ಚಮಕ್‌ ಗಿಮಿಕ್‌; ಮೊಬೈಲ್‌ ಕಂಪನಿಗಳ ಮೋಡಿ ನೋಡಿ

Team Udayavani, Feb 17, 2020, 5:55 AM IST

ಮೊಬೈಲ್‌ ಫೋನ್‌ಗಳನ್ನು ಮಾರಾಟ ಮಾಡುವ ಸಲುವಾಗಿ ಕಂಪೆನಿಗಳು ಅನೇಕ ತಂತ್ರಗಳನ್ನು ಹೂಡುತ್ತವೆ. ಅನವಶ್ಯಕವಾದ ಸವಲತ್ತುಗಳನ್ನು ನೀಡಿ ದೊಡ್ಡದಾಗಿ ಪ್ರಚಾರ ಮಾಡುತ್ತವೆ. ಗ್ರಾಹಕರು ಆ ಸವಲತ್ತುಗಳ ಅಗತ್ಯತೆಯತ್ತ ಗಮನಹರಿಸುವುದಕ್ಕೆ ಬದಲಾಗಿ ಕಂಪನಿಗಳ ಗಿಮಿಕ್ಕುಗಳಿಗೆ ಮರುಳಾಗುತ್ತಾರೆ. ಹೀಗಾಗಿ ಮೊಬೈಲ್‌ ಕೊಳ್ಳುವಾಗ ಆ ಸವಲತ್ತುಗಳಿಂದ ತಮಗೇನು ಅನುಕೂಲ? ಇತ್ಯಾದಿ ಯೋಚಿಸಿ ಖರೀದಿಸುವುದು ಒಳಿತು.

ಹಾಲಿನ ಪ್ಯಾಕೆಟ್‌ ಕೊಳ್ಳುವಾಗ ಗಟ್ಟಿ ಹಾಲಿನದ್ದು ಕೊಳ್ಳುವ ಬದಲು ಒಂದೆರಡು ರೂಪಾಯಿ ಕಡಿಮೆ ಬೆಲೆಗೆ ಸಿಗುವ ನಾರ್ಮಲ್‌ ಟೋನ್‌x ಹಾಲನ್ನೇ ಖರೀದಿಸುತ್ತೇವೆ. ಹೀಗಿರುವಾಗ ಒಂದು ಮೊಬೈಲ್‌ ಫೋನ್‌ ಕೊಳ್ಳುವಾಗ ನಾವು ಬಳಸದಿರುವ ವೈಶಿಷ್ಟéಗಳಿಗೆ ಸಾವಿರಗಟ್ಟಲೆ ಹೆಚ್ಚು ಹಣ ತೆರುವುದು ದಂಡವಲ್ಲವೇ? ಒಂದು ಮೊಬೈಲ್‌ ಫೋನನ್ನು ಎರಡು ವರ್ಷಗಳಿಗಿಂತ ಹೆಚ್ಚು ಕಾಲ ಇಟ್ಟುಕೊಳ್ಳುವುದೂ ಇಲ್ಲ. ಹೀಗಿರುವಾಗ ಕೇವಲ ಪ್ರತಿಷ್ಠೆಗೆಂದೋ, ಇಲ್ಲಾ ಕಂಪನಿಗಳ ಮೋಡಿಗೆ ಮರುಳಾಗಿಯೋ ಹೆಚ್ಚು ಹಣ ತೆರುವುದೇಕೆ? ಈ ಕುರಿತು ಗ್ರಾಹಕ ಎಚ್ಚರವಹಿಸಬೇಕು.

ಹೆಚ್ಚು ರ್ಯಾಮ್‌ ಎಂಬ ಬಣ್ಣದ ಮಿಠಾಯಿ
ಈಗೀಗ ಅನೇಕ ಕಂಪೆನಿಗಳು 8 ಜಿಬಿ ರ್ಯಾಮ್‌, 12 ಜಿಬಿ ರ್ಯಾಮ್‌ ಎಂದು ಮೊಬೈಲ್‌ಗ‌ಳಲ್ಲಿ ತುಂಬಿ ಗ್ರಾಹಕರನ್ನು ಸೆಳೆಯುವ ಯತ್ನ ಮಾಡುತ್ತಿವೆ. ಸಾಧಾರಣ ಬಳಕೆದಾರರಿಗೆ 4 ಜಿಬಿ ರ್ಯಾಮ್‌ ಸಾಕು. ಇನ್ನೂ ಹೆಚ್ಚೆಂದರೆ 6 ಜಿಬಿ ರ್ಯಾಮ್‌ ಬೇಕಾದಷ್ಟು. ಎಷ್ಟೋ ಜನ 8 ಜಿಬಿ ರ್ಯಾಮ್‌ ಕೊಳ್ಳಲಾ? 6 ಜಿಬಿ ರ್ಯಾಮ್‌ ಕೊಳ್ಳಲಾ ಎಂದು ಸಲಹೆ ಕೇಳುತ್ತಾರೆ. ಆಂತರಿಕ ಸಂಗ್ರಹ ಬೇಕಾದರೆ ಹೆಚ್ಚು ಕೊಳ್ಳಿ. 6 ಜಿಬಿ ರ್ಯಾಮ್‌ಗಿಂತ ಹೆಚ್ಚಿನ ಅವಶ್ಯಕತೆ ಬೀಳುವುದಿಲ್ಲ ಎಂಬುದು ನನ್ನ ಸಲಹೆ. ಈಗ ಕೆಲವು ಕಂಪನಿಗಳು 12 ಜಿಬಿ ರ್ಯಾಮ್‌ ನೀಡುತ್ತಿವೆ! ಖಂಡಿತ ಇದರ ಅಗತ್ಯವಿಲ್ಲ. ಹೆಚ್ಚಿನ ರ್ಯಾಮ್‌ಗೆ 2 ರಿಂದ 4 ಸಾವಿರ ರೂ. ಹೆಚ್ಚಿಗೆ ಹಣವನ್ನು ತೆರುವ ಅಗತ್ಯವಿಲ್ಲ. ಏ

ಪಾಪ್‌ ಅಪ್‌ ಕ್ಯಾಮರಾ
ಇನ್ನೂ ಕೆಲವು ಕಂಪೆನಿಗಳು, ತಮ್ಮ ಮೊಬೈಲ್‌ ಫೋನ್‌ಗಳಲ್ಲಿ ಮುಂಬದಿ ಕ್ಯಾಮರಾ ಮೇಲಕ್ಕೆ ಬರುತ್ತದೆ ಎಂಬುದನ್ನೇ ದೊಡ್ಡದಾಗಿ ಪ್ರಚಾರ ಮಾಡಿದವು. ಒಂದು ಕಂಪೆನಿ ಒಂದು ವೈಶಿಷ್ಟéವನ್ನು ಹೊರತಂದರೆ, ನಾವೆಲ್ಲಿ ಹಿಂದುಳಿಯುತ್ತೇವೆಯೋ ಎಂದು ಇನ್ನೊಂದು ಕಂಪೆನಿಯೂ ಅದನ್ನು ಅನುಕರಿಸುತ್ತದೆ. ಕೊನೆಗೆ ಅದೇಕೋ ಸರಿಯಿಲ್ಲ ಎನಿಸಿ ಮೂಲ ಕಂಪೆನಿಯೇ ಅದನ್ನು ನಿಲ್ಲಿಸುತ್ತದೆ! ಈಗ ಪಾಪ್‌ ಅಪ್‌ ಕ್ಯಾಮರಾದ ಕ್ರೇಜ್‌ ಹೋಗಿ ಮತ್ತೆ ಹಿಂದಿನ ಪಂಚ್‌ಹೊàಲ್‌ ಡಿಸೈನ್‌ಗೆà ಮರಳಿದೆ.

ಹೆಚ್ಚು ಪಿಕ್ಸಲ್‌ ಮತ್ತು ಹೆಚ್ಚು ಲೆನ್ಸ್‌ಗಳ ಆಟ
ಗ್ರಾಹಕರನ್ನು ಸುಲಭವಾಗಿ ಖೆಡ್ಡಾಕ್ಕೆ ಕೆಡವಲು ಮೊಬೈಲ್‌ ಕಂಪೆನಿಗಳು ಕಂಡುಕೊಂಡಿರುವ ಹೊಸ ಆಟ ಮೆಗಾಪಿಕ್ಸಲ್‌ನದು. ಕಂಪನಿಗಳು 48 ಮೆಗಾಪಿಕ್ಸಲ್ಸ್‌, 64 ಮೆಗಾಪಿಕ್ಸಲ್‌ ಕ್ಯಾಮರಾ ಎಂದು ಹೇಳಿಕೊಳ್ಳುವುದನ್ನು ನೀವು ಗಮನಿಸಿರಬಹುದು. ಡಿಎಸ್‌ಎಲ್‌ಆರ್‌ ಕ್ಯಾಮರಾಗಳ ಪಿಕ್ಸಲ್‌ ಎಷ್ಟಿರುತ್ತದೆ. ಗಮನಿಸಿ. 12 ಅಥವಾ 16 ಮೆಗಾಪಿಕ್ಸಲ್ಸ್‌, 24 ಮೆಗಾ ಪಿಕ್ಸಲ್ಸ್‌ಗೇ ಅದ್ಭುತ ಕ್ಯಾಮರಾಗಳಿವೆ. ಮೊಬೈಲ್‌ ಫೋನ್‌ನಲ್ಲಿ ಹಾಕಿರುವ ಕ್ಯಾಮರಾ ಲೆನ್ಸ್‌, ಸೆನ್ಸರ್‌, ಅಪ್ಟಿಕಲ್‌ ಇಮೇಜ್‌ ಸ್ಟೆಬಿಲೈಸೇಷನ್‌, ಕ್ಯಾಮರಾ ಆಪ್ಟಿಮೈಸೇಷನ್‌ ಇನ್ನಿತರ ಪ್ರಮುಖ ಅಂಶಗಳು ಫೋಟೋದ ಗುಣಮಟ್ಟ ಹೆಚ್ಚು ಮಾಡುತ್ತೆವೆಯೋ ಹೊರತು ಮೆಗಾಪಿಕ್ಸಲ್‌ಗ‌ಳಲ್ಲ. ಇನ್ನು ಕೆಲವು ಕಂಪೆನಿಗಳ ಮೊಬೈಲ್‌ಗ‌ಳಲ್ಲಿ ಸೆಲ್ಫಿà ಫೋಟೋ ಬೆಳ್ಳಗೆ ಹಾಗೂ ಮುಖವನ್ನು ನೈಸ್‌ ರೋಡಿನಂತೆ ನುಣ್ಣಗೆ ಮಾಡುತ್ತವೆ. ಅದನ್ನು ಉತ್ತಮ ಕ್ಯಾಮರಾ ಎಂದು ಹಲವರು ನಂಬುತ್ತಾರೆ!

ಇವೆಲ್ಲಕ್ಕಿಂತ ಮುಖ್ಯವಾಗಿ ಫೋನ್‌ ಕೊಳ್ಳುವಾಗ ಅದರಲ್ಲಿ ಬ್ಯಾಟರಿ ಕನಿಷ್ಟ 4 ಸಾವಿರ ಎಂಎಎಚ್‌ ಇದೆಯೇ ನೋಡಿ, ಅದಕ್ಕೆ ವೇಗದ ಚಾರ್ಜರ್‌ ಇದೆಯಾ ಗಮನಿಸಿ. ಉತ್ತಮ ಕಂಪೆನಿಯ ಪ್ರೊಸೆಸರ್‌, ಪಿಕ್ಸಲ್‌ಗಿಂತ ಮುಖ್ಯವಾಗಿ ಗುಣಮಟ್ಟದ ಫೋಟೊ ತೆಗೆಯುವ ಕ್ಯಾಮರಾ, ಕಡಿಮೆ ಸಾರ್‌ ವ್ಯಾಲ್ಯೂ, ಎಲ್ಲಕ್ಕಿಂತ ಮುಖ್ಯವಾಗಿ ಅದರ ಸರ್ವೀಸ್‌ ಸೆಂಟರ್‌ ಹತ್ತಿರದಲ್ಲಿದೆಯೇ ಚೆಕ್‌ ಮಾಡಿ.

ಪರದೆಯ ರಿಫ್ರೆಶ್‌ರೇಟ್‌
ಈಗ ಹೊಸದೊಂದು ಗಿಮಿಕ್‌ ಆರಂಭವಾಗಿದೆ. ಅದು ಮೊಬೈಲ್‌ ಪರದೆಯ ರಿಫ್ರೆಶ್‌ರೇಟ್‌ ಎಂಬ ಮತ್ತೂಂದು ಅನಗತ್ಯ ಅಂಶ. ಸಾಮಾನ್ಯ ಮೊಬೈಲ್‌ ಫೋನ್‌ಗಳ ಸ್ಕ್ರೀನ್‌ ರಿಫ್ರೆಶ್‌ರೇಟ್‌ 60 ಹಟ್ಜ್ì ಇರುತ್ತದೆ. ಅದನ್ನು ಕೆಲವು ಫೋನ್‌ಗಳು ತಮ್ಮಲ್ಲಿ 90, 120 ಹಟ್ಜ್ì ಎಂದೆಲ್ಲಾ ಪ್ರಕಟಿಸುತ್ತವೆ. ಸುಮ್ಮನೆ, 60 ಹಟ್ಜ್ì ಇರುವ ಫೋನನ್ನೂ 90- 120 ಇರುವ ಫೋನ್‌ಗಳನ್ನೂ ತೆಗೆದುಕೊಂಡು ಪರದೆಯನ್ನು ವೇಗವಾಗಿ ಸೊðàಲ್‌ ಮಾಡುತ್ತಾ ಹೋಗಿ, ಅದೇನು ವ್ಯತ್ಯಾಸ ಕಾಣುತ್ತದೆ ನೋಡಿ! ಹೆಚ್ಚೇನಿಲ್ಲ.
ಪರದೆಯ ರಿಫ್ರೆಶ್‌ರೇಟ್‌ಗಿಂತ ಪರದೆ ಯಾವುದು ಎಂಬುದು ಮುಖ್ಯ. ಐಪಿಎಸ್‌, ಎಲ್‌ಸಿಡಿಗಿಂತ ಎಲ್‌ಟಿಪಿಎಸ್‌ ಡಿಸ್‌ಪ್ಲೇ ಚೆನ್ನಾಗಿರುತ್ತದೆ. ಎಲ್‌ಟಿಪಿಎಸ್‌ಗಿಂತ ಅಮೋಲೆಡ್‌ ಪರದೆ ಇನ್ನೂ ಚೆನ್ನಾಗಿರುತ್ತದೆ. ಜೊತೆಗೆ ಕಣ್ಣಿಗೆ ಹಿತವಾಗಿರುತ್ತದೆ, ಅಲ್ಲದೇ ಕಡಿಮೆ ಬ್ಯಾಟರಿ ತಿನ್ನುತ್ತದೆ. ಕಂಪೆನಿಗಳು ಇಂಥ ಗ್ರಾಹಕೋಪಯೋಗಿ ಅಂಶಗಳತ್ತ ಗಮನ ಹರಿಸಲಿ.

– ಕೆ.ಎಸ್‌. ಬನಶಂಕರ ಆರಾಧ್ಯ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ದೇವಸ್ಥಾನಗಳಿಗೆ ಹೋದಾಗ ನಾವೇನೆಂದು ಕೋರಿಕೊಳ್ಳುತ್ತೇವೆ? ವಿದ್ಯೆ, ಬುದ್ಧಿ ಮತ್ತು ದುಡ್ಡು. ಬೇಡಿ ಬಂದವರಿಗೆ ಕೇಳಿದ್ದನ್ನು ಕರುಣಿಸುವ ದೇವರನ್ನು ಕಂಡು ಬರುವಾಗ...

  • ಮನೆಯ ವಿನ್ಯಾಸ ಮಾಡುವಾಗ ನಮಗೆ ಅಕ್ಕಪಕ್ಕದವರ ನಿವೇಶನಗಳ, ಅಲ್ಲಿ ಕಟ್ಟಿರುವ ಮನೆಗಳ ಮೇಲೆ ನಿಯಂತ್ರಣ ಇಲ್ಲದಿದ್ದರೂ, ಆ ಕಡೆಯಿಂದ ನಮಗೆ ಹೆಚ್ಚು ಕಿರಿಕಿರಿ ಆಗದಂತೆ...

  • ನೀವು ಒಂದು ಬ್ಯಾಂಕಿನ ಮೂಲಕ ನಿಮ್ಮ ಎಲ್ಲಾ ಆದಾಯದ, ಆರ್ಥಿಕ ಸ್ಥಿತಿಗತಿಗಳ ವಿವರಗಳನ್ನು ನೀಡಿ ಅದಕ್ಕಿರುವ ಪ್ರವೇಶ, ವಾರ್ಷಿಕ ಶುಲ್ಕ ನೀಡಿ ಒಂದು ಕ್ರೆಡಿಟ್‌ ಕಾರ್ಡ್‌...

  • ಯಾವುದೇ ಕಂಪನಿ ಫ‌ಂಡ್ಸನ್ನು ಕ್ರೋಢಿಕರಿಸುವ ಇತರ ಸ್ವಾಭಾವಿಕ ಮಾರ್ಗಗಳು ಇಲ್ಲದಿರುವಾಗ, ಬಾಂಡ್‌ಅನ್ನು ಬಿಡುಗಡೆ ಮಾಡುತ್ತದೆ. ಇದು ಒಂದು ರೀತಿಯಲ್ಲಿ ಹೂಡಿಕೆದಾರರು...

  • ಕಾರು ಕೊಳ್ಳಲು ಹೋಗುವಾಗ ನಮಗೆ ಎದುರಾಗುವ ಮೊದಲ ಸಮಸ್ಯೆ ಎಂದರೆ ಸೇಲ್ಸ್‌ಮನ್‌ ವಿವರಿಸುವ ಅನೇಕ ಸವಲತ್ತುಗಳು, ಶಬ್ದಗಳು ನಮಗೆ ಅರ್ಥವಾಗದೇ ಹೋಗುವುದು. ಹೀಗಾಗಿ...

ಹೊಸ ಸೇರ್ಪಡೆ