ್ಲಿ ಈಗ  1.5 ಮಿಲಿಯನ್‌ ಸ್ಮಾರ್ಟಫೋನ್‌ ಬಳಕೆದಾರರು ಇದ್ದಾರೆ.  ಭಾರತದ ಸ್ಟ್ರೀಮಿಂಗ್‌ ಮಾರ್ಕೆಟ್‌ನಲ್ಲಿ ಶೇ. 45ರಷ್ಟು ಸ್ಮಾರ್ಟ್‌ ಫೋನ್‌ ಬಳಕೆದಾರರು ವೀಡಿಯೋ ಸ್ಟೀಮಿಂಗ್‌ ಆ್ಯಪ್‌ ಅನ್ನು ಇಟ್ಟುಕೊಂಡಿದ್ದಾರಂತೆ. ಇದರಲ್ಲಿ ಬಹುತೇಕರು ಗೃಹ ಸಂಬಂಧಿ ವೀಡಿಯೋಗಳನ್ನು ನೋಡುತ್ತಿದ್ದಾರಂತೆ.  ಇಂಡಿಯಾ ಟಿ.ವಿಯಂತೂ ಸೋಪು, ಬ್ರಷ್‌ಗಳಂಥ ಮನೆಗೆ ಅವಶ್ಯಕತೆ ಇರುವ ಸಾಮಗ್ರಿಗಳ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಿವೆ.  ಎಚ್‌ಬಿಓ, ಸ್ಟಾರ್‌ ಕೂಡ ಇದೇ ಹಾದಿಯಲ್ಲಿದೆ.  ಹಾಟ್‌ ಸ್ಟಾರ್‌ ಕ್ರಿಕೆಟ್‌ನಂಥ ಕ್ರೀಡೆಗಳ ಹಿಂದೆ ಬಿದ್ದಿದೆ.  ಜಿಯೋ ರಿಯಾಯಿತಿ ದರದಲ್ಲಿ ಡಾಟಾ ಬಿಡುಗಡೆ ಮಾಡಿದ ನಂತರ, ಇಡೀ ದೇಶದ ಅಂತರ್ಜಾಲದ ಬಳಕೆ ದಿಕ್ಕು, ದೆಸೆ ಇಲ್ಲದೆ ಹೆಚ್ಚಿದೆ.  ಅಮೇಜಾನ್‌ ಪ್ರೈಂ  ಪ್ರಾದೇಶಿಕ ಆಟ, ದೇಸಿ ಕಥೆ ಒಳಗೊಂಡ ಧಾರಾವಾಹಿಗಳ ಕಡೆ ಗಮನ ಕೊಡುತ್ತಿದ್ದರೆ, ವಿದೇಶಿ ಮೂಲದ ನೆಟ್‌ಫಿಕ್ಸ್‌ ವಿದೇಶಿ ಪ್ರಭಾವಿತ ಒರಿಜನಲ್‌ ಕಥೆಗಳ ಕಡೆ ಗಮನ ಕೊಡುತ್ತಿದೆ.  ಹಾಟ್‌ ಸ್ಟಾರ್‌- ಸ್ಟಾರ್‌ ಸಮೂಹದ ಮನರಂಜನೆ ಕಾರ್ಯಕ್ರಮಗಳ ಜೊತೆಗೆ  ಕ್ರಿಕೆಟ್‌ನಂಥ ಆಟಗಳನ್ನು ತನ್ನ ತೆಕ್ಕೆಯಲ್ಲಿ ಇಟ್ಟುಕೊಂಡಿರುವುದರಿಂದ ನಿರುಮ್ಮಳವಾಗಿದೆ.   

ಹಾಗಿದ್ದರೆ ಟಿ.ವಿ ಗತಿ ಏನು?
ಕಲಗಟೋì  ಅನ್ನೋ ಕಂಪನಿ ಮಾಡಿರುವ ಸರ್ವೆ ಪ್ರಕಾರ,  ದೇಶದಲ್ಲಿ ಬಳಕೆ ಯಲ್ಲಿರುವ  ಶೇ. 30ರಷ್ಟು ಸ್ಮಾರ್ಟ್‌ಫೋನ್‌ಗಳಲ್ಲಿ ಜಿಯೋ ಟಿ.ವಿ ಹೆಚ್ಚಿದೆಯಂತೆ.    

ಜಿಯೋ ಬಂದ ಮೇಲೆ ಸುದ್ದಿ, ಮನರಂಜನೆ ಚಾನೆಲ್‌ಗ‌ಳು ಎಲ್ಲರ  ಕೈ ಉಗುರ ತುದಿಯಲ್ಲಿ ಬಂದು ಕೂತಿವೆ. ಟಿ.ವಿಗಿಂತ ಮಜಭೂತಾಗಿ ಮೊಬೈಲ್‌ ಅನ್ನು ಬಳಸಬಹುದಾದ್ದರಿಂದ ಹರೆಯದ ಕಣ್ಣುಗಳು ಟಿ.ವಿ ಕಡೆ ಮಿಟುಕದೆ ಆ್ಯಪ್‌ಗ್ಳ ಕಡೆ ಹೊರಳಿವೆ. ಇತ್ತೀಚೆಗೆ ನಡೆದ ಭಾರತ ಆಸ್ಟ್ರೇಲಿಯಾ ಕ್ರಿಕೆಟ್‌ ಪಂದ್ಯವನ್ನು 50 ಮಿಲಿಯನ್‌ ಜನ ವೀಕ್ಷಿಸಿದ್ದು ದೊಡ್ಡ ದಾಖಲೆಯಾಗಿರುವುದೇ ನಮ್ಮ ಯುವ ಜನರು “ಆ್ಯಪ’ಲ್‌ ಪ್ರಿಯರಾಗಿದ್ದಾರೆ ಅನ್ನೋದಕ್ಕೆ ಸಾಕ್ಷಿ. ಇದನ್ನು ಗಮನದಲ್ಲಿಟ್ಟುಕೊಂಡೇ ಪ್ರತಿ ಚಾನೆಲ್‌ನಲ್ಲಿ ಡಿಜಿಟಲ್‌ ಟೀಂ ಅಂತಲೇ ಪ್ರತ್ಯೇಕ ಸೆಟಪ್‌ ಹುಟ್ಟುಕೊಂಡಿದೆ. ಅವು ಟಿ.ವಿಗೆ ಹೇಗೆ ಜಾಹೀರಾತು ತರುತ್ತವೆಯೋ,  ಅದೇ ರೀತಿ ಆ್ಯಪ್‌ಗ್ಳಿಗೂ ಜಾಹೀರಾತನ್ನು ಸಂಗ್ರಹಿಸುತ್ತಾರೆ.  ಟಿ.ವಿಯಲ್ಲಿ ಎರಡು, ಮೂರು ನಿಮಿಷದ ಜಾಹೀರಾತಿದ್ದರೆ, ಆ್ಯಪ್‌ಗ್ಳಲ್ಲಿ 20ಸೆಕೆಂಡೇ ದೊಡ್ಡ ಜಾಹೀರಾತಾಗಿರುತ್ತದೆ.  ಯುವ ಜನಾಂಗ ಈಗ ಆ್ಯಪ್‌ಗ್ಳಲ್ಲೇ ಕ್ರಿಕೆಟ್‌, ಧಾರಾವಾಹಿಗಳನ್ನು ನೋಡುತ್ತಿರುವುದರಿಂದ ಮುಂದೆ ಟಿ.ವಿಯ ಭವಿಷ್ಯ ಏನು ಅನ್ನೋ ಪ್ರಶ್ನೆ ಎದ್ದೇಳದೇ ಇರದು. 

“ಸಧ್ಯ 10 ವರ್ಷದ ತನಕ ಯಾವುದೇ ಆತಂಕ ಇಲ್ಲ’  ಅಂತಾರೆ ಕಲರ್ì ಕನ್ನಡ ಎಂಟರ್‌ಟೈನ್‌ಮೆಂಟ್‌ ಕ್ಲಸ್ಟರ್‌ ಬ್ಯೂಸಿನೆಸ್‌ ಹೆಡ್‌ ಪರಮೇಶ್ವರ್‌ ಗುಂಡಕಲ್‌. 

“ಎಲೆಕ್ಟ್ರಾನಿಕ್‌ ಮೀಡಿಯಾ ಬಂದಾಗ ಪ್ರಿಂಟ್‌ ಮೀಡಿಯಾ ಸತ್ತು ಹೋಗುತ್ತೆ ಅಂತಿದ್ದರು.  ಹಾಗೆ ಹಾಯ್ತಾ? ಇಲ್ವಲ್ಲ. ಹಾಗೆಯೇ, ಡಿಜಿಟಲ್‌ ಪ್ಲಾಟ್‌ಫಾರ್ಮ್ ದಿನ ದಿನಕ್ಕೆ ಸ್ಟಾಂಗ್‌ ಆಗ್ತಿದೆ.  ಹಾಗಂತ  (ಟಿ.ವಿ) ಇದು ಮನೋರಂಜನೆ ಮಾಧ್ಯಮಕ್ಕೆ ಆತಂಕ ಅಂತ ಪರಿಗಣಿಸಬೇಕಿಲ್ಲ. ಈಗ ಟಿ.ವಿಗೆ ಹೋಲಿಸಿದರೆ ನಮ್ಮಲ್ಲಿ ಆ್ಯಪ್‌ ವೀಕ್ಷಕರ ಸಂಖ್ಯೆ ಇನ್ನೂ ಕಡಿಮೆಯೇ.  ಹೇಗೆಂದರೆ, ಬಿಗ್‌ಬಾಸ್‌ ಅನ್ನು ನೂರು ಜನ ಟಿ.ವಿಯಲ್ಲಿ  ನೋಡಿದರೆ, 10ಜನ ವೂಟ್‌ನಲ್ಲಿ ನೋಡಿದ್ದಾರೆ’ ಅಂತ ವಿವರಿಸುತ್ತಾರೆ ಪರಮ್‌.   

ಪರಿಣಾಮ ಏನು?
ಡಿಜಿಟಲ್‌ನ ಪರಿಣಾಮ ಏನೆಂದರೆ,  ಸಕುಟುಂಬ ಸಮೇತರಾಗಿ ನೋಡುತ್ತಿದ್ದ ಧಾರಾವಾಹಿಗಳನ್ನು ಒಂಟಿಯಾಗಿ, ಬೆಡ್‌ರೂಮಿನಲ್ಲಿ ಕೂತು ಒಬ್ಬರೇ ನೋಡುವಂತಾಗುವುದು. ಅಂದರೆ, ಇಲ್ಲಿ ಪ್ರೇಕ್ಷಕ ಏಕಾಂತದಲ್ಲಿ ಕುಳಿತು, ಯಾವಾಗ ಬೇಕೋ ಆವಾಗ ನೋಡುವ ಮನೋಸ್ಥಿತಿಯೆಡೆ ಧಾವಿಸುತ್ತಿರುವುದರಿಂದ, ಧಾರಾವಾಹಿಗಳ ಕಥೆ, ನಿರೂಪಣೆಯ ಶೈಲಿ ಕೂಡ ಬದಲಾಗಬೇಕಾಗುತ್ತದೆ.  ಹೆಚ್ಚು ಹೆಚ್ಚು ಬದುಕಿನ ಖಾಸಗಿ ವಿಚಾರಗಳನ್ನು ಗುರಿಯಾಗಿಸಿಕೊಂಡೇ ಎಪಿಸೋಡ್‌ಗಳನ್ನು ಪ್ರಸಾರ ಮಾಡುವ ಅನಿವಾರ್ಯ ಎದುರಾಗಬಹುದು.

ಈ ಬಗ್ಗೆ ಪರಮ್‌ ಹೇಳ್ಳೋದು ಹೀಗೆ- 
“ನೀವು ನಿಮ್ಮ ಮನೆಯ ಬಾತ್‌ರೂಮಿನಲ್ಲೋ, ಕೋಣೆಯಲ್ಲೋ ಇದ್ದೀರಿ ಅಂತಿಟ್ಟುಕೊಳ್ಳಿ. ಅಲ್ಲಿ ನಿಮ್ಮ ವರ್ತನೆ ಬೇರೆ ಇರುತ್ತದೆ. ಹೋಟೆಲ್‌ಗೆ ಹೋದರೆ ಅಲ್ಲಿ ಬೇರೆ ವರ್ತನೆ .  ನಿಮ್ಮ ಮನೆಯಲ್ಲಿ ಇದ್ದಂತೆ ಅಲ್ಲೂ ಕೋಣೆ, ಬಾತ್‌ರೂಮು ಎಲ್ಲಾ ಇರುತ್ತದೆ ಅಲ್ವೇ?  ಆದರೂ ಸ್ಥಳಕ್ಕೆ ತಕ್ಕ ವರ್ತನೆ ಪ್ರತಿಯೊಬ್ಬರ ಗುಣ.  ಅಂದರೆ,  ಮನುಷ್ಯ ಏಕಾಂತದಲ್ಲಿ ಇದ್ದಾಗ ಆತನ ಮನದ ತಳದಲ್ಲಿರುವ ಭಾವನೆಗಳು ಹೊರ ಹೊಮ್ಮುತ್ತವೆ. ಹೀಗಾಗಿ, ಆ ಡಿಜಿಟಲ್‌ ವೇದಿಕೆಗಳಲ್ಲಿ ಧಾರಾವಾಹಿಗಳನ್ನು ನೋಡುವಾಗ ಇಂಥ ಭಾವನೆಗಳ ಆಧಾರದ ಮೇಲೆ ಕಥೆ ಹೆಣೆಯಬೇಕಾಗುತ್ತದೆ.  ಟಿ.ವಿಯ ಮುಂದೆ – ಅಜ್ಜ, ಅಜ್ಜಿ, ಹೆಂಡತಿ, ಮನೆ ಕೆಲಸದವಳು ಹೀಗೆ ಸಕುಟುಂಬ ಸಮೇತರಾಗಿ ಕೂತು ನೋಡುವುದರಿಂದ ಅಲ್ಲಿ ಬೇರೆ ರೀತಿಯ ಕಥೆ ಬೇಕಾಗುತ್ತದೆ.  ಹೀಗಾಗಿ, ಡಿಜಿಟಲ್‌ ಮಾಧ್ಯಮ ಆಧಾರಿತ ಧಾರಾವಾಹಿಗಳ ಕಥೆಗಳಲ್ಲಿ ಭಿನ್ನತೆ ಬೇಕಾಗುತ್ತದೆ. ಈಗಾಗಲೇ ಪ್ರಸಾರವಾಗು¤ತಿದೆ ಕೂಡ.’ 

ಕನ್ನಡ ಮಟ್ಟಿಗೆ ಹೇಳುವುದಾದರೆ ತೀರ ಬದುಕಿನ ಖಾಸಗಿ ಭಾವನೆಗಳ ಕೋಣೆಗೆ ಕ್ಯಾಮರ ಇಡುವ ಸ್ಥಿತಿ ಇಲ್ಲ. ಆದರೆ, ಅಮೇಜಾನ್‌ ಪ್ರೈಂನಲ್ಲಿ  “ಫೋರ್‌ ಮೋರ್‌ ಶಾಟ್ಸ್‌ ಪ್ಲೀಸ್‌’, ನೆಟ್‌ ಫಿಕ್ಸ್‌ನಲ್ಲಿ- “ಲಸ್ಟ್‌ ಸ್ಟೋರೀಸ್‌’, “ಲಿಟ್ಲ ಥಿಂಗ್ಸ್‌’ ನಂಥ  ಯುವ ಜನಾಂಗದ ಭಾವಗಳನ್ನು ಬಡಿದೆಬ್ಬಿಸುವ ಶೋಗಳು ಇವೆ. ಅಂದರೆ, ಮನೋರಂಜನೆಯಲ್ಲಿ ಉಪ್ಪಿನ ಕಾಯಿ ರೀತಿ ಇದ್ದ  ಕ್ರೈಂ, ಸೆಕ್ಸ್‌ ಅನ್ನುವ ವಿಚಾರಗಳು ಈಗ ಊಟದ ರೀತಿ ಬಡಿಸುವ ಅನಿವಾರ್ಯ ಆ್ಯಪ್‌ಗ್ಳಿಂದ ಉದ್ಬವಿಸಿದೆ ಅಂತಲೇ ಹೇಳಬಹುದು.  

ಶಾಂತವೇಲು, ಕೇಶವನಾರಾಯರಂಥವರ ಭಾಷೆ, ನೋಟವನ್ನು ವ್ಯವಹಾರೀಕರಣ ಮಾಡಿದರೆ ಹೀಗೇ ಆಗೋದು ಅಲ್ವೇ?

1.  ಸಹನೆ ಎಂಬ ಸರಕು
ಹಬ್ಬ ಹರಿದಿನಗಳಂದು ಎಷ್ಟೋ ನಮ್ಮ ಚಾನೆಲ್‌ಗ‌ಳಲ್ಲಿ ಶಿವರಾಜ್‌ಕುಮಾರ್‌, ಪುನೀತ್‌, ದರ್ಶನ್‌, ಸುದೀಪ್‌ರಂಥ ಹೀರೋಗಳ ಸಿನಿಮಾಗಳು 4-5 ಗಂಟೆಗಳ ಕಾಲ ಪ್ರಸಾರವಾಗುವುದುಂಟು. ಆದರೆ ಇದರ ಅಸಲಿ ಸಿನಿಮಾ ಸಮಯ ಕೇವಲ. 2.15 ನಿಮಿಷವಾಗಿರುತ್ತದೆ.  ಉಳಿದದ್ದು ಜಾಹೀರಾತಿಗೆ ಮೀಸಲು.  ಆ್ಯಪ್‌ನಲ್ಲಿ ಈ ರೀತಿ ಜಾಹೀರಾತಿನ ಮಧ್ಯೆ ಸಿನಿಮಾ ತೋರಿಸುವುದು ಅಸಾಧ್ಯ ಎನ್ನುವವರು ಇದ್ದಾರೆ. ಆದರೆ ಕ್ರಿಕೆಟ್‌ನಂಥ ಕ್ರೀಡಾವಳಿಗಳಿಗೆ ಇದು ಅಪ್ಲೆ„ ಆಗೋಲ್ಲ. ಕ್ರಿಕೆಟ್‌, ಫ‌ುಟ್‌ಬಾಲ್‌, ಎನ್‌ಎಫ್ಎಲ್‌ನಂಥ ಆಟಗಳನ್ನು ಪ್ರಸಾರ ಮಾಡುವಾಗ  ಆಟದ ಮಧ್ಯೆ ಹೆಚ್ಚೆಚ್ಚು ಜಾಹೀರಾತು ಪ್ರಸಾರವಾದರೂ ನೋಡುಗರು ಸಹಿಸಿಕೊಳ್ಳುತ್ತಾರೆ. ಕ್ರಿಕೆಟ್‌ ಲೈವ್‌ ನೋಡುಗರಿಗೆ ಮುಂದೆ  ಏನಾಗಬಹುದು? ಧೋನಿ ಎಷ್ಟು ರನ್‌ ಭಾರಿಸಬಹುದು ಅನ್ನೋ ಕುತೂಹಲ ಇರುವುದರಿಂದ ಹೆಚ್ಚುವರಿ ಜಾಹೀರಾತು ಪ್ರಸಾರವಾದರೂ ತಲೆ ಕೆಡಿಸಿಕೊಳ್ಳುವುದಿಲ್ಲ. 

2 ಆ್ಯಪ್‌ ಟಿ.ವಿ ಮತ್ತು ಜಾಹೀರಾತು ದಾರರು.
ಧಾರಾವಾಹಿಗಳ ಪ್ರಸಾರ ಸಮಯದಲ್ಲಿ ಜಾಹೀರಾತು ಗಣಿತ ಹೇಗಿರುತ್ತದೆ ಎಂದರೆ, 30 ನಿಮಿಷ ಧಾರಾವಾಹಿಯಲ್ಲಿ, ಅದರಲ್ಲಿ 20 ನಿಮಿಷ ಜಾಹೀರಾತು. ಈ 20 ನಿಮಿಷವನ್ನು ಮೂರು, ನಾಲ್ಕು ನಿಮಿಷಗಳಂತೆ  ಮೂರು ಸ್ಲಾಟ್‌ಗಳಾಗಿ ವಿಭಾಗಿಸುವುದು ಈಗ ಜಾರಿಯಲ್ಲಿರುವ ಸೂತ್ರ. ಆದರೆ ಆ್ಯಪ್‌ಗ್ಳಲ್ಲಿ ಇವು ಸೆಕೆಂಡ್‌ಗಳಿಗೆ ಇಳಿದು ಬಿಡುತ್ತದೆ. ಇಲ್ಲಿ ಅತಿ ಹೆಚ್ಚು ಎಂದರೆ 20ರಿಂದ 30 ಸೆಂಕೆಂಡ್‌ ಜಾಹೀರಾತು ಪ್ರಸಾರವಾಗುತ್ತವೆ. ಒಂದು, ಎರಡು ನಿಮಿಷದ್ದು ಬಹಳ ಕಡಿಮೆ.  ಹೀಗಾಗಿ ಆದಾಯ ಹೇಗೆ, ಏನು ಅನ್ನೋ ವಿಚಾರವೆಲ್ಲ ಚಾನೆಲ್‌ಗ‌ಳ ಆರ್ಥಿಕ ಅಂತರ್ಜಲವಾಗಿರುವುದುರಿಂದ ಗುಪ್ತಗಾಮಿನಿಯಾಗಿದೆ.  ಆ್ಯಪ್‌ಗ್ಳಲ್ಲಿ ಪ್ರೈಂ ಟೈಂ ಅಂತೇನು ಇರೋದಿಲ್ಲ. ಏಕೆಂದರೆ, ಪ್ರಿಯವಾದ ಧಾರಾವಾಹಿ, ಕಾರ್ಯಕ್ರಮಗಳನ್ನು ಯಾವಾಗ ಬೇಕಾದರು ವೀಕ್ಷಿಸಬಹುದಾದ್ದರಿಂದ ನೋಟಕ್ಕೆ ಡೆಡ್‌ಲೈನ್‌ ಇರುವುದಿಲ್ಲ. 

3 ಆ್ಯಪ್‌ಗ್ಳಲ್ಲಿ ಜಾಹೀರಾತಿನ ಬೆಲೆ ಹೇಗೆ ನಿಗಧಿಯಾಗುತ್ತದೆ, ಅದಕ್ಕೆ ಮಾನದಂಡ ಏನು? ತಿಳಿದಿಲ್ಲ.  ಆ್ಯಪ್‌ಗ್ಳೇ ನೋಡುಗರ ಸಂಖ್ಯೆಯನ್ನು ತೋರಿಸುವುದರಿಂದ ನಮ್ಮ ಡಿಜಿಟಲ್‌ ವೇದಿಕೆಯನ್ನು ಇಷ್ಟು ಜನ ಬಳಸುತ್ತಿದ್ದಾರೆ ಅಂತ ಆಯಾ ಕಂಪೆನಿಗಳೇ ಜಾಹೀರಾತು ದಾರರಿಗೆ ಹೇಳಬೇಕು ಅಥವಾ ಸಾರಬೇಕು.  ಟಿ.ವಿಗಳಲ್ಲಿರುವಂತೆ ಟಿ.ಆರ್‌.ಪಿ, ಅದನ್ನು ಘೋಷಿಸಲು ಬಾರ್ಕ್‌ನಂಥ ಸಂಸ್ಥೆ ಇನ್ನು ಹುಟ್ಟಿಲ್ಲ.   ಹೀಗಾಗಿ, ಇಲ್ಲಿ (ಆ್ಯಪ್‌) ಜಾಹೀರಾತು ನೀಡುವುದು ಯಾವ ಮಾನದಂಡದ ಮೇಲೆ ಅನ್ನೋ ಪ್ರಶ್ನೆ ಕೂಡ ಎದ್ದೇಳುತ್ತದೆ. 

4 ಆದಾಯದ ಮೂಲ
ಅಮೇಜಾನ್‌, ಹಾಟ್‌ ಸ್ಟಾರ್‌, ನೆಟ್‌ಫಿಕ್ಸ್‌ಗಳಿಗೆ ಚಂದಾದಾರರೇ ಆದಾಯದ ಮೂಲ. ಇದರ ಜೊತೆಗೆ ಜಾಹೀರಾತು ಸೇರಿಕೊಳ್ಳುತ್ತದೆ.  ನೆಟ್‌ಫಿಕ್ಸ್‌ ತನ್ನ ಕಟೆಂಟ್‌ ಅನ್ನು ಬೇರೆ ಆ್ಯಪ್‌ಗ್ಳಿಗೆ ಮಾರಾಟ ಮಾಡುವ ಮೂಲಕ ಇನ್ನೊಂದು ಆದಾಯದ ದಾರಿಯನ್ನು ನಿರ್ಮಿಸಿಕೊಂಡಿದೆ. 

ಪ್ರಸ್ತುತ ಅಮೇಜಾನ್‌, ಸೋನಿ, ಹಾಟ್‌ ಸ್ಟಾರ್‌ ಇವೆಲ್ಲವೂ ಶೋಸ್‌, ಮೂವೀಸ್‌, ನ್ಪೋರ್ಟ್ಸ್, ಪ್ರೀಮಿಯಮ್‌, ಡಾಕ್ಯುಮೆಂಟರಿ ಹೀಗೆ ನಾನಾ ವಿಭಾಗಮಾಡಿ  ಒಂದೇ ಏಟಿಗೆ ಎಲ್ಲ ವಯೋಮಾನದ ನೋಡುಗರನ್ನು ಬಾಚಿಕೊಳ್ಳಲು ಮುಂದಾಗಿದೆ. ನಮ್ಮ ಈ ರೀತಿ ಇಲ್ಲ. 

– ಕಟ್ಟೆ ಗುರುರಾಜ್‌

ಟಾಪ್ ನ್ಯೂಸ್

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

ಮೂಲಭೂತ ಸೌಕರ್ಯ ಕೊಡಿ ಎಂದಿದ್ದೇನೆ ಹೊರತು, ಒಕ್ಕಲೆಬ್ಬಿಸಿ ಎಂದಿಲ್ಲ; ಬೇಳೂರು ಸ್ಪಷ್ಟನೆ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Jamie Dimon: ಮೋದಿ ಆರ್ಥಿಕ ನೀತಿ ಅದ್ಭುತ, ಅಮೆರಿಕದಲ್ಲೂ ಜಾರಿ ಮಾಡಿ: ಜೇಮಿ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ

Sunita Williams: ಮೇ 6ರಂದು 3ನೇ ಬಾರಿಗೆ ಸುನಿತಾ ವಿಲಿಯಮ್ಸ್‌ ಗಗನ ಯಾತ್ರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Malpe ಮೀನುಗಾರಿಕೆ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ: ಜೆ.ಪಿ. ಹೆಗ್ಡೆ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Rahul Gandhi: ಜಾತಿಗಣತಿಯನ್ನು ಯಾವ ಶಕ್ತಿಯೂ ತಡೆಯಲಾರದು: ರಾಹುಲ್‌ ಗಾಂಧಿ

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sagara: ಮಹಿಳೆಯ ಗರ್ಭಕೋಶದಲ್ಲಿದ್ದ 7 ಕೆಜಿ ಗಡ್ಡೆ ಹೊರತೆಗೆದ ವೈದ್ಯರು

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Sirsi: ಏ. 28ಕ್ಕೆ ಶಿರಸಿಗೆ ಪ್ರಧಾನಿ ಮೋದಿ… ಸಿದ್ಧತೆ ಆರಂಭ: ಕಾಗೇರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.