ಸಹೋದರರ ಕಮಾಲ್‌!

ರೈತರು ಸಂಘಟನೆಯನ್ನು ಕಟ್ಟಿದರು!

Team Udayavani, Nov 11, 2019, 5:20 AM IST

DD-44

ಪುಣೆಯ ಇಬ್ಬರು ಸೋದರರು ಕೃಷಿ ಮಾಡತೊಡಗಿದಾಗ ಅವರ ಕೃಷಿ ಉತ್ಪನ್ನಗಳ ವಹಿವಾಟು ವರುಷಕ್ಕೆ ಎರಡು ಲಕ್ಷ ರೂಪಾಯಿ. ಅದೀಗ ತಿಂಗಳಿಗೆ ಮೂವತ್ತು ಲಕ್ಷ ರೂಪಾಯಿಗಳಿಗೆ ಏರಿದೆ. ಇದು ಹೇಗೆ ಸಾಧ್ಯವಾಯಿತು?

ಸೋದರರಾದ ಸತ್ಯಜಿತ್‌ ಮತ್ತು ಅಜಿಂಕ್ಯಾ ಹಾಂಗೆ, ನಗರ ಮತ್ತು ಗ್ರಾಮೀಣ ಪರಿಸರದಲ್ಲಿ ಬೆಳೆದವರು. ಬಾಲವಾಡಿಯಿಂದ ಸ್ನಾತಕೋತ್ತರ ಪದವಿ ತನಕ ಅವರಿಬ್ಬರೂ ಕಲಿತದ್ದು ಮಹಾನಗರ ಪುಣೆಯಲ್ಲಿ. ಪುಣೆ ವಿಶ್ವವಿದ್ಯಾಲಯದಿಂದ ಎಂಬಿಎ ಗಳಿಸಿದ ನಂತರ ಸಿಟಿ ಬ್ಯಾಂಕ್‌, ಎಚ್‌ಡಿಎಫ್ಸಿ, ಎಚ್‌ಎಸ್‌ಬಿಸಿ ಬ್ಯಾಂಕ್‌ನಂಥ ಕಾರ್ಪೊರೆಟ್‌ ಬ್ಯಾಂಕುಗಳಲ್ಲಿ ಇಬ್ಬರೂ ಹತ್ತು ವರ್ಷ ಉದ್ಯೋಗ ಮಾಡಿದರು. ಕೈತುಂಬಾ ಸಂಬಳ, ಐಷಾರಾಮಿ ಜೀವನ ಅವರದಾಗಿತ್ತು. ಆದರೆ ಅವರಿಗೆ ನೆಮ್ಮದಿ ಇರಲಿಲ್ಲ. ಕೊನೆಗೊಮ್ಮೆ ಉದ್ಯೋಗ ತೊರೆದು ಎರಡು ಎಕರೆ ಜಮೀನಿನಲ್ಲಿ ಸಾವಯವ ಕೃಷಿ ಆರಂಭಿಸಿದರು…

ಕಿಲೋಗೆ ಕೇವಲ 4 ರೂ.!
ಅವರ ಜಮೀನು ಪಶ್ಚಿಮ ಮಹಾರಾಷ್ಟ್ರದಲ್ಲಿದೆ. ಅಲ್ಲಿ ರಾಸಾಯನಿಕಗಳನ್ನು ಸುರಿದು ಬೆಳೆಸುವ ಪ್ರಧಾನ ಬೆಳೆ ಕಬ್ಬು. ಆದರೆ ಸೋದರರ ನಿರ್ಧಾರ ಬಹುಬೆಳೆಗಳ ಸಾವಯವ ಕೃಷಿ. ಆರಂಭದಲ್ಲಿ ದೇಸಿ ತಳಿಯ ದಾಳಿಂಬೆ, ತೊಗರಿ ಹಾಗೂ ಪಪ್ಪಾಯಿ ಬೆಳೆದರು. ಇಪ್ಪತ್ತು ಗಿರ್‌ ದನಗಳನ್ನು ಸಾಕತೊಡಗಿದರು. ಮೊದಲ ನಾಲ್ಕು ವರ್ಷ ಕೃಷಿಯಿಂದ ಅವರಿಗಾದದ್ದು ನಷ್ಟ. ಅದು ನಮಗೆ ಬಹಳ ಕಷ್ಟದ ಕಾಲ. ನಾವು ಉದ್ಯೋಗ ತೊರೆದಿದ್ದೆವು. ಸಾಂಪ್ರದಾಯಿಕ ಕೃಷಿಯನ್ನೂ ತೊರೆದಿದ್ದೆವು. ಒಂದು ಟನ್‌ ಪಪ್ಪಾಯಿ ಕೊಯ್ಲು ಮಾಡಿದಾಗ ನಮಗೆ ದೊಡ್ಡ ಆಘಾತ ಕಾದಿತ್ತು. ಬೆಲ್ಲದಷ್ಟು ಸಿಹಿಯಾದ ಆ ಪಪ್ಪಾಯಿಯನ್ನು ಸ್ಥಳೀಯ ಮಾರುಕಟ್ಟೆಗೆ ಒಯ್ದಾಗ ಅಲ್ಲಿನ ಮಾರಾಟಗಾರರು ಹೇಳಿದ ಖರೀದಿ ದರ ಕಿಲೋಗೆ ಕೇವಲ ನಾಲ್ಕು ರೂಪಾಯಿ ಎನ್ನುತ್ತಾ ತಮಗಾದ ಕಹಿ ಅನುಭವ ತಿಳಿಸುತ್ತಾರೆ ಅಜಿಂಕ್ಯಾ.

ಜಾಗ ಕೊಟ್ಟ ಸ್ಟಾರ್‌ ಬಜಾರ್‌
ನಂತರ, ಪುಣೆಯ ಮಾಲ್‌ಗ‌ಳನ್ನು ಸಂಪರ್ಕಿಸಿದಾಗಲೂ ಇವರಿಗೆ ನಿರಾಶೆ ಕಾದಿತ್ತು. ಅನಂತರ ಸೋದರರಿಬ್ಬರೂ ಒಂದು ಟೆಂಪೋದಲ್ಲಿ ಪಪ್ಪಾಯಿ ತುಂಬಿಸಿ ಒಯ್ದರು- ಸೇತುವೆಗಳ ಕೆಳಗೆ ಕೈಗಾಡಿಗಳಲ್ಲಿ ಹಣ್ಣು ತರಕಾರಿ ಮಾರುವವರ ಬಳಿಗೆ. ಅವರು ಕಿಲೋಗೆ 20 ರೂಪಾಯಿ ದರದಲ್ಲಿ ಖರೀದಿಸಲು ಒಪ್ಪಲಿಲ್ಲ. ಆಗ, ಪುಕ್ಕಟೆಯಾಗಿ ರುಚಿ ನೋಡಿ ಎಂದು ನಮ್ಮ ಪಪ್ಪಾಯಿ ತಿನ್ನಲು ಕೊಟ್ಟೆವು. ಕೊನೆಗೆ ನಮ್ಮ ತೋಟದ ಫ‌ಸಲನ್ನೆಲ್ಲ ಲಾಭದಲ್ಲಿ ಮಾರಿದೆವು ಎಂದು ನೆನಪು ಮಾಡಿಕೊಳ್ಳುತ್ತಾರೆ ಸತ್ಯಜಿತ್‌. ಈ ರೀತಿಯಲ್ಲಿ ಸೋದರರ ಪಪ್ಪಾಯಿ ಮಾರಾಟ ಎಂಟು ತಿಂಗಳು ಸಾಗಿತು. ಅದೊಂದು ದಿನ ಸ್ಟಾರ್‌ ಬಜಾರ್‌ ಮಾಲ್‌ನ ಮುಖ್ಯಸ್ಥರು ಇವರು ಬೆಳೆದ ಪಪ್ಪಾಯಿಯ ರುಚಿ ನೋಡಿ ಖುಷಿಪಟ್ಟರು. ತದನಂತರ, ಅವರ ಮಾಲ್‌ನ ಎಲ್ಲ ಬ್ರಾಂಚುಗಳಲ್ಲಿಯೂ ಇವರ ಕೃಷಿ ಉತ್ಪನ್ನಗಳ ಮಾರಾಟಕ್ಕಾಗಿ ಯಾವುದೇ ಶುಲ್ಕವಿಲ್ಲದೆ ಪ್ರತ್ಯೇಕ ಜಾಗ ಒದಗಿಸಿದರು.

ಕೃಷಿ ಮಾರುಕಟ್ಟೆ ಸಂಘಟನೆ
ಹೀಗೆ ವಿವಿಧ ಮಾಲ್‌ಗ‌ಳಲ್ಲಿ ಇಬ್ಬರು ಸೋದರರ ಕೃಷಿ ಉತ್ಪನ್ನಗಳು ಬಿರುಸಿನಿಂದ ಮಾರಾಟವಾಗುತ್ತಿದ್ದಂತೆ, ಅವರು ಒಂದು ಸಂಗತಿ ಗಮನಿಸಿದರು. ರಾಸಾಯನಿಕಗಳನ್ನು ಹಾಕಿ ಬೆಳೆಸಿದ ಕೃಷಿ ಉತ್ಪನ್ನಗಳಂತೆಯೇ ಮಾಲ್‌ಗ‌ಳಲ್ಲಿ ತಮ್ಮದನ್ನೂ ಮಾರಾಟ ಮಾಡುತ್ತಿದ್ದರು. ಆದರೆ ನಾವು ಬೆಳೆಯುತ್ತಿದ್ದದ್ದು ಚಿನ್ನದಂಥ ಹಣ್ಣು- ತರಕಾರಿ ಧಾನ್ಯಗಳನ್ನು. ಹಾಗಾಗಿ ನಮ್ಮ ಫ‌ಸಲನ್ನು ಯೋಗ್ಯ ಬೆಲೆಗೆ ಮಾರಲಿಕ್ಕಾಗಿ ಹುಡುಕಾಟ ಶುರು ಮಾಡಿದೆವು ಎನ್ನುತ್ತಾರೆ ಅಜಿಂಕ್ಯಾ. ಮುಂದಿನ ಹಂತದಲ್ಲಿ ಅವರು ಮಾರಲು ಶುರುವಿಟ್ಟದ್ದು ರೈತರ ಮಾರುಕಟ್ಟೆಗಳಲ್ಲಿ. ಇದೀಗ ವಾರಾಂತ್ಯಗಳಲ್ಲಿ ಮುಂಬೈಯ ಬಾಂದ್ರಾದಲ್ಲಿ ಪ್ರಸಿದ್ಧ ರೈತರ ಮಾರುಕಟ್ಟೆಯಲ್ಲಿ ತಮ್ಮ ಫ‌ಸಲು ಮಾರುವುದರ ಜೊತೆಗೆ, ದಾದರಿನಲ್ಲಿಯೂ ಕೃಷಿಕರ ಮಾರುಕಟ್ಟೆ ಸಂಘಟಿಸಿದ್ದಾರೆ. ಅದಕ್ಕಾಗಿಯೇ ಪ್ರತಿ ವಾರಾಂತ್ಯ ಪುಣೆಯಿಂದ 350 ಕಿ.ಮೀ. ದೂರದ ಮುಂಬೈಗೆ ಸೋದರರ ಪ್ರಯಾಣ.

ದೇಸಿ ದನದ ತುಪ್ಪ, ಬೆಲ್ಲ, ಬೆಲ್ಲದ ಹುಡಿ, ನುಗ್ಗೆ ಎಲೆ ಹುಡಿ, ಎಣ್ಣೆಗಳು ಹಾಗೂ ಪಾಲಿಷ್‌ ಮಾಡದ ಧಾನ್ಯಗಳು- ಅವರ ತೋಟದ ಈ ವಿಷಮುಕ್ತ ಉತ್ಪನ್ನಗಳಿಗೆ ರೈತರ ಮಾರುಕಟ್ಟೆಯಲ್ಲಿ ಬಹಳ ಬೇಡಿಕೆ. ಜೊತೆಗೆ, ಮುಂಬೈಯ 250 ಗ್ರಾಹಕರ ಮನೆಬಾಗಿಲಿಗೆ ತಮ್ಮ ಉತ್ಪನ್ನ ತಲಪಿಸುವ ವ್ಯವಸ್ಥೆ ಮಾಡಿರುವುದು ಅವರ ಹೆಗ್ಗಳಿಕೆ. ಬಹುಬೆಳೆ ಕೃಷಿ ಈ ಸೋದರರ ಯಶಸ್ಸಿನ ಮಂತ್ರ. ದಾಳಿಂಬೆ, ಪಪ್ಪಾಯಿ, ಬಾಳೆ, ತೊಗರಿ, ಹೆಸರುಕಾಳು, ಉದ್ದು, ಕಪ್ಪುಚುಕ್ಕೆ ಅವರೆ, ನುಗ್ಗೆ, ಕಬ್ಬು – ಇವು ಅವರು 20 ಎಕರೆಗಳಲ್ಲಿ ಬೆಳೆಯುವ ಮುಖ್ಯ ಬೆಳೆಗಳು. ದನಗಳ ಸೆಗಣಿ ಮತ್ತು ಮೂತ್ರದಿಂದ ಕಂಪೋಸ್ಟ್ ತಯಾರಿಸಿ ಬೆಳೆಗಳಿಗೂ ಮರಗಳಿಗೂ ಹಾಕುತ್ತಾರೆ.
ಹೆಚ್ಚಿನ ಮಾಹಿತಿಗಾಗಿ: www.twobrothersindia.com

ನೂರು ಪ್ರತಿಶತ ಸಾವಯವ
ಫ್ರೆಂಚ್‌ ದೃಢೀಕರಣ ಕಂಪೆನಿ ಇಕೋಸರ್ಟ್‌, ಈ ಸೋದರರ ತೋಟವನ್ನು ಶೇಕಡಾ 100ರಷ್ಟು ಸಾವಯವ ತೋಟ ಎಂದು ದೃಢೀಕರಿಸಿದೆ. ಟೂ ಬ್ರದರ್ ಆಗ್ಯಾìನಿಕ್‌ ಫಾರ್ಮ್ ಎಂಬ ಹೆಸರಿನ ಅವರ ತೋಟದ ಭೇಟಿಗೆ ಮತ್ತು ತರಬೇತಿಗೆ ವಿವಿಧ ರಾಜ್ಯಗಳ ಮತ್ತು 14 ವಿದೇಶಗಳ ರೈತರು ಹಾಗೂ ಆಸಕ್ತರು ಭೇಟಿ ನೀಡುತ್ತಿದ್ದಾರೆ.

-ಅಡ್ಡೂರು ಕೃಷ್ಣ ರಾವ್‌

ಟಾಪ್ ನ್ಯೂಸ್

ಗಂಗಾವತಿ : ಮರೀಚಿಕೆಯಾದ ಪೂರ್ಣ ಪ್ರಮಾಣದ ರೈಲು ನಿಲ್ದಾಣ, ಪ್ರಯಾಣಿಕರ ಗೋಳು

ಗಂಗಾವತಿ : ಮರೀಚಿಕೆಯಾದ ಪೂರ್ಣ ಪ್ರಮಾಣದ ರೈಲು ನಿಲ್ದಾಣ, ಪ್ರಯಾಣಿಕರ ಗೋಳು

ಜಾಗ ಮಂಜೂರಾತಿಗಾಗಿ ಲಂಚ ಸ್ವೀಕಾರ : ಎಸಿಬಿ ಬಲೆಗೆ ಬಿದ್ದ ಉಪ ತಹಶೀಲ್ದಾರ್

ಜಾಗ ಮಂಜೂರಾತಿಗಾಗಿ ಲಂಚ ಸ್ವೀಕಾರ : ಎಸಿಬಿ ಬಲೆಗೆ ಬಿದ್ದ ಉಪ ತಹಶೀಲ್ದಾರ್

ಶಾಲೆಗಳಲ್ಲಿ 5ಕ್ಕಿಂತ ಹೆಚ್ಚು ಪ್ರಕರಣ ಪತ್ತೆಯಾದಲ್ಲಿ ಆನ್ ಲೈನ್ ತರಗತಿ: ದಕ್ಷಿಣಕನ್ನಡ ಡಿ.ಸಿ

ಮಂಗಳೂರು : ಶಾಲೆಗಳಲ್ಲಿ 5ಕ್ಕಿಂತ ಹೆಚ್ಚು ಪ್ರಕರಣ ಪತ್ತೆಯಾದರೆ ಭೌತಿಕ ತರಗತಿ ರದ್ದು ; ಡಿ.ಸಿ

ಹಾವೇರಿ: ತಾನೇ ಹಚ್ಚಿದ ಬೆಂಕಿಯಲ್ಲಿ ಆಕಸ್ಮಿಕವಾಗಿ ಬಿದ್ದು ರೈತ ಸಾವು

ಹಾವೇರಿ: ತಾನೇ ಹಚ್ಚಿದ ಬೆಂಕಿಯಲ್ಲಿ ಆಕಸ್ಮಿಕವಾಗಿ ಬಿದ್ದು ರೈತ ಸಾವು

Covid test

ರಾಜ್ಯದಲ್ಲಿ ಇಂದೂ 40 ಸಾವಿರ ದಾಟಿದ ಕೋವಿಡ್ ಕೇಸ್ : 21 ಸಾವು

ನೀರಿನ ಸಂಪ್‌ ಕ್ಲೀನ್‌ ಮಾಡುವಾಗ ಕರೆಂಟ್ ಹೊಡೆದು ತಂದೆ-ಮಗ ಸ್ಥಳದಲ್ಲೇ ಸಾವು

ನೀರಿನ ಸಂಪ್‌ ಕ್ಲೀನ್‌ ಮಾಡುವಾಗ ಕರೆಂಟ್ ಹೊಡೆದು ತಂದೆ-ಮಗ ಸ್ಥಳದಲ್ಲೇ ಸಾವು

nirani

ನನ್ನ ವಿರುದ್ಧ ಹೈಕಮಾಂಡ್ ಗೆ ಸಿಎಂ ದೂರು ನೀಡಲು ಸಾಧ್ಯವೇ ಇಲ್ಲ: ಸಚಿವ ನಿರಾಣಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

24 ಅಡಿ ಎತ್ತರದ ಸೈಕಲ್ ತಯಾರಿಸಿ ರೈಡ್ ಮಾಡಿದ ವ್ಯಕ್ತಿ

udayavani youtube

ನೆಲಕಡಲೆಯ ಕೃಷಿಯಲ್ಲಿ ಯಶಸ್ವಿ ಕಂಡ ರೈತ

udayavani youtube

ಕರ್ಫ್ಯೂ ತೆಗೆಯಿರಿ : ತಮ್ಮ ಸರಕಾರದ ವಿರುದ್ಧವೇ ಗರ್ಜಿಸಿದ ಸಿಂಹ

udayavani youtube

ಮೊಸಳೆಯ ಜೊತೆ ಯುವಕನ ಮೃತದೇಹ : ದಾಂಡೇಲಿಯ ಕಾಳಿ ನದಿಯಲ್ಲಿ ಘಟನೆ

udayavani youtube

ಕೃಷ್ಣಾಪುರ ಪರ್ಯಾಯ – 2022 Highlights

ಹೊಸ ಸೇರ್ಪಡೆ

ಗಂಗಾವತಿ : ಮರೀಚಿಕೆಯಾದ ಪೂರ್ಣ ಪ್ರಮಾಣದ ರೈಲು ನಿಲ್ದಾಣ, ಪ್ರಯಾಣಿಕರ ಗೋಳು

ಗಂಗಾವತಿ : ಮರೀಚಿಕೆಯಾದ ಪೂರ್ಣ ಪ್ರಮಾಣದ ರೈಲು ನಿಲ್ದಾಣ, ಪ್ರಯಾಣಿಕರ ಗೋಳು

1-fffas

ಭಟ್ಕಳ: ಕಾರಿನ ನಾಮ ಫಲಕ ತೆರವು ; ಪುರಸಭಾ ಅಧ್ಯಕ್ಷರ ಖಂಡನೆ

ಕುರುಗೋಡು : ಏರಂಗಳ್ಳಿ ಮೊರಾರ್ಜಿ ವಸತಿ ನಿಲಯದ 46 ಮಕ್ಕಳಿಗೆ ಕೋವಿಡ್ ಸೋಂಕು ದೃಢ

ಕುರುಗೋಡು : ಏರಂಗಳ್ಳಿ ಮೊರಾರ್ಜಿ ವಸತಿ ನಿಲಯದ 46 ಮಕ್ಕಳಿಗೆ ಕೋವಿಡ್ ಸೋಂಕು ದೃಢ

1-fffdf

ಡಾ| ಸೋಮಶೇಖರ ಇಮ್ರಾಪೂರ ಅವರಿಗೆ 2022ನೇ ಸಾಲಿನ ಅಂಬಿಕಾತನಯದತ್ತ ಪ್ರಶಸ್ತಿ

1-asewewewe

ಗೋವಾ ಮಹಾಘಟಬಂಧನ : ಮೈತ್ರಿ ಘೋಷಿಸಿದ ಶಿವಸೇನೆ ಮತ್ತು ಎನ್‍ಸಿಪಿ; ಕಾಂಗ್ರೆಸ್ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.