ಮೇಡ್ ಇನ್ ಇಂಡಿಯಾ ಜೀಪ್ ವ್ರಾಂಗ್ಲರ್
Team Udayavani, Mar 22, 2021, 6:37 PM IST
ಕೆಲವು ತಿಂಗಳ ನಿರೀಕ್ಷೆ ಬಳಿಕ ಜೀಪ್ ಇಂಡಿಯಾ ಕಂಪನಿ, ಸ್ಥಳೀಯವಾಗಿಯೇ ರೂಪಿಸಿರುವ ಜೀಪ್ ವ್ರಾಂಗ್ಲರ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದುಎರಡು ವೇರಿಯಂಟ್ಗಳಲ್ಲಿ ಸಿಗಲಿದೆ. ಅಂದರೆ, ವ್ರಾಂಗ್ಲರ್ ಅನ್ ಲಿಮಿಟೆಡ್ ಮತ್ತು ವ್ರಾಂಗ್ಲರ್ ರುಬಿಕಾರ್ನ್ ಎಂಬ ಎರಡು ವೇರಿಯಂಟ್ಗಳು ಸಿಗಲಿವೆ.
ಅನ್ ಲಿಮಿಟೆಡ್ ಹೆಸರಿನ ಜೀಪ್ ನ ಬೆಲೆ 53.90 ಲಕ್ಷ ರೂ.ಗಳಿದ್ದರೆ, ರುಬಿಕಾರ್ನ್ ಹೆಸರಿನ ಜೀಪ್ಗೆ 57.90 ಲಕ್ಷ ರೂ. ದರವಿದೆ. ಅಂದ ಹಾಗೆ, ಈ ಜೀಪಿನ ಪ್ರಿ ಬುಕ್ಕಿಂಗ್ ಈಗಾಗಲೇ ಆರಂಭವಾಗಿದೆ. ವ್ರಾಂಗ್ಲರ್ ಜೀಪ್ ನಲ್ಲಿ 2.0 ಲೀ. ಪೆಟ್ರೋಲ್ ಎಂಜಿನ್ ಸಾಮರ್ಥ್ಯವಿದ್ದು, 268 ಎಚ್ಪಿ, 400ಎನ್ಎಂ ಪವರ್ ಇದೆ. ಇದರಲ್ಲಿ 8 ಸ್ಪೀಡ್ ಗೇರ್ ಬಾಕ್ಸ್ ಇದೆ. ಇದು 5 ಬಣ್ಣಗಳಲ್ಲಿ ಲಭ್ಯವಿದ್ದು, 60 ಸೇಫ್ಟಿ ಫೀಚರ್ ಗಳನ್ನು ಒಳಗೊಂಡಿದೆ. ಅಂದ ಹಾಗೆ, ಇದರಲ್ಲಿ ಆಟೋಮ್ಯಾಟಿಕ್ ಹೆಡ್ ಲ್ಯಾಂಪ್, 45.72 ಸಿಎಂ ಅಲೇ ವ್ಹೀಲ್ಸ್ ಆಂಬಿಯಂಟ್ ಎಲ್ ಇಡಿ ಒಳಾಂಗಣ ಲೈಟಿಂಗ್, ಆಪಲ್ ಕಾರ್ ಪ್ಲೇ ಮತ್ತು ಆ್ಯಂಡ್ರಾಯ್ಡ್ ಆಟೋ, ಸ್ಟೀರಿಂಗ್ಮೌಂಟೆಡ್ ಆಡಿಯೋ ಕಂಟ್ರೋಲ್ ಮತ್ತು ಇಂಟಿ ಗ್ರೇಟೆಡ್ವಾಯಿಸ್ ಕಮಾಂಡ್, ರಿಯರ್ ವ್ಯೂ ಆಟೋ ಡಿಮ್ಮಿಂಗ್ ಮಿರರ್, ಎಲೆಕ್ಟ್ರಾನಿಕ್ ಸ್ಟೆಬಿಲಿಟಿ ಕಂಟ್ರೋಲ್ , ಅಡ್ವಾನ್ಸ್ಡ್ ಫ್ರಂಟ್ ಆಂಡ್ ಸೈಡ್ ಏರ್ ಬ್ಯಾಗ್ಸ್ ಫೀಚರ್ಗಳುಂಟು.
ರಿನಾಲ್ಟ್ ನಿಂದ ಹೊಸ ಲೋಗೋ ಬಿಡುಗಡೆ :
ಪ್ರತಿಷ್ಠಿತ ಕಾರು ತಯಾರಕ ಸಂಸ್ಥೆ ರಿನಾಲ್ಟ್, ತನ್ನ ಎಲ್ಲಾ ಮಾದರಿಯ ಕಾರುಗಳಿಗಾಗಿ ಡೈಮೆಂಡ್ ರೂಪದ ಹೊಸ ಲೋಗೋ ಅನಾವರಣಮಾಡಿದೆ. 1925ಕ್ಕೂ ಮುನ್ನ ಇದೇ ರೀತಿಯಲೋಗೋ ಬಳಕೆ ಮಾಡಲಾಗುತ್ತಿದ್ದು, ಈಗ ಮತ್ತೆ ಅದೇ ರೂಪದಲ್ಲಿ ಹೊಸ ಲೋಗೋಅನಾವರಣಮಾಡಿದೆ. ಸದ್ಯಕಾರುಗಳಲ್ಲಿಬಳಕೆಯಲ್ಲಿರುವ ಲೋಗೋವನ್ನು 1992ರಲ್ಲಿ ಬಿಡುಗಡೆಗೊಳಿಸಲಾಗಿತ್ತು. 2024ರಲ್ಲಿ ಈ ಹೊಸ ಲೋಗೋ ಎಲ್ಲಾ ಕಾರುಗಳಲ್ಲಿ ಕಾಣಿಸಿಕೊಳ್ಳಲಿದೆ. ಸದ್ಯ 5 ಎಲೆಕ್ಟ್ರಿಕ್ ಕಾನ್ಸೆಪ್ಟ್ ಕಾರುಗಳಲ್ಲಿ ಇದನ್ನು ಹಾಕಲಾಗಿದೆ. ಅಂದ ಹಾಗೆ, ಇದು ರಿನಾಲ್ಟ್ ಕಂಪನಿಯ ಲೋಗೋದ 9ನೇ ರೂಪಾಂತರ.
-ಸೋಮಶೇಖರ ಸಿ.ಜೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ
Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ
Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ