ಒಪ್ಪಬಹುದಾದ ಒಪ್ಪೋ ಎಫ್19


Team Udayavani, Apr 19, 2021, 12:26 PM IST

Oppo F19

ಒಪ್ಪೋ  ಕಂಪೆನಿ, ತನ್ನ ಹೊಸ ಮೊಬೈಲ್‌ ಫೋನನ್ನು ಇತ್ತೀಚಿಗೆ ಭಾರತದಲ್ಲಿ ಬಿಡುಗಡೆ ಮಾಡಿದೆ. ಎಫ್ ಸರಣಿಯ ಈ ಹೊಸ ಮೊಬೈಲ್‌ ನ ಹೆಸರು ಎಫ್19. ಇದು 6 ಜಿಬಿ ರ್ಯಾಮ್‌ ಮತ್ತು 128ಜಿಬಿ ಆಂತರಿಕ ಸಂಗ್ರಹದ ಒಂದೇಆವೃತ್ತಿ ಹೊಂದಿದೆ.

ಕಪ್ಪು ಮತ್ತು ನೀಲಿ ಬಣ್ಣಗಳಲ್ಲಿ ದೊರಕುತ್ತದೆ. ಇದರ ದರ 18,990 ರೂ. ಎಲ್ಲ ಮೊಬೈಲ್‌ ಅಂಗಡಿಗಳಲ್ಲಿ ಮತ್ತು ಅಮೆಜಾನ್‌, ಫ್ಲಿಪ್‌ ಕಾರ್ಟ್‌ನಂಥ ಆನ್‌ಲೈನ್‌ ಅಂಗಡಿಗಳಲ್ಲೂ ಲಭ್ಯ.

ಸ್ಲೀಕ್‌ ಡಿಸೈನ್‌: ಈ ಮೊಬೈಲ್‌ ಅನ್ನುಕೈಗೆತ್ತಿಕೊಂಡ ತಕ್ಷಣ ಗಮನಸೆಳೆಯುವುದು ಅದರ ತೆಳುವಾದ ದೇಹ.20 ಸಾವಿರದೊಳಗಿನ ದರಪಟ್ಟಿಯಲ್ಲಿ, 5000 ಎಂಎಎಚ್‌ ಬ್ಯಾಟರಿ ಹೊಂದಿಯೂ ಅತ್ಯಂತ ತೆಳುವಾದ(ಸ್ಲೀಕೆಸ್ಟ್‌ ಸ್ಮಾರ್ಟ್‌ಫೋನ್‌) ಇದು ಎಂದುಕಂಪೆನಿ ಹೇಳಿಕೊಂಡಿದೆ.  7.95 ಮಿ.ಮಿ.ದಪ್ಪ ಮತ್ತು 175 ಗ್ರಾಂ ತೂಕ ಹೊಂದಿದೆ .ಡೈ ಕಾಸ್ಟಿಂಗ್‌ ಅಲ್ಯೂಮಿನಿಯಂ ಫ್ರೇಂ ಹೊಂದಿದೆ.  ಈ ದರಪಟ್ಟಿಯಲ್ಲಿ ದಪ್ಪದಾದಫೋನ್‌ಗಳನ್ನು ಕಂಡವರಿಗೆ ಈ ದರಕ್ಕೆಫೋನ್‌ ಸಾಕಷ್ಟು ತೆಳುವಾಗಿದೆ ಎನಿಸದಿರದು.

ಬ್ಯಾಟರಿ: ಇದು 5000 ಎಂಎಎಚ್‌ ಬ್ಯಾಟರಿ ಹೊಂದಿದೆ.ಇಂದು ಸ್ಮಾರ್ಟ್‌ಫೋನ್‌ ಅತಿಯಾದ ಬಳಕೆಯಿಂದ ದಿನಕ್ಕೆಎರಡು ಮೂರು ಬಾರಿ ಫೋನ್‌ ಮಾಡುವವರೂ ಇದ್ದಾರೆ. ಇದರ ಬ್ಯಾಟರಿ ಒಂದು ದಿನ ಪೂರ್ತಿ ಬಾಳಿಕೆ ಬರುತ್ತದೆ.ಇದಕ್ಕೆ 33 ವ್ಯಾಟ್ಸ್‌ ವೇಗದ ಚಾರ್ಜರ್‌ ನೀಡಲಾಗಿದೆ. 5ನಿಮಿಷ ಚಾರ್ಜ್‌ ಮಾಡಿದರೆ 5 ಗಂಟೆಗೂ ಹೆಚ್ಚು ಕಾಲಮಾತನಾಡಬಹುದು. 2 ಗಂಟೆ ಸಮಯ ಯೂಟ್ಯೂಬ್‌ನೋಡಬಹುದು ಎಂದು ಕಂಪೆನಿ ಹೇಳಿಕೊಂಡಿದೆ. ಬ್ಯಾಟರಿಶೂನ್ಯದಿಂದ 100 ಶೇಕಡಾ ಚಾರ್ಜ್‌ ಆಗಲು 1 ಗಂಟೆ 15ನಿಮಿಷ ತೆಗೆದುಕೊಳ್ಳುತ್ತದೆ. ಶೇ.50 ಚಾರ್ಜ್‌ ಆಗಲು 28ರಿಂದ 30 ನಿಮಿಷ ಸಾಕು.

ಅಮೋಲೆಡ್‌ ಪರದೆ: ಫೋನಿನ ಎಡಮೂಲೆಯಲ್ಲಿಮುಂಬದಿ ಕ್ಯಾಮರಾಕ್ಕೆ ಜಾಗ ನೀಡಿರುವ ಪಂಚ್‌ ಹೋಲ್‌ಡಿಸ್‌ ಪ್ಲೇ ಇದೆ. 2400×1080 ರೆಸ್ಯೂಲೇಷನ್‌ಎಫ್ಎಚ್‌ಡಿ ಪ್ಲಸ್‌ ಅಮೋಲೆಡ್‌ ಪರದೆನೀಡಲಾಗಿದೆ. ಶೇ.90.8 ದೇಹ ಮತ್ತುಪರದೆಯ ಅನುಪಾತವಿದೆ. ಈ ದರಪಟ್ಟಿಯಲ್ಲೇ ಪರದೆಯ ಮೇಲೆಯೇ ಬೆರಳಚ್ಚುಸ್ಕ್ಯಾನಿಂಗ್‌ ನೀಡಿರುವುದು ಗಮನಾರ್ಹ.

ಮೊಬೈಲ್‌ನ ಹಿಂಬದಿ ಗ್ಲಾಸಿ ಡಿಸೈನ್‌ ಮಾಡಲಾಗಿದ್ದು, ಮೊಬೈಲ್‌ ಆಕರ್ಷಕವಾಗಿ ಕಾಣುತ್ತದೆ. ಎಡಮೂಲೆಯಲ್ಲಿ ,ಕ್ಯಾಮರಾ ಭಾಗ ಮೇಲೆ ಬರುವಂತೆ ವಿನ್ಯಾಸಗೊಳಿಸಲಾಗಿದೆ.

ಸ್ನಾಪ್‌ಡ್ರಾಗನ್‌ 665: ಇದರಲ್ಲಿರುವುದು ಸ್ನಾಪ್‌ಡ್ರಾಗನ್‌ 662 ಪ್ರೊಸೆಸರ್‌. 6 ಜಿಬಿ ರ್ಯಾಮ್‌, 128ಜಿಬಿ ಸಂಗ್ರಹ ಸಾಮರ್ಥ್ಯ ಇರುವುದರಿಂದ ಒಂದುಮಿvÉ… ರೇಂಜ್‌ ಮೊಬೈಲ್‌ನಲ್ಲಿರಬೇಕಾದವೇಗವಿದೆ. ಈ ದರಪಟ್ಟಿಗೆ ಸ್ನಾಪ್‌ ಡ್ರಾಗನ್‌ 720ಅಥವಾ 730 ಪ್ರೊಸೆಸರ್‌ ಇರಬೇಕಾಗಿತ್ತು.ಅಂಡ್ರಾಯ್ಡ 11 ಕಾರ್ಯಾಚರಣೆ ವ್ಯವಸ್ಥೆ ಇದ್ದು, ಇದಕ್ಕೆ ಒಪ್ಪೋದವರ ಕಲರ್‌ ಓಎಸ್‌ ಅನ್ನು ಜೋಡಿಸಲಾಗಿದೆ.

ಸ್ವಂತ ಓಎಸ್‌ ಹೊಂದಿರುವ ಕೆಲವು ಕಂಪೆನಿಗಳು ಗ್ರಾಹಕರಿಗೆಬೇಡದ ಕೆಲವು ಆ್ಯಪ್‌ಗ್ಳನ್ನು ಮೊದಲೇ ತುಂಬಿರುತ್ತವೆ.ಇದರಲ್ಲಿ ಆ ರೀತಿ ಇಲ್ಲ ಎಂಬುದು ಸಮಾಧಾನ.

48 ಮೆ.ಪಿ. ಕ್ಯಾಮರಾ: ಹಿಂಬದಿಯಲ್ಲಿ ಮೂರು ಲೆನ್ಸಿನಕ್ಯಾಮರಾ ನೀಡಲಾಗಿದೆ. 48 ಮೆ.ಪಿ. ಮುಖ್ಯ ಸೆನ್ಸರ್‌, 2ಮೆ.ಪಿ. ಡೆಪ್ತ್ ಸೆನ್ಸರ್‌ 2 ಮೆ.ಪಿ. ಮ್ಯಾಕ್ರೋ ಸೆನ್ಸರ್‌ ಇದೆ.ಸೆಲ್ಫಿàಗೆ 16 ಮೆಗಾಪಿಕ್ಸಲ್‌ ಎಐ ಕ್ಯಾಮರಾ ನೀಡಲಾಗಿದೆ. ಹಿಂಬದಿ, ಸೆಲ್ಫಿ ಕ್ಯಾಮರಾಗಳು ಒಂದು ಮಟ್ಟಕ್ಕೆ ಉತ್ತಮಫೋಟೋಗಳನ್ನು ನೀಡುತ್ತವೆ. ಸೆಲ್ಫಿ ಪ್ರಿಯರಿಗೆ ಇದರ ಫೋಟೋ ಎಂದಿನಂತೆ ಪ್ರಿಯವಾಗುತ್ತದೆ.

ಕೊರತೆ ಏನು?ಮೊದಲೇ ತಿಳಿಸಿದಂತೆ ಇದರ ದರ 19 ಸಾವಿರರೂ. ಈ ದರಕ್ಕೆ ಒಪ್ಪೋ 5ಜಿ ಸೌಲಭ್ಯವನ್ನುನೀಡಬಹುದಿತ್ತು. ಭಾರತದಲ್ಲಿ ಶೀಘ್ರವೇ 5ಜಿಸೌಲಭ್ಯ ಬರುತ್ತಿದೆ. ಈಗ 20 ಸಾವಿರ ರೂ.ನೀಡುವ ಗ್ರಾಹಕ, 5ಜಿ ಬಯಸುತ್ತಾನೆ.ಹಾಗಾಗಿ ಒಪ್ಪೋ ಈ ದರಕ್ಕೆ 5ಜಿ ನೆಟ್‌ವರ್ಕ್‌ಕಲ್ಪಿಸದಿರುವುದು ಇದರ ಒಂದು ಮುಖ್ಯ ಕೊರತೆ.

ಕೆ.ಎಸ್‌. ಬನಶಂಕರ ಆರಾಧ್ಯ

ಟಾಪ್ ನ್ಯೂಸ್

COuncil

Legislative Council: ಮತ್ತೆ ಕಲಾಪ ನುಂಗಿದ ವಾಲ್ಮೀಕಿ ನಿಗಮ ಹಗರಣ

Vidhana-Khader

Legislative Assembly: ಬಿಜೆಪಿ ಗದ್ದಲದ ಮಧ್ಯೆ ಸಿಎಂ ಸಿದ್ದರಾಮಯ್ಯ ಉತ್ತರ

Minister-Krisna

Release of funds; ಅತಿವೃಷ್ಟಿ ಸಂತ್ರಸ್ತರಿಗೆ ಪರಿಹಾರ, ಮನೆ: ಸಚಿವ ಕೃಷ್ಣ ಬೈರೇಗೌಡ

Kiran-kodgi-MLA

KSRTC: ಬೇಡಿಕೆ ಮೇರೆಗೆ ಹೊಸ ರೂಟ್‌: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ

Vidhana-Soudha

Congress Government; ವಿಪಕ್ಷದ ಮೇಲೆ ಆರೋಪಗಳ ಸುರಿಮಳೆ!

Ivan-Dsoza

Council; ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಶೀಘ್ರ ಮಂಡಳಿ: ಸಚಿವ ಡಿ. ಸುಧಾಕರ್‌

Dinesh-gundurao

Health: ಗುತ್ತಿಗೆ ಆಧಾರದಲ್ಲಿ ಆರೋಗ್ಯ ನಿರೀಕ್ಷಣಾಧಿಕಾರಿಗಳ ನೇಮಕ: ಸಚಿವ ದಿನೇಶ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Ola: ದೋಷಪೂರಿತ ಎಲೆಕ್ಟ್ರಿಕ್‌ ಬೈಕ್‌; ಓಲಾಗೆ 2 ಲಕ್ಷ ದಂಡ

Ola: ದೋಷಪೂರಿತ ಎಲೆಕ್ಟ್ರಿಕ್‌ ಬೈಕ್‌; ಓಲಾಗೆ 2 ಲಕ್ಷ ದಂಡ

Untitled-1

Bengaluru: ಪಂಚೆ ಧರಿಸಿ ಬಂದ ರೈತನಿಗೆ ತಡೆ; ವಿವಾದ ಬಳಿಕ ಮಾಲ್‌ ಸಿಬ್ಬಂದಿಯಿಂದಲೇ ಸನ್ಮಾನ

Arrested: ತಂಗಿ ಮದುವೆಗೆ ಮಾಡಿದ್ದ ಸಾಲ ತೀರಿಸಲು ಸರ ಕಳ್ಳತನ; ಬಂಧನ

Arrested: ತಂಗಿ ಮದುವೆಗೆ ಮಾಡಿದ್ದ ಸಾಲ ತೀರಿಸಲು ಸರ ಕಳ್ಳತನ; ಬಂಧನ

Arrested: ರೌಡಿ ಕೊಲೆ; 20 ವರ್ಷ ಬಳಿಕ ಚಿತ್ರ ನಿರ್ದೇಶಕ ಸೆರೆ

Arrested: ರೌಡಿ ಕೊಲೆ; 20 ವರ್ಷ ಬಳಿಕ ಚಿತ್ರ ನಿರ್ದೇಶಕ ಸೆರೆ

011

Pm Modi: ಮುಸ್ಲಿಂ ಬಗ್ಗೆ ಪ್ರಧಾನಿ ಮೋದಿ ಭಾಷಣ: ಖಾಸಗಿ ದೂರು ವಜಾ

MUST WATCH

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

udayavani youtube

ಅಘನಾಶಿನಿ ಆರ್ಭಟ

udayavani youtube

ತಾನು ಪ್ರವಾಸಿಸಿದ ಊರಿನ ಹೆಸರುಗಳನ್ನೆಲ್ಲ ನೆನಪಿಸಿಕೊಂಡ ಡಾ. ರಾಜ್‌ಕುಮಾರ್

ಹೊಸ ಸೇರ್ಪಡೆ

COuncil

Legislative Council: ಮತ್ತೆ ಕಲಾಪ ನುಂಗಿದ ವಾಲ್ಮೀಕಿ ನಿಗಮ ಹಗರಣ

Vidhana-Khader

Legislative Assembly: ಬಿಜೆಪಿ ಗದ್ದಲದ ಮಧ್ಯೆ ಸಿಎಂ ಸಿದ್ದರಾಮಯ್ಯ ಉತ್ತರ

Minister-Krisna

Release of funds; ಅತಿವೃಷ್ಟಿ ಸಂತ್ರಸ್ತರಿಗೆ ಪರಿಹಾರ, ಮನೆ: ಸಚಿವ ಕೃಷ್ಣ ಬೈರೇಗೌಡ

Kiran-kodgi-MLA

KSRTC: ಬೇಡಿಕೆ ಮೇರೆಗೆ ಹೊಸ ರೂಟ್‌: ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ

Vidhana-Soudha

Congress Government; ವಿಪಕ್ಷದ ಮೇಲೆ ಆರೋಪಗಳ ಸುರಿಮಳೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.