ಹಾಳಾಗುವ ಹಲಸು, ಅರಸನಾಗುವುದು ಯಾವಾಗ?


Team Udayavani, Jun 19, 2017, 5:42 PM IST

halasu.jpg

ಕರಾವಳಿ ಕರ್ನಾಟಕದ ಹಾಗೂ ಮಲೆನಾಡಿನ ಹಲವು ಹಳ್ಳಿಗಳಲ್ಲಿ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ನೀವು ಕಾಣ ಬಹುದಾದ ಒಂದು ದೃಶ್ಯ: ಹಲಸಿನ ಮರಗಳಿಂದ ಬಿದ್ದು ಕೊಳೆಯುವ ರಾಶಿರಾಶಿ ಹಲಸಿನ ಹಣ್ಣುಗಳು. ಕರ್ನಾಟಕದಲ್ಲಿ ಪ್ರತಿ ವರ್ಷ ಕನಿಷ್ಠ 2,000 ಕೋಟಿ ರೂಪಾಯಿಯ ಹಲಸು ಹಾಳಾಗುತ್ತಿದೆ ಎಂದು ಅಂದಾಜು.

ಎಂತಹ ಸಂಪನ್ಮೂಲಕ್ಕೆ ಎಂತಹ ದುರವಸ್ಥೆ! ಹೀಗೆ ಹಲಸು ಹಾಳಾಗಲು ನಮ್ಮ ಅಲಕ್ಷ್ಯವೇ ಕಾರಣವಲ್ಲವೇ?
ಈ ಹಿನ್ನೆಲೆಯಲ್ಲಿ, ಹಲಸಿನ ಬಗೆಬಗೆ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲಿಕ್ಕಾಗಿ ಸಂಘಟಿಸಲಾಗುತ್ತಿರುವ ಹಲಸು ಹಬ್ಬಗಳು ಮುಖ್ಯವಾಗುತ್ತವೆ. ಇತ್ತೀಚೆಗಿನ ಹಲಸು ಹಬ್ಬ ಆಯೋಜಿಸಿದ್ದು ನಮ್ಮ ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರಿನ ಬಾಳಂಭಟ್‌ ಸಭಾಂಗಣದಲ್ಲಿ.

ಈ ಹಲಸು ಹಬ್ಬ ಉದ್ಘಾಟಿಸಿದವರು ಕೇರಳ ಸರಕಾರದಿಂದ ಅಂತರರಾಷ್ಟೀಯ ಹಲಸು ರಾಯಭಾರಿ ಎಂದು ಗೌರವಿಸಲ್ಪಟ್ಟ ಶ್ರೀಪಡ್ರೆ ಅವರು. ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರೂ ಆಗಿರುವ ಅವರು, ತಮ್ಮ ಉದ್ಘಾಟನಾ ಭಾಷಣದಲ್ಲಿ ಹೇಳಿದ ಒಂದು ಮಾತು, ನಮ್ಮ ಜನರಿಗೆ ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಸಿರಿಧಾನ್ಯಗಳ ಮೋಹ ಹಿಡಿಸಿದಂತೆ ಹಲಸಿನ ಮೋಹ ಹಿಡಿಸಬೇಕು. ಈ ಮಾತಿನ ಮರ್ಮ ಗ್ರಹಿಸಿದರೋ ಎಂಬಂತೆ ಅಂದಿನ ಹಲಸು ಹಬ್ಬದಲ್ಲಿ ಕೆಲವರು ತಮ್ಮ ವಿನೂತನ ಹಲಸು ತಿನಿಸುಗಳ ಮೂಲಕ ಜನಮನ ಗೆದ್ದರು. ಅವರÇÉೊಬ್ಬರು ದಕ್ಷಿಣ ಕನ್ನಡದ ಪುತ್ತೂರಿನ ಹತ್ತಿರದ ಮರಿಕೆಯ ಸುಹಾಸ್‌. ಅವರು ಅಲ್ಲಿ ತಯಾರಿಸಿ ಕೊಡುತ್ತಿದ್ದ ಹಲಸಿನ ಚಾಟೆY ಭಾರೀ ಬೇಡಿಕೆ. ಅವರ ಮಳಿಗೆಯಲ್ಲಿ ಮಾರಾಟಕ್ಕಿದ್ದ ಇತರ ವಿಶೇಷ ತಿನಿಸುಗಳು: ಹಲಸಿನ ಪಲಾವ್‌, ಬನ್ಸ್‌, ಬರ್ಫಿ ಹಾಗೂ ಪರೋಟ.

ಕೇರಳದ ಕೋಳಿಯೂರಿನ ರವಿಶಂಕರ್‌ ಮತ್ತು ತಂಡದವರು ಗ್ರಾಹಕರಿಗೆ ನೀಡುತ್ತಿದ್ದದ್ದು ಅÇÉೇ ತಯಾರಿಸಿದ ಹಲಸಿನ ಬಿಸಿಬಿಸಿ ದೋಸೆ, ಬಜ್ಜಿ ಮತ್ತು ಎಣ್ಣೆಯಲ್ಲಿ ಕರಿದ ಹಲಸಿನ ಹಪ್ಪಳ. ಅವರಿಗೆ ಅಂದು ಸಂಜೆಯವರೆಗೆ ಬಿಡುವಿಲ್ಲದ ವ್ಯಾಪಾರ. ಅಲ್ಲಿ ಶರವು ಕ್ಯಾಟರರ್ಸ್‌ ಮಳಿಗೆಯ ಎದುರು ಮುಗಿಯದ ಸರತಿ ಸಾಲು  ಹಲಸಿನ ಕಬಾಬ್‌, ಮಂಚೂರಿ, ಚಿಲ್ಲಿ, ಘೀರೋಸ್ಟ್‌, ಪಲಾವ್‌, ಬನ್ಸ್‌, ಅಂಬೊಡೆ ಮತ್ತು ದೋಸೆಗಳ ಖರೀದಿಗೆ. ಮುಳಿಯ ವೆಂಕಟಕೃಷ್ಣ ಶರ್ಮರು ತಂದಿದ್ದ ಹಲಸಿನ ಪಫ‌Yಳ ಮಾರಾಟವೂ ಬಿರುಸು. ಮೈತ್ರೇಯಿ ಶೆಣೈ ಹಲಸಿನ ಬೀಜದ ಹುಡಿಯಿಂದ ತಯಾರಿದ ಪಾನೀಯ ಜಾಫಿಗೆ ನಿರಂತರ ಬೇಡಿಕೆ.

ಹಲಸಿನ ಉತ್ಪನ್ನಗಳಿಗೆ ಭಾರೀ ಬೇಡಿಕೆಯಿದೆ. ಆದರೆ ಪೂರೈಕೆ ಸಾಕಾಗುತ್ತಿಲ್ಲ. ಪೂರೈಕೆ ಹೆಚ್ಚಬೇಕಾದರೆ ಯಾಂತ್ರೀಕೃತ ಉತ್ಪಾದನೆ ಅತ್ಯಗತ್ಯ ಎಂದು ತಮ್ಮ ಮಾತಿನಲ್ಲಿ ಸ್ಪಷ್ಟ ಪಡಿಸಿದರು ಶ್ರೀಪಡ್ರೆ. ಈ ನಿಟ್ಟಿನಲ್ಲಿ ಉÇÉೇಖಾರ್ಹ ಸಾಧನೆ ಮಾಡಿದವರಿ¨ªಾರೆ. ಚಿಕ್ಕಮಗಳೂರು ಜಿÇÉೆಯ ನರಸಿಂಹರಾಜಪುರ ತಾಲೂಕಿನ ಆಡುವಳ್ಳಿಯ ಎಸ್‌.ಆರ್‌.ಎಸ್‌. ಹೋಂ ಇಂಡಸ್ಟ್ರೀಸಿನ ಕೆ.ಎಸ್‌. ಶಿವಶಂಕರ್‌ 15 ವರ್ಷದ ಪ್ರಯತ್ನದಿಂದ ಹಲಸು ಹಪ್ಪಳ ತಯಾರಿ ಯಂತ್ರ ಅಭಿವೃದ್ಧಿಪಡಿಸಿ, ಜುಲೈ 2015ರಿಂದರಿಂದಲೇ ಹಲಸಿನ ಹಪ್ಪಳ ಉತ್ಪಾದಿಸುತ್ತಿರುವುದು ಸಾಧನೆಯೇ ಸೈ. ಉಡುಪಿ ಜಿÇÉೆಯ ಕುಂದಾಪುರ ಹತ್ತಿರದಲ್ಲಿ ಕಿಶೋರ್‌ ಕೊಡ್ಗಿ ಅವರ ಗೋಕುಲ… ಫ್ರುಟ್ಸ್‌ ಕಳೆದ ಹತ್ತು ವರ್ಷಗಳಿಂದ ಹಲಸಿನ ಹಣ್ಣಿನ ವ್ಯಾಕ್ಯೂಮ… ಫ್ರೈ ಚಿಪ್ಸ್‌ ಉತ್ಪಾದಿಸಿ ಮಾರಾಟ ಮಾಡುತ್ತಿದೆ. ಇದು ದೇಶದÇÉೇ ಮೊತ್ತಮೊದಲ ಇಂತಹ ಉದ್ಯಮ. ದೇಶಾದ್ಯಂತ ನೂರಕ್ಕೂ ಅಧಿಕ ನ್ಯಾಚುರಲ… ಐಸ್‌ ಕ್ರೀಮ… ಮಳಿಗೆಗಳಲ್ಲಿ ಹಲಸಿನ ಐಸ್‌ ಕ್ರೀಮನ್ನು ಯಶಸ್ವಿಯಾಗಿ ಮಾರಾಟ ಮಾಡುತ್ತಿರುವುದು ಇದರ ರೂವಾರಿ ಆರ್‌.ಎಸ್‌. ಕಾಮತರ ಸಾಹಸ.

ಹಲಸಿನ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿಸಲಿಕ್ಕಾಗಿ ಶ್ರೀಪಡ್ರೆಯವರು ಸೂಚಿಸಿದ್ದು ಎರಡು ದಾರಿಗಳನ್ನು: ಮೊದಲನೆಯದು, ಉತ್ತರ ಭಾರತದಲ್ಲಿ ಹಲಸಿನ ಹಣ್ಣಿಗೆ ಬೇಡಿಕೆ ಮೂಡಿಸುವುದು. ಈಗ ಅಲ್ಲಿ ತರಕಾರಿಯಾಗಿ ಹಲಸಿನ ಕಾಯಿಗೆ ಬೇಡಿಕೆ ಚೆನ್ನಾಗಿದೆ. ಆದರೆ ಹಲಸಿನ ಹಣ್ಣಿನ ಬಳಕೆ ಅಲ್ಲಿ ಬಹಳ ಕಡಿಮೆ. ಎರಡನೆಯದಾಗಿ, ಹಲಸಿನ ಕಾಯಿಯ ಸೊಳೆಯ ಗ್ಲೆ„ಸೆಮಿಕ್ಸ್‌ ಇಂಡೆಕ್ಸ್‌ ಕಡಿಮೆ ಇರುವ ಕಾರಣ ಅದು ಸಕ್ಕರೆ ಕಾಯಿಲೆಯವರಿಗೆ ಸೂಕ್ತ ಆಹಾರ ಎಂಬುದಕ್ಕೆ (ಇದು ಅಧ್ಯಯನಗಳಿಂದ ದೃಢಪಟ್ಟಿರುವ ವಿಷಯ) ವ್ಯಾಪಕ ಪ್ರಚಾರ ನೀಡುವುದು. ಹೆಚ್ಚೆಚ್ಚು ಮಧುಮೇಹಿಗಳು ತರಕಾರಿಯಾಗಿ ಹಸಿಹಲಸು ತಿನ್ನತೊಡಗಿದರೆ, ಅದಕ್ಕೆ ಬೇಡಿಕೆ ಖಂಡಿತ ಹೆಚ್ಚಲಿದೆ.

ಈಗ ದಕ್ಷಿಣ ಭಾರತದಲ್ಲಿ ಹಬ್ಬುತ್ತಿರುವ ಹಲಸು ಜಾಗೃತಿ ಆಂದೋಲನವು ಸ್ಥಳೀಯ ಉತ್ತಮ ತಳಿಗಳ ಆಯ್ಕೆ ಹಾಗೂ ಕೃಷಿಯಿಂದ ಶುರು ಮಾಡಿ, ಮುನ್ನಡೆದರೆ ಭಾರತ ಹಲಸಿನ ಕೃಷಿ ಮತ್ತು ಉದ್ದಿಮೆ ಎರಡರಲ್ಲೂ ಮುಂಚೂಣಿಗೆ ಬರಲು ಸಾಧ್ಯವಿದೆ. ವಿಯೆಟ್ನಾಮಿನ ಉದಾಹರಣೆ ನಮ್ಮ ಕಣ್ಣ ಮುಂದಿದೆ. ಕೇವಲ ಒಂದೂವರೆ ದಶಕದಲ್ಲಿ ಅಲ್ಲಿ ಹಲಸು ಪ್ಲಾಂಟೇಷನ್‌ 50,000 ಹೆಕ್ಟೇರಿಗೆ ವ್ಯಾಪಿಸಿದೆ. ಅಲ್ಲಿ ಬೆಳೆಯುವ ಹಲಸಿನ ಶೇಕಡಾ 60ರಷ್ಟು ಉದ್ದಿಮೆಗೆ ಬಳಕೆ ಆಗುತ್ತದೆ. ವಿಯೆಟ್ನಾಮಿನ ಮುಖ್ಯ ಹಲಸಿನ ಉತ್ಪನ್ನ ಬಕ್ಕೆ ಹಣ್ಣಿನ ವ್ಯಾಕ್ಯೂಮ… ಫ್ರೈ ಚಿಪ್ಸ್‌. ಇದರ ಉತ್ಪಾದನೆಗೆ ಸ್ವಯಂಚಾಲಿತ ಯಂತ್ರಗಳು ಹಾಗೂ ತೀರಾ ಕಡಿಮೆ ಎಣ್ಣೆಯ ಬಳಕೆ. ಈಗ ಇದರ ಉತ್ಪಾದನೆಯಲ್ಲಿ ಜಗತ್ತಿನÇÉೇ ಮೊದಲ ಸ್ಥಾನದಲ್ಲಿದೆ ಅಲ್ಲಿನ ವಿನಾಮಿಟ್‌ ಕಂಪೆನಿ. ಹಲವು ದೇಶಗಳಿಗೆ ಇದನ್ನು ರಫ್ತು ಮಾಡುತ್ತಿರುವ ಈ ದೈತ್ಯ ಕಂಪೆನಿಯ ಹಲಸಿನ ತೋಟದ ವಿಸ್ತೀರ್ಣ 10,000 ಹೆಕ್ಟೇರ್‌. ವಿಯೆಟ್ನಾಮಿನಲ್ಲಿ ಹಲಸು ಉದ್ದಿಮೆ ಬೃಹತ್ತಾಗಿ ಬೆಳೆಯಲು ಪ್ರಧಾನ ಕಾರಣಗಳು: ಏಕಬೆಳೆಯಾಗಿ ವಿಸ್ತಾರ ತೋಟಗಳಲ್ಲಿ ಹಲಸಿನ ಕೃಷಿ ಹಾಗೂ ಪೂರ್ವಸಂಸ್ಕರಣಾ ಕೇಂದ್ರಗಳು (ಪ್ರಿ-ಪೊ›ಸೆಸಿಂಗ್‌ ಸೆಂಟರ್ಸ್‌). ಈಗ ಕೇರಳದಲ್ಲಿ ಎರಡು ಹಲಸು ಉದ್ಯಮ ಘಟಕಗಳು ಇಂತಹ ಕೇಂದ್ರಗಳನ್ನು ತೆರೆದಿರುವುದು ಆಶಾದಾಯಕ ಬೆಳವಣಿಗೆ.

ಹಲಸು ಭವಿಷ್ಯದ ಬೆಳೆ ಆಗಬೇಕಾದರೆ, ಹಲಸಿನ ಕೃಷಿ ಬಗ್ಗೆ ಕೃಷಿಕರು ತಮ್ಮ ಧೋರಣೆಯನ್ನೇ ಬದಲಾಯಿಸ ಬೇಕಾಗಿದೆ. ಹಲಸಿನ ಗಿಡ ನೆಟ್ಟರಾಯಿತು, ಅದರ ಪಾಡಿಗೆ ಅದು ಬೆಳೆಯುತ್ತದೆ ಎಂಬ ಧೋರಣೆ ಸಲ್ಲದು. ಅದನ್ನು ಕಾಫಿ ಪ್ಲಾಂಟೇಷನುಗಳಂತೆ ವೈಜ್ಞಾನಿಕವಾಗಿ ಬೆಳೆಸಬೇಕಾಗಿದೆ. ಹಲಸಿನ ಮರಗಳು 15 ಅಡಿಗಳಿಗಿಂತ ಹೆಚ್ಚು ಎತ್ತರಕ್ಕೆ ಬೆಳೆಯಲು ಬಿಡಲೇ ಬಾರದು. ಹಲಸಿನ ಗಿಡಗಳ ಪೂ›ನಿಂಗ್‌ (ವರ್ಷಕ್ಕೆ ಎರಡು ಸಲ) ಕಡ್ಡಾಯ. ಹಲಸಿನ ಕಾಯಿಗಳ ಥಿನ್ನಿಂಗ್‌ ಕೂಡ ಅತ್ಯಗತ್ಯ. 

ಹಲಸಿನ ಉತ್ಪನ್ನಗಳ ಉತ್ಪಾದಕರೂ ತಮ್ಮ ಧೋರಣೆ ಬದಲಾಯಿಸಬೇಕಾಗಿದೆ. ಉತ್ಪನ್ನ ಹೇಗಿದ್ದರೂ ಮಾರಾಟವಾಗುತ್ತದೆ ಎಂಬ ಧೋರಣೆ ಸಲ್ಲದು. ಗುಣಮಟ್ಟ ಸುಧಾರಣೆ ಮತ್ತು ಆಕರ್ಷಕ ಪ್ಯಾಕೇಜಿಂಗ್‌ ಇಂದಿನ ತುರ್ತು. ಚುಟುಕಾಗಿ ಹೇಳಬೇಕೆಂದರೆ, ಹಲಸಿನ ಉತ್ಪನ್ನಗಳು ಮಾರುಕಟ್ಟೆಯಲ್ಲಿರುವ ಇತರ ಅತ್ಯುತ್ತಮ ಬ್ರಾಂಡಿನ ಆಹಾರ ಉತ್ಪನ್ನಗಳಿಗೆ ಸ್ಪರ್ಧೆ ನೀಡುವಂತಿರಬೇಕು. ಇವನ್ನೆಲ್ಲ ಸಾಧಿಸಿದರೆ, ಹಲಸಿನ ತವರೂರಾದ ಭಾರತದಲ್ಲಿ ಹಲಸು ಭವಿಷ್ಯದ ಬೆಳೆಯಾಗಲಿದೆ.  

-ಅಡೂxರು ಕೃಷ್ಣ ರಾವ್‌

ಟಾಪ್ ನ್ಯೂಸ್

ಚಿರು ಇಲ್ಲದ ಮೂರು ವರುಷ

ಚಿರು ಇಲ್ಲದ ಮೂರು ವರುಷ

Haveri: ಪತ್ನಿ ಹತ್ಯೆಗೈದು ಆತ್ಮಹತ್ಯೆ ಮಾಡಿಕೊಂಡ ಪತಿ

Haveri: ಪತ್ನಿ ಹತ್ಯೆಗೈದು ಆತ್ಮಹತ್ಯೆ ಮಾಡಿಕೊಂಡ ಪತಿ

ಮನೆ ಯಜಮಾನಿ ಯಾರು ಎಂದು ಮನೆಯವರೇ ತೀರ್ಮಾನ ಮಾಡಬೇಕು: ಡಿ.ಕೆ.ಶಿವಕುಮಾರ್

ಮನೆ ಯಜಮಾನಿ ಯಾರು ಎಂದು ಮನೆಯವರೇ ತೀರ್ಮಾನ ಮಾಡಬೇಕು: ಡಿ.ಕೆ.ಶಿವಕುಮಾರ್

ದ.ಕ ಜಿಲ್ಲೆಯ ಯಾವ ಮೂಲೆಗೂ ನೀರಿನ ಸಮಸ್ಯೆ‌ ಆಗದಂತೆ ನೋಡುತ್ತೇವೆ: ಜಿಲ್ಲಾಧಿಕಾರಿ

ದ.ಕ ಜಿಲ್ಲೆಯ ಯಾವ ಮೂಲೆಗೂ ನೀರಿನ ಸಮಸ್ಯೆ‌ ಆಗದಂತೆ ನೋಡುತ್ತೇವೆ: ಜಿಲ್ಲಾಧಿಕಾರಿ

Cardiologist: ಸಾವಿರಾರು ಹೃದಯ ಸಂಬಂಧಿ ಸರ್ಜರಿ ಮಾಡಿದ್ದ ಖ್ಯಾತ ವೈದ್ಯ ಹೃದಯಾಘಾತದಿಂದ ನಿಧನ

Cardiologist: ಸಾವಿರಾರು ಹೃದಯ ಸಂಬಂಧಿ ಸರ್ಜರಿ ಮಾಡಿದ್ದ ಖ್ಯಾತ ವೈದ್ಯ ಹೃದಯಾಘಾತದಿಂದ ನಿಧನ

Shivamogga: ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಪೋಸ್ಟ್ ಮಾರ್ಟಮ್ ಮಾಡಿದ ವೈದ್ಯರು

Shivamogga: ಮೊಬೈಲ್ ಟಾರ್ಚ್ ಬೆಳಕಿನಲ್ಲಿ ಪೋಸ್ಟ್ ಮಾರ್ಟಮ್ ಮಾಡಿದ ವೈದ್ಯರು

ಜೀವಂತವಾಗಿದ್ದರೂ ದಾಖಲೆಯಲ್ಲಿ ʼಮೃತ ವ್ಯಕ್ತಿʼ: ಎಡವಟ್ಟಿನಿಂದ ವೃದ್ಧಾಪ್ಯ ವೇತನವೇ ಗೋತಾ.!

ಜೀವಂತವಾಗಿದ್ದರೂ ದಾಖಲೆಯಲ್ಲಿ ʼಮೃತ ವ್ಯಕ್ತಿʼ: ಎಡವಟ್ಟಿನಿಂದ ವೃದ್ಧಾಪ್ಯ ವೇತನವೇ ಗೋತಾ.!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಪಾಕ್ ಆಕ್ರಮಿತ ಪ್ರದೇಶದಲ್ಲಿ ತಲೆಯೆತ್ತಿದ ಶಾರದಾ ಪೀಠ | ಏನಿದರ ಹಿನ್ನೆಲೆ ?

udayavani youtube

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

udayavani youtube

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

ಹೊಸ ಸೇರ್ಪಡೆ

ಚಿರು ಇಲ್ಲದ ಮೂರು ವರುಷ

ಚಿರು ಇಲ್ಲದ ಮೂರು ವರುಷ

Haveri: ಪತ್ನಿ ಹತ್ಯೆಗೈದು ಆತ್ಮಹತ್ಯೆ ಮಾಡಿಕೊಂಡ ಪತಿ

Haveri: ಪತ್ನಿ ಹತ್ಯೆಗೈದು ಆತ್ಮಹತ್ಯೆ ಮಾಡಿಕೊಂಡ ಪತಿ

ಮನೆ ಯಜಮಾನಿ ಯಾರು ಎಂದು ಮನೆಯವರೇ ತೀರ್ಮಾನ ಮಾಡಬೇಕು: ಡಿ.ಕೆ.ಶಿವಕುಮಾರ್

ಮನೆ ಯಜಮಾನಿ ಯಾರು ಎಂದು ಮನೆಯವರೇ ತೀರ್ಮಾನ ಮಾಡಬೇಕು: ಡಿ.ಕೆ.ಶಿವಕುಮಾರ್

ದ.ಕ ಜಿಲ್ಲೆಯ ಯಾವ ಮೂಲೆಗೂ ನೀರಿನ ಸಮಸ್ಯೆ‌ ಆಗದಂತೆ ನೋಡುತ್ತೇವೆ: ಜಿಲ್ಲಾಧಿಕಾರಿ

ದ.ಕ ಜಿಲ್ಲೆಯ ಯಾವ ಮೂಲೆಗೂ ನೀರಿನ ಸಮಸ್ಯೆ‌ ಆಗದಂತೆ ನೋಡುತ್ತೇವೆ: ಜಿಲ್ಲಾಧಿಕಾರಿ

Cardiologist: ಸಾವಿರಾರು ಹೃದಯ ಸಂಬಂಧಿ ಸರ್ಜರಿ ಮಾಡಿದ್ದ ಖ್ಯಾತ ವೈದ್ಯ ಹೃದಯಾಘಾತದಿಂದ ನಿಧನ

Cardiologist: ಸಾವಿರಾರು ಹೃದಯ ಸಂಬಂಧಿ ಸರ್ಜರಿ ಮಾಡಿದ್ದ ಖ್ಯಾತ ವೈದ್ಯ ಹೃದಯಾಘಾತದಿಂದ ನಿಧನ