ಲೆನೋವೋ ಹ್ಯಾಟ್ರಿಕ್‌!

Team Udayavani, Sep 9, 2019, 5:35 AM IST

ವರ್ಷದಿಂದ ಹೊಸ ಫೋನ್‌ಗಳನ್ನು ಬಿಡುಗಡೆ ಮಾಡದೇ ಮೌನವಾಗಿದ್ದ, ಚೀನಾದ ಲೆನೊವೋ, ಮೊನ್ನೆ ಗುರುವಾರ ಒಟ್ಟಿಗೇ 3 ಸ್ಮಾರ್ಟ್‌ಫೋನ್‌ಗಳನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಪ್ರತಿಸ್ಪರ್ಧಿಗಳಾದ ಶಿಯೋಮಿ, ರಿಯಲ್‌ ಮಿ, ಒಪ್ಪೋ, ವಿವೋ, ಆನರ್‌ ಫೋನ್‌ಗಳಿಗೆ ಪೈಪೋಟಿ ನೀಡಲು ಅದು ಸಜ್ಜಾಗಿ ಬಂದಂತೆ ಕಾಣುತ್ತಿದೆ. ಅತ್ಯುನ್ನತ ದರ್ಜೆ, ಮಧ್ಯಮ ದರ್ಜೆ ಮತ್ತು ಆರಂಭಿಕ ದರ್ಜೆಯಲ್ಲಿ ಜನರ ಬಜೆಟ್‌ಗೆ ಅನುಗುಣವಾಗಿ ಮೂರು ಫೋನ್‌ಗಳನ್ನು ಒಂದೇ ಬಾರಿ ಮಾರುಕಟ್ಟೆಗೆ ಪರಿಚಯಿಸಿದೆ.

ಲೆನೊವೋದಿಂದ 3 ಹೊಸ ಫೋನ್‌ಗಳು ಮಾರುಕಟ್ಟೆಗೆ
ಲ್ಯಾಪ್‌ಟಾಪ್‌, ಕಂಪ್ಯೂಟರ್‌ ಮಾರಾಟದಲ್ಲಿ ಪ್ರಸಿದ್ಧವಾಗಿರುವ ಲೆನೊವೋ, ಒಂದೆರಡು ವರ್ಷದವರೆಗೂ ಸ್ಮಾರ್ಟ್‌ಫೋನ್‌ ಮಾರಾಟದಲ್ಲಿ ಇತರ ಕಂಪೆನಿಗಳಿಗೆ ಪೈಪೋಟಿ ನೀಡುತ್ತಿತ್ತು. ಮೋಟೋರೊಲಾ ಫೋನ್‌ಗಳ ಒಡೆತನ ಕೂಡ ಇದೇ ಕಂಪೆನಿಯದ್ದು. ಝುಕ್‌ ಬ್ರಾಂಡ್‌ನ‌ಲ್ಲಿ ಒಂದೆರಡು ಮೊಬೈಲ್‌ಗ‌ಳನ್ನು ಈ ಕಂಪೆನಿ ಬಿಡುಗಡೆ ಮಾಡಿತ್ತು. ಆದರೆ ಅದು ಅಷ್ಟೇನೂ ಯಶಸ್ಸು ಕಾಣಲಿಲ್ಲ. ಅದೇಕೋ ಏನೋ, ಲೆನೊವೋ ಬ್ರಾಂಡಿನಡಿ ವರ್ಷದಿಂದೀಚೆಗೆ ಹೊಸ ಫೋನ್‌ಗಳನ್ನು ಕಂಪೆನಿ ಹೊರತಂದಿರಲಿಲ್ಲ. ಇಂತಿಪ್ಪ ಲೆನೊವೋ ಮೈಮುರಿದುಕೊಂಡು ಮೇಲೆದ್ದು, ಒಟ್ಟಿಗೇ ಮೂರು ಮೊಬೈಲುಗಳನ್ನು ಕಳೆದ ಗುರುವಾರ ಭಾರತದಲ್ಲಿ ಬಿಡುಗಡೆ ಮಾಡಿದೆ.
ಝಡ್‌, ಕೆ ಹಾಗೂ ಎ ಸರಣಿಯಲ್ಲಿ ಫೋನ್‌ಗಳನ್ನು ಕಂಪೆನಿ ಹೊರತಂದಿದೆ. ಝಡ್‌ ಸರಣಿ ಅತ್ಯುನ್ನತ ದರ್ಜೆಯದ್ದು, ಕೆ ಸರಣಿ ಮಧ್ಯಮ ಬಜೆಟ್‌ ಹಾಗೂ ಎ ಸರಣಿ ಆರಂಭಿಕ ದರ್ಜೆಯದು. ಈಗ, ಮೂರೂ ಮೊಬೈಲ್‌ಗ‌ಳಲ್ಲಿ ಯಾವ ಯಾವ ತಾಂತ್ರಿಕ ಅಂಶಗಳಿವೆ ತಿಳಿಯೋಣ.

ಲೆನೊವೋ ಝಡ್‌6 ಪ್ರೊ
ಮೊದಲೇ ತಿಳಿಸಿದಂತೆ ಝಡ್‌ ಸರಣಿಯ ಈ ಫೋನ್‌ ಫ್ಲಾಗ್‌ಶಿಪ್‌ (ಅತ್ಯುನ್ನತ ದರ್ಜೆ) ಫೋನ್‌. ಇದರಲ್ಲಿ ಸ್ನಾಪ್‌ಡ್ರಾÂಗನ್‌ 855 ಪ್ರೊಸೆಸರ್‌ ಇದೆ. ಸದ್ಯ ಎಸ್‌ಡಿ 855 ಪ್ರೊಸೆಸರ್‌ ಆ ಕಂಪೆನಿಯ ಮೇರು ಚಿಪ್‌ ಸೆಟ್‌ ಆಗಿದೆ. ಇದು 6.39 ಇಂಚಿನ ಫ‌ುಲ್‌ ಎಚ್‌ಡಿ ಮತ್ತು ಅಮೊಲೆಡ್‌ ಪರದೆ ಹೊಂದಿದೆ. ನೀರಿನ ಹನಿಯಂಥ (ವಾಟರ್‌ ಡ್ರಾಪ್‌) ಡಿಸ್‌ಪ್ಲೇ ಇದೆ. ಪರದೆಯ ಮೇಲೆ ಬೆರಳಚ್ಚು ಸ್ಕ್ಯಾನರ್‌ ಇದೆ. 8 ಜಿಬಿ ರ್ಯಾಮ್‌ ಮತ್ತು 128 ಜಿಬಿ ಆಂತರಿಕ ಸಂಗ್ರಹ ಸಾಮರ್ಥ್ಯ ಹೊಂದಿದೆ. 48 ಮೆ.ಪಿ. (ಮೂಲ ಸೆನ್ಸರ್‌) 16 ಮೆ.ಪಿ.(ವೈಡ್‌ ಆ್ಯಂಗಲ್‌), 8 ಮೆ.ಪಿ. (ಟೆಲಿಫೋಟೋ)ಹಾಗೂ 2 ಮೆ.ಪಿ.(ಸೂಪರ್‌ ವಿಡಿಯೋ) ಗಳುಳ್ಳ ನಾಲ್ಕು ಕ್ಯಾಮರಾಗಳನ್ನು ಹಿಂಬದಿಯಲ್ಲಿ ಹೊಂದಿದೆ. 32 ಮೆ.ಪಿ. ಉಳ್ಳ ಸೆಲ್ಫಿà ಕ್ಯಾಮರಾ ಇದೆ. 4000 ಎಂಎಎಚ್‌ ಬ್ಯಾಟರಿ ಹೊಂದಿದ್ದು, 27 ವ್ಯಾಟ್ಸ್‌ನ ವೇಗದ ಚಾರ್ಜರ್‌ ಹೊಂದಿದೆ. ಯುಎಸ್‌ಬಿ ಟೈಪ್‌ ಸಿ ಪೋರ್ಟ್‌ ಇರುತ್ತದೆ. ಇದು ಅಂಡ್ರಾಯ್ಡ 9 ಪೈ ಆವೃತ್ತಿ ಹೊಂದಿದ್ದು, ಇದಕ್ಕೆ ಝಡ್‌ ಯೂಸರ್‌ ಇಂಟರ್‌ಫೇಸ್‌ ಇರುತ್ತದೆ. ಸೆಪ್ಟೆಂಬರ್‌ 11ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ.

ಲೆನೊವೋ ಕೆ 10 ನೋಟ್‌
ಮಧ್ಯಮ ದರ್ಜೆಯ ಫೋನಾಗಿರುವ ಇದು, 6.3 ಇಂಚಿನ ಫ‌ುಲ್‌ ಎಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ನೀರಿನ ಹನಿಯ ನಾಚ್‌ ಇದ್ದು, ಸ್ನಾಪ್‌ಡ್ರಾÂಗನ್‌ 710 ಪ್ರೊಸೆಸರ್‌ ಒಳಗೊಂಡಿದೆ. ಇದರಲ್ಲಿ 16 ಮೆ.ಪಿ., 8 ಮೆ.ಪಿ. ಮತ್ತು 2 ಎಂಪಿ. ಹಿಂಬದಿ ಕ್ಯಾಮರಾ ಇದೆ. 16 ಮೆ.ಪಿ. ಸೆಲ್ಫಿà ಕ್ಯಾಮರಾ ಇದೆ. 4050 ಎಂಎಎಚ್‌ ಬ್ಯಾಟರಿಯಿದ್ದು ಇದಕ್ಕೆ 18 ವ್ಯಾಟ್ಸ್‌ ವೇಗದ ಚಾರ್ಜರ್‌ ನೀಡಲಾಗಿದೆ. ಮೊಬೈಲ್‌ನ ಹಿಂಬದಿಯಲ್ಲಿ ಬೆರಳಚ್ಚು ಸ್ಕ್ಯಾನರ್‌ ನೀಡಲಾಗಿದೆ. ಯುಎಸ್‌ಬಿ ಟೈಪ್‌ ಸಿ ಪೋರ್ಟ್‌ ಇದೆ. 64 ಜಿಬಿ ಆಂತರಿಕ ಸಂಗ್ರಹ, 4 ಜಿಬಿ ರ್ಯಾಮ್‌ ಮತ್ತು 128 ಜಿಬಿ ಆಂತರಿಕ ಸಂಗ್ರಹ ಮತ್ತು 6 ಜಿಬಿ ರ್ಯಾಮ್‌ನ ಎರಡು ಆವೃತ್ತಿಗಳಿವೆ.ಆಂಡ್ರಾಯ್ಡ 9 ಪೈ ಆವೃತ್ತಿ ಹೊಂದಿದೆ. ಸೆಪ್ಟೆಂಬರ್‌ 16ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ.

ಲೆನೊವೋ ಎ 6 ನೋಟ್‌
ಇದು ಬಜೆಟ್‌ ಫೋನ್‌. 6.09 ಇಂಚಿನ ಎಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಇದಕ್ಕೂ ನೀರಿನ ಹನಿಯ ಡಿಸ್‌ಪ್ಲೇ ಇದೆ. ಇದರಲ್ಲಿ ಸ್ನಾಪ್‌ಡ್ರಾಗನ್‌ ಪ್ರೊಸೆಸರ್‌ ಇಲ್ಲ. ಬದಲಾಗಿ ಮೀಡಿಯಾ ಟೆಕ್‌ ಹೀಲಿಯೋ ಪಿ22 ಪ್ರೊಸೆಸರ್‌ ಇದೆ. 32 ಜಿಬಿ ಆಂತರಿಕ ಸಂಗ್ರಹ ಮತ್ತು 3 ಜಿಬಿ ರ್ಯಾಮ್‌ನ ಒಂದೇ ಆವೃತ್ತಿ ಒಳಗೊಂಡಿದೆ. ಕ್ಯಾಮರಾ ವಿಭಾಗಕ್ಕೆ ಬಂದರೆ, ಇದು ಹಿಂಬದಿ 13 ಮೆ.ಪಿ. ಮತ್ತು 2 ಮೆ.ಪಿ ಕ್ಯಾಮರಾ ಹೊಂದಿದೆ. 5 ಮೆ.ಪಿ. ಮುಂಬದಿ ಕ್ಯಾಮರಾ ಒಳಗೊಂಡಿದೆ. 4 ಸಾವಿರ ಎಂಎಎಚ್‌ ಬ್ಯಾಟರಿ ಇದ್ದು, ಇದಕ್ಕೆ 10 ವ್ಯಾಟ್ಸ್‌ ಚಾರ್ಜರ್‌ ನೀಡಲಾಗಿದ್ದು, ಮೈಕ್ರೋ ಯುಎಸ್‌ಬಿ. ಪೋರ್ಟ್‌ ಇದೆ. ಸೆಪ್ಟೆಂಬರ್‌ 11ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯ.

ದರ ಪಟ್ಟಿ:
ಲೆನೊವೋ ಝಡ್‌ 6 ಪ್ರೊ: 34,000 ರೂ. (ಕಪ್ಪು ಬಣ್ಣದಲ್ಲಿ ಲಭ್ಯ)
ಲೆನೊವೋ ಕೆ 10 ನೋಟ್‌: 64+4 ಜಿಬಿ 14,000 ರೂ.
128 ಜಿಬಿ+6 ಜಿಬಿ 16,000 ರೂ. (ಕಪ್ಪು ಬಣ್ಣ)
ಲೆನೊವೋ ಎ 6 ನೋಟ್‌: 8 ಸಾವಿರ ರೂ. ( ಕಪ್ಪು ಮತ್ತು ನೀಲಿ)

3 ಫೋನ್‌ಗಳ ಗುಣಗಳಿವು:
ಲೆನೊವೋ ಝಡ್‌ 6 ಪ್ರೊ: ಅತ್ಯುನ್ನತ ದರ್ಜೆಯ ಫೋನ್‌. ಸ್ನಾಪ್‌ಡ್ರಾಗನ್‌ 855 ಪ್ರೊಸೆಸರ್‌
ಲೆನೊವೋ ಕೆ 10 ನೋಟ್‌: ಮಧ್ಯಮ ದರ್ಜೆಯ ಫೋನ್‌. ಸ್ನಾಪ್‌ಡ್ರಾಗನ್‌ 710 ಪ್ರೊಸೆಸರ್‌
ಲೆನೊವೋ ಎ6 ನೋಟ್‌: ಆರಂಭಿಕ ದರ್ಜೆಯಬಜೆಟ್‌ ಫೋನ್‌. ಮೀಡಿಯಾಟೆಕ್‌ ಹೀಲಿಯೋ ಪಿ22 ಪ್ರೊಸೆಸರ್‌

-ಕೆ.ಎಸ್‌. ಬನಶಂಕರ ಆರಾಧ್ಯ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

  • ರೈತರಿಗೂ ಪೆನ್ಷನ್ ರೂಪದಲ್ಲಿ ಒಂದಷ್ಟು ಹಣ ಸಿಗುವಂತೆ ಮಾಡುವ ಅಪರೂಪದ ಯೊಜನೆಯನ್ನು ಕೇಂದ್ರ ಸರ್ಕಾರ ಆರಂಭಿಸಿದೆ. ಇದರಿಂದ ರೈತರಿಗೆ ಏನೇನು ಉಪಯೋಗಗಳಿವೆ ಎಂಬುದರ...

  • ಪ್ರಗತಿಪರ ಕೃಷಿಕ ವೆಂಕಟೇಶಪ್ಪ ಅವರು ಅನುಸರಿಸುತ್ತಿರುವ "ಗುಣಿರಾಗಿ ಪದ್ಧತಿ'ಯಲ್ಲಿ ಬಹಳಷ್ಟು ವಿಶೇಷತೆ ಇದೆ. ಇದು ಮಣ್ಣು- ನೀರು ಸೂಕ್ತ ನಿರ್ವಹಣೆಗೆ ಸಹಾಯಕ ಎಂಬ...

  • ಪ್ಲಾಸ್ಟಿಕ್‌ ನಿಷೇಧ, ಪರಿಸರಕ್ಕೆ ವರದಾನ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಜನಸಾಮಾನ್ಯನಿಗಂತೂ ಇದರಿಂದ ಗೊಂದಲವಾಗಿದೆ ಎನ್ನುವುದರಲ್ಲಿ ಅನುಮಾನವಿಲ್ಲ....

  • ಮಳೆಗಾಲದಲ್ಲಿ ನೆಲೆ ಕಳೆದುಕೊಂಡ ಪ್ರಾಣಿಗಳು, ಹುಳ ಹುಪ್ಪಟೆಗಳು ಮನೆ ಹೊಕ್ಕಲು ಪ್ರಯತ್ನಿಸಬಹುದು. ಇವುಗಳಲ್ಲಿ ವಿಷಜಂತುಗಳೂ ಇರುವುದರಿಂದ, ನಾವು ವಿಶೇಷ ಕಾಳಜಿ...

  • ಕೆಲವು ಹೋಟೆಲ್‌ಗ‌ಳು ವಿಶೇಷ ತಿಂಡಿ, ಊಟದಿಂದ ವಿಶೇಷವಾಗಿ ಗುರುತಿಸಿಕೊಂಡಿರುತ್ತವೆ. ಆದರೆ, ವಿಜಯಪುರ ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿರುವ "ಲಕ್ಷ್ಮೀ ಹೋಟೆಲ್‌'...

ಹೊಸ ಸೇರ್ಪಡೆ