ಸ್ಪೇಸ್‌ ಮಿಷನ್‌; ಬಾಹ್ಯಾಕಾಶ ಯೋಜನೆಗಳಿಂದ ಏನುಪಯೋಗ?


Team Udayavani, Sep 16, 2019, 5:00 AM IST

Space-Rocket-Launch-1

ಬಾಹ್ಯಾಕಾಶ ತಂತ್ರಜ್ಞಾನಗಳಿಂದ ಜನಸಾಮಾನ್ಯರಿಗೆ ದೊರೆಯುತ್ತಿರುವ ಪ್ರಯೋಜನವೇನು? ಸುಮ್ಮನೆ ಬೊಕ್ಕಸಕ್ಕೆ ಹೊರೆ ಎನ್ನುವ ಅಭಿಪ್ರಾಯ ಹಲವರಿಗಿರುತ್ತದೆ. ಆದರೆ ನೇರವಾಗಿಯಲ್ಲದಿದ್ದರೂ ಅದರ ಉಪಯೋಗ ಇದ್ದೇ ಇದೆ.

ಇಸ್ರೋ ಮತ್ತು ಅದರ ಅಂಗಸಂಸ್ಥೆಗಳಿಗೆ ಪ್ರತಿವರ್ಷ ಸಾವಿರಾರು ಕೋಟಿ ಅನುದಾನವನ್ನು ಸರ್ಕಾರ ನೀಡುತ್ತಿದೆ. ಆದರೆ, ಜನಸಾಮಾನ್ಯರಿಗೆ ಅದರಿಂದೇನು ಪ್ರಯೋಜನ ಎಂದು ಕೆಲವರು ಕೇಳುತ್ತಾರೆ. ಮಂಗಳಯಾನ, ಚಂದ್ರಯಾನ ಮೊದಲಾದ ಯೋಜನೆಗಳಿಂದ ವಿಶ್ವದ ಬಾಹ್ಯಾಕಾಶ ಉದ್ಯಮದಲ್ಲಿ ಭಾರತಕ್ಕೆ ಮಹತ್ವದ ಸಾಧನೆ ದೊರೆಯುವುದರ ಜೊತೆಗೆ ಜನಸಾಮಾನ್ಯರಿಗೆ ಅನೇಕ ಸೇವೆ ಮತ್ತು ಸೌಲಭ್ಯಗಳನ್ನು ಇಸ್ರೋ ನೀಡುತ್ತಿದೆ. ಇವುಗಳಲ್ಲಿ ಕೆಲವು ಹೀಗಿವೆ :

1) ಬಾಹ್ಯಾಕಾಶದಲ್ಲಿರುವ ಭಾರತದ ಉಪಗ್ರಹಗಳ ಮೇಲೆ ಕ್ಷಿಪಣಿ ದಾಳಿಯಂತಹ ಯುದ್ಧಕ್ಕೆ ವೈರಿ ದೇಶಗಳು ಮುಂದಾದರೆ, ಅಂತಹ ದಾಳಿಗಳನ್ನು ವಿಫ‌ಲಗೊಳಿಸಲು ಎಸ್ಯಾಟ್‌ ತಂತ್ರಜ್ಞಾನವನ್ನು ಯಶಸ್ವಿಯಾಗಿ ಪ್ರದರ್ಶಿಸಿದೆ ಭಾರತ. ಆ ಮೂಲಕ, ಇಂಥ ಅತ್ಯಾಧುನಿಕ ತಂತ್ರಜ್ಞಾನವನ್ನು ಹೊಂದಿರುವ ವಿಶ್ವದ ನಾಲ್ಕನೆಯ ದೇಶವಾಗಿದೆ.

2) ಕಾರ್ಗಿಲ್‌ ಯುದ್ಧದಲ್ಲಿ ಆಕ್ರಮಣ ಮಾಡಿದ ಪಾಕಿಸ್ತಾನದ ಸೈನಿಕರು, ಹಿಮಾಲಯ ಪರ್ವತಗಳಲ್ಲಿ ಅಡಗಿ ಕುಳಿತಿರುವ ಸ್ಥಳಗಳ ವಿವರ (ಜಿಪಿಎಸ್‌ ಲೊಕೇಷನ್‌) ಲಭ್ಯವಿದ್ದರೂ, ಭಾರತಕ್ಕೆ ಅದನ್ನು ನೀಡಲು ಅಮೇರಿಕಾ ನಿರಾಕರಿಸಿತು. ಇದನ್ನು ಸವಾಲಾಗಿ ಸ್ವೀಕರಿಸಿದ ಇಸ್ರೋ, ಭಾರತದ ವಿಮಾನ ನಿಲ್ದಾಣಗಳು ಮತ್ತು ವಿಮಾನಯಾನ ಸಂಸ್ಥೆಗಳ ಬಳಕೆಗೆ ಗಗನ್‌ ಮತ್ತು ಅಮೇರಿಕಾದ ಜಿಪಿಎಸ್‌ಗಿಂತ ಹೆಚ್ಚು ನಿಖರತೆಯಿರುವ ಐಆರ್‌ಎನ್‌ಎಸ್‌ಎಸ್‌ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿ, ಈ ಕ್ಷೇತ್ರಗಳಲ್ಲಿ ಭಾರತ ಸ್ವಾವಲಂಬಿಯಾಗುವಂತೆ ಮಾಡಿದೆ.

3) ಪ್ರವಾಹ, ಬರಗಾಲ, ಭೂಕಂಪ, ಸುನಾಮಿ, ಭೂಕುಸಿತ, ಕಾಡ್ಗಿಚ್ಚುಗಳಂಥ ವಿಕೋಪ ಪರಿಸ್ಥಿತಿಗಳನ್ನು ಗುರುತಿಸಿ, ಸೂಕ್ತ ಪರಿಹಾರ ಕೈಗೊಳ್ಳಲು ಸರ್ಕಾರಕ್ಕೆ ನೆರವಾಗಲು ಅಗತ್ಯವಾದ ರೇಡಾರ್‌, ಉಪಗ್ರಹ ಮತ್ತು ಸಂವಹನ ವ್ಯವಸ್ಥೆಯನ್ನು ಇಸ್ರೋ ಮತ್ತು ಅಂಗಸಂಸ್ಥೆಗಳು ಅಭಿವೃದ್ಧಿಪಡಿಸಿವೆ. ಕೇರಳ, ಕರ್ನಾಟಕ, ಅಸ್ಸಾಮ್‌, ಒಡಿಸ್ಸಾದಂತಹ ರಾಜ್ಯಗಳಲ್ಲಿ ಈ ವ್ಯವಸ್ಥೆಯ ಬಳಕೆಯಿಂದ ಲಕ್ಷಾಂತರ ಜನರ ಪ್ರಾಣ ಉಳಿಸಲು ಸಾಧ್ಯವಾಗಿದೆ.

4) ಭಾರತದ ಗಡಿಪ್ರದೇಶ ಮತ್ತು ಸಮುದ್ರ ಕಾವಲಿಗೆ ಸಹಾಯವಾಗುವಂತೆ ರಕ್ಷಣಾ ಪಡೆಗಳಿಗೆ ಅಗತ್ಯವಾದ ಮಿಲಿಟರಿ ಉಪಗ್ರಹಗಳು ಕೆಲಸ ಮಾಡುತ್ತಿವೆ.

5) ಹವಾಮಾನ ಮಾಹಿತಿ, ಟೆಲಿ ಮೆಡಿಸಿನ್‌, ದೂರ ಶಿಕ್ಷಣ, ಟಿವಿ, ರೇಡಿಯೊ, ಮೊಬೈಲ್‌ ಮತ್ತು ಸ್ಥಿರ ದೂರವಾಣಿ, ಇಂಟರ್‌ನೆಟ್‌ ಮೊದಲಾದ ಸೇವೆಗಳನ್ನು ಭಾರತಾದಂತ್ಯ ನೀಡಲು ಅಗತ್ಯವಾದ ಉಪಗ್ರಹಗಳನ್ನು ಇಸ್ರೋ ಉಡಾವಣೆ ಮಾಡಿದೆ. ಅವು ಚೆನ್ನಾಗಿಯೂ ಕಾರ್ಯ ನಿರ್ವಹಿಸುತ್ತಿವೆ.

6) ಭಾರತದ ಖೀನಿಜ ಸಂಪತ್ತು, ಅರಣ್ಯಪ್ರದೇಶ, ನದಿ ಮತ್ತು ಜಲಾಶಯಗಳು, ಅಂರ್ತಜಲ, ವಾಯು ಮಾಲಿನ್ಯ, ಕೃಷಿ ಮಾಹಿತಿ, ಕೀಟ ದಾಳಿ ಮೊದಲಾದ ಮಾಹಿತಿಯನ್ನು ನಿರಂತರವಾಗಿ ಪಡೆದು ಸಂಸ್ಕರಿಸುವ ಉಪಗ್ರಹಗಳು ಮತ್ತು ಮಾಹಿತಿ ಕೇಂದ್ರಗಳನ್ನು ಇಸ್ರೋ ನಡೆಸುತ್ತಿದೆ.

ಸವಾಲುಗಳು :
1) 2018ರಲ್ಲಿ 360 ಬಿಲಿಯನ್‌ ವ್ಯವಹಾರ ನೆಡೆಸಿದ ಜಾಗತಿಕ ಬಾಹ್ಯಾಂತರಿಕ್ಷ ಉದ್ಯಮದಲ್ಲಿ ಭಾರತಕ್ಕೆ ನೂರಾರು ಬಿಲಿಯನ್‌ ಡಾಲರ್‌ ವಹಿವಾಟು ಮತ್ತು ಸಾವಿರಾರು ಸಂಖ್ಯೆಯಲ್ಲಿ ಉದ್ಯಮಗಳು ಹಾಗೂ ಉದ್ಯೋಗಗಳನ್ನು ಪಡೆಯುವ ಸಾಮರ್ಥ್ಯವಿದೆ. ಆದರೆ ಈ ಕನಸು ಸಾಕಾರವಾಗಲು ಇಸ್ರೋ ಮತ್ತು ಅಂಗಸಂಸ್ಥೆಗಳಿಗೆ ನೀಡುತ್ತಿರುವ ಅನುದಾನ ಕೂಡಾ ಹೆಚ್ಚಾಗಬೇಕಾಗುತ್ತದೆ. ಪ್ರಮುಖವಾಗಿ ಅಮೇರಿಕಾ, ಚೀನಾ, ರಷ್ಯಾದಂತಹ ದೇಶಗಳಲ್ಲಿ ಸರ್ಕಾರದಿಂದ ದೊರೆಯುವ ಅನುದಾನಕ್ಕೆ ಹೋಲಿಸಿದರೆ ಇಸ್ರೋಗ ದೊರೆಯುತ್ತಿರುವ ಅನುದಾನ ಬಹಳ ಕಡಿಮೆ.
2) ಪುನರ್‌ಬಳಕೆ ಮಾಡಬಹುದಾದ ಉಪಗ್ರಹ ಉಡಾವಣೆ ರಾಕೆಟ್‌ಗಳ ನಿರ್ಮಾಣ ತಂತ್ರಜ್ಞಾನ, ಕ್ರಯೋಜೆನಿಕ್‌ ಇಂಜಿನ್‌ ತಂತ್ರಜ್ಞಾನ, ಈಗ ಲಭ್ಯವಿರುವ ಉಡಾವಣೆ ರಾಕೆಟ್‌ಗಳಿಗಿಂತ ಹಲವು ಪಟ್ಟು ಹೆಚ್ಚು ತೂಕದ ಉಪಗ್ರಹಗಳನ್ನು ಉಡಾವಣೆ ಮಾಡುವ ಸಾಮರ್ಥ್ಯವಿರುವ ರಾಕೆಟ್‌ಗಳ ನಿರ್ಮಾಣ ತಂತ್ರಜ್ಞಾನ, ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌, ರೋಬೋಟಿಕ್ಸ್‌ ಮೊದಲಾದ ಕ್ಷೇತ್ರಗಳಲ್ಲಿ ಇಸ್ರೋ ತನ್ನ ಸಾಮರ್ಥ್ಯವನ್ನು ವೃದ್ಧಿ ಮಾಡಿಕೊಳ್ಳುವುದು ಅಗತ್ಯವಿದೆ.
3) ಇಸ್ರೋಗೆ ಬಿಡಿಭಾಗಗಳು ಮತ್ತು ಸೇವೆ ನೀಡುವ ಉದ್ಯಮಗಳಿಗೆ ಸೀಮಿತವಾಗದೆ, ತಂತ್ರಜ್ಞಾನ, ಉಪಗ್ರಹ ವಿನ್ಯಾಸ, ಉಡಾವಣೆ, ಮೌಲ್ಯಾಧಾರಿತ ಸೇವೆಗಳನ್ನು ನೀಡಲು ಖಾಸಗಿ ಉದ್ಯಮಿಗಳು ಮುಂದಾಗಬೇಕು. ಸರ್ಕಾರ, ಇಸ್ರೋ ಮತ್ತು ಖಾಸಗಿ ಉದ್ಯಮಗಳು ಸೇರಿ ಕೆಲಸ ಮಾಡಿದರೆ, ಮುಂಬರುವ ದಿನಗಳಲ್ಲಿ ಭಾರತಕ್ಕೆ ನೂರಾರು ಬಿಲಿಯನ್‌ ಡಾಲರ್‌ ವ್ಯವಹಾರ ದೊರೆಯಲಿದೆ.

ಸೈಡ್‌ ಬಾಕ್ಸ್‌
1960ರ ದಶಕದಲ್ಲಿ ಅಪೋಲೋ ಹೆಸರಿನ ಚಂದ್ರಯಾನ ಯೋಜನೆ ಯಶಸ್ವಿಯಾಗಲು, ಚಂದ್ರನ ಮೇಲೆ ಗಗನಯಾತ್ರಿಗಳನ್ನು ಇಳಿಸಲು ಸೂಕ್ತವಾದ ಪ್ರದೇಶವನ್ನು ಗುರುತಿಸಬೇಕಾಗಿತ್ತು. ಆಗ ಬಳಕೆಯಲ್ಲಿದ್ದ ಉಪಗ್ರಹಗಳಿಂದ ದೊರೆತ ಚಂದ್ರನ ಚಿತ್ರಗಳನ್ನು ಸಂಸ್ಕರಿಸಿ, ಇಳಿಯಲು ಸೂಕ್ತವಾದ ಪ್ರದೇಶವನ್ನು ಗುರುತಿಸಲು, ನಾಸಾದ ವಿಜ್ಞಾನಿಗಳು “ಡಿಜಿಟಲ್‌ ಸಿಗ್ನಲ್‌ ಪೊ›ಸೆಸಿಂಗ್‌’ ಎನ್ನುವ ತಂತ್ರಜ್ಞಾನವನ್ನು ಬಳಸಿದರು. ಬಾಹ್ಯಾಕಾಶ ಯೋಜನೆಯಲ್ಲಿ ಬಳಕೆಯಾದ ಈ ಡಿಎಸ್‌ಪಿ ತಂತ್ರಜ್ಞಾನ, ಜನಸಾಮಾನ್ಯರ ಆರೋಗ್ಯ ತಪಾಸಣೆಗೆ ಬಳಸಲಾಗುವ ಸಿಟಿ ಸ್ಕ್ಯಾನ್‌ ಮತ್ತು ಎಮ್‌ಆರ್‌ಐಗಳಲ್ಲಿ ಬಳಕೆಯಾಗುತ್ತಿದೆ.

ಗಗನಯಾತ್ರಿಗಳು ಬಾಹ್ಯಾಕಾಶದಲ್ಲಿರುವಾಗ ಅವರಿಗೆ ಅಗತ್ಯವಾದ ನೀರನ್ನು ಒದಗಿಸುವುದು ಹೇಗೆ ಎನ್ನುವ ಪ್ರಶ್ನೆಗೆ ವಿಜ್ಞಾನಿಗಳು ಅತ್ಯಾಧುನಿಕ ಫಿಲ್ಟರಿಂಗ್‌ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದರು. ಭೂಮಿಯಿಂದ ಬಾಹ್ಯಾಕಾಶ ನೌಕೆಯಲ್ಲಿರುವ ಗಗನಯಾತ್ರಿಗಳಿಗೆ ನೀರು ಪೂರೈಸುವುದು ಸಾಧ್ಯವಿಲ್ಲದಿರುವಾಗ, ಬಾಹ್ಯಾಕಾಶ ನೌಕೆಯಲ್ಲಿ ಒಮ್ಮೆ ಬಳಸಿದ ನೀರನ್ನು ಶುದ್ಧೀಕರಿಸಿ, ಕುಡಿಯುವ ನೀರನ್ನಾಗಿ ಪರಿವರ್ತಿಸಲು ಈ ತಂತ್ರಜ್ಞಾನ ಬಳಕೆಯಾಗುತ್ತಿದೆ. ವಿಶ್ವಾದಂತ್ಯ ತೀವ್ರಥರದ ಮೂತ್ರಪಿಂಡ ಸಮಸ್ಯೆ ಎದುರಿಸುವ ರೋಗಿಗಳು ಬಳಸುವ ಡಯಾಲಿಸಿಸ್‌ನಲ್ಲೂ ಈ ತಂತ್ರಜ್ಞಾನ ಬಳಸಲಾಗುತ್ತಿದೆ.

ಭೂಮಿಯಿಂದ ನೂರಾರು ಕೋಟಿ ದೂರದಲ್ಲಿರುವ ನಕ್ಷತ್ರಗಳು ಮತ್ತು ಗ್ರಹಗಳ ತಾಪಮಾನವನ್ನು ಅಳೆಯಲು ವಿಜ್ಞಾನಿಗಳು ಬಳಸುವ ಇನ್‌ಫ್ರಾರೆಡ್‌ ತಂತ್ರಜ್ಞಾನವನ್ನು ಬಳಸಿ, 1991ರಲ್ಲಿ ಕಿವಿಯಲ್ಲಿ ಇರಿಸಿ ಮಾನವನ ದೇಹದ ತಾಪಮಾನ ಅಳೆಯಲು ಬಳಸುವ ಥರ್ಮಾಮೀಟರ್‌ಗಳನ್ನು ಅಭಿವೃದ್ಧಿಪಡಿಸಲಾಯಿತು. ಕೆಲವೇ ಕ್ಷಣಗಳಲ್ಲಿ ಮತ್ತು ಹೆಚ್ಚು ನಿಖೀರವಾಗಿ ಫ‌ಲಿತಾಂಶ ನೀಡುವ ಈ ಥರ್ಮಾಮೀಟರ್‌ಗಳ ಬಳಕೆ ಈಗ ಜನಪ್ರಿಯವಾಗುತ್ತಿದೆ.

ಲೇಸರ್‌ ಬಳಸಿ ಕಣ್ಣಿನ ಸರ್ಜರಿ ಮಾಡುವುದಿರಬಹುದು, ಜನಪ್ರಿಯವಾಗಿರುವ ಡಿಜಿಟಲ್‌ ಕ್ಯಾಮರಾಗಳಿರಬಹುದು, ಸೇತುವೆ ಮತ್ತು ಸ್ಮಾರಕಗಳು ಹವಾಮಾನ ವೈಪರೀತ್ಯ ಮತ್ತು ಮಾಲಿನ್ಯದಿಂದ ಹಾಳಾಗದಂತೆ ರಕ್ಷಿಸುವ ಲೇಪನವಿರಬಹುದು, ಹೀಗೆ ಬಾಹ್ಯಾಕಾಶ ಸಂಶೋಧನೆಗಾಗಿ ಅಭಿವೃದ್ಧಿಪಡಿಸಲಾದ ಅನೇಕ ತಂತ್ರಜ್ಞಾನಗಳಿಂದ ಜನಸಾಮಾನ್ಯರಿಗೆ ಉಪಯೋಗ ಇದ್ದೇ ಇದೆ.

-ಯು.ಪಿ.ಪುರಾಣಿಕ್‌

ಟಾಪ್ ನ್ಯೂಸ್

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Checkbounce case: ಆರೋಪಿ ಮಹಿಳೆ ಖುಲಾಸೆ

Checkbounce case: ಆರೋಪಿ ಮಹಿಳೆ ಖುಲಾಸೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.