ಮಿಶ್ರಬೆಳೆ ; ಸಮ್ಮಿಶ್ರ ಆದಾಯ

Team Udayavani, Feb 13, 2017, 3:45 AM IST

ಕೃಷಿ ಎಂದರೆ ಮೂಗು ಮುರಿಯುವವರೇ ಹೆಚ್ಚು. ಇದಕ್ಕೆಲ್ಲಾ ಕಾರಣ ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ದೊರೆಯದೇ ಇರುವುದು. ಜೊತೆಗೆ ಅದರಲ್ಲೇನು ಸಿಗುತ್ತೆ ಮಣ್ಣು, ಕೆಲಸ ಮಾಡಿದವರಿಗೆ ಕೂಲಿ ಕೊಡುವಷ್ಟು ಆದಾಯವೂ ಸಿಗುವುದಿಲ್ಲ ಎನ್ನುವವರು ಹಲವರು.  ಎಲ್ಲದಕ್ಕೂ ಅಪವಾದದಂತೆ ಬದುಕುತ್ತಿರುವವರು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಹೊಮ್ಮಿನಾಳ ಗ್ರಾಮದ ಈ ರೈತ ಮಲ್ಲಿಕಾರ್ಜುನ. 

ಕೃಷಿಯಿಂದ ಆದಾಯವೂ ಇದೆ.  ಅಭಿವೃದ್ಧಿ ಸಾಧ್ಯ ಅನ್ನೋದನ್ನು ತೋರಿಸಿಕೊಟ್ಟಿದ್ದಾರೆ. ತಮಗಿರುವ 15 ಎಕರೆ ಜಮೀನಿನಲ್ಲಿ 3 ಬೋರ್‌ವೆಲ್‌ಗ‌ಳನ್ನು ಕೊರೆಸಿ, ವಿವಿಧ ರೀತಿಯ ಪರ್ಯಾಯ ಬೆಳೆಗಳನ್ನು ಬೆಳೆಯುತ್ತಾ, ಪ್ರತಿ ವರ್ಷ ಲಕ್ಷಾಂತರ ರೂ ಆದಾಯ ಗಳಿಸುತ್ತಿದ್ದಾರೆ. 

ಮಲ್ಲಿಕಾರ್ಜನ ಓದಿರುವುದು ಹತ್ತನೇ ತರಗತಿ. ಅವರ ಮುಂದೆ ಸಾಕಷ್ಟು ಅವಕಾಶಗಳಿದ್ದರೂ ತಂದೆಯವರ ಮೂಲ ವೃತ್ತಿ ಒಕ್ಕಲುತನವೇ ಅವರನ್ನು ಆಕರ್ಷಿಸಿತು. ಊರಿನ ರೈತರಿಗೆ ವಿವಿಧ ನೂತನ ತಳಿಗಳನ್ನು ಪರಿಚಯಿಸಿದರು.

ಕಾಟನ್‌ ಸೀಡ್ಸ್‌, ಕಲ್ಲಂಗಡಿ ಸೀಡ್ಸ್‌, ಚಿಲ್ಲಿ ಸೀಡ್ಸ್‌ ಗಳನ್ನ ಪ್ರಾರಂಭಿಸಿ ಲಕ್ಷಾಂತರ ರೂ.ಆದಾಯ ಗಳಿಸಿ, ಗಾಮದ ಇತರ ರೈತರಿಗೂ ಬೆಳೆಗಳ ಪರಿಚಯ ಮಾಡಿಸಿದರು. ಇವರನ್ನು ಹಿಂಬಾಲಿಸಿದ ಅದೇಷ್ಟೋ ರೈತರು ಒಳ್ಳೆ ಆದಾಯ ಗಳಿಸುತ್ತಿದ್ದಾರೆ. ಸ್ವತಃ ಇವರೇ ಮಾಹಿತಿ ನೀಡುವ ಮಾಹಿತಿದಾರರಾಗಿ, ರೈತರಿಗೆ ಹೀಗೂ ಬೆಳೆಯಬಹುದೆಂದು ತೋರಿಸಿಕೊಟ್ಟರು.

ಪ್ರಸ್ತುತ ಹೂಕೋಸು, ಎಲೆಕೋಸು, ನುಗ್ಗೆಕಾಯಿ ಬೆಳೆಗಳನ್ನು ಬೆಳೆಯುವುದರೊಂದಿಗೆ, ಈರುಳ್ಳಿ, ಶೇಂಗಾ, ಸೂರ್ಯಕಾಂತಿ, ಸಜ್ಜೆ, ಮೆಕ್ಕೆಜೋಳ ಹಾಗೂ ತರಕಾರಿಗಳನ್ನ ಬೆಳೆಯುತ್ತಾರೆ.  ರೈತರ ಸಲಹೆಗಾರನಾಗಿ, ಸುತ್ತಲಿನ ಗ್ರಾಮದ ಯಾರೇ ರೈತರು ಕರೆದರೂ, ಮಾಹಿತಿ ಕೇಳಿದರೂ ಮುಕ್ತ ಮನಸಿನಿಂದ ಬೆಳೆಗಳ ಬಗ್ಗೆ,  ಕೀಟ ಬಾಧೆ  ಬಗ್ಗೆ ಮಾಹಿತಿ ನೀಡುತ್ತಾರೆ. ಸಮಯ ಇದ್ದರೆ ಇತರೆ ರೈತರ ಹೊಲಗಳಿಗೆ ಹೋಗಿ ಕೆಲಸ ಮಾಡುತ್ತಿದ್ದರು.   

ಮೂರು ಎಕರೆ ಜಮೀನಿನಲ್ಲಿ ವಾರ್ಷಿಕ ಬೆಳೆಯಾದ ನುಗ್ಗೆ ಬೆಳೆಯನ್ನು ಬೆಳೆದಿದ್ದು, ನಾಲ್ಕು ಎಕರೆ ಈರುಳ್ಳಿ, ನಾಲ್ಕು ಎಕರೆ ತೊಗರಿ, ಎರಡು ಎಕರೆ ಹೂಕೋಸು ಬೆಳೆದಿದ್ದಾರೆ.

ಬೆಳೆದ ಬೆಳೆಗಳಿಗೆ ಕೆಲವೊಮ್ಮೆ ಸರಿಯಾದ ಬೆಲೆ ಸಿಗದಿದ್ದಾಗಲೂ ಚಿಂತಿಸಿದವರಲ್ಲ. ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದಿದ್ದಾಗ ಆದಾಯ ಕಡಿಮೆ ಆಗಬಹುದು.  ಆದರೆ ನಷ್ಟವಂತೂ ಆಗಲ್ಲ. ತೀರಾ ಹಿಂದುಳಿದ ಪ್ರದೇಶದಲ್ಲಿ 50 ಸಾವಿರ ಆದಾಯ ತೆಗೆಯದೇ ಕಷ್ಟ ಅಂತಹುದರಲ್ಲಿ ವಾರ್ಷಿಕ 6 ರಿಂದ 8 ಲಕ್ಷ ಆದಾಯ ತೆಗೆಯುವ ಮಲ್ಲಿಕಾರ್ಜುನ 
ಭೂಮಿತಾಯಿ ವಿಚಾರದಲ್ಲಿ ಲಾಭ ನಷ್ಟದ ಲೆಕ್ಕಾಚಾರಮಾಡಬಾರದು ಯಾಕಂದ್ರೆ ಭೂಮಿತಾಯಿ ನಂಬಿದವರಿಗೆ ಪ್ರತಿಫ‌ಲ ಸಿಕ್ಕೇ ಸಿಗುತ್ತೆ. ಈ ಕ್ಷೇತ್ರದಲ್ಲಿರುವ ನೆಮ್ಮದಿ ಬೇರಾವ ಕ್ಷೇತ್ರದಲ್ಲಿಯೂ ಸಿಗೋಲ್ಲ. ಇಲ್ಲಿ ನಾವೇ ಮಾಲೀಕರು, ಯಾರ ಹಂಗೂ ನಮಗಿರುವುದಿಲ್ಲ. ಆದರೆ ಶ್ರಮ ವಹಿಸಿ ಕೆಲಸಮಾಡಬೇಕು ಎನ್ನುತ್ತಾರೆ.

– ಅಮರೇಶ ಕುರಿ ಹೊಮ್ಮಿನಾಳ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಫೆಬ್ರವರಿ 1, ಬೆಳಿಗ್ಗೆ 11 ಗಂಟೆಯ ಹೊತ್ತಿಗೆ ದೇಶವಾಸಿಗಳ ಕಂಗಳು ಟಿ.ವಿ., ಫೋನ್‌ ಪರದೆಗಳನ್ನು ದಿಟ್ಟಿಸುತ್ತಿರುತ್ತವೆ. ಏಕೆಂದರೆ ಆ ಹೊತ್ತಿಗೆ ವಿತ್ತಸಚಿವೆ ನಿರ್ಮಲಾ...

  • ತೆಂಗಿನ ಗರಿ ಅಥವಾ ಸೋಗೆಯಿಂದ ಚಪ್ಪರ ನಿರ್ಮಿಸಿ, ಚಪ್ಪರದ ಅಡಿಯಲ್ಲಿ ದೊಡ್ಡ ದೊಡ್ಡ ಗಾತ್ರದ ಬೆಲ್ಲದ ಕೊಪ್ಪರಿಗೆ ಸ್ಥಾಪಿಸಿ, ಕೊಪ್ಪರಿಗೆಯಲ್ಲಿ ಕುದಿಯುತ್ತಿರುವ...

  • ಫಿಲಿಪ್ಪೀನ್ಸ್‌ನ ಒಂದು ಊರಲ್ಲಿ ಬಹಳಷ್ಟು ಗಂಡಸರು ಸಿಗರೇಟ್‌ ಮತ್ತು ಮದ್ಯದ ಚಟಕ್ಕೆ ಬಿದ್ದಿದ್ದರು. ಅವರ ವ್ಯಸನದಿಂದಾಗಿ ಅವರ ಕುಟುಂಬಗಳು ಪರಿತಪಿಸುತ್ತಿದ್ದವು....

  • ಚಳಿಗಾಲದಲ್ಲಿ ಹಿರಿಯರಿಗೆ, ಸಣ್ಣಮಕ್ಕಳಿಗೆ ಮನೆಯೊಳಗೆ ಬೆಚ್ಚನೆಯ ವಾತಾವರಣ ಅವಶ್ಯವಾಗಿ ಇರಬೇಕಾಗುತ್ತದೆ. ಇಲ್ಲದಿದ್ದರೆ ರೋಗ ರುಜಿನಗಳಿಗೆ ಸುಲಭದಲ್ಲಿ ತುತ್ತಾಗುತ್ತಾರೆ....

  • ಒಂದು ವರ್ಷದ ಹಿಂದೆ ಗೆಲಾಕ್ಸಿ ಎಸ್‌10 ಎಂಬ ಲಕ್ಷ ರೂ. ದರದ ಫೋನ್‌ ನೀಡಿದ್ದ ಸ್ಯಾಮ್‌ಸಂಗ್‌ ಈಗ ಸರಿಸುಮಾರು ಅತ್ಯುನ್ನತ ದರ್ಜೆಯ ಫೋನ್‌ನ ವೈಶಿಷ್ಟ್ಯಗಳನ್ನೇ ನೀಡಿ...

ಹೊಸ ಸೇರ್ಪಡೆ