ಅಡಮಾನ ಸಾಲ


Team Udayavani, Feb 24, 2020, 5:12 AM IST

money-mattr2-(1)

ಯಾವುದೇ ವ್ಯಕ್ತಿ ಅಥವಾ ಸಂಸ್ಥೆ ದೊಡ್ಡ ಮೊತ್ತದ ಸಾಲ ಪಡೆಯುವಾಗ, ಪಡೆಯುವ ಸಾಲದ ಮೊತ್ತಕ್ಕೆ ಅನುಗುಣವಾಗಿ ಸಾಲ ನೀಡುವ ಬ್ಯಾಂಕು ಅಥವಾ ಆರ್ಥಿಕ ಸಂಸ್ಥೆಗೆ, ಬೆಲೆ ಬಾಳುವ ಭದ್ರತೆಗಳನ್ನು ಒದಗಿಸಬೇಕಾಗುತ್ತದೆ. ಇಂದು ನಿವೇಶನ, ಮನೆ, ಫ್ಲ್ಯಾಟು ಹೀಗೆ ಸ್ಥಿರಾಸ್ತಿಗಿಂತ ಹೆಚ್ಚಿನ ಬೆಲೆಬಾಳುವ ಭದ್ರತೆ ಬೇರೊಂದಿಲ್ಲ. ಒಟ್ಟಿನಲ್ಲಿ ಗೃಹಸಾಲ ಪಡೆಯುವಾಗ ಮಾತ್ರವಲ್ಲದೆ, ಹೆಚ್ಚಿನ ಮೊತ್ತದ ಸಾಲ ಪಡೆಯುವಾಗಲೆಲ್ಲ, ಸ್ಥಿರಾಸ್ತಿಯನ್ನು ಕಡ್ಡಾಯವಾಗಿ ಆರ್ಥಿಕ ಸಂಸ್ಥೆಗಳಿಗೆ ಅಡಮಾನ (Mortgage) ಮಾಡಲೇಬೇಕಾಗಿದೆ.

ಅಡಮಾನ ಎಂದರೇನು? ಅಡಮಾನದ ವಿವಿಧ ಮಾರ್ಗಗಳು, ಅಡಮಾನ ಮಾಡುವವರ ಹಾಗೂ ಮಾಡಿಸಿಕೊಳ್ಳುವವರ ಹಕ್ಕು ಬಾಧ್ಯತೆಗಳನ್ನೆಲ್ಲಾ ಅಡಮಾನ ಸಾಲ ಪಡೆಯುವ ಮುನ್ನ ತಿಳಿದುಕೊಳ್ಳುವ ಅವಶ್ಯಕತೆಯಿದೆ.

ಆಸ್ತಿ ಅಡಮಾನ
ಮನೆ, ಖಾಲಿ ನಿವೇಶನ, ತೋಟ, ಜಮೀನು ಇವೇ ಮೊದಲಾದ ಸ್ಥಿರ ಆಸ್ತಿ ಹೊಂದಿರುವವರು ಹಣದ ಅಡಚಣೆಯುಂಟಾದಾಗ, ಆ ಆಸ್ತಿಗಳನ್ನು ಮಾರಾಟ ಮಾಡುವ ಬದಲಿಗೆ ಬ್ಯಾಂಕಿಗೆ ಅಥವಾ ಬೇರೆಯವರಿಗೆ ಅಡಮಾನ ಅಥವಾ ಭೋಗ್ಯ ಮಾಡಿ ಹಣ ಪಡೆಯುತ್ತಾರೆ. ಮುಂದೆ ಅನುಕೂಲ ಪರಿಸ್ಥಿತಿ ಬಂದಾಗ, ಪಡೆದ ಹಣವನ್ನು ಮರುಪಾವತಿ ಮಾಡಿ ಅಡಚಣೆಯಿಂದ ಹೊರಬರಲು “ಟ್ರಾನ್ಸ್‌ಫ‌ರ್‌ ಆಫ್ ಪ್ರಾಪರ್ಟಿ ಆ್ಯಕ್ಟ್ 1882′ ಪ್ರಕಾರ ಕಾನೂನಿನಲ್ಲಿ ಸವಲತ್ತುಗಳಿವೆ.

ಅಡಮಾನ ಮಾಡಿದ ಅತವಾ ಭೋಗ್ಯ ಮಾಡಿದ ಸ್ಥಿರ ಆಸ್ತಿಯನ್ನು ಇವುಗಳಿಗೆ ಸಂಬಂಧಪಟ್ಟ ಕರಾರಿನ ಅನ್ವಯ ಹಣ ವಾಪಸು ಕೊಟ್ಟು ಸ್ವಾಧೀನಕ್ಕೆ ಪಡೆಯಬಹುದು. ಒಂದು ವೇಳೆ ಸ್ಥಿರ ಆಸ್ತಿಯನ್ನು ಒಮ್ಮೆ ಮಾರಾಟ ಮಾಡಿದರೆ, ಯಾವುದೇ ಕಾರಣಕ್ಕೂ ಮಾರಾಟ ಮಾಡಿದ ಆಸ್ತಿಯನ್ನು ವಾಪಸು ಪಡೆಯುವ ಹಕ್ಕು ಆಸ್ತಿಯ ಮಾಲೀಕರಿಗೆ ಇರುವುದಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ಸ್ಥಿರ ಆಸ್ತಿಯನ್ನು ಮಾರಾಟ ಮಾಡುವ ಮುನ್ನ ಹಲವು ಬಾರಿ ಯೋಚಿಸಬೇಕು. ಇಂಥ ಸಂದರ್ಭಗಳಲ್ಲಿ ಅಡಮಾನ ಅಥವಾ ಭೋಗ್ಯ ನೆರವಿಗೆ ಬರುತ್ತದೆ.

ಈ ವಿಧಾನದಲ್ಲಿ ಕಷ್ಟಪಟ್ಟು ದುಡಿದ ಆಸ್ತಿಯನ್ನು ಉಳಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಿದೆ. ಅಡಮಾನದ ವಿಚಾರದಲ್ಲಿ ಕಾನೂನು ಏನು ಹೇಳುತ್ತಿದೆ? ಅಡಮಾನ ಮಾಡುವವರ ಮತ್ತು ಮಾಡಿಸಿಕೊಳ್ಳುವವರ ಹಕ್ಕು ಬಾಧ್ಯತೆಗಳೇನು? ಎನ್ನುವ ವಿಚಾರಗಳನ್ನು ಪ್ರತಿಯೊಬ್ಬರೂ ತಿಳಿದುಕೊಳ್ಳುವ ಅಗತ್ಯವಿದೆ. ಸಂದರ್ಭ ಬಂದಾಗ ಕಾನೂನಿನ ನೆರವು ಪಡೆಯಲು ಇದರಿಂದ ಸಾಧ್ಯವಾಗುತ್ತದೆ.

ಟ್ರಾನ್ಸ್‌ಫ‌ರ್‌ ಆಫ್ ಪ್ರಾಪರ್ಟಿ ಆ್ಯಕ್ಟ್ 1882, ಸೆಕ್ಷನ್‌ 58ರಲ್ಲಿ ವಿವರಣೆ ನೀಡಿದಂತೆ, ಅಡಮಾನವನ್ನು “ಮಾರ್ಟ್‌ಗೇಜ್‌'(Mortgage) ಹಾಗೂ ಅಡಮಾನ ಪತ್ರವನ್ನು “ಮಾರ್ಟ್‌ಗೇಜ್‌ ಡೀಡ್‌'(age Deed) ಎಂದು ಕರೆಯುವರು. ಒಟ್ಟಿನಲ್ಲಿ, ಸ್ಥಿರ ಆಸ್ತಿಯ ಮೇಲಿನ ಹಕ್ಕನ್ನು ಬೇರೆಯವರಿಗೆ ವರ್ಗಾಯಿಸಿ ಸಾಲವಾಗಿ ಹಣ ಪಡೆಯುವುದನ್ನು “ಆಸ್ತಿ ಅಡಮಾನ ಮಾಡುವುದು’ ಎನ್ನುತ್ತಾರೆ.

ಟಾಪ್ ನ್ಯೂಸ್

World Cup 23; ಭಾರತಕ್ಕೆ ಬರಲಿದ್ದಾರೆ ಅಫ್ಘಾನ್ ನ ಮಿಸ್ಟ್ರಿ ಹುಡುಗಿ; ಯಾರೀ ವಾಜ್ಮಾ ಅಯೂಬಿ

World Cup 23; ಭಾರತಕ್ಕೆ ಬರಲಿದ್ದಾರೆ ಅಫ್ಘಾನ್ ನ ಮಿಸ್ಟ್ರಿ ಹುಡುಗಿ; ಯಾರೀ ವಾಜ್ಮಾ ಅಯೂಬಿ

5-vitla

Vitla: ಬೈಕ್ ಸೇತುವೆಗೆ ಢಿಕ್ಕಿ; 40 ಅಡಿ ಆಳದ ನದಿಗೆ ಬಿದ್ದ ಸವಾರ

Udupi; 34 ಲಕ್ಷ ರೂ ದುರ್ಬಳಕೆ: ಬೆಳ್ಳೆ ಪಿಡಿಒ ಸೇವೆಯಿಂದ ವಜಾ

Udupi; 34 ಲಕ್ಷ ರೂ ದುರ್ಬಳಕೆ: ಬೆಳ್ಳೆ ಪಿಡಿಒ ಸೇವೆಯಿಂದ ವಜಾ

ಯತ್ನಾಳ

Vijayapura; ಡಿಸಿಎಂ ಸ್ಥಾನಕ್ಕೆ ಶಾಮನೂರು ಬೇಡಿಕೆ ಸೂಕ್ತ: ಶಾಸಕ ಯತ್ನಾಳ

ramesh jigajinagi

Vijayapura; ಜೆಡಿಎಸ್ ಹೊಂದಾಣಿಕೆಯಿಂದ ಬಲ ಬಂದಿದೆ: ಸಂಸದ ಜಿಗಜಿಣಗಿ

Desi Swara: ಕಲ್ಲಿನಲ್ಲೇ ಅರಳಿದ ನೈಸರ್ಗಿಕ ವಿಸ್ಮಯದ ತಾಣವಿದು

Desi Swara: ಕಲ್ಲಿನಲ್ಲೇ ಅರಳಿದ ನೈಸರ್ಗಿಕ ವಿಸ್ಮಯದ ತಾಣವಿದು…

Panaji: ದೆಹಲಿ ಮಾದರಿಯಲ್ಲಿ ಗೋವಾದ ಸಮಸ್ಯೆ ನಿಭಾಯಿಸಲು ಸಾಧ್ಯವಿಲ್ಲ: ಕುತಿನ್ಹೊ

Panaji: ದೆಹಲಿ ಮಾದರಿಯಲ್ಲಿ ಗೋವಾದ ಸಮಸ್ಯೆ ನಿಭಾಯಿಸಲು ಸಾಧ್ಯವಿಲ್ಲ: ಕುತಿನ್ಹೊ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಕುದುಕುಳ್ಳಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ

udayavani youtube

ಕ್ಷಮೆ ಕೇಳಿದ ಶಿವಣ್ಣ

udayavani youtube

ಅಕ್ವಾಟಿಕ್ಸ್ ಗ್ಯಾಲರಿ ನೋಡಿ ಕಣ್ತುಂಬಿಕೊಂಡ ಪ್ರಧಾನಿ ಮೋದಿ

udayavani youtube

ಬೆಂಗಳೂರಿನಲ್ಲಿ ನಡೆಯಿತು ತುಳುನಾಡ ಸಂಸ್ಕೃತಿ ಬಿಂಬಿಸುವ ಅಷ್ಟಮಿದ ಐಸಿರ

udayavani youtube

ಕಾಡೊಳಗೆ ಕಳೆದು ಹೋಗಿದ್ದ ಹುಡುಗ 8 ದಿನದಲ್ಲಿ ಪ್ರತ್ಯಕ್ಷ

ಹೊಸ ಸೇರ್ಪಡೆ

World Cup 23; ಭಾರತಕ್ಕೆ ಬರಲಿದ್ದಾರೆ ಅಫ್ಘಾನ್ ನ ಮಿಸ್ಟ್ರಿ ಹುಡುಗಿ; ಯಾರೀ ವಾಜ್ಮಾ ಅಯೂಬಿ

World Cup 23; ಭಾರತಕ್ಕೆ ಬರಲಿದ್ದಾರೆ ಅಫ್ಘಾನ್ ನ ಮಿಸ್ಟ್ರಿ ಹುಡುಗಿ; ಯಾರೀ ವಾಜ್ಮಾ ಅಯೂಬಿ

6-mundagodu

Mundgod: ಗಾಂಜಾ ಮಾರಾಟ; ಆರೋಪಿ ಬಂಧನ

Yadagiri; ಕಲುಷಿತ ನೀರು ಸೇವಿಸಿ 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ

Yadagiri; ಕಲುಷಿತ ನೀರು ಸೇವಿಸಿ 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಅಸ್ವಸ್ಥ

5-vitla

Vitla: ಬೈಕ್ ಸೇತುವೆಗೆ ಢಿಕ್ಕಿ; 40 ಅಡಿ ಆಳದ ನದಿಗೆ ಬಿದ್ದ ಸವಾರ

Udupi; 34 ಲಕ್ಷ ರೂ ದುರ್ಬಳಕೆ: ಬೆಳ್ಳೆ ಪಿಡಿಒ ಸೇವೆಯಿಂದ ವಜಾ

Udupi; 34 ಲಕ್ಷ ರೂ ದುರ್ಬಳಕೆ: ಬೆಳ್ಳೆ ಪಿಡಿಒ ಸೇವೆಯಿಂದ ವಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.